ಧಿಯೋ ಯೋ ನಃ ಪ್ರಚೋದಯಾತ್.. !!

ಶ್ರುತಿ – ಸ್ಮೃತಿ ಹೇಳಿ ಎರಡು ವಿಭಾಗ ಅಡ ನಮ್ಮ ಹಿರಿಯೋರು ಮಾಡಿದ್ದು.
ಶ್ರುತಿ ಹೇಳಿರೆ ಕೇಳಿದ್ದು – ಸ್ಮೃತಿ ಹೇಳಿರೆ ಮನಸ್ಸಿಂಗೆ ಬಂದದು.
ಇದೆರಡುದೇ ನಮ್ಮ ಋಷಿಗೊಕ್ಕೆ ಆದ್ದು ವೇದಕಾಲಲ್ಲಿ – ಸಾವಿರಾರು ಒರಿಷ ಹಿಂದೆ.
ಅಲ್ಲಿಂದ ಇಲ್ಲಿ ಒರೆಂಗುದೇ ಆ ಮಂತ್ರಂಗೊ ನಮ್ಮ ನೆತ್ತರಿಲಿ ಒಳುಕ್ಕೊಂಡು ಬಂತು.  ಹೇಂಗೆ?

ಪಠಣಂದಾಗಿ.!
ಮಂತ್ರಪಠಣಂದಾಗಿ.!!

ಸನಾತನ ಸಂಸ್ಕಾರದ ದೊಡ್ಡ ಸೊತ್ತು ಈ ಮಂತ್ರಂಗೊ.
ಮದಲಿಂಗೆ ಹವ್ಯಕ ಸಮಾಜಲ್ಲಿ ಮಂತ್ರ ಅರಡಿಯದ್ದವು ಆರುದೇ ಇದ್ದಿರವು. ಮನೆ ಯೆಜಮಾನಂಗೆ ಬಂದೇ ಬಕ್ಕು. ಮನೆಯ ನಿತ್ಯಾನುಷ್ಟಾನಕ್ಕೆ ಅಗತ್ಯ ಬಪ್ಪ ಸೂಕ್ತಂಗೊ, ಮಂತ್ರಂಗೊ – ಎಲ್ಲ ಹೇಳಿಯೇ ಹೇಳುಗು.

ಹೇಳಿದ್ದರ ಕೇಳಿಯೇ ಒಳುದವಕ್ಕೆ ಬಕ್ಕು – ಎಲ್ಲೊರಿಂಗೂ.!
ಮನೆಲಿ ನಿತ್ಯವೂ  ಸಂಸ್ಕೃತಿ ನಳನಳಿಸಿಗೊಂಡು ಇದ್ದರೆ, ಪೂಜೆ ಅನುಪ್ಪತ್ಯ ನೆಡಕ್ಕೊಂಡು ಇದ್ದರೆ ಮಂತ್ರ ಬಾರದ್ದೆ ಇಕ್ಕೊ?
ತರವಾಡು ಮನೆ ಶಂಬಜ್ಜ ಹೇಳುದರ ಕೇಳಿ ಕೇಳಿ, ಮಗ ರಂಗಮಾವಂಗೆ ಸಣ್ಣ ಇಪ್ಪಗಳೇ ಸೂಕ್ತಂಗೊ, ಸುಲಾಬದ ಬಳ್ಳಿಮಂತ್ರಂಗೊ ಬಕ್ಕು.
(ಎಜಮಾಂತಿ ಕಾಂಬುಅಜ್ಜಿಗೇ ಕೆಲವೆಲ್ಲ ಬಾಯಿಗೆ ಬಂದುಗೊಂಡು ಇತ್ತಡ – ದೇವರೊಳ ಹೇಳುದರ ಕೇಳಿ ಕೇಳಿ.!)
ರಂಗಮಾವ ಹೇಳುದು ಕಮ್ಮಿ, ಪಾತಿ ಅತ್ತೆಗೆ ಬಪ್ಪದುದೇ ಕಮ್ಮಿಯೇ! ಆದರೂ ಕೆಲಾವು – ಗಣಾನಾಂತ್ವಾ ಎಲ್ಲ – ಬಕ್ಕು ಅಶ್ಟೆ.

ಪಾತಿ ಅತ್ತೆಗೆ ಬಾರದ್ರೂ ಚೋದ್ಯ ಇಲ್ಲೆ.
ರಂಗಮಾವ ಹೇಳದ್ದರಿಂದಾಗಿ, ಕಲಿಶದ್ದರಿಂದಾಗಿ ಅವರ ಮಗ ಶಾಂಬಾವಂಗೆ ಏನೇನೂ ಬಾರ.
ಇನ್ನು ಶಾಂಬಾವನ ಮಗ ವಿನುವಿನ ಶುದ್ದಿ ಹೇಳಿ ಪ್ರಯೋಜನ ಇಲ್ಲೆ. ವಿನುವಿನ ಅಮ್ಮಂಗೆ ಅಂತೂ ಅದರ ಏಬೀಸೀಡಿ ಗೊಂತಿಲ್ಲೆ, ಈ ಮಂತ್ರಂಗೊ ಎಲ್ಲ ಆವುತ್ತೂ ಇಲ್ಲೆ.!
ವಿನುವಿನ ಉಪನಯನ ಬಪ್ಪೊರಿಶ ಇದ್ದಡ, ಅಂಬಗ ಆದರೂ ಆ ಶಾಂಬಾವ ರಜ ಕಲ್ತುಗೊಂಡ್ರೆ ಉಳಿಗು. ಅಲ್ಲದ್ರೆ ಗೋವಿಂದ..!!

ಅದಿರಳಿ, ನವಗೆ ಬೇರೆ ಮನೆಯ ಶುದ್ದಿ ಎಂತಕೆ, ಅಲ್ದೋ?

ಈ ಪುಸ್ತಕಲ್ಲಿ, ನಾವು ಕಲಿಯೆಕ್ಕಾದ ಕೆಲವು ಮಂತ್ರಂಗಳ ಹಾಕುದೋ ಹೇಳಿ ಒಂದು ಯೋಚನೆ.
ಸಂಧ್ಯಾವಂದನೆ, ಜೆನಿವಾರ ಹಾಕುತ್ಸು, ಮಾದ್ಯಾನ್ನಿಕೆ, ಅಗ್ನಿಕಾರ್ಯ, ಇತ್ಯಾದಿ ಗಳನ್ನುದೇ, – ಪ್ರಯೋಗ ಸಹಿತ..!

ಓ ಮೊನ್ನೆ ಕೇಳಿಯಪ್ಪಗ ಆಚಮನೆ ದೊಡ್ಡಣ್ಣ ’ಅಕ್ಕು’ ಹೇಳಿದ್ದ°. ಈಚಕರೆಮಾಣಿಯ ಒಟ್ಟಿಂಗೆ ಸೇರಿ ಕಾಗತಲ್ಲಿ ಬರದು ಕೊಡ್ತನಡ. ಅದರ ಈ ಪುಸ್ತಕಲ್ಲಿ ಬರವದು.

ನಮ್ಮ ಬುದ್ಧಿಯ ಆ ಸೂರ್ಯ° ಪ್ರಚೋದಿಸಲಿ:  ಧಿ ಯೋ ಯೋನಃ ಪ್ರಚೋದಯಾತ್ ||

ಓದಿಕ್ಕಿ, ಆತೋ?

(ನಿಂಗೊ ಅದಾಗಲೇ ಬರದ್ದು ಇದ್ದರೆ ಒಪ್ಪಣ್ಣಂಗೆ ಕೊಡಿ. ಇಲ್ಲೇ ಹಾಕುಲಕ್ಕು.)

~

Admin | ಗುರಿಕ್ಕಾರ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *