ಅಗ್ನಿ ಮೀಳೇ ಪುರೋಹಿತಂ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ ಅಗ್ನಿ ಮೀಳೇ  ಪುರೋಹಿತಂ ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಅಗ್ನಿ ಮೀಳೇ  ಪುರೋಹಿತಂ

(ಋಗ್ವೇದದ ಅಗ್ನಿಮೀಳೇ ಪುರೋಹಿತಂ ಮೊದಲ್ಗೊಂಡು ಒಂಭತ್ತು ಮಂತ್ರಂಗೊ)

ಅಗ್ನಿ ಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ |

ಹೋತಾರಂ ರತ್ನಧಾತಮಮ್         ||೧||

ಅಗ್ನಿಃ ಪೂರ್ವೇಭಿರ್ ಋಷಿಭಿರೀಡ್ಯೋ ನೂತನೈರುತ | ಸ ದೇವಾ ಏಹ ವಕ್ಷತಿ ||೨||

ಅಗ್ನಿನಾ ರಯಿವಶ್ನವತ್ ಪೋಷಮೇವ ದಿವೇ ದಿವೇ |

ಯಶಸಂ ವೀರವತ್ತವಮ್ ||೩||

ಅಗ್ನೇಯಂ ಯಜ್ಞಮಧ್ವರಂ ವಿಶ್ವತಃ ಪರಿಭೂರಸಿ | ಸ ಇದ್ದೇವೇಷು ಗಚ್ಛತಿ ||೪||

ಅಗ್ನಿರ್ಹೋತಾ ಕವಿಕ್ರತುಃ ಸತ್ಯಶ್ಚಿತ್ರಶ್ರವಸ್ತಮಃ |

ದೇವೋ ದೇವೇಭಿರಾಗಮತ್ ||೫||

ಯದಂಗದಾಶುಷೇ ತ್ವಮಗ್ನೇ ಭದ್ರಂ ಕರಿಷ್ಯಸಿ | ತವೇತ್ತತ್ ಸತ್ಯಮಂಗಿರಃ ||೬||

ಉಪತ್ವಾಗ್ನೇ ದಿವೇ ದಿವೇ ದೋಷಾ ವಸ್ತರ್ಧಿಯಾ ವಯಮ್ |

ನಮೋ ಭರಂತ ಏಮಸಿ ||೭||

ರಾಜಂತ ಮಧ್ವರಾಣಾಂ ಗೋಪಾಮೃತಸ್ಯ ದೀದಿವಮ್ | ವರ್ಧಮಾನಂ ಸ್ವೇ ದಮೇ ||೮||

ಸ ನಃ ಪಿತೇವ ಸೂನವೇsಗ್ನೇ ಸೂಪಾಯನೋ ಭವ |

ಸಚಸ್ವಾ ನಃ ಸ್ವಸ್ತಯೇ ||೯||

ಓಂ ಶಾಂತಿಃ ಶಾಂತಿಃ ಶಾಂತಿಃ

ಸ್ತುತಿಪೆನಗ್ನಿಯ (ಕನ್ನಡ ಗೀತೆ)

ಸ್ತುತಿಪೆನಗ್ನಿಯ ಪೂರ್ವ ಜನಕನ ಯಜ್ಞ ಋತ್ವಿಜ ತೇಜದವನ |
ಸರ್ವಮಂಗಳ ಧರಿಸಿದಾತನ ಸೂರ್ಯಗ್ರಹಗಳ ಧರಿಸಿದವನ ||೧||

ಪೂರ್ವ ನೂತನ ಋಷಿನಮಸ್ಕೃತ ಅಗ್ನಿ ದೇವನು ಪರಮ ಪುರುಷ|

ದೈವ ಕೃಪೆಯನು ಕರುಣಿಪನವ ದೇವತೆಗಳನು ಒಲಿಸಿ ಕೊಡುವ ||೨||

ಅಗ್ನಿ ದೇವನ ಕೃಪೆಯ ಕಾರಣ ನರಗೆ ಐಸಿರಿ ಹರಿದು ಬರಲು |
ವೃದ್ಧಿಗೊಳ್ಳುತ ಕೀರ್ತಿ ತರುವುದು ವೀರ ವಿದ್ವಾಂಸರನು ಸಹಿತ ||೩||

ಹಿಂಸೆಗೊಳ್ಳದ ಯಾವ ಯಜ್ಞವು, ಅಗ್ನಿ ದೇವನೆ, ವಿಶ್ವದೆಲ್ಲು |

ರಕ್ಷಿಸುತ್ತಿಹೆ, ವ್ಯಾಪಿಸುತ್ತಿಹೆ, ದೇವ ಮಾನವರಲ್ಲಿ ಮೆರೆದು ||೪||

ಸರ್ವದಾತನು ಸರ್ವಜ್ಞಾನಿಯು ಅಗ್ನಿ ದೇವನು ಜಗದ ಕರ್ತೃ |
ಶ್ರವಣ ಪುಣ್ಯವ ಪಡೆಯಲದ್ಭುತ ದೇವ ಮಾನವರಿಂದ ಸಾಧ್ಯ ||೫||

ಸರ್ವ ಪ್ರಿಯನಾಗಿರುವ ಅಗ್ನಿಯೆ ದಾನಿ ಸಜ್ಜನರನ್ನು ಪೊರೆವೆ |

ಅಂತರಾತ್ಮನೆ ನೀಡು ರಕ್ಷಣೆ ಸತ್ಯವ್ರತವಿದುನಿನ್ನ ತಿಳಿವೆ ||೬||

ಎಲ್ಲ ದಿನ ದಿನ  ಬುದ್ಧಿ ಪೂರ್ವಕ ನಮಿಸಿ ಸ್ತುತಿಪೆನು ನಾನು ನಿನಗೆ|
ಹಗಲು ರಾತ್ರಿಯು ನಿನ್ನ ಬಳಿಯಲಿ ಬಂದು ಸೇರ್ವೆವು ಪೂಜಿಸುತಲಿ ||೭||

ದೀಪ್ತವಾಗಿಹ ಯಜ್ಞ ಧಾರ್ಮಿಕ ರಕ್ಷಿಪಾತನ ಸತ್ಯ ಪ್ರಭೆಗೆ |

ಬೆಳೆದು ನಿಂತಿಹ ಸರ್ವ ಶ್ರೇಷ್ಠನ ಹೊಂದುತಿರುವೆವು ಮೋಕ್ಷ ಸುಖಕೆ ||೮||

ವೇದ ಜ್ಞಾನದ ಅಗ್ನಿ ದೇವನೆ ಪಿತನು ಪುತ್ರನ ಪೊರೆವ ತೆರದಿ।
ಸುಖವನೀಯುತ ಜ್ಞಾನದಾತನೆ ನಮಗೆ ಮಂಗಳ ನೀಡು ಮುದದಿ ||೯||
ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ

   

You may also like...

6 Responses

 1. ಚೆನ್ನೈ ಭಾವ says:

  ಅಗ್ನಿಯ ಹೊಗಳಿ ‘ನಮಗೆ ಮಂಗಳ ನೀಡು ಮುದದಿ’ ಹೇಳಿ ಬೇಡಿಗೊಂಬ ಮಂತ್ರದ ಅನುವಾದವ ಪದ್ಯರೂಪಲ್ಲಿ ಸರಳವಾಗಿ ಸುಂದರವಾಗಿ ಬರದ್ದದು ಲಾಯಕ ಆಯ್ದು ಹೇಳಿ ಹೇಳುತ್ತು- ‘ಚೆನ್ನೈವಾಣಿ’

 2. ganapathi bhat mullankochi says:

  kannada padya roopalli banda samskrtha shloka moolada ghanasthike, gaambheeryadottinge moodi baindu.

 3. ಶರ್ಮಪ್ಪಚ್ಕ್ಷ್ಚಿ says:

  ಡಾಕ್ಟ್ರೇ,
  ನಿಂಗಳ ಇಲ್ಲಿ ಕಂಡು ಕೊಶೀ ಆತು.
  ಬತ್ತಾ ಇರಿ, ನಿಂಗಳ ಅನಿಸಿಕೆಗಳ ಬರದು ಪ್ರೋತ್ಸಾಹಿಸುತ್ತಾ ಇರಿ

 4. skgkbhat says:

  ಸಂಸ್ಕೃತಲ್ಲಿ ಈಗ ಳ ಕಾರ ಬರವದು ಕಮ್ಮಿ ,ವೇದಮಂತ್ರಲ್ಲಿ ಇದ್ದು ಹೇಳಿ ಕಾಣುತ್ತು.ಮರಾಠಿಲಿ ಬರೆತ್ತವು. ಹಿಂದಿಲಿ ಳ ಕಾರ ಬರೆತ್ತವೇ ಇಲ್ಲೆ ಹೇಳಿ ಕಾಣುತ್ತು.ಗೊಂತಿದ್ದವು ಈ ಬಗ್ಗೆ ತಿಳಿಸುವಿರಾ?

 5. ಕೃಷ್ಣ ಭಟ್, ಶೇಡಿಗುಮ್ಮೆ says:

  ಧನ್ಯವಾದಂಗೋ !

 6. ಅಗ್ನಿ ದೇವನ ಸ್ತುತಿ ಓದಿ ಕೋಶಿ ಆತು ಆದರೆ ಅಗ್ನಿ ಸೂಕ್ತದ ಮೂಲ ಭಾವಕ್ಕು ಸ್ತುತಿ ಗೀತೆಗೂ ರಜ್ಜ ಭಿನ್ನತೆ ಇದ್ದು .ಉದಾ ಮೊದಲ ಮಂತ್ರ ಅಗ್ನಿಮೀಳೆ =ಅಗ್ನಿಯು ಇಳೆಯಲ್ಲಿ (ಭೂಮಿಯಲ್ಲಿ ) ಪುರೋಹಿತಂ =ಪುರೋಹಿತನು ,ಯಜ್ನಸ್ಯ ದೇವಂ =ಯಜ್ಞದ ದೇವನು,ಋತ್ವಿಜಂ= ಋತ್ವಿಜನು ,ಹೋತಾರಂ =ಯಜಮಾನನು ,ರತ್ನಧಾತಮಂ =ರತ್ನಗಳನ್ನು ಕೊಡುವವನು
  ಮೂಲವಾ ಸಾಧ್ಯವಾದಷ್ಟರ ಮತ್ತಿನ್ಗೆ ಅನುಸರಿಸಿದರೆ ಇನ್ನು ಚೆಂದ ಬರ್ತಿತ್ತು -ಡಾ.ಲಕ್ಷ್ಮಿ ಜಿ ಪ್ರಸಾದ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *