Oppanna.com

ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ

ಬರದೋರು :   ದೊಡ್ಡಭಾವ°    on   11/01/2015    4 ಒಪ್ಪಂಗೊ

ಒಪ್ಪಣ್ಣನ ನೆರೆಕರೆ https://oppanna.com ಹವ್ಯಕ ವೆಬ್-ಸೈಟ್ (ಬೈಲು) ಕಳುದ ಏಳು ವರ್ಷಂದ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಕೊಡ್ತಾ ಇದ್ದು. Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಮೂಲಕ ಸರಕಾರೀ ಮಾನ್ಯತೆಯ ಸಂಸ್ಥೆ ಆಯಿದು. ಕಳುದ ಮೂರು ವರ್ಷಂದ ಸೌರ ಯುಗಾದಿಗೆ ಸಂಪೂರ್ಣ ಹವ್ಯಕಭಾಷೆಲೇ ಆಯೋಜನೆ ಅಪ್ಪ ವಿಷು ವಿಶೇಷ ಸ್ಪರ್ಧೆ ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ.

ಈ ವರ್ಷವೂ ವಿಷು-ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗೆ “ವಿಷು ವಿಶೇಷ ಸ್ಪರ್ಧೆ – 2015” ಆಯೋಜಿಸಿದ್ದು.

ಬನ್ನಿ, ಭಾಗವಹಿಸಿ, ನಿಂಗಳ ಪೈಕಿಯೋರಿಂಗೂ ತಿಳುಶಿ…

ವಿಷು ವಿಶೇಷ ಸ್ಪರ್ಧೆ – 2015 ವಿವರಂಗೊ:

  1. ಪ್ರಬಂಧ:
    ವಿಷಯ – “ಸಂವಹನಲ್ಲಿ ಆಡುಭಾಷೆಯ ಮಹತ್ವ”
    750 ಶಬ್ದಗಳಿಗೆ ಸೀಮಿತಗೊಳಿಸಿ
  2. ಕಥೆ :
    ವ್ಯಾಪ್ತಿ: ಸಾಮಾಜಿಕ ಜೀವನ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
    1000 ಶಬ್ದಕ್ಕೆ ಸೀಮಿತಗೊಳಿಸಿ
  3. ಕವಿತೆ:
    ವಿಷಯ: ಸ್ವಚ್ಛ ಭಾರತ
    30 ಸಾಲುಗೊಕ್ಕೆ ಮಿತಿಗೊಳಿಸಿ. ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.
  4. ಫೋಟೋ ಸ್ಪರ್ಧೆ:
    ವ್ಯಾಪ್ತಿ: ಭಾರತೀಯರ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಕಂಡ ರಸನಿಮಿಷಂಗಳ ಪ್ರತಿನಿಧಿಸುವ ಫೋಟೋಕ್ಕೆ ಹವ್ಯಕ ಭಾಷೆಲಿ ಸೂಕ್ತ ಶೀರ್ಷಿಕೆಯ ಕೊಟ್ಟು ಕಳುಸುದು.
    ಫೋಟೋದ ಗಾತ್ರ: ಅಂಚೆಯಲ್ಲಿ ಕಳುಹಿಸುವುದಾದರೆ 5×7 ಅಳತೆಯಲ್ಲಿ..
    ಮಿಂಚಂಚೆ ಆದರೆ ಗರಿಷ್ಠ – 1 MB.
  5. ನಗೆಬರಹ:
    ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗೊ ಬೇಡ)
    500 ಶಬ್ದಕ್ಕೆ ಮಿತಿಗೊಳುಸಿ.

ನಿಯಮಂಗೊ:

  • ಎಲ್ಲಾ ಬರಹಂಗೊ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಲಿಯೇ ಇರೇಕು
  • ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆ ಬಿಂಬಿಸುವ ಬರಹಂಗೊಕ್ಕೆಆದ್ಯತೆ
  • ಸ್ಪರ್ಧೆಯ ಯಾವುದೇ ಬರಹ / ಫೋಟೋ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ
  • ಎಲ್ಲಾ ಬರಹ / ಫೋಟೋಂಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರ್ತು
  • ಸ್ಪರ್ಧೆಯ ವಿಚಾರಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ
  • ಪ್ರತಿ ವಿಭಾಗಲ್ಲಿಯೂ ಪ್ರಥಮ – ದ್ವಿತೀಯ ಎರಡು ಬಹುಮಾನಂಗೊ ಇರ್ತು. ಸೂಕ್ತ ಸಂದರ್ಭಲ್ಲಿ ಪ್ರೋತ್ಸಾಹಕ ಬಹುಮಾವೂ ಇರ್ತು.
  • ಬಹುಮಾನ ವಿಜೇತರ ವಿವರಂಗಳ ವಿಷುವಿನ ದಿನ (14-04-2015ರಂದು) https://oppanna.com ಅಂತರ್ಜಾಲಲ್ಲಿ ಪ್ರಕಟಿಸುತ್ತು
  • ಹಸ್ತಪ್ರತಿಗಳ ಕಳುಸುದಾದರೆ ಕಡ್ಡಾಯ A4 ಕಾಗತಲ್ಲಿ ಇರೇಕು
  • ಭಾಗವಹಿಸಲೆ ಕೊನೆಯ ದಿನಾಂಕ 03-03-2015

ಬರಹ/ಫೋಟೋಂಗಳ ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಒಟ್ಟಿಂಗೆ ಈ ವಿಳಾಸಕ್ಕೆ ಕಳುಸಿಕೊಡಿ:

ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ), “ಅನುಗ್ರಹ”, ಶಿವಗಿರಿ ನಗರ,
ಕುಳಾಯಿ-ಹೊಸಬೆಟ್ಟು, ಮಂಗಳೂರು. – 575019

ಮಿಂಚಂಚೆ ವಿಳಾಸ:
editor@oppanna.com

ಹೆಚ್ಚಿನ ಮಾಹಿತಿಗಾಗಿ :

  • ಕೊಡೆಯಾಲ – 09449806563 / 09591994644
  • ಕಾಸರಗೋಡು – 08547245304
  • ಬೆಂಗ್ಳೂರು – 09448472292 / 09535354380 / 09448271447

~

ದೊಡ್ಡಭಾವ (ರವಿಶಂಕರ ದೊಡ್ಡಮಾಣಿ)
ವಿಷು ವಿಶೇಷ ಸ್ಪರ್ಧೆ 2015 – ಸಂಚಾಲಕರು
editor@oppanna.com / 08547245304

ಗಮನುಸಿ: ಈ ಸ್ಪರ್ಧೆ ಕೇವಲ ಹವ್ಯಕರಿಗಾಗಿ ಅಲ್ಲ, ಹವ್ಯಕ ಭಾಷೆಗಾಗಿ.

4 thoughts on “ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ

  1. ಏಳು ವರ್ಷಂದ ಇದ್ದರೂ ಈಗ ಗೊಂತಾದ್ದು… ಯಶಸ್ವಿ ಆಗಲಿ…
    ಆನು ಖಂಡಿತ ಭಾಗವಹಿಸುತ್ತೆ…ಎಲ್ಲರಂಗೂ ಹೇಳ್ತೇನೆ

  2. ಹರೇ ರಾಮ. ಭಾಗವಹಿಸೆಕು ಮಾಂತ್ರ ಅಲ್ಲ, ಭಾಗವಹಿಸುವಂತವಕ್ಕೆ ತಿಳಿಶೆಕು, ಭಾಗವಹಿಸದ್ದವಕ್ಕೂ ತಿಳಿಶಿ ಭಾಗವಹಿಸಲೆ ಪ್ರೋತ್ಸಾಹಿಸೆಕು.

    ಎಲ್ಲೋರು ಸೇರಿ ಯಶಸ್ವಿಯಾಗಲಿ.

  3. ಹೆಚ್ಚಿನ ಸಂಖ್ಯೆಲಿ ನೆರೆಕರೆ ಬಂಧುಗೊ ಬನ್ನಿ, ಭಾಗವಹಿಸಿ. ನಮ್ಮ ಭಾಷೆಯ ಒಳುಸಿ ಬೆಳಸುವ ಕೆಲಸಲ್ಲಿ ಕೈ ಜೋಡ್ಸುವೋ.

  4. ಪ್ರತಿವರ್ಷದ ಹಾಂಗೆಯೇ ಈ ವರುಷದ ಕಾರ್ಯಕ್ರಮವೂ ಯಶಸ್ವಿಯಾಗಲಿ . ನಮ್ಮ ಭಾಷೇಲಿ ಬರವ ಬಂಧುಗಳ ಸಂಖ್ಯೆ ಬೆಳೆಯಲಿ. ಒಳ್ಳೆ ಸಾಹಿತ್ಯ ರಚನೆಯಾಗಲಿ ಹೇಳಿ ಹಾರೈಕೆಗೋ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×