ಚಮಕ (ಅನುವಾಕ ೨)

May 9, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನಃ
ಅನುವಾಕ -02

ಜೈಷ್ಠ್ಯಂಚಮ ಆಧಿಪತ್ಯಂಚ ಮೇ ಮನ್ಯುಶ್ಚ ಮೇ ಭಾಮಶ್ಚ ಮೇsಮಶ್ಚ ಮೇಂsಭಶ್ಚ ಮೇ ಜೇಮಾಚ ಮೇ ಮಹಿಮಾಚ ಮೇ

ವರಿಮಾ ಚ ಮೇ ಪ್ರಥಿಮಾ ಚ ಮೇ ವರ್ಷ್ಮಾ ಚ ಮೇ ದ್ರಾಘುಯಾ ಚ ಮೇ ವೃದ್ಧಂಚ ಮೇ  ವೃದ್ಧಿಶ್ಚ ಮೇ ಸತ್ಯಂ ಚ ಮೇ ಶ್ರದ್ಧಾ ಚ ಮೇ

ಜಗಚ್ಚ ಮೇ ಧನಂ ಚ ಮೇ ವಶಶ್ಚ ಮೇ ತ್ವಿಷಿಶ್ಚ ಮೇ ಕ್ರೀಡಾ ಚ ಮೇ ಮೋದಶ್ಚ ಮೇ ಜಾತಂ ಚ ಮೇ ಜನಿಷ್ಯಮಾಣಂ ಚ ಮೇ

ಸೂಕ್ತಂ ಚ ಮೇ ಸುಕೃತಂ ಚ ಮೇ ವಿತ್ತಂ ಚ ಮೇ ವೇದ್ಯಂ ಚ ಮೇ ಭೂತಂ ಚ ಮೇ ಭವಿಷ್ಯಚ್ಚ ಮೇ ಸುಗಂ ಚ ಮೇ

ಸುಪಥಂ ಚ ಋದ್ಧಂಚ ಮ ಋದ್ಧಿಶ್ಚ ಮೇ ಕ್ಲ್ ಪ್ತಂಚ ಮೇ ಕ್ಲ್ ಪ್ತಿಶ್ಚ ಮೇ ಮತಿಶ್ಚ ಮೇ ಸುಮತಿಶ್ಚ ಮೇ ||೨||

ಚಮಕ (ಕನ್ನಡ)
ಅನುವಾಕ-02

ಹಿರಿಮೆ ನೀಡಲಿ ಸ್ವಾಮ್ಯ ನೀಡಲಿ ಕೋಪ ನೀಡಲಿ ತಾಪ ಕೊಡಲಿ|

ಆಳವಾಗಿಹ ಶೀಲ ನೀಡಲಿ ಮಧುರವಾಗಿಹ ನೀರ ಕೊಡಲಿ||೧||

ಜಯವ ನೀಡಲಿ ಮಹಿಮೆ ನೀಡಲಿ ಮಣೆಯ ನೀಡಲಿ ಪ್ರತಿಭೆ ಕೊಡಲಿ|

ಕುಲವ ನೀಡಲಿ ಕಡಿಮೆಯಲ್ಲದ ಸಿರಿಯ ನೀಡಲಿ ಕಾಮ್ಯ ಕೊಡಲಿ||೨||

ವಿದ್ಯೆ ನೀಡಲಿ ಸತ್ಯ ನೀಡಲಿ ಶ್ರದ್ಧೆ ನೀಡಲಿ ಸೊತ್ತು ಕೊಡಲಿ|

ಧನವ ನೀಡಲಿ ಪ್ರಭೆಯ ನೀಡಲಿ ಹೊಳಪು ನೀಡಲಿ ಆಟ ಕೊಡಲಿ||೩||

ತೋಷ ನೀಡಲಿ ಪಿತರ ಆರ್ಜಿತ ಸ್ವಂತದಾರ್ಜಿಪ ಸೊತ್ತು ಕೊಡಲಿ|

ವೇದ ನೀಡಲಿ ಕೊಡಲಿ ಸುಕೃತ ಹಣವ ನೀಡಲಿ ಮುಂದೆ ಕೊಡಲಿ||೪||

ಹಿಂದೆ ಮುಂದೆಯು ಶುಭವ ನೀಡಲಿ ವಾಸ ನೀಡಲಿ ದಾರಿ ಕೊಡಲಿ|

ಜಗದ ಐಸಿರಿ ವೃದ್ಧಿಗೊಳ್ಳಲಿ ಪರದಿ ಪುಣ್ಯವು ಲಭಿಸುತಿರಲಿ||೫||

ಯಾತ್ರೆ ಸುಖಕರ ಸರಕು ನೀಡಲಿ ಖರ್ಚಿಗೋಸ್ಕರ ಶಕ್ತಿ ಕೊಡಲಿ|

ಬುದ್ಧಿ ನೀಡಲಿ ಶುದ್ಧ ಬುದ್ಧಿಯ ಯಾತ್ರೆ ಸುಖಕರವಾಗುತಿರಲಿ||೬||

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ.
 • ಅನುವಾಕ – 03, ಬಪ್ಪ ಸೋಮವಾರ ನಿರೀಕ್ಷಿಸಿ
ಚಮಕ (ಅನುವಾಕ ೨) , 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಒಬ್ಬ ಮನುಷ್ಯನಾಗಿ ಹುಟ್ಟಿ, ಎನ್ನದೇನಿಲ್ಲೆ, ಭಗವಂತ- ಹಿತ ಮಿತ ಬಾಳ್ವೆಗೆ ಎಲ್ಲ ನಿನ್ನಿಂದಲೇ ಸಿಕ್ಕಿ ಆಯೇಕು ಹೇಳಿ ಬೇಡಿಗೊಂಬ ಚಮಕ ಭಾಗ ಸುಂದರ. ಲಾಯ್ಕಾಯ್ದು ಹೇಳಿ ಶರ್ಮಪ್ಪಚ್ಚಿಗೆ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಚಮಕದ ಒಂದು ಭಾಗವ ಸುಲಭವಾಗಿ ಅರ್ಥಮಾಡುಸಿ ಕೊಟ್ಟ ಡಾಕ್ಟ್ರಿಂಗು, ಶರ್ಮಪ್ಪಚ್ಚಿಗು ಧನ್ಯವಾದ. ನಾವುದೆ ಸಮಾಜಕ್ಕೆ ಎಂತಾರು ಕೊಡ್ತಾ ಇಪ್ಪಗ ಮಾಂತ್ರ ದೇವರ ಹತ್ರೆ ನವಗೆ ಎಲ್ಲಾ ಕೊಡಿ ಹೇಳಿ ಕೇಳಲೆ ಅಧಿಕಾರ ಬತ್ತು ಹೇಳ್ತದು ಎನ್ನ ಅನಿಸಿಕೆ.

  [Reply]

  VA:F [1.9.22_1171]
  Rating: 0 (from 0 votes)
 3. ಮುಣ್ಚಿಕ್ಕಾನ ಪ್ರಮೋದ
  ಪ್ರಮೋದ ಮುಣ್ಚಿಕ್ಕಾನ

  ಚಮಕಸ ಅರ್ತ ಕೊಡುವುದರಿಂದ ಸುಲಬವಾಗಿ ಅರ್ತಾವ್ತು.ಧನ್ಯವಾದಂಗೋ…..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಡಾಗುಟ್ರಕ್ಕ°ರಾಜಣ್ಣಶರ್ಮಪ್ಪಚ್ಚಿಚೆನ್ನೈ ಬಾವ°ಸುಭಗಪುಟ್ಟಬಾವ°ಕೆದೂರು ಡಾಕ್ಟ್ರುಬಾವ°ಬೋಸ ಬಾವದೊಡ್ಮನೆ ಭಾವಪುತ್ತೂರಿನ ಪುಟ್ಟಕ್ಕತೆಕ್ಕುಂಜ ಕುಮಾರ ಮಾವ°ವಿದ್ವಾನಣ್ಣಸರ್ಪಮಲೆ ಮಾವ°ಕೇಜಿಮಾವ°ವಾಣಿ ಚಿಕ್ಕಮ್ಮಬೊಳುಂಬು ಮಾವ°ಡೈಮಂಡು ಭಾವಶೇಡಿಗುಮ್ಮೆ ಪುಳ್ಳಿಪುಣಚ ಡಾಕ್ಟ್ರುವೇಣೂರಣ್ಣಸಂಪಾದಕ°ಉಡುಪುಮೂಲೆ ಅಪ್ಪಚ್ಚಿನೀರ್ಕಜೆ ಮಹೇಶದೊಡ್ಡಮಾವ°ಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ