ಬ್ರಹ್ಮ ಸೂಕ್ತಮ್

September 19, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ ”  ಬ್ರಹ್ಮ ಸೂಕ್ತಮ್ ” ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಬ್ರಹ್ಮ ಸೂಕ್ತಮ್

ಬ್ರಹ್ಮ ಜ ಜ್ಞಾನಂ ಪ್ರಥಮಂ ಪುರಸ್ತಾತ್ | ವಿಸೀಮತಃ ಸುರುಚೋ ವೇನ ಆವಃ |

ಸ ಬುಧ್ನಿಯಾ ಉಪಮಾ ಅಸ್ಯ ವಿಷ್ಠಾಃ | ಸತಶ್ಚ ಯೋನಿಮಸತಶ್ಚವಿವಃ ||೧||

ಪಿತಾ ವಿರಾಜಾಮೃಷಭೋ ರಯೀಣಾಮ್ | ಅಂತರಿಕ್ಷಂ ವಿಶ್ವ ರೂಪ  ಆವಿವೇಶ |

ತಮರ್ಕೈ ರಭ್ಯರ್ಚಂತಿವಥ್ಸಮ್ | ಬ್ರಹ್ಮ ಸಂತಂ ಬ್ರಹ್ಮಣಾ ವರ್ಧಯಂತಃ ||೨||

ಬ್ರಹ್ಮ ದೇವಾನಯಜತ್ | ಬ್ರಹ್ಮ ವಿಶ್ವಮಿದಂ ಜಗತ್ |

ಬ್ರಹ್ಮಣಃ ಕ್ಷತ್ರಂ ನಿರ್ಮಿತಂ | ಬ್ರಹ್ಮ ಬ್ರಾಹ್ಮಣ ಆತ್ಮನಾ ||೩||

ಅಂತರಸ್ಮಿನ್ನಿಮೇ ಲೋಕಾಃ | ಅಂತರ್ವಿಶ್ವಮಿದಂ ಜಗತ್ |

ಬ್ರಹ್ಮೈವ ಭೂತಾನಾಂ ಜ್ಯೇಷ್ಠಮ್ | ತೇನ ಕೋರ್ಹತಿಸ್ಪರ್ಧಿತುಮ್ ||೪||

ಬ್ರಹ್ಮನ್ ದೇವಾಸ್ತ್ರಯ ಸ್ತ್ತ್ರಿಗ್ಂ ಶತ್ | ಬ್ರಹ್ಮನ್ನಿಂದ್ರ ಪ್ರಜಾಪತೀ |

ಬ್ರಹ್ಮನ್ ಹ ವಿಶ್ವಾ ಭೂತಾನಿ | ನಾವೀವಾಂತಃ ಸಮಾಹಿತಾ ||೫||

ಚತಸ್ರ ಆಶಾಃ ಪ್ರಚರಂತ್ವಗ್ನಯಃ | ಇಮಂ ನೋ ಯಜ್ಞಂ ನಯತು ಪ್ರಜಾನನ್ನ್ |

ಘೃತಂ ಪಿನ್ವಂನ್ನಜರಗ್ಂ ಸುವೀರಂ | ಬ್ರಹ್ಮ ಸಮಿದ್ಭವತ್ಯಾಹುತೀನಾಮ್ ||೬||

ಬ್ರಹ್ಮ ಸೂಕ್ತ (ಕನ್ನಡ ಗೀತೆ)

ಬ್ರಹ್ಮ ಸುಂದರ ಸೂರ್ಯನಾದನು ಸೃಷ್ಟಿ ಪ್ರಥಮದಿ ಪೂರ್ವದಲ್ಲಿ

ಕಿರಣ ಹರಡಿದ ದಿಶೆಗೆ ಬೀರಿದ ಪಂಚಭೂತಗಳಿರಿಸಿ ಸನಿಹ

ದೃಷ್ಟಿಗೋಚರ ದೃಷ್ಟ್ಯಗೋಚರ ಉಗಮನಾಗುತ ಪ್ರಕಟಗೊಂಡ ||೧||

ಶೋಭೆಗೊಂಬನು ಸಿರಿಯ ಜನಕನು ಸೂರ್ಯನುದಯಿಪ ವಿಶ್ವರೂಪಿ

ದಿನವು ಗಗನದಿ ಕಾಲ ಋತುಗಳ ಕರ್ತೃ ವಿಧವಿಧ ವೇಷ ಧರಿಸಿ

ವೇದ ಮಂತ್ರದಿ ವಿಪ್ರ ಪೂಜಿಪ ಗೊಲ್ಲ ಕರುಗಳ ಸಲಹುವಂತೆ ||೨||

ದೇವ ಜನನವು ಬ್ರಹ್ಮನಿಂದಲೆ ವಿಶ್ವದೆಲ್ಲೆಡೆ ಅವನೆ ಜನಕ

ಕ್ಷಾತ್ರದುದಯವು ಬ್ರಹ್ಮನಿಂದಲೆ ವಿಪ್ರ ಪಡೆದನು ಬ್ರಹ್ಮ ರೂಪ ||೩||

ಲೋಕವಡಗಿದೆ ಆತನೊಳಗಡೆ ವಿಶ್ವವಿರುವುದು ಅವನ ಮಧ್ಯೆ

ಶ್ರೇಷ್ಠನಾತನು ಸಕಲ ಜೀವಿಗು ಸ್ಪರ್ಧೆಯವನಲಿ ಸಾಧ್ಯವೆಂತು? ||೪||

ಬ್ರಹ್ಮ ದೇಹದಿ ವಾಸಗೊಂಬರು ಮೂವತ್ಮೂರು ದೇವತೆಗಳು

ಇಂದ್ರ ದೇವನು ಬ್ರಹ್ಮನೊಳಗಡೆ ಪ್ರಜಾಪತಿಯೆಂದಾಗಿ ಇಹನು ||೫||

ಅಗ್ನಿ ಜ್ವಲಿಸಲಿ ನಾಲ್ಕು ದಿಸೆಯೊಳು ಬ್ರಹ್ಮನಾಹುತಿ ಪಡೆಯುತಿರಲಿ

ಯಜ್ಞ ಫಲಿಸಲಿ ಸುಗಮಗೊಳ್ಳಲಿ ಜರೆಯನರಿಯದ ವೀರ ನರರ

ಶ್ರೇಷ್ಠ ಸಂತತಿ ಉಗಮವಾಗಲಿ ತುಪ್ಪವುಣ್ಣಲಿ ಸಮಿಧನಾಗಿ ||೬||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ.

ಸ್ವರ ಕೃಪೆ:
ಚೆನ್ನೈಭಾವ

07 BRAMHA SOOKTHAM by oppanna

ಬ್ರಹ್ಮ ಸೂಕ್ತಮ್, 6.5 out of 10 based on 2 ratings

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಚೆನ್ನೈ ಬಾವ°

    ಹೆಚ್ಚಿನವಕ್ಕೆ ಗೊಂತಿಪ್ಪ ಹಲವು ಸೂಕ್ತಂಗಳ ಅನುವಾದ ಸಹಿತ ಬೈಲಿಂಗೆ ಪರಿಚಯಿಸಿ ಅರ್ಥಗರ್ಭಿತವಾಗಿ ಹೇಳ್ಳೆ ಉಪಯುಕ್ತವಾದ ಶರ್ಮಪ್ಪಚ್ಚಿಯ ಕೊಡುಗೆಗೆ ಧನ್ಯವಾದ ಹೇಳುತ್ತು ‘ಚೆನ್ನೈವಾಣಿ’

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಕೆದೂರು ಡಾಕ್ಟ್ರುಬಾವ°ಶರ್ಮಪ್ಪಚ್ಚಿಬಂಡಾಡಿ ಅಜ್ಜಿಪಟಿಕಲ್ಲಪ್ಪಚ್ಚಿಪುತ್ತೂರುಬಾವಪವನಜಮಾವಪೆಂಗಣ್ಣ°ಶೀಲಾಲಕ್ಷ್ಮೀ ಕಾಸರಗೋಡುವಿನಯ ಶಂಕರ, ಚೆಕ್ಕೆಮನೆವೇಣೂರಣ್ಣದೊಡ್ಡಭಾವಒಪ್ಪಕ್ಕಸಂಪಾದಕ°ದೀಪಿಕಾರಾಜಣ್ಣಡಾಗುಟ್ರಕ್ಕ°ಬಟ್ಟಮಾವ°ಚೆನ್ನೈ ಬಾವ°ಪುಣಚ ಡಾಕ್ಟ್ರುಗೋಪಾಲಣ್ಣವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಜಯಶ್ರೀ ನೀರಮೂಲೆಉಡುಪುಮೂಲೆ ಅಪ್ಪಚ್ಚಿಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ