ಚಮಕ ಪ್ರಶ್ನಃ (ಅನುವಾಕ ೩)

May 16, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಲೇಖಕರು-ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

 

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

 

ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನಃ

ಅನುವಾಕ-03

ಶಂ ಚ ಮೇ ಮಯಶ್ಚ ಮೇ ಪ್ರಿಯಂ ಚ ಮೇsನುಕಾಮಶ್ಚ ಮೇ ಕಾಮಶ್ಚ ಮೇ ಸೌ ಮನಸಶ್ಚ ಮೇ-

ಭದ್ರಂ ಚ ಮೇ ಶೇಯಶ್ಚ ಮೇ ವಸ್ಯಶ್ಚ ಮೇ ಯಶಶ್ಚ ಮೇ ಭಗಶ್ಚ ಮೇ ದ್ರವಿಣಂ ಚ ಮೇ-

ಯಂತಾ ಚ ಮೇ ಧರ್ತಾ ಚ ಮೇ ಕ್ಷೇಮಶ್ಚ ಮೇ ಧೃತಿಶ್ಚ ಮೇ ವಿಶ್ವಂ ಚ ಮೇ ಮಹಶ್ಚ ಮೇ ಸಂವಿಚ್ಚ ಮೇ-

ಜ್ಞಾತ್ರಂ ಚ ಮೇ ಸೂಶ್ಚ ಮೇ ಪ್ರಸೂಶ್ಚ ಮೇ ಸೀರಂಚ ಮೇ ಲಯಶ್ಚ ಮ-

ಋತಂ ಚ ಮೇsಮೃತಂ ಚ ಮೇsಯಕ್ಷ್ಮಂ ಚ ಮೇsನಾಮಯಚ್ಚ ಮೇ ಜೀವಾತುಶ್ಚ ಮೇ-

ದೀರ್ಘಾಯುತ್ವಂ ಚ ಮೇsನ ಮಿತ್ರಂ ಚ ಮೇsಭಯಂ ಚ ಮೇ ಸುಗಂ ಚ ಮೇ ಶಯನಂ ಚ ಮೇ ಸೂಷಾ ಚ ಮೇ ಸುದಿನಂ ಚ ಮೇ ||೩||

ಚಮಕ (ಕನ್ನಡ)

ಅನುವಾಕ-03

ಸುಖವ ನೀಡಲಿ ಪರದಿ ಸುಖವನು ಪ್ರಿಯದ ವಿರಳದ ಭೋಗ್ಯ ಕೊಡಲಿ|

ಬಂಧು ಬಳಗವು ಸ್ಥಿರದ ಸುಖಗಳು ಮೋಕ್ಷ ನೀಡುತ ಬಂದು ಕೊಡಲಿ||೧||

ವಾಸ ನೀಡಲಿ ಕೀರ್ತಿ ನೀಡಲಿ ಭಾಗ್ಯ ನೀಡಲಿ ದ್ರವ್ಯ ಕೊಡಲಿ|

ಗುರಿಯ ತೋರಿಪ ಗುರುವ ನೀಡಲಿ ತನುವಿಗಾಶ್ರಯ ಪಿತರು ಕೊಡಲಿ||೨||

ಕ್ಷೇಮ ನೀಡಲಿ ಧೈರ್ಯ ನೀಡಲಿ ವಿಶ್ವದೆಲ್ಲೆಡೆ ಪ್ರೀತಿ ಕೊಡಲಿ|

ಹಿರಿಮೆ ನೀಡಲಿ ಜ್ಞಾನ ನೀಡಲಿ ಪಾಠ ಹೇಳಲು ವಿದ್ಯೆ ಕೊಡಲಿ||೩||

ಆಜ್ಞೆ ಪಾಲಿಪ ಸೆಳೆತ ನೀಡಲಿ ಕೃಷಿಗೆ ಪೂರಕವೆಲ್ಲ ಕೊಡಲಿ|

ಕೃಷಿಯ ಸುಖಕರವಾಗಿ ಮಾಡಲಿ ಯಜ್ಞವಮೃತವನ್ನು ಕೊಡಲಿ||೪||

ಕ್ಷಯವ ಹೊಂದದ ಸ್ಥಿತಿಯ ನೀಡಲಿ ರೋಗವಿಲ್ಲದೆ ಕ್ಷೇಮವಿರಲಿ|

ಜೀವ ಧಾತುವ ಮತ್ತೆ ನೀಡಲಿ ದೀರ್ಘದಾಯುವ ಕೊಡುತಲಿರಲಿ||೫||

ಶತ್ರುರಹಿತನು ನನ್ನ ಮಾಡಲಿ ಅಭಯ ನೀಡಲಿ ಮಾನ್ಯ ಕೊಡಲಿ|

ನಿದ್ರೆ ಸುಖವನು ಉಷೆಯ ಬೆಳಕನು ದಿನದ ಸ್ವಾಸ್ಥ್ಯವ ಕೊಡುತಲಿರಲಿ||೬||

ಸಂಗ್ರಹ:

 

  • ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ.

 

  • ಅನುವಾಕ – 04, ಬಪ್ಪ ಸೋಮವಾರ ನಿರೀಕ್ಷಿಸಿ
ಚಮಕ ಪ್ರಶ್ನಃ (ಅನುವಾಕ ೩), 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಚೆನ್ನೈ ಬಾವ°
    ಚೆನ್ನೈ ಭಾವ

    ‘ಸುಖವ ನೀಡಲಿ…….ಸ್ವಾಸ್ಥ್ಯವ ಕೊಡುತಲಿರಲಿ’ – ಚೆಂದ ಆಯ್ದು . ಒಪ್ಪ.

    [Reply]

    VA:F [1.9.22_1171]
    Rating: 0 (from 0 votes)
  2. ಮಂಗ್ಳೂರ ಮಾಣಿ

    ಈ ಅನುವಾಕವ ದಿನಾಗುಳೂ ಉದಿಯಪ್ಪಗ ಹೇಳಿಯೋಂಡಿರೆಕಡ..
    ಮಂತ್ರ ಗುರುಗೊ ಏವತ್ತೂ ಹೇಳಿಂಡಿಕ್ಕು..

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಚುಬ್ಬಣ್ಣಅಜ್ಜಕಾನ ಭಾವಪುಣಚ ಡಾಕ್ಟ್ರುಹಳೆಮನೆ ಅಣ್ಣಒಪ್ಪಕ್ಕನೀರ್ಕಜೆ ಮಹೇಶಗೋಪಾಲಣ್ಣವೆಂಕಟ್ ಕೋಟೂರುಬೋಸ ಬಾವಪುತ್ತೂರುಬಾವಕಳಾಯಿ ಗೀತತ್ತೆಶಾ...ರೀಬೊಳುಂಬು ಮಾವ°ಮಾಲಕ್ಕ°ವಾಣಿ ಚಿಕ್ಕಮ್ಮಸುಭಗಗಣೇಶ ಮಾವ°ಪೆಂಗಣ್ಣ°ಪವನಜಮಾವಮಂಗ್ಳೂರ ಮಾಣಿದೊಡ್ಡಮಾವ°ಡೈಮಂಡು ಭಾವಶರ್ಮಪ್ಪಚ್ಚಿಚೆನ್ನಬೆಟ್ಟಣ್ಣವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ