Oppanna.com

ಬಾಯಿಹುಣ್ಣಿಂಗೆ

ಬರದೋರು :   ಬಂಡಾಡಿ ಅಜ್ಜಿ    on   14/02/2010    13 ಒಪ್ಪಂಗೊ

ಎನಗೆ ಉಷ್ಣ ಬೇಗ ಅಪ್ಪದಿದ. ಅಂಬಗಂಬಗ ಬಾಯಿಹುಣ್ಣು ಆಗ್ಯೊಂಡೇ ಇಪ್ಪದು. ಆದ್ದದುದೇ ಒಂದೊಂದರಿ ಚೋಮ ಮಾಡ್ತ ತೆಂಗಿನ ಹೊಂಡದಷ್ಟಕೆ ಆಗಿ ವಿಪರೀತ ಜೋರಪ್ಪಲಿದ್ದು. ಇಪ್ಪಲೆ ಮದ್ದುಗೊ ಸುಮಾರಿದ್ದು. ಆದರೆ ಕಿಟ್ಳೆ ಮರದೇ ಹೋಪದು. ಎಂತಾರು ತಿಂಬಗ ಉರುದರೆ ಒಂದರಿ ನೆಂಪಾವುತ್ತು. ಮತ್ತೆ ಮರೆತ್ತು. ತಡೆಯದ್ದೆ ಆಗಿಯಪ್ಪಗ ಮತ್ತೆ ಕಿಟ್ಟಿ ಹೋವುತ್ತು.
ಅದಕ್ಕೆ ಒಂದನೆ ಮದ್ದು ಜೇನು. ಅಂಬಗಂಬಗ ಜೇನು ಕಿಟ್ಟಿಯೊಂಡಿದ್ದರೆ ಬೇಗ ಗುಣ ಆವುತ್ತು. ಕಿಟ್ಟಿದ ಕೂಡ್ಳೆ UGG Stiefeletten günstig ನುಂಗಲಾಗ ಮಾತ್ರ. ಮತ್ತೆ ಜಾಗ್ರತೆ ಮಾಡೆಕ್ಕು, ಜೇನು ಕಿಟ್ಟಿಕ್ಕಿ ಕೈತೊಳೆಯದ್ದೆ ತಲೆಮುಟ್ಟಿರೆ ತಲೆಕಸವು ಈ ಅಜ್ಜಿಯ ತಲೆಕಸವಿನಾಂಗೇ ಅಕ್ಕು.
ಹಾಂಗೆಯೇ ತುಪ್ಪ, ಬೆಣ್ಣೆ ಎಲ್ಲ ಆವುತ್ತು. ಆದರೆ ಜೋರಾದ ಮತ್ತೆ ಇದರಲ್ಲಿ ಕಮ್ಮಿ ಅಪ್ಪದು ಕಷ್ಟ. ಪೇರಳೆ ಕೊಡಿಯೋ, ಕುಂಟಾಲ ಕೊಡಿಯೋ ಹೀಂಗೆ ಎಂತಾರು ಕನರು ಕೊಡಿ ಅಗುದರೂ ಆವುತ್ತು.

13 thoughts on “ಬಾಯಿಹುಣ್ಣಿಂಗೆ

  1. ದಿನಸಿ ಅಂಗಡಿಲಿ ಕಸ್ ಕಸ್ (ಕಸ ಕಸ) ಹೇಳಿ ಸಿಕ್ಕುತ್ತು. ಪಾಯಸಕ್ಕೆ ಹಾಕುತ್ತವು. ನೀರಿಂಗೆ ಹಾಕಿರೆ ಉಬ್ಬುತ್ತು ಸಾಬಕ್ಕಿಯ ಹಾಂಗೆ.
    ಈ ಕಸ್ ಕಸ್ ನ ಒಂದು ಗ್ಲಾಸ್ ನೀರಿಂಗೆ ಹಾಕಿ ಕುಡುದರೆ ಬಾಯಿ ಹುಣ್ಣು ಕಮ್ಮಿ ಆವ್ತು

  2. ಬಾಯಿಹುಣ್ಣಿ೦ಗೆ ಬೊಂಡ ಕುಡುದರೆ ಲಾಯಿಕು

  3. ಕೆಲವೊನ್ದು ಸರ್ತಿ ಅಜೀರ್ಣ ಆದರು ..ಬಾಯಿ ಹುಣ್ಣೂ ಬತ್ತು

  4. ಕೇಪ್ಳೆ ಹೂಗಿನ ಅಗುದು ಅಗುದು ಬಾಯಿಲಿ ಮಡುಗಿದರೆ ಬಾಯಿ ಹುಣ್ಣು ಕಮ್ಮಿ ಆವುತ್ತು

  5. ಶ್ಯಾಮಣ್ಣ ಇದು ಎಂತರ? ಇದರ ಓದಿ ಬಾಯಿ ಹುಣ್ಣು ಜಾಸ್ತಿ ಅಕ್ಕೋ ಹೇಳಿ? lol 😉
    ಬೈ ದ ವೇ…ಪೇರಳೆ ಕೊಡಿಯ ಅಗುದು ಅಗುದು ನುಂಗಿ ನೀರು ಕುಡಿದರೆ ಬಾಯಿ ಹುಣ್ಣಿ೦ಗೆ ಬೈ ಬೈ

  6. PÉÃ¥Éî ºÀÆV£À ¨Á¬Ä° CUÀÄzÀÄ CUÀÄzÀÄ J¸Àj£À gÀd ºÉÆvÀÄÛ ¨Á¬Ä° ªÀÄrPÉÆ̼ÉîPÀÄÌ. GVªÀ¯É DUÀ.

    1. ಶ್ಯಾಮಣ್ಣ ಇದು ಎಂತರ? ಇದರ ಓದಿ ಬಾಯಿ ಹುಣ್ಣು ಜಾಸ್ತಿ ಅಕ್ಕೋ ಹೇಳಿ? lol 😉

    2. ನಮಸ್ಕಾರ ಶಾಮಣ್ಣಂಗೆ!
      ಬಂದಿರೋ – ತುಂಬಾ ಕೊಶಿ ಆತು! ಬಂದೋಂಡಿರಿ, ಒಪ್ಪಕೊಟ್ಟೋಂಡಿರಿ.
      ಹೇಳಿದಾಂಗೆ, ಬರಹ, ನುಡಿ, ಅದು ಇದು ಎಲ್ಲ ಹಳೇ ನಮುನೆ ಕ್ರಮಂಗೊ ಅಡ.
      ಈಗಾಣದ್ದು ಎಂತ್ಸದೋ – ಯುನಿಕೋಡು ಅಡ, – ಪೆರ್ಲದಣ್ಣ ಹೇಳಿದ°.
      ಹಾಂಗೆ, ನಾವು ಹೊಸತ್ತನ್ನೇ ಉಪಯೋಗುಸುವೊ°, ಆಗದೋ?
      ’ಬರಹ’ಲ್ಲಿಯುದೇ ಆ ಆಯ್ಕೆ ಇದ್ದು, ಯುನಿಕೋಡು ಮಾಡಿಕ್ಕಿ ಕನ್ನಡಲ್ಲಿ ಒಪ್ಪ ಕೊಟ್ರಾತು!
      ಹೆಚ್ಚು ತಿಳಿಯೇಕಾರೆ ಕೇಳಿ, ವಿವರವಾಗಿ ಹೇಳುಗು, ಬೈಲಿಲಿ ಆರಾರು!

  7. BAYI HUNNINGE SAMUDRA HAGALAKAYI BEEJAVA ARADU NALAGE POORNA HACHEKU

  8. ಜಾಜಿ ಸೊಪ್ಪು,ಜೀರೆಕ್ಕಿ ಒಟ್ಟು ಸೇರ್ಸಿ ಅಗುದರೆ ಆವ್ತಲ್ದಾ?

  9. ಉಷ್ಣಂದ ಮಾತ್ರ ಅಲ್ಲ..ಗೇಶ್ಟಿಕ್ಕಿಂದಲೂ ಬಾಯಿಹುಣ್ಣು ಎಳಗುತ್ತು.. ಹಾಂಗಾಗಿ ತಿಂಬದು ಉಂಬದು ಸರೀ ಮಾಡೆಕ್ಕಿದಾ..ಒಟ್ಟಿಂಗೆ ತಂಪು ಮಾಡೆಕ್ಕು.

  10. ಬಾಯಿ ಹುಣ್ಣಿಂಗೆ ಒಂದು ಒಣ್ಣೆ ಮದ್ದು ಇದ್ದು.
    ಬುಗರಿ ಮರದ ಕೆತ್ತೆಯ ಕಶಾಯಲ್ಲಿ ಬಾಯಿ ಮುಕ್ಕುಳಿಸಿರೆ ಹೇಂಗಿಪ್ಪ ಬಾಯಿ ಹುಣ್ಣುದೆ ಕಮ್ಮಿ ಆವುತ್ತು.ರೆಜ ಕುಡಿಯೆಕುದೆ.ಎನ್ನ ಅಮ್ಮಂಗೆ ಒಣ್ಣೆ ಗುಣ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×