‘ವೇಲ್’ನ ಕಥೆ ……!

ಇದಾ, ಇದು ವೇಲಿನ ಕತೆ. ಆರ ವೇಲು ಹೇಳಿ ಕೇಳಿಕ್ಕೆಡಿ …..!
ಇದರ ಬಗ್ಗೆ ಮಾಹಿತಿ ನೋಡಿಕ್ಕುಲೆ ಮೊದಾಲು ಸಂಕೊಲೆಗಳ ಕೊಟ್ಟಿಕ್ಕುತ್ತೆ ….
ನೇತು ನೋಡಿಕ್ಕಿ:

… ಇದರ ಎಲ್ಲಾ ಮೊದಲೆ ಹೇಳಿದ್ದೆಂತಕೆ ಹೇಳಿರೆ ಆರೂ ಇದಾರ ವೇಲಿನ ಬಗ್ಗೆ ಹೇಳುಲೆ ಹೊರಟ ಹೇಳಿ ಅಪಾರ್ಥ ಮಾಡಿಕೊಂಬಲಾಗನ್ನೇ ಹಾಂಗಾಗಿ.

ಈ ಸೀ ಷೆಪರ್ಡ್ ಹೇಳ್ತ ಸಂಸ್ಥೆ (Sea Shepherd Conservation Society (SSCS) ) ಹುಟ್ಟಿದ್ದು 1977 ರಲ್ಲಿ, ಇದು ಒಂದು ಲಾಬ ಇಲ್ಲದ್ದೆ ಕೆಲಸ ಮಾಡ್ತ ಸಂಸ್ಥೆ.
‘ನಮ್ಮ ಸಮುದ್ರಲ್ಲಿಪ್ಪ ಜೀವಿಗಳ ಒಳುಶಿಕೊಂಡುಬರೆಕ್ಕು’ ಹೇಳ್ತ ನಿಟ್ಟಿಲಿ ಕೆಲಸ ಮಾಡ್ತಾ ಇದ್ದವು.
ಮೊದಲಿಂಗೆ ಕೆನಡದ ಹತ್ತೆರೆ ಡೋಲ್ಫಿನ್ನುಗಳ ಹಿಡಿವವರ ಹತ್ತರೆ ಲಡಾಯಿ ಮಾಡಿ ತುಂಬಾ ಅಡ್ಡ”ಹೆಸರು” ತೆಕೊಂಡವ್ವು.
ಕೆಲವೊಂದರಿ ಒಳ್ಳೆ ಕೆಲಸ ಮಾಡುವಾಗ ಅಡ್ಡ ಹೆಸರುಗಳುಶುದು ಬೇಗ ಅನ್ನೆ..!

ವೇಲ್-ವಾರ್ಸ್ ಕಾರ್ಯಕ್ರಮದ ಪೋಷ್ಟರ್

ಈ ಸಮುದ್ರಲ್ಲಿಪ್ಪ ದೊಡ್ದ ದೊಡ್ಡ ಪ್ರಾಣಿಗಳ ಕೆಲವು ಕಳ್ಳಂಗೋ (ಜಪಾನಿನ ಕೆಲವು ಜೆನಂಗೋ ಉದಾಹರಣೆಗೆ) ಪ್ರಯೋಗ ರಿಸರ್ಚ್ ಹೇಳ್ತ ಹೆಸರು ಹೇಳಿಕ್ಕಿ ಕಾನೂನಿನ ತೋರುಶಿಕೊಂಡು ಈ ವೇಲುಗಳ ಎಲ್ಲಾ ಅಗತ್ಯಂದ ಹೆಚ್ಚು ಕೊಂದು, ತಿಂದು ಮುಕ್ಕುತ್ತವಿದಾ.
ಅಂತವ್ವು ಕೊಲ್ಲುದು ಎಲ್ಲಿ ಹೇಳಿತ್ತು ಕಂಡರೆ ಜನ (ದೊಡ್ಡ ದೋಣಿಗೊ) ಎಲ್ಲಾ ಓಡಾಡದ್ದೇ ಇಪ್ಪಂತ ಅಂಟಾರ್ಟಿಕದ ಹತ್ತೆರೆ ಇಪ್ಪ ಸಮುದ್ರಲ್ಲಿ.
ಎಂತಕೆ? ಅವಕ್ಕೆ ವೇಲುಗೊ ಸಿಕ್ಕುದು ಅಲ್ಲೇ. ಸೌತ್ ಸೀ – ಇದಾ ಇದು ಎಂತ ಜಾಗೆ ಸಮುದ್ರಲ್ಲಿ ಹೇಳಿ ಹೇಳುಲೆ ಹೊರಟ್ಟತ್ತು ಕಂಡರೆ ಮುಗಿಯ; ಅಂತೂ ತುಂಬಾ ಭಯಾನಕ ಸಮುದ್ರ ಹೇಳುಲಕ್ಕು. ಹಾಂಗಾಗಿ ಆರೂ ಕೂಡಾ ಹೋವ್ತವಿಲ್ಲೆ.
ಆದರೂ ಈ ಫಟಿಂಗಂಗೋ ಹೋಗಿ ಕೊಲ್ತವನ್ನೇ ಹುರುದುಮುಕ್ಕುಲೆ! ಬೇಜಾರಾವ್ತು.

ಈಗ ಸಾಮಾನ್ಯ ವೇಲುಗಳ (ದೋಡ್ಡ ಜಾತಿದು) ಸಂತತಿ ನಾಶ ಆವುತ್ತ ಬಂದಿದು; ಅವುಗಳ ಸಂಖ್ಯೆ ತುಂಬಾ ಕಮ್ಮಿ. ಒಂದು ರೀತಿಲಿ ಹುಲಿಗಳ ಹಾಂಗೆ!
ಈಗ ಇವು ಜಪಾನಿಗೊಕ್ಕೆ ಹುರುದು ಮುಕ್ಕುಲೆ ಸಿಕ್ಕುತ್ತಿಲ್ಲೆ; ಹಾಂಗಾಗಿ ಈ ಸಣ್ಣ ವೇಲುಗೊ ಹೋಲಿಕೆಗೆ ಮಾಂತ್ರ ಸಣ್ಣದು ದೊಡ್ಡದರೊಟ್ಟಿಂಗೆ ಕಂಡರೆ –  ಇಲ್ಲದ್ದರೆ ಇವುಗಳೂ ಭಯಾನಕ ದೇಹ ಹೊಂದಿಪ್ಪವುಗೊ.
ಹುಡುಕಿಕೊಂಡು ಹೋಗಿ ವೇಲ್ ಸ್ಯಾಂಚುರಿಲಿ ಹಿಡಿವದಿದ. ಮೊದಲು ದೊಡ್ಡ ವೇಲುಗೊ ಬೇಕಾದಷ್ಟು ಸಿಕ್ಕಿಗೊಂಡಿಪ್ಪಗ ಇವುಗಳ ಮೂಸುತ್ತವ್ವು ಆರೂ ಇತ್ತಿದ್ದವಿಲ್ಲೆ.
ಹೇಳಿದಾಂಗೆ ಈ ವೇಲ್ ಸ್ಯಾಂಚುರಿ ಹೇಳ್ತದು ಕಾಂಗಾರೂಗಳ ನಾಡಿನವ್ವು ಮಡುಗಿದ ಹೆಸರು. ಎಂತಕೆ ಹೇಳಿತ್ತೂ ಹೇಳಿರೆ ನಮ್ಮ ಕಿರಿಕೆಟ್ಟಿನ ಫಟಿಂಗ(ಪಾಂಟಿಗ್) ನತ್ತರವೇ ಕೇಳುವ … ಆಗದೋ? 🙂

ಇಂತಾ ಒಳ್ಳೆ ಕೆಲಸ ಮಾಡ್ತದರ ಈ ಅನಿಮಲ್ ಪ್ಲಾನೆಟ್ಟಿಲಿ ತೋರುಸಿಕೊಂಡಿತ್ತಿದ್ದವು ಈಗ ಡಿಸ್ಕವರಿ ಚಾನೆಲಿಲಿ ಬತ್ತಿದಾ.
ಸೀಷೆಪರ್ಡ್ ಗೊ ಜಪಾನಿಗಳೊಟ್ಟಿಂಗೆ ಲಡಾಯಿಮಾಡ್ತದು.
ಕಾನೂನು ಮೀರದ್ದೆ ಲಡಾಯಿಮಾಡೆಕ್ಕಿದಾ ಅವ್ವು ಅಲ್ಲೂ ಅವಕ್ಕೆ ಕಟ್ಟು ನಿಟ್ಟಿನ ಪಾಲನೆಗೊ ಇದ್ದು.

ಅಂತರರಾಷ್ತ್ರೀಯ ನೀರಿಂಗೂ ಅಲ್ಲಿ ಇಪ್ಪ ದೋಣಿಗಳಲ್ಲಿ ಇಪ್ಪವೂ ಅದರದೇ ಆದ ಕಾನೂನುಗೊ ಇದ್ದು.

ಹಾಂಗೇ ಈಗ ಈ ಸೀಷೆಪರ್ಡ್ ಗೊ ಅಲ್ಲಿಗೆ ಹೊದದ್ದು ಸ್ಟೀವ್ ಇರ್ವಿನ್ ಹೇಳ್ತ ದೋಣಿಲಿ.

Steve Irwin ಹಡಗಿನ ಎದುರು ಕೇಪುಟನ್ನು ಮತ್ತು ಇನ್ನೊಂದು ಫ್ಲೀಟ್ - ಹೋಬರ್ಟ್ ಹಾರುಬರ್ರಿಲಿ ತೆಗದ್ದು ..

ಈ ದೋಣಿ ಡಚ್ಚರ ದೇಶಲ್ಲಿ ನೋಂದಣಿ ಆಗಿ ಡಚ್ಚರ ಧ್ವಜಲ್ಲಿ ಹೋಪಂತ ದೋಣಿ.  ಹಾಂಗಾಗಿ ಅವರ ಕಾನೂನನ್ನು ಪಾಲುಸೆಕ್ಕು, ಹಾಂಗೆ ಈ ಜಪಾನಿಗೊ ವೇಲಿಂಗ್ ಕಮಿಷನ್ ( International Whaling Commission – IWC ) ನವ್ವು ಮಾಡಿದ ಕಾನೂನಿ ಅಡಿಲಿ ನುಸುಳಿಗೊಂಡು ತಪ್ಪುಮಾಡಿಗೊಂಡು. ಎಂಗ ಮಾಡ್ತದು ಕಾನೂನು ರೀತಿಲಿ ಸರಿ ಇದ್ದು ಹೇಳಿ ಒಳ್ಳೆಕೆಲಸ ಮಾಡ್ತ ಸೀಷೆಪರ್ಡ್ ಗಳ ಸಮುದ್ರಗಳ್ಳರು ಹೇಳಿ ಹೇಳ್ತವದ. ಎಂತಾದರೂ ಬಾಯಿರುಚಿ ಹೇಳ್ತ ಚಪಲ ಬಿಡೆಕ್ಕನ್ನೆ ಮಂಗಗೊಕ್ಕೆ.

ಈ ರೀತಿಲಿ ಪ್ರಾಣಿ ಗಳಕೊಂದು ಹುರುದುಮುಕ್ಕುದಕ್ಕೇ ಕಾಣ್ತು ಜಪಾನಿಲಿ ಯಾವಾಗ ನೋಡಿರೂ ಭೂಕಂಪ ಆಗಿಗೋಂಡಿಪ್ಪದು – ಪ್ರಕೃತಿಮಾತೆ ಬಿಡೆಕ್ಕನ್ನೆ!
ಅಂತೂ ನಮ್ಮಂದ ಅಲ್ಲಿಹೋಗಿ ಎಂತಮಾಡುಲಾಗದ್ದರೂ ಇಲ್ಲಿಂದಲೇ ಅವ್ವುಮಾಡ್ತಾ ಇಪ್ಪ ಒಳ್ಳೆ ಕೆಲಸಕ್ಕೆ ಬೆಂಬಲ ಇದ್ದು ಹೇಳಿ ನಮ್ಮ ಒಪ್ಪಣ್ಣನಾಂಗಿಪ್ಪ ಬೇರೆ ಇದರ ಬಗ್ಗೆ ಬಪ್ಪ ಬ್ಲೊಗುಗಳಲ್ಲಿ ಬರದು ಬೆಂಬಲ ಕೊಡ್ತದು ಹೀಂಗೆ ಎಡಿಗಾದಹಾಂಗೆ ಮಾಡಿಗೊಂಡು ಹೋಪದಪ್ಪ.

ಅದೆಲ್ಲ ಸರಿ, ಆನು ಈ ವಿಷಯವ ಇಲ್ಲಿ ಎಂತಕೆ ಹೇಳಿದ್ದು ಹೇಳಿರೆ – ನಮ್ಮ ಬೈಲಿಲಿ ಇದರ ಬಗ್ಗೆ ಹಾಂಗೆ ಪ್ರಾಣಿಸಂಕುಲಂಗಳ ಒಳುಶುತ್ತರ ಬಗ್ಗೆ ಚರ್ಚೆ ಆಗಿ ನಮ್ಮಿಂದ ಎಡಿಗಾದ ಕಾರ್ಯವ ಮಾಡುವ.
ಎಂತಕೆ ಹೇಳಿತ್ತು ಕಂಡರೆ ಮುಂದಾಣವಕ್ಕೆ ಕಾಂಬಲೂ ಸಿಕ್ಕೆಕ್ಕು ಈ ಎಲ್ಲಾ ಪ್ರಾಣಿಗೋ ಅಲ್ಲದೋ?

ಭೂಮಿಲಿಪ್ಪ ಪ್ರಾಣಿ ಸಂಕುಲಂಗೊ ನಾಷ ಆವುತ್ತಾ ಬಂದರೆ ಹೇಂಗೆಲ್ಲಾ ಅಡ್ಡಪರಿಣಾಮಂಗೊ ಆವುತ್ತೋ ಆರಿಂಗೆ ಗೊಂತು?

You may also like...

10 Responses

 1. ಚುಬ್ಬಣ್ಣ says:

  ಈಪ್ರ ಭಾವ.. ಈ ಒ೦ದು ವಿಚಾರ ಭಾರೀ ಚಿ೦ತನೆ ಮಾಡೆಕ್ಕಾದ್ದೇ..
  ವೇಲುಗಳ ಸ೦ತತಿ ಕಮ್ಮಿ ಅಪ್ಪದು ಬರೀ ಜಪಾನಿ೦ದ ಮಾ೦ತ್ರ ಅಲ್ಲಾ ಭಾವ.. ಎಡೀ south east Asia ದ ಜೆನ೦ಗೊ ತಿ೦ತವ್ವು..ಇವ್ವು ಹೆಚ್ಚಾಗಿ ಮೀನು, ಮಾ೦ಸ ವೇ ಇವರ ಮೂರು ಹೊತ್ತಿನ ಆಹಾರ.. ಹಾ೦ಗಾಗಿ ಈ over fishing – ಇ೦ದ ಲಗಾಮು ಇಲ್ಲಾದ್ದೆ ಹಿಡುದು,ಇದರ ಮಾರಾಟ ಮಾಡುತ್ತವು.. ಇದು ಹೆಚ್ಚಾಗಿ ಅಪ್ಪದು international waters ಲಿ.. ಇಲ್ಲಿ ಆರೂ ಕೆಳುವವ್ವು ಇಲ್ಲೆ ಇದಾ ಹಾ೦ಗೆ..ಹೀ೦ಗಿಪ್ಪದಕ್ಕೆ ಕಡಿವಾಣ ಹಾಕೆಕಾರೆ ಈ ರೀತಿಯ ಒ೦ದು ಸ೦ಸ್ತ ಬೇಕು..
  ಮನುಶ್ಯನ ಆಸೆ ಮಿತಿ ಮೀರಿಯಪ್ಪಗ ಹೀ೦ಗೆಲ್ಲಾ ಅಪ್ಪದು..
  ಇದೇ ಎಲ್ಲ ವಿಚಾರ೦ಗೊಕೆ ಅನ್ವೆಸುತ್ತು.. ಹುಲಿಯ ವಿಚಾರಲ್ಲಿಯೂ ಹೀ೦ಗೆ..
  ಚೈನಾ ಲಿ ಹುಲಿಯ ಚರ್ಮ್ಮಾ,ಹಲ್ಲು, ಮೂಳೆ ಇತ್ಯಾದಿಗೊಕೆ ಭಾರಿ ಬೇಡಿಕೆ ಇಪ್ಪಕಾರಣ.. ಅದರ ಸ೦ತತಿ ಕಮ್ಮಿಯಾಗಿ ಈಗ ೧೪೦೦ರ ಕ್ಕೆ ಎತ್ತಿದು…
  ಇ೦ದು ಹುಲಿ, ವೇಲು.. ಮತ್ತೆ ಕೆಲವು ವರುಶಲ್ಲಿ ಮತ್ತೊ೦ದು.. ಹೀ೦ಗೆ ಮು೦ದುವರುದರೆ ನಮ್ಮ ecosystem ಅಲ್ಲೋಲ ಕಲ್ಲೋಲ ಅಪ್ಪದು ಕ೦ಡಿತ್ತಾ..!! ಇದರಿದಾಗಿ ನಮ್ಮ ecological balance ಹದಗೆಡ್ತು.. biological pyramid ನ ಮೇಲೆ ಇಪ್ಪ ಪ್ರಾಣಿಗೊ ಕಮ್ಮಿ ಆದರೆ ಅದರ ಕೆಳ ಇಪ್ಪಾ ಪ್ರಾಣಿಗೊ ಹೆಚ್ಚಾವುತ್ತವು.. ಇದರ ಸಮತೋಲನ ಹಾಳಾವುತ್ತು…
  ಹುಲಿಗೊ ಕಮ್ಮಿ ಆದರೆ, ಕಾಡಿಲ್ಲಿ ಜಿ೦ಕೆ, ಕಾಟಿ ಮು೦ತಾದ ಪ್ರಾಣಿಗೊ ಹೆಚ್ಚ್ಹು ಆವುತ್ತು.. ಕಾಣ ಇವರ ಸ೦ಕ್ಯೆಯ ಕಮ್ಮಿ ಮಾಡುವ ಹುಲಿ ಸಿ೦ಮ್ಮ ಇರಾ..!! ಮತ್ತೆ ಈ ಪ್ರಾಣಿ ಗೊ ಹೆಚ್ಚಾದಾ೦ಗೆ, ಹುಲ್ಲು ಕಾಡು ಇದರ ಹೆಚ್ಚು ಮೇವಲೆ ಸುರುವಕ್ಕು (overgrazing), ಅಲ್ಲದ್ದೇ ಮನುಶ್ಯ ಕಾಡು ಕಮ್ಮಿ ಮಾಡ್ತಾ ಇದ್ದು.. ಅದರ ಎಡಕ್ಕಿಲಿ ಈ ಪ್ರಾಣಿಗಳೂ ಹುಲ್ಲು, ಮರ ಇದ್ಯಾದಿ ಕಮ್ಮಿ ಮಾಡಿರೆ ಅದೋ ಗೆತಿ ಅಕ್ಕು.. ಅಲ್ಲದೋ..

  ನಾವೆಲ್ಲ ಸೇರಿ ಹೀ೦ಗಿಪ್ಪ ಸ೦ಸ್ತೆಗೆ ನಮ್ಮ ಎಡಿಗಾದ ಸಹಾಯ ಮಾಡೆಕ್ಕು.. ಅಲ್ಲದೋ..

  ವೇಲಿನ ಬಗ್ಗೆ ಒ೦ದು ಸ೦ಕೋಲಿ.. – http://www.whales.org.za/

  • ಈ.ಪ್ರ says:

   ಓ ಚುಬ್ಬಣ್ಣ ಭಾವ ಈ international waterಇಂಗೆದೆ ಅದರದ್ದೇ ಆದ ಕಾನೂನು ಇದ್ದು …… ಎಂತಾರೂ ಆದರೆ ಅತವಾ ಕಂಪ್ಲೇಂಟು ಮಾಡೆಕ್ಕಾರೆ ಸಮುದ್ರಲ್ಲಿ ಇಪ್ಪ ಜಾಗಂದ ಯಾವ ಬಂದರು ಹತ್ತರ ಇದ್ದೋ ಅಲ್ಲಿ ಹೋಗಿ ಕಂಪ್ಲೇಂಟು ಕೊಡ್ಲಕ್ಕು … ಮತ್ತೆ ಈಗ ಎಲ್ಲಾ ಸ್ಯಾಟಲೈಟ್ ಫೋನಿಲಿ ರಿಪೋರ್ಟ್ ಮಾಡಿ ನಂತರ ಹೋಪಲಕ್ಕು ….

   ಆದರೆ ಕೞಂಗೋ ತಿಮಿಂಗಿಲವ ಹಿಡುದರೆ ಆರಿಂಗೂ ಗೊಂತಾವ್ತಿಲ್ಲೆನ್ನೆ ……. ನೋಡುವವ್ವು ಇಲ್ಲೆನ್ನೆ ಅಲ್ಲಿ ……

 2. ಒಳ್ಳೆಯ ಲೇಖನ… ನಿಜವಾಗಿ ಚರ್ಚೆ ಮಾಡೆಕ್ಕಾದ ವಿಶಯ…

 3. Gopalakrishna BHAT S.K. says:

  ತಿಮಿಂಗಿಲ ಹೇಳಿ ಬರೆವಲೆ ಆವುತ್ತಿತ್ತಿಲ್ಲೆಯೊ ಭಾವಯ್ಯ.
  ತಿಮಿಂಗಿಲವ ಉಳಿಶೆಕ್ಕಾದರೆ ಎಲ್ಲಾ ದೇಶದ ಸರಕಾರಂಗಳೂ ಒಗ್ಗಟ್ಟಾಗಿ ಪ್ರಯತ್ನ ಮಾಡೆಕ್ಕು.
  ಉತ್ತಮ ಲೇಖನ.

 4. ಬೊಳುಂಬು ಮಾವ says:

  ಹೀಂಗಿಪ್ಪದು ಒಂದು ಯುದ್ದ ನೆಡೆತ್ತಾ ಇದ್ದು ಹೇಳಿ ಇಂದು ಗೊಂತಾತು. ಈಶ್ವರ ಪ್ರಸಾದ ಒಳ್ಳೆ ಮಾಹಿತಿಯೊಂದರ ಕೊಟ್ಟಿದ. ಚುಬ್ಬಣ್ಣನುದೆ ಪೂರಕ ಮಾಹಿತಿ ಕೊಟ್ಟದು ಲಾಯಕಾತು. ತಿಮಿಂಗಿಲ ಹೇಳ್ತ ಶಬ್ದ ಪ್ರಯೋಗ ಏಕೆ ಮಾಡಿದ್ದ ಇಲ್ಲೆ ಹೇಳಿರೆ, ನಮ್ಮೂರಿಲ್ಲಿ /ದೇಶಲ್ಲಿ ದೊಡ್ಡ ದೊಡ್ಡ ತಿಮಿಂಗಿಲಂಗೊ ಇದ್ದಲ್ಲದೊ, ಆ ತಿಮಿಂಗಿಲಂಗೊ ಒಳಿಯಕ್ಕಾದ್ದಲ್ಲ, ನಾಶ ಆಯೆಕಾದ್ದದು! ಸಮುದ್ರದ ತಿಮಿಂಗಿಲವುದೆ, ಈ ತಿಮಿಂಗಿಲವುದೆ ಕಂಫ್ಯೂಸು ಅಪ್ಪಲಾಗ ಹೇಳಿ ಬಹುಶ, ಈಶ್ವರಣ್ಣ “ವೇಲ್” ಹೇಳ್ತ ಶಬ್ದ ಉಪಯೋಗಿಸಿದ್ದಾ ಯಿಕ್ಕು !!!

 5. ಈ.ಪ್ರ says:

  ತಿಮಿಂಗಿಲ ಹೇಳ್ತ ಶಬ್ದ ಬಳಕೆ ಮಾಡ್ಲಾವ್ತಿತ್ತು ಆದರೆ ಬೊಳುಂಬು ಮಾವ ಹೇಳಿದಾಂಗೆ ಆರಾರೂ ಬೇರೆ ಅರ್ಥ ಕಲ್ಪನೆ ಮಾಡಿರೆ ….! ಅಲ್ಲದೋ

  ಹಾಂಗೆ ಈ ವೇಲ್ಗಳಲ್ಲಿಇಪ್ಪ ಜಾತಿ ಪಟ್ಟಿ ಕೊಟ್ಟಿದೆ ಕೆಳ ….. ಅವುಗಳಲ್ಲೂ ರಿಸರ್ವೇಷನ್ ಪದ್ದತಿ .. ಹೇಳಿರೆ ಮೀಸಲಾತಿಗೊ ಇದ್ದೋ ಹೇಂ ….. ಃ)

  ………… ದೊಡ್ಡ ಪಟ್ಟಿ ಹನುಮಂತನ ಬಾಲದಾಂಗೇ …..

  Andrews’ Beaked Whale
  Antarctic Minke Whale
  Arnoux’s Beaked Whale
  Baird’s Beaked Whale
  Beluga Whale
  Blainville’s Beaked Whale
  Blue Whale
  Bowhead Whale
  Bryde’s Whale
  Common Minke Whale
  Cuvier’s Beaked Whale
  Dwarf Sperm Whale
  False Killer Whale
  Fin Whale
  Ginkgo-toothed Beaked Whale
  Gray’s Beaked Whale
  Grey Whale
  Hector’s Beaked Whale
  Hubbs’ Beaked Whale
  Humpback Whale
  Killer Whale
  Layard’s Beaked Whale
  Long Finned Pilot Whale
  Longman’s Beaked Whale
  Narwhal Whale
  North Atlantic Right Whale
  North Pacific Right Whale
  Northern Bottlenose Whale
  Northern Minke Whale
  Orca Whales
  Perrin’s Beaked Whale
  Pilot Whale
  Pygmy Beaked Whale
  Pygmy Bryde’s Whale
  Pygmy Killer Whale
  Pygmy Killer Whale
  Pygmy Sperm Whale
  Sei Whale
  Shepherd’s Beaked Whale
  Southern Bottlenose Whale
  Southern Minke Whale
  Sperm Whale
  Beaked Whale

 6. ಈ.ಪ್ರ says:

  ಈ ತಿಮಿಂಗಿಲಂಗಳ ಯುದ್ದ ಈ ವರ್ಷ ಸುರುಆಯ್ದು …

  Sea Shepherd Returns for a Fourth Season of Whale Wars to Put an End to Antarctic Whaling

  http://www.seashepherd.org/whales/whale-wars.html

 7. ರಘು ಮುಳಿಯ says:

  ಈ.ಪ್ರ.ಭಾವಾ,
  ಈ ವಿಶೇಷ ಶುದ್ದಿಗೆ ಧನ್ಯವಾದ. ನಮ್ಮ ನಾಡಿಲಿ ವೀರಪ್ಪನ್ ಇದ್ದ ಹಾ೦ಗೆ ಇಡೀ ಲೋಕಲ್ಲಿ ಸುಮಾರು ನರರಾಕ್ಷಸ೦ಗೊ ಇದ್ದವು ಹೇಳಿ ಗೊ೦ತಾತು.ಇವರ ವಿರುದ್ಧ ಸಮರ ಹೂಡುವ ಸ೦ಸ್ಥೆಯ ಮೆಚ್ಚೆಕ್ಕಾದ್ದು.
  ಇವಕ್ಕೆ ಧನಸಹಾಯ ಎಲ್ಲಿ೦ದ?ಮಾ೦ಸಾಹಾರ ಮಾಡುವ ಯೂರೋಪ್,ಅಮೇರಿಕದ ಜೆನ೦ಗೊಕ್ಕೆ ಈ ವಿಷಯ ಅರ್ಥ ಆಗನ್ನೇ..

  • ಈ.ಪ್ರ says:

   ಭಾವಾ ಈ ಸೀ ಷೆಫರ್ಡ್ಸ್ ಸಂಸ್ಥೆ ಮೂಲ … ಹೇಳಿರೆ ಹುಟ್ಟಿದ್ದು ಅಮೆರಿಕಲ್ಲೇ (Sea Shepherd Conservation Society was formally incorporated in the United States in 1981 in the state of Oregon.)
   ಹುಟ್ಟುಸಿದ್ದೂ ಕೂಡಾ ಅಮೆರಿಕದವನೇ … ಇದಾ ಇಲ್ಲಿ ನೇತು ನೋಡಿಕ್ಕಿ http://www.seashepherd.org/who-we-are/our-history.html

   ಇದರ ಹಣಕಾಸಿನ ವ್ಯವಸ್ಥೆಯ ಬಗ್ಗೆ ಎನಗೆ ಜಾಸ್ತಿ ಮಾಹಿತಿ ಇಲ್ಲೆ ಆದರೆ ಅಮೆರಿಕಾಲ್ಲಿ, ಯುರೋಪಿಲಿ ದಾನಿಗಳಿಂದ ಹಣಸಂಗ್ರಹ ಮಾಡ್ತವು ಹೇಳ್ತ ಶುದ್ದಿ ಗೊಂತಿದ್ದಷ್ಟೆ … ಸಂಕೊಲೆ https://my.seashepherd.org/NetCommunity/SSLPage.aspx?pid=184

   ಹಾಂಗೇ ಇವ್ವು ಬಗೆ ಬಗೆ ವಸ್ತುಗಳ ಮಾರಾಟ ಮಾಡ್ತವ್ವು ಕೂಡಾ .. ಅದರಿಂದಲೂ ಅಲ್ಪ ಸ್ವಲ್ಪ ಬಕ್ಕನ್ನೇ ….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *