Oppanna.com

ಮಕ್ಕೊಗೆ ರಾಮಾಯಣ – ಅಧ್ಯಾಯ 8

ಬರದೋರು :   ಕೈಲಾರು ಚಿಕ್ಕಮ್ಮ    on   18/12/2013    2 ಒಪ್ಪಂಗೊ

ಇಲ್ಲಿಯವರೆಗೆ
ವಾನರ೦ಗಳ ರಾಜ್ಯ
ಶ್ರೀರಾಮ ರಜ ಹೊತ್ತು ವಿಶ್ರಾ೦ತಿಗೇಳಿ ಮನುಗಿದರೂ ಅವ೦ಗೆ ಸೀತೆಯ ನೆನಪ್ಪು ಆಯ್ಕೊ೦ಡಿತ್ತು.ಅವ೦ಗೆ ಸರಿಯಾಗಿ ಉ೦ಬಲೆ,ತಿ೦ಬಲೆ,ಒರಗುಲೆದೆ  ಆಯ್ಕೊ೦ಡಿತ್ತಿಲ್ಲೆ.ಇದರ ನೋಡಿ ಲಕ್ಷ್ಮಣ೦ಗೂ ದು:ಖ ಬ೦ದು,ಅವ° ಅಣ್ಣನ ಸಮಾಧಾನ ಮಾಡಿಗೊ೦ಡಿತ್ತಿದ್ದ°.”ಅಣ್ಣಾ,ದಯಮಾಡಿ ಧೈರ್ಯ ಕಳಕ್ಕೊಳ್ಳೆಡ.ಸೀತೆ ಎಲ್ಲಿದ್ದು ಹೇಳಿ ನಾವು ಕ೦ಡುಹಿಡಿವೊ.ರಾವಣ೦ದ ಅದರ ಬಿಡುಸಿ ಕರಕ್ಕೊ೦ಡು ಬಪ್ಪೊ°” ಹೇಳಿ ತಿಳಿಶಿಗೊ೦ಡಿತ್ತಿದ್ದ°.”ಹಾ೦ಗಾರೆ ಈಗಳೇ ಹೋಪೊ,ನಡವೊ,ಸುಮ್ಮನೆ ಸಮಯ ಹಾಳು ಮಾಡುದೆ೦ತಕೆ?” ಹೇಳಿ ರಾಮ ಎದ್ದು ಕೂದ°.ಇಬ್ರುದೆ ಋಷ್ಯಮೂಕ ಪರ್ವತದ ಹೊಡೆ೦ಗೆ ನಡದವು.
ಆ ಪರ್ವತಲ್ಲಿ ಹಲವು ಮ೦ಗ೦ಗೊ ವಾಸ ಮಾಡಿಗೊ೦ಡಿತ್ತಿದ್ದವು.ಸುಗ್ರೀವ° ಅವರ ನಾಯಕ ಆಗಿತ್ತಿದ್ದ°.ಹನುಮ೦ತ ಸುಗ್ರೀವನ ಗೆಳೆಯನೂ ಸಹಾಯಕನೂ ಆಗಿತ್ತಿದ್ದ°.ಹನುಮ೦ತ ವೀರನೂ ಬಲಶಾಲಿಯೂ ಬುದ್ಧಿವ೦ತನೂ ಆಗಿತ್ತಿದ್ದ°. ಹನುಮ೦ತ ವಾಯುದೇವನ ಮಗ ಆಗಿತ್ತಿದ್ದ°.
ಸುಗ್ರೀವ೦ಗೆ ವಾಲಿ ಹೇಳ್ತ ಹೆಸರಿನ ಅಣ್ಣ ಇತ್ತಿದ್ದ°.ವಾಲಿ ಕಿಷ್ಕಿ೦ದೆಯ ರಾಜ.ಮದಲು ವಾಲಿಯೂ ಸುಗ್ರೀವನೂ ತು೦ಬಾ ಪ್ರೀತಿ,ವಿಶ್ವಾಸಲ್ಲಿ ಇತ್ತಿದ್ದವು. ಒ೦ದರಿ ವಾಲಿ ಒಬ್ಬ ರಾಕ್ಷಸನೊಟ್ಟಿ೦ಗೆ ಹೋರಾಡಿಗೊ೦ಡು ಅವನ ಅಟ್ಟಿಗೊ೦ಡು ಹೋದ°.ರಾಕ್ಷಸ ಒ೦ದು ಮಾಟೆಯ ಒಳ೦ಗೆ ಹೊಕ್ಕ°.ವಾಲಿ ಗುಹೆಯ ಒಳ೦ಗೆ ಹೋಪ ಮದಲು ಮಾಟೆಯ ಬಾಗಿಲಿಲಿ ತಮ್ಮ ಸುಗ್ರೀವನ ಕಾವಲು ನಿ೦ಬಲೆ ಹೇಳಿದ°.ಸುಗ್ರೀವ° ಕೆಲವು ದಿನ ಮಾಟೆಯ ಎದುರು ನಿ೦ದ°.ವಾಲಿ ಮಾಟೆ೦ದ ಹೆರ ಬಯಿ೦ದನೇ ಇಲ್ಲೆ.ಸುಗ್ರೀವ೦ಗೆ ಚಿ೦ತೆ ಆತು. ಒಳ೦ದ ರಾಕ್ಷಸನ ಬೊಬ್ಬೆ,ಅಟ್ಟಹಾಸ ಕೇಳಿಗೊ೦ಡಿತ್ತು.ವಾಲಿಯ ಸ್ವರವೇ ಕೇಳಿಗೊ೦ಡಿತ್ತಿಲ್ಲೆ.ಮಾಟೆಯ ಒಳ೦ದ ನೆತ್ತರ್ಯ್ಧಾರೆ ಹೆರ೦ಗೆ ಹರುದು ಬ೦ದುಗೊ೦ಡಿತ್ತು.ವಾಲಿ ಸತ್ತು ಹೋದ° ಹೇಳಿ ಗ್ರೇಷಿದ ಸುಗ್ರೀವ° ಮಾಟೆಯ ಹೆರ ದೊಡ್ಡ ಬ೦ಡೆಕಲ್ಲಿನ ಅಡ್ಡ ಮಡುಗಿದ°.ಮತ್ತೆ ಕಿಷ್ಕಿ೦ದೆಗೆ ಬ೦ದ°.ವಾಲಿ ಸತ್ತು ಹೋದ° ಹೇಳಿ ಗ್ರೇಷಿದ ವಾನರ೦ಗೊ ಸುಗ್ರೀವನನ್ನೇ ರಾಜ ಮಾಡಿದವು.
ಒ೦ದು ದಿನ ಇದ್ದಕ್ಕಿದ್ದ ಹಾ೦ಗೇ ವಾಲಿ ಬ೦ದ°.ಸುಗ್ರೀವನ ರಾಜ ಮಾಡಿದ್ದು ಗೊ೦ತಾಗಿ ವಾಲಿಗೆ ಭಾರೀ ಕೋಪ ಬ೦ತು.ಅವ° ಕೋಪಲ್ಲಿ ಸುಗ್ರೀವನ ರಾಜ್ಯ೦ದಲೇ ಓಡ್ಸಿದ°. ಸುಗ್ರೀವನ ಹೆ೦ಡತಿಯ ಅವನೇ ಮಡಿಕ್ಕೊ೦ಡ°.ಸುಗ್ರೀವ ಋಷ್ಯಮೂಕ ಪರ್ವತಕ್ಕೆ ಓಡಿ ಬ೦ದ°.ಋಷಿಯ ಶಾಪ೦ದಾಗಿ ವಾಲಿಗೆ ಋಷ್ಯಮೂಕ ಪರ್ವತಕ್ಕೆ ಹೋಪಲೆ ಸಾಧ್ಯ ಇತ್ತಿಲ್ಲೆ.
ರಾಮಲಕ್ಷ್ಮಣರು ಋಷ್ಯಮೂಕ ಪರ್ವತಕ್ಕೆ ಬಪ್ಪ ಶುದ್ದಿ ಸುಗ್ರೀವ೦ಗೆ ಸಿಕ್ಕಿತ್ತು.ಅವನ ಕೊಲ್ಲುಲೆ ವಾಲಿ ಆರನ್ನೋ ಕಳುಸಿದ್ದ ಹೇಳಿ ಗ್ರೇಷಿಗೊ೦ಡ°.”ಆರದು ಬಪ್ಪದು ಹೇಳಿ ನೋಡಿ ವಿಚಾರ್ಸಿ ತಿಳ್ಕೊ೦ಡು ಬಾ” ಹೇಳಿ ಸುಗ್ರೀವ° ಕೂಡ್ಳೇ ಹನುಮ೦ತನ ಕಳ್ಸಿದ°.
ಹನುಮ೦ತ ರಾಮನತ್ತರ೦ಗೆ ಬ೦ದು ರಾಮ೦ಗೆ ಅವನ ಗುರ್ತ ಮಾಡಿ ವಾಲಿ ಸುಗ್ರೀವರ ಕಥೆಯನ್ನೂ ಹೇಳಿದ°.ಲಕ್ಷ್ಮಣ ಅವನ ಮತ್ತೆ ಅಣ್ಣ ರಾಮನ ಪರಿಚಯ ಮಾಡಿದ°.”ವಾನರನೇ,ರಾವಣ ಹೇಳ್ತ ರಾಕ್ಷಸ° ಎನ್ನ ಅತ್ತಿಗೆ ಸೀತೆಯ ಬಲವ೦ತಲ್ಲಿ ಎಳದು ಕೊ೦ಡೋಯಿದ°.ಅವ° ಎಲ್ಲಿ ಇಪ್ಪದು ಹೇಳಿ ಎ೦ಗೊಗೆ ಗೊ೦ತಿಲ್ಲೆ.ಎ೦ಗೊ ರಾವಣನ ಬಗ್ಗೆ ತಿಳಿವಲೆ ಸುಗ್ರೀವನ ಕಾಣೆಕ್ಕು.ಅವನ ಸಹಾಯವ ಎ೦ಗೊ ಬಯಸಿದ್ದಯೊ°.ಎ೦ಗೊ ಸುಗ್ರೀವನ ಕೊಲ್ಲುಲೆ ಬ೦ದೋರಲ್ಲ ಹೇಳಿ ಸುಗ್ರೀವ೦ಗೆ ಹೇಳು ” ಹೇಳಿದ° ಲಕ್ಷ್ಮಣ.
ಲಕ್ಷ್ಮಣನ ಉತ್ತರ೦ದ ಹನುಮ೦ತ೦ಗೆ ಸಮಾಧಾನ ಆತು. ಅವ° ತನ್ನ ಎರಡು ಹೆಗಲುಗಳ ಮೇಲೆ ರಾಮ ಲಕ್ಷ್ಮಣರ ಕೂರ್ಸಿಗೊ೦ಡು ಋಷ್ಯಮೂಕ ಪರ್ವತದ ಕೊಡೀ೦ಗೆ ಹಾರಿದ°.ಆ ಪರ್ವತದ ಕೊಡೀಲಿದ್ದ ಒ೦ದು ದೊಡ್ಡ ಮಾಟೆಯ ಒಳ ಸುಗ್ರೀವ° ತನ್ನ ಜತೆಯೋರ ಒಟ್ಟಿ೦ಗೆ ಇತ್ತಿದ್ದ°.
ಸುಗ್ರೀವ° ರಾಮನ ಸ್ಥಿತಿಗತಿಗಳ ತಿಳುಕ್ಕೊ೦ಡ°.ಅವ° ರಾಮನ ಗೆಳೆತನವ ಸ೦ತೋಷಲ್ಲಿ ಒಪ್ಪಿದ°.ಅವ° ಖುಷಿಯಾಗಿ ರಾಮನ ಅಪ್ಪಿಗೊ೦ಡ°. ” ರಾಮಾ, ಸೀತೆಯ ಹುಡುಕ್ಕುಲೆ ಆನು ನಿನಗೆ ಸಹಾಯ ಮಾಡುವೆ.ಅದು ಎಲ್ಲಿದ್ದರೂ ಹುಡುಕ್ಕುವೊ°.ಈಗ ನೆನಪ್ಪಾತು.ಕೆಲವು ದಿನದ ಮದಲು ಒಬ್ಬ° ರಾಕ್ಷಸ ಒ೦ದು ಹೆಮ್ಮಕ್ಕಳ ಎಳಕ್ಕೊ೦ಡು ಹೋಪದರ ಎ೦ಗೊ ಕ೦ಡಿದೆಯ.ರಾಮಾ,ಲಕ್ಷ್ಮಣಾ,ದಯಮಾಡಿ ಎನ್ನ ರಕ್ಷಿಸಿ ಹೇಳಿ ಆ ಹೆಮ್ಮಕ್ಕೊ ಕೂಗೊದೂ ಎ೦ಗೊಗೆ ಕೇಳಿದ್ದು.ಅದು ಆಭರಣ ಇದ್ದ ಒ೦ದು ಗೆ೦ಟಿನ ಎ೦ಗಳ ಹೊಡೆ೦ಗೆ ಇಡ್ಕಿದ್ದು.ಆನದರ ನಿ೦ಗೊಗೆ ತೋರುಸುತ್ತೆ.ಅದು ಸೀತಾಮಾತೆಯ ಆಭರಣ೦ಗೊ ಅಪ್ಪೋ ಅಲ್ಲದೋ ಹೇಳಿ ನಿ೦ಗೊಗೆ ಗೊ೦ತಕ್ಕು”ಹೇಳಿಕ್ಕಿ ಸುಗ್ರೀವ ಮಾಟೆಯ ಒಳ೦ದ ಆಭರಣದ ಗೆ೦ಟಿನ ತಪ್ಪಲೆ ಹೇಳಿದ°.ಗೆ೦ಟಿನ ಹೆರ ತ೦ದು ಬಿಡಿಸಿದವು.
ಸೀತೆಯ ಆಭರಣ೦ಗಳ ನೋಡಿ ರಾಮನ ಕಣ್ಣಿಲಿ ನೀರು ಇಳಿವಲೆ ಸುರುವಾತು.ರಾಮ ”ಸೀತೇ,ಸೀತೇ” ಹೇಳಿ ಕೂಗಿದ°.ಅವ೦ಗೆ ಬೋದ ತಪ್ಪಿತ್ತು.ರಜ ಹೊತ್ತಿಲಿ ಎದ್ದು ಕೂದ ರಾಮ° ” ತಮ್ಮಾ,ಇದು ಸೀತೆಯ ಆಭರಣ೦ಗಳಾ ಹೇಳಿ ನೀನೂ ರಜ ನೋಡು” ಹೇಳಿದ°.ಆದರೆ ಲಕ್ಷ್ಮಣ೦ಗೆ ಸೀತೆಯ ಕೆಮಿಯ,ತಲೆಯ,ಕೊರಳಿನ ಚಿನ್ನವ ನೋಡಿ ಗೊ೦ತಿತ್ತಿಲ್ಲೆ.ಅವ° ತಲೆ ತಗ್ಗುಸಿ ” ಆನು ಅತ್ತಿಗೆಯ ಮೋರೆ ಅಲ್ಲದ್ದೆ ಶರೀರದ ಯಾವದೇ ಭಾಗವನ್ನೂ ನೋಡಿದ್ದಿಲ್ಲೆ.ಎನಗೆ ಸರಿಯಾಗಿ ಗೊ೦ತಿಪ್ಪದು ಅತ್ತಿಗೆಯ ಪಾದ ಮುಟ್ಟಿ ನಮಸ್ಕಾರ ಮಾಡುವಗ ಕ೦ಡ ಪಾದದ ಆಭರಣ ಮಾತ್ರ” ಹೇಳಿದ° ಲಕ್ಷ್ಮಣ. ಅತ್ತಿಗೆಯ ಮೇಲೆ ಗೌರವ ಮತ್ತೆ ಪೂಜ್ಯ ಭಾವನೆ ಇತ್ತು ಲಕ್ಷ್ಮಣ೦ಗೆ.
ರಾಮ ತಿರುಗಿ ಒ೦ದರಿ ಎಲ್ಲಾ ಚಿನ್ನ೦ಗಳ ಪರೀಕ್ಷೆ ಮಾಡಿದ°.ಅದು ಸೀತೆದೇ ,ತನ್ನ ಪ್ರೀತಿಯ ಹೆ೦ಡತಿದೇ ಸ೦ಶಯವೇ ಇಲ್ಲೆ ಹೇಳಿ ಅವ೦ಗೆ ಕ೦ಡತ್ತು.”ಎನ್ನ೦ದ ಎನ್ನ ಸೀತೆಯ ಬೇರೆ ಮಾಡಿದ ರಾವಣನ ಆನು ಕೊಲ್ಲದ್ದೆ ಬಿಡೆ” ಹೇಳಿ ರಾಮ ಶಪಥ ಮಾಡಿದ°.
ಸುಗ್ರೀವ° ರಾಮ೦ಗೆ ಸಮಾಧಾನ ಮಾಡಿದ°.”ಸೀತೆಯ ಪತ್ತೆ ಮಾಡುಲೂ,ರಾವಣನ ಕೊಲ್ಲುಲೂ ಆನು ಎನ್ನ ವಾನರ೦ಗಳ ಸೇನೆಯ ಕಳ್ಸಿ ಕೊಡುವೆ” ಹೇಳಿ ರಾಮ೦ಗೆ ಮಾತು ಕೊಟ್ಟ°.ಸುಗ್ರೀವನ ಸಹಾಯಕ್ಕೆ ಪ್ರತಿಯಾಗಿ ರಾಮನುದೆ ಅವ೦ಗೆ ಸಹಾಯ ಮಾಡುತ್ತೆ ಹೇಳಿದ°.”ವಾಲಿಯ ಕೊ೦ದು ನಿನ್ನ ರಾಜ್ಯವನ್ನೂ ನಿನ್ನ ಹೆ೦ಡತಿಯನ್ನೂ ನೀನು ಪುನ: ಪಡವಲೆ ಆನು ಸಹಾಯ ಮಾಡ್ತೆ” ಹೇಳಿ ಭಾಷೆ ಕೊಟ್ಟ°.ರಾಮನ ಅತಿಶಯ ಶಕ್ತಿಯ ಪರಿಚಯ ಸುಗ್ರೀವ೦ಗೆ ಇತ್ತಿಲ್ಲೆ .ತು೦ಬಾ ಶಕ್ತಿವ೦ತನೂ ಬಲವ೦ತನೂ ಆದ ಅಣ್ಣ ವಾಲಿಯ ರಾಮ೦ಗೆ ಕೊಲ್ಲುಲೆಡಿಗಾ? ಹೇಳಿ ಸ೦ಶಯ ಆತು.
”ಪ್ರಿಯ ಮಿತ್ರ ರಾಮಾ,ನೀನು ವಾಲಿಯ ಕೊಲ್ಲುವೆ ಹೇಳಿ ಹೇಳಿದೆ,ಸ೦ತೋಷ ಆತು.ಎನಗೆ ಎನ್ನ ಅಣ್ಣನ ಶಕ್ತಿ ಸಾಮರ್ಥ್ಯ ಎಷ್ಟಿದ್ದು ಹೇಳಿ ಸರಿಯಾಗಿ ಗೊ೦ತಿದ್ದು.ಅವ ಅಸಾಮಾನ್ಯ ಪರಾಕ್ರಮಿ.ಒ೦ದೇ ಸಾಲಿಲಿಪ್ಪ ಏಳು ಮರ೦ಗಳ ಒ೦ದೇ ಬಾಣಲ್ಲಿ ಕತ್ತರ್ಸಿ ಹಾಕೊದರ ಆನು ಕಣ್ಣಾರೆ ಕ೦ಡಿದೆ.ನೀನುದೆ ಹಾ೦ಗೆ ಕತ್ತರ್ಸಿದರೆ ನಿನ್ನನ್ನೂ ಆನು ಪರಾಕ್ರಮಿ ಹೇಳಿ ಒಪ್ಪಿಗೊ೦ಬೆ”ಹೇಳಿದ° ಸುಗ್ರೀವ°.
ಅದೇ ರೀತಿ ರಾಮ ಒ೦ದೇ ಬಾಣಲ್ಲಿ ಏಳು ಮರ೦ಗಳ ಕತ್ತರ್ಸಿ ಹಾಕಿದ°.ಸುಗ್ರೀವ೦ಗೆ ಅದರ ನೋಡಿ ಸ೦ತೋಷ,ಸಮಾಧಾನ ಆತು.ರಾಮ ಹೇಳಿದ ಹಾ೦ಗೆ ಅವ ಕಿಷ್ಕಿ೦ದೆಗೆ ಹೋಗಿ ವಾಲಿಗೆ ಯುದ್ಧಕ್ಕೆ ಬಪ್ಪಾ೦ಗೆ ಹೇಳಿಕೆ ಕಳ್ಸಿದ°.ವಾಲಿಗೆ ಮದಲೇ ಸುಗ್ರೀವನತ್ತರೆ ಕೋಪ ಇತ್ತು.ಅವ° ಸುಗ್ರೀವನೊಟ್ಟಿ೦ಗೆ ಯುದ್ಧಕ್ಕೆ ನಿ೦ದ°.ವಾಲಿ ಮಹಾ ಪರಾಕ್ರಮಿ.ಸುಗ್ರೀವ ವಾಲಿಯ ಕೈಲಿ ಸೋತು ಪೆಟ್ಟು ತಿ೦ಬಲೆ ಸುರು ಮಾಡಿದ.ಅದೇ ಹೊತ್ತಿ೦ಗೆ ಮರದ ಹಿ೦ದೆ ಕೂದುಗೊ೦ಡಿದ್ದ ರಾಮ ವಾಲಿಯ ಎದೆಗೆ ಬಾಣ ಬಿಟ್ಟ°.ವಾಲಿ ನೆಲಕ್ಕ೦ಗೆ ಉರುಳಿದ.ನಿರೀಕ್ಷಿಸದ್ದ ದಾಳಿ೦ದಾಗಿ ವಾಲಿ ಸುತ್ತು ಮುತ್ತು ನೋಡಿದ°.ಮರದ ಬುಡಲ್ಲಿ ನಿ೦ದ ರಾಮನ ಕ೦ಡ°.”ರಾಮಾ,ಮರದ ಹಿ೦ದೆ ನಿ೦ದು ಹೇಡಿಯಾ೦ಗೆ ಎನ್ನ ಮೇಲೆ ಬಾಣ ಬಿಟ್ಟದು ಸರಿಯಾ” ಹೇಳಿ ರಾಮನತ್ತರೆ ಕೇಳಿದ°.

ವಾಲಿ ಸುಗ್ರೀವರ ಕಾಳಗ    ಚಿತ್ರ ಃ ಮಧುರಕಾನನ ಬಾಲಣ್ಣ
ವಾಲಿ ಸುಗ್ರೀವರ ಕಾಳಗ         ಚಿತ್ರ ಃ ಮಧುರಕಾನನ ಬಾಲಣ್ಣ

ರಾಮ ಸುಮ್ಮನೆ ಇತ್ತಿದ್ದ°.ಪುನ: ವಾಲಿಯೇ ಮಾತಾಡಿದ°.”ನೀನೊಬ್ಬ° ಯೋಗ್ಯ ಜೆನ.ಧರ್ಮ ನೀತಿಗಳ ತಿಳುದೋನು.ನೀನೆ೦ತಕೆ ಹೀ೦ಗಿಪ್ಪ ಹೀನ ಕೆಲಸಕ್ಕೆ ಇಳುದೇ? ಅದಲ್ಲದ್ದೆ ನಿನಗೆ ಎನ್ನ ಮೇಲೆ ಎ೦ತಕೆ ದ್ವೇಷ? ಆನೆ೦ತ ನಿನ್ನ ಶತ್ರುವಾ? ಉತ್ತರ ಹೇಳು ರಾಮಾ.ಯಾವದೇ ಕಾರಣ ಇಲ್ಲದ್ದೆ ನೀನು ಎನ್ನ ಮೇಲೆ ಬಾಣಪ್ರಯೋಗ ಮಾಡಿದೆ.ನೀನು ಮಾಡಿದ ಕೆಲಸ ನ್ಯಾಯವಾಗಿ ಇಲ್ಲೆ” ಹೇಳಿ ವಾಲಿ ಬೇನೆಲಿ ನೆರಕ್ಕಿಗೊ೦ಡು ಹೇಳಿದ°.
”ವಾಲೀ,ಸುಗ್ರೀವ° ಎನ್ನ ಮಿತ್ರ°.ಹಾ೦ಗೆ ನೋಡಿದರೆ ಅವ° ಎನ್ನ ತಮ್ಮ ಇದ್ದಾ೦ಗಿದ್ದ°.ನೀನು ಸುಗ್ರೀವನ ಹೆ೦ಡತಿಯ ನಿನ್ನತ್ತರೇ ಮಡಿಕ್ಕೊ೦ಡಿದೆ.ಹಾ೦ಗಾಗಿ ಆನು ನಿನ್ನ ಕೊಲ್ಲೆಕ್ಕಾಗಿ ಬ೦ತು.ಅಷ್ಟಕ್ಕೂ ನೀನು ಮನುಷ್ಯ° ಅಲ್ಲ.ನೀನೊಬ್ಬ ವಾನರ°.ಆದ ಕಾರಣ ನಿನ್ನ ಮೇಲೆ ನೀನು ನಿರೀಕ್ಷೆ ಮಾಡದ್ದಿಪ್ಪಗ ಬಾಣ ಬಿಟ್ಟದು ನ್ಯಾಯವಾಗಿಯೇ ಇದ್ದು” ಹೇಳಿ ರಾಮ ತಿಳಿಸಿದ°.
ರಾಮನ ಮಾತಿ೦ಗೆ ವಾಲಿ ಎದುರುತ್ತರ ಕೊಟ್ಟಿದಾ°ಯಿಲ್ಲೆ.ಅವ ಸುಗ್ರೀವನ ಕೈಯ ಹಿಡುಕ್ಕೊ೦ಡು ” ಎನ್ನ ಮಗ ಅ೦ಗದನ ಲಾಯಿಕಲ್ಲಿ ನೋಡಿಗೋ” ಹೇಳಿ ವಾಲಿ ಅವನ ಕಡೇ ಉಸುಲು ಎಳದ°.
ಸುಗ್ರೀವ° ಕಿಷ್ಕಿ೦ದೆಯ ತಿರುಗಿ ಪಡದು ರಾಜ ಆದ°.ರಾಮ೦ಗೆ ಕೊಟ್ಟ ಮಾತಿನ ಮರದೇ ಬಿಟ್ಟ.ಸೀತೆಯ ಪತ್ತೆ ಮಾಡುಲೆ ಆನು ನಿನಗೆ ಸಹಾಯ ಮಾಡ್ತೆ ಹೇಳಿ ಕೊಟ್ಟ ಮಾತು ಅವ೦ಗೆ ಮರದೇ ಹೋಗಿತ್ತು.ರಾಮಲಕ್ಷ್ಮಣರು ಋಷ್ಯಮೂಕದ ಮಾಟೆಯ ಒಳವೇ ಇತ್ತಿದ್ದವು.ಅವು ಸುಗ್ರೀವನ ಸೇನೆ ಯಾವಗ ನಮ್ಮ ಸಹಾಯಕ್ಕೆ ಬಕ್ಕು ಹೇಳಿ ದಾರಿ ಕಾದುಗೊ೦ಡು ಇತ್ತಿದ್ದವು.ಆದರೆ ಸುಗ್ರೀವ ಅವನ ಅರಮನೆಯ ರಾಜದರ್ಬಾರಿಲಿ ವೈಭವಲ್ಲಿ ಮುಳುಗಿತ್ತಿದ್ದ°.
ರಾಮ° ಪ್ರತಿಕ್ಷಣವೂ ಸೀತೆಗೇಳಿ ಕೊರಗಿ ಹ೦ಬಲಿಸುದರ ಲಕ್ಷ್ಮಣ೦ಗೆ ನೋಡುಲೆ ಕಷ್ಟ ಆತು.ಅವ೦ಗೆ ಸುಗ್ರೀವನ ಮೇಲೆ ದೊಡ್ಡ ಕೋಪ ಬ೦ತು.ಕೊಪದ ಭರಲ್ಲಿ ಅವ° ಕೂಡ್ಳೇ ಕಿಷ್ಕಿ೦ದೆಗೆ ಜೋರಾಗಿ ಹೋದ°.ಮಾತಿ೦ಗೆ ತಪ್ಪಿದ ಸುಗ್ರೀವನ ಕೊ0ದೇ ಬಿಡ್ತೇಳಿ ಅವ° ಶಪಥ ಮಾಡಿದ°.ಕೋಪಲ್ಲಿ ಬಪ್ಪ ಲಕ್ಷ್ಮಣನ ಹನುಮ೦ತ ನೋಡಿದ°.ಕೂಡ್ಳೇ ಹನುಮ೦ತ ಸುಗ್ರೀವನ ಹತ್ತರ೦ಗೆ ಓಡಿ ಹೋಗಿ ರಾಮ೦ಗೆ ಕೊಟ್ಟ ಮಾತಿನ ನೆನಪು ಮಾಡಿದ°.”ರಾಮ ನಿನಗೆ ಗೆಳೆಯನಾಗಿ ಸಹಾಯ ಮಾಡಿದ್ದಾಯಿಲ್ಲೆಯಾ?ಹಾ೦ಗೇ ನೀನೂ ಅವ೦ಗೆ ಸಹಾಯ ಮಾಡೆಡದಾ?” ಹೇಳಿ ಕೇಳಿದ°.ಹನುಮ೦ತನ ಮಾತುಗಳ ಕೇಳಿ ಅಪ್ಪಗ ಸುಗ್ರೀವ೦ಗೆ ಅವನ ತಪ್ಪು ಗೊ೦ತಾತು.
ಸುಗ್ರೀವ ಓಡಿಗೊ೦ಡು ಬ೦ದು ರಾಮನತ್ತರೆ ”ತಪ್ಪಾತು,ಕ್ಷಮಿಸು”ಹೇಳಿ ಕೈಮುಗುದ°.”ಎಲ್ಲಾ ವಾನರ೦ಗಳನ್ನೂ ಕಿಷ್ಕಿ೦ದೆಗೆ ಕರಕ್ಕೊ೦ಡು ಬಾ” ಹೇಳಿ ಹನುಮ೦ತನ ಹತ್ತರೆ ಹೇಳಿದ°.
ಸುಗ್ರೀವನ ಹೇಳಿಕೆಯಾ೦ಗೆ ಸಾವಿರಗಟ್ಲೆ ವಾನರ೦ಗೊ ಕಿಷ್ಕಿ೦ದೆಲಿ ಸೇರಿದವು.ವಾನರ೦ಗೊಕ್ಕೆ ”ನಾಲ್ಕು ದಿಕ್ಕಿಲಿಯೂ ಹೋಗಿ ಸೀತೆಯ ಹುಡುಕ್ಕಿ” ಹೇಳಿ ಆಜ್ಞೆ ಮಾಡಿದ ಸುಗ್ರೀವ°.ಅವ° ಹನುಮ೦ತನ ಪ್ರತ್ಯೇಕವಾಗಿ ದಿನುಗೋಳಿ ”ಮಾರುತೀ,ನೀನು ವಾನರ೦ಗಳಲ್ಲಿ ಅತಿ ಹೆಚ್ಚು ಶಕ್ತಿ ಇಪ್ಪೋನು.ನೀನು ಎ೦ಗೊಗೆಲ್ಲ ಶುಭ ಶುದ್ದಿಯ ತಪ್ಪೆ ಹೇಳ್ತ ನ೦ಬಿಕೆ ಎನಗಿದ್ದು ” ಹೇಳಿದ°.ರಾಮನೂ ಸುಗ್ರೀವ ಹೇಳಿದ್ದರ ಒಪ್ಪಿದ°.ರಾಮ ಹನುಮ೦ತನ ಒ೦ದು ಕರೇ೦ಗೆ ಬಪ್ಪಲೆ ಹೇಳಿದ°.ಅವನ ಕೈಗೆ ರಾಮ ಒ೦ದು ಉ೦ಗಿಲು ಕೊಟ್ಟು ” ಸೀತೆ ನಿನಗೆ ಸಿಕ್ಕಿಯಪ್ಪಗ ದಯಮಾಡಿ ಅದಕ್ಕೆ ಈ ಉ೦ಗಿಲಿನ ತೋರ್ಸು.ಆವಗ ಅದಕ್ಕೆ ನೀನು ರಾಮನ ದೂತನಾಗಿ ಬ೦ದಿದೆ ಹೇಳಿ ನ೦ಬಿಕೆ ಬಕ್ಕು” ಹೇಳಿದ°.ಹನುಮ೦ತ ರಾಮ ಕೊಟ್ಟ ಉ೦ಗಿಲಿನ ಭಕ್ತಿ,ಗೌರವಲ್ಲಿ ತೆಕ್ಕೊ೦ಡ°.ರಾಮನ ಆಶೀರ್ವಾದವ ಪಡಕ್ಕೊ೦ಡು ಹನುಮ೦ತ ಸೀತೆಯ ಹುಡುಕ್ಕುಲೆ ಹೆರಟ°.ಒ೦ದು ತಿ೦ಗಳಿ೦ದೊಳ ಸೀತೆಯ ಪತ್ತೆ ಮಾಡೆಕ್ಕು ಹೇಳಿ ಸುಗ್ರೀವ° ವಾನರ೦ಗೊಕ್ಕೆಲ್ಲ ತಿಳಿಶಿದ°.ಎಲ್ಲಾ ತ೦ಡ೦ಗಳೂ ಸೀತೆಯ ಹುಡುಕ್ಕುಲೆ ಸುರುಮಾಡಿದವು.
ಹನುಮ೦ತನ ಮು೦ದಾಳ್ತನಲ್ಲಿ ವಾನರ೦ಗಳ ಒ೦ದು ಗು೦ಪು ಪಶ್ಚಿಮ ದಿಕ್ಕಿ೦ಗೆ ಹೋಗಿತ್ತು.ಆದರೆ ಅವಕ್ಕುದೆ ಸೀತೆಯ ಪತ್ತೆ ಆಗದ್ದೆ ಬೇಜಾರಾತು.ಎಲ್ಲ ವಾನರ೦ಗೊ ತಿರುಗಿ ಬಚ್ಚಿ ಸೋತು ಸುಣ್ಣ ಆಗಿತ್ತಿದ್ದವು.ನಮ್ಮ ದುರಾದೃಷ್ಟಕ್ಕೆ ಎ೦ತ ಮಾಡೊದು ಹೇಳಿ ಅವು ಅರಡಿಯದ್ದೆ ಸಮುದ್ರದ ಕರೆಲಿ ಕೂದವು.ಸೀತೆಯ ಪತ್ತೆ ಹಚ್ಚುಲೆ ಆಯಿದಿಲ್ಲೇಳಿ ಸುಗ್ರೀವನತ್ತರೆ ಹ್ಳುವ ಧೈರ್ಯ ಆರಿ೦ಗೂ ಇತ್ತಿಲ್ಲೆ.ಸುಗ್ರೀವ° ಸೀತೆಯ ಶುದ್ದಿ ಗೊ೦ತಾಗದ್ದೆ ಬರೆಡಿ ಹೇಳಿಯೂ ತಿಳಿಶಿದ್ದ°.ನಮ್ಮ ಕೆಲಸಲ್ಲಿ ಜಯ ಸಿಕ್ಕಿದ್ದಿಲ್ಲೆ ಹೇಳಿ ಬೇಜಾರಿಲಿ ನಾವೆಲ್ಲ ಇನ್ನು ಸಾವದೇ ಒಳ್ಳೆದು ಹೇಳಿ ನಿರ್ಧಾರ ಮಾಡಿದವು.ವಾನರ೦ಗೊ ಎಲ್ಲ ಒಟ್ಟಿ೦ಗೆ ” ಅಪ್ಪು,ನಾವೆಲ್ಲ ಸತ್ತು ಬಿಡುವ°” ಹೇಳಿದವು.”ರಜ ಸಮಯ ಆದರೂ ರಾಮನ ಸೇವೆ ಮಾಡಿದ ತೃಪ್ತಿ ನವಗೆ ಸಿಕ್ಕುತ್ತು.ಸೀತೆಯ ರಕ್ಷಿಸುಲೆ ಹೋರಾಟ ಮಾಡಿದ ಜಟಾಯುವಿನ ಹಾ೦ಗೆ ನಾವೂ ಯುದ್ಧ ಮಾಡಿ ಸಾವಲಾವ್ತಿತ್ತು”ಹೇಳಿಯೂ ಎಲ್ಲ ಮ೦ಗ೦ಗೊ ಹೇಳಿದವು.
ಜಟಾಯುವಿನ ಹೆಸರು ಕೇಳಿದ ಕೂಡಲೇ ಒ೦ದು ಹಕ್ಕಿ ಸಮುದ್ರದ ಕಲ್ಲುಗಳ ಎಡೇ೦ದ ಎದ್ದು ಬ೦ತು.ಅದು ವಾಲಿಯ ಮಗ ಅ೦ಗದನತ್ತರೆ ”ಅಯ್ಯಾ ವಾನರನೇ,ಎನ್ನ ಹೆಸರು ಸ೦ಪಾತಿ.ಆನು ಜಟಾಯುವಿನ ಅಣ್ಣ.ಈಗ ನಿ೦ಗೊ ಹೇಳಿದ್ದು ಎನಗೆ ಕೇಳಿತ್ತು.ಹತ್ತು ತಲೆಯ ರಾವಣ೦ದಾಗಿ ಜಟಾಯು ಸತ್ತು ಹೋದನಾ?ಒ೦ದು ಚೆ೦ದದ ಹೆ೦ಗಸಿನ ಒಟ್ಟಿ೦ಗೆ ವಿಮಾನಲ್ಲಿ ರಾವಣ ಸಮುದ್ರ ದಾ೦ಟಿ ಹೋಪದರ ಆನು ಕ೦ಡಿದೆ.ಛೇ,ಆನುದೇ ರಾವಣನ ಒಟ್ಟಿ೦ಗೆ ಹೋರಾಡೆಕ್ಕಾಗಿತ್ತು.ಅವನ ಒಟ್ಟಿ೦ಗೆ ಇದ್ದ ಹೆ೦ಗಸೇ ಸೀತೆ ಆಗಿಕ್ಕು” ಹೇಳಿತ್ತು ಸ೦ಪಾತಿ.
ವಾನರ೦ಗೊ ಎಲ್ಲ ಬಾಯಿ ಬಿಟ್ತು ಸ೦ಪಾತಿ ಹೇಳುದರ ಕೇಳಿದವು.ಸ೦ಪಾತಿ ಪುನ: ಹೇಳುಲೆ ಸುರು ಮಾಡಿದ°. ”ಆ ದುಷ್ಟ ರಾವಣ ಎಲ್ಲಿಪ್ಪದು ಹೇಳಿ ಎನಗೆ ಗೊ೦ತಿದ್ದು.ಇಲ್ಲಿ೦ದ ತು೦ಬಾ ದೂರಲ್ಲಿ ಲ೦ಕೆ ಹೇಳ್ತ ದ್ವೀಪ ಇದ್ದು.ಲ೦ಕಾ ನಗರದ ಸುತ್ತೂ ಗಟ್ಟಿಯಾದ ಎತ್ತರದ ಕೋಟೆ ಕಟ್ಟಿದ್ದವು.ಆರಿ೦ಗೂ ಗೊ೦ತಾಗದ್ದ ಹಾ೦ಗೆ ಆ ಕೋಟೆಯ ದಾ೦ಟುದು ಹೇಳಿದರೆ ಭಾರೀ ಕಷ್ಟದ ಕೆಲಸ” ಹೇಳಿದ° ಸ೦ಪಾತಿ.ರಾವಣ ವಿಷಯ ಗೊ೦ತಾತು ಹೇಳಿ ವಾನರ೦ಗೊಕ್ಕೆ ಒ೦ದು ಕ್ಷಣ ಸ೦ತೋಷ ಆತು.ಆದರೆ ಸಮುದ್ರ ದಾ೦ಟುಲೆ  ಮಾತ್ರ ಆರಿ೦ಗೂ ಸಾಧ್ಯ ಇಲ್ಲೆ ಹೇಳಿ ನಿರಾಶೆ ಆತು.
ಕರಡಿಯಾ೦ಗಿಪ್ಪ ಶರೀರದ ಜಾ೦ಬವ೦ತ° ಅವರ ಪಡೆಲಿತ್ತಿದ್ದ°.ಅವ° ಎಲ್ಲರಿ೦ದ ಹಿರಿಯನಾಗಿ ಅನುಭವ ಇಪ್ಪೋನು.ಅವ ಹನುಮ೦ತ೦ಗೆ ಧೈರ್ಯ ತು೦ಬುಲೆ ಹೆರಟ.”ಮಗಾ,ನಿನಗೆ ಗಾಳಿಯಷ್ಟು ಜೋರಾಗಿ ರಭಸಲ್ಲಿ ಹಾರುಲೆ ಎಡಿಗು.ಇಡೀ ನಗರವನ್ನೇ ನಾಶ ಮಾಡುವಷ್ಟು ಶಕ್ತಿ ಸಾಮರ್ಥ್ಯ ನಿನಗಿದ್ದು.ಈ ಸಮುದ್ರವ ನಿನಗೆ ಮಾ೦ತ್ರ ದಾ೦ಟುಲೆಡಿಗು.ನೀನು ಲ೦ಕೆಯ ಸೇರುವೆ,ನಿನ್ನ ಗುರಿ ಮುಟ್ಟುವೆ ಹೇಳ್ತ ವಿಶ್ವಾಸ ಎನಗಿದ್ದು” ಹೇಳಿದ° ಜಾ೦ಬವ೦ತ°.
ಜಾ೦ಬವ೦ತನ ಪ್ರೋತ್ಸಾಹದ ಮಾತು ಕೇಳಿದ ಮೇಲೆ ಹನುಮ೦ತ೦ಗೆ ಉತ್ಸಾಹ ಉಕ್ಕಿತ್ತು.ಅವ° ಅವನ ಎದೆಯ ಅಗಲಿಸಿ ಗಾಳಿಯ ಎಳಕ್ಕೊ೦ಡು ಆಕಾಶದಷ್ಟು ಎತ್ತರ ಬೆಳದು ನಿ೦ದ°.ಅವನ ಕಣ್ಣಿಲಿ ಆತ್ಮವಿಶ್ವಾಸ ,ಧೈರ್ಯ ತು೦ಬಿಗೊ೦ಡಿತ್ತು.ತು೦ಬ ಎತ್ತರದ ಪರ್ವತದ ಕೊಡಿಲಿ ನಿ೦ದು ಅವನ ಪಾದ೦ಗಳಲ್ಲಿ ಶಿಖರವ ಒತ್ತಿ ಹಾರಿಯೇ ಬಿಟ್°ಟ.ಗಾಳಿಯಾ೦ಗೆ ರಭಸಲ್ಲಿ ಹಾರುವ ವೀರ ಹನುಮ೦ತನ ಸಾಹಸವ ವಾನರ೦ಗೊ ಎಲ್ಲ ಆಶ್ಚರ್ಯಲ್ಲಿ ನೋಡಿ ಕೊಣುದವು,ಹಾರಿದವು.ಹನುಮ೦ತನ ಮನಸಿಲಿಯೇ ಹರಸಿದವು.
 
(ಸಶೇಷ)
ಸೂ.ಃ

  • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
  • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
    – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

2 thoughts on “ಮಕ್ಕೊಗೆ ರಾಮಾಯಣ – ಅಧ್ಯಾಯ 8

  1. ಹರೇ ರಾಮ. ಮಕ್ಕಳ ರಾಮಯಾಣ ಸೊಗಸಾಗಿ ಬತ್ತಾ ಇದ್ದು.

  2. ಜೈ ಶ್ರೀ ರಾಮ್, ಜೈ ಹನುಮಾನ್.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×