ಬುದ್ದಿ ವರ್ಧಕ ಬ್ರಾಹ್ಮೀ…

ನಾವು ಯಾವಾಗಳೂ ನೆಂಪಿರ್ತಿಲ್ಲೆ,ಮರತ್ತು ಹೋವುತ್ತಾ ಇದ್ದು ಹೇಳಿ ಹೇಳಿಗೊಂಡಪ್ಪಗ ಎಲ್ಲರೂ ಕೊಡುವ ಸಲಹೆ ಉರಗೆ ತಿಂಬಲೆ ಸುರು ಮಾಡು ಹೇಳಿ.. ಅಂಬಗ ಉರಗೆ ನಮ್ಮ ನೆಂಪು ಶಕ್ತಿ ಹೆಚ್ಚು ಮಾಡ್ಲೆ ಮಾತ್ರ ಇಪ್ಪದಾ ಅಲ್ಲಾ ಇದರಂದ ಬೇರೆಂತಾರು ಉಪಯೋಗ ಇದ್ದಾ ಅದರದ್ದು? ಸರಿ ಈ ಸರ್ತಿ ಅದನ್ನೇ ನೋಡುವ ಆಗದ? 🙂

ಬ್ರಾಹ್ಮೀಯ ಮುಖ್ಯ ಕೆಲಸ ಬುದ್ದಿ ಶಕ್ತಿ ಹೆಚ್ಚು ಮಾಡುದು ಆದರೆ ಅದರೊಟ್ಟಿಂಗೆ ದೇಹದ ಇತರ ಭಾಗಂಗೊಕ್ಕೂ ಅದರಂದ ಉಪಯೋಗ ಇದ್ದು..

ಆಯುರ್ವೇದಲ್ಲಿ ಎಲ್ಲಾ ಸೆಸಿಗಳ ಬೇರೆ ಬೇರೆ ವರ್ಗಲ್ಲಿ,ಗಣಂಗಳಾಗಿ ಮಾಡಿ ವಿವರ್ಸಿದ್ದವು..

ಉರಗೆ ಮೇಧ್ಯಾದಿ ವರ್ಗಲ್ಲಿ ಬತ್ತು..ಸಸ್ಯಶಾಸ್ತ್ರಲ್ಲಿ ಇದರ ಅಂಬೆಲಿಫ಼ೆರಿ(Umbelliferae) ಕುಲಕ್ಕೆ(family) ಸೇರ್ಸಿದ್ದವು ಹಾಂಗೇ ಸೆಂಟೆಲ್ಲಾ ಏಶಿಯಾಟಿಕಾ(Centella asiatica) ಹೇಳಿ ಹೆಸರು ಮಡುಗಿದ್ದವು..

ಸಂಸ್ಕೃತಲ್ಲಿ ಉರಗೆಗೆ ಇಪ್ಪ ಪರ್ಯಾಯ ಪದಂಗೊ–

urage

ಮಂಡೂಕಪರ್ಣಿ

ಮಂಡೂಕಪರ್ಣಿ(ಮಂಡೂಕ=ಕಪ್ಪೆ,ಪರ್ಣಿ=ಎಲೆ=>ಕಪ್ಪೆಯ ಹಾಂಗಿಪ್ಪ ಎಲೆ ಇಪ್ಪ ಸೆಸಿ),

ಮಂಡೂಕೀ(ಕಪ್ಪೆಯ ಹಾಂಗೇ ಹಾರಿಗೊಂಡು ಬೆಳವ ಕಾರಣ ಅಥವಾ ನೀರು ಇಪ್ಪಲ್ಲಿ ಬೆಳವ ಕಾರಣ),

ಬ್ರಾಹ್ಮೀ(ಬುದ್ದಿ ವರ್ಧಕ ಆದ ಕಾರಣ),

ಸರಸ್ವತೀ,ಕಪೋತವಂಕಾ,ಸೋಮವಲ್ಲೀ ಇತ್ಯಾದಿ..

ಇದರ ಕನ್ನಡಲ್ಲಿ ಒಂದೆಲಗ ಹೇಳಿದೇ ಹೇಳ್ತವು..

ಉರಗ ಹೇಳಿದರೆ ಹಾವು..ಹಾವಿನ ಹಾಂಗೆ ಹರಕ್ಕೋಂಡು ಬೆಳವ ಕಾರಣ ಬ್ರಾಹ್ಮೀಗೆ ಉರಗೆ ಹೇಳ್ತದು ಇನ್ನೊಂದು ಪರ್ಯಾಯ ಪದ..

ಇದರ ಮುಖ್ಯರಸ(=ರುಚಿ)-ತಿಕ್ತ(ಕೈಕ್ಕೆ),ಅನುರಸ(=ಎರಡನೆಯ ರುಚಿ)-ಕಷಾಯ(ಒಗರು)

ದೇಹಲ್ಲಿ ಕರಗಿದ ಮತ್ತೆ(ವಿಪಾಕ)- ಮಧುರ(ಸೀವು)ರಸ ಆವುತ್ತು..

ಇದಕ್ಕೆ ಶೀತ ಗುಣ ಇದ್ದು..

ಇದರ ಪ್ರಭಾವ-ಮೇಧ್ಯ ಹೇಳಿದರೆ ಅಕೇರಿಗೆ ಇದು ನಮ್ಮ ದೇಹಲ್ಲಿ ಬುದ್ದಿ ವರ್ಧನೆ ಮಾಡ್ತು..

ಉರಗೆಯ ಪ್ರಯೋಜನಂಗೊ—

 • ಇದಕ್ಕೆ ತಿಕ್ತ ರಸ ಇಪ್ಪ ಕಾರಣ ಕಫ,ಪಿತ್ತ ದೋಷಂಗಳ ಕಮ್ಮಿ ಮಾಡ್ತು..
 • ಚರ್ಮದ ಮೇಲೆ ಉರಗೆಯ ಕಡದು ಲೇಪ ಮಾಡಿದರೆ ಅಲ್ಲಿ ನೆತ್ತರಿನ ಸಂಚಾರ ಜಾಸ್ತಿ ಆವುತ್ತು ಹಾಂಗಾಗಿ ಕುಷ್ಠ ಹೀಂಗಿಪ್ಪ ಚರ್ಮ ರೋಗಂಗಳಲ್ಲಿ ಪ್ರಯೋಜನ ಆವುತ್ತು..
 • ಇದು ಬುದ್ದಿಶಕ್ತಿ ಹೆಚ್ಚು ಮಾಡ್ಲೆ ಸಹಾಯ ಮಾಡ್ತು..ಹಾಂಗಾಗಿ ಮಾನಸಿಕ ರೋಗಂಗಳಾದ ಉನ್ಮಾದ,ಅಪಸ್ಮಾರ ಹೀಂಗಿಪ್ಪ ತೊಂದರೆಗಳಲ್ಲಿ ಇದಕ್ಕೆ ತುಂಬಾ ಪ್ರಾಮುಖ್ಯತೆ ಇದ್ದು..
 • ಇದು ಹೊಟ್ಟೆಲಿ ಅಗ್ನಿ ಹೆಚ್ಚು ಮಾಡ್ತು..ಈ ಕಾರಣಂದ ಅಗ್ನಿಮಾಂದ್ಯಲ್ಲಿದೇ ಉರಗೆ ತುಂಬಾ ಉಪಕಾರ ಆವುತ್ತು.. ಆದ ಕಾರಣ ಅಜೀರ್ಣ ಇಪ್ಪಗ ಉರಗೆ ತಂಬುಳಿ ತುಂಬಾ ಒಳ್ಳೆದು..
 • ಉರಗೆ ಹೃದಯಕ್ಕೂ ತುಂಬಾ ಒಳ್ಳೆದು..
 • ಸೆಮ್ಮ,ಶ್ವಾಸಕೋಶದ ತೊಂದರೆ ಸ್ವರಹೋಗಿಪ್ಪಗಳೂ ಇದರಂದ ಪ್ರಯೊಜನ ಆವುತ್ತು..
 • ಮಧುಮೇಹಿಗೊಕ್ಕೂ ತುಂಬಾ ಲಾಭಕರ..
 • ಎದೆಹಾಲು ಕುಡಿಶುವ ಮಾತೆಯರಿಂಗೆ ಎದೆಹಾಲು ಕಮ್ಮಿ ಇದ್ದರೆ ಅಥವಾ ಎದೆಹಾಲಿನ ತೊಂದರೆ ಇದ್ದರೆ ಉರಗೆ ತಿನ್ಸಿದರೆ ಉಪಕಾರ ಆವುತ್ತು..
 • ಇದು ದೌರ್ಬಲ್ಯ ಇದ್ದರೆ ರಸಾಯನದ ಹಾಂಗೆ ಕೆಲಸ ಮಾಡ್ತು..ಇದೇ ಗುಣಂದ ಇದು ಪ್ರಾಯ ಹೆಚ್ಚಪ್ಪದನ್ನೂ ತಡದು ಆಯಸ್ಸು ಹೆಚ್ಚು ಮಾಡ್ತು..

ಹೀಂಗಾಗಿ ಉರಗೆಲಿ ಬುದ್ದಿ ಶಕ್ತಿ ಹೆಚ್ಚು ಮಾಡುವ ಗುಣ ಮಾತ್ರ ಇಪ್ಪದಲ್ಲ..ನಮ್ಮ ದೇಹದ ಪ್ರತಿಯೊಂದೂ ಅಂಗಂಗೊಕ್ಕೂ ಒಂದಲ್ಲಾ ಒಂದು ರೀತಿಲಿ ಉಪಯೋಗ ಇದ್ದು.. 🙂

ಅಂಬಗ ಉರಗೆಯ ಯಾವ ಭಾಗ ಉಪಯೋಗ ಮಾಡಿದರೆ ಪ್ರಯೋಜನ ಇಪ್ಪದು?ಉರಗೆಯ ಬೇರು ಸಮೇತ ಇಡೀ ಸೆಸಿಯ ಉಪಯೋಗ ಮಾಡ್ಲಕ್ಕು..

ಆಯುರ್ವೇದಲ್ಲಿ ಉರಗೆ ಇಪ್ಪ ಸುಮಾರು ಮದ್ದುಗೊ ಇದ್ದು ಉದಾಹರಣೆಗೆ ಬ್ರಾಹ್ಮೀ ಪಾನಕ,ಬ್ರಾಹ್ಮೀ ತೈಲ,ಸಾರಸ್ವತಾರಿಷ್ಟ,ಸಾರಸ್ವತ ಘೃತ ಇತ್ಯಾದಿ.. ಇದರಲ್ಲಿ ಬ್ರಾಹ್ಮೀ ಇದ್ದು ಹೇಳಿ ಅವ್ವವ್ವೇ ಖಂಡಿತಾ ಉಪಯೋಗ ಮಾಡ್ಲೆ ಹೋಗಡಿ..ಈ ಮದ್ದುಗಳಲ್ಲಿ ಉರಗೆ ಅಲ್ಲದ್ದೆ ಬೇರೆ ಮೂಲಿಕೆಗಳೂ ಇರ್ತು.. ಮದ್ದುಗೊ ವಿಶೇಷ ಕಾರಣಂಗಳಲ್ಲಿ ಮಾತ್ರ ಉಪಯೋಗ ಮಾಡುದು ಆದರೆ ತಂಬುಳಿ,ಚಟ್ನಿ ಇತ್ಯಾದಿ ರೂಪಲ್ಲಿ ಯಾವಾಗಳೂ ತಿಂಬಲಕ್ಕು.. ದಿನಾಗುಳೂ ಉದಿಯಪ್ಪಗ ೪-೫ ಉರಗೆ ಎಲೆ ತಿಂದರೂ ಒಳ್ಳೆದು..ಸಣ್ಣ ಮಕ್ಕೊಗೆ ಮಾತ್ರ ಅಲ್ಲ ದೊಡ್ಡೋರೂ ಇದರ ತಿಂದರೆ ಪ್ರಾಯ ಅಪ್ಪಗ ಮರತ್ತು ಹೋಪದು ಕಮ್ಮಿ ಆವುತ್ತು..ಎಲೆಗಳ ಹಾಂಗೇ ತಿಂಬಲೆ ಮೆಚ್ಚದ್ರೆ ಜೇನಿನೊಟ್ಟಿಂಗೆದೆ ತಿಂದರಕ್ಕು.. 😉

ನಮ್ಮ ಉರಗೆಲಿಯೇ ಇಷ್ಟೆಲ್ಲಾ ಬುದ್ದಿ ಶಕ್ತಿ ಹೆಚ್ಚು ಮಾಡುವ ಗುಣ ಇಪ್ಪಗ ನಾವೆಲ್ಲಾ ಮಕ್ಕೊಗೆ ಪೇಟೆಲಿ ಸಿಕ್ಕುವ ಯಾವುದೋ ಹೊಡಿಗಳ ಹಾಲಿಂಗೆ ಹಾಕಿ ಕುಡಿಶುದು ಎಂತಕೆ?ಅವು ಅವರ ಸಾಮಾನು ಮಾರುಲೆ,ನಮ್ಮ ಮೂರ್ಖರಾಗಿ ಮಾಡ್ಲೆ ನಾನಾ ನಮೂನೆ ಪ್ರಯತ್ನ ಮಾಡ್ತವು..ಮಕ್ಕೊಗೆ ಒಳ್ಳೆದಾವುತ್ತು ಹೇಳಿ ಅಪ್ಪಗ ಅಪ್ಪ-ಅಮ್ಮಂದ್ರು ಇಲ್ಲೆ ಹೇಳ್ತವಿಲ್ಲೆ..ಹಾಂಗಾಗಿ ಎಡಿಗಾರೆ ಉರಗೆಯ ಸುಲಾಭಲ್ಲಿ ಉಪಯೋಗ ಮಾಡುವ ವಿವಿಧ ರೀತಿಗಳ ಕಂಡು ಹಿಡಿವ..ಹಾಲಿಂಗೆ ಹಾಕಿ ಕುಡಿವ ಹಾಂಗೆ, ಯಾವುದಾದರೂ ಸಿಹಿ ಪದಾರ್ಥದ ರೂಪಲ್ಲಿ ಅಥವಾ ಬೇರೆ ಯಾವುದಾದರೂ ರೂಪಲ್ಲಿ.. ಆಗದೋ? ನಿಂಗೊ ಎಲ್ಲ ಎಂತ ಹೇಳ್ತಿ ಇದರ ಬಗ್ಗೆ?

ಒಪ್ಪ–ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಾಲಿಂಗೆ ಹಾಕುವ ಕೃತಕ ಹೊಡಿ ಬೇಕಪ್ಪದಲ್ಲ,ನೈಸರ್ಗಿಕ ಉರಗೆ ತಂಬುಳಿ ಬೇಕಪ್ಪದು.. 🙂

ಡಾ.ಸೌಮ್ಯ ಪ್ರಶಾಂತ

ಡಾಗುಟ್ರಕ್ಕ°

   

You may also like...

19 Responses

 1. Very informative. Keep writing. ಎನಗೆ ಉರಗೆ ತಂಬ್ಳಿ ಭಾರೀ ಇಷ್ಟ. ಈ ಬೆಂಗ್ಳೂರಿಲಿ ಎನಗೆ ಉರಗೆ, ಊರಿನ ಕೆಂಪು ಹರುವೆ ಎಲ್ಲ ಸಿಕ್ಕುತ್ತೇ ಇಲ್ಲೆಪ್ಪಾ. ಎಂತ ಇದ್ದರೂ ಮೆಂತ್ಯ, ಸಬ್ಸಿಗೆ, ಪಾಲಕ್, ದಂಟಿನ ಸೊಪ್ಪು (ಹರುವೆ) ಇವೇ ಕೆಲವು. ಇಲ್ಲಿ ಸಿಕ್ಕುವ ಸೊಪ್ಪುಗಳ ಬಗ್ಗೆಯೂ ಪುರುಸೊತ್ತಿಪ್ಪಗ ಬರೆಯಿರಿ. ಮೆಂತ್ಯ ಸೊಪ್ಪಿನ ಅಭಿಮಾನಿಯಾದ ಎನಗೆ ಅದರ ಬಗ್ಗೆ ತಿಳಿವಲೆ ಖುಷಿ ಅಕ್ಕು.

  • ಪ್ರೋತ್ಸಾಹಕ್ಕೆ ಧನ್ಯವಾದ. ಪೇಟೆಲಿ ಸಿಕ್ಕುವ ಸೊಪ್ಪಿನ ಬಗ್ಗೆಯೂ ಖಂಡಿತಾ ಬರೆತ್ತೆ.. ಅದರಂದ ಮಾಡ್ಲೆ ಎಡಿವ ಅಡಿಗೆಗಳನ್ನೂ ಬರವ ಪ್ರಯತ್ನ ಮಾಡ್ತೆ.. ಃ)

 2. jayashree.neeramoole says:

  ಹರೇ ರಾಮ ಡಾಗುಟ್ರಕ್ಕ,

  ಲೇಖನ ತುಂಬಾ ಇಷ್ಟ ಆತು…

  “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಾಲಿಂಗೆ ಹಾಕುವ ಕೃತಕ ಹೊಡಿ ಬೇಕಪ್ಪದಲ್ಲ,ನೈಸರ್ಗಿಕ ಉರಗೆ ತಂಬುಳಿ ಬೇಕಪ್ಪದು..”

  ಹೀಂಗಿದ್ದ ಲೇಖನಂಗ ಇನ್ನುದೆ ಬರಲಿ… ಬೈಲಿನ ಮಕ್ಕೋ ಎಲ್ಲ ಅಮೃತಾಹಾರಂದ ಅಮೃತಮಯವಾಗಿ ಬೆಳೆಯಲಿ…

 3. Athithi says:

  Not accepted due to invalid mail ID

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *