ಕಥೆ: ದೈವ ಸಂಕಲ್ಪ

ನಾವು ಒಂದು ಗ್ರೇಶಿರೆ ದೇವರ ಸಂಕಲ್ಪ ಬೇರೆಯೇ ಇರುತ್ತಡೊ.
ಅದು ನಮ್ಮ ಒಳ್ಳೆದಕ್ಕೂ ಅಪ್ಪಲಕ್ಕು, ದೆಸೆ ಹಾಳಾದರೆ ಕೆಟ್ಟದೂ ಅಪ್ಪಲಕ್ಕು. ಅದರೆ ಅವನ ನಂಬ್ಯೊಂಡರೆ ಕೆಟ್ಟದಾಗ ಖಂಡಿತ.

ಮದಲೊಂದರಿ ನಡೆದ ಕತೆಯಡೊ.
ಒಬ್ಬ ಬೇಕಾದಷ್ಟು ಪೈಸೆ ಇದ್ದರೂ ಆರೋಗ್ಯ ಸರಿಯಿತ್ತಿಲ್ಲೆಡೊ.
ವಾತ ರೋಗ ಬಂದು ಕಾಲೆಲ್ಲ ಬೀಗಿ ನಡವಲೆಡಿಯದ್ದೆ ಎಲ್ಲಿಗೆ ಹೋಯೆಕ್ಕಾರೂ ವಾಹನಲ್ಲೇ  ಹೋಯೆಕ್ಕಾಗಿತ್ತಡೊ.
ಮನೆಯೊಳದಿಕ್ಕುದೆ ಕೈ ಹಿಡುದು ನಡೆಯಕ್ಕಾಗಿತ್ತಡೊ. ಎಷ್ಟಿದ್ದರೂ ಆರೋಗ್ಯ ಸರಿಯಿಲ್ಲದ್ದರೆ ಯಮ ಯಾತನೆ ಅನುಭವಿಸುವಂಗೇ ಗೊಂತು ಅದರ ಕಷ್ಟ.
ಹೀಂಗೆ ನರಕ್ಕ ಬರುಸುವಿಉದಕ್ಕೆ ದೇವರು ಒಂದರಿ ಬೇಗ ಕೊಂಡೋದರೆ ಸಾಕು ಹೇಳಿಗೊಂಡು ದೇವರನ್ನೇ ಕೇಳಿಗೊಂಡಿತ್ತಿದ್ದಡೋ.

ಜೀವಲ್ಲಿಪ್ಪಗ ಆರೋಗ್ಯ ಸರಿಮಾಡಿಕೊಡುವೋವಕ್ಕೆ ಕೇಳಿದಷ್ಟು ಕೊಡ್ಳೆ ಪೈಸೆಯೂ ಅವನತ್ರೆ ಇತ್ತು.
ಆದರೆ ಮನುಷ್ಯ ಪ್ರಯತ್ನ ಎಷ್ಟಿದ್ದರೂ ದೆಸೆ ಹಾಳಾದರೆ ಆರಿಂಗೆ ಎಂತ ಮಾಡುಲೆಡಿಗು!
ಎಂತೆಂತ ಮದ್ದು ಮಾಡಿದರೂ ಗುಣ ಆಯಿದಿಲ್ಲೆಡೊ. ಹೀಂಗಿಪ್ಪಗ ಅವಂಗೆ ಆರೋ  – “ಗುರುವಾಯೂರು ದೇವಸ್ಥಾನಲ್ಲಿ ದೇವರಿಂಗೆ ಅಭಿಷೇಕ ಮಾಡಿದ ಎಳ್ಳೆಣ್ಣೆಯ ಸೇವಿಸಿದರೆ, ಮೈಗೆ ಹಚ್ಯೊಂಡರೆ, ಗುಣ ಆಗಿಹೋಕು. ಎಲ್ಲ ಆ ದೇವರ ಕೈಲಿ ಇದ್ದು” ಹೇಳಿದವಡ.
ಸರಿ ಆ ಪ್ರಯತ್ನವನ್ನೂ ಮಾಡುವೊ ಹೇಳಿ ಮನೆಲ್ಲಿದ್ದ ಪೈಸೆ ಮಾರಾಪು ಮಾಡಿ, ಗುರುವಾಯೂರು ದೇವಸ್ಥಾನಲ್ಲಿ “ರೋಗ ಗುಣ ಅಪ್ಪನ್ನಾರ ಭಜನೆ ಕೂರುತ್ತೆ” ಹೇಳಿ ಸಂಕಲ್ಪ ಮಾಡ್ಯೊಂಡು ಗುಣ ಆದರೆ ಮಾಂತ್ರ ಅನು ಹಿಂದೆ ಬಪ್ಪದು. ಬಾರದ್ದರೆ ಅಲ್ಲೇ ದೇವರ ಮುಂದೆಯೇ ಜೀವ ಬಿಟ್ಟರೂ ಆತು ಹೇಳಿ ಮಕ್ಕೊಗೆಲ್ಲ ಪೊರುದಿ ಹೇಳಿ ಗುರುವಾಯೂರಿಂಗೆ ಹೋದನಡ.

ಗುರುವಾಯೂರು ತಲಪಿದೋನು, ಬೇರೆಲ್ಲಿಯೂ ರೂಮ್ ಮಾಡ್ಳೆ ಹೋಯಿದ ಇಲ್ಲೆ. ಅಲ್ಲಿ ವರೆಗೆ ಮಕ್ಕೊ ತಂದು ಬಿಟ್ಟವು. ಇನ್ನು ಇಲ್ಲೆ ಆಯ್ಕೊಳ್ಳುತ್ತೆ ನಿಂಗೊ ಹೋಗಿ ಹೇಳಿದನಡ.
ದೇವಸ್ಥಾನದ ಗೋಪುರಲ್ಲೇ ಒಂದು ಮೂಲೆಲ್ಲಿ, ಅಂಗಿ ವಸ್ತ್ರದ ಮಾರಾಪಿನೊಳದಿಕ್ಕೆ ಪೈಸೆ ಕಟ್ಟನ್ನೂ ಮಡಗಿ ಮನಿಕ್ಕೊಂಡಡೋ.
ಅಲ್ಲಿ ದೇವಸ್ಥಾನದೋರು ಪಾಪನೇ ಗ್ರೇಶಿ ಉಂಬಲೆ ವ್ಯವಸ್ಥೆ ಮಾಡಿದ್ದವಡೊ. ಗೋಪುರದ ಇನ್ನೊಂದು ಮೂಲೆಲ್ಲಿ ಇನ್ನೊಬ್ಬ ಬ್ರಾಹ್ಮಣ ಬರೇ ಬಡವ. ಇವಂದ ಮದಲೆ ಬಂದಿತ್ತಿದ್ದನಡ. ಅವನೂ ಬಡತನಂದ ಹೆಂಡತಿ ಮಕ್ಕಳ ಸಾಂಕುಲೆಡಿಯದ್ದೆ ಅವು ಯಾವಾಗಲೂ ಹರಟೆ ಮಾಡುತ್ತು ಕೇಳ್ಳೆಡಿಯದ್ದೇ ದೇವರೇ ಗತಿ, ಆ ದೇವರು ಕರುಣೆಂದ ಎನ್ನ ಬಡತನ ನಿವಾರುಸಿದರೆ ಊರಿಂಗೆ ಹೋಗಿ ಹೆಂಡತಿ ಮಕ್ಕಳೊಟ್ಟಿಂಗೆ ಬದುಕ್ಕುವದು. ಅದು ದೇವರಿಂಗೆ ಇಷ್ಟವಿಲ್ಲದ್ದರೆ ಇಲ್ಲೇ ಪ್ರಾಣ ಬಿಡುವದು ಹೇಳಿ, ದೇವರನ್ನೇ ಧ್ಯಾನ ಮಾಡ್ಯೊಂಡು ಇತ್ತಿದ್ದನಡ.
ಒಬ್ಬಂಗೆ ಕೈಲಿದ್ದ ಪೈಸೆ ಹೋದರೂ ತೊಂದರೆ ಇಲ್ಲೆ. ಆರೀಗ್ಯ ಸರಿ ಆಯೆಕ್ಕು ಹೇಳುವ ಆಶೆ. ಇನ್ನೊಬ್ಬಂಗೆ ಬಡತನಂದ ಪಾರುಮಾಡೆಕ್ಕು ಹೇಳುವ ಬೇಡಿಕೆ. ಎಲ್ಲ ಅವವು ಪಡಕ್ಕೊಂಡು ಬಂದದಲ್ಲದೋ? ಪೂರ್ವಜನ್ಮದ ಕರ್ಮಫಲ ಹೇಳಿ ಸುಮ್ಮನೆ ಕೂದವಿಲ್ಲೆ ಇಬ್ಬರುದೆ.

ಸುಖವೊ,ಕಷ್ಟವೋ ಎಲ್ಲವನ್ನೂ ಕೊಡುವೋನು ಅವ. ಅವನ ನಂಬ್ಯೊಂಡರೆ ಅವನೇ ಎಲ್ಲ ಸರಿಮಾಡುಗು ಹೇಳುವ ವಿಶ್ವಾಸ,ನಂಬಿಕೆ ಇದ್ದರೆ ಅವಂಗೆ ನಿವೃತ್ತಿ ಇದ್ದೋ?
ನಂಬಿದೋರಿಂಗೆ ಇಂಬು ಕೊಡುವೋನು ಅವ ಆಗಿಪ್ಪಗ ನಂಬಿದೋರ ಬಿಟ್ಟು ಹಾಕುಲೆ ಸಾಧ್ಯ ಇದ್ದೋ?
ಹೀಂಗೇ ಒಂದೆರಡು ತಿಂಗಳು ಕಳುದತ್ತು. ಇಬ್ರುದೇ ಅವರ ಭಕ್ತಿಯನ್ನೋ ಛಲವನ್ನೋ ಬಿಟ್ಟಿದವಿಲ್ಲೆ.

ಹೀಂಗಿಪ್ಪಗ ಒಂದು ದಿನ ಬಡವಂಗೆ ಒಂದು ಕನಸಡೊ. ಕನಸಿಲ್ಲಿ ಗುರುವಾಯೂರಪ್ಪನೇ ಕಂಡ ಹಾಂಗೆ, ಮತ್ತೆ ಅವನತ್ರೆ “ಎಂತ ನೋಡುತ್ತೆ. ಅದ ಅಲ್ಲಿ ಒಬ್ಬ ಅವನ ತಲೆ ಅಡಿಲ್ಲಿ ಪೈಸೆ ಕಟ್ಟವ ಮಡಿಕ್ಕೊಂಡು ಮನಿಗಿದ್ದಲ್ಲದೋ? ನೀನು ಹೋಗಿ ಮೆಲ್ಲಂಗೆ ಅವನ ತಲೆಯಡಿಂದ ಆ ಕಟ್ಟವ ತೆಕ್ಕೊಂಡು ಓಡಿ ಹೋಗು. ನಿನಗೆ ಪೈಸೆ ಅಲ್ಲದೊ ಬೇಕಾದ್ದು. ನಿನಗೆ ಬೇಕಾದಷ್ಟಿ ಪೈಸೆ ಆ ಕಟ್ಟಲ್ಲಿದ್ದು. ಅದರ ತೆಕ್ಕೊಂಡು ಓಡಿ ಹೋಗು ನಿನ್ನ ಮನಗೆ. ಮತ್ತಿದ್ದೆಲ್ಲ ಆನು ನೋಡಿಗೊಳ್ಳುತ್ತೆ” ಹೇಳಿದ ದೇವರೇ ಹೇಳಿದ ಹಾಂಗೆ ಆತಡೊ. ಮದಲು ಹಿಂದೆ ಮುಂದೆ ನೋಡ್ಯೊಂಡರೂ ಮತ್ತೆ ಮತ್ತೆ ಕನಸಿಲ್ಲಿ ದೇವರು ಕಾಣಿಸ್ಯೊಂಡು ಓಡಿ ಹೋಪಲೆ ಹೇಳಿದ ಹಾಂಗೆ ಕೇಳಿತ್ತಡೊ.
ಮತ್ತೆ ಸುಮ್ಮನೆ ಮನುಕ್ಕೊಂಡಿರದ್ದೆ ಹಾಂಗೇ ಮಾಡಿದಡೊ.
ಕಟ್ಟ ತೆಕ್ಕೊಂಡು ಓಡಿ ಹೋದಡೊ.

ಇದು ಸೌಖ್ಯ ಇಲ್ಲದೆ ಮನಿಕ್ಕೊಂಡಿದ್ದವಂಗೆ ಕಂಡತ್ತು. ತಡಮಾಡದ್ದೆ ಪೈಸೆ ಗಂಟು ಹೋದರೆ ಇನ್ನುದೆ ಅಲ್ಲಿ ನಿಲ್ಲೆಕ್ಕಾರೆ ಖರ್ಚಿಗೆ ಬೇಡದೋ? ಹೇಳಿ ಆಲೋಚನೆ ಮಾಡಿದ್ದೇ ಅವ ಕಟ್ಟ ತೆಕ್ಕೊಂಡು ಓಡಿಹೋದೋನ ಹಿಂದಂದ ಕಳ್ಳ ಕಳ್ಲ ಹೇಳ್ಯೊಂಡು ಓಡಿದಡೊ.
ಅವ ಸಿಕ್ಕುತ್ತನೋ? ಓಡಿದಡೊ ಓಡಿದಡೊ. ಎಲ್ಲಿ ವರೆಗೆ ಒಂದೆರಡು ಮೈಲು.
ಕಳ್ಳ ಸಿಕ್ಕಿದ್ದ ಇಲ್ಲೆ. ಅಂಬಗ ಅವಂಗೆ ಹೀಂಗೆ ಆಲೋಚನೆ ಬಂತು. ಏನೋ ತನ್ನ ಅನಾರೋಗ್ಯಂದ ನಡವಲೆಡಿಯದ್ದೋನು ಇಷ್ಟು ದೂರ ಓಡಿದ್ದು ಹೇಂಗೆ?
ಓಡುಲೆ ಎಡಿಗಾದ್ದು ಹೇಂಗೆ? ತನ್ನ ರೋಗ ವಾಸಿಯಾಗಿಯೇ ಹೋತೋ? ಈಗ ಗುಣವೆ ಆಗಿ ಹೋಯಿದೋ?

ರೋಗ ಗುಣ ಆದರೆ ತನ್ನ ಸರ್ವಸ್ವವನ್ನೂ ದೇವರಿಂಗೆ ಕೊಡುವದು ಹೇಳಿ ಸಂಕಲ್ಪ ಮಾಡ್ಯೊಂಡು ಇಲ್ಲಿ ಕೂದ್ದು.
ರೋಗ ಗುಣ ಆದ ಮೇಲೆ ಪೈಸೆ ಎನಗೆಂತಗೆ? ರೋಗ ಕೊಟ್ಟದು ದೇವರೇ. ಈಗ ಗುಣ ಮಾಡಿದ್ದೂ ಅವನೇ. ಹಾಂಗಾದರೆ ಇದೆಲ್ಲ ಅವಂದೇ ಲೀಲೆ ಆಯಿಕ್ಕು. ಇನ್ನು ಚಿಂತೆ ಮಾಡ್ಯೊಳ್ಳುತ್ತು ಎಂತಗೆ?

ರೋಗ ಗುಣ ಆದಲೆ ಇನ್ನು ದೇವರಿಂಗೆ ಕೈಮುಗುದು, ಅಡ್ಡ ಬಿದ್ದಿಕ್ಕಿ ಊರಿಂಗೆ ಹೋಪದೇ ಒಳ್ಳೆದು. ಅಂಬಗ ದೇವರೇ ಹೀಂಗೆಲ್ಲ ಆಟ ಆಡಿದ್ದು.ಹೇಳ್ಯೊಂದು,  ದೇವಸ್ಥಾನಕ್ಕೆ ಬಂದಡೋ.
ವಿಷಯವ ಅಲ್ಲಿದ್ದೋರತ್ರೆ ಹೇಳಿ ಅಪ್ಪಗ, ನಿನ್ನ ಆಲೋಚನೆ ಸರಿ, ನಿನ್ನ ಸಂಕಲ್ಪ ಈಡೇರಿತ್ತು. ಅವನ ಸಂಕಲ್ಪ ನೆರವೇರಿತ್ತು. ಎಲ್ಲವನ್ನೂ ಅವನೇ ಕೊಡೆಕ್ಕು ನಾವು ತೆಕ್ಕೊಳ್ಳೆಕ್ಕು.
ನಾವು ಹುಟ್ಟಿ ಬಪ್ಪಗ ಎಂತರನ್ನೂ ತೈಂದೂ ಇಲ್ಲೆ. ಹೋಪಗ ಕೊಂಡೋಪಲೂ ಇಲ್ಲೆ. ಕೆರೆಯ ನೀರಿನ ಕೆರೆಗೇ ಚೆಲ್ಲುವದಲ್ಲದೋ?

ದೈವ ಲೀಲೆಲ್ಲಿ ನಾವು ಒಂದೊಂದು ಪಾತ್ರ ತೆಕ್ಕೊಳ್ಳುತ್ತು. ಕೊಟ್ಟ ಪಾತ್ರವ ಮರ್ಯಾದೆಲ್ಲಿ ಅಭಿನಯಿಸಿದರೆ, ನ್ಯಾಯ ಮಾರ್ಗಲ್ಲಿದ್ದರೆ, ಅವನ ಸೃಷ್ಟಿಲ್ಲಿ ಅವನ ಸಂಕಲ್ಪ ಇದ್ದಂತೆ ನಡೆತ್ತು ಹೇಳುವುದಕ್ಕೆ ಇದೊಂದು ಉದಾಹರಣೆ!
ನಮ್ಮ ಕೈಂದ ನಷ್ಟ ಅಪ್ಪ ಕಾಲಕ್ಕೆ, ಆಗಿಹೋವ್ತು.
ಅದಕ್ಕೆ ಚಿಂತೆ ಮಾಡ್ಯೊಂಡು ಕೂದರೆ ಜೀವನ ರಥ ನಡಗೋ?

~*~*~

ಸುಬ್ಬಣ್ಣ ಭಟ್ಟ, ಬಾಳಿಕೆ

   

You may also like...

8 Responses

 1. jayashree.neeramoole says:

  ಹರೇ ರಾಮ

 2. ಚೆನ್ನೈ ಭಾವ says:

  ಅಪ್ಪು. , ಸಮ.

  ಶುದ್ದಿ ಕೊಶಿ ಆತು. ವಿಷಯವ ಪ್ರಸ್ತುತಪಡುಸುವ ಶೈಲಿ ಮಾವಂಗೆ ಒಲುದ ಒಳ್ಳೆ ಚಮತ್ಕಾರಿ ಕಲೆ. ಧನ್ಯವಾದಂಗೊ.

 3. ಗೋಪಾಲ ಬೊಳುಂಬು says:

  ಎಲ್ಲವುದೆ ಭಗವಂತನ ಲೀಲೆ. ಲಾಯಕಾಯಿದು.

 4. ಪುಟ್ಟಭಾವ ಹಾಲುಮಜಲು says:

  ಕಥೆ ಪಷ್ಟಾಯ್ದು!!

 5. ಮಾನೀರ್ ಮಾಣಿ says:

  ವಾಹ್ ವಾಹ್.. ಸುಬ್ಬಣ್ಣ ಭಟ್ರೇ . ಕಥೆ ಚೊಲೋ ಆಯ್ದು..
  ಭಗವದ್ಗೀತೆಯ “ಆದದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೇ, ಮುಂದಾಗುವುದೂ ಒಳ್ಳೆಯದೇ”
  ಪುರ೦ದರದಾಸರ “ಆದದ್ದೆಲ್ಲಾ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು”
  ಸಾಲುಗಳು ನಿಮ್ಮ ಕಥೆ ಓದಿ ನೆ೦ಪಾತು.. ಧನ್ಯವಾದ೦ಗೊ

 6. ರಘು ಮುಳಿಯ says:

  ಒಳ್ಳೆ ನೀತಿ, ಕಥೆ.
  ದೇವರು ಆಡಿಸಿದ ಹಾ೦ಗೆ ಆಡೊದು.ಅವ ಸೂತ್ರಧಾರ,ನಾವು ಪಾತ್ರಧಾರಿಗೊ.

 7. ತೆಕ್ಕುಂಜ ಕುಮಾರ ಮಾವ° says:

  ಕಥೆಯ ತಿರುಳು ಲಾಯಿಕಿದ್ದು, ಬರದ ಶೈಲಿಯಂತೂ ತುಂಬ ಕೊಶಿ ಆತು. ಒಂದು ಜಾನಪದ ನೀತಿ ಕತೆಯ ಓದಿದ ಹಾಂಗೆ ಆತು.

 8. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಕತೆ ಲಾಯಿಕಿದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *