ಅನ್ನ ಸೂಕ್ತಮ್

October 17, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ “ಅನ್ನ ಸೂಕ್ತಮ್ ” ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಅನ್ನ ಸೂಕ್ತಮ್

ಅಹಮಸ್ಮಿ ಪ್ರಥಮಜಾ ಋತಸ್ಯ |ಪೂರ್ವಂ ದೇವೇಭ್ಯೋ ಅಮೃತಸ್ಯ ನಾಭಿಃ |

ಯೋ ಮಾ ದದಾತಿ ಸ ಇದೇವ ಮಾವಾಃ | ಅಹಮನ್ನ ಮನ್ನಮದಂತಮದ್ಮಿ ||೧||

ಪೂರ್ವಮಗ್ನೇರಪಿ ದಹತ್ಯನ್ನಮ್ | ಯತ್ತೌ ಹಾಸಾತೇ ಅಹಮುತ್ತರೇಷು |

ವ್ಯಾತ್ತಮಸ್ಯ ಪಶವಃ ಸುಜಂಭಮ್ | ಪಶ್ಯಂತಿ ಧೀರಾಃ ಪ್ರಚರಂತಿ ಪಾಕಾಃ ||೨||

ಜಹಾಮ್ಯನ್ಯಂ ನ ಜಹಾಮ್ಯನ್ಯಮ್ | ಅಹಮನ್ನಂ ವಶಮಿಚ್ಚರಾಮಿ |

ಸಮಾನಮರ್ಥಂ ಪರ್ಯೇಮಿ ಭುಂಜತ್ | ಕೋಮಾಮನ್ನಂ ಮನುಷ್ಯೋ ದಯೇತ ||೩||

ಪರಾಕೇ ಅನ್ನಂ ನಿಹಿತಂ ಲೋಕ ಏತತ್ | ವಿಶ್ವೈರ್ದೇವೈಃ ಪಿತೃಭಿರ್ಗುಪ್ತ ಮನ್ನಮ್ |

ಯದದ್ಯತೇ ಲುಪ್ಯತೇ ಯತ್ಪರೋಪ್ಯತೇ | ಶತತಮೀಸಾ ತನೂರ್ಮೇ ಬಭೂವ ||೪||

ಮಹಾಂತೌ ಚರೂ ಸಕೃದ್ದುಗ್ಧೇನ ಪಪ್ರೌ | ದಿವಂಚ ಪೃಶ್ಞಿ ಪೃಥಿವೀಂ ಚ ಸಾಕಮ್ |

ತಥ್ಸಪಿಬಂತೋ ನ ಮಿನಂತಿ ವೇಧಸಃ | ನೈತದ್ಭೂಯೋ ಭವತಿ ನೋ ಕನೀಯಃ ||೫||

ಅನ್ನಂ ಪ್ರಾಣಮನ್ನಮಪಾನಮಾಹುಃ | ಅನ್ನಂ ಮೃತ್ಯುಂ ತಮು ಜೀವಾತು ಮಾಹುಃ |

ಅನ್ನಂ ಬ್ರಹ್ಮಾಣೋ ಜರಸಂ ವದಂತಿ | ಅನ್ನ ಮಾಹುಃ ಪ್ರಜನನಂ ಪ್ರಜಾನಾಮ್ ||೬||

ಮೋಘಮನ್ನಂ ವಿಂದತೇ ಅಪ್ರಚೇತಾಃ| ಸತ್ಯಂ ಬ್ರವೀಮಿ ವಧ ಇತ್ಸತಸ್ಯ |

ನಾರ್ಯಮಣಂ ಪುಷ್ಯತಿ ನೋ ಸಖಾಯಮ್ | ಕೇವಲಾಘೋ ಭವತಿ ಕೇವಲಾಧೀ ||೭||

ಅಹಂ ಮೇಘಃ ಸ್ತನಯನ್ವರ್ಷನ್ನಸ್ಮಿ | ಮಾಮದಂತ್ಯ ಹಮದ್ಮ್ಯನ್ಯಾನ್ |

ಅಹಗ್ಂ ಸದಮೃತೋ ಭವಾಮಿ | ಮದಾದಿತ್ಯಾ ಅಧಿ ಸರ್ವೇ ತಪಂತಿ ||೮||

ಅನ್ನಾದ್ವೈ ಪ್ರಜಾಃ ಪ್ರಜಾಯಂತೇ | ಯಾಃ ಕಾಶ್ಚ ಪೃಥಿವೀಗ್ ಶ್ರಿತಾಃ|

ಅಥೋ ಅನ್ನೇನ್ಯವ ಜೀವಂತಿ | ಅಥೈ ನ ದಪಿ ಯಂತ್ಯಂ ತತಃ |

ಅನ್ನಗ್ಂ ಹಿ ಭೂತಾನಾಂ ಜ್ಯೇಷ್ಠಮ್ | ತಸ್ಮಾತ್ಸರ್ವೌಷಧ ಮುಚ್ಯತೇ |

ಸರ್ವಂ ವೈತೇನ್ನ ಮಾಪ್ನುವಂತಿ | ಯೇನ್ನಂ ಬ್ರಹ್ಮೋಪಾಸತೇ |

ಅನ್ನಗ್ಂ ಹಿ ಭೂತಾನಾಂ ಜ್ಯೇಷ್ಠಮ್ | ತಸ್ಮಾತ್ಸರ್ವೌಷಧ ಮುಚ್ಯತೇ |

ಅನ್ನಾದ್ಭೂತಾನಿ ಜಾಯಂತೇ | ಜಾತಾನ್ಯನ್ನೇನ ವರ್ಧಂತೇ|

ಅದ್ಯತೇತ್ತಿ ಚ ಭೂತಾನಿ| ತಸ್ಮಾದನ್ನಂ ತದುಚ್ಯತ ಇತಿ ||೯||

ಅನ್ನವಾನನ್ನಾದೋ ಭವತಿ| ಮಹಾನ್ ಭವತಿ |

ಪ್ರಜಯಾ ಪಶುಭಿರ್ಬ್ರಹ್ಮ ವರ್ಚಸೇನ| ಮಹಾನ್ಕೀರ್ತ್ಯಾ||೧೦||

ಅನ್ನಂ ನ ನಿಂದ್ಯಾತ್ | ತದ್ವ್ರತಮ್||೧೧||

ಪ್ರಾಣೋವಾ ಅನ್ನಮ್| ಶರೀರ ಮನ್ನಾದಮ್| ಪ್ರಾಣೇ ಶರೀರಂ ಪ್ರತಿಷ್ಠಿತಮ್|

ಶರೀರೇ ಪ್ರಾಣಃ ಪ್ರತಿಷ್ಠಿತಃ | ತದೇತದನ್ನಮನ್ನೇ ಪ್ರತಿಷ್ಠಿತಮ್||೧೨||

ಅನ್ನಂ ನ ಪರಿಚಕ್ಷೀತ| ತದ್ವ್ರತಮ್||೧೩||

ಅನ್ನಂ ಬಹು ಕುರ್ವೀತ| ತದ್ವ್ರತಮ್||೧೪||

ತಸ್ಮಾದ್ಯಯಾ ಕಯಾ ಚ ವಿಧಯಾ ಬಹ್ವನ್ನಂ ಪ್ರಾಪ್ನುಯಾತ್ ||೧೫||

ಅನ್ನ ಸೂಕ್ತ (ಕನ್ನಡ ಗೀತೆ)

ಪ್ರಥಮ ಜನಕನು ನಾನು ಯಾಗದ ನಾನೆ ಪೂರ್ವದಿ ಸುರರನಾಭಿ

ದಾನವೀಯುತ ನನ್ನ ಪ್ರೀತಿಪರನ್ನ ಉಂಬವರೆನಗೆ ಪ್ರಿಯರು

ದಾನವೀಯದೆ ತಾನೆ ಉಂಡರೆ ಅವರನುಣ್ಣುವೆ ನಾನೆ ಬಂದು ||೧||

ಅಗ್ನಿಗಾಹುತಿ ಕೊಡದೆ ತಿಂದರೆ ಅಗ್ನಿ ನಶಿಪುದು ಅನ್ನವನ್ನು

ಎರಡು ವರ್ಗವು; ಅನ್ನದಾನಿಯು, ಅನ್ನ ನೀಡದೆ ತಿನ್ನುವವರು

ದಾನಿ ಶ್ರೇಷ್ಠಗೆ ಒಲಿಯುತಿರುವೆನು, ದಾನ ಕೊಡದಿರೆ ಶಿಕ್ಷಿಸುವೆನು

ಬುದ್ಧಿವಂತರು ತಿಳಿವರಿದರನು, ಮೂಢ ತಿಂಬನು ದಾನ ಕೊಡದೆ ||೨||

ರಕ್ಷೆ ನೀಡೆನು ದಾನ ಕೊಡದಿರೆ, ರಕ್ಷೆ ನೀಡುವೆ ದಾನಿಗಳಿಗೆ

ನಾನು ಅನ್ನದಿ ಚಲಿಸುತಿರುವೆನು, ದಾನ ಭುಕ್ತಿಯ ಸಮತೆಯಿಂದ

ಇಂತು ವರ್ತಿಪ ಅನ್ನದಾತನ ಮನುಜನಾವನು ಬಯಸದಿರನು? ||೩||

ನನಗೆ ಅರ್ಪಿತವಾದ ಅನ್ನಕೆ ವಿಶ್ವ ದೇವರಪಿತೃ ರಕ್ಷೆ

ಹಳಸಿದನ್ನವು ಚೆಲ್ಲಿದನ್ನವು ಗಣ್ಯವಲ್ಲವು ನನಗೆ ಅಲ್ಪ ||೪||

ಎರಡು ಕೊಡಗಳು ತುಂಬಿಕೊಂಬುದು ಹಾಲು ಕರೆಯಲು ದೊಡ್ಡ ದನವ

ದೇವಲೋಕದಿ ಭೂಮಿ ತಳದಲಿ ತೃಪ್ತಿಯನ್ನದಿ ಇದುವೆ ತೆರದಿ

ಹಾಳು ಮಾಡರು ಬುದ್ಧಿವಂತರು ಫಲವನುಣ್ಣುತ ಅನ್ನ ರಸದ

ಕಡಿಮೆಯಾಗದು ಅಧಿಕವಾಗದು ಸಮತೆಗೊಂಬುದು ಅನ್ನ ಸುಖವು ||೫||

ಪ್ರಾಣವಾಯುವು ಅನ್ನವೆಂಬರು ಅನ್ನವನ್ನು ಅಪಾನವೆಂದು

ಮೃತ್ಯುವೆಂಬರು ಅನ್ನ ಹಳಸಲು; ಜೀವವೆಂಬರು ಶುದ್ಧದನ್ನ

ಅನ್ನ ಕಾರಣ ಜರಾವ್ಯಾಧಿಗೆ ಪ್ರಾಣಿ ಸಂತತಿ ಅನ್ನದಿಂದ ||೬||

ವ್ಯರ್ಥ ಮಾನವ ದಾನ ಕೊಡದಿರೆ ಸತ್ಯವಾಗಿಯು ಅನ್ನ ಮೃತ್ಯು

ಯಾಗ ಮಾಡನು ಅತಿಥಿಯುಣಿಸನು ತಾನೆ ಉಣ್ಣುತ ಪಾಪಗೈವ ||೭||

ನಾನು ಘರ್ಜಿಪೆ ಮಳೆಯ ಸುರಿಸುವೆ ಅನ್ನವಾಗಿಹೆ ಮೇಘರೂಪ

ನನ್ನನುಂಬರು ದಾನಶೂರರು, ದಾನ ಕೊಡದವರನ್ನು ತಿಂಬೆ

ಈವೆ ಅಮೃತವ ನಾನು ದಾನಿಗೆ ಸೂರ್ಯ ತಪಿಪನು ನನ್ನ ದಯದಿ ||೮||

ಅನ್ನ ಜೀವವು ಪ್ರಾಣಿವರ್ಗಕೆ ಉತ್ತಮೌಷಧ ಅನ್ನವಿಂತು

ಪ್ರಾಣಿ ಜನನವು ಅನ್ನದಿಂದಲೆ, ಪ್ರಾಣಿವರ್ಧನೆ ಅನ್ನದಿಂದ

ಪ್ರಾಣಿ ಭೋಜನ ಅನ್ನವೆಂಬರು, ಪ್ರಾಣಿ ತಿಂದರೆ ದೇಹವನ್ನ||೯||

ತ್ಯಾಗ ಮನದಲಿ ಅನ್ನವುಂಡರೆ ಪಡೆವನಾತನು ಅನ್ನ ವೃದ್ಧಿ

ಶ್ರೇಷ್ಠನಾಗುವ ಕೀರ್ತಿಗೊಳ್ಳುವ ಬ್ರಹ್ಮ ತೇಜವ ಪ್ರಜೆಯ ದನವ ||೧೦||

ಅನ್ನ ನಿಂದನೆ ಕೂಡದೆಂದಿಗು ಕಾರ್ಯವಾಗಲಿ ವ್ರತವನಿಂತು ||೧೧||

ಪ್ರಾಣವನ್ನವು ದೇಹವನ್ನವು ದೇಹವಿರುವುದು ಅನ್ನದಿಂದ

ದೇಹ ಪ್ರಾಣವ ಹೊಂದಿ ನಿಲುವುದು ಪ್ರಾಣ ದೇಹದಿ ಒಳಗೆ ವಾಸ

ದೇಹ ಪ್ರಾಣವು ಇರುವುದೀತೆರ ಅನ್ನವೆರಡಕು ಮೂಲ ಭೂತ ||೧೨||

ಬಿಸುಡಬಾರದು ಅನ್ನವೆಂದಿಗು ಕಾರ್ಯವಾಗಲಿ ವ್ರತವನಿಂತು ||೧೩||

ಅನ್ನ ಬಹುವಿಧ ವೃದ್ಧಿ ಹೊಂದಲಿ ಕಾರ್ಯವಾಗಲಿ ವ್ರತವನಿಂತು ||೧೪||

ಬಹು ಸಮೃದ್ಧಿಯ ಅನ್ನ ಹೊಂದಲಿ ಅನ್ನ ಬ್ರಹ್ಮನು ಪ್ರಕಟಪಡಲಿ ||೧೫||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ಅನ್ನ ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ಅನ್ನ ಸೂಕ್ತಮ್, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಕೃಷ್ಣ ಭಟ್, ಶೇಡಿಗುಮ್ಮೆ

  ಶರ್ಮ ಭಾವ,

  ಧನ್ಯವಾದಂಗೋ !

  [Reply]

  ಶರ್ಮಪ್ಪಚ್ಚಿ

  ಶರ್ಮ ಭಾವ Reply:

  http://oppanna.com/vishesha/oppa-pata-gravatar-tutor

  ನಿನ್ನ ಪಟ ಇಲ್ಲಿ ಬಪ್ಪ ಹಾಂಗೆ ಮಾಡ್ಲೆ ಆನು ಕೊಟ್ಟ ಲಿಂಕ್ ನೋಡು.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಓದಿಗೊಂಡು ಕೇಳ್ಳೆ ಲಾಯಕ ಇದ್ದು ಅಪ್ಪಚ್ಚಿ. ಧನ್ಯವಾದ. ಬೈಲಿಂಗೆ ನಿಂಗಳ ಈ ಕೊಡುಗೆಗೆ ತುಂಬಾ ಧನ್ಯವಾದಂಗೊ.

  [Reply]

  VA:F [1.9.22_1171]
  Rating: +1 (from 1 vote)
 3. ಪ್ರದೀಪ ಶರ್ಮ
  ಪ್ರದೀಪ ಶರ್ಮ

  ಶರ್ಮಪ್ಪಚ್ಚಿ ತುಂಬಾ ಲಾಯ್ಕ ಆಯ್ದು ……………….ವಸಂತ ವೇದಪಾಠ ಶಾಲೆ ವಿಟ್ಲದ ನೆನಪು ಆವ್ತಾ ಇದ್ದು

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಪುತ್ತೂರಿನ ಪುಟ್ಟಕ್ಕಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆನೆಗೆಗಾರ°ಅಕ್ಷರ°ಬೊಳುಂಬು ಮಾವ°ಮಾಲಕ್ಕ°ಕಳಾಯಿ ಗೀತತ್ತೆಅಡ್ಕತ್ತಿಮಾರುಮಾವ°ಪುಟ್ಟಬಾವ°ಜಯಗೌರಿ ಅಕ್ಕ°ಶಾಂತತ್ತೆಒಪ್ಪಕ್ಕಅನು ಉಡುಪುಮೂಲೆಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಶರ್ಮಪ್ಪಚ್ಚಿಚೆನ್ನೈ ಬಾವ°ಶ್ರೀಅಕ್ಕ°ಗೋಪಾಲಣ್ಣರಾಜಣ್ಣಚೆನ್ನಬೆಟ್ಟಣ್ಣವೇಣಿಯಕ್ಕ°ಬಟ್ಟಮಾವ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ