ಶಂಕರಾಚಾರ್ಯ ವಿರಚಿತ “ದಶಶ್ಲೋಕೀ”

ಆಷಾಢ ಮಾಸದ ಒಂದು ಹೊತ್ತಪ್ಪಗ, ಹೆಚ್ಚಾಗಿಯೇ ಅಂತರ್ಮುಖಿಗಳಾಗಿಪ್ಪ ಶ್ರೀ ಗೋವಿಂದ ಭಗವತ್ಪಾದರು, ಬಹಿರ್ಮುಖರಾವುತ್ತವು.
ಅವಕ್ಕೆ ಅವರ ಭಂಡಾರ ಸೂರೆ ಆವುತ್ತು ಹೇಳಿ ಅನುಭವ ಆಯಿದು ಹೇಳಿ ತಮ್ಮ ಹತ್ತರೆ ಇದ್ದ ಶಿಷ್ಯರಿಂಗೆ ಹೇಳ್ತವಡ್ಡ. ಶಿಷ್ಯರಿಂಗೆ ಆಶ್ಚರ್ಯ!! ಇವರ ಭಂಡಾರ ಯಾವುದು?
ಆರು ಕಾಲಿ ಮಾಡುದು ಹೇಳಿ! ಗೋವಿಂದ ಭಗವತ್ಪಾದರು ಭೌತಿಕ ಸೊತ್ತುಗಳ ಬಿಟ್ಟು ಬಂದೋರು, ಅವು ಸಾಕ್ಷಾತ್ ಶ್ರೀ ಪರಮೇಶ್ವರಂದ ಆರಂಭ ಆಗಿ, ಶ್ರೀಮನ್ನಾರಾಯಣ, ಶ್ರೀ ಬ್ರಹ್ಮ, ಶ್ರೀ ಪರಾಶರ, ಶ್ರೀ ವ್ಯಾಸ, ಶ್ರೀ ಶುಕಯೋಗಿ, ಶ್ರೀ ಗೌಡಪಾದರವರೇಂಗೆ ಪ್ರವಹಿಸಿ ಬಂದ ಜ್ಞಾನ ವಿದ್ಯಾ ಸಂಪತ್ತಿಂಗೆ,ಆಧ್ಯಾತ್ಮಿಕ ಸಂಪತ್ತಿಂಗೆ ಅಧಿಪತಿಗೋ. ಈಗ ಇದರ ಸೂರೆ ಮಾಡುವವ° ಆರೋ ಬತ್ತ° ಆದಿಕ್ಕು ಹೇಳಿ ಶಿಷ್ಯರು ಮಾತಾಡಿಗೋಳ್ತವಡ್ಡ.
ಅದಾಗಿ ಎರಡು ದಿನ ಕಳುದಪ್ಪಗ ಗೋವಿಂದ ಭಗವತ್ಪಾದರು ಜೆಪ ಮುಗಿಶಿ ಅಪ್ಪಗ ಒಬ್ಬ° ಮಾಣಿ ಅಭಿವಾದನ ಮಾಡಿ, ಗುರುಗಳ ಹುಡುಕ್ಕಿಯೊಂಡು ಬಯಿಂದೆ.
ಅನುಗ್ರಹಿಸೆಕ್ಕು ಹೇಳ್ತ°. ಭಗವತ್ಪಾದರು ಮಾಣಿಯ ಪೂರ್ವಾಪರ ವಿಚಾರ್ಸುತ್ತವು. ಮಾಣಿ ಹೇಳ್ತ°, ಅವನ ಹೆಸರು ಶಂಕರ° ಹೇಳಿ, ಕಾಲಡಿಂದ ಬಂದದು ಹೇಳಿ ಪೂರ್ಣವಿವರ ಕೊಡ್ತ°.
ಆಪತ್ ಸಂನ್ಯಾಸ ತೆಕ್ಕೊಂಡದು ಹೇಳಿಯೂ ಹೇಳ್ತ°. ಗೋವಿಂದ ಭಗವತ್ಪಾದರು ಇಷ್ಟು ಸಣ್ಣ ಪ್ರಾಯಲ್ಲಿಯೇ ಇಷ್ಟೊಂದು ಕಲ್ತ ಮಾಣಿಯ ಕಂಡು ಕೊಶೀಲಿ ಅವಂಗೆ ಕ್ರಮಸಂನ್ಯಾಸ ಕೊಡ್ಸುತ್ತೆಯ° ಹೇಳ್ತವು.
ಹಾಂಗೆ ಮರದಿನವೇ ಅದಕ್ಕಿಪ್ಪ ಎಲ್ಲ ತಯಾರಿ ಮಾಡಿ ನರ್ಮದೆಯ ದಡಲ್ಲಿ ಸಾಂಪ್ರದಾಯಿಕವಾಗಿ ಈ ಅಪೂರ್ವ ಶಿಷ್ಯಂಗೆ ಕಾಷಾಯವಸ್ತ್ರವೂ, ದಂಡಕಮಂಡಲವೂ, ರುದ್ರಾಕ್ಷಿಯನ್ನೂ ಕೊಟ್ಟು ಅನುಗ್ರಹಿಸುತ್ತವು ಗೋವಿಂದ ಭಗವತ್ಪಾದರು.
ಹೊಸ ಶಿಷ್ಯಂಗೆ ಶ್ರೀ ಶಂಕರಾಚಾರ್ಯ ಹೇಳಿ ನಾಮಧೇಯ ಮಾಡಿ ಆಶೀರ್ವಾದ ಮಾಡ್ತವು.

ಶ್ರೀ ಗೋವಿಂದ ಭಗವತ್ಪಾದರು, ಶ್ರೀ ಶಂಕರರ ಬಲದ ಕೈಲಿ ಹಿಡ್ಕೊಂಡು ಕರ್ಕೊಂಡು ತಮ್ಮ ಗುಹೆಗೆ ಬತ್ತವು.
ಅಲ್ಲಿ ಒಳುದ ಕ್ರಮಂಗಳ ನೆರವೇರಿಸಿ, ಶ್ರೀ ಶಂಕರರ ಶಿರಸ್ಸಿಲಿ ಅವರ ಕೈ ಮಡಗಿ, ವೇದದ ಮಂತ್ರಂಗಳ ಒಂದೊಂದು ಮಹಾವಾಕ್ಯಂಗಳ ಅವರ ಬಲದ ಕೆಮಿಲಿ ಉಪದೇಶ ಮಾಡಿ ಅಪ್ಪಗ, ಗುರುವಿಂಗೂ, ಶಿಷ್ಯಂಗೂ ಇಬ್ರಿಂಗೂ ಸಮಾಧಿ ಸ್ಥಿತಿ ಬತ್ತು.
ಮೂರು ದಿನದ ಕಾಲ ಇಬ್ರುದೇ ಆ ಸಮಾಧಿ ಸ್ಥಿತಿಲಿ ಇರ್ತವು. ನಾಲ್ಕನೇ ದಿನ ಗೋವಿಂದ ಭಗವತ್ಪಾದರು ಬಹಿರ್ಮುಖರಾವುತ್ತವು.
ಅವಕ್ಕೆ ಈ ಹೊಸ ಶಿಷ್ಯ ಆತ್ಮಜ್ಞಾನಿ ಹೇಳಿಯೂ ಇಂಥಾ ಶಿಷ್ಯನ ಪಡದ್ದಕ್ಕೆ ತುಂಬಾ ಕೊಶಿ ಪಡ್ತವು. ತಮ್ಮಲ್ಲಿಪ್ಪ ಎಲ್ಲಾ ವಿದ್ಯೆಯ ಈ ಶಿಷ್ಯಂಗೆ ಧಾರೆ ಎರದು ಕೊಡೆಕ್ಕು ಹೇಳಿ ನೆನೆಸುತ್ತವು.
ನಾಲ್ಕನೆ ದಿನ ಹೊತ್ತಪ್ಪಗ ಶ್ರೀ ಶಂಕರರಿಂಗೆ ಎಚ್ಚರಿಗೆ ಅಪ್ಪಲೆ ಸುರು ಆವುತ್ತು. ಅಂಬಗ ಶಂಕರರು ಮೆಲುದನಿಲಿ ಎಂತದೋ ಹೇಳುಲೆ ಸುರು ಮಾಡ್ತವು. ಎಲ್ಲರೂ ಕೆಮಿ ಕೊಡ್ತವು.
ಶ್ರೀ ಶಂಕರಾಚಾರ್ಯರ ಹೃದಯಂದ ಹೆರಟ ಆತ್ಮಾನುಭವ ಕಾವ್ಯವಾಗಿ ಹರಿವಲೆ ಸುರು ಆವುತ್ತು…
ನ ಭೂಮಿರ್ನ ತೋಯಂ ನ ತೇಜೋ ನ ವಾಯುಃ
ನ ಖಂ ನೇಂದ್ರಿಯಂ ವಾ ನ ತೇಷಾಂ ಸಮೂಹಃ |
ಅನೇಕಾಂತಿಕತ್ವಾತ್ ಸುಷುಪ್ತ್ಯೇಕಸಿದ್ಧಃ
ತದೇಕೋsವಶಿಷ್ಟಃ ಶಿವಃ ಕೇವಲೋsಹಮ್ |

ಆನು ಭೂಮಿ ಅಲ್ಲ, ಜಲ ತೇಜ ಅಲ್ಲ. ಆಕಾಶ ಅಲ್ಲ, ಇಂದ್ರಿಯಂಗಳೂ ಅಲ್ಲ, ಇದೆಲ್ಲದರ ಸಮೂಹವೂ ಅಲ್ಲ, ಸುಷುಪ್ತಿ ಕಾಲಲ್ಲಿ ಸಿದ್ಧನೂ, ಅವಶೇಷನೂ ಆದ ಶಿವನೇ ಆನು ಹೇಳ್ತ ಭಾವಾರ್ಥ ಬಪ್ಪ ದಶ ಶ್ಲೋಕಂಗಳ ಒಂದಾಗಿ ಒಂದು ಹೇಳ್ತವು.
ಇದರ ಕೇಳಿ ಶ್ರೀ ಗೋವಿಂದ ಭಗವತ್ಪಾದರಿಂಗೆ ಆಶ್ಚರ್ಯವೂ, ಕೊಶಿಯೂ ಏಕಕಾಲಲ್ಲಿ ಆಗಿ ಮೆಲ್ಲಂಗೆ ಶಿಷ್ಯನ ಮುಟ್ಟುತ್ತವು.
ಶ್ರೀ ಶಂಕರರು ಶ್ರೀ ಗೋವಿಂದ ಭಗವತ್ಪಾದರಿಂಗೆ ನಮಸ್ಕಾರ ಮಾಡ್ತವು. ಅಲ್ಲಿಪ್ಪ ಎಷ್ಟೊ ದೊಡ್ಡ ದೊಡ್ಡ ಸಾಧಕರೂ ಕೂಡ ಶ್ರೀ ಶಂಕರರ ಪಾಂಡಿತ್ಯವೂ, ಅವರ ಅಶು ಕವಿತ್ವದ ಸಾಮರ್ಥ್ಯವನ್ನೂ ನೋಡಿ ಶಂಕರರ ಕಾಲಿಂಗೆ ಬೀಳ್ತವು.
ಇಂಥಾ ಸಮಯಲ್ಲಿ ಶ್ರೀ ಶಂಕರಾಚಾರ್ಯರಿಂದ ಜಗತ್ತಿಂಗೆ ಪ್ರಾಪ್ತಿ ಆದ ಈ ದಶಶ್ಲೋಕೀ ಸ್ತೋತ್ರಂಗಳ ಬೈಲಿಲಿ ಅವತರಿಸುಲೆ ಕೊಶೀ ಇದ್ದು.
ಎಲ್ಲೋರಿಂಗೂ ಇದರ ಪೂರ್ಣಫಲ ಸಿಕ್ಕಲಿ ಹೇಳ್ತ ಆಶಯ.

ದಶಶ್ಲೋಕೀ :

ನ ಭೂಮಿರ್ನ ತೋಯಂ ನ ತೇಜೋ ನ ವಾಯುಃ
ನ ಖಂ ನೇಂದ್ರಿಯಂ ವಾ ನ ತೇಷಾಂ ಸಮೂಹಃ |
ಅನೇಕಾಂತಿಕತ್ವಾತ್ ಸುಷುಪ್ತ್ಯೇಕಸಿದ್ಧಃ
ತದೇಕೋsವಶಿಷ್ಟಃ ಶಿವಃ ಕೇವಲೋsಹಮ್ ||1||

ನ ವರ್ಣಾ ನ ವರ್ಣಾಶ್ರಮಾಚಾರಧರ್ಮಾಃ
ನ ಮೇ ಧಾರಣಾಧ್ಯಾನಯೋಗಾದಯೋsಪಿ |
ಅನಾತ್ಮಾಶ್ರಯಾಹಂ ಮಮಾಧ್ಯಾಸಹಾನಾತ್
ತದೇಕೋsವಶಿಷ್ಟಃ ಶಿವಃ ಕೇವಲೋsಹಮ್ ||2||

ನ ಮಾತಾ ನ ಪಿತಾ ನ ದೇವಾ ನ ಲೋಕಾಃ
ನ ವೇದಾ ನ ಯಜ್ಞಾ ನ ತೀರ್ಥಂ ಬ್ರುವಂತಿ |
ಸುಷುಪ್ತೌ ನಿರಪಾಸ್ತತಿಶೂನ್ಯಾತ್ಮಕತ್ವಾತ್
ತದೇಕೋsವಸಿಷ್ಟಃ ಶಿವಃ ಕೇವಲೋsಹಮ್ ||3||

ನ ಸಾಂಖ್ಯಂ ನ ಶೈವಂ ನ ತತ್ಪಾಂಚರಾತ್ರಂ
ನ ಜೈನಂ ನ ಮೀಮಾಂಸಕಾದೇರ್ಮತಂ ವಾ |
ವಿಶಿಷ್ಟಾನುಭೂತ್ಯಾ ವಿಶುದ್ಧಾತ್ಮಕತ್ವಾತ್
ತದೇಕೋsವಶಿಷ್ಟಃ ಶಿವಃ ಕೇವಲೋsಹಮ್ ||4||

ನ ಚೋರ್ಧ್ವಂನ ಚಾಧೋ ನ ಚಾಂತರ್ನ ಬಾಹ್ಯಂ
ನ ಮಧ್ಯಂ ನ ತಿರ್ಯಙ್ ನ ಪೂರ್ವಾ ಪರಾ ದಿಕ್ |
ವಿಯದ್ವ್ಯಾಪಕತ್ವಾದಖಂಡೈಕರೂಪಃ
ತದೇಕೋsವಶಿಷ್ಟಃ ಶಿವಃ ಕೇವಲೋsಹಂ ||5||

ನ ಶುಕ್ಲಂ ನ ಕೃಷ್ಣಂ ನ ರಕ್ತಂ ನ ಪೀತಂ
ನ ಕುಬ್ಜಂ ನ ಪೀನಂ ನ ಹ್ರಸ್ವಂ ನ ದೀರ್ಘಮ್ |
ಅರೂಪಂ ತಥಾ ಜ್ಯೋತಿರಾಕಾರಕತ್ವಾತ್
ತದೇಕೋsವಶಿಷ್ಟಃ ಶಿವಃ ಕೇವಲೋಹಮ್ ||6||

ನ ಶಾಸ್ತಾ ನ ಶಾಸ್ತ್ರಂ ನ ಶಿಷ್ಯೋ ನ ಶಿಕ್ಷಾ
ನ ಚ ತ್ವಂ ನ ಚಾಹಂ ನ ಚಾಯಂ ಪ್ರಪಂಚಃ |
ಸ್ವರೂಪಾವಬೋಧೋ ವಿಕಲ್ಪಾಸಹಿಷ್ಣುಃ
ತದೇಕೋsವಸಿಷ್ಟಃ ಶಿವಃ ಕೇವಲೋsಹಮ್ ||7||

ನ ಜಾಗ್ರನ್ನ ಮೇ ಸ್ವಪ್ನಕೋ ವಾ ಸುಷುಪ್ತಿಃ
ನ ವಿಶ್ವೋ ನ ವಾ ತೈಜಸಃ ಪ್ರಾಜ್ಞಕೋ ವಾ |
ಅವಿದ್ಯಾತ್ಮಕತ್ವಾತ್ ತ್ರಯಾಣಾಂ ತುರೀಯಃ
ತದೇಕೋsವಶಿಷ್ಟಃ ಶಿವಃ ಕೇವಲೋsಹಮ್ ||8||

ಅಪಿ ವ್ಯಾಪಕತ್ವಾದಿತ್ವಾತ್ಪ್ರಯೋಗಾತ್
ಸ್ವತಃ ಸಿದ್ಧಭಾವಾದನನ್ಯಾಶ್ರಯತ್ವಾತ್ |
ಜಗತ್ತುಚ್ಛಮೇತತ್ಸಮಸ್ತಂ ತದನ್ಯತ್
ತದೇಕೋsವಶಿಷ್ಟಃ ಶಿವಃ ಕೇವಲೋsಹಮ್ ||9||

ನ ಚೈಕಂ ತದನ್ಯದ್ದ್ವಿತೀಯಂ ಕುತಃ ಸ್ಯಾತ್
ನ ಕೇವಲತ್ವಂ ನ ಚಾಕೇವಲತ್ವಮ್ |
ನ ಶೂನ್ಯಂ ನ ಚಾಶೂನ್ಯಮದ್ವೈತಕತ್ವಾತ್
ಕಥಂ ಸರ್ವವೇದಾಂತಸಿದ್ಧಂಬ್ರವೀಮಿ ||10||

~*~*~
ಸೂ:
ಇಂಪಾಗಿ ಹಾಡಿದ ದಶಶ್ಲೋಕಿ ಇಲ್ಲಿದ್ದು: http://www.youtube.com/watch?v=CgoQoE3fMoU

ಬಟ್ಟಮಾವ°

   

You may also like...

5 Responses

 1. ಚೆನ್ನೈ ಭಾವ says:

  ಶ್ರೀ ಶಂಕರ ಭಗವತ್ಪಾದರ ಒಂದು ದೃಷ್ಟಾಂತವ ನಿರೂಪಿಸಿ ದಶ ಶ್ಲೋಕಿ ಶುದ್ದಿ ಇಲ್ಲಿ ಕೊಟ್ಟದು ಲಾಯಕ್ಕ ಆಯ್ದು. ಅದ್ವೀತೀಯ ರಚನೆಗೊ ಒಂದೊಂದೇ ಬೈಲಿಂಗೆ ಬತ್ತಾ ಇಪ್ಪದು ಸಂತೋಷ. ದಶಶ್ಲೋಕಿ ಓದಲೂ ಚಂದ ಆವ್ತು ಕೇಳ್ಳೂ ಇಂಪಾಗಿ ಇದ್ದು. ಹೀಂಗೇ ಮುಂದುವರಿಯಲಿ ಹೇಳುತ್ತು ‘ಚೆನ್ನೈವಾಣಿ’.

 2. ತೆಕ್ಕುಂಜ ಕುಮಾರ ಮಾವ° says:

  “ಮಾಣಿ” ಶಂಕರ “ಆಚಾರ್ಯ” ಶಂಕರರಾದ ಕತೆ ಓದಿ ರೋಮಾಂಚನ ಅತು.

 3. ವಿದ್ಯಾ ರವಿಶಂಕರ್ says:

  ಅದ್ಬುತ. ಬಟ್ಟಮಾವಂಗೆ ಧನ್ಯವಾದಂಗೊ.

 4. ದೀಪಿಕಾ says:

  ಬಟ್ಟಮಾವ೦ಗೆ ಧನ್ಯವಾದ

 5. ಈ ಶ್ಲೋಕವನ್ನು ಸಾಮೂಹಿಕವಾಗಿ ಹೇಳಿರೆ ಖುಶಿ ಆಗ್ತು..ನ೦ಗೊ ಬೇರೆ ರಾಗದಲ್ಲಿ ೧೮-೨೦ ಮ೦ದಿ ಸೇರಿ ಹೇಳಿದಿದ್ದೊ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *