ಮಹಿಷಾಸುರನ ಉತ್ಪತ್ತಿ, ವಿಕ್ರಮ : ದೇವೀ ಮಹಾತ್ಮೆ

November 28, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗೋಪಾಲಣ್ಣ ಹೇಳ್ತ ದೇವಿಮಹಾತ್ಮೆಯ ಹಿಂದಾಣ ಕಂತುಗೊ:

ದೇವಿ ಮಹಾತ್ಮೆ : ಆರಂಭ
ಮಧು ಕೈಟಭರ ಅಂತ್ಯ

ಮುಂದಾಣ ಕಂತು ಇಲ್ಲಿದ್ದು..

ಮಧ್ಯಮಚರಿತಮ್ [ಭಾಗ 1] : ಮಹಿಷಾಸುರನ ಉತ್ಪತ್ತಿ,ವಿಕ್ರಮ :

ಕಶ್ಯಪ ಋಷಿಯ ಹೆಂಡತಿಯಕ್ಕೊ ದಿತಿ ಮತ್ತೆ ಅದಿತಿ ಹೇಳಿ ಇದ್ದಿದ್ದವು.
ಅವಕ್ಕೆ ಹುಟ್ಟಿದ ಸಂತಾನ ಬೇರೆ ಬೇರೆ ರೀತಿದು.
ದಿತಿಗೆ ರಾಕ್ಷಸರು ಮಕ್ಕಳಾಗಿ ಹುಟ್ಟಿದವು; ಅದಿತಿಗೆ ದೇವತೆಗೊ ಮಕ್ಕಳಾಗಿ ಹುಟ್ಟಿದವು.

ದೇವತೆಗೊ ದೈವಾನುಗ್ರಹಂದ ರಾಕ್ಷಸರ  ಜೈಸಿ, ತ್ರಿಲೋಕಂಗಳಲ್ಲಿಯೂ ತಮ್ಮ ಪರಾಕ್ರಮವ ಮೆರೆಸಿ, ಹೆಸರು ಪಡೆದವು.
ಪುತ್ರಶೋಕಂದಲೂ, ಅವಮಾನಂದಲೂ, ಮತ್ಸರಂದಲೂ ದಿತಿ ದೇವಿ ಕಂಗಾಲಾತು.
ಅದಕ್ಕೆ ಒಂದು ಮಗಳು ಇತ್ತು, ಮಾಲಿನಿ ಹೇಳಿ. ಆ ಕೂಸು ಸುಂದರಿ, ಸುಗುಣಶೀಲೆ. ದಿತಿ ಮಗಳ ತನ್ನ  ಹತ್ತರೆ ದಿನುಗೋಳಿ ‘ಮಗಳೆ ಮಾಲಿನೀ, ನೋಡು-ನಿನ್ನ ಅಣ್ಣಂದ್ರ ಎಲ್ಲಾ ಆ ಅದಿತಿಯ ಮಕ್ಕೊ ಲಗಾಡಿ ತೆಗೆದು, ನಾಶ ಮಾಡಿದವು. ಸ್ವರ್ಗ ನಮ್ಮದು, ನಮಗೆ ಸೇರೆಕ್ಕಾದ್ದು – ಅದರಲ್ಲೂ ಅವರದ್ದೇ ಕಾರ್ಬಾರು! ಹೀಂಗಪ್ಪಲಕ್ಕೊ? ನಾವು ಆ ದುಷ್ಟರ ಸುಮ್ಮನೆ ಬಿಡಲಕ್ಕೊ? ನೀನು ಕೂಡಲೇ ಕಾಡಿಂಗೆ ಹೋಗು – ಬ್ರಹ್ಮದೇವರ ತಪಸ್ಸು ಮಾಡಿ, ಒಲಿಸು’ ಹೇಳಿ ಹೇಳಿತ್ತು.

ಎಂತ ಕೇಳೆಕ್ಕಮ್ಮ?

ಬೇರೆ ಎಂತ ಕೇಳುದು? ದೇವತೆಗಳ ಸೋಲಿಸುವಂತಹ ಬಲಶಾಲಿ ಮಗನ ಕೊಡು ಹೇಳಿ ಕೇಳು-ಖಂಡಿತ ಅವ ಕೊಡುಗು

ಆತಮ್ಮ“ಹೇಳಿ ಅಮ್ಮನ ಕಾಲಿಂಗೆ ಬಿದ್ದು,ಮಾಲಿನಿ ಕಾಡಿಂಗೆ ಹೋತು.

ಕಾಡಿಲಿ ಸುಪಾರ್ಶ್ವ ಹೇಳುವ ಮುನಿಯ ಆಶ್ರಮದ ಹತ್ತರೆ ಹೋಗಿ ತಪಸ್ಸು ಮಾಡಲೆ ಸುರು ಮಾಡಲೆ ಯೋಚಿಸಿತ್ತು.
ಆಗ ಅದಕ್ಕೆ ಹೆದರಿಕೆ ಆತು-“ಅಯ್ಯೋ,ಆನು ಎಷ್ಟು ಚೆಂದ ಇದ್ದೆ! ಊರಿನ ಕಾಮುಕ ಜನಂಗೊ ಬಂದು ಎನ್ನ ಪೀಡಿಸಿದರೆ ಎನ್ನ ತಪಸ್ಸು ಹೇಂಗೆ ಸಾಗುಗು ಈ ಕಾಡಿಲಿ? ಹಾಂಗಾಗಿ ಈ ರೂಪ ಬೇಡ-ಕೊಳಕ್ಕು ಎಮ್ಮೆಯ ರೂಪ ಹೊಂದಿ ತಪಸ್ಸು ಮಾಡುತ್ತೆ.” ಹೇಳಿ, ಎಮ್ಮೆಯ ರೂಪಲ್ಲಿ ನಿಂದು ತಪಸ್ಸು ಸುರು ಮಾಡಿತ್ತು.

ಮಾಲಿನಿಯ ತಪಸ್ಸಿನ ಪ್ರಭಾವಂದ ಇಡೀ ಜಗತ್ತೇ ಕಳಾಹೀನ ಆತು.
ಲೋಕಲ್ಲಿ ಉಷ್ಣ ಹೆಚ್ಚಾತು. ದೇವತೆಗೊ ಭಯಪಟ್ಟವು. ಅದಕ್ಕೂ ಹೆಚ್ಚಿಗೆ, ಸುಪಾರ್ಶ್ವನ ನಿತ್ಯಾನುಷ್ಠಾನಕ್ಕೆ ಅಡ್ಡಿ ಆತು. ಋಷಿಗೆ ಜ್ಞಾನದೃಷ್ಟಿಂದ ಎಲ್ಲ ಗೊಂತಾತು, ಕೋಪಿಸಿದ ಆ ಋಷಿ- “ಏ ಮಾಲಿನಿ,ನೀನು ಏವ ರೂಪಿಲಿ ಈಗ ಇದ್ದೆಯೊ,ಅದೇ ರೂಪದ ಮಗ ನಿನಗೆ ಹುಟ್ಟಲಿ” ಹೇಳಿ ಶಾಪ ಕೊಟ್ಟ – ಅಲ್ಲಿಂದ ಬೇರೆ ಕಡೆಗೆ ಹೋದ.

ಅದಾಗಿ ರಜಾ ಸಮಯ  ಆದ ಮೇಲೆ ಬ್ರಹ್ಮ ಮಾಲಿನಿಯ ಮುಂದೆ ಪ್ರತ್ಯಕ್ಷ ಆದ.”ಏ ಮಗಳೇ,ತಪಸ್ಸು ಸಾಕು.ನಿಜರೂಪ ತಾಳು.ನಿನಗೆ ಎಂತ ಬೇಕೋ ಅದರ ಕೇಳು-ಕೊಡುತ್ತೆ“ಹೇಳಿ ಹೇಳಿದ.

ಮಾಲಿನಿ ನಿಜ ರೂಪ ತಾಳಿ,ಬ್ರಹ್ಮನ ಪಾದಕ್ಕೆ ಬಿದ್ದು ಸಂತೋಷ, ಭಯ, ಭಕ್ತಿಂದ ಪೂಜೆ ಮಾಡಿ,”ಬ್ರಹ್ಮದೇವಾ,ನಿನ್ನ ದರ್ಶನ ಮಾಡಿ ಆನು ಪುನೀತೆ ಆದೆ.ಆನು ಮಾಡಿದ ತಪಸ್ಸಿಂಗೆ ನೀನು ಒಲಿದ್ದು ಸತ್ಯ ಆದರೆ,ಎನಗೆ ಇಪ್ಪ ಒಂದೇ ಆಶೆಯ ಹೇಳುತ್ತೆ-ದೇವತೆಗಳ ಸೋಲಿಸುವಂತ ಬಲವಂತ ಮಗ ಎನ್ನ ಹೊಟ್ಟೆಲಿ ಹುಟ್ಟುವ ಹಾಂಗೆ ಹರಸುವೆಯೋ?ಇದೊಂದು ಕೃಪೆ ತೋರು ದೇವಾ…“ಹೇಳಿ ಕೇಳಿಕೊಂಡತ್ತು.

ಮಾಲಿನಿಯ ಮುಗ್ಧತೆಯ ,ಭಕ್ತಿಯ ನೋಡಿ ಬ್ರಹ್ಮನ ಮನಸ್ಸು ಕರಗಿತ್ತು.” ಮಗಳೇ, ಹಾಂಗೇ ಆಗಲಿ.. ಆದರೆ ಒಂದು ವಿಷಯ…”ಹೇಳಿ ಹೇಳಿದ.

“ಎಂತ ದೇವ?”

ನಿನಗೆ ಗೊಂತಾಯಿದಿಲ್ಲೆ-ನಿನ್ನ ತಪಸ್ಸಿಂದ ಉಪದ್ರ ಆದ ಕಾರಣ ನಿನಗೆ ಸುಪಾರ್ಶ್ವ ಋಷಿ ಶಾಪ ಕೊಟ್ಟಿದ,ನೀನು ಆವಾಗ ಇದ್ದ ರೂಪದ್ದೇ ಮಗ ನಿನಗೆ ಹುಟ್ಟುಗು ಹೇಳಿ..ಹಾಂಗಾಗಿ ನಿನಗೆ ಗೋಣನೇ ಹುಟ್ಟುಗು“.

ಮಾಲಿನಿ ಜೋರು ಕೂಗಲೆ ಸುರು ಮಾಡಿತ್ತು,”ದೇವರೇ,ಎನ್ನ ದುರ್ದೈವವೇ!ಹಗಲೂ ಇರುಳೂ ಚಳಿ,ಮಳೆ,ಗಾಳಿ,ಬೆಶಿಲು ಯಾವದನ್ನೂ ಗಣ್ಯ ಮಾಡದ್ದೆ ನಿನ್ನನ್ನೇ ಧ್ಯಾನ ಮಾಡಿದ ಎನಗೆ ಇಂತಾ ವರವೊ ದೇವಾ? ಗೋಣದ ಹಾಂಗಿಪ್ಪ ಮಗ ಎಂತ ಮಾಡುಗು? ಅದರ ಆನು ಹೇಂಗೆ ಸಾಕುದು? ಅದಕ್ಕೆ ದೇವತೆಗಳ ಸೋಲಿಸಲೆಡಿಗೋ? ಅಯ್ಯೋ,ಅಮ್ಮನ ಕಣ್ಣ ನೀರು ನೋಡಲೆಡಿಯದ್ದೆ ಆನು ಈ ರೀತಿ ತಪಸ್ಸು ಮಾಡಿದ್ದು… ಒಳ್ಳೆ ಕೆಲಸಕ್ಕೆ ಹೆರಟ ಎನಗೆ ಇಂತಾ ಶಿಕ್ಷೆ ಸರಿಯೊ? ದೇವಾ.., ಏನಾದರೂ ಮಾಡು, ನೀನೇ ಕಾಪಾಡೆಕ್ಕು..“ಹೇಳಿ ನೆಲಲ್ಲಿ ಬಿದ್ದು ಹೊರಳಿತ್ತು.

ಬ್ರಹ್ಮದೇವ ಮಾಲಿನಿಯ ಸಮಾಧಾನ ಮಾಡಿದ-“ಮಗಳೇ,ನಿನ್ನ ಮೇಲೆ ಇಪ್ಪ ಶಾಪ ಹೋಗ.ಆದರೆ ನೀನು ಬೇಜಾರ ಮಾಡೆಡ.. ನಿನಗೆ ಹುಟ್ಟುವ ಮಗ ಗೋಣ ಆದರೂ ಬುದ್ಧಿವಂತ ಆದಿಕ್ಕು, ಬಲಶಾಲಿ ಆಗಿ ಲೋಕವ ಆಳುಗು.. ನೀನು ಮಾಡಿದ ಶ್ರಮ  ಹಾಳಾಗ.. ರೂಪ ಹೇಂಗಿದ್ದರೆಂತ ಆತು? ಗುಣ,ಸಾಮರ್ಥ್ಯ- ಇವ್ವೇ ಮುಖ್ಯ. ನೀನು ಸುಮ್ಮನೆ ದುಃಖಿಸದ್ದೆ ,ಮನೆಗೆ ಹೋಗು.ಬಲಿಷ್ಟನಾದ ಮಗನ ಪಡೆದು,ಸಾಂಕು..ಸುಖವಾಗಿರು..”

ಮಾಲಿನಿ ಸಮಾಧಾನಂದ ಬ್ರಹ್ಮನ ಪೂಜಿಸಿತ್ತು.ಅದರ ಸೇವೆಯ ತೆಕ್ಕೊಂಡ ಬ್ರಹ್ಮ ಅದೃಶ್ಯ ಆದ.

~

ಮಾಲಿನಿ ಮನೆಗೆ ಹೋಗಿ ಎಲ್ಲಾ ವಿಷಯ ಅಮ್ಮನಾದ ದಿತಿಗೆ ಹೇಳಿತ್ತು.ದಿತಿದೇವಿ ಶಾಪದ ಬಗ್ಗೆ ಹೆಚ್ಚು ಚಿಂತೆ ಮಾಡೆಡ ಹೇಳಿ ಮಗಳಿಂಗೆ ಹೇಳಿ,ಅದಕ್ಕೆ ಬೇಕು ಬೇಕಾದ ಉಪಚಾರ ಮಾಡಿತ್ತು.
ಕೆಲವು ದಿನ ಕಳುದು,ವಿದ್ಯುನ್ಮಾಲಿ ಹೇಳುವ ಮಾಣಿಗೆ ಮಗಳ ಮದುವೆ ಮಾಡಿ ಕೊಟ್ಟತ್ತು.
ಮದುವೆ ಆಗಿ ಕೆಲ ಕಾಲ ಕಳೆದ ಮೇಲೆ ಮಾಲಿನಿ ಬಸರಿ ಆಗಿ,ನವಮಾಸ ಕಳೆದ ಮೇಲೆ ಗೋಣನ ಮುಖದ ವಿಕಾರಿಯಾದ ಮಗಂಗೆ ಜನ್ಮ ಕೊಟ್ಟತ್ತು.
ರಕ್ಕಸಿಯರೆಲ್ಲ ಸಂತೋಷಂದ ಆ ಮಗುವಿನ ಲಾಲಿಸಿದವು.
ಗೋಣನ ಹಾಂಗಿಪ್ಪ ಮಾಣಿಗೆ ಬೇರೆಂತ ಹೆಸರು ಬೇಕು? “ಮಹಿಷಾಸುರ”ಹೇಳಿಯೇ ಹೆಸರಾತು. ಮಹಿಷ ಬೆಳೆದ, ದೊಡ್ಡ ಆದ. ಅವನ ಬಲ,ಶೌರ್ಯ ನೋಡಿ ದಿತಿಗೂ, ಮಾಲಿನಿಗೂ ಸಂತೋಷ ಆತು-ಮಗ ಆಗದ್ದೆ ಇಲ್ಲೆ, ಹೇಳುವ ಸಮಾಧಾನ ಬಂತು!

ಒಂದು ದಿನ ಮಾಲಿನಿ ಮಗನ ಹತ್ತರೆ,”ಮಗಾ,ನೀನು ಈಗ ಬಲಶಾಲಿ ಆಯಿದೆ,ಆದರೆ ನಿನಗೆ ದೈವ ಬಲ ಇಲ್ಲೆ. ನೀನು ಕಾಡಿಂಗೆ ಹೋಗು, ಬ್ರಹ್ಮನ ಧ್ಯಾನ ಮಾಡು,ಅವನ ಒಲಿಸು” ಹೇಳಿತ್ತು. [ಅಮ್ಮನ ಹಾಂಗೆ ಮಗಳು,ನೂಲಿನ ಹಾಂಗೆ ಸೀರೆ-ಅಲ್ಲದೊ?]

ಮಹಿಷ ಒಪ್ಪಿದ .ಕಾಡಿಂಗೆ ಹೋದ.ಬೇರೆ ಬೇರೆ ರೂಪು ತಾಳಿ,ಗಾಳಿಯೊಂದೇ ಆಹಾರವಾಗಿ ತಪಸ್ಸು ಮಾಡಿದ.

ಬ್ರಹ್ಮ ಪ್ರತ್ಯಕ್ಷ ಆಗಿ,”ಮಗನೇ,ಮೆಚ್ಚಿದೆ.ನಿನ್ನ ನಿಷ್ಠೆ ಅದ್ಭುತ.ನಿನಗೆಂತ ಬೇಕು-ಕೇಳು”ಹೇಳಿ ಕೇಳಿದ.
ಮಹಿಷ -“ದೇವಾ, ಪುರುಷರಾರೂ ಎನ್ನ ಕೊಲ್ಲದ್ದ ಹಾಂಗೆ ವರ ಕೊಡು” ಹೇಳಿ ಕೇಳಿದ.
“ತಥಾಸ್ತು”-ಹೇಳಿ ಬ್ರಹ್ಮ ಮಾಯ ಆದ.

ಮಹಿಷಾಸುರ ಬಂದ ಕೂಡಲೇ ಸೋತು ಅಡಗಿಕೊಂಡಿದ್ದ ರಾಕ್ಷಸರಿಂಗೆ ಆನೆ ಬಲ ಬಂತು. ಎಲ್ಲ ಸೇರಿ,ಅವನ ನಾಯಕನಾಗಿ ಮಾಡಿದವು.
ಅವ ಭೂಲೋಕದ ಎಲ್ಲಾ ರಾಜ್ಯಂಗಳ ವಶ ಮಾಡಿ ದೇವಲೋಕಕ್ಕೂ ದಾಳಿ ಮಾಡಿದ ದೇವತೆಗೊಕ್ಕೂ ರಾಕ್ಷಸರಿಂಗೂ ಭಾರೀ ಯುದ್ಧ ಆತು.
ದೇವತೆಗೊ ಅಮರಾವತಿ ಬಿಟ್ಟು ಓಡಿದವು.ಸ್ವರ್ಗವೂ ಮಹಿಷಾಸುರಂಗಾತು.ದಿತಿಯ ಕನಸು ನನಸಾತು.

~ ಇನ್ನೂ ಇದ್ದು

~*~*~*~

ಮಹಿಷಾಸುರನ ಉತ್ಪತ್ತಿ, ವಿಕ್ರಮ : ದೇವೀ ಮಹಾತ್ಮೆ, 4.5 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಸುರೂವಿಂದ ಸರಿಯಾಗಿ ಓದುತ್ತೆ ಇನ್ನೊಂದರಿ…

  [Reply]

  ಗೋಪಾಲಣ್ಣ

  skgkbhat Reply:

  ಆಗಲಿ.ಓದಿದ ಮೇಲೆ ಇನ್ನೆಂತಾದರೂ ಸುಧಾರಣೆ ಬೇಕಾದರೆ ಹೇಳಿ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಇದೂ ಚೆಂದ ಬೈಂದು ಮಾವಾ :)

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  skgkbhat

  ಕತೆಯ ಮೆಚ್ಚಿದ ಎಲ್ಲರಿಂಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಸುಭಗ

  ‘ಗೋಣ ಆದರೂ ಬುದ್ಧಿವಂತ ಆಗಿಕ್ಕು’
  ಯೇ ಬೋಸಭಾವ, ಗೋಪಾಲಣ್ಣ ಹೇಳಿದ್ದು ಕೇಳಿತ್ತೋ? ಮೈಷಾಸುರ ನಿನ್ನಾಂಗೆ ಅಲ್ಲ ಮಿನಿಯ..

  [Reply]

  VN:F [1.9.22_1171]
  Rating: 0 (from 0 votes)
 4. ಶ್ರೀಅಕ್ಕ°

  ಕಶ್ಯಪ ಮುನಿಯ ಎರಡು ಹೆಂಡತಿಯರಲ್ಲಿ ಹುಟ್ಟಿದ ಮಕ್ಕಳಲ್ಲಿ ಸ್ವಭಾವ ವೆತ್ಯಾಸ ಇದ್ದದಲ್ಲದಾ ಗೋಪಾಲಣ್ಣ. ಈಗ ಒಂದೇ ಅಬ್ಬೆಯ ಹೊಟ್ಟೆಲಿ ಹುಟ್ಟಿದ ಮಕ್ಕಳಲ್ಲಿ ಸ್ವಭಾವ ವೆತ್ಯಾಸ ಇರ್ತು!!! ಎಲ್ಲರ ಸ್ವಭಾವ ಒಂದೇ ಆಗಿ ಎಲ್ಲೋರ ಒಳ್ಳೇದಕ್ಕೆ ಒಬ್ಬಕ್ಕೊಬ್ಬ° ಸಹಕರಿಸುವ ಹಾಂಗೆ ಆದರೆ ಎಲ್ಲರ ಬದುಕ್ಕುದೇ ಬಂಗಾರ ಅಕ್ಕು ಅಲ್ಲದೋ?

  [ಮಾಲಿನಿಯ ತಪಸ್ಸಿನ ಪ್ರಭಾವಂದ ಇಡೀ ಜಗತ್ತೇ ಕಳಾಹೀನ ಆತು.
  ಲೋಕಲ್ಲಿ ಉಷ್ಣ ಹೆಚ್ಚಾತು. ದೇವತೆಗೊ ಭಯಪಟ್ಟವು. ಅದಕ್ಕೂ ಹೆಚ್ಚಿಗೆ, ಸುಪಾರ್ಶ್ವನ ನಿತ್ಯಾನುಷ್ಠಾನಕ್ಕೆ ಅಡ್ಡಿ ಆತು. ]

  ಗೋಪಾಲಣ್ಣ, ನಾವು ನಮ್ಮ ಏಳಿಗೆಗೆ ಹೇಳಿ ತಪಸ್ಸಿನ ಹಾಂಗೆ ಕೆಲಸ ಮಾಡುದು ಇನ್ನೊಬ್ಬನ ಕೆಲಸಕ್ಕೆ ಉಪದ್ರ ಅಪ್ಪಲಾಗ ಹೇಳುವ ಅರ್ತ ಅಲ್ಲದೋ ಇದು?

  ಮಹಿಷಾಸುರನ ಹುಟ್ಟಿನ ಕತೆ ಲಾಯ್ಕಾಯಿದು ಗೋಪಾಲಣ್ಣ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಅನಿತಾ ನರೇಶ್, ಮಂಚಿದೇವಸ್ಯ ಮಾಣಿಬಂಡಾಡಿ ಅಜ್ಜಿಚೆನ್ನೈ ಬಾವ°ಕೊಳಚ್ಚಿಪ್ಪು ಬಾವಶರ್ಮಪ್ಪಚ್ಚಿಪುತ್ತೂರುಬಾವಚೂರಿಬೈಲು ದೀಪಕ್ಕಅಡ್ಕತ್ತಿಮಾರುಮಾವ°ಪ್ರಕಾಶಪ್ಪಚ್ಚಿಒಪ್ಪಕ್ಕಕಳಾಯಿ ಗೀತತ್ತೆದೊಡ್ಡಮಾವ°ವಿದ್ವಾನಣ್ಣಮುಳಿಯ ಭಾವದೊಡ್ಮನೆ ಭಾವಶ್ರೀಅಕ್ಕ°ವೆಂಕಟ್ ಕೋಟೂರುಅಕ್ಷರದಣ್ಣಶಾ...ರೀಎರುಂಬು ಅಪ್ಪಚ್ಚಿಶಾಂತತ್ತೆಪಟಿಕಲ್ಲಪ್ಪಚ್ಚಿವಿಜಯತ್ತೆಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ