ಮಕ್ಕೊಗೆ ರಾಮಾಯಣ – ಅಧ್ಯಾಯ 4 – ಭಾಗ 1

October 30, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಲ್ಲಿಯವರೆಗೆ

                                ಕೈಕೇಯಿಯ ಬೇಡಿಕೆಗೊ 

ದಶರಥ ಮಹಾರಾಜಂಗೆ ಪ್ರಾಯ ಆಯ್ಕೊಂಡು ಬಂತು. ‘ರಾಮನ ಮದುವೆಯೂ ಆಯಿದು; ಇನ್ನೆಂತಕೆ ತಡವು ಮಾಡುದು? ಇನ್ನು ರಾಮಂಗೆ ಪಟ್ಟ ಕಟ್ಟುಲಕ್ಕು’ ಹೇಳಿ ಅವ° ಯೋಚನೆ ಮಾಡಿದ°. ಈ ವಿಚಾರವ ವಸಿಷ್ಠ ಮುನಿಗಳ ಹತ್ತರೆ, ಮಂತ್ರಿಗಳ ಹತ್ತರೆ ಮಾತಾಡಿದ°. ಅವು ಎಲ್ಲೋರು ಸಂತೋಷಲ್ಲಿ ರಾಮಂಗೆ ಪಟ್ಟ ಕಟ್ಟುಲೆ ಒಪ್ಪಿದವು. ದಶರಥಂಗೆ ಆನಂದ ಆತು. ತುಂಬ ಉತ್ಸಾಹಲ್ಲಿ ಪ್ರೀತಿಯ ರಾಮ ಸಿಂಹಾಸನ ಏರಿ ಕೂಪದರ ನೋಡುಲೆ ಅಮ್ಸರ ಮಾಡಿದ°. ರಾಮಂಗೆ ಪಟ್ಟ ಕಟ್ಟುವ ಶುದ್ದಿಯ ನಗರದ ಬೀದಿಗಳಲ್ಲಿ ಪ್ರಚಾರ ಮಾಡುಸಿದ°. ಅರಮನೆಯ ಆಸ್ಥಾನಕ್ಕೆ ಅಯೋಧ್ಯೆಯ ಮುಖ್ಯಸ್ಥಂಗಳ ಬರಿಸಿದ°. ಅವರ ಹತ್ತರೆ, “ಆನು ಎನ್ನ ದೊಡ್ಡ ಮಗ° ರಾಮಂಗೆ ಪಟ್ಟಾಭಿಷೇಕ ಮಾಡಿ ಅವನ ನಿಂಗಳ ರಾಜ° ಮಾಡುವ ಅಂದಾಜಿ ಮಾಡಿದ್ದೆ. ಇದು ಎನ್ನ ಮನಸಿನ ಆಶೆ. ನಿಂಗ ಎಲ್ಲೋರು ಇದಕ್ಕೆ ಒಪ್ಪಿಗೆ ಕೊಟ್ಟರೆ, ಪಟ್ಟಾಭಿಷೇಕಕ್ಕೆ ಬೇಕಪ್ಪ ತಯಾರಿಯ ಮಾಡುಸುತ್ತೆ” ಹೇಳಿದ°. ಈ ವಿಚಾರ ಕೇಳಿದ ಜೆನಂಗೊ ಸಂತೋಷಲ್ಲಿ ಅವರ ಒಪ್ಪಿಗೆಯ ದಶರಥಂಗೆ ತಿಳುಶಿದವು. ರಾಮ ಮಹಾರಾಜ ಆವ್ತ° ಹೇಳಿ ಅಯೋಧ್ಯೆಯ ಜೆನಂಗೊ ಸಂತೋಷಲ್ಲಿ ಮುಳುಗಿದವು.ಪಟ್ಟಾಭಿಷೇಕಕ್ಕೆ ಬೇಕಪ್ಪ ತಯಾರಿ ಸುರುವಾತು. ಜನರ ಸಂತೋಷ ಪಡುಸುಲೆ ಹೇಳಿ ದೂರಂದ ಊರಿಂದ ಸಂಗೀತದೋರ, ಹಾಡುಗಾರರ, ನೃತ್ಯ ಮಾಡುವೋರ, ನಾಟಕದೋರ ಹೀಂಗೆ ಬೇರೆ ಬೇರೆ ಕಲಾವಿದರುಗಳ ಬರುಸಿದವು. ಎಲ್ಲಾ ತಯಾರಿ ಆಯ್ಕೊಂಡಿಪ್ಪಗ ದಶರಥ ರಾಮನ ಹತ್ತರೆ, ರಾಜನ ಕರ್ತವ್ಯ ಎಂತ? ರಾಜ ಆದೋನು ಹೇಂಗೆ ಇರೆಕ್ಕು ಹೇಳಿ ಎಲ್ಲ ತಿಳಿಶುವ ಕೆಲಸ ಮಾಡಿದ°. “ರಾಜ ಯಾವದೇ ಚಟಕ್ಕೆ ಬಲಿ ಅಪ್ಪಲಾಗ. ರಾಜ್ಯವ ರಕ್ಷಣೆ ಮಾಡಿ ಪ್ರಜೆಗಳ ಹಿತಕ್ಕಾಗಿ ಕೆಲಸ ಮಾಡೆಕ್ಕು. ಅವರ ಗೌರವಲ್ಲಿ ಕಂಡು ಅವರ ಗೌರವ ಪಡೆಯಕ್ಕು. ರಾಜ ಒಳ್ಳೆಯ ಜನ ಹೇಳಿ ಜೆನ ಹೇಳಿಗೊಳ್ಳೆಕ್ಕು” ಹೇಳಿಯೂ ತಿಳಿಸಿದ°.
ರಾಮಂಗೆ ಬೇಗ ಪಟ್ಟಾಭಿಷೇಕ ಆವುತ್ತು ಹೇಳಿ ಗೊಂತಾಗಿ ಕೌಸಲ್ಯೆಗೆ ಸಂತೋಷ ಆತು. ಈ ಶುಭ ಶುದ್ದಿಯ ಹೇಳಿದ ದಾಸಿಗೊಕ್ಕೆ ಅದು ಚಿನ್ನದ ಆಭರಣ೦ಗಳ ಉಡುಗೊರೆಯಾಗಿ ಕೊಟ್ಟತ್ತು. ಅದಕ್ಕೆ ಹೇಳುಲೆಡಿಯದ್ದಷ್ಟು ಸಂತೋಷ ಆತು. ದಶರಥನ ಎರಡನೇ ರಾಣಿ ಸುಮಿತ್ರೆಗೆದೆ ರಾಮನ ಪಟ್ಟಾಭಿಷೇಕದ ಶುದ್ದಿ ಸಿಕ್ಕಿತ್ತು. ರಾಮ ಸಿಂಹಾಸನ ಏರ್ತ, ರಾಜ ಆವ್ತ° ಹೇಳಿ ಗೊಂತಾಗಿ ಅದಕ್ಕೆದೆ ಸಂತೋಷ ಆತು. ಅಯೋಧ್ಯೆಲಿ ರಾಮನ ಪಟ್ಟಾಭಿಷೇಕದ ತಯಾರಿ ಆಯ್ಕೊಂಡಿಪ್ಪಗ ಭರತ ಶತ್ರುಘ್ನರು ಅಯೋಧ್ಯೆಲಿ ಇತ್ತಿದ್ದವಿಲ್ಲೆ. ಯಾವುದೋ ಕೆಲಸಲ್ಲಿ ಅವು ಬೇರೆ ಊರಿಲಿ ಇತ್ತಿದ್ದವು.
ಕೈಕೇಯಿಗೂ ಪಟ್ಟಾಭಿಷೇಕದ ಶುದ್ದಿ ಸಿಕ್ಕಿತ್ತು. ಅದುದೆ ಕೌಸಲ್ಯೆ, ಸುಮಿತ್ರೆಯರ ಹಾಂಗೆ ಸಂಭ್ರಮ ಪಟ್ಟತ್ತು. ಆದರೆ ಅದಕ್ಕೆ ಮಂಥರೆ ಹೇಳಿ ಕೆಟ್ಟ ಬುದ್ಧಿಯ ದಾಸಿ ಇತ್ತು. ಅದು ಕೈಕೇಯಿಯ ಮನಸ್ಸಿಲಿ ಕೆಟ್ಟ ಯೋಚನೆ ಹುಟ್ಟುಸಿತ್ತು. “ಮಹಾರಾಣಿ ಕೈಕೇಯಿ, ನಿನಗೂ ಒಬ್ಬ ಯೋಗ್ಯ ಮಗ ಇದ್ದ° ಹೇಳುದು ಮರದು ಹೋತಾ? ನಿನ್ನ ಮಗ° ಭರತಂಗೂ ರಾಜ್ಯ ಆಳುವ ಹಕ್ಕು ಇಲ್ಲೆಯಾ? ಒಂದು ವೇಳೆ ರಾಮ ರಾಜ° ಆದರೆ ಕೌಸಲ್ಯೆಯ ಹಾಂಕಾರಕ್ಕೆ ಮಿತಿಯೇ ಇರ. ಆವಗ ನೀನು ಅದರ ದಾಸಿಯ ಹಾಂಗೆ ಇರೆಕ್ಕಾವ್ತು. ನೀನು ದಶರಥ ರಾಜನ ಪ್ರೀತಿಯ ಹೆಂಡತಿ. ಆದರೆ ಅವ ನಿನಗೆಂತ ಮಾಡಿದ್ದ? ಅವ° ರಾಮನ ರಾಜ ಮಾಡ್ತ°. ಭರತನ ಲೆಕ್ಕಕ್ಕೇ ತೆಕ್ಕೊಂಡಿದಾ°ಯಿಲ್ಲೆ. ಕೈಕೇಯಿ, ಇದು ಸರಿಯಾ? ನಿನ್ನ ಭವಿಷ್ಯದ ಬಗ್ಗೆ ಯೋಚನೆ ಮಾಡು” ಹೇಳಿ ಮಂಥರೆ ಉಪದೇಶ ಮಾಡ್ತು.
“ಆನೆಂತಕೆ ಭವಿಷ್ಯದ ಬಗ್ಗೆ ಚಿಂತೆ ಮಾಡೆಕ್ಕು? ಮಂಥರೆ, ದಶರಥನ ಮಕ್ಕಳಲ್ಲಿ ರಾಮ ಎಲ್ಲರಿಂದಲೂ ದೊಡ್ಡ. ಅದೂ ಅಲ್ಲದ್ದೆ ಸದ್ಗುಣದೋನು; ವೀರ. ಎಲ್ಲಾ ವಿಚಾರಂಗಳಲ್ಲಿ ಅನುಭವ ಇಪ್ಪೋನು. ಪ್ರಜೆಗೊ ಎಲ್ಲ ರಾಮನ ಪ್ರೀತಿ ಮಾಡ್ತವು. ನಿಜ ಹೇಳ್ತೆ,  ರಾಮ ಹೇಳಿದರೆ ಎನಗೆದೆ ಭಾರೀ ಪ್ರೀತಿ” ಹೇಳಿತ್ತು ಕೈಕೇಯಿ.

ಮ೦ಥರೆಯ ದುರ್ಬೋಧೆ ಚಿತ್ರ ಃ ಮಧುರಕಾನನ ಬಾಲಣ್ಣ
ಕೆಟ್ಟ ಬುದ್ಧಿಯ ಮಂಥರೆ ಅಷ್ಟು ಮಾತಾಡಿ ನಿಲ್ಸಿದ್ದಿಲ್ಲೆ.  ಕೈಕೇಯಿಯ ಪ್ರೀತಿಲಿ ಮಾತಾಡ್ಸಿತ್ತು. “ಎನ್ನ ಮಗೂ, ಎನಗೂ ಪ್ರಾಯ ಆತು. ಪ್ರಪಂಚಲ್ಲಿ ನಡವ ಎಲ್ಲಾ ರೀತಿ ನೀತಿಗೊ ಎನಗೆ ಗೊಂತಿದ್ದು. ರಾಮನ ಮೇಲಾಣ ನಿನ್ನ ಪ್ರೀತಿಯ ಗ್ರೇಶಿ ನೋಡುವಾಗ ಎನಗೆ ನಿನ್ನ ಮೇಲೆ ಕರುಣೆ ಉಕ್ಕಿ ಬತ್ತಾ ಇದ್ದು. ‘ಅಯ್ಯೋ ಪಾಪವೇ’ ಹೇಳುವಾಂಗೆ ಆವ್ತು. ರಜ ಆಲೋಚನೆ ಮಾಡಿ ನೋಡು. ಭರತಂಗೆ ಯಾವ ಗತಿ ಅಕ್ಕು ಹೇಳಿ ಗೊಂತಿದ್ದ ನಿನಗೆ?  ಭರತ, ಶತ್ರುಘ್ನರು ಇಲ್ಲದ್ದಿಪ್ಪಗಳೇ ದಶರಥ° ಬೇಕೂ ಹೇಳಿಯೇ ಈ ನಿರ್ಧಾರ ತೆಕ್ಕೊಂಡಿದ°. ಲಕ್ಷ್ಮಣ ಹೇಂಗೂ ರಾಮನ ಕೈಗೊಂಬೆ ಹಾಂಗಿದ್ದ°. ಅವ° ರಾಮ ಹೇಳಿದಾಂಗೆ ಕೇಳುವೋನು ಹೇಳಿಯೂ ದಶರಥಂಗೆ ಗೊಂತಿದ್ದು. ಕೈಕೇಯಿ, ನೀನೀಗ ಮೂರ್ಖಳ ಹಾಂಗೆ ಮಾಡೆಡ. ಇದೇ ಸಮಯಲ್ಲಿ ಏನಾದರು ದಾರಿ ಹುಡುಕ್ಕು. ಅಲ್ಲದ್ದರೆ ನಿನ್ನ ಭರತಂಗೆ ವನವಾಸವೇ ಗತಿ” ಹೇಳಿತ್ತು ಮಂಥರೆ.
ಮಂಥರೆಯ ಉಪದೇಶದ ಮಾತುಗಳ ಕೇಳಿದ ಕೈಕೇಯಿಗೆ ಯೋಚನೆ ಮಾಡುವಾಗ ಅದಕ್ಕೆ ಮಂಥರೆ ಹೇಳಿದ್ದು ಸರಿ ಹೇಳಿ ಕಾಂಬಲೆ ಸುರು ಆತು. ‘ರಾಮ ರಾಜ° ಆದರೆ ಎನಗೆ ಏನೂ ಬೇಜಾರಿಲ್ಲೆ. ಆನು ದಶರಥನ ಪ್ರೀತಿಯ ಹೆಂಡತಿ. ಆದರೆ ಕೌಸಲ್ಯೆಯ ದಾಸಿಯ ಹಾಂಗೆ ಆನು ಬದ್ಕುದೋ? ಎಂದಿಂಗೂ ಆಗ’ ಹೇಳಿ ಕೈಕೇಯಿ ಯೋಚನೆ ಮಾಡಿತ್ತು. ಕೂಡಲೇ ಅದು ಮಂಥರೆಗೆ “ನೀನು ಹೇಳಿದ್ದೆಲ್ಲಾ ಸರಿಯಾದ್ದೆ. ರಾಮ ರಾಜ ಆಗದ್ದ ಹಾಂಗೆ ತಡವ ಉಪಾಯ ಹೇಂಗೆ?” ಹೇಳಿ ಕೇಳಿತ್ತು.
“ತುಂಬ ಸುಲಭ. ರಾಮನ ಕಾಡಿಂಗೆ ಕಳುಸು” ಹೇಳಿತ್ತು ಮಂಥರೆ. “ಆದರೆ, ಹೇಂಗೆ?” ಕೇಳಿತ್ತು ಕೈಕೇಯಿ. “ದಶರಥ ರಾಕ್ಷಸರ ಒಟ್ಟಿಂಗೆ ಯುದ್ಧ ಮಾಡಿದ್ದರ ನೆನಪು ಮಾಡಿಗೊ. ಆವಗ ನೀನು ಅವಂಗೆ ಸಹಾಯ ಮಾಡಿದ್ದು ನಿನಗೆ ಮರದತ್ತಾ?  ಯುದ್ಧ ಮುಗುದ ಮೇಲೆ ಅವ ನಿನ್ನ ಹತ್ತರೆ, ‘ನಿನಗೆ ಬೇಕಾದ ಎರಡು ವರ ಕೇಳು’ ಹೇಳಿತ್ತಿದ್ದ. ಸಮಯ ಬಂದಿಪ್ಪಗ ಕೇಳ್ತೆ ಹೇಳಿತ್ತಿದ್ದೆ ನೀನು ಅಲ್ಲದಾ? ಆ ಸಮಯ ಈಗ ಒದಗಿ ಬಯಿಂದು. ದಶರಥ ರಾಜ ರಾಮ ಪಟ್ಟಾಭಿಷೇಕದ ಶುದ್ದಿ ಹೇಳುಲೆ ಬಂದೇ ಬತ್ತ. ಅವ ಕೋಣೆಗೆ ಬಂದಪ್ಪಗ ನೀನು ಕೋಪಲ್ಲಿ ಇಪ್ಪ ಹಾಂಗೆ ನಟನೆ ಮಾಡು. ನಿನಗೆ ಅವ ಕೊಡೆಕ್ಕಾದ ವರಂಗಳ ಕೇಳಿಗೋ. ಭರತಂಗೆ ಪಟ್ಟಾಭಿಷೇಕ ಮಾಡೆಕ್ಕು ಹೇಳ್ತದು, ನೀನು ಮದಲಾಣ ವರವಾಗಿ ಕೇಳಿಗೋ. ರಾಮ ಹದಿನಾಲ್ಕು ವರ್ಷ ವನವಾಸ ಮಾಡೆಕ್ಕು ಹೇಳಿ ನೀನು ಎರಡನೆಯ ವರವಾಗಿ ಕೇಳಿಗೊ” ಹೇಳಿ ಮಂಥರೆ ಕೈಕೇಯಿಗೆ ಕೆಟ್ಟ ಉಪಾಯವ ಹೇಳಿ ಕೊಟ್ಟತ್ತು.

(ಸಶೇಷ)

ಸೂ.ಃ

 • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
 • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
  – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಜೈ ಶ್ರೀರಾಮ್.

  [Reply]

  VA:F [1.9.22_1171]
  Rating: 0 (from 0 votes)
 2. ಇಂದಿರತ್ತೆ
  ಇಂದಿರತ್ತೆ

  ಬಾಲರಾಮಾಯಣದ ಕಥೆ ಚೊಕ್ಕವಾಗಿ ಬತ್ತಾ ಇದ್ದು ಚಿಕ್ಕಮ್ಮ. ಹಾಂಗೆ ರಾಮಾಯಣದ ಕಥೆ ಯಥಾವತ್ ಕಣ್ಣಮುಂದೆ ಬಂದ ಹಾಂಗಿದ್ದು ಬಾಲಣ್ಣನ ಚಿತ್ರ. ತುಂಬಾ ಕುಶಿಯಾತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಕಳಾಯಿ ಗೀತತ್ತೆಒಪ್ಪಕ್ಕಚೆನ್ನೈ ಬಾವ°ಕೊಳಚ್ಚಿಪ್ಪು ಬಾವಪೆಂಗಣ್ಣ°ಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿಉಡುಪುಮೂಲೆ ಅಪ್ಪಚ್ಚಿಸಂಪಾದಕ°ಶರ್ಮಪ್ಪಚ್ಚಿಶ್ರೀಅಕ್ಕ°ಎರುಂಬು ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಅನುಶ್ರೀ ಬಂಡಾಡಿರಾಜಣ್ಣಮಾಷ್ಟ್ರುಮಾವ°ನೀರ್ಕಜೆ ಮಹೇಶವಿನಯ ಶಂಕರ, ಚೆಕ್ಕೆಮನೆತೆಕ್ಕುಂಜ ಕುಮಾರ ಮಾವ°ಪುತ್ತೂರಿನ ಪುಟ್ಟಕ್ಕಸುವರ್ಣಿನೀ ಕೊಣಲೆದೊಡ್ಡಭಾವಅನು ಉಡುಪುಮೂಲೆಶಾ...ರೀಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ