ಚಮಕ ಪ್ರಶ್ನಃ(ಅನುವಾಕ-೦೪)

May 23, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನಃ

ಅನುವಾಕ-04

ಊರ್ಕ್ಚಮೇ ಸೂನೃತಾ ಚ ಮೇ ಪಯಶ್ಚ ಮೇ ರಸಶ್ಚ ಮೇ ಘೃತಂ ಚ ಮೇ ಮಧು ಚ ಮೇ ಸಗ್ಧಿಶ್ಚ ಮೇ ಸಪೀತಿಶ್ಚ ಮೇ-
ಕೃಷಿಶ್ಚ ಮೇ ವೃಷ್ಟಿಶ್ಚ ಮೇ ಜೈತ್ರಂ ಚ ಮ ಔದ್ಭಿದ್ಯಂ ಚ ಮೇ ರಯಿಶ್ಚ ಮೇ ರಾಯಿಶ್ಚ ಮೇ ಪುಷ್ಟಂ ಚ ಮೇ ಪುಷ್ಟಿಶ್ಚ ಮೇ-
ವಿಭು ಚ ಮೇ ಪ್ರಭು ಚ ಮೇ ಭೂಯಶ್ಚ ಮೇ ಪೂರ್ಣಂ ಚ ಮೇ ಪೂರ್ಣತರಂ ಚ ಮೇsಕ್ಷಿತಿಶ್ಚ ಮೇ-
ಕೂಯವಾಶ್ಚ ಮೇsನ್ನಂಚ ಮೇsಕ್ಷುಚ್ಚಮೇ ವ್ರೀಹಯಶ್ಚ ಮೇ ಯವಾಶ್ಚ ಮೇ ಮಾಷಾಶ್ಚ ಮೇ ತಿಲಾಶ್ಚ ಮೇ ಮುದ್ಗಾಶ್ಚ ಮೇ-
ಖಲ್ವಾಶ್ಚ ಮೇ ಗೋಧೂಮಾಶ್ಚ ಮೇ ಮಸುರಾಶ್ಚ ಮೇ ಪ್ರಿಯಂಗವಶ್ಚ ಮೇಣವಶ್ಚ ಮೇ ಶ್ಯಾಮಾಕಾಶ್ಚ ಮೇ ನೀವಾರಾಶ್ಚ ಮೇ||೪||

ಚಮಕ (ಕನ್ನಡ)

ಅನುವಾಕ-೦೪

ಅನ್ನ ನೀಡಲಿ ಸ್ವಾಗತಾದರ ಹಾಲು ನೀಡಲಿ ರಸವ ಕೊಡಲಿ|

ತುಪ್ಪ ನೀಡಲಿ ಜೇನು ನೀಡಲಿ ಬಂಧು ಬಳಿಯಲಿ ಊಟ ಕೊಡಲಿ||೧||

ಬಂಧು ಸಂಗಡ ಪಾನ ನೀಡಲಿ ಕೃಷಿಯ ನೀಡಲಿ ಮಳೆಯ ಕೊಡಲಿ|

ಫಲದ ಭರಿತದ ಹೊಲವ ನೀಡಲಿ ನೆಲದಿ ಬೆಳೆಯುವ ಗಿಡವ ಕೊಡಲಿ||೨||

ಹೊನ್ನ ನೀಡಲಿ ವಜ್ರ ನೀಡಲಿ ದಪ್ಪದವರನು ಪ್ರಮುಖರನ್ನು|

ಸ್ವಾಮಿಯಾಗಲಿ ಬಹಳವಾಗಲಿ ಪೂರ್ಣವನು ಪರಿಪೂರ್ಣಗೊಳಲಿ||೩||

ಕ್ಷಯವ ಹೊಂದದ ಧಾನ್ಯ ನೀಡಲಿ ಅನ್ನ ನೀಡಲಿ ತೃಪ್ತಿ ಕೊಡಲಿ|

ಭತ್ತ ನೀಡಲಿ ಬಾರ್ಲಿ ನೀಡಲಿ ಉದ್ದು ನೀಡಲಿ ಎಳ್ಳು ಕೊಡಲಿ||೪||

ಹೆಸರು ನೀಡಲಿ ಹರಳು ನೀಡಲಿ ಗೋಧಿ ನೀಡಲಿ ಕಡಲೆ ಕೊಡಲಿ|

ಪ್ರಿಯಕ ಧಾನ್ಯದ ಶ್ರೇಷ್ಠ ಭತ್ತವ ಸಾಮೆ ನೀಡಲಿ ನವಣೆ ಕೊಡಲಿ||೫||
~~~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ.
 • ಅನುವಾಕ – 05, ಬಪ್ಪ ಸೋಮವಾರ ನಿರೀಕ್ಷಿಸಿ


ಚಮಕ ಪ್ರಶ್ನಃ(ಅನುವಾಕ-೦೪), 5.0 out of 10 based on 2 ratings

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಈ ವಾರದ್ದೂ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ದೇವರು ನಮಗೆಲ್ಲವನ್ನು ಕೊಡ್ತಾ ಇರಳಿ. ಶರ್ಮಪ್ಪಚ್ಚಿಯುದೆ ಇಂತಹ ಹಲವಾರು ಉತ್ತಮ ವಿಷಯಂಗಳ ಬೈಲಿಂಗೆ ಕೊಡ್ತಾ ಇರಳಿ.

  ಫಲದ ಭರಿತದ ಹೊಲವ ನೀಡಲಿ ನೆಲದಿ ಬೆಳೆಯುವ ಗಿಡವ ಕೊಡಲಿ. ಮಾರ್ಗ ಅಗಲೀಕರಣ ಹೇಳಿ ಈಗ ಗಿಡಕ್ಕೇ ಕೊಡಲಿ ಹಾಕುತ್ತವಾನೆ, ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಅಕ್ಷಯ ಧಾನ್ಯ ಸ೦ಪತ್ತು ನೀಡಲಿ ಹೇಳುವ ಈ ಕ೦ತೂ ಚೆ೦ದಕೆ ಬಯಿ೦ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಪಟಿಕಲ್ಲಪ್ಪಚ್ಚಿಶುದ್ದಿಕ್ಕಾರ°ಅನುಶ್ರೀ ಬಂಡಾಡಿಬಂಡಾಡಿ ಅಜ್ಜಿವಿದ್ವಾನಣ್ಣಪುತ್ತೂರಿನ ಪುಟ್ಟಕ್ಕಕಾವಿನಮೂಲೆ ಮಾಣಿತೆಕ್ಕುಂಜ ಕುಮಾರ ಮಾವ°ಯೇನಂಕೂಡ್ಳು ಅಣ್ಣಸುವರ್ಣಿನೀ ಕೊಣಲೆದೀಪಿಕಾವಾಣಿ ಚಿಕ್ಕಮ್ಮವೇಣಿಯಕ್ಕ°ವೇಣೂರಣ್ಣಗಣೇಶ ಮಾವ°ನೆಗೆಗಾರ°ಅಕ್ಷರ°ಸಂಪಾದಕ°ಡಾಗುಟ್ರಕ್ಕ°ಸರ್ಪಮಲೆ ಮಾವ°ಶಾ...ರೀvreddhiಹಳೆಮನೆ ಅಣ್ಣಮಂಗ್ಳೂರ ಮಾಣಿಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ