ದೇವ್ಯಪರಾಧಕ್ಷಮಾಪಣಾ ಸ್ತೋತ್ರ : ಭಾವಾರ್ಥ

March 4, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರ ಬೈಲಿಲಿ ಕಳುದವಾರ ದೇವ್ಯಪರಾಧಕ್ಷಮಾಪಣಾ ಸ್ತೋತ್ರ ಬಯಿಂದು.
ಈ ವಾರ ವಿಶೇಷವಾಗಿ ಅದರ ಭಾವಾರ್ಥ ನಮ್ಮ ಭಾಷೆಲಿ.
ಚೊಕ್ಕದಾಗಿ ಭಾವಾರ್ಥ ಹೇಳಿದ ಶ್ರೀಅಕ್ಕಂಗೆ ಅಭಿವಂದನೆಗೊ.

ದೇವ್ಯಪರಾಧ ಕ್ಷಮಾಪಣ ಸ್ತೋತ್ರಮ್ಭಾವಾರ್ಥ ಸಹಿತ:

ಶ್ಲೋಕ:
ನ ಮ೦ತ್ರ೦ ನೋ ಯ೦ತ್ರ೦ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನ೦ ಧ್ಯಾನ೦ ತದಪಿ ಚ ನ ಜಾನೇ ಸ್ತುತಿ ಕಥಾಃ |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನ೦
ಪರ೦ಜಾನೇ ಮಾತಸ್ತ್ವದನುಸರಣ೦ ಕ್ಲೇಶಹರಣಮ್ || 1 ||

ಭಾವಾರ್ಥ:
ಎನಗೆ ನಿನ್ನ ಮಂತ್ರ ಆಗಲೀ, ಯಂತ್ರ ಆಗಲೀ, ಸ್ತುತಿಯಾಗಲೀ ಗೊಂತಿಲ್ಲೆ. ನಿನ್ನ  ಆಹ್ವಾನಿಸುಲೇ, ಧ್ಯಾನಿಸುಲೇ, ನಿನ್ನ ಕಥೆಗಳಲ್ಲಿ ಸ್ತುತಿಸುಲೇ ಆಗಲೀ ಎನಗೆ ಅರಡಿಯ.
ನಿನ್ನ ಮುದ್ರೆಗಳೂ ಎನಗೆ ಗೊಂತಿಲ್ಲೆ. ನಿನ್ನ ಹತ್ತರೆ ವಿಲಾಪ ಮಾಡಿ ಬೇಡುಲೇ ಎಡಿಯ. ಆದರೆ ಅಮ್ಮಾ, ನಿನ್ನ ಅನುಸರಿಸಿದರೆ ಎನ್ನ ಕ್ಲೇಷಂಗ, ದುಃಖಂಗ ಎಲ್ಲಾ ದೂರ ಆವುತ್ತು ಹೇಳಿ ಎನಗೆ ಗೊಂತಿದ್ದು. [1]

ಶ್ಲೋಕ:
ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷ೦ತವ್ಯ೦ ಜನನಿ ಸಕಲೋಧ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 2 ||

ಭಾವಾರ್ಥ:
ಎನ್ನ ಕ್ರಮಂಗಳ ಬಗೆಗಿನ ಅಜ್ಞಾನಂದ,ಎನ್ನ ದಾರಿದ್ರ್ಯಂದ, ಎನ್ನ ಉದಾಸಿನಂದ, ನಿನಗೆ ವಿಧೇಯತೆಲಿ ಇಪ್ಪಲೇ ಆಶಕ್ಯನಾಗಿ, ನಿನ್ನ ಚರಣಕಮಲಂಗಳಿಂದ  ಚ್ಯುತನಾದೆ. ಹೇ ಸಕಲೋದ್ಧಾರಿಣಿಯಾದ ಶಿವೆಯೇ! ನೀನು ಎನ್ನ ಸಕಲ ಲೋಪದೋಷಂಗಳ ಕ್ಷಮಿಸು. ಎಂತಕ್ಕೆ ಹೇಳಿದರೆ ಕೆಟ್ಟ ಮಕ್ಕೊ ಇಕ್ಕು ಈ ಲೋಕಲ್ಲಿ ಆದರೆ ಕೆಟ್ಟ ಅಬ್ಬೆ ಎಲ್ಲಿಯೂ ಇರವು!! [2]

ಶ್ಲೋಕ:
ಪೃಥಿವ್ಯಾ೦ ಪುತ್ರಾಸ್ತೇ ಜನನಿ ಬಹವಃ ಸ೦ತಿ ಸರಲಾಃ
ಪರ೦ ತೇಷಾ೦ ಮಧ್ಯೇ ವಿರಲತರಲೋಯ೦ ತವಸುತಃ |
ಮದೀಯೋಯ೦ ತ್ಯಾಗಃ ಸಮುಚಿತಮಿದ೦ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 3 ||

ಭಾವಾರ್ಥ:
ಅಬ್ಬೆ, ನಿನಗೆ ಈ ಲೋಕಲ್ಲಿ ಪುಣ್ಯಪುರುಷರಾದ ಎಷ್ಟೋ ಮಕ್ಕೊ ಇದ್ದವು, ಅವರ ಮಧ್ಯಲ್ಲಿ ಈ ನಿನ್ನ ಮಗ° ಆಗಿ ಆನು ಬರೇ ಅತ್ಯಲ್ಪ ಮತಿಯವ°. ಆದರೆ ಅಮ್ಮ, ಆನು ನಿನ್ನ ಬಿಟ್ಟು ಇಪ್ಪದು ಉಚಿತ ಆದಿಕ್ಕು ಆದರೆ ನೀನು ಎನ್ನ ಬಿಟ್ಟಿಪ್ಪದು ಉಚಿತ ಅಲ್ಲ.  ಎಂತಕ್ಕೆ ಹೇಳಿದರೆ ಕೆಟ್ಟ ಮಕ್ಕೊ ಇಕ್ಕು ಈ ಲೋಕಲ್ಲಿ ಆದರೆ ಕೆಟ್ಟ ಅಬ್ಬೆ ಎಲ್ಲಿಯೂ ಇರವು!! [3]

ಶ್ಲೋಕ:
ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನ ವಾ ದತ್ತ೦ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಪಿ ತ್ವ೦ ಸ್ನೇಹ೦ ಮಯಿ ನಿರುಪಮ೦ ಯತ್ಪ್ರಕುರುಶೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 4 ||

ಭಾವಾರ್ಥ:
ಜಗನ್ಮಾತೆಯೇ, ಆನು ಯೇವತ್ತುದೆ ನಿನ್ನ ಚರಣ ಸೇವೆಯ ಮಾಡಿದ್ದಿಲ್ಲೇ, ಅಥವಾ ನಿನ್ನ ಹೆಸರಿಲಿ ಬೇಕಾದಷ್ಟು ದಾನಂಗಳ ಮಾಡಿದ್ದಿಲ್ಲೇ. ಆದರೂ ನಿನ್ನ ಪ್ರೀತಿ ಎನಗೆ ಅನುಪಮವಾದ್ದು ಅದರ ಎನಗೆ ಕೊಡು ಎಂತಕ್ಕೆ ಹೇಳಿದರೆ, ಕೆಟ್ಟ ಮಕ್ಕೊ ಇಕ್ಕು ಈ ಲೋಕಲ್ಲಿ ಆದರೆ ಕೆಟ್ಟ ಅಬ್ಬೆ ಎಲ್ಲಿಯೂ ಇರವು!!!
[4]

ಶ್ಲೋಕ:
ಪರಿತ್ಯಕ್ತ್ವಾ ದೇವಾನ್ ವಿವಿಧ ವಿಧಿಸೇವಾಕುಲತಯಾ
ಮಯಾ ಪ೦ಚಾಶೀತೇರಧಿಕಮಪನೀತೇ ತು ವಯಸಿ |
ಇದಾನೀ೦ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲ೦ಬೋ ಲ೦ಬೋದರಜನನಿ ಕ೦ ಯಾಮಿ ಶರಣಮ್ || 5 ||

ಭಾವಾರ್ಥ:
ಪೂಜೆಯ ನಾನಾ ಬಗೆಯ ವಿಧಿಗೋ ಎನಗೆ ಅರಡಿಯದ್ದೆ, ಆನು ಬೇರೆ ದೇವರುಗಳ ಪೂಜೆಯ ಮಾಡುದರ ತ್ಯಜಿಸಿದ್ದೆ. ಎನಗೆ ಈಗಳೇ ಎಂಭತ್ತೈದು ವರ್ಷಂದಲೂ ಹೆಚ್ಚಾಯಿದು.ಲಂಬೋದರ ಜನನಿಯೇ!  ಈಗಳೂ ನೀನು ಕೃಪೆ ತೋರದ್ದರೆ ಆನು ನಿರಾಶ್ರಿತನ ಹಾಂಗೆ ಆರಿಂಗೆ ಶರಣಾಗಲಿ?
[5]

ಶ್ಲೋಕ:
ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತ೦ಕೋ ರ೦ಕೋ ವಿಹರತಿ ಚಿರ೦ ಕೋಟಿ ಕನಕೈಃ |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದ೦
ಜನಃ ಕೋ ಜಾನೀತೇ ಜನನಿ ಜಪನೀಯ೦ ಜಪವಿಧೌ || 6 ||

ಭಾವಾರ್ಥ:
ಚಂಡಾಲ°, ಮಧುಪಾಕ ಸದೃಶ ಮಾತಾಡ್ತ°, ದಟ್ಟ ದರಿದ್ರ°,  ಕೋಟಿ ಸುವರ್ಣಾಧಿಕಾರಿಯಾಗಿ ಯಾವ ಆತಂಕದೆ ಇಲ್ಲದ್ದೆ ಬಹು ಕಾಲ ಇರ್ತ° ಇದೆಲ್ಲವೂ ನಿನ್ನ ಮಂತ್ರವರ್ಣ ಕೆಮಿಲಿ ಬಿದ್ದದರ ಫಲ!! ಅಂಬಗ, ಜನನಿಯೇ! ವಿಧಿ ಪ್ರಕಾರ ಜಪಿಸುವವಂಗೆ ಎಂಥಾ ಫಲ ಸಿಕ್ಕುಗು ಹೇಳಿ ಆರು ಹೇಳುಗು?
[6]

ಶ್ಲೋಕ:
ಚಿತಾಭಸ್ಮಾಲೇಪೋ ಗರಲಮಶನ೦ ದಿಕ್ಪಟಧರೋ
ಜಟಾಧಾರೀ ಕ೦ಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕ ಪದವೀ೦
ಭವಾನೀ ತ್ವತ್ ಪಾಣಿಗ್ರಹಣಪರಿಪಾಟೀಫಲಮಿದಮ್ || 7 ||

ಭಾವಾರ್ಥ:
ವಿಷಕಂಠನಾಗಿ, ಚಿತೆಯ ಭಸ್ಮವ ಮೈಗೆಲ್ಲ ಬಳ್ಕೊಂಡು, ದಿಕ್ಕುಗಳನ್ನೇ ಹೊದಕ್ಕೊಂಡು, ಜಟೆ ಬಿಟ್ಟು, ಹಾವಿನ ಕೊರಳಿಲಿ ಸುತ್ತಿಗೊಂಡು, ಕಪಾಲವ ಭಿಕ್ಷಾಪಾತ್ರೆ ಮಾಡಿ ಕೈಲಿ ಹಿಡ್ಕೊಂಡು, ಭೂತಂಗಳ ಮಧ್ಯೆ ಇಪ್ಪ ಪಶುಪತಿಯಾದ ಶಿವಂಗೆ ಅದ್ವಿತೀಯವಾದ  ಜಗದೀಶ್ವರನ ಪದವಿ ಸಿಕ್ಕಿದ್ದದು, ಭವಾನಿಯಾದ  ನಿನ್ನ ಪಾಣಿಗ್ರಹಣದ ಫಲವೇ ಅಲ್ಲದಾ?!!!
[7]

ಅಪರಾಧ ಕ್ಷಮಾಮಯಿ - ದೇವಿಅಮ್ಮ

ಶ್ಲೋಕ:
ನ ಮೋಕ್ಷಸ್ಯಾಕಾ೦ಕ್ಷಾ ಭವವಿಭವವಾ೦ಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ಚ ನ ಪುನಃ |
ಅತಸ್ತ್ವಾ೦ ಸ೦ಯಾಚೇ ಜನನಿ ಜನನ೦ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ || 8 ||

ಭಾವಾರ್ಥ:
ಎನಗೆ ಮೋಕ್ಷದ ಆಸೆ ಇಲ್ಲೆ, ಧನ ಸಂಪತ್ತುಗಳ ಆಸೆ ಇಲ್ಲೆ, ಜ್ಞಾನದ ಅಪೇಕ್ಷೆ ಇಲ್ಲೆ,  ಸುಖದ ಇಚ್ಛೆಯೂ ಇಲ್ಲೆ, ಶಶಿಮುಖಿಯಾದ ಅಮ್ಮನೇ, ನಿನ್ನ ಹತ್ತರೆ ಇಷ್ಟು ಮಾತ್ರ ಕೇಳಿಗೋಳ್ತೆ, ಮೃಡಾನಿ, ರುದ್ರಾಣಿ,ಶಿವ, ಶಿವ, ಭವಾನಿ ಹೇಳಿ ಜಪಲ್ಲಿ ಎನ್ನ ಜನ್ಮ ಇಡೀ ಕಳದು ಹೋಗಲಿ.
[8]

ಶ್ಲೋಕ:
ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿ೦ ರೂಕ್ಷಚಿ೦ತನಪರೈರ್ನಕೃತ೦ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿ೦ಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮ೦ಬ ಪರ೦ ತವೈವ || 9 ||

ಭಾವಾರ್ಥ:
ವಿಧಿಪೂರ್ವಕವಾಗಿ, ವಿವಿಧೋಪಚಾರಂಗಳಿಂದ ಆನು ನಿನ್ನ ಯಾವತ್ತೂ ಪೂಜಿಸಿದ್ದಿಲ್ಲೇ, ಬರೇ ಹಾಳುಹರಟೆಲಿ  ಎನ್ನ ಕಾಲವ ಕಳದ್ದೆ, ಆನು ಯಾವ ತಪ್ಪುಗಳ ಎಲ್ಲಾ ಮಾಡಿದ್ದಿಲ್ಲೇ? ಶ್ಯಾಮೆಯ ರೂಪಲ್ಲಿಪ್ಪ ಅಬ್ಬೆಯೇ, ನೀನು ಎನ್ನ ಮೇಲೆ ರಜ್ಜ ಕೃಪೆ ತೋರಿ ಎನ್ನ ಉದ್ಧರಿಸು. [9]

ಶ್ಲೋಕ:
ಆಪತ್ಸುಮಗ್ನಃ ಸ್ಮರಣ೦ ತ್ವದೀಯ೦
ಕರೋಮಿ ದುರ್ಗೇ ಕರುಣಾರ್ಣವೇತಿ |
ನೈತಚ್ಛಠತ್ವ೦ ಮಮ ಭಾವಯೇಥಾಃ
ಕ್ಷುಧಾ ತೃಷಾರ್ತಾ ಜನನೀ೦ ಸ್ಮರ೦ತಿ || 10 ||

ಭಾವಾರ್ಥ:
ಹೇ ದುರ್ಗಾ ದೇವಿ, ಕರುಣಾರ್ಣವೇಶ್ವರಿ, ಆಪತ್ತಿಲಿ ಮುಳುಗಿ ನಿನ್ನ ನೆನೆಸುತ್ತಾ ಇದ್ದೆ, ಇದರ ಮೋಸ ಹೇಳಿ ಗ್ರೇಶೆಡಾ.. ಹಶು, ಆಸರು ಅಪ್ಪಗ ಮಾತ್ರವೇ ಅಲ್ಲದಾ ಮಕ್ಕೊ ಅಬ್ಬೆಯ ನೆನಪ್ಪಿಸಿಗೊಂಬದು?
[10]

ಶ್ಲೋಕ:
ಜಗದ೦ಬ ವಿಚಿತ್ರಮತ್ರ ಕಿ೦ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧ ಪರ೦ಪರಾವೃತ೦ ನ ಹಿ ಮಾತಾ ಸಮುಪೇಕ್ಷತೇ ಸುತಮ್ || 11 ||

ಭಾವಾರ್ಥ:
ನೀನು ಎನ್ನ ಮೇಲೆ ಸಂಪೂರ್ಣ ಕರುಣೆ ತೋರ್ಸುತ್ತಾ ಇಪ್ಪದರಲ್ಲಿ ಆಶ್ಚರ್ಯ ಎಂತ ಇದ್ದು? ಎಂತಕ್ಕೆ ಹೇಳಿದರೆ ಸಾವಿರ ತಪ್ಪು ಮಾಡಿದ್ದರೂ ಕೂಡ ಅಬ್ಬೆ ಯಾವತ್ತಿಂಗೂ ಮಗನ  ಉಪೇಕ್ಷಿಸುತ್ತಿಲ್ಲೆ.
[11]

ಶ್ಲೋಕ:
ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನಹೀ |
ಏವ೦ ಜ್ಞಾತ್ವಾ ಮಹಾದೇವಿ ಯಥಾ ಯೋಗ್ಯ೦ ತಥಾ ಕುರು || 12 ||

ಭಾವಾರ್ಥ:
ಎನ್ನಂಥ ಪಾತಕಿ ಇನ್ನೊಬ್ಬ° ಇಲ್ಲೆ, ನಿನ್ನಂಥ ಪಾಪಂಗಳ ನಾಶ ಮಾಡುವೋಳು ಇನ್ನೊಬ್ಬಳಿಲ್ಲೇ!! ಹೇ ಮಹಾದೇವಿ! ಇದೆಲ್ಲವ ತಿಳ್ಕೊಂಡು,
ಎನಗೆ ಯಾವುದು ಉಚಿತವೋ ಅದನ್ನೇ ಮಾಡು.
[12]

ಸೂಃ  ಈ ಸ್ತೋತ್ರದ ಭಾವಾರ್ಥ ಎನ್ನ ಮನಸ್ಸಿಲಿ ಭಾವನೆ ಬ೦ದ ಹಾ೦ಗೆ ಬರದ್ದೆ.ತಿದ್ದುಲೆ ಸಕಾಯ ಮಾಡಿದ ಭಟ್ಟಮಾವ೦ಗೂ,ಡಾ.ಮಹೇಶ್೦ಗೂ ಧನ್ಯವಾದ೦ಗ.

~*~*~

ದೇವ್ಯಪರಾಧಕ್ಷಮಾಪಣಾ ಸ್ತೋತ್ರ : ಭಾವಾರ್ಥ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಕುಪುತ್ರೋ ಜಾಯೇತಾ ಕ್ವಚಿದಪಿ ಕುಮಾತಾ ನ ಭವತಿ….ಶ್ರೀ ಅಕ್ಕನ ಪ್ರಯತ್ನಕ್ಕೆ ಒಂದು ಒಪ್ಪ..ಹವ್ಯಕ ಭಾಷೆಲಿ ಭಾವಾರ್ಥ ಚೆಂದ ಆಯಿದು..

  [Reply]

  VN:F [1.9.22_1171]
  Rating: 0 (from 0 votes)
 2. Kirana Arthyadka

  Olle kelasa.. enage eega koodondu kaliyekku ansittu.. Illi hudkide,sikkittu..:)
  Dhanyavada..:)

  [Reply]

  VA:F [1.9.22_1171]
  Rating: -1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಹಳೆಮನೆ ಅಣ್ಣvreddhiಅಕ್ಷರ°ರಾಜಣ್ಣಕಜೆವಸಂತ°ಚೆನ್ನಬೆಟ್ಟಣ್ಣಶರ್ಮಪ್ಪಚ್ಚಿಶುದ್ದಿಕ್ಕಾರ°ವಿದ್ವಾನಣ್ಣವಿಜಯತ್ತೆಸರ್ಪಮಲೆ ಮಾವ°ಅಜ್ಜಕಾನ ಭಾವಸಂಪಾದಕ°ಪ್ರಕಾಶಪ್ಪಚ್ಚಿಚೂರಿಬೈಲು ದೀಪಕ್ಕಗೋಪಾಲಣ್ಣದೊಡ್ಡಮಾವ°ಅನು ಉಡುಪುಮೂಲೆದೊಡ್ಮನೆ ಭಾವಶಾ...ರೀಸುಭಗಶಾಂತತ್ತೆವೆಂಕಟ್ ಕೋಟೂರುವೇಣೂರಣ್ಣಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ