Oppanna.com

ದೇವೀ ಮಹಾತ್ಮೆ: ಮಧು ಕೈಟಭರ ಅಂತ್ಯ

ಬರದೋರು :   ಗೋಪಾಲಣ್ಣ    on   21/11/2011    9 ಒಪ್ಪಂಗೊ

ಗೋಪಾಲಣ್ಣ

ಗೋಪಾಲಣ್ಣ ಬೈಲಿನ ಮಕ್ಕೊಗೆ (ದೊಡ್ಡವಕ್ಕೂ) ಹೇಳ್ತ ದೇವಿಮಹಾತ್ಮೆ ಕತೆಯ ಮುಂದಾಣ ಕಂತು.
ಹಿಂದಾಣ ಸಂಚಿಕೆ ಇಲ್ಲಿದ್ದು:

ಕತೆ ಕೇಳಿ, ನಿಂಗಳ ನೆರೆಕರೆಯೋರಿಂಗೆ ತಿಳುಶಿ.

ದೇವಿ ಮಹಾತ್ಮೆ: ಪ್ರಥಮ ಭಾಗ-ಪ್ರಥಮ ಚರಿತಮ್:

ಪ್ರಳಯಕಾಲಲ್ಲಿ, ಸುತ್ತಲೂ ತುಂಬಿದ ಕಡಲಿನ ಜಲರಾಶಿಯ ಮೇಗೆಂದ ಇಪ್ಪ ಒಂದು ಗೋಳಿಸೊಪ್ಪಿನ ಮೇಲೆ ಮಹಾವಿಷ್ಣು ಯೋಗನಿದ್ರೆಲಿ ಇತ್ತಿದ್ದ.
ಅವನ ಹೊಕ್ಕುಳಿಂದ ಒಂದು ತಾವರೆ ಹುಟ್ಟಿ ಬಂತು, ಅದರೊಳ ಬ್ರಹ್ಮದೇವ ಜನಿಸಿದ.
ಸುತ್ತಲೂ ನೀರೇ ತುಂಬಿದ್ದು. ಯಾವ ಸಸ್ಯಂಗಳೂ ಪ್ರಾಣಿಗಳೂ ಇಲ್ಲೆ.
ಇಡೀ ವಿಶ್ವ ಆದಿಮಾಯೆಯ ಪ್ರಭಾವಂದಾಗಿ ಯೋಗನಿದ್ರೆಲಿ ಇದ್ದ ಹಾಂಗೆ ಇತ್ತು!
ಬ್ರಹ್ಮದೇವ ನಾರಾಯಣನನ್ನೂ, ಆದಿಮಾಯೆಯನ್ನೂ ಧ್ಯಾನಿಸಿಕೊಂಡು ತಪಸ್ಸು ಮಾಡಿಕೊಂಡು ಇತ್ತಿದ್ದ.

ಅದೇ ಸಮಯಲ್ಲಿ ವಿಷ್ಣು ತನ್ನ ಕೆಮಿಂದ ಗುಗ್ಗೆ ತೆಗೆದ, ನೀರಿಂಗೆ ಇಡುಕ್ಕಿದ.
ಅದ,ಎರಡು ಭಾರೀ ಶರೀರದ ರಕ್ಕಸಂಗೊ ಹುಟ್ಟಿಕೊಂಡವು.  ಅವ್ವೇ ಮಧು ಕೈಟಭರು.
ಅವು ಆ ನೀರಿನ ಅಲ್ಲೋಲ ಕಲ್ಲೋಲ ಮಾಡಿದವು.
ಅವಕ್ಕೆ ಹಶು ಆತು,ಬ್ರಹ್ಮನ ತಿಂಬಲೆ ಬಂದವು. ಬ್ರಹ್ಮ ಆದಿಮಾಯೆಯ ಪ್ರಾರ್ಥಿಸಿದ-“ಹೇ ಆದಿಮಾಯೆ, ನಿನ್ನ ಪ್ರಭಾವ ಎಲ್ಲಾ ವಿಶ್ವವ ತುಂಬಿದ್ದು. ನಿನ್ನ ಮಗನಾದ ಎನ್ನ ಕಾಪಾಡುವ ಭಾರ ನಿನ್ನದು ಅಮ್ಮಾ…..“.

ಬ್ರಹ್ಮನ ಆರ್ತನಾದ ಆದಿಮಾಯೆಯ ಕರುಳು ಕರಗಿಸಿತ್ತು.
ನಾರಾಯಣನಲ್ಲಿ ಸಮಾವೇಶ ಆಗಿದ್ದಿದ್ದ ಯೋಗಮಾಯೆಯ ಹಿಂತೆಕ್ಕೊಂಡು ಅವ ಎದ್ದು ಅಸುರರ ನಾಶ ಮಾಡುಲೆ ಅನುಕೂಲ ಮಾಡಿ ಕೊಟ್ಟತ್ತು.
ಮಹಾವಿಷ್ಣು ಯೋಗನಿದ್ರೆಂದ ಎದ್ದ, ರಾಕ್ಷಸರ ಎದುರು ಬಂದ, ಯುದ್ಧ ಹಲವು ಸಾವಿರ ವರ್ಷ ಸಾಗಿತ್ತು.
ಮಧು-ಕೈಟಭರು ಸೋತಿದವಿಲ್ಲೆ. ಈಗ ಮಹಾವಿಷ್ಣು ಒಂದು ಉಪಾಯ ಮಾಡಿದ.

ಮಹಾವಿಷ್ಣು ಹೇಳಿದ-“ವೀರರೇ, ನಿಂಗಳ ಶೌರ್ಯಕ್ಕೆ ಆನು ಮೆಚ್ಚಿದ್ದೆ. ನಿಂಗೊಗೆ ಇಷ್ಟ ಇಪ್ಪ ವರವ ಕೇಳಿದರೆ, ಆನು ಕೊಡುವೆ-ಕೇಳಿ“.
ಅಸುರರ ಪಿತ್ತ ಕೆದರಿತ್ತು.
“ಏ ದುರಹಂಕಾರಿಯೇ, ನಿನ್ನ ಮಾತಿಂಗೆ ಅರ್ಥವೇ ಇಲ್ಲೆ. ಈ ಯುದ್ಧಲ್ಲಿ ಗೆದ್ದದು ಆರು? ಎಂಗೊ! ವರ ನೀನು ಕೊಡುದೊ? ನಿನ್ನೊಟ್ಟಿಂಗೆ ಮುಖಾಮುಖಿಯಾಗಿ ಗೆದ್ದ ಎಂಗೊಗೆ, ನೀನು ಅವಮಾನ ಮಾಡುತ್ತೆಯೊ? ಸೋತವು ಗೆದ್ದವಕ್ಕೆ ವರ ಕೊಡುವ ಕ್ರಮ ಸರಿಯೊ?
ಏ….ಅಲ್ಪಮತಿಯೇ, ನೀನು ಸೋತೆ..ನೀನು ಎಂಗಳ ಹತ್ತರೆ ವರ ಕೇಳು, ಎಂಗೊ ಕೊಡುತ್ತೆಯೊಂ…
” – ಹೇಳಿ ಬೊಬ್ಬೆ ಹಾಕಿದವು.

ಮಹಾವಿಷ್ಣುಗೆ ಬೇಕಾದ್ದೂ ಅದೇ.

ಅವ ನೆಗೆ ಮಾಡಿಂಡು-“ಆತಂಬಗ….ನಿಂಗೊ ಹೇಳಿದ ಮಾತು ಸರಿ ಇದ್ದು. ಆನೇ ಸೋತದು, ನಿಂಗೊ ಗೆದ್ದೋರು. ನಿಂಗಳ ಹತ್ತರೆ ಆನು ಒಂದೇ ವರ ಕೇಳುದು…ಅದು ಎಂತ ಹೇಳಿರೆ, ನಿಂಗಳ ಪ್ರಾಣವನ್ನೇ ಎನಗೆ ವರ ಆಗಿ ಕೊಡಿ” ಹೇಳಿ ಕೇಳಿದ.
ಕಾರ್ಯ ಕೆಟ್ಟತ್ತು!
ಮಧು ಕೈಟಭರು ಕೋಪಿಸಿ ಹಾರಾಡಿದವು, ನಾವಾಗಿಯೇ ಸೋತೆವನ್ನೆ, ಹೇಳಿ ತಲೆಗೆ ಬಡ್ಕೊಂಡವು.
ಮೂಲೆಲಿ ಇದ್ದ ಮಡುವ ಕಾಲಿಂಗೆ ಬಲುಗಿ ಹಾಕಿಕೊಂಡ ಹಾಂಗೆ ಆತು.

ಆದರೂ ಆ ಧೂರ್ತರು-“ಹೇ ಮಹಾಮಹಿಮ, ನಿನ್ನ ಉಪಾಯಕ್ಕೆ ಎಂಗೊ ಸೋತೆಯೊ. ಆಗಲಿ,ನೀನು ಒಂದು ಉಪಕಾರ ಮಾಡುವಿಯೊ? ನೀರಿಲ್ಲದ್ದಲ್ಲಿ ಎಂಗಳ ಕೊಲ್ಲು, ಆಗದೊ?” ಹೇಳಿ ಹೇಳಿದವು.
ಆಗಲಿ-ಹೇಳಿದ ಮಹಾವಿಷ್ಣು ಅವರ ತನ್ನ ತೊಡೆಯ ಮೇಲೆ ಮನಿಶಿಯೊಂಡು ಪ್ರಾಣ ತೆಗೆದ.
ಅವರ ಚರ್ಮವ ಸಮುದ್ರದ ಮೇಲೆ ಹರಗಿದ,ಭೂಮಿಯನ್ನಾಗಿ ಮಾಡಿದ.

ಆದಿಮಾಯೆ ರಾಜಸ ಗುಣದ ಪ್ರತಿನಿಧಿಯಾದ ಬ್ರಹ್ಮಂಗೆ ಸೃಷ್ಟಿ ಕಾರ್ಯವ, ಸತ್ತ್ವಗುಣದ ಪ್ರತಿನಿಧಿಯಾದ ವಿಷ್ಣುಗೆ ಸ್ಥಿತಿ[ಪಾಲನೆ] ಯ ಕಾರ್ಯವ, ತಮೋಗುಣದ ಪ್ರತಿನಿಧಿಯಾದ ಶಿವಂಗೆ ಲಯ ಕಾರ್ಯವ ವಹಿಸಿ ಅಂತರ್ಧಾನ ಆತು.

~*~*~*~

9 thoughts on “ದೇವೀ ಮಹಾತ್ಮೆ: ಮಧು ಕೈಟಭರ ಅಂತ್ಯ

  1. ಕಷ್ಟ ಕಾಲಲ್ಲಿ ಅಬ್ಬೆಯ ಮನಸಾ ನೆನೆಸಿದರೆ ಆ ಕಷ್ಟಂಗಳ ಅಬ್ಬೆ ಪರಿಹಾರ ಮಾಡಿಯೇ ಮಾಡುತ್ತು ಅಲ್ಲದಾ?
    ಮಧು ಕೈಟಭ ರಿಂಗೆ ಅವರ ವಿನಾಶ ಕಾಲಲ್ಲಿ ವಿಪರೀತ ಬುದ್ಧಿ ಬಂದು ಅವರ ಪ್ರಾಣವ ಅವರ ಕೈಯ್ಯಾರೆ ಕೊಟ್ಟ ಹಾಂಗೆ ಆತು ಅಪ್ಪೋ?
    ಅದನ್ನೇ ಅಲ್ಲದ ಹಿರಿಯೋರು ಹೇಳುದು ಯಾವ ಸಮಯ ಬಂದರೂ ಧೃತಿ ಕಳಕ್ಕೊಂಬಲೆ ಆಗ ಹೇಳಿ!!!

    [ಆದಿಮಾಯೆ ರಾಜಸ ಗುಣದ ಪ್ರತಿನಿಧಿಯಾದ ಬ್ರಹ್ಮಂಗೆ ಸೃಷ್ಟಿ ಕಾರ್ಯವ, ಸತ್ತ್ವಗುಣದ ಪ್ರತಿನಿಧಿಯಾದ ವಿಷ್ಣುಗೆ ಸ್ಥಿತಿ[ಪಾಲನೆ] ಯ ಕಾರ್ಯವ, ತಮೋಗುಣದ ಪ್ರತಿನಿಧಿಯಾದ ಶಿವಂಗೆ ಲಯ ಕಾರ್ಯವ ವಹಿಸಿ ]
    ಈ ವಿವರಣೆ ಲಾಯಕಾಯಿದು.

    ಧನ್ಯವಾದ ಗೋಪಾಲಣ್ಣ.

  2. ಸರಿ,ಆ ಕತೆ ಸಪ್ತಶತಿಲಿ ಇಲ್ಲೆ.
    ದೇವಿದಾಸ ವಿರಚಿತ ದೇವಿಮಹಾತ್ಮೆ ಪ್ರಸಂಗ ಭಾರೀ ಲಾಯಿಕಿದ್ದು.
    ಇನ್ನಾಣ ಕಂತಿಲಿ ರಜಾ ಅದರ ಸೇರಿಸಿ ಬರೆತ್ತೆ.

  3. ನಾವು ಆಟಲ್ಲಿ ನೋಡೊದು ರಜಾ ವೆತ್ಯಾಸ ಇದ್ದಲ್ಲದೋ,ಗೋಪಾಲಣ್ಣಾ?
    ಬ್ರಹ್ಮ ಮತ್ತೆ ವಿಷ್ಣುವಿನ ನೆಡುಕೆ ಆರು ಶ್ರೇಷ್ಟ ಹೇಳಿ ಚರ್ಚೆ ನಡೆತ್ತ ಸ೦ಗತಿ ಕ೦ಡತ್ತಿಲ್ಲೆ.ಮೂಲಕತೆಲಿ ಇಲ್ಲೆಯೋ?

    1. ಆನುದೆ ಅದನ್ನೆ ಯೋಚನೆ ಮಾಡಿಂದು ಇದ್ದದು…. ಶಿವ ವಿಷ್ಣುವಿಂಗೆ “ಆನುದೆ ನೀನುದೆ ಒಂದೆ” ಹೇಳುದು, ಬ್ರಹ್ಮಂಗು ವಿಷ್ಣುಗು ಚರ್ಚೆ ಅಪ್ಪದು… ಇದೆಲ್ಲ ಇದ್ದಲ್ಲದಾ?

  4. ಗೋಪಾಲಣ್ಣ ಕಥೆ ರೈಸಿದ್ದು ಆತೋ…
    ಹೀಂಗೆ ಬರಲಿ ಕಥೆಗೊ

  5. ಹರೇ ರಾಮ ಗೋಪಾಲಣ್ಣ,
    ಸರಳ ಸುಂದರವಾಗಿ ಮೂಡಿಬಂದ ದೆವೀಮಹಾತ್ಮೆಯ ಪ್ರಥಮಭಾಗ ಓದಿ ಖುಷಿ ಆತು… ಮುಂದಿನ ಭಾಗದ ನಿರೀಕ್ಷೆಲ್ಲಿ ಇದ್ದೆಯಾ…

  6. ಗೋಪಾಲಣ್ಣ.. ದೇವೀಮಹಾತ್ಮೆ ರೈಸುತ್ತಾ ಇದ್ದು. ಹೀಂಗೇ ಮುಂದುವರಿಯಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×