ಕಣ್ಣಿಲಿ ಕುರು ಅಪ್ಪದಕ್ಕೆ ಮದ್ದು

November 11, 2013 ರ 10:28 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮದ್ದಿನ ಸೆಸಿಕಣ್ಣು ನಮ್ಮ ದೇಹದ ಬಹು ಮುಖ್ಯವಾದ ಅಂಗ. ಕಣ್ಣಿಂಗೆ ಸಣ್ಣ ಕಸವು ಬಿದ್ದರೂ ತಡವಲೆ ಎಡಿತ್ತಿಲ್ಲೇ.ಕಣ್ಣಿನ ರೆಪ್ಪೆಯ ಬುಡಲ್ಲಿ ಒಂದೊಂದ್ಸರ್ತಿ ಸಣ್ಣ ಕುರು ಆವ್ತು.ಇದು ತುಂಬಾ ಬೇನೆಂದ ಕೂಡಿರ್ತು.ಈ ರೀತಿಯ ಕುರು ಕಮ್ಮಿ ಅಪ್ಪಲೆ ಒಂದು ಸುಲಾಭಲ್ಲಿ ನವಗೆ ಸಿಕ್ಕುವಾಂಗಿಪ್ಪ ಹಳ್ಳಿ ಮದ್ದಿನ ಬೈಲಿಲಿ ಒಂದು ಶುದ್ಧಿಯಾಗಿ ಹೇಳ್ತೆ.
ಇದೊಂದು ಹುಲ್ಲಿನ ಹಾಂಗೆ ಕಾಂಬ ಸೆಸಿ.ಬಳ್ಳಿಯ ಹಾಂಗೆ ನೆಲಲ್ಲಿ ಹಬ್ಬುತ್ತು. ಇದರಲ್ಲಿ ಆಕಾಶ ನೀಲಿ ಬಣ್ಣದ ಸಣ್ಣ ಹೂಗು ಆವ್ತು.ಸೆಸಿಯ ದಂಡಿನ ಮುರುದು ಒತ್ತಿಯಪ್ಪಗ ಬಪ್ಪ ಎಸರಿನ ಕಣ್ಣು ಬೇನೆ ಇಪ್ಪ ಜಾಗೆಗೆ ಕಿಟ್ಟೆಕ್ಕು.ಕಿಟ್ಟಿಯಪ್ಪಗ ಸಣ್ಣಕೆ ತೊರುಸುಗು.ಸಣ್ಣಕೆ ಉರಿವಲೂ ಸಾಕು. ಆದರೆ ತಡವಲೆ ಎಡಿಗಪ್ಪ ಹಾಂಗೆ ಇರ್ತು.ದಿನಲ್ಲಿ ಎರಡು ಅಥವಾ ಮೂರು ಸರ್ತಿ ಕಿಟ್ಟಿದರೆ ಮೂರು ಅಥವಾ ನಾಲ್ಕು ದಿನಲ್ಲಿ ಕಮ್ಮಿ ಆವ್ತು. ಈ ಸೆಸಿಯ ಹೆಸರು ಎನಗೆ ಗೊಂತಿಲ್ಲೆ. ಗೊಂತಿಪ್ಪವು ಈ ಚಿತ್ರವ ಗುರುತಿಸಿ ಹೇಳುವಿರಾ?

ಸುಮಾರು ಇಪ್ಪತ್ತೈದು ವರ್ಷದ ಹಿಂದೆ ಆಚಕರೆ ಶಂಕರಪ್ಪಚ್ಚಿ ಮನಗೆ ಬಂದಿಪ್ಪಗ ಎಂಗಳ ಮಗಳಿಂಗೆ ಹೀಂಗೇ ಕಣ್ಣು ಬೇನೆ ಆದಿಪ್ಪಗ ಈ ಮದ್ದಿನ ಬಗ್ಗೆ ಹೇಳಿತ್ತವು.ಎಂಗೊಗೆ ಇದು ಒಳ್ಳೆ ಪ್ರಯೋಜನ ಆಯಿದು.ನೆರೆಕರೆಯವಕ್ಕೆ,ಗುರ್ತದವಕ್ಕೆ ಈ ಮದ್ದಿನ ತಿಳಿಶಿದ್ದೆಯ.ಒಳ್ಳೆಯ ಮದ್ದು ಹೇಳುವ ಮಾತು ಹೇಳಿ ಕೇಳಿ ಬಯಿಂದು. ಕಣ್ಣು ತೊರುಸುದಕ್ಕೆ ಕಣ್ಣಿಲಿ ನೀರು ಬಪ್ಪದಕ್ಕೆ ಈ ಮದ್ದು ತುಂಬಾ ಗುಣ ಕೊಡ್ತು. ಈ ರೀತಿಯ ಕಣ್ಣು ಬೇನೆಗೆ ಗ್ರಾಮ್ಯವಾಗಿ ಕಣ್ಣಕಳುವ ಹೇಳಿಯೂ ಹೇಳುದರ ನಿಂಗ ಕೇಳಿಪ್ಪಲೂ ಸಾಕು. ಇದು ಹೆಚ್ಚಾಗಿ ಗೆದ್ದೆ ಕರೇಲಿ ತೋಟಲ್ಲಿ ಹೆಚ್ಚು ನೀರ ಪಸೆ ಇಪ್ಪ ಜಾಗೆಲಿ ಕಾಂಬಲೆ ಸಿಕ್ಕುತ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

  1. ಚೆನ್ನೈ ಬಾವ°
    ಚೆನ್ನೈ ಭಾವ°

    ಈ ಹುಲ್ಲಿನಾಂಗೆ ಕಾಂಬ ಸೆಸಿಯ ಕಂಡಾಂಗೆ ಆವ್ತನ್ನೇ. ಮದ್ದಿಂಗಾವ್ತು ಹೇದು ಗೊಂತಿತ್ತಿಲ್ಲೆ. ಇದರ ಹೆಸರು – ಎನಗೊಂತಿಲ್ಲೆ

    ಶುದ್ದಿಗೊಂದು ಖಂಡಿತ ಒಪ್ಪ

    [Reply]

    VA:F [1.9.22_1171]
    Rating: 0 (from 0 votes)
  2. ಬಾಲಣ್ಣ (ಬಾಲಮಧುರಕಾನನ)
    ಬಾಲಣ್ಣ (ಬಾಲಮಧುರಕಾನನ)

    ಎಂಗಳ ಊರಿಲಿ ಇನ್ನೊಂದು ಮದ್ದು ಬಳಕೆಲಿ ಇದ್ದು,ಹಾಡೆ ಸೊಪ್ಪಿನ ಗೂಂಚಿ ಅದರ ಗೊಂಪಿನ ಸೊಪ್ಪು ಸಮೇತ ಕಣ್ನು ಮುಚ್ಚಿ ರೆಪ್ಪೆಯ
    ಮೇಗೆ ಮಡುಗೆಕು.ಇದು ತುಂಬಾ ಪ್ರಯೋಜನಕಾರಿ ಮದ್ದು.

    [Reply]

    VN:F [1.9.22_1171]
    Rating: 0 (from 0 votes)
  3. ಕೆ. ವೆಂಕಟರಮಣ ಭಟ್ಟ

    ದನ ಕರವಗ ಬೆಶಿ (ಫ್ರೆಶ್) ಹಾಲಿನ ನೊರೆ ಎರಡು ದಿನ ಎರಡು ಹೊತ್ತು ಕಿಟ್ಟಿದರೆ ಗುಣ ಆವುತ್ತು.

    [Reply]

    VA:F [1.9.22_1171]
    Rating: +1 (from 1 vote)
  4. ಶ್ಯಾಮಣ್ಣ
    ಶ್ಯಾಮಣ್ಣ

    ಕೆಮಿ ಒಳ ತೊರುಸುದಕ್ಕೆ ಎಂತಾರೂ ಮದ್ದಿದ್ದಾ?

    [Reply]

    VN:F [1.9.22_1171]
    Rating: 0 (from 0 votes)
  5. ಶ್ಯಾಮಣ್ಣ
    ಶ್ಯಾಮಣ್ಣ

    ಉಗುರಿನಕೊಡಿಲಿ ಕೆಮಿಂದ ಕಲ್ಮಶ ತೆಗದು ಇಡ್ಕುಲಕ್ಕು… ಆದರೆ ಮದು ಕೈಟಬರು ಹುಟ್ಟಿದರೆ ಹೇಳಿ ಹೆದರಿಕೆ… 😉

    [Reply]

    ಬಾಲಣ್ಣ (ಬಾಲಮಧುರಕಾನನ)

    ಬಾಲಣ್ಣ (ಬಾಲಮಧುರಕಾನನ) Reply:

    ಶಾಮಣ್ಣಾ ,ಹಾಂಗೆಲ್ಲಾ ಎಲ್ಲಾದರೂ ಮಾಡಿಕ್ಕೆಡಿ ಮಿನಿಯಾ..ಇಲ್ಲಿ ಮಧು ಕೈಟಭರಿಂದಲುದೆ ಮೇಗಾಣವು ಇದ್ದವು ,(ಇಲ್ಲಿ ಕಾಸರಗೋಡಿಲಿ)

    [Reply]

    VN:F [1.9.22_1171]
    Rating: +1 (from 1 vote)
  6. ಶ್ಯಾಮಣ್ಣ
    ಶ್ಯಾಮಣ್ಣ

    ನಮ್ಮ ಈ ಬೈಲಿಲಿ ಒಂದು ನಾಲ್ಕೈದು ಜೆನ ಡಾಕುಟ್ರುಗ ಇತ್ತಿದ್ದವು… ಈಗ ಒಬ್ಬನನ್ನೂ ಕಾಣ್ತಿಲ್ಲೆ…. :(

    [Reply]

    VN:F [1.9.22_1171]
    Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಕಾವಿನಮೂಲೆ ಮಾಣಿವೇಣಿಯಕ್ಕ°ಡೈಮಂಡು ಭಾವಪೆಂಗಣ್ಣ°ಮಂಗ್ಳೂರ ಮಾಣಿಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°ವಿಜಯತ್ತೆವಸಂತರಾಜ್ ಹಳೆಮನೆಶಾ...ರೀಕೊಳಚ್ಚಿಪ್ಪು ಬಾವನೆಗೆಗಾರ°ದೊಡ್ಡಭಾವಅನುಶ್ರೀ ಬಂಡಾಡಿಒಪ್ಪಕ್ಕಪುತ್ತೂರಿನ ಪುಟ್ಟಕ್ಕರಾಜಣ್ಣಬಂಡಾಡಿ ಅಜ್ಜಿಉಡುಪುಮೂಲೆ ಅಪ್ಪಚ್ಚಿಜಯಶ್ರೀ ನೀರಮೂಲೆವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣಕಳಾಯಿ ಗೀತತ್ತೆನೀರ್ಕಜೆ ಮಹೇಶಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ