ದುರ್ಗಾ ಸೂಕ್ತಮ್

August 22, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ ” ದುರ್ಗಾ ಸೂಕ್ತ ” ವ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ದುರ್ಗಾ ಸೂಕ್ತಮ್

ಜಾತವೇದಸೇ ಸುನವಾಮ ಸೋಮಮರಾತೀಯತೋ ನಿದಹಾತಿ ವೇದಃ|

ಸ ನಃ ಪರ್‍ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿಃ|

ತಾಮಗ್ನಿವರ್ಣಾಂ ತಪಸಾ ಜ್ವಲಂತೀಂ ವೈರೋಚನೀಂ ಕರ್ಮ ಫಲೇಷು ಜುಷ್ಟಾಮ್ |

ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ |

ಅಗ್ನೇ ತ್ವಂ ಪಾರಯಾ ನವ್ಯೋ  ಅಸ್ಮಾನ್ ಥ್ಸ್ವಸ್ತಿಭಿರತಿ ದುರ್ಗಾಣಿ ವಿಶ್ವಾ|

ಪೂಶ್ಚ ಪೃಥ್ವೀ ಬಹುಲಾ ನ ಉರ್ವೀ ಭವಾ ತೋಕಾಯ ತನಯಾಯ ಶಂ ಯೋಃ|

ವಿಶ್ವಾನಿ ನೋ ದುರ್ಗಹಾ ಜಾತವೇದಸ್ಸಿಂಧುಂ ನ ನಾವಾ ದುರಿತಾತಿಪರ್ ಷಿ|

ಅಗ್ನೇ ಅತ್ರಿವನ್ ಮನಸಾ ಗೃಣಾನೋಸ್ಮಾಕಂ ಬೋಧ್ಯವಿತಾ ತನೂನಾಮ್|

ಪೃತನಾಜಿತಗ್ಂ ಸಹಮಾನಮುಗ್ರಮಗ್ನಿಗ್ಂ ಹುವೇಮ ಪರಮಾಥ್ಸಧಸ್ಥಾತ್|

ಸ ನಃ ಪರ್ ಷದತಿ ದುರ್ಗಾಣಿ ವಿಶ್ವಾ ಕ್ಷಾಮದ್ದೇವೋ ಅತಿದುರಿತಾತ್ಯಗ್ನಿಃ |

ಪ್ರತ್ನೋಷಿ ಕಮೀಡ್ಯೋ ಅಧ್ವರೇಷು ಸನಾಚ್ಚ ಹೋತಾ ನವ್ಯಶ್ಚ ಸತ್ಸಿ|

ಸ್ವಾಂ ಚಾಗ್ನೇ ತನುವಂ ಪಿಪ್ರಯಸ್ವಾಸ್ಮಭ್ಯಂ ಚ ಸೌಭಗಮಾಯಜಸ್ವ|

ಗೋಭಿರ್ಜುಷ್ಟಮಯುಜೋ ನಿಷಿಕ್ತಂ ತವೇಂದ್ರ ವಿಷ್ಣೋರನು ಸಂಚರೇಮ|

ನಾಕಸ್ಯ ಪೃಷ್ಠಮಭಿ ಸಂವಸಾನೋ ವೈಷ್ಣವೀಂ ಲೋಕ ಇಹ ಮಾದಯಂತಾಮ್ ||

ಓಂ ಕಾತ್ಯಾಯನಾಯ ವಿದ್ಮಹೇ ಕನ್ಯಕುಮಾರಿ ಧೀಮಹಿ | ತನ್ನೋ ದುರ್ಗಿಃ  ಪ್ರಚೋದಯಾತ್||

ದುರ್ಗಾ ಸೂಕ್ತ (ಕನ್ನಡ ಗೀತೆ)

ಅಗ್ನಿವರ್ಣದಿ ತಪದಿ ಜ್ವಲಿಸುವ ವಿವಿಧ ಕಾಂತಿಯ ದೇವಿದುರ್ಗೆಗೆ

ಶರಣು ಪೊಗುವೆನು ತೆರೆಯ ತರಿಸಲು ಕಡಲ ಮೇಗಿನ ಹಡಗಿನಂತೆ

***

ಸಕಲವರಿತಿಹ ಅಗ್ನಿದೇವಗೆ ಸೋಮರಸವನು ಅರ್ಚಿಸುವೆನು

ಎಲ್ಲ ದುರಿತಗಳಿಂದ ಪೊರೆಯಲಿ ನಾವೆ ತೆರದಲಿ ಕಡಲ ನಡುವೆ

ನಾಶಮಾಡಲಿ ಶತ್ರುವಾತನು ನಮ್ಮ ತಪ್ಪನು ಮನ್ನಿಸುತಲಿ

ಅಗ್ನಿವರ್ಣದಿ ತಪದಿ ಜ್ವಲಿಸುವ ಪರಮ ಶಕ್ತಿಯ ವಿವಿಧ ರೂಪ

ಕರ್ಮ ಫಲವನು ಕರುಣಿಪವಳನು ದೇವಿ ದುರ್ಗೆಯ ಶರಣು ಪೊಗುವೆ

ದಾರಿ ದುಸ್ತರ ದಾಟಿಸುವಳಿಗೆ ತರಣಗೊಳಿಸಲು ನಮಿಸುತಿರುವೆ

ಅಗ್ನಿ ದೇವನೆ ಸ್ತುತ್ಯವಂತನೆ ಇಷ್ಟ ಕ್ರಮದಲಿ ಕಷ್ಟ ಹರಿಸು

ವಾಸ ಜಾಗವು ಊರ ಹೊಲಗಳು ಫಲವ ಕೊಡುತಲಿ ವೃದ್ಧಿಪಡಲಿ

ನಮ್ಮ ಮಕ್ಕಳ ನವರ ಮಕ್ಕಳ ಹರಸಿ ಮನದಲಿ ಮೋದಗೊಳಿಸು

ದಾರಿಸುಸ್ತರ ದಾಟಿಸಗ್ನಿಯೆ ಕಡಲ ಮೇಲಿನ ಹಡಗಿನಂತೆ

ಸರ್ವ ದುರಿತಗಳನ್ನು ಮೀರುತ ರಕ್ಷಿಸೆಮ್ಮನು ಜಾಗ್ರತೆಯಲಿ

ಜಾತವೇದನೆ ಕಾಯೊ ತನುವನು ಅತ್ರಿ ಮುನಿಗಳ ತೆರದಿ ನೆನೆದು

ಶಿಖರದಲ್ಲಿಹ ವಿಶ್ವನಾಯಕ ಅಗ್ನಿ ಉಗ್ರನ ಧ್ಯಾನಿಸುವೆವು

ದೇವನಾತನು ಶತ್ರುಹಂತಕ ಶತ್ರುಕುಲವನೆ ನಾಶಗೊಳಿಪ

ಎಲ್ಲ ದುರ್ಗತಿ ದುರ್ಬಲಗಳನು ಹರಿಸಿ ತರಿಸುತ ಮುಗಿಸಿ ಬಿಡಲಿ

ಅಂಟಿಕೊಳ್ಳದೆ ಪಾಪಕರ್ಮದಿ ವಿಶ್ವಯಾಗದಿ ವ್ಯಾಪಿಸಿರುವ

ಇಂದ್ರ ಕರುಣಿಸು ಗೋವು ಸಿರಿಯನು ಸ್ವರ್ಗ ದೇವರು  ತೋಷಗೊಳಲಿ

ವಿರಮವಿಲ್ಲದೆ ಭಾಗ್ಯ ನೀಡಲಿ ವಿಷ್ಣು ಪ್ರೀತಿಯ ನೆನೆದು ನೆನೆದು.

ಜ್ಞಾನ ಗೊಂಬೆವು ಕಾತ್ಯಾಯನಿಯ ಕನ್ಯಕುಮಾರಿ ಧ್ಯಾನಿಸುವೆವು

ದೇವಿ ದುರ್ಗೆಯು ನಮ್ಮ ಬುದ್ಧಿಗೆ ಕೊಡಲಿ ಪ್ರೇರಣೆ ಸ್ಥಿರದ ಕಡೆಗೆ

(ಸಂಗ್ರಹ: ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ)

ಸೂ:
ವೇದಮೂರ್ತಿ ತುಪ್ಪೆಕಲ್ಲು ಸಹೋದರರ
“ದುರ್ಗಾ  ಸೂಕ್ತಮ್” ಧ್ವನಿಮುದ್ರಿಕೆಯ ಬೈಲಿನ ಚೆನ್ನೈಬಾವ ಕಳುಸಿಕೊಟ್ಟಿದವು. ಬೈಲಿನ ಕೇಳುಗರಿಂಗಾಗಿ ಇಲ್ಲಿ ನೇಲುಸಿದ್ದು:
ಇಬ್ರಿಂಗೂ ಧನ್ಯವಾದಂಗೊ.

Get this widget | Track details | eSnips Social DNA
ದುರ್ಗಾ ಸೂಕ್ತಮ್, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಅಡಕೋಳಿ
  ಅಡಕೋಳಿ

  ಶರ್ಮಣ್ಣನ ಶ್ರೀ ಕೃಷ್ಣಜನ್ಮಾಷ್ಟಮಿಯ ಕೊಡುಗೆ.
  “ಅಂಟಿಕೊಳ್ಳದೆ ಪಾಪಕರ್ಮದಿ ವಿಶ್ವಯಾಗದಿ ವ್ಯಾಪಿಸಿರುವ” ವಾಕ್ಯ ಸಂಯೋಜನೆ ಲಾಯಿಕ್ಕಿದ್ದು.

  [Reply]

  VN:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  :)
  ಗುರುಗೊ ಮಾಡುವ ಉದಿಯಪ್ಪಗಾಣ ಪೂಜೆಲಿ ಪರಿವಾರದವ್ವು ದುರ್ಗಾ ಸೂಕ್ತವ ನಿಧಾನಕೆ ಹೇಳುದರ ಕೇಳುಲೇ ಒಂದು ಚೆಂದ ಅಲ್ಲದಾ???

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಮಾಣಿ,
  ಇದಾ ಈಗ ರೆಜಾ ನಿಧಾನಕೆ ಹೇಳ್ತದರ ಚೆನ್ನೈ ಭಾವ ಕಳ್ಸಿ ಕೊಟ್ಟಿದವು.
  ಅದರ ನೇಲುಸಿ ಆಯಿದು. ಕೇಳಿ ನೋಡಿಕ್ಕು

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಓ ಪಷ್ಟಾಯಿದು..

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಲಾಯ್ಕ ಆಯ್ದು ಕಾರ್ಯ. ಧನ್ಯವಾದ ಸಹಿತ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಚೆ೦ದದ ಭಾವಾಭಿಯವ್ಯಕ್ತಿ. ಧನ್ಯವಾದ ಅಪ್ಪಚ್ಚಿ.

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಧನ್ಯವಾದ, ಅಪ್ಪಚ್ಚಿಗೆ.

  [Reply]

  VN:F [1.9.22_1171]
  Rating: 0 (from 0 votes)
 6. ಶ್ರೀಅಕ್ಕ°

  ಶರ್ಮಪ್ಪಚ್ಚಿ,
  ಈ ಸಂಸಾರ ಸಾಗರವ ಪಾರು ಮಾಡುಲೆ ಇಪ್ಪ ಒಂದು ಸೂಕ್ತ ಅಲ್ಲದಾ? ಅನುವಾದ ತುಂಬಾ ಲಾಯ್ಕ ವಿವರಣೆ ಕೊಡ್ತು. ಧನ್ಯವಾದಂಗಾ..

  [Reply]

  VN:F [1.9.22_1171]
  Rating: 0 (from 0 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ದುರ್ಗಾ ಸೂಕ್ತ ಕೇಳಿ ಕೊಶಿ ಆತು. ಅರ್ಥವುದೆ ಗೊಂತಾತದ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 8. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಚೂರಿಬೈಲು ದೀಪಕ್ಕಡಾಮಹೇಶಣ್ಣನೆಗೆಗಾರ°ಹಳೆಮನೆ ಅಣ್ಣಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿಪುಟ್ಟಬಾವ°ಪವನಜಮಾವಗೋಪಾಲಣ್ಣಕೇಜಿಮಾವ°ಎರುಂಬು ಅಪ್ಪಚ್ಚಿಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಶುದ್ದಿಕ್ಕಾರ°ಅನು ಉಡುಪುಮೂಲೆಪುಣಚ ಡಾಕ್ಟ್ರುಶರ್ಮಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿಪೆಂಗಣ್ಣ°ವೇಣೂರಣ್ಣಮುಳಿಯ ಭಾವಪ್ರಕಾಶಪ್ಪಚ್ಚಿವೆಂಕಟ್ ಕೋಟೂರುತೆಕ್ಕುಂಜ ಕುಮಾರ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ