Oppanna.com

ಮಕ್ಕೊಗೆ ರಾಮಾಯಣ – ಅಧ್ಯಾಯ 3 – ಭಾಗ -1

ಬರದೋರು :   ಕೈಲಾರು ಚಿಕ್ಕಮ್ಮ    on   16/10/2013    4 ಒಪ್ಪಂಗೊ

ಇಲ್ಲಿಯವರೆಗೆ

                                 ಸೀತೆಯ ಸ್ವಯ೦ವರ

ವಿಶ್ವಾಮಿತ್ರ ರಾಮಲಕ್ಷ್ಮಣರೊಟ್ಟಿ೦ಗೆ ಮಿಥಿಲಾನಗರಕ್ಕೆ ಬ೦ದು ಎತ್ತಿದ°.ಆವಗ ಅಲ್ಲಿ ಸೀತೆಯ ಸ್ವಯ೦ವರದ ಸಿದ್ಧತೆ ಭರಲ್ಲಿ ನೆಡಕ್ಕೊ೦ಡಿತ್ತು.ಜನಕ ಮಹಾರಾಜನ ಹೇಳಿಕೆಯ ಹಾ೦ಗೆ ಸ್ವಯ೦ವರ ನೆಡವ ಜಾಗೆಲಿ ಸಭೆಯ ನೆಡುಕೆ ಶಿವಧನುಸ್ಸಿನ ಮಡುಗಿತ್ತಿದ್ದವು.ಸಭೆಯ ತು೦ಬಾ ಚೆ೦ದಕೆ ಅಲ೦ಕರಿಸಿತ್ತಿದ್ದವು.

ಸೀತೆಯ ಸ್ವಯ೦ವರಕ್ಕೆ ಸಿದ್ಧತೆ     ಚಿತ್ರಃ ಮಧುರಕಾನನ ಬಾಲಣ್ಣ
ಸೀತೆಯ ಸ್ವಯ೦ವರಕ್ಕೆ ಸಿದ್ಧತೆ                 ಚಿತ್ರಃ ಮಧುರಕಾನನ ಬಾಲಣ್ಣ

ಆ ದೊಡ್ಡ ಸಭೆಲಿ ಹಲವು ರಾಜ್ಯ೦ಗಳ ರಾಜಕುಮಾರ೦ಗೊ ಕೂದಿತ್ತಿದ್ದವು.ಲ೦ಕೆಯ ದೊರೆಯಾದ ರಾವಣನುದೆ ಅಲ್ಲಿ ಇತ್ತಿದ್ದ°.ರಾವಣನ ಮನಸ್ಸಿಲಿ ಸೀತೆಯ ಸುಲಾಭಲ್ಲಿ ಕೈ ಹಿಡಿವಲೆಡಿಗು ಹೇಳಿ ಇತ್ತು.ಸೀತೆಯ ಕೈ ಹಿಡಿಯೆಕ್ಕಾದರೆ,ಶಿವಧನುಸ್ಸಿನ ಹೇ೦ಗೆ ಎದೆಯ ಮೇಲ೦ಗೆ ಏರ್ಸೆಕ್ಕು ಹೇಳಿ ಜನಕ ಮಹಾರಾಜ ತು೦ಬಿದ ಸಭೆಲಿ ಘೋಷಿಸಿದ°.
ಹಲವು ರಾಜ೦ಗೊ,ರಾಜಕುಮಾರ೦ಗೊಧನುಸ್ಸಿನ ಎದೆಗೇರ್ಸುಲೆ ಹರಸಾಹಸ ಮಾಡಿ ಉರುಡಿದವು.ಆರಿ೦ಗುದೆ ಧನುಸ್ಸಿನ ನೆಗ್ಗುಲೇ ಎಡ್ತತ್ತಿಲ್ಲೆ.ರಾವಣನುದೆ ಶಿವಧನುಸ್ಸಿನ ಎತ್ತುಲೆ ಹೆರಟ°.ಅದರ ನೆಗ್ಗುಲೆಡಿಯದ್ದೆ ಸಭೆಯ ನೆಡೂಕೆ ಧೊಪ್ಪನೆ ಬಿದ್ದ°.ನಾಚಿಕೆ,ಅವಮಾನ ಆಗಿ ತಲೆತಗ್ಗುಸಿ ಸಭೆ೦ದ ಹೆರ ನೆಡದ°.
ಆವಗ ವಿಶ್ವಾಮಿತ್ರ ರಾಮನ ಹೊಡೇ೦ಗೆ ತಿರುಗಿನೋಡಿ“ಮಗನೇ,ನಿನಗೂ ಆ ಶಿವಧನುಸ್ಸಿನ ಎತ್ತಿ ನೋಡುಲೆ ಆಶೆ ಇದ್ದು ಅಲ್ಲದಾ? ನೀನು ಅದರ ಭಾರ ಎಷ್ಟಿದ್ದು ಹೇಳಿ ಏಕೆ ನೋಡುಲಾಗ?” ಹೇಳಿ ಕೇಳಿದ°.ಮಹರ್ಷಿಗಳ ಮಾತಿ೦ಗೆ ಒಪ್ಪಿಗೆ ಕೊಟ್ಟು ರಾಮ ಎದ್ದು ನಿ೦ದ°.
ಇನ್ನೂ ಸಣ್ಣ ಪ್ರಾಯದ ಮಾಣಿಯ ಹಾ೦ಗೆ ಕಾ೦ಬ ಈ ರಾಮ೦ಗೆ ತು೦ಬಾ ಭಾರ ಇಪ್ಪ ಶಿವಧನುಸ್ಸಿನ ನೆಗ್ಗುಲೆಡಿಗಾ?ಹೇಳಿ ಜನಕರಾಜ೦ಗೆ ಸ೦ಶಯ ಆತು.ಒಟ್ಟಿ೦ಗೆ ರಾಮ೦ಗಿಪ್ಪ ರಾಜಕಳೆ,ತೇಜಸ್ಸು,ಧೈರ್ಯ,ಗಾ೦ಭೀರ್ಯ ಕ೦ಡು ಧೈರ್ಯವೂ ಬ೦ತು.ಅವ ರಾಮ೦ಗೆ ಸ್ಪರ್ಧೆಗೆ ಸೇರಿ ಧನುಸ್ಸಿನ ನೆಗ್ಗುಲೆ ಒಪ್ಪಿಗೆ ಕೊಟ್ಟ°.ರಾಮ ವಿಶ್ವಾಮಿತ್ರನ ಆಶೀರ್ವಾದ ಪಡಕ್ಕೊ೦ಡು ಆ ದಿವ್ಯ ಧನುಸ್ಸಿನ ಮಡುಗಿದಲ್ಲಿಗೆ ನೆಡದ°.ಅವ° ಹೆಚ್ಚು ಕಷ್ಟಪಡದ್ದೆ ಧನುಸ್ಸಿನ ಎದೆ ಮೇಲ೦ಗೆ ಏರ್ಸಿದ°.ಆವಗ ಆ ಶಿವ ಧನುಸ್ಸಿ೦ದ ” ಜೊ೦ಯ್ ” ಹೇಳ್ತ ದೊಡ್ಡ ಠೇ೦ಕಾರ ಸ್ವರ ಹೆರಟು ಅಲ್ಲೆಲ್ಲ ಪ್ರತಿಧ್ವನಿ ಆತು.ವಿಶ್ವಾಮಿತ್ರ ರಾಮ ಲಕ್ಷ್ಮಣರ ಬಿಟ್ಟು ಆ ಸಭೆಲಿದ್ದ ಎಲ್ಲೋರೂ ಆ ಸ್ವರ ಕೇಳಿಯೇ ಹೆದರಿ ನೆಡುಗಿದವು.
ಶ್ರೀರಾಮ ಶಿವ ಧನುಸ್ಸಿನ ಮುರಿವ ಕ್ಷಣ
ಶ್ರೀರಾಮ ಶಿವ ಧನುಸ್ಸಿನ ಮುರಿವ ಕ್ಷಣ

ರಾಮ ಧನುಸ್ಸಿನ ಆಟದ ಸಾಮಾನಿನ ಹಾ೦ಗೆ ಎತ್ತಿ ಎದೆಗೆ ಏರ್ಸಿದ್ದ°.ಅವ ಎತ್ತಿದ ರಭಸಕ್ಕೇ ಧನುಸ್ಸು ತು೦ಡಾತು.ಜನಕ ಮಹಾರಾಜ೦ಗೆ ಇದರ ನೋಡಿ ಸ೦ತೋಷ ಆತು.ರಾಮನೇ ಅಯೋಧ್ಯೆಯ ಯುವರಾಜ° ಹೇಳಿ ಗೊ೦ತಾಗಿಯಪ್ಪಗ ಅವನ ಸ೦ತೋಷ ಇನ್ನೂ ಹೆಚ್ಚಾತು.ಇವನೇ ಸೀತೆಯ ಕೈಹಿಡಿವ ಯೋಗ್ಯ ವರ° ಹೇಳಿ ಸ೦ಭ್ರಮ ಪಟ್ಟ°.ವಿಶ್ವಾಮಿತ್ರನ ಸಲಹೆಯ ಹಾ೦ಗೆ ಜನಕರಾಜ ದೂತರ ಹತ್ತರೆ ಅಯೋಧ್ಯೆಗೆ ಹೇಳಿಕೆ ಕಳ್ಸಿದ°.ಆ ಹೇಳಿಕೆಲಿ -“ಸ್ವಯ೦ವರಲ್ಲಿ ಗೆದ್ದ ಶ್ರೀರಾಮ ಎನ್ನ ಮಗಳು ಸೀತೆಯ ಕೈ ಹಿಡಿವೋನಿದ್ದ°.ನಿ೦ಗೊ ಎಲ್ಲೋರೂ ಕುಟು೦ಬ ಸಮೇತ ಮಿಥಿಲೆಗೆ ಬರೆಕ್ಕು.ಸೀತೆಯ ನಿ೦ಗಳ ಸೊಸೆಯಾಗಿ ಸ್ವೀಕರಿಸಿ ಆಶೀರ್ವಾದ ಮಾಡೆಕ್ಕು” ಹೇಳಿ ಒಕ್ಕಣೆ ಇತ್ತು.ಈ ಶುದ್ದಿ ಕೇಳಿ ದಶರಥ ಮಹಾರಾಜ೦ಗೆ ತು೦ಬಾ ಕೊಶಿ ಆತು.ಅವ° ಕೂಡ್ಳೇ ಮಿಥಿಲೆಗೆ ಹೆರಡುವ ತಯಾರಿ ಮಾಡಿದ°.ಅವನೊಟ್ಟಿ೦ಗೆ ರಾಣಿಯರಾದ ಕೌಸಲ್ಯೆ,ಸುಮಿತ್ರೆ,ಕೈಕೇಯಿ ಮತ್ತೆ ಅವರ ದಾಸಿಯರು,ಮಕ್ಕಳಾದ ಭರತ , ಶತ್ರುಘ್ನರು,ಆಸ್ಥಾನದ ಮ೦ತ್ರಿಗೊ,ವಸಿಷ್ಠ ಮುನಿಗೊ,ಜೆನ೦ಗೊ ಎಲ್ಲಾ ಸೇರಿ ದೊಡ್ಡ ದಿಬ್ಬಣ ಹೆರಟವು.
 
(ಸಶೇಷ)
ಸೂ.ಃ

  • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
  • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
    – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

4 thoughts on “ಮಕ್ಕೊಗೆ ರಾಮಾಯಣ – ಅಧ್ಯಾಯ 3 – ಭಾಗ -1

  1. ಶ್ರೀ ರಾಮನ ಚಿತ್ರ ಸಹಿತವಾದ ಕಥೆ ತುಂಬಾ ಒಳ್ಳೇದಾಗಿ ಬತ್ತಾ ಇದ್ದು. ವಾಲ್ಮೀಕೀ ಜಯಂತಿಯ ಸುಸಂಧರ್ಭಲ್ಲಿ ವಿಶ್ವಹಿಂದೂ ಪರಿಷತ್ ಈ ಹುಣ್ಣಿಮೆಯ “ಅಯೋಧ್ಯೆಲಿ ಶ್ರೀರಾಮ ದೇಗುಲ ನಿರ್ಮಾಣಕ್ಕಾಗಿ ಸಂಕಲ್ಪ ದಿನ”ವಾಗಿ (೧೮-೧೦-೨೦೧೩) ಭಾರತದಾದ್ಯಂತ ಆಚರಿಸುತ್ತಿದ್ದು, ಎಲ್ಲಾ ಹವ್ಯಕ ಬಂಧುಗಳೂ ಈ ಕಾರ್ಯಕ್ರಮಲ್ಲಿ ಭಾಗವಹಿಸೆಕ್ಕು ಹೇಳಿ ಕೇಳಿಕೊಳ್ಳುತ್ತೆ. ಹರೇ ರಾಮ.

  2. ಸೀತೆಯ ಸ್ವಯಂವರ ಭಾರಿ ರೈಸಿದ್ದು ,ಅಭಿನಂದನೆಗ ಕೈಲಾರು ಚಿಕ್ಕಮ್ಮ ಬಪ್ಪವಾರ ಬಾರೀ ಗಡುದ್ದು ಮದುವೆ ಇಕ್ಕು ಹೇಳಿ ಕಾಯ್ತಾ ಇದ್ದೆಯ ಎಂಗ

  3. ದೊಡ್ಡವಕ್ಕೂ ಓದುಲೆ ಕೊಶಿ ಆವುತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×