ಚಮಕ ಪ್ರಶ್ನ: (ಅನುವಾಕ-೧೦)

July 4, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ, ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಡಾ| ಮಡ್ವ ಶಾಮ ಭಟ್ಟ

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.
ಶರ್ಮಪ್ಪಚ್ಚಿ

 

~~~

 

ಚಮಕ ಪ್ರಶ್ನ:

ಅನುವಾಕ ೧೦

ಗರ್ಭಾಶ್ಚ ಮೇ ವಥ್ಸಾಶ್ಚ ಮೇ ತ್ರ್ಯವಿಶ್ಚ ಮೇ ತ್ರ್ಯವೀ ಚ ಮೇ ದಿತ್ಯವಾಟ್ಚ ಮೇ ದಿತ್ಯೌಹೀ ಚ ಮೇ
ಪಂಚಾವಿಶ್ಚ ಮೇ ಪಂಚಾವೀ ಚ ಮೇ ತ್ರಿವಥ್ಸಶ್ಚ ಮೇ ತ್ರಿವಥ್ಸಾ ಚ ಮೇ ತುರ್ಯವಾಟ್ಚ ಮೇ
ತುರ್ಯೌಹೀ ಚ ಮೇ ಪಷ್ಠವಾಚ್ಚ ಮೇ ಪಷ್ಟೌಹೀ ಚ ಮ ಉಕ್ಷಾ ಚ ಮೇ ವಶಾ ಚ ಮ ಋಷಭಶ್ಚ ಮೇ
ವೇಹಚ್ಚ ಮೇsನಡ್ವಾಂ ಚ ಮೇ ಧೇನುಶ್ಚ ಮ ಆಯುರ್ಯಜ್ಞೇನ ಕಲ್ಪತಾಂ
ಪ್ರಾಣೋ  ಯಜ್ಞೇನ ಕಲ್ಪತಾಮಪಾನೋ ಯಜ್ಞೇನ ಕಲ್ಪತಾಂ ವ್ಯಾನೋ ಯಜ್ಞೇನ ಕಲ್ಪತಾಂ
ಚಕ್ಷುರ್ಯಜ್ಞೇನ ಕಲ್ಪತಾಗ್ ಶ್ರೋತ್ರಂ ಯಜ್ಞೇನ ಕಲ್ಪತಾಂ ಮನೋ ಯಜ್ಞೇನ ಕಲ್ಪತಾಂ
ವಾಗ್ಯಜ್ಞೇನ ಕಲ್ಪತಾಮಾತ್ಮಾ ಯಜ್ಞೇನ ಕಲ್ಪತಾಂ ಯಜ್ಞೋ ಯಜ್ಞೇನ ಕಲ್ಪತಾಮ್||೧೦||

ಚಮಕ (ಕನ್ನಡ ಗೀತೆ)

ಅನುವಾಕ ೧೦

ಗರ್ಭದಲ್ಲಿಹ ಕರುವ ನೀಡಲಿ ಇಂದು ಜನಿಸಿದ ಕರುವ ಕೊಡಲಿ|
ಒಂದು ವರುಷವು ಆರು ತಿಂಗಳ ಗಂಡು ಹೆಣ್ಣಿನ ಕರುವ ಕೊಡಲಿ||೧||

ಎರಡು ವರುಷದ ಹೆಣ್ಣು ಕರುವನು ಗಂಡು ಕರುವನು ಕೂಡ ಕೊಡಲಿ|
ಎರಡು ವರುಷವು ಆರು ತಿಂಗಳ ಗಂಡು ಹೆಣ್ಣಿನ ಕರುವ ಕೊಡಲಿ||೨||

ಮೂರು ವರುಷದ ಗಂಡು ಕರುವನು ಹೆಣ್ಣು ಕರುವನು ಕೂಡ ಕೊಡಲಿ|
ನಾಲ್ಕು ವರುಷದ ಗಂಡು ಕರುವನು ಹೆಣ್ಣು ಕರುವನು ಕೂಡ ಕೊಡಲಿ||೩||

ಐದು ವರುಷದ ಗಂಡು ಕರುವನು ಹೆಣ್ಣು ಕರುವನು ಕೂಡ ಕೊಡಲಿ|
ಬೀಜ ಬಿತ್ತುವ ಹೋರಿ ನೀಡಲಿ ಕರುವ ಹಾಕದ ದನವ ಕೊಡಲಿ||೪||

ವೃಷಭ ನೀಡಲಿ ಗರ್ಭ ಜಾರಿದ ದನವ; ಗಾಡಿಯ ಎತ್ತು ಕೊಡಲಿ|
ಹೆರಿಗೆಯಾಗಿಹ ದನವ ನೀಡಲಿ ಆಯುವರ್ಧಕವೆಲ್ಲ ಕೊಡಲಿ||೫||

ಯಜ್ಞದೊಂದಿಗೆ ಪ್ರಾಣ ನೀಡಲಿ ಯಜ್ಞದೊಂದಿಗೆ ಪಾನ ಕೊಡಲಿ|
ಯಜ್ಞದೊಂದಿಗೆ ವ್ಯಾನ ನೀಡಲಿ ಯಜ್ಞದೊಂದಿಗೆ ದೃಷ್ಟಿ ಕೊಡಲಿ||೬||

ಯಜ್ಞದೊಂದಿಗೆ ಶ್ರಾವ್ಯ ನೀಡಲಿ ಯಜ್ಞದೊಂದಿಗೆ ಚಿತ್ತ ಕೊಡಲಿ|
ಯಜ್ಞದೊಂದಿಗೆ ಮಾತು ನೀಡಲಿ ಯಜ್ಞದೊಂದಿಗೆ ಆತ್ಮ ಕೊಡಲಿ|
ಯಜ್ಞದೊಂದಿಗೆ ಯಜ್ಞ ಪುರುಷನು ಕಾಮ್ಯವೆಲ್ಲವ ನೀಡುತಿರಲಿ||೭||

~~~

ಸಂಗ್ರಹ:

 

 • ವೇದ ಮಂತ್ರ ಗೀತಾಂಜಲಿಡಾ| ಮಡ್ವ ಶಾಮ ಭಟ್ಟ.
 • ಅನುವಾಕ – 11, ಬಪ್ಪ ಸೋಮವಾರ ನಿರೀಕ್ಷಿಸಿ  
 • ಒಂಭತ್ತನೇ ಅನುವಾಕಕ್ಕೆ ಇಲ್ಲಿ ನೋಡಿ


ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ದನಂಗಳ ಸಮೃದ್ಧಿ ಆಗಲಿ,ಎಲ್ಲಾ ನಿತ್ಯಾನುಷ್ಠಾನಕ್ಕಾಗಿ-ಹೇಳುವ ಭಾವನೆ ಇಲ್ಲಿದ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಲಾಯಕ್ಕ ಆಯ್ದು.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಸರಳ ಅರ್ಥವ ನೋಡಿ ಕೊಶಿ ಆತು. ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಶ್ಯಾಮಣ್ಣಚೆನ್ನೈ ಬಾವ°ಸರ್ಪಮಲೆ ಮಾವ°ಯೇನಂಕೂಡ್ಳು ಅಣ್ಣಅಕ್ಷರದಣ್ಣಅಜ್ಜಕಾನ ಭಾವಪವನಜಮಾವವಾಣಿ ಚಿಕ್ಕಮ್ಮಪುತ್ತೂರುಬಾವಮಾಲಕ್ಕ°ದೊಡ್ಡಮಾವ°ಪುತ್ತೂರಿನ ಪುಟ್ಟಕ್ಕಮಾಷ್ಟ್ರುಮಾವ°ದೇವಸ್ಯ ಮಾಣಿವಸಂತರಾಜ್ ಹಳೆಮನೆಚೂರಿಬೈಲು ದೀಪಕ್ಕಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಮಂಗ್ಳೂರ ಮಾಣಿಜಯಗೌರಿ ಅಕ್ಕ°ಮುಳಿಯ ಭಾವಶರ್ಮಪ್ಪಚ್ಚಿವಿಜಯತ್ತೆನೆಗೆಗಾರ°ಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
"ಆನು ಕಂಡುಂಡ ಕಾಶೀಯಾತ್ರೆ"
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಬೆಣಚ್ಚಿಪ್ಪಲ್ಲಿ ಹುಡ್ಕಲೆ