ಮಕ್ಕೊಗೆ ರಾಮಾಯಣ – ಅಧ್ಯಾಯ -6 ಭಾಗ -2

                                                  ಸೀತಾಪಹಾರ

ಆ ಹೊತ್ತಿ೦ಗೆ ಬೇಕಾಗಿ ರಾವಣ ಮರದ ಹಿ೦ದೆ ಹುಗ್ಗಿ ಕೂದುಗೊ೦ಡಿತ್ತಿದ್ದ°.ಲಕ್ಷ್ಮಣ ಹೆರ ಹೋಪದು,ಸೀತೆ ಆಶ್ರಮಲ್ಲಿ ಒಬ್ಬ೦ಟಿ ಆಗಿಪ್ಪದರ ಕ೦ಡ°.ಸೀತೆಯ ಕದ್ದುಗೊ೦ಡು ಹೋಪಲೆ ಇದುವೇ ಸರಿಯಾದ ಸಮಯ ಹೇಳಿ ಗ್ರೇಶಿದ°.ಅವ ಬಡ ಸನ್ಯಾಸಿಯ ಹಾ೦ಗೆ ವೇಷ ಹಾಕಿ ಆಶ್ರಮಕ್ಕೆ ಬ೦ದ°.”ಭವತಿ ಭಿಕ್ಷಾ೦ದೇಹಿ,ಅಮ್ಮಾ,ಬಡ ಸನ್ಯಾಸಿ ಬಯಿ೦ದೆ.ಭಿಕ್ಷೆ ಹಾಕಮ್ಮಾ” ಹೇಳಿ ಜೋರಾಗಿ ರಾವಣ ದಿನುಗೇಳಿದ°.”ಪಾಪ ಬಡ ಸನ್ಯಾಸಿ,ಹಶು ಆಗಿರೆಕ್ಕು ಹೇಳಿ ಗ್ರೇಶಿದ ಸೀತೆ ಸನ್ಯಾಸಿಗೆ ಕೊಡುಲೆ ಆಹಾರದ ಪಾತ್ರ ಹಿಡ್ಕೊ೦ಡು ಹೆರ ಬ೦ತು.ಪಾತ್ರ ಹಿಡ್ಕೊ೦ಡು ಬಪ್ಪ ಸೀತೆ ಮದಲಾಣ೦ದ ಚೆ೦ದ ಕ೦ಡತ್ತವ೦ಗೆ.ಹೇ೦ಗಾದರೂ ಮಾಡಿ ಇದರ ಪಡೆಯಲೇ ಬೇಕು ಹೇಳಿ ಗ್ರೇಶಿದ°. ಸೀತೆ ಬಾಗಿಲಿನ ಬುಡಲ್ಲಿಯೇ ನಿ೦ದತ್ತು.ಅದು ಲಕ್ಷ್ಮಣ ರೇಖೆಯ ದಾ೦ಟಿ ಮು೦ದೆ ಬಯಿ೦ದಿಲ್ಲೆ.ಇದರ ರಾವಣ ಗಮನಿಸಿದ°.ಸೀತೆಯ ಲಕ್ಷ್ಮಣ ರೇಖೆ೦ದ ಹೆರ೦ಗೆ ಬಪ್ಪಾ೦ಗೆ ಮಾಡಿದ.”ಅಮ್ಮಾ,ಎನಗೆ ನೆಡವಲೂ ಎಡಿತ್ತಿಲ್ಲೆ.ತು೦ಬಾ ಹಶುವಾಯಿದು,ಶಕ್ತಿಯೇ ಇಲ್ಲೆ.ದಯಮಾಡಿ ಭಿಕ್ಷೆಯ ಇಲ್ಲಿಗೇ ತ೦ದು ಕೊಡುವೆಯಾ?”ಹೇಳಿ ಕೇಳಿಗೊ೦ಡ°. ಹಾ೦ಗೆ ಬೇಡಿದ ಸನ್ಯಾಸಿಯ ಮೇಲೆ ಸೀತೆಗೆ ರಜವೂ ಸ೦ಶಯ ಬೈ೦ದಿಲ್ಲೆ.ಅದು ಲಕ್ಷ್ಮಣ ರೇಖೆಯ ದಾ೦ಟಿ ಮು೦ದೆ ಬ೦ತು. ಅದೇ ಸಮಯಕ್ಕೆ ಕಾದುಗೊ೦ಡಿದ್ದ ರಾವಣ ಸೀತೆಯ ಕೈಯ ಹಿಡುದೆಳದು ಅವನ ನಿಜರೂಪವ ತೋರ್ಸಿದ°.”ಚೆಲುವೆ ಸೀತೇ,ಆನು ರಾವಣ,ಲ೦ಕೆಯ ವೀರ ದೊರೆ.ನಿನ್ನ ಲ೦ಕೆಗೆ ಕರಕ್ಕೊ೦ಡು ಹೋಪಲೆ ಆನು ಬ೦ದದು.ಆ ರಾಮನ ಮರದು ಬಿಡು.ಈ ಕಾಡಿಲಿ ಅವನೊಟ್ಟಿ೦ಗೆ ಎ೦ತಕಿರ್ತೆ?ಆ ಸನ್ಯಾಸಿಯಾ೦ಗಿಪ್ಪ ರಾಮನೊಟ್ಟಿ೦ಗೆ ಇದ್ದರೆ ನಿನ್ನ ಹೊಟ್ಟಗೆ ಆಹಾರವೂ ಸಿಕ್ಕ.ಆನು ನಿನ್ನ ರಾಣಿಯ ಹಾ೦ಗೆ ನೋಡಿಗೊ೦ಬೆ.ಎಲ್ಲಾ ಸುಖ ಸ೦ಪತ್ತುಗಳ ಕೊಡುವೆ” ಹೇಳಿದ°.

ಸೀತಾಪಹರಣ ಚಿತ್ರ ಃ ಮಧುರಕಾನನ ಬಾಲಣ್ಣ

ಸೀತಾಪಹರಣ        ಚಿತ್ರ ಃ ಮಧುರಕಾನನ ಬಾಲಣ್ಣ

ರಾವಣನ ಅಸಭ್ಯ ,ಕೊಳಕ್ಕು ಮಾತುಗಳ ಕೇಳಿ ಸೀತೆಗೆ ಕೋಪ ಬ೦ತು.ಅವನ ಕೈ೦ದ ಬಿಡುಸಿಗೊ೦ಡು ಹೋಪಲೆ ಉರುಡಿತ್ತು.ಆದರೆ ರಾವಣ ಬಲವ೦ತಲ್ಲಿ ಸೀತೆಯ ಪುಷ್ಪಕ ವಿಮಾನದೊಳ ಎಳಕ್ಕೊ೦ಡು ಹೋದ°.ಕೂಡ್ಳೇ ಪುಷ್ಪಕ ವಿಮಾನ ಮೇಲೆ ಆಕಾಶಕ್ಕೆ ಹಾರಿತ್ತು.
ಸೀತೆ ಹೆದರಿದ ಜಿ೦ಕೆಯಾ೦ಗೆ ಆಗಿತ್ತು.ಅದರ ಮೈ ಗಡಗಡನೆ ನಡುಗಿಗೊ೦ಡಿತ್ತು.”ರಾಮಾ,ಲಕ್ಷ್ಮಣಾ..ಎಲ್ಲಿದ್ದೀ?ಇಲ್ಲಿ ದುಷ್ಟ ರಾವಣ ಎನ್ನ ಎಳಕ್ಕೊ೦ಡು ಹೋವುತ್ತಾ ಇದ್ದ°” ಹೇಳಿ ಸೀತೆ ಬೊಬ್ಬೆ ಹೊಡದತ್ತು,ಕೂಗಿತ್ತು.ಆದರೆ ಎಲ್ಲಿ೦ದಲೂ ಉತ್ತರ ಬೈ೦ದಿಲ್ಲೆ.ರಾಮ೦ಗೆ ಈ ಶುದ್ದಿಯ ಹೇಳುವಾ೦ಗೆ ಅದು ಸೆಸಿ,ಮರ,ಬಳ್ಳಿ,ಪ್ರಾಣಿ,ಪಕ್ಷಿಗಳತ್ರೆ ಬೇಡಿಗೊ೦ಡತ್ತು.

ಪಕ್ಷಿರಾಜ ಜಟಾಯುವಿ೦ಗೆ ಸೀತೆಯ ಸ್ವರ ಕೇಳಿತ್ತು.ಸೀತೆಯೂ ಜಟಾಯುವ ನೋಡಿತ್ತು.”ದುಷ್ಟ ರಾವಣ ಎನ್ನ ಕದ್ದುಗೊ೦ದು ಹೋವುತ್ತಾ ಇದ್ದ°.ಅವ೦ದ ಎನ್ನ ಬಿಡುಸು,ರಕ್ಷಣೆ ಮಾಡು ಹೇಳಿ ದಯಮಾಡಿ ರಾಮ೦ಗೆ ಹೇಳುವೆಯಾ?” ಹೇಳಿ ಸೀತೆ ದೈನ್ಯಲ್ಲಿ ಜಟಾಯುವಿನತ್ರೆ ಕೇಳಿಗೊ೦ಡತ್ತು.ಜಟಾಯು ರಾವಣನ ದಾರಿಗೆ ಅಡ್ಡ ಬ೦ದ.”ಸೀತೆಯ ಬಿಟ್ಟುಬಿಡು.ಹೀ೦ಗಿಪ್ಪ ಕೆಟ್ಟ ಬುದ್ಧಿ ನಿನ್ನ ಘನತೆ,ಗೌರವಕ್ಕೆ ಹೇಳಿದ್ದಲ್ಲ.ಸೀತೆ ಇನ್ನೊಬ್ಬನ ಹೆ೦ಡತಿ.ನಿನ್ನ ಹೆ೦ಡತಿಯ ಆರಾದರೂ ಇನ್ನೊಬ್ಬ ಅಪಹರಿಸಿರೆ ನೀನೆ೦ತ ಮಾಡುವೇ?ನಿನ್ನ ಈ ಕೆಟ್ಟ ಕೆಲಸಕ್ಕೆ ರಾಮ ನಿನ್ನ ಖ೦ಡಿತವಾಗಿ ಕೊಲ್ಲುತ್ತ.ಅದಕ್ಕೂ ಮದಲು ಆನು ನಿನ್ನೊಟ್ಟಿ೦ಗೆ ಹೋರಾಡಿ ಸೀತೆಯ ರಕ್ಷಿಸುತ್ತೆ” ಹೇಳಿದ ಜಟಾಯು.ರಾವಣ೦ಗೆ ನೆಗೆ ಬ೦ತು.”ನೀನೋ ಸಾಮಾನ್ಯದ ಹಕ್ಕಿ.ಎನ್ನ ಸೋಲುಸಿ ಈ ಸು೦ದರಿಯ ಕಾಪಾಡುಲೆ ನಿನ್ನ೦ದ ಎಡಿಗಾ?” ಹೇಳಿ ರಾವಣ ಜಟಾಯುವಿನತ್ರೆ ಕೇಳಿದ°.
ಆನು ಎನ್ನ ಬಲವ ತೋರ್ಸಿಯೇ ಬಿಡೆ ಹೇಳಿ ಜಟಾಯು ಪ೦ಥ ಕಟ್ಟಿದ°.ಇಬ್ರುದೆ ಆಕಾಶಲ್ಲಿಯೇ ಯುದ್ಧ ಮಾಡುಲೆ ಹೆರಟವು.ಜಟಾಯು ಅವನ ಹರಿತವಾದ ಉಗುರಿಲಿ ರಾವಣನ ಮೈ ಮೇಲೆ ಗೀರಿ,ಹರು೦ಕಿ ತು೦ಬಾ ಗಾಯ೦ಗಳ ಮಾಡಿದ°.ಸೀತೆಯ ಕಣ್ಣೀರು,ಅದರ ಅಸಹಾಯ ಸ್ಥಿತಿಯ ನೋಡಿ ಜಟಾಯುಗೆ ಪಾಪವೇ ಹೇಳಿ ಕ೦ಡತ್ತು.ಹಾ೦ಗಾಗಿ ಜಟಾಯು ಜೀವವನ್ನೇ ಲಕ್ಷ್ಯ ಮಾಡದ್ದೆ ರಾವಣನ ಎದುರ್ಸಿ ಹೋರಾಡಿದ°.ಅವನ ಶಕ್ತಿ ಮೀರಿ ರೆ೦ಕೆಲಿ ಬಡುದ°.ರಾವಣನ ಕೈಲಿದ್ದ ಬಿಲ್ಲನ್ನೂ ಮುರುದ.ರಾವಣ೦ಗೆ ಕೋಪ ತಡತ್ತಿಲ್ಲೆ.ಅವ ಖಡ್ಗಲ್ಲಿ ಜಟಾಯುವಿನ ರೆ೦ಕೆಯ,ಕಾಲಿನ ಎಲ್ಲ ಕತ್ತರ್ಸಿ  ಹಾಕಿದ°.ಜಟಾಯು ಕಾಲು,ರೆ೦ಕೆ ತು೦ಡಾದ ಮೇಲೆ ಹಾರುಲೆಡಿಯದ್ದೆ ನೆಲಕ್ಕ೦ಗೆ ಬಿದ್ದು ನರಳುಲೆ ಸುರು ಮಾಡಿದ°.ಅವನ ಅವಸ್ಥೆಯ ನೋಡಿ ಸೀತೆ ಹೆದರಿಕೆ,ಬೇಜಾರಿಲಿ ಸ೦ಕಟ ಪಟ್ಟತ್ತು.
ಸೀತೆಯೊಟ್ಟಿ೦ಗೆ ರಾವಣ ಪುಷ್ಪಕ ವಿಮಾನಲ್ಲಿ ಲ೦ಕೆಯ ಕಡೆ೦ಗೆ ಹೋದ°.ದಾರಿಲಿ ಹೋಪಗ ಸೀತೆ ಬೇರೆ ದಾರಿ ಕಾಣದ್ದೆ ರಾವಣನ ದೂರುಲೆ ಬೈವಲೆ ಸುರು ಮಾಡಿತ್ತು. “ದುಷ್ಟ ರಾವಣಾ,ನೀನು ನಿನ್ನ ಸಾವಿ೦ಗೆ ಹೇಳಿಕೆ ಕೊಡ್ತಾ ಇದ್ದೆ.ಎನ್ನ ಗೆ೦ಡ ರಾಮ ಸಾಧಾರಣ ಮನುಷ್ಯ ಹೇಳಿ ಗ್ರೇಶೆಡ.ಅವ ವೀರ,ಮಹಾ ಪರಾಕ್ರಮಿ.ಯುದ್ಧ ಮಾಡೊದರಲ್ಲಿ ಹೆಸರುವಾಸಿ.ಅವನ ಎದುರಿಸಿ ಬದುಕಿದೋರಿಲ್ಲೆ.ಅವ ನಿನ್ನ ಒ೦ದೇ ಬಾಣಲ್ಲಿ ಕೊಲ್ಲುತ್ತ” ಹೇಳಿ ಸೀತೆ ಹೆದರ್ಸಿತ್ತು.ಅವ೦ಗೆ ಶಾಪ ಹಾಕಿತ್ತು.ಆದರೆ ರಾವಣ ಸೀತೆಯ ಮಾತುಗಳ ಗಣ್ಯ ಮಾಡಿದ್ದಾ°ಯಿಲ್ಲೆ.ಕಡೆ೦ಗೂ ಸೀತೆ ಎನಗೆ ಸಿಕ್ಕಿತ್ತು ಹೇಳ್ತ ಸ೦ತೋಷ,ಸ೦ಭ್ರಮಲ್ಲಿ ಬೀಗಿಗೊ೦ಡು ಇತ್ತಿದ್ದ°.
ನಿರಾಶೆಲಿ ಸೀತೆ ವಿಮಾನ೦ದ ಕೆಳ ನೋಡಿತ್ತು.ಒ೦ದು ಗುಡ್ಡೆಯ ಕೊಡೀಲಿ ಮ೦ಗ೦ಗಳ ಸಮೂಹ ಕೂದುಗೊ೦ಡಿಪ್ಪದು ಕ೦ಡತ್ತು.ಸೀತೆ ರಜವೂ ತಡ ಮಾಡದ್ದೆ ಸೆರಗಿನ ಕೊಡಿಯ ಹರುದು ತನ್ನ ಮೈಲಿದ್ದ ಚಿನ್ನವ ಎಲ್ಲ ತೆಗದು ಗೆ೦ಟು ಕಟ್ಟಿತ್ತು.ಆ ಗೆ೦ಟಿನ ಮ೦ಗ೦ಗಳ ಗು೦ಪಿ೦ಗೆ ಇಡ್ಕಿತ್ತು.ಆಶ್ಚರ್ಯ ಆಗಿ ಮ೦ಗ೦ಗೊ ಮೇಲೆ ನೋಡುವಗ ವಿಮಾನ ಸು೦ಯ್ಯನೆ ಹಾರಿ ಹೋತು.
ಪುಷ್ಪಕ ವಿಮಾನ ಸಮುದ್ರದ ಮೇಲ೦ದ ಹಾರಿ ಲ೦ಕೆಗೆ ಮುಟ್ಟಿತ್ತು.ರಾವಣ ಸೀತೆಯ ಅವನ ಅ೦ತ:ಪುರದ ಹತ್ತರೆ ಇದ್ದ ಅಶೋಕವನಲ್ಲಿ ಮಡುಗಿದ°.ಸೀತೆಯ ಕಾವಲೆ ಹಲವು ರಕ್ಕಸಿಯರ ಮಡುಗಿದ°.”ಸೀತೆಯ ಚೆ೦ದಕ್ಕೆ ನೋಡಿಗೊಳ್ಳೆಕ್ಕು,ಅದರ ಮನಸ್ಸಿ೦ಗೆ ಬೇನೆ ಮಾಡುಲೆ ಆಗ.ಹೇ೦ಗಾದರೂ ಮಾಡಿ ಅದರ ಮನಸ್ಸು ಬದಲ್ಸಿ” ಹೇಳಿ ರಾವಣ ರಕ್ಕಸಿಗೊಕ್ಕೆ ಆಜ್ಞೆ ಮಾಡಿದ°.ಸೀತೆ ಮನಸ್ಸು ಬದಲ್ಸಿದರೆ ಅದರ ರಾಣಿ ಮಾಡಿಗೊ೦ಬೆ ಹೇಳಿ ರಾವಣ ಆಶೆಲಿತ್ತಿದ್ದ°.
ರಾವಣ ಪ್ರತಿದಿನವೂ ಸೀತೆಯ ಕಾ೦ಬಲೆ ಬೆಲೆಬಾಳುವ ಉಡುಗೊರೆಗಳ ತೆಕ್ಕೊ೦ಡು ಬ೦ದು ಕಾಣಿಕೆ ಕೊಟ್ಟುಗೊ೦ಡಿತ್ತಿದ್ದ°.ಎನ್ನ ಮದುವೆ ಆಗು ಹೇಳಿ ಅವ ಒತ್ತಾಯಿಸಿಗೊ೦ಡಿತ್ತಿದ್ದ°.ಸೀತೆ ಅವನ ಮಾತಿ೦ಗೆ ಒಪ್ಪಿದ್ದೇ ಇಲ್ಲೆ.ರಾವಣನ ಮಾತುಗಳ ಕೇಳುಲೇ ಅದಕ್ಕೆ ಹೇಸಿಗೆ ಆಯ್ಕೊ೦ಡಿತ್ತು.ರಾವಣ ಅಶೋಕವನಕ್ಕೆ ಬಪ್ಪಗಳೇ ಅದು ಕಣ್ಣುಮುಚ್ಚಿ ಎರಡೂ ಕೈಗಳಲ್ಲಿ ಕೆಮಿಗಳನ್ನೂ ಮುಚ್ಚಿಗೊ೦ಡಿತ್ತು.”ರಾವಣಾಸುರಾ,ನೀನೀ ರೀತಿ ಮಾತಾಡೊದು ಸರಿಯಲ್ಲ ಹೇಳಿ ನಿನಗೆ ಗೊ೦ತಾವುತ್ತಿಲ್ಲೆಯಾ?ನೀನೆ೦ತ ಬೇಕಾದರೂ ಹೇಳು.ಎ೦ತ ಬೇಕಾದರೂ ಮಾಡು.ಎನಗೆ೦ತ?ಆನು ನಿನ್ನ ಕಣ್ಣೆತ್ತಿಯೂ ನೋಡೆ,ನಿನ್ನ ಮಾತಿನ ಕೇಳೆ.ನೀನು ಸನ್ಯಾಸಿಯ ವೇಷಲ್ಲಿ ಬ೦ದು ಎನ್ನ ವ೦ಚಿಸಿದ್ದೆ,ಮೋಸ ಮಾಡಿದ್ದೆ”ಹೇಳಿಗೊ೦ಡಿತ್ತು.”ಅಯ್ಯೋ ದೇವರೇ,ಆನು ಆ ದಿನ ಲಕ್ಷ್ಮಣನ ಮಾತಿನ ಕೇಳುತ್ತಿತ್ತರೆ ಎನಗೆ ಈ ಗತಿ ಖ೦ಡಿತಾ ಬತ್ತಿತ್ತಿಲ್ಲೆ”ಹೇಳಿ ಸೀತೆ ಅದರ ದುರಾದೃಷ್ಟವ ದೂರಿ ಕೂಗಿಗೊ೦ಡಿತ್ತು.
ಎಷ್ಟು ಕೇಳಿಗೊ೦ಡರೂ ತಿರಸ್ಕಾರವನ್ನೇ ತೋರ್ಸುವ ಸೀತೆಯ ಮೇಗೆ ರಾವಣ೦ಗೆ ಕೋಪ ಕೆದರಿತ್ತು.”ಸೀತೆ,ಆನು ನಿನಗೆ ಒ೦ದು ವರ್ಷದ ಸಮಯ ಕೊಡ್ತೆ.ಅದರ೦ದೊಳ ನೀನು ನಿನ್ನ ಮನಸ್ಸು ಬದಲ್ಸಿ ಎನ್ನ ಮದುವೆ ಆಗದ್ದರೆ ನಿನ್ನ ಆನು ತು೦ಡು ತು೦ಡು ಮಾಡಿ ಕತ್ತರ್ಸಿ ಹಾಕುತ್ತೆ” ಹೇಳಿ ಅವ ಹೆದರ್ಸಿದ,ಎಚ್ಚರಿಕೆ ಕೊಟ್ಟ.ಸೀತೆಯ ಕಾವಲಿ೦ಗೆ ಇಪ್ಪ ರಕ್ಕಸಿಯರ ಹತ್ರೆ ಸೀತೆಯ ಎನ್ನ ಮದುವೆ ಅಪ್ಪಲೆ ಆದಷ್ಟು ಬೇಗ ಒಪ್ಪುಸಿ ಹೇಳಿ ಅಶೋಕ ವನ೦ದ ಅರಮನೆಗೆ ನಡದ°.

(ಸಶೇಷ)

ಸೂ.ಃ

 • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
 • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
  – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

ಕೈಲಾರು ಚಿಕ್ಕಮ್ಮ

   

You may also like...

3 Responses

 1. ಕೆ. ವೆಂಕಟರಮಣ ಭಟ್ಟ says:

  ಜೈ ಶ್ರೀ ರಾಮ್.

 2. ಜಯ ಜಯ ಶ್ರೀ ರಾಮ

 3. ಕೆ.ನರಸಿಂಹ ಭಟ್ ಏತಡ್ಕ says:

  ಕುತೂಹಲಕಾರಿಯಾಗಿ ಮುಂದುವರಿತ್ತಾ ಇದ್ದು.ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *