Category: ಮಂತ್ರಂಗೊ

ಬಟ್ಟಮಾವನ ಮಂತ್ರಂಗೊ, ಶ್ಳೋಕಂಗೊ.

ಮೀನಾಕ್ಷೀ ಪಂಚರತ್ನಮ್ 7

ಮೀನಾಕ್ಷೀ ಪಂಚರತ್ನಮ್

ಉದಯಿಸುತ್ತಾ ಇಪ್ಪ ಸಹಸ್ರ ಕೋಟಿಸೂರ್ಯರ ಹಾಂಗೆ ಇಪ್ಪ ತೇಜೋಮಯಿಯ, ಕೇಯೂರ ಹಾರಂಗಳಿಂದ ಸುಶೋಭಿತಳಾಗಿಪ್ಪ, ಸುಂದರ ದಂತಪಂಕ್ತಿಂದ ಮುಗುಳುನೆಗೆ ಮಾಡಿಗೊಂಡಿಪ್ಪ, ಪೀತಾಂಬರಾಲಂಕೃತಳ, ಬ್ರಹ್ಮ, ವಿಷ್ಣು, ಇಂದ್ರರಿಂದ ಸೇವಿಸಲ್ಪಡುವ ಚರಣಂಗಳ ಹೊಂದಿಪ್ಪ, ತತ್ತ್ವಸ್ವರೂಪಳ, ಶಿವೆಯ, ಅಪಾರ ಕರುಣಾವಾರಿಧಿಯಾದ ಮೀನಾಕ್ಷಿಯ ಯಾವಾಗಲೂ ನಮಿಸುತ್ತೆ.

ತ್ರಿಪುರಸುಂದರೀ ಅಷ್ಟಕಮ್ 3

ತ್ರಿಪುರಸುಂದರೀ ಅಷ್ಟಕಮ್

ತ್ರಿಪುರಸುಂದರೀ ಅಷ್ಟಕಮ್ ಶ್ರೀ ಶಂಕರಾಚಾರ್ಯರ ಕೃತಿ. ಇದರಲ್ಲಿ ಆಚಾರ್ಯರು ಅಮ್ಮನ ಶಿವನ ಪತ್ನಿಯಾದ ತ್ರಿಪುರಸುಂದರಿಯ ರೂಪಲ್ಲಿ ಸುಂದರವಾಗಿ ವರ್ಣಿಸಿದ್ದವು.

ನವರತ್ನಮಾಲಿಕಾ 5

ನವರತ್ನಮಾಲಿಕಾ

ನವರತ್ನದಮಾಲೆಯ ಹಾಂಗೆ ರಚಿತ ಆದ ಈ ನವರತ್ನಮಾಲಿಕಾ ಸ್ತೋತ್ರ ಶಂಕರಾಚಾರ್ಯರ ಕೃತಿ.
ಅಬ್ಬೆಯ ನವ ವಿಧಲ್ಲಿ ವರ್ಣನೆ ಮಾಡುವ ಈ ಕೃತಿಲಿ ಅಮ್ಮನ ಸುಂದರ ರೂಪವ ಮನಸ್ಸಿಲಿ ಭಾವಿಸಿ ನಮಿಸುತ್ತೆ – ಹೇಳುವ ಹಾಂಗೆ ಇದ್ದು.

ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್ 5

ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್

ಬ್ರಹ್ಮ, ವಿಷ್ಣು, ಮಹೇಶ್ವರ ಮೂರು ಜನರ ನೇತ್ರಂದ ಹೆರಟ ಅಗ್ನಿಯಜ್ವಾಲೆಗೋ ಒಂದು ಕಡೆ ಕೇಂದ್ರೀಕೃತ ಆಗಿ, ಸಹಸ್ರ ಸೂರ್ಯರ ತೇಜದ ಒಂದು ರೂಪ ಮೂರ್ತಗೊಂಡತ್ತಡ್ಡ. ಮಹಿಷಾಸುರನ ನಿಗ್ರಹ ಮಾಡೆಕ್ಕು ಹೇಳ್ತ ಸಕಲ ದೇವರುಗಳ ಸಂಕಲ್ಪಕ್ಕೆ ಅವತಾರ ಆದ ರೂಪ ದೇವೀದುರ್ಗೆ.

ಲಲಿತಾ ಪಂಚಕಮ್ 4

ಲಲಿತಾ ಪಂಚಕಮ್

ಲಲಿತಾಂಬಿಕೆಯ ಸೌಭಾಗ್ಯ ಕೊಡುವ ಈ ಶ್ಲೋಕ ಆರು ಪ್ರಾತಃ ಕಾಲಲ್ಲಿ ಪಠನೆ ಮಾಡ್ತವಾ, ಅವಕ್ಕೆ ಲಲಿತಾದೇವಿ ಕೂಡ್ಲೇ ಪ್ರಸನ್ನಳಾಗಿ ವಿದ್ಯೆ, ಸಂಪತ್ತು, ನಿರ್ಮಲ ಸುಖ, ಅಪಾರ ಕೀರ್ತಿ ಕೊಡ್ತು ಹೇಳಿ ಶ್ಲೋಕದ ಫಲಶ್ರುತಿಲಿ ಹೇಳ್ತವು.

ಭವಾನೀ ಭುಜಂಗ ಸ್ತೋತ್ರಮ್ 2

ಭವಾನೀ ಭುಜಂಗ ಸ್ತೋತ್ರಮ್

ಭವಾನೀ ಭುಜಂಗ ಸ್ತೋತ್ರವ ಆರು ಭಕ್ತಿಂದ ಪಠನೆ ಮಾಡ್ತವೋ ಅವಕ್ಕೆ ವೇದಸಾರವಾದ ತನ್ನ ಶಾಶ್ವತ ಪದವಿಯನ್ನೂ, ಅಷ್ಟಸಿದ್ಧಿಯನ್ನೂ ಶ್ರೀ ಭವಾನಿ ಕೊಟ್ಟು ಅನುಗ್ರಹಿಸುತ್ತು. ಭವಾನೀ ಭವಾನೀ ಭವಾನೀ ಹೇಳಿ ಮೂರು ಸರ್ತಿ ಉದಾರ ಬುದ್ಧಿಲಿ, ಪ್ರೀತಿಂದ ಆರು ಜಪ ಮಾಡ್ತವೋ ಅವಕ್ಕೆ ಯಾವಾಗಲೂ, ಹೇಂಗೂ ಆರಿಂದಲೂ ದುಃಖ ಇಲ್ಲೆ, ಮೋಹ ಇಲ್ಲೆ, ಪಾಪ ಇಲ್ಲೆ, ಭಯ ಇಲ್ಲೆ

ಶ್ರೀಮೂಕಾಂಬಿಕಾಷ್ಟಕಮ್ 7

ಶ್ರೀಮೂಕಾಂಬಿಕಾಷ್ಟಕಮ್

ಶ್ರೀ ಮೂಕಾಂಬಿಕಾ ದೇವಿ ವಿರಾಜಮಾನ ಆಗಿಪ್ಪದು ಸಪ್ತ ಮುಕ್ತಿ ಸ್ಥಳಂಗಳಲ್ಲಿ ಒಂದಾದ ಕೊಲ್ಲೂರಿಲಿ. ಕೊಡಚಾದ್ರಿಯ ಚೆಂದದ ಬೆಟ್ಟದ ಸಾಲಿಲಿ ಸೌಪರ್ಣಿಕಾ ನದಿಯ ದಡಲ್ಲಿ ಶಿವಶಕ್ತಿಯರಿಬ್ಬರೂ ಜ್ಯೋತಿರ್ಲಿಂಗ ರೂಪಲ್ಲಿ ಇಪ್ಪ ಕೊಲ್ಲೂರಿಲಿ ಶ್ರೀ ಚಕ್ರದ ಮೇಲೆ ಅಬ್ಬೆಯ ಪಂಚಲೋಹದ ವಿಗ್ರಹವ ಸುಮಾರು ಸಾವಿರದ...

ಭವಾನ್ಯಷ್ಟಕಮ್ 5

ಭವಾನ್ಯಷ್ಟಕಮ್

ಭವಾನ್ಯಷ್ಟಕಂ ಶ್ರೀ ಶಂಕರಾಚಾರ್ಯರ ಒಂದು ಅಪೂರ್ವ ಕೃತಿ. ಮನುಷ್ಯಾವಸ್ಥೆಯ ವಿಪರೀತಂಗಳ ಕಲ್ಪಿಸಿ, ತೀರಾ ಭೂಮಿಗಿಳುದು ಶರಣಾಗಿ ಅಬ್ಬೆಯ ಹತ್ತರೆ “ಎನಗೆ ನೀನೇ ಗೆತಿ” ಹೇಳಿ ದೈನ್ಯಲ್ಲಿ ಕೇಳಿಗೊಂಬ ಒಂದು ದೇವೀ ಸ್ತೋತ್ರ.

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು 8

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೆಂಟು

ಹೇ ಅಗ್ನೇ! ಆನು ಮಾಡಿದ ಕಾರ್ಯಾಕಾರ್ಯಂಗಳ ತಿಳುದವ° ನೀನು. ಎನ್ನ ನೀನು ಸಂಪತ್ಕರವಾದ ಸನ್ಮಾರ್ಗಲ್ಲಿ ಕರಕ್ಕೊಂಡುಹೋಗು. ಎಂದಿಂಗೂ ತಿರುಗಿ ಬರೆಕ್ಕಾದ ಅಗತ್ಯ ಇಲ್ಲದ್ದ ಒಳ್ಳೆಯ ಮಾರ್ಗಲ್ಲಿ ಎನ್ನ ಕರಕ್ಕೊಂಡು ಹೋಗು. ಪಾಪಂಗಳ ಎನ್ನಂದ ದೂರಮಾಡು. ಹೇ ಅಗ್ನೇ! ನಿನಗೆ ಪುನಾ ಪುನಾ ನಮನಂಗಳ ಅರ್ಪಿಸುತ್ತೆ. ಹೀಗೆ ಹಿರಣ್ಯಗರ್ಭೋಪಾಸಕನಾದ ಯೋಗಿ ಅಗ್ನಿದೇವನ ಹತ್ತರೆ ಬೇಡಿಗೊಳುತ್ತ°. ಇದು ಕ್ರಮಮುಕ್ತಿಗಿಪ್ಪ ಮಾರ್ಗ.

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೇಳು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೇಳು

ಈ ಎನ್ನ ದೇಹಲ್ಲಿಪ್ಪ ಪ್ರಾಣವಾಯು ಪಂಚಮಹಾಭೂತಂಗಳಲ್ಲಿ ಒಂದಾದ ಶಾಶ್ವತವಾದ ವಿಶ್ವವಾಯುವ ಸೇರಲಿ. ಈ ದೇಹ ಭಸ್ಮವಾಗಿ ಭೂಮಿಯ ಸೇರಲಿ. ಓಂ ಬ್ರಹ್ಮವೇ, ನಿನಗೆ ನಮಸ್ಕಾರ. ಎನ್ನಂದ ಬೇರೆ ಬೇರೆ ಕೆಲಸಂಗಳ ಮಾಡುಸಿದ, ಮನೋಬುದ್ಧಿರೂಪವಾದ ಓ ಎನ್ನ ಅಂತರಂಗವೇ, ನಿನ್ನ ಕೃತ್ಯಾಕೃತ್ಯಂಗಳ ನೆಂಪು ಮಾಡಿಗೊ. ಪಾಪಕ್ಕಾಗಿ ಪಶ್ಚಾತ್ತಾಪಪಡು, ಪುಣ್ಯಕ್ಕಾಗಿ ಪರಮಾತ್ಮನ ಧ್ಯಾನ ಮಾಡು.

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾರು

ಸೂರ್ಯ-ಅಗ್ನಿ ತೇಜಸ್ಸಿನ ಮೂಲಕ ಆತ್ಮ ಸ್ವರೂಪವ ಮನಗಾಂಬಲೆ ನವಗೆ ನಿರಾಕಾರ ಬ್ರಹ್ಮಧ್ಯಾನಕ್ಕಿಂತ ಸುಲಭ ಆವುತ್ತು.

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು 3

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು ಹಿರಣ್ಮಯೇನ ಪಾತ್ರೇಣ ಸತ್ಯ ಸ್ಯಾಪಿಹಿತಂ ಮುಖಮ್ | ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||೧೫|| ಹೊನ್ನ ಮುಚ್ಚಳದಿಂದ ಮುಚ್ಚಿದೆ ಕಾಣದಂತೆಯೆ ಸತ್ಯವ ಜೀವ ಪೋಷಕ! ಮುಚ್ಚಲೆತ್ತುತ ತೋರು ಸತ್ಯವ ಧರ್ಮವ ||೧೫|| – ಇದು ಡಾ|...

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾಲ್ಕು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾಲ್ಕು

ಅಂಗಸೌಷ್ಠವ, ದನಗೊ, ಭೂಮಿ, ಚಿನ್ನ ಮೊದಲಾದವುಗಳಿಂದ ಸಿಕ್ಕುವ ಮಾನುಷಿಕ ವಿತ್ತಂದಲೂ ದೇವತಾಜ್ಞಾನವಾದ ದೈವ ವಿತ್ತಂದಲೂ ಸಾಧಿಸೆಕ್ಕಾದ ಫಲ ಪ್ರಕೃತಿಲಿ ಲಯಿಸುವದು ಹೇಳಿ ಗೊಂತಾವುತ್ತು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು 0

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿಮೂರು ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ | ಇತಿ ಶುಶ್ರುಮ ಧೀರಣಾಂ ಯೇ ನಸ್ತದ್ವಿಚಚಕ್ಷಿರೇ ||೧೩|| ಈಶ ಪ್ರಕೃತಿಗಳಿಂದ ಬರುವುವು ಬೇರೆ ಬೇರೆಯ ಫಲಗಳು ತತ್ತ್ವ ದರ್ಶಿಗಳಿಂತು ಪೇಳ್ವರು ಶ್ರುತಿ ವಿಚಾರದ ಮಥನವು ||೧೩|| – ಇದು ಡಾ| ಶಾಮ...

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು

ಜಗದ ಚಿಂತನೆಯಲ್ಲಿ ಮಗ್ನರು ಕಪ್ಪು ಕತ್ತಲ ಪೊಗುವರು
ಆತ್ಮನಿರತರು ಮರೆತು ಜಗವನು ಹೆಚ್ಚು ಕತ್ತಲ ತುಳಿವರು