ಮಕ್ಕೊಗೆ ರಾಮಾಯಣ ಅಧ್ಯಾಯಃ 10 ಭಾಗಃ 3

ಇಲ್ಲಿಯವರೆಗೆ

 

ಸೀತೆಯ ಕರಕ್ಕೊಂಡು ಬಪ್ಪಲೆ ರಾಮ ಮತ್ತೆ ಹನುಮಂತನ ಕಳ್ಸಿದ°. ದುಷ್ಟ ರಾವಣನ ಸಂಹಾರ ಆತು ಹೇಳಿ ತಿಳುದ ಸೀತೆ ತುಂಬಾ ಸಂತೋಷಪಟ್ಟತ್ತು. ಅದು, ಅದರ ಪ್ರೀತಿಯ ರಾಮನ ಕಾಂಬಲೆ, ಅವನ ಸೇರಿಗೊಂಬಲೆ ಸರಿಯಾದ ಸಮಯವ ಕಾದುಗೊಂಡಿತ್ತು. ಆದರೆ ರಾಮ ಮಾಂತ್ರ ಅದರ ಅವಗಳೇ ಹೆಂಡತಿಯಾಗಿ ಸ್ವೀಕಾರಮಾಡ್ಳೆ ಒಪ್ಪಿದ್ದಾಯಿಲ್ಲೆ. ಅವ ಸೀತೆಯ ಪರೀಕ್ಷೆಮಾಡುಲೆ ತೀರ್ಮಾನಮಾಡಿದ°. “ರಾವಣನಾಂಗಿಪ್ಪ ದುಷ್ಟ, ಮತ್ತೆ ಹೆಣ್ಣಿನ ಮೋಹ ಇಪ್ಪ ರಾಕ್ಷಸ ನಿನ್ನಾಂಗಿಪ್ಪ ಚೆಂದದ ಹೆಣ್ಣಿನ ಮುಟ್ಟಿದ್ದಾಯಿಲ್ಲೇಳಿದರೆ ಆನು ನಂಬುತ್ತಿಲ್ಲೆ. ನೀನು ಅಶುದ್ಧ ಆಯಿದೆ. ಆನು ನಿನ್ನ ಈಗ ಹೆಂಡತಿಯಾಗಿ ಸ್ವೀಕರುಸುಲೆ ಎಡಿಯ” ಹೇಳಿ ರಾಮ ನಿಷ್ಟುರ ಮಾತಿಲಿ ಹೇಳಿದ°. ರಾಮನ ಕ್ರೂರವಾದ ಮಾತುಗೊ ಸೀತೆಯ ಮನಸ್ಸಿಂಗೆ ಬೇನೆಮಾಡಿತ್ತು. ಅದು ದುಃಖದ ಮೂರ್ತಿಯಾಂಗೆ ಆತು. ಅಶೋಕವನಲ್ಲಿಪ್ಪಗ ಅದು ಅನ್ನ ಆಹಾರಂಗಳ ಬಿಟ್ಟಿತ್ತು. ರಾಮನೊಟ್ಟಿಂಗೆ ಸೇರುವ ಒಂದೇ ಆಶೆಲಿ ಸೀತೆ ಜೀವಂತವಾಗಿತ್ತು. “ಎನ್ನ ತುಂಬಾ ಪ್ರೀತಿಸಿಗೊಂಡಿತ್ತಿದ್ದ ರಾಮನೇ ಎನ್ನ ಮೇಲೆ ಸಂಶಯಪಟ್ಟ°. ಇನ್ನು ಮೇಲೆ ಆನು ಬದುಕಿ ಎಂತ ಪ್ರಯೋಜನ?” ಹೇಳಿ ಸೀತೆ ಗ್ರೇಶಿಗೊಂಡತ್ತು. ಹತಾಶೆ ಆಗಿ ಸೀತೆ ಲಕ್ಷ್ಮಣನ ಹೊಡೆಂಗೆ ತಿರುಗಿನೋಡಿ, “ಎನಗಾಗಿ ಚಿತೆಯ ತಯಾರುಮಾಡು” ಹೇಳಿತ್ತು. ರಾಮ ಅದಕ್ಕೂ ಅಡ್ಡಿಮಾಡಿದ್ದಾ°ಯಿಲ್ಲೆ.
ಲಕ್ಷ್ಮಣ ಸೀತೆಗೇಳಿ ಚಿತೆಯ ತಯಾರು ಮಾಡಿದ°. ಸೀತೆ ಅಗ್ನಿದೇವಂಗೆ ನಮಸ್ಕಾರ ಮಾಡಿ, ” ಅಗ್ನಿದೇವಾ, ಆನು ಪರಿಶುದ್ಧವಾಗಿ ಇದ್ದೇಳಿ ಆದರೆ ಮಾಂತ್ರ ಎನ್ನ ಕಾಪಾಡು” ಹೇಳಿತ್ತು. ಕುಬೇರ, ಯಮ,ವರುಣ, ಇಂದ್ರ, ಬ್ರಹ್ಮ ಅಲ್ಲದ್ದೆ ಇನ್ನೂ ಕೆಲವು ದೇವತೆಗೊ ಆಕಾಶಂದ ಇದೆಲ್ಲವನ್ನೂ ನೋಡಿಗೊಂಡಿತ್ತಿದ್ದವು. ಸೀತೆ ಚಿತೆಯ ಕಿಚ್ಚಿಂಗೆ ಹಾರಿದ ಕೂಡ್ಳೇ ಅವು ಎಲ್ಲಾ ಭೂಮಿಗೆ ಇಳುದು ಬಂದವು, ಅವಕ್ಕಾದ ಬೇಜಾರವನ್ನೂ ತಿಳಿಸಿದವು.
“ರಾಮಚಂದ್ರ ನೀನು ಗುಣವಂತರಲ್ಲಿ ಗುಣವಂತ, ಜಗತ್ತಿಂಗೇ ಒಡೆಯ°. ನೀನುದೆ ಒಬ್ಬ ಸಣ್ಣ ಮನುಷ್ಯನಾಂಗೆ ಮಾಡ್ತಾ ಇದ್ದೆನ್ನೆ- ಸೀತೆ ಕಿಚ್ಚಿಂಗೆ ಹಾರುದರ ನೋಡಿಗೊಂಡು ಎಂತಕೆ ಸುಮ್ಮನೆ ನಿಂದಿದೆ?” ಹೇಳಿ ದೇವಾದಿದೇವತೆಗೊ ಪೂರಾ ಕೇಳಿದವು. ಆವಗ ಬ್ರಹ್ಮ ರಾಮನ ಹೆಗಲಿಲಿ ಕೈ ಮಡುಗಿ ಹೇಳಿದ°, “ರಾಮಾ, ನೀನು ದೇವರ ದೇವ ನಾರಾಯಣ ಆಗಿದ್ದೆ, ಸೀತೆ ಲಕ್ಷ್ಮಿಯಾಗಿದ್ದು. ದೇವದಂಪತಿಗೊ ಆದ ನಿಂಗೊ ಇಂಥಾ ಅನುಮಾನ, ಅಪನಂಬಿಕೆಗಳ ದೂರ ಮಡುಗೆಕ್ಕು” ಹೇಳಿ. ಅಷ್ಟಪ್ಪಗ ಅಗ್ನಿದೇವ ಪ್ರತ್ಯಕ್ಷ ಆದ°, ಸೀತೆಯ ಚಿತೆಂದ ಹೆರ ತಂದ°. ಮತ್ತೆ ಅವ ರಾಮಂಗೆ ” ರಾಮಾ, ನಿನ್ನ ಸೀತೆ ಪರಿಶುದ್ಧವಾದೋಳು. ದಯಮಾಡಿ ಅದರ ಸ್ವೀಕರುಸು” ಹೇಳಿ ಹೇಳಿದ°. ಬ್ರಹ್ಮನ ಮಾತಿಂದ ರಾಮನ ಸಂಶಯ ದೂರಾತು. ಅವ° ಸಂತೋಷಲ್ಲಿ ಸೀತೆಯ ಸ್ವೀಕರಿಸಿದ°. ರಾಮ ಸೀತೆ ಲಕ್ಷ್ಮಣರ ಎಲ್ಲಾ ದೇವದೇವತೆಗೊ ಹರಸಿದವು. ಅಷ್ಟೆಲ್ಲಾ ಅಪ್ಪಗ ರಾಮನ ಹದಿನಾಲ್ಕು ವರ್ಷದ ವನವಾಸ ಮುಗುಕ್ಕೊಂಡು ಬಂದಿತ್ತು. ರಾಮ ಅವನ ಎಲ್ಲಾ ವಾನರ ಗೆಳೆಯರಿಂಗೆ ಶುಭ ಹಾರೈಸಿದ°. ಅವಂಗೆ ಸಹಾಯ ಮಾಡಿದ ವಿಭೀಷಣಂಗೆಲ್ಲ ಕೃತಜ್ಞತೆ ಸಲ್ಲಿಸಿದ.°
ವಿಭೀಷಣ ರಾಮಂಗೆಲ್ಲ ಬೇಗನೆ ಅಯೋಧ್ಯೆಗೆ ಹೋಗಿ ಮುಟ್ಟುಲೆಬೇಕಾಗಿ ಪುಷ್ಪಕವಿಮಾನಲ್ಲಿ ಕಳುಸುವ ವ್ಯವಸ್ಥೆ ಮಾಡ್ಸಿದ°. ಸೀತೆ ರಾಮ ಲಕ್ಷ್ಮಣರ ಒಟ್ಟಿಂಗೆ ಸುಗ್ರೀವ ಹನುಮಂತಂದೆ ಅಯೋಧ್ಯೆಗೆ ಹೆರಟವು. ವಿಮಾನಲ್ಲಿ ಹೋಪಗ ವನವಾಸದ ಸಮಯಲ್ಲಿ ಅವು ಇತ್ತಿದ್ದ ಜಾಗೆಗಳ ನೋಡಿದವು. ರಾಮ ಸೀತೆಗೆ ಆಕಾಶಂದ ಪಂಪಾಸರೋವರ, ಕಿಷ್ಕಿಂಧೆ, ಶಬರಿಯ ಆಶ್ರಮ, ಋಷ್ಯಮೂಕ ಪರ್ವತ ಎಲ್ಲವನ್ನೂ ತೋರಿಸಿದ°. ಸೀತೆಯ ಹುಡುಕ್ಕಿಗೊಂಡು ತಿರುಗಿದ ಕಾಡುಗಳನ್ನೂ ತೋರಿಸಿದ°.ಅಯೋಧ್ಯಾ ಗಮನ   ಚಿತ್ರಃ ಮಧುರಕಾನನ ಬಾಲಣ್ಣ
ಪುಷ್ಪಕವಿಮಾನ ಅಯೋಧ್ಯೆಗೆ ಹೋಗಿ ಇಳುದತ್ತು. ಭರತ, ರಾಮ ಸೀತೆ ಲಕ್ಷ್ಮಣರು ಬಪ್ಪದನ್ನೇ ದಾರಿ ನೋಡಿಗೊಂಡಿತ್ತಿದ್ದ°. ಭರತ ರಾಮನ ಕಾಲಿಂಗೆ ನಮಸ್ಕಾರ ಮಾಡಿದ°. ಅಯೋಧ್ಯೆಯ ಸಿಂಹಾಸನವ ಏರುವಾಂಗೆ ರಾಮನತ್ತರೆ ಭರತ ಬೇಡಿಗೊಂಡ°. ಕೌಸಲ್ಯೆ, ಸುಮಿತ್ರೆ ಮತ್ತೆ ಕೈಕೇಯಿ ರಾಮನ ಹರಸಿದವು. ವಸಿಷ್ಠಮಹರ್ಷಿಗೊ ರಾಮನ ಹರಸಿ ಪಟ್ಟಾಭಿಷೇಕದ ತಯಾರಿ ಮಾಡುಸುಲೆ ಹೆರಟವು. ಅಲ್ಲಿದ್ದ ಹಿರಿಯರೆಲ್ಲೋರ ಒಪ್ಪಿಗೆ ಪಡದು ರಾಮ ರಾಜ° ಅಪ್ಪಲೆ ಒಪ್ಪಿದ°. ವನವಾಸ ಮುಗಿಶಿ ಬಂದ ರಾಮನ ನೋಡಿ ಅಯೋಧ್ಯೆಯ ಪ್ರಜೆಗೊ ಸಂತೋಷಪಟ್ಟವು.
ಒಂದು ಶುಭ ಮುಹೂರ್ತಲ್ಲಿ ರಾಮ ಅಯೋಧ್ಯೆಯ ರಾಜ ಆದ°. ರಾಮನ ಪಟ್ಟಾಭಿಷೇಕ ಸಮಾರಂಭ ಗೌಜಿ ಗದ್ದಲಲ್ಲಿ ನಡದತ್ತು. ರಾಮ ಸೀತೆ ಸಿಂಹಾಸನಲ್ಲಿ ಕೂದವು. ಲಕ್ಷ್ಮಣ, ಭರತ, ಶತ್ರುಘ್ನರು ಅವರ ಹಿಂದೆ ನಿಂದವು. ಹನುಮಂತ ರಾಮನ ಪಾದದ ಬುಡಲ್ಲಿ ಕೂದ°. ವಸಿಷ್ಠಮುನಿ ಪಟ್ಟಾಭಿಷೇಕ ಮಾಡಿ ಎಲ್ಲರನ್ನೂ ಆಶೀರ್ವದಿಸಿದ°.
ಅಯೋಧ್ಯೆಯ ಜೆನರ ಸಂತೋಷಕ್ಕೆ, ಸಂಭ್ರಮಕ್ಕೆ ಮಿತಿಯೇ ಇತ್ತಿಲ್ಲೆ. ಎಲ್ಲಾ ಹೊಡೆಲಿಯೂ ಉತ್ಸವಂಗೊ, ನಾಟ್ಯ, ನಾಟಕಂಗೊ ಎಲ್ಲ ಹಬ್ಬದ ಗೌಜಿಲಿ ನಡಕ್ಕೊಂಡಿತ್ತು. ರಾಮ ಅಯೋಧ್ಯೆಯ ಪ್ರಜೆಗೊಕ್ಕೆಲ್ಲಾ ದಾನಧರ್ಮ ಮಾಡಿದ°. ಕೈ ತುಂಬಾ ಉಡುಗೊರೆ, ಕಾಣಿಕೆಗಳನ್ನೂ ಕೊಟ್ಟ°.
ಶ್ರೀರಾಮಚಂದ್ರ ಹಲವು ವರ್ಷಂಗಳ ಕಾಲ ಅಯೋಧ್ಯೆಯ ಆಳಿದ°. ಅವ° ಪ್ರಜೆಗಳ ಸುಖವೇ ತನ್ನ ಸುಖ ಹೇಳಿ ತಿಳ್ಕೊಂಡಿತ್ತಿದ್ದ°. ಅವನ ಆಡಳಿತಲ್ಲಿ ಅಯೋಧ್ಯೆಯ ಪ್ರಜಾಜೆನಂಗೊ ಸುಖ, ಶಾಂತಿ, ನೆಮ್ಮದಿಲಿ ಜೀವನ ಮಾಡಿಗೊಂಡಿತ್ತಿದ್ದವು. ಯಾವುದೇ ಕೊರತೆಯಿಲ್ಲದ್ದ ರಾಮನ ವೈಭವದ ಅಯೋಧ್ಯೆಯ ರಾಜ್ಯಭಾರವ ಇಡೀ ಪ್ರಪಂಚವೇ “ರಾಮರಾಜ್ಯ” ಹೇಳಿ ಕೊಂಡಾಡಿದ್ದು. ಇಂದಿಂಗೂ ಕೂಡಾ ಒಳ್ಳೆ ಆಡಳಿತ ಇಪ್ಪ ರಾಜ್ಯವನ್ನೋ ಜಾಗೆಯನ್ನೋ “ರಾಮರಾಜ್ಯ” ಹೇಳಿಯೇ ಹೇಳುದಿದ್ದು.

                                              (ಸಂಪೂರ್ಣ)

ಇದು ರಾಮಾಯಣದ ಕಥೆ. ರಾಮಾಯಣ ಮಹಾಕಾವ್ಯವ ವಾಲ್ಮೀಕಿಮಹರ್ಷಿಗೊ ಬರದ್ದದು. ರಾಮನ ಒಳ್ಳೆಯ ಆದರ್ಶಂಗಳ, ಗುರುಹಿರಿಯರ ಹತ್ತರೆ ರಾಮಂಗಿದ್ದ ಭಕ್ತಿ ಗೌರವಂಗಳ ಅನುಸರುಸುಲೆ ರಾಮನ ಉನ್ನತ ಮೌಲ್ಯಂಗೊ, ಮತ್ತೆ ಸತ್ಯಸಂಧತೆಯ ಅನುಸರುಸುಲೆ ರಾಮಾಯಣದ ಕಥೆ ಸಹಾಯ ಆವುತ್ತು.

ಉತ್ತಮ ಮಾನವರಪ್ಪಲೆ ನಾವೆಲ್ಲರೂ ಶ್ರಮಿಸುವೊ°.

 

ಸೂ.ಃ

 • ಕನ್ನಡಲ್ಲಿ ಸರಳವಾಗಿ ”ಮಕ್ಕಳ ರಾಮಾಯಣ” ವ ಬರದ ಶ್ರೀಮತಿ ರಾಜೇಶ್ವರಿ ಜಯಕೃಷ್ಣರಿ೦ಗೆ,
 • ಹವ್ಯಕಲ್ಲಿ ಚೆ೦ದಕೆ ಅನುವಾದ ಮಾಡಿ ಬೈಲಿ೦ಗೆ ಒದಗುಸಿ ಕೊಟ್ಟ ಶ್ರೀಮತಿ ಕೈಲಾರು ಸರಸ್ವತಿ ( ಕೈಲಾರು ಚಿಕ್ಕಮ್ಮ) ಇವಕ್ಕೆ,
 • ಗೆರೆಚಿತ್ರ ಮಾಡಿ ಕೊಟ್ಟ ಮದರಂಕಾನ ಬಾಲಣ್ಣಮಾವಂಗೆ
 • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
  – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

ಕೈಲಾರು ಚಿಕ್ಕಮ್ಮ

   

You may also like...

8 Responses

 1. Raja Kailar says:

  A big thanks to all the readers of this article who encouraged the publication of this work by expressing their appreciation both here on the website and through other communications. Thanks to Oppanna.com for the opportunity to publish this, and to the editors and artists who helped in bringing this to publication.

  Best Regards,
  Raja Kailar
  (S/O Saraswathi Kailar)

 2. ಕೈಲಾರು ಚಿಕ್ಕಮ್ಮ,
  ಮಕ್ಕೊಗಿಪ್ಪ ರಾಮಾಯಣವ ಚೆಂದಕ್ಕೆ ಬರದು ಬೈಲಿಂಗೆ ಕೊಟ್ಟ ನಿಂಗೊಗೆ ಧನ್ಯವಾದಂಗೊ.
  ಬಾಲಣ್ಣನ ಚಿತ್ರಂಗಳೂ ಇದರ ಒಟ್ಟಿಂಗೆ ಬಂದು ಭಾರೀ ಚೆಂದ ಆಯಿದು.
  ಇನ್ನು ಬೇರೆ ಕತೆಗೊ ಯೇವುದಾದರೂ ಇದ್ದರೆ ಬೈಲಿಂಗೆ ಹೇಳಿಕ್ಕಿ ಚಿಕ್ಕಮ್ಮಾ..
  ಹರೇರಾಮ.

 3. ಹರೇ ರಾಮ . ಸುರುವಿಂದ ಅಕೇರಿವರೇಗೆ ಪ್ರತಿ ಕಂತುದೇ ಒಪ್ಪ ಒಪ್ಪಕೆ ಮೂಡಿಬೈಂದು. ಈ ಕೆಲಸಕ್ಕೆ ಭಾಗಿಯಾದ ಎಲ್ಲೋರಿಂಗೂ ಅಭಿನಂದನೆ, ಧನ್ಯವಾದ. ಜಯ ಜಯ ಶ್ರೀರಾಮ.

 4. ಕೆ. ವೆಂಕಟರಮಣ ಭಟ್ಟ says:

  ಜೈ ಶ್ರೀ ರಾಮ್ ಜೈ ಹನುಮಾನ್.

 5. ರಘುಮುಳಿಯ says:

  ಕಳುದ ಹದಿನೇಳು ವಾರ೦ಗಳಲ್ಲಿ ಬೈಲಿಲಿ ಪ್ರಕಟ ಆದ, ಹತ್ತು ಅಧ್ಯಾಯ೦ಗಳಲ್ಲಿ ಬರದ ಈ ‘ಮಕ್ಕೊಗೆ ರಾಮಾಯಣ’ ವ ರಚನೆ ಮಾಡಿದ ಕೈಲಾರು ಚಿಕ್ಕಮ್ಮ೦ಗೆ ಧನ್ಯವಾದ೦ಗೊ.ಪ್ರತಿ ವಾರ ಓದಿ ಮನೆಯ ಮಕ್ಕಳ ಹತ್ತರೆ ಓದುಸಿ ಕೊಶಿ ಪಟ್ಟಿದೆ. ನಮ್ಮ ಭಾಷೆಲಿ ಸುಲಭವಾಗಿ ಅರ್ಥ ಅಪ್ಪ ಹಾ೦ಗೆ ಮೂಲರಚನೆಯ ಭಾವಕ್ಕೆ ಭ೦ಗ ಬಾರದ್ದ ಹಾ೦ಗೆ ಬರದು,ಬೈಲಿ೦ಗೆ ಈ ಕೃತಿಯ ಕೊಟ್ಟ ನಿ೦ಗೊಗೆ ವ೦ದನೆ.
  ಬಾಲಣ್ಣ ಮಾವನ ಚಿತ್ರ೦ಗೊ ಕಥೆಗೆ ಹೊಸ ಮೆರುಗು ಕೊಟ್ಟಿದು ಹೇಳೊದಕ್ಕೆ ಸ೦ಶಯ ಇಲ್ಲೆ.ಅವಕ್ಕೂ ಅಭಿನ೦ದನೆಗೊ.
  ಈ ಶುದ್ದಿ ಪ್ರಕಟ ಮಾಡುಲೆ ಅನುಮತಿ ಕೊಟ್ಟ ವಾಸನ್ ಪಬ್ಲಿಕೇಶನ್ ನವಕ್ಕೂ ಧನ್ಯವಾದ.
  ಕೈಲಾರು ಚಿಕ್ಕಮ್ಮನ ಶುದ್ದಿಗೊ ಬೈಲಿಲಿ ಸದಾ ಬರಲಿ ಹೇಳಿ ನಮ್ಮ ಆಶಯ.

 6. ಕೆ.ನರಸಿಂಹ ಭಟ್ ಏತಡ್ಕ says:

  ಹವಿಗನ್ನಡದ ಸೊಗಡಿಲ್ಲಿ ಮೂಡಿಬಂದ ‘ಮಕ್ಕೊಗೆ ರಾಮಾಯಣ’ವ ದೊಡ್ಡವುದೆ ಓದಿ ಸಂತೋಷಪಟ್ಟಿದವು.ಇದಕ್ಕೆ ಕಾರಣರಾದ ಎಲ್ಲೋರಿಂಗೂ ಅಭಿನಂದನೆಗೊ.ಹರೇ ರಾಮ.

 7. saraswathi kailar says:

  Kshamisi-enage kannada type madule batthille—adarude enna bhavanegala illi prakata maadule praythna maadthe—oppannana bailili Makkoge Ramayanava prakatisle mukhya- karana karthrugokke-adarallu mukyavagi, oppannange, Muliya Raghu annange, Udayashankara, Sathyange,Adithi Akka, Indiratthege, Gere chitra maadi kottu makkoge Ramayanada mukhya ghatanego ella sariyagi manadattappa hange madule sahakarisida Madurankana Balannange- prathi adhyaya prakata adippagalu thumba prothsahada maathugala oppalli barada ella mahaniyaringu-mahileyaringu-ottili heludiddare Makkoge ippa Ramayanava prakatisule sahakarisida elloringu enna krithajnathego Kannadalli Makkala Ramayana barada Rajeshwari Krishnang, prakatisule anumathi kotta Vasan Prakatanalayakke enna vishesha krithajnathego-
  Amerikallippa enna magalakko, maga, sose, pulliyakko ella Ramayanava athi uthshalli prathi Budhavaravuu odi avaravara abhiprayangala phonili thilisi enna prothsahisiddallade prakata maadida oppannana bailingu ella sajjana bandhugokku avara krithajnatheya thilisiddakke preethiya oppango

 8. ಬಾಲಣ್ಣ (ಬಾಲಮಧುರಕಾನನ) says:

  ‘ಮಕ್ಕೊಗೆ ರಾಮಾಯಣ ‘ ಚೆಂದಕೆ ಬರದು ಬೈಲಿಂಗೆ ಕೊಟ್ತ ಚಿಕ್ಕಮ್ಮಂಗೆ ಅಭಿನಂದನೆಗೊ.ಆನು ಬರದ ಚಿತ್ರಂಗಳ ಪ್ರಕಟಿಸಿ ಪ್ರೋತ್ಸಾಹಿಸಿದ ಬೈಲಿಂಗೆ ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *