ಮಕ್ಕೊಗೆ ರಾಮಾಯಣ -ಅಧ್ಯಾಯ – 4 ಭಾಗ – 2

November 6, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಲ್ಲಿಯವರೆಗೆ

ಕೈಕೇಯಿ ಮುದುಕ್ಕಿ ಮಂಥರೆಯ ಮಾತು ಕೇಳಿ ಪೂರ್ತಿ ಬದಲಾತು. ರಾಮನ ಮೇಲಾಣ ಪ್ರೀತಿಯ, ಅವನ ಅದರ ಮಗನ ಹಾಂಗೆ ಪ್ರೀತಿ ಮಾಡುದರ ಎಲ್ಲವನ್ನೂ ಕೈಕೇಯಿ ಮರದತ್ತು. ಭರತಂಗೆ ಸಿಕ್ಕೆಕ್ಕಾದ ರಾಜ್ಯವ ಎಳದು ಪಡವ ವೈರಿಯಾಂಗೆ ರಾಮ ಅದರ ಮನಸಿಂಗೆ ಕಾಂಬಲೆ ಸುರುವಾತು. ರಾಮನ ವಿಷಯಲ್ಲಿ ಅದರ ಮನಸು ಕೋಪ ದ್ವೇಷವ ತುಂಬಿಸಿಕೊಂಡತ್ತು. ಸುತ್ತಿದ ಜರಿ ಸೀರೆಯನ್ನೇ ಅದು ಕೋಪಲ್ಲಿ ಹರುದು ಹಾಕಿತ್ತು. ಹಾಕಿದ ಚಿನ್ನದ ಆಭರಣಗಳ ಎಲ್ಲ ತೆಗದು ಇಡ್ಕಿತ್ತು. ಭರತನ ಭವಿಷ್ಯವೇ ಹಾಳಾತು. ಆನಿನ್ನು ಕೌಸಲ್ಯೆಯ ದಾಸಿ ಆಯೆಕ್ಕನ್ನೇಳಿ ಗ್ರೇಶಿಗೊಂಡು ಕೂಗಿಗೊಂಡು ಅದರ ಅಂತಃಪುರದ ಮೂಲೆಲಿ ಕೂದತ್ತು.
ಅಷ್ಟಪ್ಪಗ ದಶರಥ ಮಹಾರಾಜ°, ಸಂತೋಷ ಸಂಭ್ರಮಲ್ಲಿ ಕೈಕೇಯಿಯ ಕೋಣೆಗೆ ಬಂದ°. ಅವ° ರಾಮನ ಪಟ್ಟಾಭಿಷೇಕದ ಶುದ್ದಿಯ ಹೇಳುಲೆ ಬಂದ ಅಮ್ಸರಲ್ಲಿ ಇತ್ತಿದ್ದ°. ಆದರೆ ತಲೆ ಕಸವು ಕೆದರಿಗೊಂಡು, ಹರುದ ಸೀರೆ ಸುತ್ತಿಗೊಂಡು, ಕೂಗಿಗೊಂಡು ಕೂದ ಕೈಕೇಯಿಯ ನೋಡಿದ ದಶರಥಂಗೆ ಗಾಬರಿ ಆತು. ಅದರ ಚಿನ್ನದೊಡವೆಗೊ ಎಲ್ಲ ನೆಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಕ್ಕಿಗೊಂಡಿತ್ತು. ದಶರಥ° ಕಣ್ಣು ನೀರಿನ ಉದ್ದಿಗೊಂಡು “ಎನ್ನ ಚಿನ್ನಾ, ಎಂತಕಿಷ್ಟು ಕೋಪ ಮಾಡಿಗೊಂಡಿದೇ? ನಿನ್ನ ಸಂತೋಷಕ್ಕೆ ಆನು ಎಂತ ಬೇಕಾದರೂ ಮಾಡುವೆ. ಆನು ನಿನ್ನ ತುಂಬಾ ಪ್ರೀತಿ ಮಾಡ್ತೆ. ಎಂತಾತು ಹೇಳಿ ಎನ್ನತ್ತರೆ ಹೇಳು. ಎಂತಕೆ ಹೀಂಗೆ ದುಃಖಲ್ಲಿ ಕೂಯ್ದೇ?” ಹೇಳಿ ಕೇಳಿದ°. ಕೈಕೇಯಿ ಆ ಸಮಯಕ್ಕೇಳಿ ಕಾದುಗೊಂಡಿತ್ತು. “ದೊರೆಯೇ, ನಿನಗೆ ನೆನಪಿದ್ದಾ? ತುಂಬಾ ವರ್ಷದ ಮದಲು ನೀನು ಎನ್ನ ಎರಡು ಕೋರಿಕೆಗಳ ನಡೆಶಿ ಕೊಡ್ತೆ ಹೇಳಿತ್ತಿದ್ದೆ” ಹೇಳಿ ಕೈಕೇಯಿ ದಶರಥಂಗೆ ಕೇಳಿತ್ತು.
“ಪ್ರಿಯೇ, ಅದರಲ್ಲಿ ಯಾವ ಸಂದೇಹವೂ ಇಲ್ಲೆ. ರಾಮನ ಮೇಲೆ ಆಣೆ ಮಾಡಿ ಹೇಳ್ತೆ, ಆನು ಕೊಟ್ಟ ಮಾತಿಂಗೆ ತಪ್ಪೆ.” ಹೇಳಿ ದಶರಥ° ಹೇಳಿದ°.ಆವಗ ಕೈಕೇಯಿಗೆ ಧೈರ್ಯ ಬಂತು. ಅದು ಅದರ ಬೇಡಿಕೆಗಳ ದಶರಥಂಗೆ ಹೇಳಿತ್ತು, “ಭರತ ಅಯೋಧ್ಯೆಯ ರಾಜ ಆಯೆಕ್ಕು. ರಾಮ ಋಷಿ ಮುನಿಗಳಾಂಗೆ ಕಾವಿ, ನಾರುಮಡಿ ವಸ್ತ್ರ ಸುತ್ತಿ ಹದಿನಾಲ್ಕು ವರ್ಷ ವನವಾಸ ಮಾಡೆಕ್ಕು. ಇದು ಎನ್ನ ಎರಡು ಬೇಡಿಕೆಗೊ. ಈಗಳೇ ಈ ಕ್ಷಣವೇ ಎನ್ನ ಬೇಡಿಕೆಗಳ ನೀನು ಪೂರೈಸೆಕ್ಕು. ಅಲ್ಲದ್ದರೆ ಆನು ಈ ಕ್ಷಣವೇ ಸತ್ತು ಹೋವ್ತೆ” ಹೇಳಿತ್ತು.
ದಶರಥ ಮಹಾರಾಜಂಗೆ ಅವನ ಕೆಮಿಯನ್ನೇ ನಂಬುಲೇ ಎಡಿತ್ತತ್ತಿಲ್ಲೆ. ಕೈಕೇಯಿ ಇಷ್ಟುದೆ ನೀಚ ಬುದ್ಧಿಯ, ದಯೆ ಕರುಣೆಯಿಲ್ಲದ್ದ ಹೆಂಗಸಾಯಿದಾ? ದಶರಥಂಗೆ ಎಂತ ಹೇಳುಲೂ ಬಾಯಿ ಬಂತಿಲ್ಲೆ. ಕಡೇಂಗೆ, “ಕೈಕೇಯೀ, ನೀನು ತಮಾಷೆ ಮಾಡ್ತಿಲ್ಲೆನ್ನೇ?” ಹೇಳಿದ°.
“ಇಲ್ಲೆ ಮಹಾರಾಜ, ಆನು ಸತ್ಯವನ್ನೇ ಹೇಳ್ತಾ ಇದ್ದೆ” ಹೇಳಿಕ್ಕಿ ಕ್ರೂರವಾಗಿ ನೆಗೆ ಮಾಡಿತ್ತು. ರಾಜಂಗೆ ತಲೆಗೇ ಪೆಟ್ಟು ಕೊಟ್ಟಂಗಾತು. ಅವ° ಆ ಮಾತಿನ ತಡವಲೆಡಿಯದ್ದೆ ಬೋಧ ತಪ್ಪಿದ°. ರಜ ಹೊತ್ತಿಲಿ ಎಚ್ಚರಿಕೆ ಆತು. “ಕೈಕಾ, ನಿನ್ನ ಬೇಡಿಕೆಗಳ ಬಿಟ್ಟು ಬಿಡು. ಇದು ನ್ಯಾಯ ಅಲ್ಲ. ನೀನು ರಾಮನ ಭರತಂದ ಹೆಚ್ಚು ಪ್ರೀತಿ ಮಾಡ್ತೇಳಿ ಯಾವಗಳೂ ಎನ್ನತ್ತರೆ ಹೇಳಿಗೊಂಡಿತ್ತಿದ್ದೆ. ಭರತಂಗೂ ರಾಮನತ್ರೆ ತುಂಬ ಪ್ರೀತಿ ಗೌರವ ಇದ್ದು. ನೀನೀ ರೀತಿ ನಂಬಿಕೆಗೆ ದ್ರೋಹ ಮಾಡಿದ್ದೇಳಿ ಗೊಂತಾದರೆ ಭರತ° ನಿನ್ನ ಯಾವಗಳೂ ಕ್ಷಮಿಸ°. ಬೇಡ! ಕೈಕಾ ಬೇಡ! ಈ ಕೆಟ್ಟ ಆಲೋಚನೆಯ ದಯಮಾಡಿ ಬಿಟ್ಟುಬಿಡು. ರಾಮನ ಕ್ಷಣ ಹೊತ್ತುದೆ ಬಿಟ್ಟಿಪ್ಪಲೆ ಎನಗೆ ಎಡಿಯ. ಎನ್ನ ಮುದಿಪ್ರಾಯಲ್ಲಿ ಇಂಥಾ ದುಃಖವ ಎನಗೆ ನೀನು ಕೊಡೆಡ. ನಿನ್ನ ಆಶೆಯಾಂಗೇ ಬೇಕಾದರೆ ಆನು ಭರತಂಗೆ ಪಟ್ಟ ಕಟ್ಟುತ್ತೆ. ಆದರೆ ರಾಮನ ಕಾಡಿಂಗೆ ಅಟ್ಟು ಹೇಳಿ ದಯಮಾಡಿ ಹೇಳೆಡ. ಎನಗದರ ತಡವಲೆಡಿಯ” ಹೇಳಿಕ್ಕಿ ದಶರಥ° ದುಃಖಿಸಿ ದುಃಖಿಸಿ ಕೂಗಿದ°.

ಕೈಕೆಯ ಕೋಪ ದಶರಥನ ತಾಪ ಚಿತ್ರಃಮಧುರಕಾನನ ಬಾಲಣ್ಣ
ಕೈಕೆಯ ಕೋಪ ದಶರಥನ ತಾಪ              ಚಿತ್ರಃಮಧುರಕಾನನ ಬಾಲಣ್ಣ

ಆದರೆ ಕೈಕೇಯಿಯ ಕಲ್ಲು ಮನಸ್ಸು ಕರಗಿದ್ದಿಲ್ಲೆ. ರಾಮ ಅಯೋಧ್ಯೆಲಿಪ್ಪಲೆ ಅದು ಒಪ್ಪಿದ್ದಿಲ್ಲೆ. ರಾಮ ಇಲ್ಲಿಯೇ ಇದ್ದರೆ ಪ್ರಜೆಗಳ ಪ್ರೀತಿ ಗೌರವ ಭರತಂಗೆ ಸಿಕ್ಕ ಹೇಳಿ ಕಂಡು ಅದು ಪುನಃ ಹಠಮಾಡಿ ಹೇಳಿತ್ತು, “ಮಹಾರಾಜ, ನೀನೆನಗೆ ಕೊಟ್ಟ ಮಾತಿಂಗೆ ತಪ್ಪುತ್ತಾ ಇದ್ದೆ” ಹೇಳಿ ಅವಂಗೆ ನೆನಪು ಮಾಡಿತ್ತು. ದಶರಥನ ಮನಸ್ಸು ಚಿಂತೆಲಿ ಭಾರ ಆತು. ತುಂಬಾ ವರ್ಷ ಮಕ್ಕೊ ಇಲ್ಲದ್ದೆ ಕೊರಗಿಗೊಂಡಿದ್ದ ಎನಗೆ ಯಜ್ಞದ ಫಲವಾಗಿ ರಾಮ ಹುಟ್ಟಿದ್ದ°. ಅಮೂಲ್ಯ ರತ್ನದಾಂಗಿಪ್ಪ ಇಂಥಾ ಮಗಂಗೆ ಅನ್ಯಾಯ ಮಾಡುದಾದರೂ ಹೇಂಗೇ? ಕೈಕೇಯಿ ಎಂತಕೆ ಇಷ್ಟು ನಿಷ್ಠುರವಾಗಿ ನಡೆತ್ತಾ ಇದ್ದು? ಹೀಂಗಿಪ್ಪ ನೀಚ ಬುದ್ಧಿಯ ಅದಕ್ಕಾರು ಕಲಿಶಿದವು?
ಕೈಕೇಯಿಯ ಕೆಟ್ಟ ಬುದ್ಧಿಯನ್ನೇ ಯೋಚನೆ ಮಾಡಿಗೊಂಡು ರಾಜ ಚಿತ್ರಹಿಂಸೆಯ ಅನುಭವಿಸಿದಾಂಗೆ ಸಂಕಟ ಪಟ್ಟ°. ತಿರುಗ ಕೈಕೇಯಿಯ ನಿರ್ಧಾರವ ಬದಲುಸುಲೆ ಪ್ರಯತ್ನ ಮಾಡಿದ°.
“ಕೈಕಾ! ಎನಗೆ ಗೊಂತಿದ್ದು, ನೀನು ಎನ್ನ ಮೇಲಾಣ ಕೋಪಲ್ಲಿ ಈ ರೀತಿ ಹೇಳ್ತಾ ಇದ್ದೆ. ನಿನಗೆ ಆನು ರಾಮನ ಪಟ್ಟಾಭಿಷೇಕದ ಶುದ್ದಿಯ ಮದಲೇ ತಿಳಿಶಿದ್ದೆಲ್ಲೇಳಿ ಕೋಪ ಅಲ್ಲದಾ? ಹಾಂಗಾದರೆ ದಯಮಾಡಿ ಕ್ಷಮಿಸಿ. ಆನು ನಿನ್ನತ್ತರೆ ತರತರಲ್ಲಿ ಬೇಡಿಗೊಳ್ತೆ. ರಾಮನ ಪಟ್ಟಾಭಿಷೇಕವ  ಒಪ್ಪಿಗೊ. ಆವಗ ಅಯೋಧ್ಯೆ ಜೆನಂಗೊ  ನಿನ್ನ ಪ್ರೀತಿ ಗೌರವಲ್ಲಿ ಕಾಣುಗು” ಹೇಳಿದ° ದಶರಥ°.
ಕೈಕೇಯಿ ಆದರೂ ಒಪ್ಪಿದ್ದಿಲ್ಲೆ. ಅದರ ಹಠ ಬಿಟ್ಟಿದಿಲ್ಲೆ. ದಶರಥ° ಆ ಇರುಳು ಪೂರಾ ಕೈಕೇಯಿಯ ಕೋಣೆಲಿಯೇ ಕಳದ°. ತುಂಬಾ ಸರ್ತಿ ಅದರ ಬಲವಂತ ಮಾಡಿದ°. ಅದರ ನಿರ್ಧಾರವ ಅದು ಬದಲಿಸುವಾಂಗೆ ಪುನಃ ಪುನಃ ಕೈಕೇಯಿಯ ಹತ್ತರೆ ಬೇಡಿಗೊಂಡಿತ್ತಿದ್ದ°. ರಾಮನ ಮೇಲೆ ಕರುಣೆ ತೋರ್ಸು ಹೇಳಿ ಜೋರಾಗಿ ಕೂಗಿಗೊಂಡಿತ್ತಿದ್ದ°. ಮರುದಿನ ಉದಿಯಪ್ಪಗಾಣ ಮುಹೂರ್ತಲ್ಲಿ ರಾಮನ ಪಟ್ಟಾಭಿಷೇಕ ಹೇಳಿ ನಿಶ್ಚಯ ಆಗಿತ್ತು.
ಉದಿಯಾತು. ಅಯೋಧ್ಯಾ ನಗರಕ್ಕೆ ಹಬ್ಬದ ಕಳೆ ಬಂದಿತ್ತು. ಜೆನಂಗೊ ಎಲ್ಲಾ ಸಂಭ್ರಮ ಸಂತೋಷಲ್ಲಿ ಅತ್ಲಾಗಿ, ಇತ್ಲಾಗಿ, ಗಡಿಬಿಡಿಲ್ಲಿ ತಯಾರಿಯ ಕೆಲಸಲ್ಲಿ ಇತ್ತಿದ್ದವು. ಎಲ್ಲೋರೂ ರಾಮನ ಪಟ್ಟಾಭಿಷೇಕದ ಸಮಾರಂಭವ ನೋಡುಲೆ ಕಾದುಗೊಂಡಿತ್ತಿದ್ದವು. ವಸಿಷ್ಠ ಮತ್ತೆ ಬೇರೆ ಋಷಿ ಮುನಿಗೊ ಪಟ್ಟಾಭಿಷೇಕದ ವಿಧಿಗಳ ಶಾಸ್ತ್ರ ಪ್ರಕಾರ ನೇರವೇರುಸುವ ತಯಾರಿಲಿತ್ತಿದ್ದವು. ಮಂತ್ರಿಯಾದ ಸುಮಂತ್ರ° ದಶರಥನ ಹುಡ್ಕಿದ°. ಅವ° ಕೈಕೇಯಿಯ ಕೋಣೆಲಿದ್ದ° ಹೇಳಿ ಗೊಂತಾತು. ಅಲ್ಲಿಗೆ ಸುಮಂತ್ರ ಹೋಗಿ ನೋಡುವಾಗ ದಶರಥ° ತುಂಬ ದುಃಖಲಿದ್ದಾಳಿ ಗೊಂತಾತು. ಸುಮಂತ್ರ ದಶರಥನತ್ತರೆ ಮಾತಾಡುಲೆ ಹೆರಡುವಗಳೇ ಕೈಕೇಯಿ ಅವನ ತಡದತ್ತು. “ಸುಮಂತ್ರ, ಹೋಗು.. ಈಗಳೇ ರಾಮನ ಕ್ಷಣ ಮಾತ್ರವೂ ತಡವು ಮಾಡದ್ದೆ ಇಲ್ಲಿಗೆ ಬಪ್ಪಲೇಳು. ಕರಕ್ಕೊಂಡೇ ಬಾ. ಎನಗೆ ಅವನತ್ತರೆ ಮಾತಾಡೆಕ್ಕು” ಹೇಳಿ ಅದು ಆಜ್ಞೆ ಮಾಡಿತ್ತು.
ಸುಮಂತ್ರ° ಕೂಡ್ಲೆ ರಾಮಂಗೆ ಈ ಶುದ್ದಿಯ ಮುಟ್ಸಿದ. ರಾಮ° ಆ ಕ್ಷಣಲ್ಲಿಯೇ ಕೈಕೇಯಿಯ ಕೋಣೆಗೆ ಬಂದ°. ರಾಮನ ಕಾಂಬಗ ಮುದುಕ ರಾಜಂಗೆ ಕಣ್ಣು ನೀರು ಉಕ್ಕಿ ಬಂತು. “ರಾಮಾ, ಎನ್ನ ಪ್ರೀತಿಯ ರಾಮಾ” ಹೇಳಿ ಅವ° ದುಃಖಿಸಿದ. “ಅಮ್ಮಾ, ಅಪ್ಪ ಎಂತಕೆ ಇಷ್ಟು ದುಃಖಲ್ಲಿ ಕೂದುಗೊಂಡದು? ಅಪ್ಪನ ದುಃಖಕ್ಕೆ ಆನು ಕಾರಣವಾ? ಹೇಳಿ ವಿನಯಲ್ಲಿ ರಾಮ° ಕೇಳಿದ°. ಕೈಕೇಯಿ ಅದರ ಎರಡು ಬೇಡಿಕೆಗಳ ರಾಮಂಗೆ ಹೇಳಿತ್ತು. ಬೇಡಿಕೆಗಳ ಪೂರೈಸುಲೆ ದಶರಥ° ಹಿಂಜರಿತ್ತಾ ಇದ್ದ° ಹೇಳಿತ್ತು.
ರಜವೂ ಬೇಜಾರು ಮಾಡಿಗೊಳ್ಳದ್ದೆ ರಾಮ° ಆ ಎರಡೂ ಬೇಡಿಕೆಗಳ ನಡೆಶಿ ಕೊಡುಲೆ ಒಪ್ಪಿಗೊಂಡ°. “ಅಮ್ಮಾ, ಆನು ನಿನ್ನಾಶೆಯ ಹಾಂಗೇ ಹದಿನಾಲ್ಕು ವರ್ಷ ತಪಸ್ವಿಯಾಂಗೆ ಕಾಡಿಂಗೆ ಹೋಯೆಕ್ಕು. ಅಷ್ಟೇ ಅಲ್ಲದಾ? ಆನು ನಿನಗಾಗಿ ಎಂತ ಬೇಕಾದರೂ ಮಾಡುಲೆ ತಯಾರಿದ್ದೆ. ಆನಿಂದೇ ಕಾಡಿಂಗೋವುತ್ತೆ. ಭರತ° ಎನ್ನ ತಮ್ಮ°. ಅವ° ರಾಜ ಆದರೆ ಎನಗೆ ಸಂತೋಷ ಆಗದ್ದಿಕ್ಕಾ? ಆನು ಆವಂಗಾಗಿ ಯಾವ ತ್ಯಾಗಕ್ಕೂ ತಯಾರಿದ್ದೆ” ಹೇಳಿ ಕೈಕೇಯಿಗೆ ತಿಳಿಸಿದ°. ದುಃಖಿಸಿಗೊಂಡು ಕೂದ ಅಪ್ಪನ ಕಂಡು ರಾಮಂಗೆ ಬೇಜಾರಾತು. ಪುನಃ ಕೈಕೇಯಿಯ ನೋಡಿ “ಇಷ್ಟು ಸಣ್ಣ ವಿಚಾರಕ್ಕೆ ಎನ್ನಪ್ಪ ದುಃಖಲ್ಲಿ ಇಪ್ಪದರ ನೋಡುಲೆ ಎನಗೆ ಎಡಿಯ. ದಯಮಾಡಿ ಅಪ್ಪಂಗೆ ಸಮಾಧಾನ ಮಾಡಿ, ಭರತನ ಕೂಡ್ಲೇ ಅಯೋಧ್ಯೆಗೆ ಬಪ್ಪಲೇಳು” ಹೇಳಿದ°.
ರಾಮ° ಅದರ ಬೇಡಿಕೆಗಳ ಒಪ್ಪಿದ್ದು, ಕೈಕೇಯಿಗೆ ಪರಮಾನಂದ ಆತು. “ರಾಮಾ. ಆನಿಗಳೇ ಭರತನ ಕರೆಶಿಗೊಳ್ತೆ. ಆದರೆ ನೀನು ಅದಕ್ಕೆ ಮದಲೇ ಅಯೋಧ್ಯೆಂದ ಹೆರಟು ಕಾಡಿಂಗೆ ಹೋಯೆಕ್ಕು” ಹೇಳಿತ್ತು. ಇದರ ಕೇಳಿದ ದಶರಥ° “ಕೈಕಾ, ಕೈಕಾ, ನೀನು ಅಷ್ಟು ಕ್ರೂರಿ ಆಗೆಡ” ಹೇಳಿ ಕೂಗಿದ°. ಅವಂಗೆ ಎದ್ದು ನಿಂಬಲೂ ಕಷ್ಟ ಆತು.
ರಾಮ° ಅಪ್ಪನತ್ತರಂಗೆ ಓಡಿ ಅಪ್ಪನ ಪ್ರೀತಿಲಿ ಅಪ್ಪಿ ಹಿಡುದ°. “ಎನ್ನ ಪ್ರೀತಿಯ ಅಪ್ಪ, ನಿಂಗೊ ಅಮ್ಮಂಗೆ ಕೊಟ್ಟ ಮಾತಿನಾಂಗೆ ನಡವದು, ಅದರ ಪಾಲಿಸುದು ಎನ್ನ ಕರ್ತವ್ಯ” ಹೇಳಿ ಅಪ್ಪಂಗೆ ಹೇಳಿದ°. ಮತ್ತೆ ಕೈಕೇಯಿ ಹತ್ತರಂಗೆ ಹೋಗಿ “ಅಮ್ಮಾ ಎನಗೆ ರಜ ಸಮಯ ಪುರುಸೊತ್ತು ಕೊಡು. ಎನ್ನ ಅಮ್ಮಂಗೂ ಹೆಂಡತಿಗೂ ವಿಷಯವ ತಿಳಿಸಿಕ್ಕಿ ಕಾಡಿಂಗೆ ಹೆರಡುತ್ತೆ” ಹೇಳಿದ° ರಾಮ°. ಕೈಕೇಯಿಯ ಮತ್ತೆ ಅಪ್ಪನ ಕಾಲು ಮುಟ್ಟಿ ನಮಸ್ಕಾರ ಮಾಡಿ ಗಂಭೀರವಾಗಿ ಅಲ್ಲಿಂದ ಹೆರಟು ಕೌಸಲ್ಯೆಯತ್ತರಂಗೆ ಹೋದ°.
ಈ ಶುದ್ದಿ ಕೇಳಿದ ಕೌಸಲ್ಯೆ ಹೌಹಾರಿತ್ತು. ಅದಕ್ಕೆ ಗಾಬರಿ ಆತು. “ರಾಮಾ, ಎನ್ನ ಪ್ರೀತಿಯ ಕಂದಾ, ನಿನ್ನ ಬಿಟ್ಟು ಆನು ಹೇಂಗಿಪ್ಪದು? ಎನ್ನನ್ನೂ ನಿನ್ನೊಟ್ಟಿಂಗೆ  ಕಾಡಿಂಗೆ ಕರಕ್ಕೊಂಡು ಹೋಗು” ಹೇಳಿ ಕೌಸಲ್ಯೆ ರಾಮಂಗೆ ಒತ್ತಾಯ ಮಾಡಿತ್ತು. ಶುದ್ದಿ ಗೊಂತಾದ ಲಕ್ಷ್ಮಣಂಗೆ ಕೋಪ ಬಂತು. “ಅಪ್ಪ° ಎಂತಕೆ ರಾಮನ ಕಾಡಿಂಗೆ ಕಳುಸುದು?, ಭರತ° ಹೇಳಿದರೆ ಅವಂಗೆ ಹೆದರಿಕೆಯಾ? ಹಾಂಗೇಳಿ  ಆದರೆ ಭರತನನ್ನೂ ಅವನ ಜೆತೆಲಿಪ್ಪೋರನ್ನೂ ಆನು ಹೊಡಿ ಹೊಡಿ ಮಾಡುವೆ.” ಈ ರೀತಿ ಲಕ್ಷ್ಮಣ ಕೋಪ ಆವೇಶಲ್ಲಿ ಬೊಬ್ಬೆ ಹೊಡದ°. ಆದರೆ ರಾಮ° ಅವನ ಸಮಾಧಾನ ಮಾಡಿದ°. “ಅಪ್ಪ° ಕೊಟ್ಟ ಮಾತಿನ ನಡೆಶಿ ಕೊಡುದು ಎನ್ನ ಕರ್ತವ್ಯ” ಹೇಳಿ ಶಾಂತವಾದ ಸ್ವರಲ್ಲಿ ಹೇಳಿದ°. ಇದು ಎನ್ನ ಗಟ್ಟಿಯಾದ ನಿರ್ಧಾರ ಹೇಳಿ ತಿಳಿಶಿದ°. ಆವಗ ಕೌಸಲ್ಯೆಗೆ ತುಂಬಾ ದುಃಖವೂ ಬೇಜಾರವೂ ಆತು. ರಾಜಕುಮಾರ ಆದ ರಾಮ° ಕಾಡಿಲಿ ಹೇಂಗೆ ಬದುಕ್ಕುದು? ಅವಂಗೆ ಸಾಧಾರಣದ ಊಟ, ಹಣ್ಣುಹಂಪಲುಗೊ, ಗಟ್ಟಿಹುಲ್ಲಿನ ಹಸೆಯೇ ಗತಿಯಾತನ್ನೇಳಿ ಪೇಚಾಡಿತ್ತು. ಸಂಕಟವ ಸಹಿಸುಲೇ ಕೌಸಲ್ಯೆಗೆ ಕಷ್ಟ ಆತು. ಅದರ ಚಿಂತೆಯ ಕೇಳಿ ಸಮಾಧಾನ ಮಾಡುವಷ್ಟು ಪುರುಸೊತ್ತು ರಾಮಂಗೆ ಇತ್ತಿಲ್ಲೆ. ಭಾರವಾದ ಮನಸ್ಸಿಲಿ ಪ್ರೀತಿಯ ಮಗನ ಕೌಸಲ್ಯೆ ಕಳುಸಿತ್ತು.
ಅಮ್ಮನ ಆಶೀರ್ವಾದ ಪಡದು, ರಾಮ° ಹೆಂಡತ್ತಿ ಸೀತೆಯ ಹತ್ತರೆ ಹೋದ°. ಭರತ° ರಾಜ ಆಯೆಕ್ಕು. ರಾಮ° ವನವಾಸ ಮಾಡೆಕ್ಕು ಹೇಳ್ತ ಶುದ್ದಿ ಸಿಕ್ಕಿದ ತಕ್ಷಣ ಅದುದೆ ಗೆಂಡನ ಒಟ್ಟಿಂಗೆ ಕಾಡಿಗೆ ಹೋಪ ನಿರ್ಧಾರ ಮಾಡಿತ್ತು. ರಾಮ° ಅದರ ತಡವಲೆ ಪ್ರಯತ್ನ ಮಾಡಿದ°. “ಜಾನಕೀ, ನೀನು ಎನ್ನ ಬಗ್ಗೆ ಚಿಂತೆ ಮಾಡೆಡ. ನೀನು ಅರಮನೆಲಿಯೇ ಇದ್ದು ಎನ್ನ ಅಮ್ಮಂದಿರ ಸರಿಯಾಗಿ ನೋಡಿಗೊ. ಎನ್ನ ತಮ್ಮಂದಿರನ್ನುದೆ ನೋಡಿಗೊಂಬ ಜವಾಬ್ದಾರಿ ನಿನ್ನದು. ಹದಿನಾಲ್ಕು ವರ್ಷ ಕಳುದ ಮೇಲೆ ಆನು ಸೌಖ್ಯಲ್ಲಿ ಅಯೋಧ್ಯೆಗೆ ಹಿಂದೆ ಬತ್ತೆ. ಎನಗೆ ಯಾವ ತೊಂದರೆಯೂ ಬಾರ” ಹೇಳಿ ಸೀತೆಗೆ ಸಮಾಧಾನ ಹೇಳಿದ°.
ಸೀತೆ, “ಸ್ವಾಮೀ ಆನು ನಿಂಗಳ ನೆರಳಿನಾಂಗೆ ಹಿಂದಂದ ಬತ್ತೆ. ಅರಮನೆಯ ಸುಖಸಂಪತ್ತು ಎನಗೆ ಬೇಡ. ಅದರಂದ ಎಲ್ಲ ನಿಂಗಳೊಟ್ಟಿಂಗೆ ಇಪ್ಪದೇ ಎನಗೆ ಹೆಚ್ಚು ಸಂತೋಷ ಅಪ್ಪದು” ಹೇಳಿತ್ತು. ಅದು ಕಾಡಿಂಗೆ ಬಾರದ್ದಾಂಗೆ ರಾಮ° ತರತರಲ್ಲಿ ಹೇಳಿ ಪ್ರಯತ್ನ ಮಾಡಿದ°. “ದೊಡ್ಡ ಕಾಡಿಲಿ ಎಲ್ಲಾ ದಿಕ್ಕುದೆ ಕ್ರೂರ ಪ್ರಾಣಿಗೊ ತಿರುಗಿಗೊಂಡಿರ್ತವು. ನಿನಗೆ ಮನುಗುಲೆ ಮೆಸ್ತಂಗೆ ಹಾಸಿಗೆ ಇರ್ತಿಲ್ಲೆ. ತಿಂಬಲೆ ಸರಿಯಾದ ಊಟ ತಿಂಡಿದೆ ಸಿಕ್ಕುತ್ತಿಲ್ಲೆ. ಕಾಡಿನ ಕಲ್ಲುಮುಳ್ಳಿನ ಹಾದಿಲಿ ನಡವಗ ನಿನ್ನ ಕೋಮಲವಾದ ಪಾದಕ್ಕೆ, ಕಾಲಿಂಗೆ ಗಾಯ ಅಕ್ಕು” ಹೇಳಿದ°.
ಆದರೂ ಸೀತೆ ಧೈರ್ಯ ಕಳಕ್ಕೊಂಡಿದಿಲ್ಲೆ, “ಆರ್ಯಪುತ್ರನೇ, ನೀನು ಎನ್ನೊಟ್ಟಿಂಗೆ ಇಪ್ಪಗ ಎನಗೆ ಕಾಡುಪ್ರಾಣಿಗಳ ಹೆದರಿಕೆ ಎಂತಕೆ? ಮೆಸ್ತಂಗೆ ಹಾಸಿಗೆಯೂ ನೀನಿಲ್ಲದ್ದರೆ ಎನಗೆ ಮುಳ್ಳಿನ ಹಾಸಿಗೆಯೆ. ನಿನ್ನ ಒಟ್ಟಿಂಗೆ ಇಪ್ಪದು ಎನ್ನ ಕರ್ತವ್ಯ. ದಯಮಾಡಿ ಎನ್ನನ್ನೂ ನಿನ್ನ ಒಟ್ಟಿಂಗೆ ಕರಕ್ಕೊಂಡೋಗು. ಬರೆಡ ಹೇಳೆಡ. ಬೇಡ ಹೇಳೆಡ” ಹೇಳಿ ಸೀತೆ ಬಲವಂತ ಮಾಡಿತ್ತು. ಕಡೆಂಗೂ ಸೀತೆಯ ನಿರ್ಧಾರಕ್ಕೆ ರಾಮ° ಒಪ್ಪಿಗೆ ಕೊಟ್ಟ°.
ಸೀತೆಯ ನಿರ್ಧಾರದ ಶುದ್ದಿ ಕೇಳಿ ತಿಳ್ಕೊಂಡ ಲಕ್ಷ್ಮಣನುದೆ ರಾಮನ ಹತ್ತರೆ ಓಡಿ ಬಂದ°. ರಾಮನ ಕಾಲು ಹಿಡುದು ಬೇಡಿದ°. “ಅಣ್ಣಾ, ನೀನು ದಯಮಾಡಿ ಎನ್ನ ಬಿಟ್ಟು ಹೋಗೆಡ. ಅನೂ ನಿನ್ನೊಟ್ಟಿಂಗೆ ಕಾಡಿಂಗೆ ಬತ್ತೆ. ಎನಗೆ ನೀನಿಲ್ಲದ್ದ ಅಯೋಧ್ಯೆ ನರಕ ಇದ್ದಾಂಗೆ” ಹೇಳಿ ಲಕ್ಷ್ಮಣ ಹೇಳಿದ°. ರಾಮಂಗೆ ಎಂತ ಹೇಳುಲೂ ಆತಿಲ್ಲೆ. ಬಾಯಿ ಕಚ್ಚಿದಾಂಗಾತು. ಅವರೊಳ ತುಂಬಾ ಪ್ರೀತಿ, ವಿಶ್ವಾಸ ಇತ್ತು. ಹಾಂಗೇಳಿ ಅವನುದೆ ಎನ್ನ ಒಟ್ಟಿಂಗೆ ವನವಾಸ ಮಾಡೆಕ್ಕಾ? ಎನಗೇಳಿ ಅವ ಎಂತಕೆ ಕಷ್ಟ ಪಡೆಕ್ಕು? ಹೇಳಿ ರಾಮ° ಯೋಚನೆ ಮಾಡಿದ°. ಅವ° ಲಕ್ಷ್ಮಣನತ್ರೆ ಹೇಳಿದ°, “ಲಕ್ಷ್ಮಣಾ, ನೀನೂ ಎಂಗಳೊಟ್ಟಿಂಗೆ ಬಂದು ಬಿಟ್ಟರೆ ಇಲ್ಲಿ ಅಪ್ಪಅಮ್ಮಂದಿರ ನೋಡಿಗೊಂಬೋರು ಆರು? ಅವರ ರಕ್ಷಿಸುದಾರು?”

“ನಮ್ಮ ಅಪ್ಪಅಮ್ಮಂದಿರ ನೋಡಿಗೊಂಬಲೆ ಭರತ ಇದ್ದ. ಆದರೆ ನಿನ್ನ ಕಾಡಿಲಿ ನೋಡಿಗೊಂಬಲೆ ಆರಿದ್ದವು? ಅನೂ ನಿಂಗಳೊಟ್ಟಿಂಗೆ ಬತ್ತೆ. ಕಾಡಿಲಿ ನಿನ್ನನ್ನೂ, ಅತ್ತಿಗೆಯನ್ನೂ ಲಾಯ್ಕಕ್ಕೆ ನೋಡಿಗೊಳ್ತೆ. ತಿಂಬಲೆ ಹಣ್ಣುಗೊ, ಕುಡಿವಲೆ ನೀರು ಎಲ್ಲ ತಂದು ಕೊಡುವೆ” ಹೇಳಿಕ್ಕಿ ಲಕ್ಷ್ಮಣ ಅಣ್ಣನ ಉತ್ತರಕ್ಕೆ ಕಾಯದ್ದೆ ಅವನಮ್ಮ ಸುಮಿತ್ರೆಗೆ, ಹೆಂಡತ್ತಿ ಊರ್ಮಿಳೆಗೆ ಈ ಶುದ್ದಿ ಹೇಳುಲೆ ಓಡಿ ಹೋದ°. ವನವಾಸಕ್ಕೆ ಮೂರು ಜೆನ ಒಟ್ಟಿಂಗೆ ಹೋಪದು ಹೇಳಿ ಆತು.

 

(ಸಶೇಷ)

ಸೂ.ಃ

 • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
 • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
  – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಹರೇ ರಾಮ . ಹರೇ ರಾಮ.

  [Reply]

  VA:F [1.9.22_1171]
  Rating: +1 (from 1 vote)
 2. ಕೆ. ವೆಂಕಟರಮಣ ಭಟ್ಟ

  ಓದುವವಕ್ಕೇ ಕಣ್ಣೀರು ಬತ್ತು. ಅನುಭವಿಸಿದವಕ್ಕೆ ಹೇಂಗಾಗಿಕ್ಕು!!!!!!!!!!. ಜಯ್ ಶ್ರೀ ರಾಮ್.

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘುಮುಳಿಯ

  ಈ ಕ೦ತಿನ ಓದೊಗ ಕಣ್ಣಿಲಿ ನೀರು ತು೦ಬಿದ್ದು ಸತ್ಯ.

  [Reply]

  VA:F [1.9.22_1171]
  Rating: +1 (from 1 vote)
 4. ಇಂದಿರತ್ತೆ
  ಇಂದಿರತ್ತೆ

  ಹುಟ್ತಿದ ಲಾಗಾಯ್ತು ಈ ಕಥೆಯ ಎಷ್ಟು ಸರ್ತಿ ಕೇಳಿದ್ದೋ ಗೊಂತಿಲ್ಲೆ, ಆದರೂ ಪ್ರತಿಸರ್ತಿಯುದೆ ಈ ಘಟನೆ- ಸಂದರ್ಭ ಕಣ್ಣು ತುಂಬುಸುದಂತೂ ಸತ್ಯ. ರಾಮಾಯಣದ ಕಥೆ ಓದುವಾಗ ಪ್ರತಿಸರ್ತಿಯು ಹೃದಯಸ್ಪರ್ಶಿ ಆವುತ್ತು- ಇದೇ ಅಲ್ಲದಾ ಈ ಮಹಾಕಾವ್ಯದ ಸತ್ವ! ಕಥೆಗೆ ಇನ್ನಷ್ಟು ಪುಷ್ಟಿಕೊಡುವ ಬಾಲಣ್ಣನ ಚಿತ್ರವೂ ಅಷ್ಟೇ ಮನಮುಟ್ಟುತ್ತು.

  [Reply]

  VA:F [1.9.22_1171]
  Rating: +2 (from 2 votes)
 5. ಕೆ.ನರಸಿಂಹ ಭಟ್ ಏತಡ್ಕ

  ರಾಮಾಯಣವ ಏವ ಭಾಷೆಲಿ ಓದಿರೂ ಅರ್ಥ ಆವುತ್ತು.ಆದರೆ ಹೃದಯದ ಭಾಷೆ ಹೇಳುವದು ಬೇರೆಯೇ ಇದ್ದನ್ನೆ?

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಕಜೆವಸಂತ°ಡಾಮಹೇಶಣ್ಣಅನು ಉಡುಪುಮೂಲೆಶ್ರೀಅಕ್ಕ°ವಿನಯ ಶಂಕರ, ಚೆಕ್ಕೆಮನೆವಿದ್ವಾನಣ್ಣಬಂಡಾಡಿ ಅಜ್ಜಿಪುತ್ತೂರುಬಾವಉಡುಪುಮೂಲೆ ಅಪ್ಪಚ್ಚಿಜಯಗೌರಿ ಅಕ್ಕ°ಮುಳಿಯ ಭಾವಸುವರ್ಣಿನೀ ಕೊಣಲೆದೀಪಿಕಾವೇಣೂರಣ್ಣಶುದ್ದಿಕ್ಕಾರ°ಅಕ್ಷರದಣ್ಣಅಕ್ಷರ°ಪುತ್ತೂರಿನ ಪುಟ್ಟಕ್ಕಚೆನ್ನಬೆಟ್ಟಣ್ಣಪುಣಚ ಡಾಕ್ಟ್ರುಬೋಸ ಬಾವವಿಜಯತ್ತೆಡೈಮಂಡು ಭಾವದೊಡ್ಮನೆ ಭಾವಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ