ಮಕ್ಕೊಗೆ ರಾಮಾಯಣ -ಅಧ್ಯಾಯ ೧೦ ಭಾಗ ೧

ಇಲ್ಲಿಯವರೆಗೆ

 

                                                ರಾಮ- ರಾವಣರ ಯುದ್ಧ

ಹನುಮಂತ ಲಂಕೆಗೆ ಹೋಗಿ ಸೀತೆಯ ಪತ್ತೆಮಾಡಿ ವಿಜಯಿಯಾಗಿ ಬಂದದು, ರಾಮಂಗೆ ಅವನ ಮೇಲೆ ಅಭಿಮಾನವೂ ಆತು, ಸಂತೋಷವೂ ಆತು. ಸುಗ್ರೀವಂದೆ ಕೊಟ್ಟ ಮಾತಿನ ಒಳಿಶಿಗೊಂಡಿತ್ತಿದ್ದ°. ರಾಮ ಲಂಕೆಗೆ ಹೋಪ, ಸೀತೆಯ ಕಾಪಾಡುವ ಯೋಜನೆ ತಯಾರುಮಾಡುಲೆ ಹೆರಟ°. “ಸುಗ್ರೀವ, ನೀನು ನಿಜವಾದ ಗೆಳೆಯ° ಹೇಳಿ ಸಾಧಿಸಿ ತೋರಿಸಿದೆ.ಆನು ನಿನ್ನ ಸಹಾಯವ ಇನ್ನೂಹೆಚ್ಚು ಪಡೆಯೆಕ್ಕಾಯಿದು. ಸೇಡು ತೀರುಸುಲೆ ರಾವಣ ಸೀತೆಯ ಕೊಲ್ಲುಗೋ ಹೇಳಿ ಎನಗೆ ಹೆದರಿಕೆ ಆವುತ್ತು. ಆದ ಕಾರಣ ಬೇಗ ನಿನ್ನ ಸೇನೆಯ ತಯಾರು ಮಾಡು” ಹೇಳಿ ರಾಮ ಸುಗ್ರೀವಂಗೆ ಹೇಳಿದ°.
ರಾಮ ಹನುಮಂತನ ಹತ್ತರಂಗೆ ಬಪ್ಪಲೇಳಿ ಪ್ರೀತಿಲಿ ಅವನ ಎರಡೂ ಕೈಗಳ ಗಟ್ಟಿಯಾಗಿ ಹಿಡ್ಕೊಂಡು, “ಮಾರುತಿ, ನಿನ್ನ ಸಹಾಯಕ್ಕೆ ಆನು ತುಂಬಾ ಕೃತಜ್ಞ ಆಯಿದೆ- ಲಂಕೆಗೆ ಸಮುದ್ರ ಹಾರಿ ಹೋಪ ಶಕ್ತಿ ನಿನಗೆ ಮಾಂತ್ರ ಇದ್ದು,  ಆದರೆ ಎಂಗೊ ಎಲ್ಲಾ ಲಂಕೆಗೆ ಹೋಪದು ಹೇಂಗೆ?” ಕೇಳಿದ. ರಾಮ ಅವನ ನಂಬಿಗೆಯ ಗೆಳೆಯ ಹನುಮಂತನ ಹತ್ತರೆ ಲಂಕಾನಗರದ ರಚನೆ, ಅದರ ಮುಖ್ಯ ಬಾಗಿಲುಗೊ, ಕೋಟೆಯ ಸುತ್ತಲೂ ಇಪ್ಪ ಕಂದಕಂಗೊ ಇತ್ಯಾದಿ ಎಲ್ಲಾ ವಿವರಂಗಳ ಕೇಳಿ ತಿಳ್ಕೊಂಡ°. ರಾಮಂಗೆ ಆಕ್ರಮಣಂದ ಮದಲಾಣ ತಯಾರಿಯ ಮಾಡೆಕ್ಕಾಗಿತ್ತು. ಹನುಮಂತ ಲಂಕೆಯ ಎಲ್ಲಾ ವಿವರಂಗಳನ್ನೂ ಕೊಟ್ಟ°.
ಹನುಮಂತ ಲಂಕೆಯ ಸುಟ್ಟುಹಾಕಿದ್ದರೂ ರಾವಣ ಅದರ ಕೂಡ್ಳೇ ಪುನರ್ನಿರ್ಮಾಣ ಮಾಡಿದ್ದ° ಹೇಳ್ತ ವಿಚಾರವೂ ಗೊಂತಿತ್ತು. ಹನುಮಂತ ರಾಮಂಗೆ ಹೇಳಿದ°, ” ಸ್ವಾಮೀ, ನಾವು ಒಂದರಿ ಸಮುದ್ರವ ದಾಂಟಿದರೆ ಮತ್ತೆ ಲಂಕೆ ನಮ್ಮದೇ ಆವುತ್ತು. ಇದರಲ್ಲಿ ಯಾವ ಸಂಶಯವೂ ಇಲ್ಲೆ. ಆನು, ಅಂಗದ, ನೀಲ, ಜಾಂಬವಂತ, ಮತ್ತೆ ಬೇರೆ ತುಂಬಾ ವಾನರವೀರಂಗಳನ್ನೂ ಕರಡಿಗಳನ್ನೂ ಬರಿಸಿ ಯುದ್ಧಕ್ಕೆ ತಯಾರಪ್ಪಲೆ ಹೇಳುವೆ” ಹೇಳಿ ಹನುಮಂತ ರಾಮಂಗೆ ಭರವಸೆ ಕೊಟ್ಟ°.
ಸುಗ್ರೀವನ ಆಜ್ಞೆ ಆತು, ಸಾವಿರಗಟ್ಳೆ ವಾನರಂಗೊ ಯುದ್ಧಕ್ಕೇಳಿ ಸೇರಿದವು. ವಾನರಂಗಳ ದೊಡ್ಡ ಸೈನ್ಯ ಸಮುದ್ರದ ಹೊಡೆಂಗೆ ಸಾಗಿತ್ತು. ಸಮುದ್ರ ಎದುರಪ್ಪಗ ಸೈನ್ಯ ಅಲ್ಲಿಯೇ ನಿಂದುಬಿಟ್ಟತ್ತು. ಅವಕ್ಕೆಲ್ಲ ಸಮುದ್ರವ ಹೇಂಗೆ ದಾಂಟುದು ಹೇಳಿಯೇ ಅರಡಿಯದ್ದಾಂಗಾತು. ಹೆಚ್ಚು ದೂರ ಹಾರುಲೂ ಎಡಿಯ.ಸಮುದ್ರದ ನೀರಿಲಿ ಹೆಚ್ಚು ಹೊತ್ತು ಮೀಂದುಲೂ ಎಡಿಯದ್ದೆ ಮುಳುಗಿಹೋಕು ಹೇಳಿ ವಾನರಂಗೊ ಹೆದರಿದವು.
ಅದೇರೀತಿ ಲಂಕೆಲಿಯೂ ಯುದ್ಧ ಅಪ್ಪಲೆಡೆಯಿದ್ದು ಹೇಳಿ ಅಲ್ಯಾಣ ಜೆನಂಗೊ ಹೆದರಿದವು. ಅವು ಕೇವಲ ಒಂದು ಕೋತಿಯ ಶಕ್ತಿಸಾಮರ್ಥ್ಯದ ಹಾವಳಿಯ ಕಂಡಿದವು. ಹೀಂಗಿಪ್ಪ ನೂರಾರು ಕೋತಿಗೊ ಲಂಕೆಗೆ ಮುತ್ತಿಗೆ ಹಾಕಿರೆ ಲಂಕೆಯ ಗತಿ ಹೇಂಗಕ್ಕು ಹೇಳಿ ಅವಕ್ಕೆಲ್ಲ ಹೆದರಿಕೆ ಆತು. ಆದರೂ ಅವು, ಎಂಗೊ ರಾಕ್ಷಸರು ವೀರಂಗೊ, ಧೈರ್ಯವಂತಂಗೊ ಹೇಳಿ ತೋರಿಸಿಗೊಂಬಲೆ ಮನಸ್ಸು ಮಾಡಿದವು. ಈ ರಾಮ ಮತ್ತೆ ವಾನರಂಗೊ ಎಲ್ಲ ನಮ್ಮಾಂಗಿಪ್ಪ ರಾಕ್ಷಸರಿಂಗೆ ಯಾವ ಲೆಕ್ಕ? ಕ್ರಿಮಿಕೀಟಂಗಳ ಹಾಂಗೆ ಅವರ ನಾವು ಪೊಜಕ್ಕಿ ಹಾಕುವೊ ಹೇಳಿ ರಾಕ್ಷಸರು ಜಂಬಲ್ಲಿ ಶಿಫಾರಸು ಕೊಚ್ಚಿಗೊಂಡವು.
ಅವರ ಪೈಕಿ ಒಬ್ಬನೇಒಬ್ಬ ವಿಚಾರವಂತಂದೆ ಬುದ್ಧಿವಂತಂದೆ ಇತ್ತಿದ್ದ.ಅವನೇ ರಾವಣನ ತಮ್ಮ ವಿಭೀಷಣ. ಅವ ವಿಷ್ಣುದೇವರ ಮಹಾಭಕ್ತನೂ, ಯಾವಾಗಳೂ ಧರ್ಮದ ದಾರಿಲಿಯೇ ನಡವೋನೂ ಆಗಿತ್ತಿದ್ದ°. ಎಲ್ಲೋರೂ ರಾವಣಂಗೆ ಯುದ್ಧಕ್ಕೆ ತಯಾರಪ್ಪಲೆ ಹೇಳಿದವು- ಆದರೆ ವಿಭೀಷಣ ಮಾಂತ್ರ ಅವರ ಕಡೆಲಿ ಇತ್ತಿದ್ದಾ°ಯಿಲ್ಲೆ. ರಾವಣನ ಸಭೆಲಿ ವಿಚಾರಂಗಳ ಚರ್ಚೆ ಅಪ್ಪಾಗ ವಿಭೀಷಣ ಎದ್ದುನಿಂದು ಹೇಳಿದ°, “ರಾವಣ, ದುಡುಕೆಡ. ಈ ಪರಿಸ್ಥಿತಿಗೆ ನೀನೇ ಕಾರಣ ಆಯಿದೆ. ಬೇರೆ ಒಬ್ಬನ ಪತ್ನಿಯ ಅಪಹರಿಸಿ ತಂದು ನೀನು ಪಾಪ ಮಾಡಿದ್ದೆ. ಆದ ಕಾರಣ ದಯಮಾಡಿ ಎನ್ನ ಮಾತಿನ ಕೇಳು. ಇನ್ನು ಮುಂದೆಯಾದರೂ ತಪ್ಪು ಮಾಡುದು ಬೇಡ. ರಾಮ ಲಂಕೆಯ ಕೋಟೆಗೆ ಮುತ್ತಿಗೆ ಹಾಕುವ ಮೊದಲೇ ಸೀತೆಯ ಕಳುಸಿಬಿಡುವೋ.ಅವಗ ಎರಡೂ ಕಡೆಯೂ ಶಾಂತಿ, ನೆಮ್ಮದಿ ನೆಲೆಸುಗು” ಹೇಳಿ ಬುದ್ಧಿಮಾತುಗಳ ಹೇಳಿದ°. 4
ರಾವಣಂಗೆ ವಿಭೀಷಣನ ಮಾತುಗೊ ಇಷ್ಟ ಆಯಿದಿಲ್ಲೆ. “ಆನೇನು ಹೇಡಿಯಲ್ಲ, ಆನು ಸೀತೆಯ ರಾಮನತ್ತರಂಗೆ ಕಳ್ಸಿಕೊಡೆ. ನೀನು ನೆಡೂಕೆ ಹೊಕ್ಕು ಎಂಗಳ ಯೋಜನೆಗಳ ಎಲ್ಲಾ ಹಾಳುಮಾಡೆಡ”- ಹೇಳಿದ° ರಾವಣ.
ಕುಂಭಕರ್ಣ ರಾವಣನ ಇನ್ನೊಬ್ಬ ತಮ್ಮ°. ಅವಂದೆ ಆ ಸಭೆಲಿ ಇತ್ತಿದ್ದ°. ಕುಂಭಕರ್ಣ  ರಾಕ್ಷಸನೇ ಆಗಿತ್ತಿದ್ದ- ವರ್ಷಲ್ಲಿ ಆರು ತಿಂಗಳು ಗೊರಕ್ಕೆ ಹೊಡದು ಒರಗಿಗೊಂಡು ಇತ್ತಿದ್ದ°. ಒರಕ್ಕಿಂದ ಎದ್ದು ಆರು ತಿಂಗಳು ಬೇಕುಬೇಕಪ್ಪಷ್ಟು, ಆಹಾರಂಗಳ ಮೂಗಿಂಗೆವರೆಗೆ, ಹೊಟ್ಟೆಬಿರಿವಷ್ಟು, ಗಬಗಬನೆ ತಿಂದುಗೊಂಡಿತ್ತಿದ್ದ°. ಕುಂಭಕರ್ಣ ಆದಿನ ಒಂದು ಸುತ್ತಿನ ಒರಕ್ಕು ಮುಗಿಶಿತ್ತಿದ್ದ°. ರಾವಣನ ಕೆಲಸ ಅವಂಗೆ ಇಷ್ಟ ಆಗದ್ದರೂ ಅಣ್ಣನ ಮೇಲಾಣ ಪ್ರೀತಿ,ಗೌರವಂದ ಯುದ್ಧಲ್ಲಿ ರಾವಣಂಗೆ ಸಹಾಯ ಮಾಡುಲೆ ಒಪ್ಪಿಗೊಂಡ°.
ರಾವಣ ಯುದ್ಧಕ್ಕೆ ಹೆರಟದು ನೋಡಿ ವಿಭೀಷಣಂಗೆ ತಡವಲಾತಿಲ್ಲೆ. ಅವ ಪುನಃ ರಾವಣಂಗೆ ಹೇಳಿದ°, “ಲಂಕೆಯ ದೊರೆಯಾದ ರಾವಣನೇ, ನಿನಗೆ ಸೀತೆ ಆರು ಹೇಳಿ ಗೊಂತಿದ್ದಾ? ಅದು ದುಷ್ಟರ ಶಿಕ್ಷಿಸುವ ದೇವಿ. ಅದರ ಗೆಂಡ ಶ್ರೀರಾಮಂದೆ ಜಗತ್ತಿಂಗೇ ಒಡೆಯ ಆಗಿದ್ದ. ಅವಂಗೆದುರಾಗಿ ಆರಿಂಗೂ ಯುದ್ಧಮಾಡಿ ಜಯಿಸುಲೆಡಿಯ. ಕುಂಭಕರ್ಣನಾಗಲಿ ನೀನಾಗಲಿ ಅವನ ಯುದ್ಧಲ್ಲಿ ಸೋಲ್ಸುಲೆಡಿಯ. ಹಾಂಗಾಗಿ ಯುದ್ಧದ ತಯಾರಿ ನಿಲ್ಸಿ, ಒಳ್ಳೆತ ಯೋಚನೆ ಮಾಡಿ ಸೀತೆಯ ವಾಪಾಸು ಕಳ್ಸಿಕೊಡು” ಹೇಳಿ ಮುಗಿಶಿದ°.
ವಿಭೀಷಣ ಹೆದರಿದ್ದ,° ಧೈರ್ಯವೇ ಇಲ್ಲದ್ದೋನಾಂಗೆ ಮಾತಾಡ್ತ° ಹೇಳಿ ರಾವಣ, ಅವನ ಮಗ ಇಂದ್ರಜಿತು, ಮತ್ತೆ ಒಳುದ ರಾಕ್ಷಸರು ಗ್ರೇಶಿದವು. ವಿಭೀಷಣನ ಬಿಚ್ಚುಮನಸ್ಸಿನ ಮಾತುಗೊ ಆರಿಂಗೂ ಇಷ್ಟ ಆಯಿದಿಲ್ಲೆ. ಆದರೂ ಅವು ಸುಮ್ಮನೆ ಇತ್ತಿದ್ದವು. ವಿಭೀಷಣ ಪುನಃ ಯುದ್ಧ ನಿಲ್ಸೆಕ್ಕು ಹೇಳ್ಳೆ ಸುರುಮಾಡುವಗ ರಾವಣ ಕೋಪಲ್ಲಿ “ವಿಭೀಷಣ, ನಿಜವಾಗಿಯೂ ನೀನು ಎನ್ನ ತಮ್ಮನಾ? ಎನ್ನ ಶತ್ರುವಿನಾಂಗೆ ಮಾತಾಡ್ತೆ ಅಲ್ಲದಾ? ನಿನಗೆ ಎನ್ನ ಮೇಲೆ ಮತ್ಸರ ಇದ್ದು ಹೇಳಿ ಕಾಣ್ತು. ಆನೀಗಳೇ ನಿನ್ನ ಕೊಂದುಬಿಡ್ತಿತ್ತೆ- ಆದರೆ ತಮ್ಮ ಹೇಳಿ ಸುಮ್ಮನೆ ಬಿಟ್ಟಿದೆ. ನೀನೀಗಳೇ ಇಲ್ಲಿಂದ ತೊಲಗಿಹೋಗು. ಇನ್ನು ಮುಂದೆ ಲಂಕೆಲಿ ಕಾಲು ಮಡುಗೆಡ” ಹೇಳಿ ರಾವಣ ಅಬ್ಬರಿಸಿದ°.
ಎನ್ನ ಸಲಹೆಯ ರಾವಣ ಕೇಳಿದ್ದಾ°ಯಿಲ್ಲೇಳಿ ವಿಭೀಷಣಂಗೆ ಬೇಜಾರಾತು. ವಿಭೀಷಣ ಅವನ ಬೆಂಬಲಿಗರಾದ ನಾಲ್ಕು ಜೆನರೊಟ್ಟಿಂಗೆ ರಾಮನ ಹತ್ತರಂಗೆ ಬಂದು ಆಶ್ರಯ ಕೇಳಿದ°. ರಾಮನ ಮುಂದೆ ವಿನಯಲ್ಲಿ ತಲೆತಗ್ಗಿಸಿ ಹೇಳಿದ° ” ಆನು ವಿಭೀಷಣ, ರಾವಣನ ತಮ್ಮ- ನಿನ್ನಾಶ್ರಯಕ್ಕಾಗಿ ಬಯಿಂದೆ. ರಾವಣಂಗೆ ಅವನ ತಪ್ಪಿನ ತಿದ್ದಿಗೊಂಬಲೆ ಆನು ತುಂಬಾ ಹೇಳಿ ನೋಡಿದೆ. ಸೀತೆಯ ರಾಮಂಗೆ ವಿನಯಲ್ಲಿ ಹಿಂದೆ ಒಪ್ಪುಸು, ರಾಮನೊಟ್ಟಿಂಗೆ ರಾಜಿ ಮಾಡಿಗೊ, ಅವನ ಗೆಳೆಯನಾಗಿ ಶಾಂತಿ ನೆಮ್ಮದಿಲಿ ಬದ್ಕು ಹೇಳಿ ರಾವಣನತ್ತರೆ ತುಂಬಸರ್ತಿ ಹೇಳಿದೆ. ಅವ° ಎನ್ನ ಮಾತಿಂಗೆ ಬೆಲೆಯೇ ಕೊಟ್ಟಿದಾ°ಯಿಲ್ಲೆ, ಧಿಕ್ಕರಿಸಿದ°, ಲಂಕೆಂದಲೇ ಹೆರಂಗೆ ಅಟ್ಟಿದ°. ರಾಮಾ, ದಯಮಾಡಿ ಎನಗೆ ನಿನ್ನತ್ತರೆ ಜಾಗೆ ಕೊಡು. ಆನು ನೀನು ಹೇಳಿದಾಂಗಿಪ್ಪ ಸೇವಕನಾಂಗೆ ಇರ್ತೆ” ಹೇಳಿ ತಿಳಿಶಿದ°.
ಸುಗ್ರೀವಂಗೂ ಅವನ ಒಟ್ಟಿಂಗಿಪ್ಪ ವಾನರಂಗೊಕ್ಕೂ ವಿಭೀಷಣನ ಮೇಲೆ ನಂಬಿಕೆ ಬೈಂದಿಲ್ಲೆ. ಅವು ರಾಮಂಗೆ ಹೀಂಗೆ ಹೇಳಿದವು, “ರಾಮಾ, ವಿಭೀಷಣ ನಮ್ಮ ವೈರಿಯ ಕಡೆಯೋನು, ಅವ° ಮಾಯಾವಿ ರಾಕ್ಷಸ ಆಗಿಕ್ಕು. ನಿರ್ಧಾರ ತೆಕ್ಕೊಂಬ ಮೊದಲು ಸರಿಯಾಗಿ ಯೋಚನೆಮಾಡಿಗೊ”- ಹೇಳಿದವು. ರಾವಣನ ಆಸ್ಥಾನಲ್ಲಿಪ್ಪಾಗ ವಿಭೀಷಣ ತನ್ನ ಪರವಾಗಿ ಮಾತಾಡಿದ್ದು ಹನುಮಂತಂಗೆ ಫಕ್ಕನೆ ನೆನಪ್ಪಾತು. ಹನುಮಂತ “ರಾಮಾ, ರಾವಣ ಸತ್ತ ಮೇಲೆ ಲಂಕೆಯ ರಾಜ ಅಪ್ಪ ಯೋಚನೆ ವಿಭೀಷಣನ ಮನಸ್ಸಿಲಿಕ್ಕು. ನೀನು  ವಾಲಿ-ಸುಗ್ರೀವರ ವೈರದ ಹೊತ್ತಿಲಿ ಸುಗ್ರೀವಂಗೆ ಸಹಾಯ ಮಾಡಿದೆ. ಹಾಂಗೆ ವಿಭೀಷಣ ನಿನ್ನ ಗೆಳೆತನವ ನಿರೀಕ್ಷೆ ಮಾಡುದಾದಿಕ್ಕು. ವಿಭೀಷಣನ ಗೆಳೆತನವ ಒಪ್ಪಿಗೊಳ್ಳೆಕ್ಕು ಹೇಳುದು ಎನ್ನ ಅಭಿಪ್ರಾಯ” ಹೇಳಿ ವಿನಯಲ್ಲಿ ಹೇಳಿದ°.
ರಾಮ ಹನುಮಂತನ ಮಾತಿನ ಒಪ್ಪಿದ°. “ಎನ್ನ ಹತ್ತರೆ ಆಶ್ರಯ ಕೇಳಿ ಬಂದೋರ ರಕ್ಷಿಸುದು ಎನ್ನ ಧರ್ಮ” ಹೇಳಿದ° ರಾಮ. ಈ ಮಾತಿನ ಕೇಳಿದ ವಿಭೀಷಣ ಸಂತೋಷಪಟ್ಟ°. ವಿಭೀಷಣ ರಾಮನ ಕಾಲಿಂಗೆ ಬಿದ್ದು ನಮಸ್ಕಾರ ಮಾಡಿದ°. ಮತ್ತೆ, ” ರಾಮಾ, ನಿನ್ನಂದಾಗಿ ಎನಗೆ ತುಂಬಾ ಉಪಕಾರ ಆತು” ಹೇಳಿದ. ವಿಭೀಷಣನ ರಾಮ ಬಿಗುದಪ್ಪಿಗೊಂಡ°. ರಾವಣನ ಸಂಹಾರಮಾಡಿದ ಮೇಲೆ ವಿಭೀಷಣಂಗೆ ಲಂಕೆಯ ಒಪ್ಪುಸಿ ದೊರೆಯಾಗಿ ಮಾಡ್ತೇಳಿ ಭರವಸೆ ಕೊಟ್ಟ°. ರಾಮ ವಿಭೀಷಣನ ಹತ್ತರೆ ರಾವಣನ ಸೇನೆ, ಅವನ ಯೋಜನೆಗೊ ಎಲ್ಲಾ ವಿಚಾರಿಸಿದ°. ವಿಭೀಷಣ ರಾವಣನ ಸೇನೆಯ ಎಲ್ಲಾ ವಿವರಂಗಳನ್ನೂ ರಾಮಂಗೆ ಹೇಳುಲೆ ಸುರುಮಾಡಿದ°.

ಸೇತು ಬ೦ಧನ ಚಿತ್ರಃ ಮಧುರಕಾನನ ಬಾಲಣ್ಣ

ಸೇತು ಬ೦ಧನ                          ಚಿತ್ರಃ ಮಧುರಕಾನನ ಬಾಲಣ್ಣ

ವಿಭೀಷಣನ ಮುಂದಾಳ್ತನಲ್ಲಿ ವಾನರಂಗೊ ಎಲ್ಲಾ ಸಮುದ್ರಕ್ಕೆ ಸೇತುವೆ ಕಟ್ಟುವ ತಯಾರಿಗೆ ಕೈಹಾಕಿದವು. ಸೇತುವೆ ಕಟ್ಟುವ ಕೆಲಸಲ್ಲಿಯೂ ಹನುಮಂತ ಮುಖ್ಯ ಜವಾಬ್ದಾರಿ ಹೊತ್ತುಗೊಂಡ°. ದೊಡ್ಡದೊಡ್ಡ ಬಂಡೆಕಲ್ಲುಗಳ ತಂದು ಅದರಲ್ಲಿ ಅವು “ಜೈ ಶ್ರೀರಾಮ್” ಹೇಳಿ ಬರದು ಸಮುದ್ರಕ್ಕೆ ಹಾಕಿ ಸೇತುವೆಯ ಕೆಲಸವ ಸುರುಮಾಡಿದವು. ತರತರದ ಕಲ್ಲುಗಳ, ಮರದ ತುಂಡುಗಳ ಎಲ್ಲ ಸೇತುವೆಗೆ ತಂದು ಹಾಕಿದವು. ಅದರ ನೋಡಿಗೊಂಡಿದ್ದ ಒಂದು ಕುಂಡೆಚ್ಚಂಗೆ ಎಂಗಳೂ ರಾಮನ ಸೇವೆ ಮಾಡೆಕ್ಕು ಹೇಳಿ ಆಶೆ ಆತು. ಕೆಲವು ಕುಂಡೆಚ್ಚಂಗೊ ಸೇರಿ ಅವರ ಸಣ್ಣಸಣ್ಣ ಕೈಲಿ ಹೊಯಿಗೆ ತಂದುಹಾಕುಲೆ ಸುರುಮಾಡಿದವು. ರಾಮಂಗೆ ಆ ಸಣ್ಣ ಕುಂಡೆಚ್ಚಂಗಳ ಸೇವೆಯ ನೋಡಿ ಖುಶಿ ಆತು. ರಾಮಂಗೆ ರೋಮಾಂಚನವಾಗಿ ಅವ ಕುಂಡೆಚ್ಚಂಗಳ ಬೆನ್ನಿನ ಪ್ರೀತಿಲಿ ಉದ್ದಿದ°. ಕಡೆಂಗೂ ವಾನರಂಗೊ ಸೇತುವೆಯ ಕೆಲಸ ಮುಗಿಶಿದವು. ಸಂತೋಷ, ಸಂಭ್ರಮಲ್ಲಿ ಎಲ್ಲೋರು ಸೇತುವೆಯ ದಾಂಟಿದವು, ಲಂಕೆಗೆ ಮುಟ್ಟಿದವು. ವಾನರಂಗಳ ಸೈನ್ಯ ಲಂಕೆಯ ಹತ್ತರಾಣ ಹೆಬ್ಬಾಗಿಲಿಂಗೆ ಎತ್ತಿತ್ತು. ರಾಮ ಸೈನ್ಯವ ಬೇರೆಬೇರೆ ತಂಡಮಾಡಿ, ಪ್ರತಿತಂಡವನ್ನೂ ಮುಖ್ಯಮುಖ್ಯ ಜಾಗೆಲಿ ನಿಲ್ಸಿದ°. ಜಾಗಟೆ ಹೆಟ್ಟಿದವು. ಜಾಗಟೆಯ ಶಬ್ದ ಆ ಜಾಗೆಲಿ ಎಲ್ಲಾ ಪ್ರತಿಧ್ವನಿ ಆತು. ಆ ಶಬ್ದ ಕೇಳಿಯೇ ರಾಕ್ಷಸರು ಧೈರ್ಯ ಕಳಕ್ಕೊಂಡವು.
ವಾನರರಿಂಗೂ ರಾಕ್ಷಸರಿಂಗೂ ಭಯಂಕರ ಯುದ್ಧ ಸುರುವಾತು. ಪ್ರತಿಯೊಬ್ಬ ವಾನರನೂ ಪರಾಕ್ರಮಲ್ಲಿ ಹೋರಾಟ ಮಾಡಿಗೊಂಡಿತ್ತಿದ್ದವು. ಸುಗ್ರೀವ, ಹನುಮಂತ, ನೀಲ ಅಂಗದ ಎಲ್ಲ ಹಲವು ರಾಕ್ಷಸಂಗಳ ಕೊಂದುಹಾಕಿದವು. ಪ್ರತಿಸರ್ತಿಯೂ ಅವು ರಾಕ್ಷಸರ ಕೊಲ್ಲುವಗ “ಶ್ರೀರಾಮಂಗೆ ಜಯವಾಗಲಿ” ಹೇಳಿ ಬೊಬ್ಬೆ ಹಾಕಿಗೊಂಡಿತ್ತಿದ್ದವು.
ರಾಕ್ಷಸರೂ ವಾನರರೂ ಸಮಬಲಲ್ಲಿ ಹೋರಾಟಮಾಡಿದವು. ಇರುಳು ಹೊತ್ತಿಲಿ ರಾಕ್ಷಸರು ಮಾಯಾವಿದ್ಯೆಲಿ ಯುದ್ಧಮಾಡಿ ತುಂಬಾ ವಾನರಂಗಳ ಕೊಂದವು. ಆದರೂ ಯುದ್ಧಲ್ಲಿ ರಾವಣನ ಸೈನಿಕರೇ ಹೆಚ್ಚು ಸತ್ತವು. ಇದರ ಕೇಳಿ ರಾವಣಂಗೆ ತಲೆಬೆಶಿಯಾತು. ವಾನರಂಗಳ ಸೇನೆಯ ಸುಲಭಲ್ಲಿ ಸೋಲ್ಸುಲೆಡಿಗು ಹೇಳಿ ರಾವಣ ತಿಳುದಿತ್ತಿದ್ದ°. ಅಂಬಗ ರಾವಣನ ಮಗ ಇಂದ್ರಜಿತು, ಅಪ್ಪನ ಸಮಾಧಾನ ಮಾಡಿ “ನಾಳೆ ಉದಿಯಪ್ಪ ಮೊದಲೆ ಆನು ರಾಮ, ಲಕ್ಷ್ಮಣರ ಕೊಲ್ಲುತ್ತೆ” ಹೇಳಿ ಪ್ರತಿಜ್ಞೆಮಾಡಿದ°. ಮಗನ ಮಾತು ಕೇಳಿ ರಾವಣಂಗೆ ಸಂತೋಷ ಆತು.ಅವ ಮಗನ ಪ್ರೀತಿಲಿ ಅಪ್ಪಿಗೊಂಡ°. “ಇಂದ್ರಜಿತು, ನಿನ್ನ ಮಗ ಹೇಳುಲೆ ಎನಗೆ ಹೆಮ್ಮೆ ಆವುತ್ತು. ನಿನಗೆ ಗೆಲುವಾಗಲಿ, ಜಯ ಸಿಕ್ಕಲಿ” ಹೇಳಿ ರಾವಣ ಆಶೀರ್ವಾದ ಮಾಡಿದ°.
ಇಂದ್ರಜಿತು ಕಸ್ತಲೆಲಿ ಯುದ್ಧಮಾಡುಲೆ ಸುರುಮಾಡಿದ°. ಅವಂಗೆ ಇರುಳಾಣ ಯುದ್ಧದ ತಂತ್ರಂಗೊ ಗೊಂತಿತ್ತು. ಅವನೊಟ್ಟಿಂಗೆ ಯುದ್ಧ ಮಾಡುವಗ ಹಲವು ವಾನರಂಗೊ ಸತ್ತುಹೋದವು. ಇಂದ್ರಜಿತುವಿನತ್ತರೆ ವಿಶೇಷದ ಸರ್ಪಾಸ್ತ್ರಂಗೊ ಇತ್ತು. ಅವ ಅದರನ್ನೇ ರಾಮ ಲಕ್ಷ್ಮಣರ ಮೇಲೆ ಬಿಟ್ಟ°. ಆ ಬಾಣಂಗೊ ಸರ್ಪಂಗೊ ಆಗಿ ರಾಮ ಲಕ್ಷ್ಮಣರ ಮೈಯ ಸುತ್ತಿಗೊಂಡವು. ಹಾವುಗಳ ಹೆಡೆಂದ ವಿಷ ರಟ್ಟಿಗೊಂಡಿತ್ತು. ಆ ವಿಷಂದಾಗಿ ರಾಮ ಲಕ್ಷ್ಮಣರಿಂಗೆ ಬೋಧ ತಪ್ಪಿತ್ತು. ಅವು ಸತ್ತುಹೋದವು ಹೇಳಿ ಗ್ರೇಶಿದ ಇಂದ್ರಜಿತು ಈ ಸಂತೋಷದ ಶುದ್ಧಿಯ ಅಪ್ಪಂಗೆ ಹೇಳುಲೆ ಓಡಿದ°. ಶುದ್ಧಿ ಕೇಳಿದ ರಾವಣ ಭಾರೀ ಸಂತೋಷಪಟ್ಟ.  ಈ ಶುದ್ಧಿಯ ಸೀತೆಗುದೆ ತಿಳುಶಿ ಪುಷ್ಪಕವಿಮಾನಲ್ಲಿ ಅದರ ಕರಕ್ಕೊಂಡೋಗಿ, ಬಿದ್ದುಗೊಂಡಿತ್ತಿದ್ದ ರಾಮ ಲಕ್ಷ್ಮಣರ ಸೀತೆಗೆ ತೋರಿಸಿದವು. ಸೀತೆಗೆ ರಾಮ ಲಕ್ಷ್ಮಣರು ಸತ್ತದು ನೋಡಿ ತುಂಬಾ ದುಃಖ ಆತು.” ಅದೆಲ್ಲಾ ರಾಕ್ಷಸರ ಮಾಯಾಜಾಲ, ರಾಮಂಗೆಲ್ಲ ಏನೂ ಆಗ, ನೀನು ಹೆದರೆಡ” ಹೇಳಿ ಸೀತೆಯೊಟ್ಟಿಂಗೆ ಇದ್ದ ಒಳ್ಳೆ ಗುಣದ ಪಾಪದ ರಾಕ್ಷಸಿ ಸೀತೆಗೆ ಸಮಾಧಾನ ಮಾಡಿತ್ತು.
ರಾಮ ಲಕ್ಷ್ಮಣರು ಸತ್ತುಹೋದವು ಹೇಳ್ತ ಶುದ್ಧಿ ಇಡೀ ಲಂಕೆಗೆ ಹಬ್ಬಿತ್ತು. ವಿಭೀಷಣಂಗೆ ಒಬ್ಬಂಗೆ ಮಾಂತ್ರ ರಾಮ ಲಕ್ಷ್ಮಣರು ಸತ್ತಿದವಿಲ್ಲೆ, ಬೋಧತಪ್ಪಿ ಬಿದ್ದದು ಹೇಳಿ ಗೊಂತಾದ್ದು. ರೆಜಾಹೊತ್ತಿಲಿ ರಾಮ ಎದ್ದುಕೂದ. ಲಕ್ಷ್ಮಣ ಹಾಂಗೇ ಬಿದ್ದಿತ್ತಿದ್ದ°. ಹಾವಿನ ವಿಷಂದಾಗಿ ಅವನ ಮೈ ನೀಲಿಯಾಗಿತ್ತು. ರಾಮಂಗೆ ಚಿಂತೆ ಆತು.ಲಂಕೆಲಿ ನಡವದರ ಎಲ್ಲಾ ದೇವತೆಗೊ ಸ್ವರ್ಗಂದ ನೋಡಿಗೊಂಡಿತ್ತಿದ್ದವು. ರಾಮ ಲಕ್ಷ್ಮಣರ ಈ ಸಂಕಟಂದ ಪಾರುಮಾಡ್ಳೆ ಅವು ಗರುಡಂಗೆ ಹೇಳಿದವು. ಗರುಡನ ಕಂಡ ಹಾವುಗೊ ಹೆದರಿ ಅವರ ಪೂಂಚಲ್ಲಿ ಹುಗ್ಗಿದವು.ಲಕ್ಷ್ಮಣ ಆವಗ ನಿಧಾನಲ್ಲಿ ಎದ್ದುಕೂದ°. ಇಂದ್ರಜಿತುವಿನ ವಿಚಾರಲ್ಲಿ ಜಾಗ್ರತೆಲಿರಿ ಹೇಳಿಕ್ಕಿ, ರಾಮ ಲಕ್ಷ್ಮಣರಿಂಗೆ ನಮಸ್ಕಾರ ಮಾಡಿಕ್ಕಿ ಗರುಡ ಮತ್ತೆ ಹಾರಿಹೋದ°.
ಕುಂಭಕರ್ಣ ಆರು ತಿಂಗಳಿನ ಒರಕ್ಕಿಲಿತ್ತಿದ್ದ. ಇನ್ನುದೆ ಕೆಲವರ ರಾವಣ ಯುದ್ಧಭೂಮಿಗೆ ಕಳಿಸಿದ. ಅವೆಲ್ಲಾ ಯುದ್ಧಲ್ಲಿ ಚತುರಂಗೋಳಿ ಹೆಸರು ಹೊತ್ತೋರೂ ಆಗಿತ್ತಿದ್ದವು. ಆದರೂ ಹನುಮಂತ, ನೀಲ, ಅಂಗದ ಇತ್ಯಾದಿ ವೀರವಾನರಂಗೊ ಅವರ ಎಲ್ಲಾ ಕೊಂದುಹಾಕಿದವು. ಇನ್ನೆಂತ ಮಾಡುದು ಹೇಳಿ ರಾವಣಂಗೆ ಚಿಂತೆ ಆಗಿ ಒಳ್ಳೆ ಒರಕ್ಕಿಲಿಪ್ಪ ತಮ್ಮ ಕುಂಭಕರ್ಣನ ಏಳ್ಸುಲೆ ಸೈನಿಕರಿಂಗೆ ಆಜ್ಞೆಮಾಡಿದ. ಸಾವಿರಾರು ರಾಕ್ಷಸರು ಸೇರಿ ಭಾರೀ ಕಷ್ಟಲ್ಲಿ ಕುಂಭಕರ್ಣನ ಹೇಂಗಾದರೂ ಏಳ್ಸಿದವು. “ಕುಂಭಕರ್ಣ, ನೀನೆನ್ನ ಪ್ರೀತಿಸುತ್ತೆ ಅಲ್ಲದಾ?- ಹಾಂಗಾದರೆ ಹೋಗು, ಯುದ್ಧಮಾಡಿ ಎನ್ನ ಶತ್ರುಗಳ ಎಲ್ಲ ಕೊಂದುಮುಗಿಶಿ ಬಾ” ಹೇಳಿ ತಮ್ಮಂಗೆ ರಾವಣನ ಆಜ್ಞೆ ಆತು.
ಕುಂಭಕರ್ಣ ಅಣ್ಣನ ಆಜ್ಞೆಯ ಪಾಲುಸುಲೆ ಅವನ ದೊಡ್ಡ ಹಾಸಿಗೆಂದ ಎದ್ದ°. ಆಕಳಿಸಿಗೊಂಡು, ಮೈಮುರ್ಕೊಂಡು ಹೆರಬಂದ°. ಹೊಟ್ಟೆ ತುಂಬ ತಿಂದು ಆರ್ಭಟೆಕೊಟ್ಟುಗೊಂಡು ಹೆರಟು ರಣರಂಗಕ್ಕೆ ಬಂದ°. ಅವಂಗೆ ಬಹುದೊಡ್ಡ ಆಕಾರದ ದೇಹ ಇತ್ತು. ಅವ° ನೆಡಕ್ಕೊಂಡು ಬಪ್ಪಾಗ ದೊಡ್ಡ ಪರ್ವತವೇ ಬತ್ತಾಂಗೆ ಕಂಡುಗೊಂಡಿತ್ತು. ಕುಂಭಕರ್ಣ ಹನುಮಂತನನ್ನೂ ಸುಗ್ರೀವನನ್ನೂ ಭಾರೀ ಸುಲಭಲ್ಲಿ ಎತ್ತಿದ. ಹನುಮಂತನ ನೆಲಕ್ಕಂಗೆ ಜೆಪ್ಪಿದ°. ಸುಗ್ರೀವನ ತನ್ನ ಕಿಂಕಿಲೆಡಕ್ಕಿಲಿ ಮಡುಗಿ ಪೊಜಂಕುಲೆ ಹೆರಟ°. ಆದರೆ ಹನುಮಂತಂದೆ ಸುಗ್ರೀವಂದೆ ಕುಂಭಕರ್ಣನ ಕೈಂದ ತಪ್ಪಿಸಿಗೊಂಡವು. ಕುಂಭಕರ್ಣಂಗೆ ಭಯಂಕರ ಕೋಪಬಂತು. ಅವ ರಾಮಂಗೆ ”ಎನ್ನೊಟ್ಟಿಂಗೆ ಯುದ್ಧಕ್ಕೆ ಬಾ” ಹೇಳಿ ಕರೆಕೊಟ್ಟ°. ಅವರಿಬ್ರ ನೆಡುಕೆ ಭಯಂಕರ ಯುದ್ಧ ಆತು. ಭೀಕರ ಯುದ್ಧ ಅಪ್ಪದ್ದೆ ರಾಮ ಅವನ ಬತ್ತಳಿಕೆಂದ ತುಂಬ ಶಕ್ತಿ ಇಪ್ಪ ಬಾಣವ ತೆಗದ°. ಅದರ ಕುಂಭಕರ್ಣನ ಮೇಲಂಗೆ ಬಿಟ್ಟ°. ಮತ್ತೆ ಅವನ ಕೈಕಾಲುಗಳ ಕಡುದು ತುಂಡುಮಾಡಿದ°. ಮತ್ತೊಂದು ದಿವ್ಯಾಸ್ತ್ರವ ಬಿಟ್ಟು ಕುಂಭಕರ್ಣನ ತಲೆಯನ್ನೇ ಉರುಳ್ಸಿದ°. ಬೇನೆಲಿ ಕೀರಿಕುತ್ತಿಗೊಂಡು ಕುಂಭಕರ್ಣ ಸತ್ತು ಬಿದ್ದ°. ವಾನರಂಗೊಕ್ಕೆಲ್ಲ ಕುಂಭಕರ್ಣ ಸತ್ತದು ಸಂತೋಷ ಆತು.

 

(ಸಶೇಷ)

ಸೂ.ಃ

  • ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವಂಗೆ
  • ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”
    – ಇವಕ್ಕೆಲ್ಲೋರಿಂಗೂ ಬೈಲು ಆಭಾರಿಯಾಗಿದ್ದು.

ಕೈಲಾರು ಚಿಕ್ಕಮ್ಮ

   

You may also like...

1 Response

  1. ಕೆ. ವೆಂಕಟರಮಣ ಭಟ್ಟ says:

    ಜೈ ಶ್ರೀ ರಾಮ್, ಜೈ ಹನುಮಾನ್.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *