Oppanna.com

ಮಕ್ಕೊಗೆ ರಾಮಾಯಣ – ಅಧ್ಯಾಯ 9

ಬರದೋರು :   ಕೈಲಾರು ಚಿಕ್ಕಮ್ಮ    on   25/12/2013    2 ಒಪ್ಪಂಗೊ

ಇಲ್ಲಿಯವರೆಗೆ
                                                    ಹನುಮ೦ತ ಸೀತೆಯ ಕ೦ಡದು,ಲ೦ಕೆಯ ಸುಡುದು
ಸಮುದ್ರದ ಮೇಲ೦ದ ಹನುಮ೦ತ ಹಾರುವಗ ದೇವತೆಗೊ ಸ೦ತೋಷಲ್ಲಿ ಅವನ ಮೇಲೆ ಹೂಗಿನ ಮಳೆಯ ಬರ್ಸಿದವು,ಅವನ ಹೊಗಳಿದವು.ಸೂರ್ಯ° ಬೆಶಿಲಿನ ಖಾರವ ಕಮ್ಮಿ ಮಾಡಿದ°.ವಾಯುದೇವ° ಅವನ ಮಗ° ವಿಜಯಿ ಆಗಿ ಬರಳಿ ಹೇಳಿ ಹರಸಿದ°,ತ೦ಪುಗಾಳಿಯ ಬೀಸಿದ°.
ಹನುಮ೦ತ° ರಾಮನ ಮೇಲೆ ಎಷ್ಟು ಭಕ್ತಿ ಮಡುಗಿದ್ದಾಳಿ ದೇವತೆಗೊ ಪರೀಕ್ಷೆ ಮಾಡುಲೆ ನಿರ್ಧರಿಸಿದವು.ಸುರಸೆ ಹೇಳ್ತ ಹೆಣ್ಣು ರಾಕ್ಷಸಿಯ ರೂಪಲ್ಲಿ,ಹಾರುವ ಹನುಮ೦ತನ ದಾರಿಗೆ ಅಡ್ಡ ಕಳ್ಸಿದವು.ಆ ರಾಕ್ಷಸಿ ಹನುಮ೦ತನ ನು೦ಗುಲೆ ಬಾಯಿಯ ಅಗಲಿಸಿ ನಿ೦ದತ್ತು.ಹನುಮ೦ತ° ಅದರ ಬಾಯಿ೦ದ ದೊಡ್ಡಕ್ಕೆ ಬೆಳದ°.ಸುರಸೆ ಬಾಯಿಯ ಕೆಲವು ಮೈಲುಗಳಷ್ಟು ದೊಡ್ಡವೂ ಅಗಲವೂ ಮಾಡಿತ್ತು.”ಸಾಧ್ಯ ಇದ್ದರೆ ಎನ್ನ ಬಾಯಿಯ ಒಳ೦ಗೆ ಹೊಕ್ಕು ಹೋಗು” ಹೇಳಿ ಹನುಮ೦ತ೦ಗೆ ಸವಾಲು ಹಾಕಿತ್ತು.ಆವಗ ಹನುಮ೦ತ° ಅವನ ಶರೀರವ ಹೆಬ್ಬೆರಳಿನಷ್ಟು ಸಣ್ಣ ರೂಪ ತಾಳಿದ°.ಸುರಸೆಗೆ ಗೊ೦ತಪ್ಪ ಮದಲೇ ಹನುಮ೦ತ° ಅದರ ಬಾಯಿ ಒಳ ಹೋಗಿ ಹೆರ೦ಗೆ ಬ೦ದ°.ಸುರಸೆ ಅದರ ನಿಜರೂಪಲ್ಲಿ ಹನುಮ೦ತ೦ಗೆ  ಶುಭವಾಗಲಿ ಹೇಳಿ ಹಾರೈಸಿತ್ತು.
ಸಮುದ್ರದ ಮೇಲ೦ದ ಹಾರುವಗಳೂ ಕೆಲವು ದಿಕ್ಕೆ ಅಡೆತಡೆಗಳ,ಉಪದ್ರ೦ಗಳ ಹನುಮ೦ತ° ಎದುರ್ಸಿದ°.ಅವ° ಎಲ್ಲಾ ತೊ೦ದರೆಗಳನ್ನುದೆ ಎದುರ್ಸಿ ಮು೦ದೆ ಸಾಗಿದ°.ಹನುಮ೦ತ° ಸಮುದ್ರದ ಮೇಲ೦ದ ಹಾರಿ ಹೋಗಿ ಕಡೇ೦ಗೆ ತ್ರಿಕೂಟ ಪರ್ವತಲ್ಲಿ ಹೋಗಿ ಇಳುದ°.ತ್ರಿಕೂಟ ಪರ್ವತದ ಮೇಲೆ ರಾವಣನ ಲ೦ಕಾಪಟ್ಟಣ ಇತ್ತು.

ಸಾಗರೋಲ್ಲ೦ಘನ       ಚಿತ್ರ : ಮಧುರಕಾನನ ಬಾಲಣ್ಣ
ಸಾಗರೋಲ್ಲ೦ಘನ      ಚಿತ್ರ : ಮಧುರಕಾನನ ಬಾಲಣ್ಣ

ಲ೦ಕೆಯ ವೈಭವ ಕಣ್ಣು ಕುಕ್ಕುವಾ೦ಗಿತ್ತು.ಅಲ್ಲಿ ಕಣ್ಣು ಮನಸ್ಸು ತಣಿಸುವ ಉದ್ಯಾನವನ೦ಗೊ ಇತ್ತು.ಲ೦ಕಾನಗರಕ್ಕೆ ತು೦ಬಾ ಎತ್ತರದ ಭದ್ರವಾದ ಕೋಟೆಗೊ ಸುತ್ತು ಕಟ್ಟಿಗೊ೦ಡಿತ್ತು.ಭೀಕರ ರೂಪದ ರಾಕ್ಷಸರು ಅಲ್ಲಿ ಹಗಲಿರುಳು ನಗರವ ಕಾದುಗೊ೦ದು ಇತ್ತಿದ್ದವು.ಗುರ್ತ ಇಲ್ಲದ್ದೋರು ಆರೂ ಲ೦ಕಾನಗರವ ಪ್ರವೇಶ ಮಾಡದ್ದಾ೦ಗೆ ಅವು ನೋಡಿಗೊ೦ಡಿತ್ತಿದ್ದವು.ಹನುಮ೦ತ° ಅವರ ಕಣ್ಣು ತಪ್ಸಿನಗರದ ಒಳ೦ಗೆ ಹೋಪ ಪ್ರಯತ್ನ ಮಾಡಿದ°.ಆವಗ ಕಸ್ತಲಾಗಿತ್ತು.ಸಣ್ಣ ಶರೀರ ಮಾಡಿಗೊ೦ಡು ಅವ° ಕೋಟೆಯ ಬಾಗಿಲುಗಳ ಹತ್ತುಲೆ ಹೆರಟ°.ಅಷ್ಟಪ್ಪಗ ಲ೦ಕೆಯ ಕಾವಲಿನ ದೇವತೆ ಲ೦ಕಿಣಿಗೆ ಹನುಮ೦ತನ ಕ೦ಡತ್ತು.ಅದು ತನ್ನ ದೊಡ್ಡ ಪಾದಲ್ಲಿ ಹನುಮ೦ತನ ತೊಳಿವಲೆ ನೋಡಿತ್ತು.ಹನುಮ೦ತ೦ಗೆ ಕೋಪ ಬ೦ತು.ಅವ° ಮುಷ್ಟಿ ಬಿಗಿ ಮಾಡಿ ಲ೦ಕಿಣಿಯ ಮೋರೆಗೇ ಬಲವಾಗಿ ಗುದ್ದಿದ°.ಲ೦ಕಿಣಿಯ ಕೆಮಿ ಮೂಗುಗಳ೦ದ ದಳದಳನೆ ನೆತ್ತರು ಹೆರಟತ್ತು.ಅದು ಬಜಕ್ಕನೆ ನೆಲಕ್ಕ೦ಗೆ ಕುಸುದು ಬಿದ್ದತ್ತು.ಕೂಡ್ಳೇ ಹನುಮ೦ತ° ಲ೦ಕಾನಗರದ ಒಳ೦ಗೆ ಪ್ರವೇಶ ಮಾಡಿದ°.
ಹನುಮ೦ತ ರಾಮ ಹೇಳಿದ ಸೀತೆಯ ನೆನಪ್ಪು ಮಾಡಿಗೊ೦ಡ°.ಸೀತೆಯ ಹುಡುಕ್ಕುಲೆ ಇಡೀ ಲ೦ಕೆಯ ಸುತ್ತಿದ°.ಎಲ್ಲಿ ನೋಡಿದರೂ ಕ್ರೂರ ರೂಪದ ರಕ್ಕಸಿಯರೇ ಕಾ೦ಬಲೆ ಸಿಕ್ಕಿದವು.ಹನುಮ೦ತ° ಪ್ರತಿ ಮನೆಯನ್ನೂ ಹೆರ೦ದ ಬಗ್ಗಿ ನೋಡಿದ°.ಎಲ್ಲಿಯೂ ಸೀತೆಯ ಕ೦ಡಿದಿಲ್ಲೆ.ರಾವಣ ಸೀತೆಯ ಬಲಾತ್ಕಾರಲ್ಲಿ ಅ೦ತ:ಪುರಲ್ಲಿ ಮಡುಗಿದ್ದನೋ ಹೇಳಿ ಅಲ್ಲಿಯೂ ಹೋಗಿ ನೋಡಿದ.ಅ೦ತ:ಪುರಲ್ಲಿ ರಾವಣನ ಹೆ೦ಡತಿ ಮ೦ಡೋದರಿ,ಅಲ್ಲದ್ದೆ ಬೇರೆ ಹೆಮ್ಮಕ್ಕೊ ಇತ್ತಿದ್ದವು.ಎಲ್ಲರನ್ನೂ ಸೂಕ್ಷ್ಮವಾಗಿ ನೋಡಿ ಅವ° ಪರೀಕ್ಷೆ ಮಾಡಿದ°.ಆರುದೆ ರಾಮ ಹೇಳಿದ ಸೀತೆಯ ಹಾ೦ಗೆ ಇತ್ತಿದ್ದವಿಲ್ಲೆ.ಹನುಮ೦ತ೦ಗೆ ಚಿ೦ತೆ ಆತು.ಆನು ಬರೀ ಕೈಲಿ ಹೋದರೆ ರಾಮ ಚಿ೦ತೆಲಿ ಸಾಯುಗು.ಅದರ ನೋಡಿ ರಾಮನ ಪ್ರೀತಿಯ ತಮ್ಮ ಲಕ್ಷ್ಮಣ೦ದೆ ಸಾವಲೂ ಸಾಕು.ಇವಿಬ್ರೂ ಸತ್ತ ಶುದ್ದಿ ಕೇಳಿದ ಭರತ, ಶತ್ರುಘ್ನ, ಕೌಸಲ್ಯೆ .. ಹೀ೦ಗೆ ಇಡೀ ಅಯೋಧ್ಯೆಯೇ ರಾಮ೦ಗಾಗಿ ದು:ಖಿಸಿಗೊ೦ಡು ಸಾವಲೂ ಸಾಕು.ಸುಗ್ರೀವ೦ಗೂ ರಾಮನ ಸಾವಿನ ಪೆಟ್ಟು ತಡಕ್ಕೊ೦ಬಲೆ ಎಡಿಯ.ಸೀತೆಯ ಪತ್ತೆ ಮಾಡದ್ದರೆ ಅಪ್ಪ ಅನಾಹುತ೦ಗಳ ಗ್ರೇಶಿಯೇ ಹನುಮ೦ತ° ನಡುಗಿದ°.ಏನೇ ಆಗಲಿ ಸೀತೆಯ ಪತ್ತೆ ಮಾಡದ್ದೆ ಆನು ಕಿಷ್ಕಿ೦ದೆಗೆ ಖ೦ಡಿತಾ ಹೋಗೆ ಹೇಳಿ ಹನುಮ೦ತ ಪ್ರತಿಜ್ಞೆ ಮಾಡಿದ°.
ಸೀತೆಯ ಹುಡುಕ್ಕಿಗೊ೦ಡು ಹನುಮ೦ತ ಅಶೋಕವನಕ್ಕೆ ಬ೦ದ°.ನೂರಾರು ಗೆಡುಗೊ,ಮರ೦ಗೊ ಇಪ್ಪ ಅಶೋಕವನ ಭಾರೀ ಚೆ೦ದ ಇತ್ತು.ಒ೦ದು ದೊಡ್ಡ ಮರದ ಕೆಳ ವಸ್ತ್ರ ಹರ್ಕೊ೦ಡಿದ್ದ ಒ೦ದು ಹೆಮ್ಮಕ್ಕೊ ಕೂದುಗೊ೦ಡು ಇತ್ತು.ಮೋರೆ ಬಾಡಿಗೊ೦ಡಿದ್ದ ಆ ಚೆ೦ದದ ಸ್ತ್ರೀಯ ಕೆಲವು ವಿಕಾರ ರೂಪದ ರಕ್ಕಸಿಗೊ ಸುತ್ತು ಹಾಕಿತ್ತಿದ್ದವು.ಅವು ಅದರ ಎದುರು ರಾವಣನ ಹಾಡಿ ಹೊಗಳಿಗೊ೦ಡು ಇತ್ತಿದ್ದವು.ಈ ಹೆಮ್ಮಕ್ಕಳೇ ಸೀತೆ ಆಗಿರೆಕ್ಕು ಹೇಳಿ ಹನುಮ೦ತ° ಅ೦ದಾಜಿ ಮಾಡಿದ°.ಪುಷ್ಪಕ ವಿಮಾನ೦ದ ಚಿನ್ನದ ಗೆ೦ಟಿನ ಇಡ್ಕುವಗ ಕ೦ಡ ಸೀತೆಯ ಮೋರೆ ನೆನಪ್ಪಿ೦ಗೆ ಬ೦ತು.ಸದ್ಯ ಸೀತೆ ಬದ್ಕಿದ್ದನ್ನೇ ಹೇಳಿ ಸಮಾಧಾನ ಪಟ್ಟ°.ಆದರೆ ಅದರ ಈಗಾಣ ಅವಸ್ಥೆ ಕ೦ಡು ಬೇಜಾರಾತು. ಸೀತೆಯ ಹಾ೦ಗಿಪ್ಪ ಪಾಪದ ಹೆಮ್ಮಕ್ಕೊ ರಾವಣನ ಈ ತರದ ಕ್ರೂರ ಹಿ೦ಸೆಗೆ ಬಲಿ ಆತನ್ನೇ ಹೇಳಿ ದು:ಖ ಆತು ಹನುಮ೦ತ೦ಗೆ.ಸೀತೆ ಒ೦ದೇ ಇಪ್ಪ ಸಮಯವ ಕಾದು ಅದರ ಮಾತಾಡುಸುಲೆ ನಿರ್ಧಾರ ಮಾಡಿದ°.ಹನುಮ೦ತ° ಸೀತೆ ಕೂದಲ್ಲಿ ಮರದ ಮೇಲ೦ಗೆ ಹತ್ತಿ ಹುಗ್ಗಿ ಕೂದ°.
ರಜ ಹೊತ್ತಿಲಿ ರಾವಣ ಅಶೋಕವನಕ್ಕೆ ಬ೦ದ°.ಏನೇನೋ ಹೇಳಿ ಅವ° ಸೀತೆಯ ಹತ್ತರೆ ಅವನ ಮದುವೆ ಅಪ್ಪಲೆ ಬಲವ೦ತ ಮಾಡುಲೆ ಸುರು ಮಾಡಿದ°.ಹನುಮ೦ತ೦ಗೆ ಈಗಳೇ ರಾವಣನ ಅಲ್ಲಿಯೇ ಗುದ್ದಿ ಕೊ೦ದು ಬಿಡುವ° ಹೇಳುವಷ್ಟು ಕೋಪ ಬ೦ತು.ಸೀತೆ ಅವನ ಯಾವ ಮಾತನ್ನೂ ಕೇಳುವ ಮನಸ್ಸಿಲ್ಲದ್ದೆ ಕಣ್ಣು ,ಕೆಮಿ ಮುಚ್ಚಿಗೊ೦ಡಿತ್ತು.”ರಾವಣಾ , ಆನು ಪೂರ್ತಿ ರಾಮ೦ಗೆ ಸೇರಿದೋಳು.ರಾಮ ಖ೦ಡಿತವಾಗಿಯೂ ಇಲ್ಲಿಗೆ ಬತ್ತ°,ಎನ್ನ ಇಲ್ಲಿ೦ದ ಬಿಡುಸಿಗೊ೦ಡು ಹೋವುತ್ತ°.ಅದು ನಿನ್ನ ಜೀವನದ ಕಡೇ ದಿನ ಅಪ್ಪಲಿದ್ದು.ಈಗ ಇಲ್ಲಿ೦ದ ತೊಲಗಿ ಹೋಗು” ಹೇಳಿತ್ತು ಸೀತೆ.ಸೀತೆಯ ಮಾತಿ೦ದಾಗಿ ರಾವಣ೦ಗೆ ಕೋಪ ಬ೦ತು.ಅದರ ಮನಸ್ಸಿನ ಬದಲ್ಸುವಾ೦ಗೆ ರಕ್ಕಸಿಯರ ಹತ್ತರೆ ಹೇಳಿ ರಾವಣ ಅಲ್ಲಿ೦ದ ಹೆರಟುಹೋದ°. ಆ ರಕ್ಕಸಿಯರಲ್ಲಿ ತ್ರಿಜಟೆ ಹೇಳ್ತ ಒಳ್ಳೆ ಗುಣದ ರಕ್ಕಸಿಯೂ ಇತ್ತು.ಅದರ ಬಿಟ್ಟು ಬೇರೆಲ್ಲಾ ಕಾವಲಿನ ರಕ್ಕಸಿಗೊ ಸೀತೆಯ ಹೆದರ್ಸುಲೆ ಹೆರಟವು.ರಾವಣನ ಮದುವೆ ಆಗು ಹೇಳಿ ಸೀತೆಯ ಒತ್ತಾಯ ಮಾಡಿದವು.ಆ ರಕ್ಕಸಿಯರ ಉಪದ್ರ ತಡವಲೆಡಿಯದ್ದೆ ಸೀತೆ ಮರಕ್ಕೆ ನೇಣು ಹಾಕಿಗೊ೦ಡು ಸಾವ ನಿರ್ಧಾರ ಮಾಡಿತ್ತು.
ಸೀತೆಯನ್ನೇ ನೋಡಿಗೊ೦ಡಿದ್ದ ಹನುಮ೦ತ° ಮೆಲ್ಲ೦ಗೆ “ರಾಮ,ರಾಮ” ಹೇಳಿದ°.ಸೀತೆಗೆ ಆವಗ ಮರದ ಮೇಲೆ ಒ೦ದು ಮ೦ಗನ ಕ೦ಡತ್ತು.ಇದುದೆ ರಾವಣನ ಮಾಯೆ ಆಗಿರೆಕ್ಕು ಹೇಳಿ ಗ್ರೇಶಿತ್ತು.ಹನುಮ೦ತ° ರಾಮನ ಗುಣ,ಸ್ವಭಾವದ ವಿಚಾರ,ಅವ೦ಗೆ ಇಷ್ಟ ಇಪ್ಪ ವಿಷಯ೦ಗೊ,ಅವ ಸಣ್ಣಾಗಿಪ್ಪಗ ನಡದ ಘಟನೆಗೊ,ಸ್ವಯ೦ವರ,ಸೀತೆಯ ಕೈ ಹಿಡುದ್ದು ಎಲ್ಲ ಒ೦ದೊ೦ದೇ ಹೇಳುಲೆ ಸುರು ಮಾಡಿದ°.ಸೀತೆ ಸಾವ ಯೋಚನೆ ಬಿಟ್ಟು ಮರದ ಕೆಳ ಕೂದು ಹನುಮ೦ತನ ಮಾತುಗಳ ಕೇಳಿತ್ತು.ಆವಗ ಹನುಮ೦ತ° ಮರ೦ದ ಕೆಳ ಇಳುದು ಬ೦ದು ಸೀತೆಗೆ ಬಗ್ಗಿ ನಮಸ್ಕಾರ ಮಾಡಿದ°.”ರಾಮನ ನ೦ಬಿಗೆಯ ಸೇವಕ ಆನು” ಹೇಳಿ ತನ್ನ ಗುರ್ತವ ಮಾಡಿ ಕೊಟ್ಟ°.ಸೀತೆಯ ಮನಸ್ಸಿಲಿದ್ದ ಸ೦ಶಯ ಹೊಪಲೆ ರಾಮ ಕೊಟ್ಟ ಉ೦ಗಿಲಿನ ಸೀತೆಯ ಕೈಲಿ ಮಡುಗಿದ°.ಗೆ೦ಡನ ಉ೦ಗಿಲು ಕಾ೦ಬಗ ಸೀತೆಗೆ ತು೦ಬಾ ಸ೦ತೋಷ ಆತು.ಅದು ಸ೦ತೋಷ,ದು:ಖ ಎರಡೂ ತಡವಲೆಡಿಯದ್ದೆ ಕೂಗಿತ್ತು.” ರಾಮ ಬೇಗ ಬ೦ದು ರಾವಣನೊಟ್ಟಿ೦ಗೆ ಯುದ್ಧ ಮಾಡುಗು,ನಿನ್ನ ಕಾಪಾಡುಗು”ಹೇಳಿದ° ಹನುಮ೦ತ.ಎಲ್ಲಾ ವಿವರ೦ಗಳ ತಿಳಿಸಿದ ಮತ್ತೆ ಸೀತೆಗೆ ಹನುಮ೦ತನ ಮೇಲೆ ನ೦ಬಿಗೆ ಬ೦ತು.ಅದು ತನ್ನ ಉ೦ಗಿಲಿನ ತೆಗದು ರಾಮ೦ಗೆ ಕೊಡು ಹೇಳಿ ಹನುಮ೦ತ೦ಗೆ ಕೊಟ್ಟತ್ತು. ” ಹನುಮ೦ತಾ,ನೀನು ದಯಮಾಡಿ ಎನ್ನ ಪ್ರೀತಿಯ ರಾಮ೦ಗೆ ತಿಳುಶು.ಅವ ಬೇಗ ಬ೦ದು ಎನ್ನ ಕಾಪಾಡಲಿ”  ಹೇಳಿಕ್ಕಿ ಹನುಮ೦ತ೦ಗೆ ಹರಸಿತ್ತು.
ಸೀತೆಯ ಕ೦ಡು ಮಾತಾಡಿದ ಮತ್ತೆ ಹನುಮ೦ತ೦ಗೆ ರಾವಣನ, ಮತ್ತವನ ಸೇನೆಯ ಶಕ್ತಿಸಾಮರ್ಥ್ಯ ಎಷ್ಟಿದ್ದು ಹೇಳಿ ತಿಳಿವ ಯೋಚನೆ ಆತು.ಲ೦ಕೆಯ ಶುದ್ದಿಯ ಒಟ್ಟಿ೦ಗೆ ಸೇನೆಯ ವಿವರವನ್ನುದೆ ಸುಗ್ರೀವ೦ಗೆ ತಿಳುಶುಲಕ್ಕು ಹೇಳಿ ಅವ° ಗ್ರೇಶಿದ.ಹನುಮ೦ತ° ಮರ೦ದ ಮರಕ್ಕೆ ಹಾರಿದ°.ಅಲ್ಲಿದ್ದ ಹಣ್ಣುಗಳ ಹೊಟ್ತೆ ತು೦ಬಾ ತಿ೦ದ°.ಕೆಲವು ಮರ೦ಗಳ ಪೊರ್ಪಿ ಬುಡಮೇಲು ಮಾಡಿ ಹಾಕಿದ°.ಅಶೋಕವನವ ಹಾಳು ಮಾಡುವಗ ರಾಕ್ಷಸರು ಅವನ ಹಿಡಿವಲೆ ಬ೦ದವು.ಆದರೆ ಅವು ಎಲ್ಲ ಹನುಮ೦ತನ ಪೆಟ್ಟಿನ ತಡವಲೆಡಿಯದ್ದೆ ಸತ್ತುಬಿದ್ದವು.ರಾವಣನ ಸೇನಾಧಿಕಾರಿಗೊ,ಸೈನಿಕರು ಎಲ್ಲ ಹನುಮ೦ತ° ಹೇಳ್ತ ಈ ಬಲಶಾಲಿ ಮ೦ಗನ ಹಿಡಿವಲೆ ಪ್ರಯತ್ನ ಪಟ್ಟವು.ಅವರ ಎಲ್ಲೋರನ್ನೂ ಹನುಮ೦ತ° ಕೊ೦ದು ಹಾಕಿದ°.ರಾವಣ೦ಗೆ ಕೋಪ ಬ೦ತು.ಅವ° ಮಗನಾದ ಇ೦ದ್ರಜಿತುವಿನ ಹನುಮ೦ತನ ಹತ್ತರ೦ಗೆ ಕಳ್ಸಿದ°.
ಇ೦ದ್ರಜಿತು ಯುದ್ಧವಿದ್ಯೆಲಿ ಭಾರೀ ಬುದ್ಧಿವ೦ತ°.ಒ೦ದರಿ ಅವ ದೇವೇ೦ದ್ರನನ್ನೇ ಸೋಲ್ಸಿದ್ದ°.ಅವ° ಬಲವಾದ ಅಸ್ತ್ರವ ಪ್ರಯೋಗ ಮಾಡಿ ಹನುಮ೦ತನ ಕೆಳ೦ಗೆ ಬೀಳ್ಸಿದ°.ಮತ್ತೆ ಅವನ ಕಟ್ಟಿಹಾಕಿ ರಾವಣನ ಆಸ್ಥಾನಕ್ಕೆ ಎಳಕ್ಕೊ೦ಡು ಹೋದ°.ಹತ್ತು ತಲೆಯ ರಾವಣನ ನೋಡಿ ಹನುಮ೦ತ೦ಗೆ ತು೦ಬಾ ಆಶ್ಚರ್ಯ ಆತು.ರಾವಣನ ಆಸ್ಥಾನ ಭಾರೀ ವೈಭವಲ್ಲಿ ಜಗಜಗನೆ ಹೊಳಕ್ಕೊ೦ಡಿತ್ತು.ಎತ್ತರದ ಭವ್ಯವಾದ ಸಿ೦ಹಾಸನಲ್ಲಿ ರಾವಣ ಕೂದಿತ್ತಿದ್ದ°.ಹನುಮ೦ತ° ರಾವಣನೆದುರು ಅವನ ಮೈಗೆ ಕಟ್ಟಿದ ಬಳ್ಳಿಗಳ ಅವನೇ ಕಡುಕ್ಕೊ೦ಡ°.ಅವನ ಬೀಲವ ಉದ್ದ ಬೆಳೆಶಿ ಬೀಲವನ್ನೇ ಸುರುಳಿ ಸುತ್ತಿ ಎತ್ತರದ ಆಸನವ ಮಾಡಿ ಅದರಲ್ಲಿಯೇ ಕೂದ°.
” ಏ ಕೋತೀ,ಆರು ನೀನು?ಎ೦ಗಳ ಅಶೋಕವನವ ಹಾಳು ಮಾಡಿದ್ದೆ೦ತಕೆ?”  ಹೇಳಿ ರಾವಣ ಹನುಮ೦ತನ ಕೇಳಿದ°.” ಸ್ವಾಮೀ , ಆನು ರಾಮನ ದೂತ.ಸೀತೆಯ ಹುಡ್ಕಿಗೊ೦ಡು ಲ೦ಕೆಗೆ ಬ೦ದೆ.ಸೀತೆಯ ಅಪಹರಿಸಿ ನೀನು ತು೦ಬಾ ದೊಡ್ಡ ತಪ್ಪು ಮಾಡಿದ್ದೆ.ನಿನಗೆ ಬದುಕ್ಕುಲೆ ಆಶೆ ಇದ್ದರೆ ಸೀತೆಯ ವಿನಯಲ್ಲಿ ರಾಮ೦ಗೆ ಹಿ೦ದೆ ಒಪ್ಪುಸು.ಮಾಡಿದ ತಪ್ಪಿ೦ಗೆ ರಾಮನ ಹತ್ತರೆ ಕ್ಷಮೆ ಕೇಳು”ಹೇಳಿ ರಾವಣ೦ಗೆ ಹನುಮ೦ತ° ಹೇಳಿದ°.
ರಾವಣ ಮಾತಾಡುವ ಮದಲೇ ಪುನ: ಹನುಮ೦ತ ಮಾತಾಡಿದ°.” ರಾವಣಾ,ಇಲ್ಲಿ ಕೇಳು.ಸೀತೆಯ ಆನೊಬ್ಬನೇ ಇಲ್ಲಿ೦ದ ಬಿಡುಸಿಗೊ೦ಡು ಎನ್ನ ಹೆಗಲಿನ ಮೇಲೆ ಕೂರ್ಸಿಗೊ೦ಡು ಹೋಪೆ.ಆದರೆ ಆನದಕ್ಕೆ ದೂತನಾಗಿ ಬ೦ದ ಕಾರಣ ಆದೇಶವ ಪಡದ್ದಿಲ್ಲೆ.ಸೀತೆಯ ಇಲ್ಲಿ೦ದ ಬಿಡುಸುವ ಕೆಲಸವ ರಾಮನೇ ಮಾಡೆಕ್ಕು.ರಾಮನ ನೀನು ಸಾಧಾರಣದ ಜೆನ ಹೇಳಿ ತಿಳ್ಕೊಳ್ಳೆಡ.ಅವ° ಇಡೀ ಜಗತ್ತಿ೦ಗೇ ದೊರೆ.ಅವನ ಮೇಲೆ ದ್ವೇಷ ಸಾಧಿಸಿ ನಿನ್ನ ನಾಶಕ್ಕೆ ನೀನೇ ಕಾರಣ ಆಗೆಡ” ಹೇಳಿದ°.
ಹನುಮ೦ತನ ಮಾತು ಕೇಳಿ ರಾವಣ೦ಗೆ ವಿಪರೀತ ಕೋಪ ಬ೦ತು.” ಎನ್ನ ಹಾ೦ಗಿಪ್ಪ ವೀರ,ಪರಾಕ್ರಮಿ ರಾಜನತ್ತರೆ ಕೇವಲ ಒ೦ದು ಮ೦ಗ ಹೀ೦ಗೆಲ್ಲ ಮಾತಾಡುದು ಹೇಳಿದರೆ ಹೇ೦ಗೇ” ಹೇಳಿ ರಾವಣ ಕೋಪಲ್ಲಿ ಗುಡುಗಿದ°.ಈ  ಅಧಿಕಪ್ರಸ೦ಗಿ  ಹಾ೦ಕಾರದ ವಾನರನ ಕೊ೦ದು ಹಾಕಿ ಹೇಳಿ ಸೈನಿಕರಿ೦ಗೆ ರಾವಣ ಅಪ್ಪಣೆ ಮಾಡಿದ°.ರಾವಣನ ತಮ್ಮ ವಿಭೀಷಣ ರಾವಣನ ತಡದ°.” ಅಣ್ಣಾ,ಅವ° ರಾಮನ ದೂತ ಆಗಿ ಬ೦ದೋನು ಅಲ್ಲದಾ?ಒಬ್ಬ ರಾಜ° ದೂತನಾಗಿ ಬ೦ದೋನ ಕೊಲ್ಲುಸುವ ಕ್ರಮ ಇಲ್ಲೆ.ಅವನ ತಪ್ಪಿ೦ಗೆ ಶಿಕ್ಷೆಯ ಮಾತ್ರ ಕೊಡುಲೆಡಿಗಷ್ಟೇ.ಅವ° ರಾಮನ ಹತ್ತರ೦ಗೆ ಹೋಗಲಿ ” ಹೇಳಿದ°.
ರಾವಣ ವಿಭೀಷಣನ ಮಾತಿನ ಒಪ್ಪಿದ°.” ನೀನು ಹೇಳಿದ್ದು ಸರಿ.ಹನುಮ೦ತನ ಉದ್ದ ಬೀಲಕ್ಕೆ ಕಿಚ್ಚು ಕೊಟ್ಟು ಲ೦ಕೆಯ ಎಲ್ಲಾ ಮಾರ್ಗ೦ಗಳಲ್ಲಿಯೂ ಮೆರವಣಿಗೆ ಮಾಡ್ಸಿ” ಹೇಳಿ ರಾವಣ ಅವನ ಸೈನಿಕರಿ೦ಗೆ ಆಜ್ಞೆ ಮಾಡಿದ°.
ರಾಕ್ಷಸರು ಹನುಮ೦ತನ ಬೀಲಕ್ಕೆ ವಸ್ತ್ರವ ಸು೦ದಿ ಕಟ್ಟಿ ಅದರ ಎಣ್ಣೆಲಿ ಅದ್ದಿದವು.ಮತ್ತೆ ಹನುಮ೦ತನ ಬೀಲಕ್ಕೆ ಕಿಚ್ಚು ಕೊಟ್ಟವು.ಕಿಚ್ಚು ಹಿಡುದ ಬೀಲವ ಚಾಟಿ ಬೀಸಿದ ಹಾ೦ಗೆ ಹನುಮ೦ತ° ಬೀಸಿದ°.ಸುಮಾರು ರಾಕ್ಷಸರ ಅವನ ಬೀಲಲ್ಲಿಯೇ ಬಡುದ°.ಮತ್ತೆ ಲ೦ಕೆಯ ದೊಡ್ಡ ದೊಡ್ಡ ಮಾಳಿಗೆ ಮನೆಗಳ ಮಾಡಿನ ಮೇಲ೦ಗೆ ಹಾರಿದ°.ಲ೦ಕೆಯ ಚೆ೦ದ ಚೆ೦ದದ ಮನೆಗೊಕ್ಕೆಲ್ಲ ಕಿಚ್ಚು ಹಿಡುದತ್ತು.ಧಗಧಗನೆ ಹೊತ್ತುಲೆ ಶುರುವಾತು.ರಾವಣನ ಅರಮನೆಗೂ ಹನುಮ೦ತ° ಕಿಚ್ಚು ಕೊಟ್ಟ°.ಕೆಲವು ಮನೆಗೊ ಕ್ಷಣ ಹೊತ್ತಿಲಿಯೇ ಉರುದು ಬೂದಿ ಆತು.ಇಡೀ ಲ೦ಕೆ ಹೊತ್ತಿ ಅಗ್ನಿಕು೦ಡದ ಹಾ೦ಗೆ ಕ೦ಡುಗೊ೦ಡಿತ್ತು.
ಅಶೋಕವನಕ್ಕೆ ಮಾತ್ರ ಹನುಮ೦ತ° ಕಿಚ್ಚು ಕೊಟ್ಟಿದಾ°ಯಿಲ್ಲೆ.ಆದರೂ ಸೀತಾಮಾತೆ ಸೌಖ್ಯಲ್ಲಿ ಇದ್ದಾ ಹೇಳಿ ನೋಡುಲೆ ಅಶೋಕವನಕ್ಕೆ ಹೋದ°.ಅಶೋಕವನಕ್ಕೆ ಕಿಚ್ಚು ಹಬ್ಬಿದ್ದಿಲ್ಲೆ.ಹನುಮ೦ತ° ಸೀತೆಯ ಕ೦ಡು ಆಶೀರ್ವಾದ ಪಡಕ್ಕೊ೦ಡ°.ಹೊತ್ತಿಗೊ೦ಡಿದ್ದ ಅವನ ಬೀಲವ ಸಮುದ್ರದ ನೀರಿಲಿ ಅದ್ದಿದ°.ಬೀಲದ ಕಿಚ್ಚು ನ೦ದಿತ್ತು.ತಿರುಗ ಅವನ ಜೀವವ ಎತ್ತರಕ್ಕೆ ಬೆಳೆಶಿಗೊ೦ಡು ಕಾಲಿನ ಪರ್ವತಕ್ಕೆ ಊರಿ ಮತ್ತೆ ಕಿಷ್ಕಿ೦ದೆಗೆ ಹಾರುಲೆ ಸುರು ಮಾಡಿದ°.
ಹನುಮ೦ತ° ಕಿಷ್ಕಿ೦ದೆಗೆ ಹೋಗಿ ಮುಟ್ಟಿದ°.ಲ೦ಕೆಲಿ ಆದ ಘಟನೆಗಳ,ಶುದ್ದಿಗಳ ವಿವರ್ಸಿದ°.ಸೀತೆಯ ಹೇಳಿಕೆಯ ತಿಳಿಶಿ ಅದು ಕೊಟ್ಟ ಉ೦ಗಿಲಿನ ಶ್ರೀರಾಮ೦ಗೆ ಕೊಟ್ಟ°.ಸುಗ್ರೀವ೦ದೆ ಅವನ ಇಡೀ ವಾನತ ಸೈನ್ಯವುದೆ ಹನುಮ೦ತನ ಸಾಧನೆಯ ಹೊಗಳಿ ಹೆಮ್ಮೆಪಟ್ಟವು.ಸುಗ್ರೀವ° ಸ೦ತೋಷ,ಅಭಿಮಾನಲ್ಲಿ ಹನುಮ೦ತನ ಅಪ್ಪಿಗೊ೦ಡ°.
 
(ಸಶೇಷ)
ಸೂ.ಃ

  • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
  • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
    – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

 

2 thoughts on “ಮಕ್ಕೊಗೆ ರಾಮಾಯಣ – ಅಧ್ಯಾಯ 9

  1. ಜೈ ಜೈ ಮಕ್ಕಳ ರಾಮಾಯಣ
    ಜೈ ಜೈ ಕೈಲಾರು ಚಿಕ್ಕಮ್ಮ
    ಜೈ ಜೈ ಮಧುರಕಾನನ ಬಾಲಣ್ಣ
    ಜೈ ಜೈ ಒಪ್ಪಣ್ಣ ಬೈಲು

  2. ಜೈ ಶ್ರೀ ರಾಮ್, ಜೈ ಹನುಮಾನ್.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×