Oppanna.com

ದೇವಿ ಬೀಸಿತ್ತು ಮಾಯದ ಬಲೆ,ತೂಗಿತ್ತದ ಉಯ್ಯಾಲೆ! – ದೇವಿ ಮಹಾತ್ಮೆ 05

ಬರದೋರು :   ಗೋಪಾಲಣ್ಣ    on   12/12/2011    12 ಒಪ್ಪಂಗೊ

ಗೋಪಾಲಣ್ಣ

<< ಹಿಂದಾಣ ಸಂಚಿಕೆ: ಮಹಿಷಾಸುರನ ಅವಸಾನ

ಮುಂದೆ ಓದಿ..

ದೇವಿ ಬೀಸಿತ್ತು ಮಾಯದ ಬಲೆ,ತೂಗಿತ್ತದ ಉಯ್ಯಾಲೆ! – ಉತ್ತಮ ಚರಿತಮ್-ಕಂತು ೧

ದೇವತೆಗಳ ಸಂತೋಷ ಯಾವಾಗಳೂ ಹೀಂಗೇ ಇತ್ತಿಲ್ಲೆ,ಮಹಿಷಾಸುರ ಹೋದ ಮೇಲೆ ಹಲವು ವರ್ಷ ಕಳೆದ ಮೇಲೆ ಶುಂಭ ನಿಶುಂಭ ಹೇಳಿ ಇಬ್ರು ರಕ್ಕಸರು ಹುಟ್ಟಿದವು.
ಶುಂಭ ಹಲವು ವರ್ಷ ಬ್ರಹ್ಮನ ತಪಸ್ಸು ಮಾಡಿದ. ಬ್ರಹ್ಮ ಒಲಿದ.
ತ್ರಿಮೂರ್ತಿಗಳೂ ಸೇರಿ ಏವ ಪುರುಷ ರೂಪಿಗಳಿಂದಲೂ ಎನಗೆ ಮರಣ ಬಪ್ಪಲೆ ಆಗ” ಹೇಳಿ ಶುಂಭ ಕೇಳಿದ- ಬ್ರಹ್ಮ ಒಪ್ಪಿದ.
ಶುಂಭಂಗೆ ವರ ಸಿಕ್ಕಿದ್ದು ಮಂಗಕ್ಕೆ ಕಳ್ಳು ಕುಡಿಸಿ ಕೈಲೊಂದು ಕೊಳ್ಳಿ ಕೊಟ್ಟ ಹಾಂಗಾತು.
ಅವ ದೇವಲೋಕಕ್ಕೆ ದಾಳಿ ಮಾಡಿದ. ದೇವೇಂದ್ರ ಸೋತು ಓಡಿದ. ಎಲ್ಲಾ ದೇವತೆಗಳೂ ಮನುಷ್ಯ ರೂಪಲ್ಲಿ ಭೂಮಿಲಿ ಸೇರಿದವು.
ಇಂದ್ರ “ದೇವತೆಗಳೇ,ಮಹಿಷನ ಅವಸಾನದ ಮತ್ತೆ ದೇವಿ ಪಾರ್ವತಿಯ ದೇಹ ಸೇರಿ ಭದ್ರಕಾಳಿ ರೂಪಲ್ಲಿ ಹಿಮಾಲಯಲ್ಲಿ ಇದ್ದು ನಾವು ಅದರ ಹತ್ತರೆ ಕಷ್ಟವ ಹೇಳಿಕೊಂಬೊ.ಎಂತಗೆ ಹೇಳಿದರೆ,ನಮ್ಮ ಕಷ್ಟಕಾಲಲ್ಲಿ ಬಂದು ಕಾಪಾಡುವೆ-ಹೇಳಿ ಆ ಜಗನ್ಮಾತೆ ನಮಗೆ ಅಭಯ ಕೊಟ್ಟಿದನ್ನೆ?” ಹೇಳಿದ.
ಎಲ್ಲಾ ದೇವತೆಗಳೂ ಹಿಮಾಲಯಕ್ಕೆ ಬಂದು ದೇವಿಯ ಸ್ತೋತ್ರ ಮಾಡಿದವು.-” ಮಹಾದೇವಿ, ಶಿವೇ, ಯಾವ ದೇವಿ ಈ ಲೋಕದ ಸಮಸ್ತ ಜೀವರಾಶಿಲೂ ತಾಯಿ, ಶಾಂತಿ, ವಿಷ್ಣುಮಾಯೆ ಹೇಳಿ ಎಲ್ಲ ಕರೆಯಲ್ಪಡುತ್ತೋ ಅಂತಾ ದೇವಿಗೆ ನಮಸ್ಕಾರ…ಎಂಗಳ ಕಾಪಾಡು..”
[ಈ ಸ್ತೋತ್ರ ತುಂಬಾ ಚೆಂದ ಇದ್ದು. ಬಹಳ ಅರ್ಥಪೂರ್ಣ ಆಗಿಯೂ ಇದ್ದು.ಅದರ ಅಪರಾಜಿತಾ ಸ್ತೋತ್ರ ಹೇಳಿ ಹೇಳುತ್ತವು].

ಪಾರ್ವತಿದೇವಿ ಸ್ನಾನಕ್ಕೆ ಹೆರಟವಳು ಪ್ರತ್ಯಕ್ಷ ಆಗಿ ಕೇಳಿತ್ತು- “ನಿಂಗೊ ಆರ ಸ್ತುತಿ ಮಾಡಿದ್ದು? ಹೇಳಿ!” [ಅಬ್ಬೆ ಮಕ್ಕಳ ಹತ್ತರೆ ಕುಶಾಲು ಮಾಡುದು!]
ಆಗ ಅದರ ಶರೀರಂದ ಬೇರ್ಪಟ್ಟ ಇನ್ನೊಂದು ದೇವಿ ಹೇಳಿತ್ತು-“ಅವು ಎನ್ನ ಸ್ತುತಿ ಮಾಡಿದ್ದು.”
ಪಾರ್ವತಿಯ ಶರೀರಂದ ಹೆರ ಬಂದ ಅಂಬಿಕೆ, ಕೌಶಿಕೀ ರೂಪವೇ ಕೃಷ್ಣಾ, ಕಾಳೀ ಹೇಳಿ ಕರೆಯಲ್ಪಟ್ಟತ್ತು. ಪಾರ್ವತಿ ರೂಪ ಕೈಲಾಸಕ್ಕೆ ಹೋತು.
ಕಾಳಿ ವಾತ್ಸಲ್ಯಂದ “ದೇವತೆಗಳೇ, ಹೆದರೆಡಿ, ನಿಂಗೊ ಭಗವತ್ಸೇವೆ ಮಾಡಿಕೊಂಡು ಆರಾಮ ಆಗಿರಿ. ಆನು ನಿಂಗೊಗೆ ಬಂದ ಕಷ್ಟ ಪರಿಹಾರ ಮಾಡಿಕೊಡುತ್ತೆ. ಶುಂಭಾದಿ ರಕ್ಕಸರ ಕೊಲ್ಲುತ್ತೆ” ಹೇಳಿ ಅಭಯ ಕೊಟ್ಟತ್ತು.

ಇಷ್ಟು ಹೇಳಿ ದೇವಿ ಹಿಮಾಲಯದ ತಪ್ಪಲಿಲಿ ಕದಂಬ ವನಲ್ಲಿ ಮರಲ್ಲಿ ಉಯ್ಯಾಲಿನ ಮೇಲೆ ಅತ್ಯಂತ ಸುಂದರವಾದ ಸ್ತ್ರೀ ರೂಪಲ್ಲಿ ಕೂದೊಂಡು ತೂಗಿಯೊಂಡತ್ತು.
ಚೆಂದಕೆ ಹಾಡು ಹಾಡುಲೆ ಸುರು ಮಾಡಿತ್ತು. ಲೋಕದ ಜನಂಗೊ ಆ ಸಂಗೀತವ ಕೇಳಿ ಮಂತ್ರ ಮುಗ್ಧ ಆದವು.
ಶುಂಭಾಸುರನ ಸೇವಕರಾದ ಚಂಡ ಮುಂಡರು ಹೇಳುವ ರಕ್ಕಸರು ಈ ವಿಚಿತ್ರವ ನೋಡಿ, ಒಡೆಯಂಗೆ ಈ ವಿಷಯ ಹೇಳಿದವು. “ನಿನ್ನ ಹತ್ತರೆ ಈ ಜಗತ್ತಿನ ಎಲ್ಲಾ ಸುವಸ್ತುಗಳೂ ಇದ್ದು. ಹಾಂಗಾಗಿ ಆ ಹೆಣ್ಣು ನಿನಗೆ ಸೇರೆಕಾದ್ದು, ನೀನು ಅದರ ಮದುವೆ ಆಯೆಕ್ಕು..” ಹೇಳಿ ಹೇಳಿದವು.

ಆಸೆ ಪಟ್ಟ ಶುಂಭ ತನ್ನ ಮಂತ್ರಿಯಾದ ಸುಗ್ರೀವನ ಹತ್ತರೆ “ಮಿತ್ರಾ, ಈಗಲೇ ಹೋಗು. ಆ ಸುಂದರಿಯ ಪರಿಚಯ ಮಾಡಿಕೊ. ಅದರ ಇಲ್ಲಿಗೆ ಕರಕ್ಕೊಂಡು ಬಾ. ಎನಗೆ ಅದರ ಪಡೆಯೆಕು ಹೇಳಿ ಕಾಣುತ್ತು” ಹೇಳಿ ನೇಮಿಸಿದ.
ರಾಜನ ಅಪ್ಪಣೆ ಪ್ರಕಾರ ಹಿಮಾಲಯಕ್ಕೆ ಹೋದ ಸುಗ್ರೀವ ಆ ಸ್ತ್ರೀಯ ಕಂಡು ಆಶ್ಚರ್ಯ ಪಟ್ಟ.
ಎನ್ನ ಒಡೆಯಂಗೆ ಸಿಕ್ಕುವ ಹೆಣ್ಣು ಇದಲ್ಲ ಹೇಳಿ ಕಂಡರೂ,ಮಾತನಾಡಿಸಿದ. “ಎಲೆ ಕೂಸೇ,ನೀನು ಆರು?ಈ ಕಾಡಿಲಿ ಒಬ್ಬನೇ ಕೂದು ಉಯ್ಯಾಲಾಡುದೆಂತಗೆ? ನೀನು ಸುಂದರಿ .ಅಬ್ಬೋ,ನೀನು ಈ ಕಾಡಿಲಿ ಒಬ್ಬನೇ ಇಪ್ಪದು ಸರಿ ಅಲ್ಲ.ಆನು ಶುಂಭಾಸುರನ ಮಂತ್ರಿ ಸುಗ್ರೀವ. ನಿನಗೆ ಎನ್ನ ರಾಜ ಎಂತವ ಹೇಳಿ ಗೊಂತಿದ್ದೊ? ಅವನ ತಮ್ಮ ನಿಶುಂಭನ ಬಗ್ಗೆ ಅರಡಿಗೊ? ಶುಂಭ ದೊಡ್ಡ ವೀರ, ರೂಪವಂತ, ತ್ರಿಲೋಕಾಧಿಪತಿ. ಈ ಜಗತ್ತೆಲ್ಲ ಅವನದ್ದೇ, ಇಲ್ಲಿಪ್ಪ ಎಲ್ಲಾ ರತ್ನಂಗೊ ಅವಂದು! ಹಾಂಗೆ ಸ್ತ್ರೀ ರತ್ನವಾದ ನೀನೂ ಕೂಡಾ! ನಿನ್ನ ಸೌಂದರ್ಯವ ಸೇವಕರ ಬಾಯಿಂದ ಕೇಳಿ ಅವ ತಿಳಿದ್ದ. ನಿನ್ನ ಮದುವೆ ಅಪ್ಪಲೆ ಆಸೆ ಹೊಂದಿದ್ದ. ಹಾಂಗಾಗಿ ಎನ್ನ ಕಳಿಸಿದ್ದ. ನೀನು ಎನ್ನೊಟ್ಟಿಂಗೆ ಬಾ, ಶುಂಭನ ಕೈ ಹಿಡಿದು ರಾಣಿಯಾಗಿ, ಸುಖವಾಗಿ ಬಾಳು..” ಹೇಳಿ ಹೇಳಿದ.
ದೇವಿ ನೆಗೆ ಮಾಡಿತ್ತು. “ಸುಗ್ರೀವ,ನೀನು ಹೇಳುದು ಸರಿ. ಶುಂಭ ನಿಶುಂಭರು ದೊಡ್ಡ ವೀರರೇ! ಶುಂಭ ಆಗಲಿ, ಅವನ ತಮ್ಮ ನಿಶುಂಭ ಆಗಲಿ, ಎಂತಾ ಶೂರನೇ ಆಗಲಿ. ಆರೇ ಆದರೂ ಅವು ಎನ್ನ ಯುದ್ಧಲ್ಲಿ ಸೋಲಿಸೆಕು. ಅಂತವನ ಆನು ಮದುವೆ ಆವುತ್ತೆ” ಹೇಳಿ ಹೇಳಿತ್ತು. ಸುಗ್ರೀವ ದೇವಿಯ ಹೆದರಿಸಲೆ ಬೇಕಾಗಿ, “ಶುಂಭ ಬಂದು ನಿನ್ನ ಎಳಕ್ಕೊಂಡು ಹೋಕು. ನೀನು ಒಳ್ಳೆ ಮಾತಿಲಿ ಬಾ..” ಹೇಳಿದ. ದೇವಿ ಒಪ್ಪದ್ದೆ ಇಪ್ಪಾಗ ಸುಗ್ರೀವ ಶುಂಭನ ಹತ್ತರೆ ಹೋಗಿ ವಿಷಯ ತಿಳಿಸಿದ.

ಕಾಮಂದಲೂ ಕ್ರೋಧಂದಲೂ ತುಂಬಿಹೋದ ಶುಂಭ ಮೋಹಪೀಡಿತನಾದ,ಮರುಳನೇ ಆದ.
ಧೂಮ್ರಾಕ್ಷ ಹೇಳುವ ಭಯಂಕರ ರಕ್ಕಸನ ದಿನುಗೋಳಿ “ಹೋಗು,ಆ ದಗಣೆಯ ತಲೆಯ ಜುಟ್ಟು ಹಿಡಿದು ಎಳಕ್ಕೊಂಡು ಬಾ…”ಹೇಳಿ ಆಜ್ಞೆ ಕೊಟ್ಟ.
ಧೂಮ್ರಾಕ್ಷ ದೊಡ್ಡ ಸೈನ್ಯ ಸಂಗ್ರಹ ಮಾಡಿ ಯುದ್ಧಕ್ಕೆ ಹೆರಟ.

ಇನ್ನೂ ಇದ್ದು…>>

~*~*~*~

ಸೂ: ದೇವಿಮಹಾತ್ಮೆಯ ಹಿಂದಾಣ ಕಂತುಗೊ:

ನಿಂಗಳೂ ಓದಿ, ನಿಂಗಳ ಮಕ್ಕೊಗೂ ಕತೆ ಹೇಳಿ…

12 thoughts on “ದೇವಿ ಬೀಸಿತ್ತು ಮಾಯದ ಬಲೆ,ತೂಗಿತ್ತದ ಉಯ್ಯಾಲೆ! – ದೇವಿ ಮಹಾತ್ಮೆ 05

  1. ಗೋಪಾಲಣ್ಣಾ..,
    ಯಾವ ಸಂತೋಷವೂ ಶಾಶ್ವತ ಅಲ್ಲ ಅಲ್ಲದಾ?

    ನಿಂಗೋ ಹೇಳಿದ ಅಪರಾಜಿತಾ ಸ್ತೋತ್ರದ ಬಗ್ಗೆ ಮಾಹಿತಿ ಸಿಕ್ಕುತ್ತಾ ನೋಡ್ತೆ ಗೋಪಾಲಣ್ಣ.
    ಆನು ಕೇಳಿದ್ದಿಲ್ಲೇ ಇದುವರೆಗೆ!!! ಧನ್ಯವಾದ ಒಂದು ಮಾಹಿತಿಗೆ!!!
    ಅಬ್ಬೆ ನಮ್ಮ ಮಾಯದ ಬಲೆಲಿ ಸಿಕ್ಕುಸಿ ಹಾಕುತ್ತು.. ನಮ್ಮ ವಿವೇಚನಾ ಶಕ್ತಿಯ ಅಬ್ಬೆಯೇ ಜಾಗೃತ ಮಾಡುದು. ಬುದ್ಧಿ ಜಾಗೃತ ಆಯೆಕ್ಕಾದರೆ ಅಬ್ಬೆಯ ನಾವು ನಿತ್ಯ ನೆನೆಯೆಕ್ಕು ಅಲ್ಲದೋ?

    ಲಾಯಕ ಆಯಿದು.. ಶುಂಭ ನಿಶುಂಭರ ಜಾಗೆಯವರೆಗೆ ಆದ ಅಬ್ಬೆಯ ಕತೆ!!
    ಧನ್ಯವಾದ.

  2. ದೇವಿಯ ನೆಗೆಗೆ ಸುಗ್ರೀವ ಬೋಧ ತಪ್ಪಿ ಬೀಳುವ ಸನ್ನಿವೇಶ ಆಟಲ್ಲಿ ನೋಡಿದ್ದು ನೆ೦ಪಾತು.ಚೆ೦ದದ ವರ್ಣನೆ.
    ಅಪರಾಜಿತಾ ಸ್ತೋತ್ರಃ
    ಯಾ ದೇವೀ ಸರ್ವಭೂತೇಶು… ಇದೇ ಅಲ್ಲದೋ ಗೋಪಾಲಣ್ಣ?

  3. ಗೋಪಾಲಣ್ಣಾ, ಕತೆಯ ವಿವರಣೆ ಲಾಯಿಕಾಯಿದು ಹೇಳಿ ಒಂದೊಪ್ಪ
    (ಮಂಗಕ್ಕೆ ಕಳ್ಳು ಕುಡಿಸಿ ಕೈಲೊಂದು ಕೊಳ್ಳಿ ಕೊಟ್ಟ ಹಾಂಗಾತು)
    ಇದು ವರ್ಣನೆ ಮಾತ್ರವೋ ಅಲ್ಲಾ ಆರಾರು ಮಾಡಿ ನೋಡಿದ್ದದೋ…….?

  4. ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ
    ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಮ್ ||

    ಕಥೆ ನಿರೂಪಣೆ ಲಾಯಕ ಆಯ್ದು ಗೋಪಾಲಣ್ಣ.

  5. ಬೈಲಿಲ್ಲಿ ಗೋಪಾಲಣ್ಣ ಕೊಡ್ತಾ ಇಪ್ಪ ದೇವಿ ಮಹಾತ್ಮೆ ಕಥಾ ನಿರೂಪಣೆ ಲಾಯಕಲ್ಲಿ ಬತ್ತಾ ಇದ್ದು. ಧನ್ಯವಾದಂಗೊ.

    ಮನ್ನೆ ಶನಿವಾರ ಇರುಳು ರಾಮಚಂದ್ರಾಪುರ ಮಠದ ಮೇಳದ “ದೇವಿ ಮಹಾತ್ಮೆ” ಬಯಲಾಟ ನಂತೂರು ಭಾರತೀ ಕಾಲೇಜಿಲ್ಲಿ ನೆಡದತ್ತು. ಇದರಿಂದ ಕಾಲೇಜಿನವಕ್ಕ್ಸೆ, ಹವ್ಯಕ ಸಭೆಯವಕ್ಕೆ ಎಲ್ಲೋರಿಂಗುದೆ ಇರುಳಿಡಿ ಒಂದೊಳ್ಳೆ ಆಟ ನೋಡುತ್ತ ಸೌಭಾಗ್ಯ ಸಿಕ್ಕಿತ್ತು. ಚಂದ್ರ ಗ್ರಹಣ ಕಳುದು ಬಂದಂತಹ ಎಲ್ಲೋರಿಂಗು ಹೊಟ್ಟೆ ತುಂಬಾ ಊಟದೊಟ್ಟಿಂಗೆ ಭರ್ಜರಿ ಬಯಲಾಟ. ಉದಿ ವರೆಗೆ ಆಟ ನೋಡಿದವರಲ್ಲಿ ಆನುದೆ ಒಬ್ಬ (ತುಂಬಾ ವರ್ಷಂಗಳ ನಂತರ ಆನು ನೋಡಿದ್ದು). ಮನ್ನೇಣ ಆಟಲ್ಲಿ ರಕ್ತಬೀಜಾಸುರನುದೆ, ಸುಗ್ರೀವನುದೆ ಶುಂಭಾಸುರಂಗೆ ಬುದ್ದಿವಾದ ಹೇಳಲೆ ಇತ್ತು. ಆಟಲ್ಲಿ ಮಾಲಿನಿಯ ಮದುವೆ ಮಾಡ್ಳೆ ಬಂದ ಬಟ್ರದ್ದು ರಜಾ ಅತಿರೇಕ ಆತು ಹೇಳಿ ಅನಿಸಿತ್ತು. ಪಾತಾಳದವರ ದೇವಿ ಎನಗೆ ಕುಶಿ ಕೊಟ್ಟತ್ತು. ಹೆಚ್ಚಿನ ವಿಮರ್ಶೆ ಬಲ್ಲವು ಹೇಳೆಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×