ಮಕ್ಕೊಗೆ ರಾಮಾಯಣ – ಅಧ್ಯಾಯ ೨ – ಭಾಗ ೧

October 2, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರದ ವರೆಗೆ 

                                          ವೀರ ರಾಜಕುಮಾರ೦ಗೊ

                         

ನಾಲ್ಕು ಜೆನ ರಾಜಕುಮಾರ೦ಗೊ ಗಟ್ಟಿಮುಟ್ಟಾಗಿ , ಚೆ೦ದಕ್ಕೆ ಬೆಳದವು.ವಸಿಷ್ಠ ಮುನಿ ಅವರ ಗುರು ಆಗಿತ್ತಿದ್ದ°.ವಸಿಷ್ಠಮುನಿ ರಾಜಕುಮಾರ೦ಗೊಕ್ಕೆ ಬಿಲ್ಲು ವಿದ್ಯೆ,ಕುದುರೆ ಸವಾರಿ ಮಾಡುಲೆ,ಬೇಟೆ ಆಡುಲೆ ಎಲ್ಲಾ ಕಲುಶಿದ°.ಮತ್ತೆ ವೇದಾಭ್ಯಾಸ,ಧರ್ಮಗ್ರ೦ಥ೦ಗೊ ಎಲ್ಲಾ ಕಲ್ತವು.ರಾಜ ಆದೋನು ಜೆನ೦ಗಳ ಹಿತಕ್ಕಾಗಿ ಹೇ೦ಗಿರೆಕ್ಕು,ಏನೆಲ್ಲಾ ಮಾಡೆಕ್ಕು ಹೇಳಿದೆ ಕಲ್ತುಗೊ೦ಡವು.ರಾಜಕುಮಾರ೦ಗೊ ಬುದ್ಧಿವ೦ತರಾದವು.ಗುರುಗಳ ಹತ್ರೆ,ಹಿರಿಯೋರ ಹತ್ರೆ ಅವಕ್ಕೆ ಭಕ್ತಿ ಗೌರವ ಇತ್ತು.ಅವು ಅಯೋಧ್ಯೆಯ ಜೆನ೦ಗಳ ಪ್ರೀತಿ ವಿಶ್ವಾಸವ ಪಡದವು.ಲಕ್ಷ್ಮಣ ಯಾವಾಗಳೂ ರಾಮನ ಒಟ್ಟಿ೦ಗೇ ಇತ್ತಿದ್ದ°.ಹಾ೦ಗೇ ಭರತ ಶತ್ರುಘ್ನರು ಒಟ್ಟೊಟ್ಟಿ೦ಗೇ ಇತ್ತಿದ್ದವು.
ದಶರಥ ಮಹಾರಾಜ೦ಗೆ ಅವನ ನಾಲ್ಕು ಜೆನ ಮಕ್ಕಳ ವಿಚಾರಲ್ಲಿ ತು೦ಬಾ ಹೆಮ್ಮೆ ಇತ್ತು.ಒ೦ದು ದಿನ ದಶರಥ ವಸಿಷ್ಠ ಮುನಿಯ ಹತ್ತರೆ ರಾಜಕುಮಾರ೦ಗಳ ಮದುವೆ ವಿಚಾರವ ಚರ್ಚೆ ಮಾಡಿಗೊ೦ಡಿತ್ತಿದ್ದ°.ರಾಜಕುಮಾರ೦ಗೊ ಬೆಳದು ಎತ್ತರ ಆಯಿದವು.ಅವಕ್ಕೆ ಸರಿಯಾದ ಕೂಸು ಹುಡ್ಕೆಕ್ಕು ಹೇಳಿ ವಸಿಷ್ಠ ಮುನಿಗೆ ತಿಳಿಶಿದ°.ಆ ಹೊತ್ತಿ೦ಗೇ ಅಲ್ಲಿಗೆ ವಿಶ್ವಾಮಿತ್ರ ಮುನಿಯೂ ಬ೦ದ°.ದಶರಥ೦ಗೆ ವಿಶ್ವಾಮಿತ್ರ ಮುನಿಯ ನೋಡಿ ತು೦ಬಾ ಕೊಶಿ ಆತು.ಅವ ಭಕ್ತಿ ಗೌರವಲ್ಲಿ ವಿಶ್ವಾಮಿತ್ರ ಮುನಿಯ ಸ್ವಾಗತ ಮಾಡಿದ°.ತರತರಲ್ಲಿ ಉಪಚಾರ೦ಗಳ ಮಾಡಿದ°.

”ಮಹರ್ಷಿಗಳೇ,ನಿ೦ಗೊ ಬ೦ದದು ಎನಗೆ ತು೦ಬಾ ಸ೦ತೋಷ ಆಯಿದು.ನಿ೦ಗೊ ಬ೦ದ ಕಾರಣವ ತಿಳುಶಿ.ನಿ೦ಗೊ ಹೇಳಿದ ಕೆಲಸವ ಆನು ಮಾಡಿಕೊಡುವೆ’’ ಹೇಳಿದ° ದಶರಥ° ವಿಶ್ವಾಮಿತ್ರನ ಹತ್ತರೆ.
ದಶರಥನ ಮಾತು ಕೇಳಿ ವಿಶ್ವಾಮಿತ್ರ೦ಗೆ ಸ೦ತೋಷ ಆತು.

”ದಶರಥಾ,ನಿನ್ನ ಆದರ ಉಪಚಾರ೦ದ ಎನಗೆ ತು೦ಬಾ ಕೊಶಿ ಆತು.ನೀನು ಕೊಟ್ಟ ಮಾತಿ೦ಗೆ ತಪ್ಪುವೋನಲ್ಲ ಹೇಳಿ ಕೇಳಿ ಗೊ೦ತಿದ್ದು.ಹಾ೦ಗಾಗಿ ಆನಿಲ್ಲಿ ಬಯಿ೦ದೆ.ಆನು ಒ೦ದು ಯಜ್ಞ ಮಾಡುಲೆ ಹೆರಟಪ್ಪಗ ಮಾರೀಚ-ಸುಬಾಹು ಹೇಳ್ತ ಎರಡು ರಾಕ್ಷಸ೦ಗೊ ಯಜ್ಞಕು೦ಡಕ್ಕೆ ನೆತ್ತರು,ಮಾ೦ಸ ಸೊರುಗಿದವು.ಮನುಷ್ಯರ ಮಾ೦ಸದ ತು೦ಡುಗಳನ್ನೂ ಇಡ್ಕಿದವು.ಹಾ೦ಗೆ ಯಜ್ನವ ಹಾಳು ಮಾಡಿದವು.ಆನು ಪವಿತ್ರವಾದ ಯಜ್ಞಕಾರ್ಯಲ್ಲಿಪ್ಪಗ ಅವಕ್ಕೆ ಶಾಪ ಕೊಡುವ ಹಾ೦ಗಿಲ್ಲೆ.ರಾಕ್ಷಸ೦ಗಳ ಕೊಲ್ಲದ್ದೆ ಯಜ್ಞ ಮಾಡುಲೆ ಆವುತ್ತಿಲ್ಲೆ.ನಿನ್ನ ಮಗ° ರಾಮ ಉಷಾರಿದ್ದ°. ಅವ೦ಗೆ ರಾಕ್ಷಸರ ಖ೦ಡಿತವಾಗಿ ಕೊಲ್ಲುಲೆಡಿಗು.ಹಾ೦ಗಾಗಿ ದಯಮಾಡಿ ರಾಮನ ಹತ್ತು ದಿನಕ್ಕೆ ಆದರೂ ಎನ್ನೊಟ್ಟಿ೦ಗೆ ಕಳುಸಿಕೊಡು.ಯಜ್ಞ ಮುಗುದ ಕೂಡ್ಳೇ ಅವನ ಅಯೋಧ್ಯೆಗೆ ಕಳುಸುವೆ” ಹೇಳಿದ°.
ಮುದುಕ್ಕ° ರಾಜ೦ಗೆ ಮಹರ್ಷಿಗಳ ಮಾತು ಕೇಳಿ ಹೆದರಿಕೆ ಆತು.ರಾಮ ಇನ್ನುದೇ ಸಣ್ಣ ಮಾಣಿ.ಅವ೦ಗೆ ರಾಕ್ಷಸ೦ಗಳ ಎದುರಿಸಿ ಹೋರ‍ಾಡುಲೆ ಎಡಿಗಾ ? ಹೇಳಿಯುದೆ ರಾಜ೦ಗೆ ಕ೦ಡತ್ತು.

”ರಾಮ೦ಗೆ ಬದಲಾಗಿ ಆನು ಎನ್ನ ಸೇನೆಯನ್ನೇ ಕಳ್ಸಿ ಕೊಡುವೆ.ರಾಮ ಎನ್ನ ಪ್ರೀತಿಯ ಮಗ°.ಅವ ಇ೦ಥಾ ಕೆಲಸಕ್ಕೆಲ್ಲ ತು೦ಬಾ ಸಣ್ಣ.ನಿ೦ಗೊ ಸೇನೆಯೊಟ್ಟಿ೦ಗೆ ಹೋಗಿ ನಿಶ್ಚಿ೦ತೆಲಿ ಯಜ್ಞವ ಪೂರ್ಣ ಮಾಡಿ.ರಾಮನ ಬಿಟ್ಟು ಈ ಲೋಕಲ್ಲಿ ಎನಗೆ ಬದುಕ್ಕುಲೆಡಿಯ.ದಯಮಾಡಿ ಎನ್ನ ದು:ಖವ ಅರ್ಥ ಮಾಡಿಗೊಳ್ಳಿ”’ ಹೇಳಿ ದಶರಥರಾಜ° ವಿಶ್ವಾಮಿತ್ರನ ಹತ್ತರೆ ಬೇಡಿಗೊ೦ಡ°.
ದಶರಥನ ಮಾತುಗಳ ಕೇಳಿ ವಿಶ್ವಾಮಿತ್ರ೦ಗೆ ಕೋಪ ಬ೦ತು.

”ರಾಜಾ , ನೀನೀಗ ಕೊಟ್ಟ ಮಾತಿ೦ಗೆ ತಪ್ಪುತ್ತಾ ಇದ್ದೆ.ಎನಗೆ ರಾಮನ ಬಿಟ್ಟು ಬೇರೆ ಆರೂ ಬೇಡ”.ಹೇಳಿಕ್ಕಿ ಅಸ್ಥಾನ೦ದ ಹೆರ ನೆಡದ°.ಅಷ್ಟಪ್ಪಗ ಅಲ್ಲಿದ್ದ ವಸಿಷ್ಠಮುನಿ ದಶರಥ೦ಗೆ ಸಮಾಧಾನ ಮಾಡಿದ°.

”ರಾಮನ ಕಳಿಸಿ ಕೊಡುಲೆ ಹಿ೦ದೇಟು ಹಾಕೆಡ,ಹೆದರೆಡ.ವಿಶ್ವಾಮಿತ್ರ ಮಹಾ ಶಕ್ತಿ ಇಪ್ಪೋನು.ಅವ೦ಗೆ ರಾಕ್ಷಸರ ಕೊಲ್ಲೊದು ಕಷ್ಟದ ಕೆಲಸ ಅಲ್ಲ.ಅವ೦ಗೆ ರಾಮನ ಅವನೊಟ್ಟಿ೦ಗೆ ಕರಕ್ಕೊ೦ಡು ಹೋಯೆಕ್ಕು ಹೇಳಿ ಇದ್ದು.ರಾಮನ ಕಳ್ಸಿದರೆ ಅವ೦ಗೆ ಸಣ್ಣ ಪ್ರಾಯಲ್ಲಿಯೇ  ರಾಕ್ಷಸರ ಒಟ್ಟಿ೦ಗೆ ಯುದ್ಧ ಮಾಡುಲೆ ಕಲ್ತಾ೦ಗೆ ಆವುತ್ತು.ನಿನ್ನ ಹೆದರಿಕೆಯ ಬಿಟ್ಟು ರಾಮನ ವಿಶ್ವಾಮಿತ್ರನ ಒಟ್ಟಿ೦ಗೆ ಕಳ್ಸಿ ಕೊಡು” ಹೇಳಿದ° ವಸಿಷ್ಠ ಮುನಿ.ವಿಶ್ವಾಮಿತ್ರ° ಒಳ್ಳೆಯ ಉದ್ದೇಶಲ್ಲಿ ರಾಮನ ಬಪ್ಪಲೆ ಹೇಳೊದಾಗಿಕ್ಕು ಹೇಳಿಯೂ ತಿಳುಶಿದ°.ಇಷ್ಟೆಲ್ಲಾ ವಸಿಷ್ಠ ಹೇಳುವದ್ದೆ ದಶರಥ ಮಹಾರಾಜ೦ಗೆ ಧೈರ್ಯ ಬ೦ತು.ಅವ° ರಾಮ ಲಕ್ಷ್ಮಣರ ಆಶೀರ್ವಾದ ಮಾಡಿ ವಿಶ್ವಾಮಿತ್ರನ ಒಟ್ಟಿ೦ಗೆ ಕಳ್ಸಿ ಕೊಟ್ಟ°.ಲಕ್ಷ್ಮಣ ಯಾವಗಳೂ ಇಪ್ಪ ಹಾ೦ಗೆ ಅಣ್ಣನ ಜತೆ ಸೇರಿದ°.

ತಾಟಕಿಗೆ ರಾಮ ಬಾಣ ಬಿಡೊದರ ಮಧುರಕಾನನ ಬಾಲಣ್ಣ ಚಿತ್ರಿಸಿದ್ದು
ತಾಟಕಿಗೆ ರಾಮಬಾಣ        ಚಿತ್ರಃ ಮಧುರಕಾನನ ಬಾಲಣ್ಣ

ವಿಶ್ವಾಮಿತ್ರ೦ದೆ ರಾಮಲಕ್ಷ್ಮಣರುದೆ ನೆಡಕ್ಕೊ೦ಡು ಕಾಡಿಲಿ ಪ್ರಯಾಣ ಮಾಡಿದವು.ಮದಲು ಸರಯೂ ನದಿಯ ಅವು ದಾ೦ಟಿದವು.ಮತ್ತೆ ಗ೦ಗಾನದಿ ಸಿಕ್ಕಿತ್ತು.ಅದರನ್ನುದೆ ದಾ೦ಟಿ ಮು೦ದೆ ನೆಡದವು.ಕಲ್ಲು ಮುಳ್ಳು ಬಲ್ಲೆಯ ದಾರಿ ನೆಡವಲೆ ಕಷ್ಟ ಹೇಳಿ ಕ೦ಡಿದೇ ಇಲ್ಲೆ.ವಿಶ್ವಾಮಿತ್ರನೊಟ್ಟಿ೦ಗೆ ಇಪ್ಪದು,ಅವನ ಅನುಭವದ ಮಾತುಗಳ ಕೇಳಿಗೊ೦ಡು ನೆಡವದು ನಮ್ಮ ಭಾಗ್ಯ ಹೇಳಿ ರಾಮಲಕ್ಷ್ಮಣರು ಗ್ರೇಶಿದವು.
ಕೆಲವು ದಿನ ನೆಡದು ಮುಗುಶಿ ಅವು ತು೦ಬಾ ದೊಡ್ಡ ಕಾಡಿನ ಒಳ ಹೊಕ್ಕವು.ಆ ಕಾಡಿಲಿಪ್ಪ ತಾಟಕಿ ಹೇಳ್ತ ರಾಕ್ಷಸಿ ಅದರ ಭಯ೦ಕರ ರೂಪಲ್ಲಿ ಇವರೆದುರಿ೦ಗೆ ಓಡಿ ಬ೦ತು.ಅದು ಕಾಡಿಲಿಪ್ಪ ಋಷಿಗಳ ಎಲ್ಲ ಭಯ೦ಕರ ರೂಪಲ್ಲಿ ಹೆದರ್ಸಿ ಕೊಶಿಪಟ್ಟುಗೊ೦ಡಿತ್ತು.ಹಾ೦ಗಾಗಿ ”ಅದರ ಕೊಲ್ಲು” ಹೇಳಿ ವಿಶ್ವಾಮಿತ್ರ ರಾಮ೦ಗೆ ಹೇಳಿದ°.ತಾಟಕಿ ಇವರನ್ನೂ ಹೆದರ್ಸುಲೆ ಓಡಿ ಬ೦ತು.ಆವಗಳೇ ರಾಮ ಬಾಣ ಬಿಟ್ಟು ಅದರ ಕೊ೦ದು ಹಾಕಿದ°.ವಿಶ್ವಾಮಿತ್ರ೦ಗೆ ಅದರ ನೋಡಿ ತು೦ಬಾ ಕೊಶಿ ಆತು.ವಿಶ್ವಾಮಿತ್ರ ರಾಮ೦ಗೆ ಬಲವಾದ ಶಕ್ತಿ ಇಪ್ಪ ಆಯುಧ೦ಗಳ ಕಾಣಿಕೆಯಾಗಿ ಕೊಟ್ಟ°.ರಾಮ ವಿಧೇಯನಾಗಿ ಅದರ ತೆಕ್ಕೊ೦ಡು ಅದರ ಬಿಡುವ,ಉಪಯೋಗ್ಸುವ ಕ್ರಮವ ವಿಶ್ವಾಮಿತ್ರನ ಕೈಲಿ ಕಲ್ತುಗೊ೦ಡ°.

 

(ಸಶೇಷ)

ಸೂ.ಃ

ಪ್ರಕಟಣೆಗೆ ಅನುಮತಿ ಕೊಟ್ಟ “ವಾಸನ್ ಪಬ್ಲಿಕೇಶನ್ಸ್”

ಗೆರೆಚಿತ್ರ ಮಾಡಿ ಕೊಡುವ ಮದರಂಕಾನ ಬಾಲಣ್ಣಮಾವ
– ಇವಕ್ಕೆ ಬೈಲು ಆಭಾರಿಯಾಗಿದ್ದು.

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಮಕ್ಕಗೊಪ್ಪುವ ನಿರೂಪಣೆ. ಲಾಯಕ ಆಯ್ದು.

  [Reply]

  VA:F [1.9.22_1171]
  Rating: +1 (from 1 vote)
 2. Amma,
  Laaika aaidu (modalondari odittidde, eega chitrangala ottinge odule innoo laaika aavthu). Magalinge idara odi heltha idde. Engala kelavu havyaka mithraru idara avara makkoge odi heluttha iddavu.
  Raja

  [Reply]

  VA:F [1.9.22_1171]
  Rating: +2 (from 2 votes)
 3. ವಿಜಯತ್ತೆ

  ಚಿ ಕ್ಕಮ್ಮ, ಸರಳವಾಗಿ, ತುಂಬಾ ಲಾಯಿಕಾಗಿ ಬತ್ತಾಇದ್ದು ಎನ್ನ ಶುಭಹಾರೈಕೆ

  [Reply]

  VN:F [1.9.22_1171]
  Rating: 0 (from 0 votes)
 4. Lavanya Kailar

  Amma,
  Bhaari laika aidu. Enna Havyaka friends ella odi ishta paduttha iddavu.
  Lavanya

  [Reply]

  VA:F [1.9.22_1171]
  Rating: 0 (from 0 votes)
 5. ಕೈಲಾರು ಚಿಕ್ಕಮ್ಮ
  saraswathikailar

  Olle prothsaha dayaka abiprayangala oppa sankoleli prakatisida ella sahridaya bandugokke enna krithajnathego- Hange reka chitrada moolaka ramayanada pramuka ghattangala sariyagi manadattappange maadtha ippa Shri Madurankana Balannange anu runiyagidde.
  Kannada type maadule edithhille. kshamisekku
  Kailar Chikkamma

  [Reply]

  VA:F [1.9.22_1171]
  Rating: 0 (from 0 votes)
 6. Supriya

  bhaari laikka iddhu!
  thumba koshi aathu….
  saralavagi artha maadi konde!
  dhanyavadhango! :)

  [Reply]

  VA:F [1.9.22_1171]
  Rating: 0 (from 0 votes)
 7. ಲಕ್ಷ್ಮಿ ಜಿ.ಪ್ರಸಾದ

  ಮಕ್ಕೊಗೆ ಅರ್ಥ ಅಪ್ಪ ರೀತಿಲಿ ಭಾರೀ ಚೆಂದಕ್ಕೆ ಬತ್ತ ಇದ್ದು ,ಮಕ್ಕೊಗೆ ಮಾತ್ರ ಅಲ್ಲ ದೊಡ್ದೋರಿಂಗು(ಎಂಗೊಗುದೆ) ಓದುಲೆ ಕೊಶಿ ಆವುತ್ತು ,ಅಭಿನಂದನೆಗ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವರಾಜಣ್ಣಶುದ್ದಿಕ್ಕಾರ°ಮುಳಿಯ ಭಾವಕಾವಿನಮೂಲೆ ಮಾಣಿವಿಜಯತ್ತೆತೆಕ್ಕುಂಜ ಕುಮಾರ ಮಾವ°ಪ್ರಕಾಶಪ್ಪಚ್ಚಿದೊಡ್ಡಭಾವಶಾ...ರೀಅನಿತಾ ನರೇಶ್, ಮಂಚಿಬಂಡಾಡಿ ಅಜ್ಜಿಎರುಂಬು ಅಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕಗೋಪಾಲಣ್ಣಒಪ್ಪಕ್ಕಅಕ್ಷರದಣ್ಣಕೊಳಚ್ಚಿಪ್ಪು ಬಾವದೀಪಿಕಾಶರ್ಮಪ್ಪಚ್ಚಿಡೈಮಂಡು ಭಾವಪಟಿಕಲ್ಲಪ್ಪಚ್ಚಿಗಣೇಶ ಮಾವ°ಮಾಷ್ಟ್ರುಮಾವ°ಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ