ಈಶಾವಾಸ್ಯೋಪನಿಷತ್

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್  ಗೀತಾಂಜಲಿ” ಪುಸ್ತಕಂದ ಈಶಾವಾಸ್ಯೋಪನಿಷತ್ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ

~~~~

ಈಶಾವಾಸ್ಯೋಪನಿಷತ್ (ಶುಕ್ಲ ಯಜುರ್ವೇದೀಯ ಕಾಣ್ವ ಶಾಖಾ)

ಈಶಾ ವಾಸ್ಯಮಿದಗ್‍ಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |

ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||೧||

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಪತಗ್‍ಂ ಸಮಾಃ |

ಏವಂ ತ್ವಯಿ ನಾನ್ಯಥೇತೋSಸ್ತಿ ನ ಕರ್ಮ ಲಿಪ್ಯತೇ ನರೇ ||೨||

ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾವೃತಾಃ |

ತಾಗ್‍ಂಸ್ತೇ ಪ್ರೇತ್ಯಾಭಿಗಚ್ಛಂತಿ  ಯೇ ಕೇ ಚಾತ್ಮಹನೋ ಜನಾಃ ||೩||

ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ |

ತದ್ಧಾವತೋSನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ ||೪||

ತದೇಜತಿ ತನ್ನೈಜತಿ ತದ್ಧೂರೇ ತದ್ವಂತಿಕೇ|

ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ||೫||

ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ |

ಸರ್ವ ಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ||೬||

ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ |

ತತ್ರ ಕೋ ಮೋಹಃ ಕಶ್ಯೋಕ ಏಕತ್ವಮನುಪಶ್ಯತಃ ||೭||

ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿಗ್‍ಂ ಶುದ್ಧಮಪಾಪವಿದ್ಧಮ್ |

ಕವಿರ್ಮನೀಷೀ ಪರಿಭೂಸ್ಸ್ವಯಂಭೂರ್ಯಾಥಾತಥ್ಯ |

ತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮||

ಅಂಧಂ ತಮಃ ಪ್ರವಿಶಂತಿ ಯೇSವಿದ್ಯಾಮುಪಾಸತೇ |

ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಗ್‍ಂ ರತಾಃ ||೯||

ಅನ್ಯದೇವಾಹುರ್ವಿದ್ಯಯಾSನ್ಯದಾಹುರವಿದ್ಯಯಾ |

ಇತಿ ಶುಶ್ರುಮ ಧೀರಣಾಂ ಯೇ ನಸ್ತದ್ವಿಚಚಕ್ಷಿರೇ ||೧೦||

ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಗ್‍ಂ ಸಹ |

ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾSಮೃತಮಶ್ನುತೇ ||೧೧||

ಅಂಧಂ ತಮಃ ಪ್ರವಿಶಂತಿ ಯೇSಸಂಭೂತಿಮುಪಾಸತೇ |

ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಗ್‍ಂ ರತಾಃ ||೧೨||

ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ |

ಇತಿ ಶುಶ್ರುಮ ಧೀರಣಾಂ ಯೇ ನಸ್ತದ್ವಿಚಚಕ್ಷಿರೇ ||೧೩||

ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಗ್‍ಂ ಸಹ |

ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾSಮೃತಮಶ್ನುತೇ ||೧೪||

ಹಿರಣ್ಮಯೇನ ಪಾತ್ರೇಣ ಸತ್ಯ ಸ್ಯಾಪಿಹಿತಂ ಮುಖಮ್ |

ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||೧೫||

ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ

ವ್ಯೂಹ ರಶ್ಮೀನ್ ಸಮೂಹ ತೇಜೋ

ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ |

ಯೋSಸಾವಸೌ ಪುರುಷಃ ಸೋSಹಮಸ್ಮಿ ||೧೬||

ವಾಯುರನಿಲಮಮೃತಮಥೇದಂ ಭಸ್ಮಾಂತಗ್‍ಂ ಶರೀರಮ್ |

ಓಂ ಕ್ರತೋ ಸ್ಮರ ಕೃತಗ್‍ಂ ಸ್ಮರ ಕ್ರತೋ ಸ್ಮರ ಕೃತಗ್‍ಂ ಸ್ಮರ ||೧೭||

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |

ಯುಯೋSಧ್ಯಸ್ಮಜ್ಜುಹುರಾಣಮೇನೋ

ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ ||೧೮||

ಶಾಂತಿ ಪಾಠ

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |

ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಾಮೇವಾವಶಿಷ್ಯತೇ ||

ಓಂ ಶಾಂತಿಃ ಶಾಂತಿಃ ಶಾಂತಿಃ

ಈಶಾವಾಸ್ಯೋಪನಿಷತ್ (ಕನ್ನಡ ಗೀತೆ)

ಈಶನಿಂದಾವೃತವು ಎಲ್ಲೆಡೆ ಚಲನೆಯಲ್ಲಿಹ ಜಗವಿದು

ಉಣ್ಣು ಆತನು ಇತ್ತ ತುತ್ತನು; ಬಯಸದಿರು  ಪರಸೊತ್ತನು

ಯಾರದೈಸಿರಿ? ಯಾವುದೈಸಿರಿ? ಪರಮ ಸುಖ ಪರಮಾತ್ಮನು ||೧||

ಬಾಳು ಈ ತೆರ ಕರ್ಮಗೈಯುತ ನೂರು ವರುಷದ ಜೀವನ

ಬೇರೆ ದಾರಿಯೆ ಇಲ್ಲ ಮನುಜನೆ; ಇರದು ಕರ್ಮದ ಲೇಪನ ||೨||

ಅಸುರ ತಾಮಸ ಭೋಗ ತಾಣವು ಅಲಸಿ ಸುಖಿಗಳ ದುಃಸ್ಥಿತಿ

ಆತ್ಮ ಘಾತಿಗಳಾದ ಜನರಿಗೆ ದೇಹದಂತ್ಯದ ದುರ್ಗತಿ ||೩||

ಅಚಲನೊಬ್ಬನೆ ಮನವನಿಂದ್ರಿಯ ಮೀರಿ ಮುಂಗಡೆಯಿರುವನು

ಸ್ಥಿರದಲಿರುತಲಿ ಧಾವಿಪೆಲ್ಲೆಡೆ ಜೀವಧಾರಿಯೆ ಕರ್ತೃವು ||೪||

ಚಲಿಪನಾತನು ಚಲಿಸದಿರುವನು ದೂರವ್ಯಾಪ್ತನು ಸನಿಹನು

ಎಲ್ಲ ಜೀವಿಗಳೊಳಗೆಯಿರುತಲಿ ಹೊರಗು ಎಲ್ಲೆಡೆ ಮೆರೆವನು ||೫||

ಯಾರು ಜೀವಿಗಳೆಲ್ಲ ತನ್ನೊಳ ಆತ್ಮವೆಂದೇ ತಿಳಿವರು

ಅವರೆ ಜೀವಿಗಳಲ್ಲಿ ತನ್ಮಯ ಹೊಂದಿ ದ್ವೇಷವ ತೊರೆವರು ||೬||

ಸರ್ವಪ್ರಾಣಿಗಳಲ್ಲಿ ನೆಲೆಸಿಹುದೆನ್ನ ಆತ್ಮವೆ ಎನ್ನಲು

ಮೋಹವೆಲ್ಲಿದೆ? ಶೋಕವೆಲ್ಲಿದೆ? ಸರ್ವ ಸಮತೆಯ ಕಾಣಲು ||೭||

ಸರ್ವ ವ್ಯಾಪ್ತನು ದೇಹರಹಿತನು ನ್ಯೂನವಿರದವ ಜ್ಯೋತಿಯು

ಬಂಧರಹಿತನು ಪಾಪರಹಿತನು ಪೂರ್ಣಪ್ರಜ್ಞನು ಶುದ್ಧನು

ಆದಿ ರಹಿತನು ನಿಯಮಕನುಗುಣ ಜ್ಞಾನ ಸಂಪದವೀವನು ||೮||

ಜ್ಞಾನವಿಲ್ಲದೆ ಕರ್ಮಗೈಯುವರಂಧಕಾರವ ಪೊಗುವರು

ಜ್ಞಾನವಿದ್ದರು ಕರ್ಮ ಹೀನರು ಘೋರ ಕತ್ತಲ ತುಳಿವರು ||೯||

ಜ್ಞಾನಕರ್ಮಗಳೆರಡು ತರುವವು ಭಿನ್ನ ಭಿನ್ನದ ಫಲಗಳ

ಆತ್ಮಜ್ಞಾನಿಗಳಿಂದ ತಿಳಿದೆವು ಶ್ರುತಿ ವಿಚಾರದ ಬೋಧೆಯ ||೧೦||

ಕರ್ಮ ಜ್ಞಾನಗಳೆರಡ ಜತೆ ಜತೆಯಾಗಿ ಯಾವನು ತಿಳಿವನು

ಮೃತ್ಯುಜಯಿಪನು ಕರ್ಮದಿಂದಲೆ ಜ್ಞಾನದಿಂದಲಿ ಅಮೃತವು ||೧೧||

ಜಗದ ಚಿಂತನೆಯಲ್ಲಿ ಮಗ್ನರು ಕಪ್ಪು ಕತ್ತಲ ಪೊಗುವರು

ಆತ್ಮನಿರತರು ಮರೆತು ಜಗವನು ಹೆಚ್ಚು ಕತ್ತಲ ತುಳಿವರು ||೧೨||

ಈಶ ಪ್ರಕೃತಿಗಳಿಂದ ಬರುವುವು ಬೇರೆ ಬೇರೆಯ ಫಲಗಳು

ತತ್ತ್ವ ದರ್ಶಿಗಳಿಂತು ಪೇಳ್ವರು ಶ್ರುತಿ ವಿಚಾರದ ಮಥನವು ||೧೩||

ಈಶ ಪ್ರಕೃತಿಗಳೆರಡ ಜತೆಯಲಿ ತಿಳಿದರದುವೇ ವಿಜಯವು

ಮೃತ್ಯು ವಿಜಯವು ಪ್ರಕೃತಿಯಿಂದಲಿ, ಈಶನಿಂದಲಿ ಅಮೃತವು ||೧೪||

ಹೊನ್ನ ಮುಚ್ಚಳದಿಂದ ಮುಚ್ಚಿದೆ ಕಾಣದಂತೆಯೆ ಸತ್ಯವ

ಜೀವ ಪೋಷಕ! ಮುಚ್ಚಲೆತ್ತುತ ತೋರು ಸತ್ಯವ ಧರ್ಮವ ||೧೫||

ಏಕ, ಪೋಷಕ, ತತ್ತ್ವದರ್ಶಿಯೆ, ಸರ್ವ ಪ್ರಜೆಗಳ ಸ್ವಾಮಿಯೆ!

ಜ್ಞಾನ ಕಿರಣಗಳನ್ನು ಕರುಣಿಸು ರೂಪ ಮಂಗಳ ಸೂರ್ಯನೆ

ಈಶನಾತನು ನಾನು ಆತ್ಮನು ಎಂಬ ಸಮತಾ ಭಾವನೆ ||೧೬||

ಗಾಳಿ ಬೆಂಕಿಯ ಜಲದ ಮಣ್ಣಿನ ದೇಹ ಹೊಂದಲು ಭಸ್ಮವ

ಮನವ ನೆನಪಿಸು ಪ್ರಣವ ಮಂತ್ರವ ಗೈದ ಕಾರ್ಯವ ಪುಣ್ಯವ ||೧೭||

ದಾರಿ ತೋರಿಸು ಜ್ವಲಿಪ ಜ್ಞಾನಿಯೆ ನೀಡು ಸತ್ಕೃತಿ ಸಂಪದ

ಕುಟಿಲ ಪಾಪಗಳಿಂದ ತೊಲಗಿಸು ನಿನಗೆ ನಮಿಪೆವು ಬಹುವಿಧ ||೧೮||

ಶಾಂತಿ ಪಾಠ

ನಮಗೆ ಕಾಣಿಸದಿರುವ ಜಗವದು ಮತ್ತು ಕಾಣುವ ಜಗವಿದು

ಪೂರ್ಣವಾಗಿಯೆ ಉದಯಗೊಂಡವು ಪೂರ್ಣನೇ ಭಗವಂತನು

ಪೂರ್ಣ ಈಶ್ವರನಿಂದ ಪೂರ್ಣದ ಜಗವ ತೆಗೆದರು ಪೂರ್ಣವು

ಶಕ್ತಿ ಜ್ಞಾನವು ಮಹಿಮೆಯಾತನ ಎಲ್ಲ ಕಡೆಯಲಿ ಪೂರ್ಣವು

ಶಾಂತಿಯಾಗಲಿ! ಶಾಂತಿಯಾಗಲಿ!! ಶಾಂತಿ ನೆಮ್ಮದಿ ಲಭಿಸಲಿ !!!

ಸಂಗ್ರಹ: ಉಪನಿಷತ್ ಗೀತಾಂಜಲಿ-ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ

   

You may also like...

5 Responses

 1. ಚೆನ್ನೈ ಭಾವ says:

  [ಈಶನಿಂದಾವೃತವು ಎಲ್ಲೆಡೆ ಚಲನೆಯಲ್ಲಿಹ ಜಗವಿದು
  ಉಣ್ಣು ಆತನು ಇತ್ತ ತುತ್ತನು; ಬಯಸದಿರು ಪರಸೊತ್ತನು ] – ಲಾಯಕ ಅರ್ಥ ಆವ್ತಾಂಗೆ ಬರದ್ದವು ಎಂಬುದೀಗ ನಮ್ಮ ಒಪ್ಪ.

 2. ಮಂಗ್ಳೂರ ಮಾಣಿ says:

  ಉಪನಿಷತ್ತುಗಳ ಕನ್ನಡ ಅನುವಾದಂಗೊ ಬೈಲಿಂಗೆ ಬಂದದು ನೋಡಿ ಖುಶಿ ಆತು ಅಪ್ಪಚ್ಚಿ 🙂

 3. ಪ್ರಸಾದ says:

  ಅಪ್ಪಚ್ಚಿ,
  (ಗಾಳಿ ಬೆಂಕಿಯ ಜಲದ ಮಣ್ಣಿನ ದೇಹ ಹೊಂದಲು ಭಸ್ಮವ ಮನವ ನೆನಪಿಸು ಪ್ರಣವ ಮಂತ್ರವ ಗೈದ ಕಾರ್ಯವ ಪುಣ್ಯವ )
  “ಮನವ ಶೋಧಿಸ ಬೇಕು ನಿತ್ಯ ದಿನ ದಿನಮಾಡುವ ಪಾಪ ಪುಣ್ಯದ ವೆಚ್ಚ ”
  ಇದೆರಡರದ್ದೂ ಅರ್ಥ ಒಂದೇ ಆಯಿಕ್ಕಲ್ಲದೋ………

 4. ರಘು ಮುಳಿಯ says:

  ಜ್ಞಾನ ಮತ್ತೆ ಕರ್ಮದ ಮಹತ್ವ,ಪೂರ್ಣ೦ದ ಪೂರ್ಣವ ತೆಗವದು ಎಲ್ಲವೂ ಇದರ ಓದಿ ಅಪ್ಪಗ ಅರ್ಥ ಆವುತ್ತು.
  ಮಡ್ವ ಶಾಮ್ ಭಟ್ರು ಬರದ ಅಮೂಲ್ಯ ಜ್ಞಾನವ ಬೈಲಿ೦ಗೆ ತ೦ದ ಅಪ್ಪಚ್ಚಿಗೆ ಧನ್ಯವಾದ .

 5. ಉಂಡೆಮನೆ ಕುಮಾರ° says:

  ಕ್ಲಿಷ್ಟ ಸಂಸ್ಕೃತದ ಸಾರ ಸರಳ ಕನ್ನಡಲ್ಲಿ ಕೊಟ್ಟ ಮಡ್ವ ದವಕ್ಕೂ, ಬೈಲಿಂಗೆ ಕೊಟ್ಟ ಶರ್ಮಪ್ಪಚ್ಚಿಗೂ ವಂದನೆಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *