Oppanna.com

ಧಾನ್ಯಕ…. ನೀನೇ ಧನ್ಯ!!!

ಬರದೋರು :   ಡಾಗುಟ್ರಕ್ಕ°    on   14/03/2011    18 ಒಪ್ಪಂಗೊ

ಡಾಗುಟ್ರಕ್ಕ°

ನಮ್ಮಂದಾಗಿ ಇನ್ನೊಬ್ಬಂಗೆ ಎಂತಾರು ಉಪಕಾರ ಆವುತ್ತರೆ ನಮ್ಮ ಜೀವನ ಸಾರ್ಥಕ ಆವುತ್ತು ಅಲ್ಲದಾ?ಹೀಂಗೇ ನವಗೆ ತುಂಬಾ ಉಪಕಾರ ಮಾಡ್ತಾ ಇಪ್ಪದು ಧಾನ್ಯಕ.ಊಟ ಮಾಡುವಗ ಸಾರಿನ ಘಮ ಘಮ ಪರಿಮಳ,ಕೊದಿಲಿನ ರುಚಿ ಎಲ್ಲವೂ ಎರಡೆರಡು ಸರ್ತಿ ಬಳ್ಸಿಗೊಂಡು ಉಂಬ ಹೇಳಿ ಆಶೆ ಹುಟ್ಟುಸುತ್ತು..ನಮ್ಮ ನಿತ್ಯ ಅಡಿಗೆಗೆ ನವಗೆ ಅಗತ್ಯ ಬೇಕಪ್ಪ ಜನ ಈ ಧಾನ್ಯಕ.. ಆರಂಬಗ ಈ ಧಾನ್ಯಕ?ಬನ್ನಿ ನೋಡುವ…

ನಮ್ಮ ಬೈಲಿಲಿ ಒಬ್ಬಂಗೇ ಸುಮಾರು ಹೆಸರುಗೊ ಇಪ್ಪ ಹಾಂಗೇ ಧಾನ್ಯಕಕ್ಕೂ ಸುಮಾರು ಹೆಸರುಗೊ ಇದ್ದು.. ಧಾನ್ಯಕ ಹೇಳ್ತದು ಇಪ್ಪ ಹೆಸರು(ಸಂಸ್ಕೃತಲ್ಲಿ),ಅದೇ ಅದರ ಒಪ್ಪ ಹೆಸರು-ಕೊತ್ತಂಬರಿ ಹೇಳಿ.ವಿಜ್ಞಾನಿಗೊ ಮಡುಗಿದ ಹೆಸರು-Coriandrum sativum.ಇದರ Umbelliferae ಹೇಳ್ತ ಕುಟುಂಬಕ್ಕೆ ಸೇರಿದ ಜನ.ಇನ್ನೂ ಕೆಲವು ಹೆಸರು ಮಡುಗಿದ್ದವು-ಧಾನ್ಯಾ,ಧಾನೀ,ಧಾನೇಯಕ,ಕುಸ್ತುಂಬುರು,ಅಲ್ಲಕಾ,ಛತ್ರಧಾನ್ಯ,ವಿತುನ್ನಕ,ಕುನಟೀ,ಧೇನುಕಾ,ಛತ್ರಾ.

ಕೊತ್ತಂಬರಿಯ ನೋಡದ್ದೋರು ಇಲ್ಲೆ ಹೇಳಿ ಗ್ರೇಶುತ್ತೆ.ಇದರ ಇಡೀ ಸೆಸಿಯನ್ನೇ ಉಪಯೋಗ ಮಾಡ್ತು ಹಾಂಗೇ ಬೀಜವನ್ನೂ ಕೂಡಾ..ಇದು ಎಲ್ಲಾ ಕಡೆಲೂ ಸುಲಭಲ್ಲಿ ಬೆಳವ ಸೆಸಿ..ಹೆಚ್ಚು ಆರೈಕೆ ಅಗತ್ಯ ಇಲ್ಲೆ..

ಆಯುರ್ವೇದಲ್ಲಿ ಇದರ ಗುಣ ಕರ್ಮಂಗಳ ಬಗ್ಗೆ ಹೀಂಗೆ ಹೇಳಿದ್ದವು-

coriander,seeds,powder
ಧಾನ್ಯಕ,ಧಾನ್ಯಕ ಬೀಜ,ಚೂರ್ಣ

ರಸ(ರುಚಿ)-ಕಷಾಯ(ಒಗರು),ತಿಕ್ತ(ಕೈಕೆ),ಮಧುರ(ಸೀವು),ಕಟು(ಖಾರ)

ಗುಣ-ಲಘು,ಸ್ನಿಗ್ಧ

ವಿಪಾಕ(ಪಚನ ಕಾರ್ಯ ಆದ ಮತ್ತಾಣ ರಸ)-ಮಧುರ

ಧನ್ವಂತರಿ ನಿಘಂಟಿಲಿ ಆಚಾರ್ಯರು ಹೇಳ್ತವು-

ಆರ್ದ್ರಾ ಕುಸ್ತುಂಬುರುಃ ಕುರ್ಯಾತ್ ಸ್ವಾದುಸೌಗಂಧ್ಯಹೃದ್ಯತಾಮ್ |

ಸಾ ಶುಷ್ಕಾ ಮಧುರಾ ಪಾಕೇ ಸ್ನಿಗ್ಧಾ ತೃಟ್ ದಾಹನಾಶಿನೀ ||

ಧಾನ್ಯಕಂ ಕಾಸತೃಟ್ ಛರ್ದಿಜ್ವರಹೃಚ್ಚಕ್ಷುಷೋ ಹಿತಮ್ |

ಕಷಾಯತಿಕ್ತಮಧುರಂ ಹೃದ್ಯಂ ದೀಪನಪಾಚನಮ್ ||  –.ನಿ/೬೪೬೫

ಹೇಳಿದರೆ,ಹಸಿ ಕೊತ್ತಂಬರಿ ಒಳ್ಳೆ ರುಚಿ ಇದ್ದುಗೊಂಡು ಪರಿಮಳವೂ ಇರ್ತು.ಇದರಂದಾಗಿ ಮನಸ್ಸು ಹೃದಯಕ್ಕೆ ಹಿತವಾಗಿರ್ತು.ಅದೇ ಒಣಗಿದ ಮತ್ತೆ ಕಷಾಯ,ತಿಕ್ತ ಮಧುರ ರಸ ಆಗಿ ಮಧುರ ವಿಪಾಕ ಆವುತ್ತು,ಸ್ನಿಗ್ಧ ಗುಣ ಇರ್ತು.ಇದು ಆಸರಪ್ಪದರ,ಉರಿ ಬಪ್ಪದರ,ಸೆಮ್ಮ,ವಾಂತಿಯ ಕಮ್ಮಿ ಮಾಡ್ತು.ಹೃದಯಕ್ಕೆ,ಕಣ್ಣಿಂಗೆ ಹಿತವಾಗಿದ್ದು ಬಾಯಿ ರುಚಿ ಉತ್ಪತ್ತಿ ಮಾಡ್ತು ಹಾಂಗೇ ಹಶು ಹೆಚ್ಚು ಮಾಡ್ತು..

ಭಾವಪ್ರಕಾಶ ನಿಘಂಟು ಹೇಳುವ ಪ್ರಕಾರ ಕೊತ್ತಂಬರಿ ಮೂತ್ರಲ(ಮೂತ್ರ ಉತ್ಪತ್ತಿ ಮಾಡುವಂತದ್ದು),ದೀಪನ,ಪಾಚನ ಮಾಡುವಂತದ್ದು.ಜ್ವರ ಕಮ್ಮಿ ಮಾಡಿ ಜಠರಾಗ್ನಿಯ ಹೆಚ್ಚು ಮಾಡ್ತು,ಬೇಧಿ ನಿಲ್ಲುಸುತ್ತು.ಮೂರೂ ದೋಷಂಗಳಂದ ಬಪ್ಪ ತೊಂದರೆಗೊಕ್ಕೆ ಪ್ರಯೋಜನಕಾರಿ ಹಾಂಗೇ ತೃಷ್ಣಾ,ದಾಹ,ವಾಂತಿ,ಶ್ವಾಸ,ಕಾಸ,ಕ್ರಿಮಿ ರೋಗಂಗಳಲ್ಲಿ ತುಂಬಾ ಉಪಕಾರಿ..ಹಸಿ ಕೊತ್ತಂಬರಿ ವಿಶೇಷವಾಗಿ ಪಿತ್ತ ನಾಶಕವಾಗಿ ಕೆಲಸ ಮಾಡ್ತು..

ಒಟ್ಟಿಲಿ ಹೇಳುದಾದರೆ ಧಾನ್ಯಕ ತ್ರಿದೋಷಹರ ಆಗಿ ಆಸರಪ್ಪದು,ಉರಿ,ಸೆಮ್ಮ,ವಾಂತಿ,ಜ್ವರ,ಕ್ರಿಮಿಯ ತೊಂದರೆಗಳಲ್ಲಿ ತುಂಬಾ ಪ್ರಯೋಜನಕಾರಿ.ಹಾಂಗೇ ಕಣ್ಣಿಂಗೆ ಹೃದಯಕ್ಕೆ ಹಿತಕಾರಿ..

ಧಾನ್ಯಕವ ಉಪಯೋಗ ಮಾಡುವ ರೀತಿ–

  • ತಲೆಬೇನೆಗೆ ಕೊತ್ತಂಬರಿ ಸೊಪ್ಪಿನ ಕಡದು ಲೇಪ ಹಾಕೆಕ್ಕು ಅಥವಾ ಕೊತ್ತಂಬರಿ ಬೀಜ ಕಡದು ಮಾಡಿದ ಲೇಪ ಹಾಕುಲಕ್ಕು.
  • ಸರ್ಪಸುತ್ತು ಅಥವಾ ಪಿತ್ತಂದಾಗಿ ಮೈಲಿ ದಡಿಕ್ಕೆಯ ಹಾಂಗೆ ಬಿದ್ದಿದ್ದರೂ ಕೂಡಾ ಈ ಲೇಪ ಉಪಯೋಗ ಮಾಡ್ಲಕ್ಕು.
  • ಬಾಯಿಲಿ ಹುಣ್ಣಾಗಿದ್ದರೆ ಕೊತ್ತಂಬರಿ ಸೊಪ್ಪಿನ ರಸಲ್ಲಿ ಬಾಯಿ ಮುಕ್ಕುಳುಸೆಕ್ಕು(ಗಂಡೂಷ ಹೇಳ್ತವು).
  • ಉಷ್ಣ ಹೆಚ್ಚಾಗಿ ಮೂಗಿಲಿ ನೆತ್ತರು ಬತ್ತಾ ಇದ್ದರೂ ಕೊತ್ತಂಬರಿ ರಸ ಮೂಗಿಂಗೆ ಹಾಕಿದರೆ ಪ್ರಯೋಜನ ಆವುತ್ತು.
  • ಕೆಂಪು ಕಣ್ಣು ಇಪ್ಪಗ ಕೊತ್ತಂಬರಿ ಬೀಜದ ಕಷಾಯಲ್ಲಿ ಆವಗಾವಗ ಕಣ್ಣು ತೊಳೆಯಕ್ಕು.ಕಣ್ಣಿನ ತುರಿಕೆ ಈ ತರ ತೊಂದರೆ ಇಪ್ಪೋರೂ ಇದರ ಮಾಡ್ಲಕ್ಕು.
  • ಧಾನ್ಯಕದ ಶೀತ ಕಷಾಯವ ತೃಷ್ಣಾ,ಜ್ವರ,ಅರುಚಿ,ವಾಂತಿ,ಹಶು ಇಲ್ಲದ್ದೆ ಆದಿಪ್ಪಗ,ಅಜೀರ್ಣ,ಬೇಧಿ,ಹೊಟ್ಟೆಬೇನೆ,ಕ್ರಿಮಿರೋಗ,ಅಮ್ಲಪಿತ್ತ,ಅರ್ಶಸ್ ತೊಂದರೆಗಳಲ್ಲಿ ತೆಕ್ಕೊಂಬಲಕ್ಕು.
  • ಕೊತ್ತಂಬರಿ ನೀರಿನೊಟ್ಟಿಂಗೆ ಸಕ್ಕರೆ ಹಾಕಿ ಕುಡುದರೆ ಉರಿ ಬಪ್ಪದು,ಜೋರಾಗಿ ಆಸರಪ್ಪದು ಕಮ್ಮಿ ಆವುತ್ತು.
  • ಹಳೇ ನೆಗಡಿ ಇದ್ದರೆ ಕೊತ್ತಂಬರಿಯ ಬೆಶಿ ನೀರಿಂಗೆ ಹಾಕಿ ಕುಡಿಯೆಕ್ಕು.
  • ಮಕ್ಕಳ ಶ್ವಾಸ,ಸೆಮ್ಮ ತೊಂದರೆಗಳಲ್ಲಿ ಕೊತ್ತಂಬರಿಯ ಲಾಯಿಕ್ಕಲಿ ಹೊಡಿ ಮಾಡಿ ಅದಕ್ಕೆ ಕಲ್ಲು ಸಕ್ಕರೆ ಹೊಡಿ ಸೇರ್ಸಿ ನೀರಿಲಿ ಕಲಸಿ ಕೊಡೆಕ್ಕು.
  • ಮಧುಮೇಹಲ್ಲೂ ಕೊತ್ತಂಬರಿ ನೀರು(ಸಕ್ಕರೆ ಹಾಕದ್ದೆ) ತುಂಬಾ ಉಪಕಾರಿ.
  • ಸರಿಯಾದ ಸಮಯಕ್ಕೆ ಊಟ ಮಾಡದ್ದಿಪ್ಪಗ ಅಥವಾ ಖಾರ ಉಂಡಪ್ಪಗ ಹೊಟ್ಟೆ ಉರಿ ಬಪ್ಪೋರು ದಿನಾ ಉದಿಯಪ್ಪಗ ಖಾಲಿ ಹೊಟ್ಟೆಗೆ ಕೊತ್ತಂಬರಿ ನೀರು(ಧಾನ್ಯಕ ಹಿಮ) ಕಲ್ಲುಸಕ್ಕರೆಯೊಟ್ಟಿಂಗೆ ತೆಕ್ಕೊಂಡರೆ ತೊಂದರೆ ಪೂರ್ತಿಯಾಗಿ ಕಮ್ಮಿ ಆವುತ್ತು.

**ಹೊಟ್ಟೆ ಉರಿ ಇಪ್ಪಗ ಕಾಲ್ಶಿಯಂ ಉರಿ ಕಮ್ಮಿ ಮಾಡ್ತು ಹೇಳಿ ಈಗಾಣ ಕಾಲದ ಡಾಕ್ಟ್ರಕ್ಕೊ ಹೇಳ್ತವು.ಹಾಂಗಾಗಿ ಅವ್ವು ಕೊಡುವ ಕೆಲವು ಮದ್ದುಗಳಲ್ಲಿ ಇದು ಇರ್ತು. ಇದಲ್ಲದೆ ಕೆಲವು ಸರ್ತಿ ಸೋಡಿಯಂ ಅಥವಾ ಮೆಗ್ನೇಶಿಯಂನ ಅಂಶ ಇಪ್ಪ ಮದ್ದುಗಳನ್ನೂ ಕೊಡ್ತವು..

೧೦೦ಗ್ರಾಮ್ಸ್ ಕೊತ್ತಂಬರಿ ಸೊಪ್ಪಿಲಿ ೧೮೪ಮಿಲಿಗ್ರಾಮ್ಸ್,ಬೀಜಲ್ಲಿ ೬೩೦ಮಿಲಿಗ್ರಾಮ್ ನಷ್ಟು ಕಾಲ್ಶಿಯಂ(ಸುಣ್ಣದ ಅಂಶ),೨೩೯ಮಿಲಿಗ್ರಾಮ್ಸ್ ಮೆಗ್ನೇಶಿಯಂ,೩೨ಮಿಲಿಗ್ರಾಮ್ಸ್ ಸೋಡಿಯಂ ಇರ್ತು.ಇದರೊಟ್ಟಿಂಗೆ ಕಬ್ಬಿಣದ ಅಂಶವೂ ಒಳ್ಳೆ ಪ್ರಮಾಣಲ್ಲಿ ಇದ್ದು.ಇದರ ನಮ್ಮ ಆಚಾರ್ಯರು ಯಾವಗಳೋ ಕಂಡು ಹಿಡುದ ಕಾರಣ ಹೊಟ್ಟೆ ಉರಿ ಇಪ್ಪಗ ಧಾನ್ಯಕ ಹಿಮ ಕುಡಿರಿ ಹೇಳಿದ್ದು..ಇದು ಎಲ್ಲಾ ನಮೂನೆಯ ಹೊಟ್ಟೆ ಬೇನೆ,ಉರಿಗೊಕ್ಕೆ ರಾಮಬಾಣ.. 🙂

ಅಂಬಗ ನಮ್ಮ ಆಚಾರ್ಯರ ದಿವ್ಯದೃಷ್ಟಿ,ತಪೋಶಕ್ತಿ ಎಷ್ಟಿತ್ತು ಹೇಳಿ ಊಹೆಗೂ ಸಿಕ್ಕದ್ದದು.ಈಗಾಣೋರಿಂಗೆ ಇದರ ಕಂಡು ಹಿಡಿವಲೆ ಪ್ರಯೋಗಶಾಲೆ ಬೇಕಾತು. ಆಚಾರ್ಯರು ಪ್ರಯೋಗ ಮಾಡಿ ಇಂತಿಂತಾ ಸೆಸಿಗಳಲ್ಲಿ ಈ ಅಂಶಂಗೊ ಇಷ್ಟಿದ್ದು ಹೇಳಿ ಹೇಳಿರವು,ಆದರೆ ಪ್ರತಿಯೊಂದು ಗಿಡಮೂಲಿಕೆಯ ಯಾವ ತೊಂದರೆಲಿ ಉಪಯೋಗ ಮಾಡೆಕ್ಕು ಹೇಳಿ ಸರಿಯಾಗಿಯೇ ಹೇಳಿದ್ದವು.ಅದರಲ್ಲಿ ಎರಡು ಮಾತಿಲ್ಲೆ..

ಆಯುರ್ವೇದ ಚಿಕಿತ್ಸಾ ಕ್ರಮದ ಬಗ್ಗೆ ತುಂಬಾ ಕೇಳಿ ಬತ್ತಾ ಇದ್ದು.ಆಯುರ್ವೇದಲ್ಲಿ ಹೇಳಿದ ಹೆಚ್ಚಿನ ಮದ್ದುಗಳಲ್ಲಿ ಇಪ್ಪ ಪದಾರ್ಥಂಗಳ ನಾವು ನಮ್ಮ ದಿನನಿತ್ಯದ ಆಹಾರವಾಗಿ ಬಳಕೆ ಮಾಡ್ತು.ಇದರಂದ ತೊಂದರೆ ಆವುತ್ತಿತ್ತರೆ ಇಷ್ಟು ಸಾವಿರ ವರ್ಷಂಗಳಂದ ನಮ್ಮ ಹಿರಿಯರು ಈ ಪದ್ದತಿಯ ಅನುಸರ್ಸಿಗೊಂಡು ಬರ್ತಿತ್ತವಾ? ಅಂತೇ ರಾಸಾಯನಿಕವಾದ ಮದ್ದುಗಳ ತೆಕ್ಕೊಂಬ ಬದಲು ಒಂದರಿ ನೈಸರ್ಗಿಕವಾಗಿಪ್ಪ ಉಪಾಯಂಗಳ ಮಾಡಿ ನೋಡಿ,ಮತ್ತೆ ನಿಂಗಳೇ ತೀರ್ಪು ಕೊಡ್ತಿ ಯಾವುದು ಒಳ್ಳೆದಪ್ಪದು ಅಥವಾ ಒಳ್ಳೆದಿಲ್ಲೆ ಹೇಳಿ.. 🙂

ಧಾನ್ಯಕ ಹಿಮ (ಕೊತ್ತಂಬರಿ ನೀರು) ಮಾಡುವ ವಿಧಾನ —

೧ ಪ್ರಮಾಣದಷ್ಟು ಕೊತ್ತಂಬರಿ ಬೀಜವ ಲಾಯಿಕ್ಕಲಿ ಕುಟ್ಟಿ ಹೊಡಿ ಮಾಡಿಗೊಳ್ಳೆಕ್ಕು.ಇದರ ಒಂದು ಮಣ್ಣಿನ ಪಾತ್ರೆಗೆ(ಅಥವಾ ಯಾವುದಾದರು ಪಾತ್ರೆಗೆ) ಹಾಕಿಗೊಳ್ಳೆಕ್ಕು.ಇದಕ್ಕೆ ೬ ಪಟ್ಟು ಬೆಶಿನೀರು ಹಾಕಿ ಇರುಳಿಡೀ ಮಡುಗೆಕ್ಕು.ಉದಿಯಪ್ಪಗ ನೀರಿಲಿಪ್ಪ ಕೊತ್ತಂಬರಿ ಹೊಡಿಯ ಲಾಯಿಕ್ಕಲಿ ಪರುಂಚಿ ಮತ್ತೆ ನೀರಿನ ಸೋಸೆಕ್ಕು.ಈ ಸೋಸಿದ ನೀರಿಂಗೆ ಸಕ್ಕರೆ ಅಥವಾ ಕಲ್ಲು ಸಕ್ಕರೆ ಹಾಕಿ ಕುಡಿಯೆಕ್ಕು.

ಧಾನ್ಯಕ ಪಾನಕ ಮಾಡುವ ವಿಧಾನ (ಭಾವಪ್ರಕಾಶ ನಿಘಂಟುಲಿ ಹೇಳಿದಾಂಗೆ)–

ಕೊತ್ತಂಬರಿಯ ಕುಟ್ಟಿ ಹೊಡಿ ಮಾಡೆಕ್ಕು.ಇದರ ವಸ್ತ್ರಲ್ಲಿ ಸೋಸೆಕ್ಕು.ಈ ಹೊಡಿ ತುಂಬಾ ನೊಂಪಾಗಿರೆಕ್ಕು.ಇದಕ್ಕೆ ಸಕ್ಕರೆ,ಪಚ್ಚೆ ಕರ್ಪೂರ ಹಾಕಿ ನೀರು ಹಾಕಿ ಮಣ್ಣಿನ ಪಾತ್ರೆಲಿ ಮಡುಗಿದರೆ ಆಸರಪ್ಪಗ ಕುಡಿವಲೆ ಒಳ್ಳೆ ಪಾನಕ..

ಬೇಸಗೆ ಬತ್ತಾ ಇದ್ದು,ನಿಂಗಳೂ ಮಾಡಿ ನೋಡಿ.ಪೆಪ್ಸಿಯ ಕೋಲಂದ ಇದು ಎಷ್ಟೋ ಒಳ್ಳೆದಾವುತ್ತು.. 😉 ಇದು ಕುಡಿವಲೂ ತಂಪು,ಆರೋಗ್ಯಕ್ಕೂ ಒಳ್ಳೆದು..

ಇಷ್ಟೆಲ್ಲಾ ಪ್ರಯೋಜನಕಾರಿಯಾದ ಕೊತ್ತಂಬರಿ ದಿನನಿತ್ಯ ಅಡಿಗೆಯ ಮೂಲಕ ನಮ್ಮ ದೇಹಕ್ಕೆ ಹೋಗಿ ಅದು ಸುಸ್ಥಿಲಿ ಇಪ್ಪಲೆ ಸಹಾಯ ಮಾಡ್ತು.ಈ ಗುಣ ಈಗಾಣ ಹೊರದೇಶಂದ ಬಂದ ಆಹಾರವಾದ ಪಿಜ್ಜಾ,ಬ್ರೆಡ್ ಇಂತಾದ್ರಲ್ಲಿ ಇಕ್ಕಾ?ಯಾವುದಾದರೂ ಆಹಾರ ಪದಾರ್ಥ ಇದ್ದಾ ನಮ್ಮ ಧಾನ್ಯಕಕ್ಕೆ ಸರಿಸಾಟಿಯಾದ್ದು?

ನಮ್ಮ ದೇಹ ಪ್ರಕೃತಿ ನಮ್ಮ ಕ್ರಮದ ಅಡಿಗೆಗೊಕ್ಕೆ ಹೊಂದಿಗೊಂಡಿರ್ತು.ಅದೇ ದೇಹಕ್ಕೆ ವಿರುದ್ದವಾದ ಆಹಾರ ತೆಕ್ಕೊಂಡರೆ ಮತ್ತೆ ಖಾಯಿಲೆ ಬಾರದ್ದೆ ಇಕ್ಕಾ?ಖಾಯಿಲೆ ಬಂದರೆ ಡಾಗುಟ್ರಕ್ಕಂದ್ರತ್ರೆ ಹೋಗದ್ದರೆ ಅಕ್ಕಾ? 😉 ಎಲ್ಲರೂ ಆರೋಗ್ಯಲ್ಲಿ ಇರೆಕ್ಕು ಹೇಳ್ತದೇ ಎನ್ನ ಆಶಯ.. 🙂

————————————————————————

ಡಾ.ಸೌಮ್ಯ ಪ್ರಶಾಂತ

sowprash@gmail.com

18 thoughts on “ಧಾನ್ಯಕ…. ನೀನೇ ಧನ್ಯ!!!

  1. ಗೌಟ್ ಹೇಳಿರೆ ರಕ್ತಲ್ಲಿ uric ಆಸಿಡ್ ಜಾಸ್ತಿ ಆಗಿ ಬಪ್ಪ ಸಂದಿ ವಾತ. ಇದಕ್ಕೆ ದಿನಕ್ಕೆ ೨-೩ ಸರ್ತಿ ಕೊತ್ತಂಬರಿ ಕಷಾಯ ಕುಡುದರೆ ಕಮ್ಮಿ ಆವುತ್ತ್ತು [ಕಷಾಯ ಅಲ್ಲ ಬೇನೆ :)] ಒಂದು ತಿಂಗಳು ಕುಡುದು uric ಆಸಿಡ್ ಚೆಕ್ ಮಾಡಿರೆ uric ಆಸಿಡ್ ಕಮ್ಮಿ ಇರುತ್ತು .

  2. ಸೌಮ್ಯಾ, ಕೊತ್ತಂಬರಿಯ ಬಗ್ಗೆ ತುಂಬಾ ಲಾಯ್ಕಲ್ಲಿ ಪೂರ್ಣ ಮಾಹಿತಿ ಕೊಟ್ಟಿದೆ.
    ನಮ್ಮ ಹಿರಿಯರ ಅನುಭವಂದ ಬಂದದು ನವಗೆ ಸಿಕ್ಕುತ್ತಾ ಇದ್ದು. ಒಣಗಿದ ಕೊತ್ತಂಬರಿಲಿ ಎಷ್ಟೆಲ್ಲಾ ಉಪಕಾರ ಇದ್ದು ಹೇಳ್ತದರ ಗಮನಲ್ಲಿ ಮಡಿಗಿಯೇ ಆದಿಕ್ಕು ಅಲ್ಲದಾ ಅದರ ನಾವು ನಿತ್ಯ ಕೊದಿಲಿಲಿ ಉಪಯೋಗ ಮಾಡ್ತ ಹಾಂಗೆ ನವಗೆ ಸಂಸ್ಕಾರ ಕೊಟ್ಟದು. ನಮ್ಮ ಅಡಿಗೆಯ ಪ್ರತಿಯೊಂದರಲ್ಲಿಯೂ ಆರೋಗ್ಯ ಇದ್ದು ಅಲ್ಲದಾ? ಅದರ ಅರ್ಥೈಸಿಗೊಂಬ ಮನಸ್ಸೂ, ವ್ಯವಧಾನವೂ ನವಗೆ ಇಲ್ಲದ್ದದು.
    ನೀನು ಬರೆತ್ತಾ ಇಪ್ಪ ಒಂದೊಂದು ಶುದ್ದಿಲೂ ತುಂಬಾ ವಿಷಯಂಗ ಸಿಕ್ಕುತ್ತಾ ಇದ್ದು. ಹೀಂಗೇ ಬರೆತ್ತಾ ಇರು.

  3. ಡಾಗುಟ್ರಕ್ಕಾ..
    ಕೊತ್ತ೦ಬರಿಯ ಸುಮಾರು ಔಶಧೀಯ ಉಪಯೋಗಂಗೊ ಈಗ ಗೊ೦ತಾತು.ಮಾಹಿತಿಗೊಕ್ಕೆ ಧನ್ಯವಾದ.

  4. ಡಾಗುಟ್ರಕ್ಕಾ..
    ಕೊತ್ತಂಬರಿಲಿ ಇಷ್ಟೆಲ್ಲ ಶುದ್ದಿ ಇದ್ದೋ…!!!
    ಅಬ್ಬಾ, ಆಯುರ್ವೇದವೇ!!

    ಅಜ್ಜಂದ್ರು ಹುಡ್ಕಿ ಮಡಗಿದ ವಿಚಾರವ ಚೆಂದಲ್ಲಿ ಬೈಲಿಂಗೆ ಆವುತ್ತ ನಮುನೆ ತಿಳಿಶಿಕೊಟ್ಟಿದಿ ನಿಂಗೊ, ಕೊಶೀ ಆತು.
    ಬತ್ತಾ ಇರಿ, ಒಳ್ಳೊಳ್ಳೆ ಶುದ್ದಿಗಳ ಹುಡ್ಕಿ ಬೈಲಿಂಗೆ ಮದ್ದುಮಾಡಿಗೊಂಡಿರಿ, ಡಾಗುಟ್ರಕ್ಕಾ…

    🙂

  5. Thanks for a good information. ಅಡಿಗಗೆ ಹಾಕುವ ಕೊತ್ತಂಬರಿ ಪದಾರ್ಥಂಗಳ ಹಾಳಪ್ಪದರಂದ ರಕ್ಷಿಸುತ್ತು ಹೇಳಿ ಕೇಳಿದ್ದೆ. ಕೋಟ್ಲೆ (chicken pox) ಆದೋರಿಂಗೆ ಕಣ್ಣಿಂಗೆ ಕೊತ್ತಂಬರಿ ನೀರು ಹಾಕುತ್ತವು.

  6. ಕೊದಿಶಿ ಬೆಶಿನೀರು ಕುಡಿವಗ ಪರಿಮ್ಮಳ ಬಪ್ಪಲೆ ಹಾಕವುತು…. ಕುಡಿವಲು ಒಳ್ಳೆದು ..ಆರೊಗ್ಯ ಕ್ಕೂ ಒಳೆದು

  7. ಡಾಗುಟ್ರಕ್ಕೋ,
    ಕೊತ್ತ೦ಬರಿಯ ಅ೦ಬರ೦ದ ದೇವರು ಕೊಟ್ಟದೆ೦ತಗೆ ಹೇಳಿ ಈಗ ಗೊ೦ತಾತು.ಮಾಹಿತಿ ಸುಮಾರು ಸಿಕ್ಕಿತ್ತು.
    ಧನ್ಯವಾದ.
    {ಪೆಪ್ಸಿಯ ಕೋಲಂದ} -ಒಳ್ಳೆ ಪದಪ್ರಯೋಗ.ಇದರ ಆರಾಧನೆ ಈಗ ಲೋಕ ಇಡೀ ಹೆಚ್ಚಾಯಿದಲ್ಲದೊ?

    1. ಮೊದಲಾಣ ಕಾಲಲ್ಲಿ ಮತಾಂತರ ಮಾಡಿಗೊಂಡಿತ್ತಿದ್ದವಡ್ಡ..ಈಗಾಣ ಕಾಲಲ್ಲಿ ಜನಂಗೊ ಸ್ವ ಇಛ್ಛೆಂದ ತಮ್ಮ ಆಹಾರ ಆಚಾರಂಗಳ ವಿದೇಶೀಯರ ಪದ್ಧತಿಗೆ ಸರಿ ಅಪ್ಪಾಂಗೆ ಬದಲ್ಸಿಗೊಳ್ತಾ ಇದ್ದವು..ಅಷ್ಟಪ್ಪಗ ಆರಾಧ್ಯ ದೈವವೂ ಬದಲಪ್ಪದು ಸಹಜ ಅಲ್ಲದಾ ಭಾವಾ? ಎಷ್ಟೇ ಬದಲಾದರೂ ಒಂದಲ್ಲಾ ಒಂದು ದಿನ ಎಲ್ಲರೂ ತಮ್ಮ ತಮ್ಮ ಮೂಲವ ಹುಡುಕ್ಕಿಗೊಂಡು ಖಂಡಿತಾ ಬತ್ತವು..(ಮೂಲ ನಾಗಬನ ಹುಡ್ಕಿಗೊಂಡು ಬಂದ ಹಾಂಗೆ) 😉

  8. ಕೊತ್ತಂಬರಿ ನಮ್ಮ ಅಡುಗೆಗಳಲ್ಲಿ ಒಂದು ಅಂಶವಾಗಿ ಉಪಯೋಗ ಆವ್ತಾ ಇದ್ದು. ಕೊತ್ತಂಬರಿ + ಜೀರಿಗೆ ಕಷಾಯ ಉಪಯೋಗ ಹೆಚ್ಚಿನ ಮನೆಗಳಲ್ಲಿ ಇದ್ದು. ಆರೋಗ್ಯದ ದೃಷ್ಟಿಂದ ಒಳ್ಳೆದು ಹೇಳಿ ಗೊಂತಿದ್ದರೂ ಅದರ ಮದ್ದಿನ ಗುಣಂಗಳ ತಿಳಿಶಿ ಕೊಟ್ಟು, ಧಾನ್ಯಕ ಹಿಮ ಮತ್ತೆ ಪಾನಕ ಮಾಡುವ ವಿಧಾನಂಗಳನ್ನೂ ಕೊಟ್ಟದು ಇನ್ನು ಬಪ್ಪ ಬೇಸಿಗೆ ಕಾಲಕ್ಕೆ ತುಂಬಾ ಪ್ರಯೋಜನ ಅಕ್ಕು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.
    ಒಳ್ಳೆ ಮಾಹಿತಿಗಾಗಿ ಧನ್ಯವಾದಂಗೊ

  9. ಕೊತ್ತಂಬರಿಯ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು.. ಲೇಖನ ಲಾಯಿಕ ಇತ್ತು.. ..

  10. ಬೋಸ ಭಾವಂಗೆ ಇನ್ನಾಣ ಸರ್ತಿ ಹೋಳಿಗೆ ತಿಂಬಲೆ ಹೋಪಗ ಕುಡಿವಲೆ ಇದುವೇ ಹೇಳಿ ನವಗೆ ಗೊಂತಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×