ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು

January 6, 2014 ರ 6:31 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು

ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಪಾಪವಿದ್ಧಮ್ |
ಕವಿರ್ಮನೀಷೀ ಪರಿಭೂಸ್ಸ್ವಯಂಭೂರ್ಯಾಥಾತಥ್ಯऽತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮||

ವಿಭಾಗ:
ಸ ಪರ್ಯಗಾತ್ ಶುಕ್ರಂ ಅಕಾಯಂ ಅವ್ರಣಂ ಅಸ್ನಾವಿರಂ ಶುದ್ಧಂ ಅಪಾಪವಿದ್ಧಮ್ |
ಕವಿಃ ಮನೀಷೀ ಪರಿಭೂಃ ಸ್ವಯಂಭೂಃ ಯಾಥಾತಥ್ಯತಃ ಅರ್ಥಾನ್ ವ್ಯದಧಾತ್ ಶಾಶ್ವತೀಭ್ಯಃ ಸಮಾಭ್ಯಃ ||

ಸರ್ವ ವ್ಯಾಪ್ತನು ದೇಹರಹಿತನು ನ್ಯೂನವಿರದವ ಜ್ಯೋತಿಯು
ಬಂಧರಹಿತನು ಪಾಪರಹಿತನು ಪೂರ್ಣಪ್ರಜ್ಞನು ಶುದ್ಧನು
ಆದಿ ರಹಿತನು ನಿಯಮಕನುಗುಣ ಜ್ಞಾನ ಸಂಪದವೀವನು ||೮||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಅದು ಎಲ್ಲವನ್ನೂ ವ್ಯಾಪಿಸಿರುತ್ತು, ತೇಜೋಮಯವಾಗಿರುತ್ತು, ರೋಗಮುಕ್ತವಾಗಿರುತ್ತು ಮತ್ತೂ ನರಮಂಡಲಂಗಳಿಂದೊಡಗೂಡಿದ ದೇಹ ಅದಾಗಿಂಡಿರುತ್ತಿಲ್ಲೆ. ಅದು  ಸ್ವಚ್ಛವಾಗಿರುತ್ತು, ಪಾಪಂಗಳಿಂದ ಮುಕ್ತವಾಗಿರುತ್ತು, ಶುದ್ಧವಾಗಿರುತ್ತು ಮತ್ತೂ ಅದು ಸ್ವಯಂವೇದ್ಯವಾಗಿರುತ್ತು. ಅದು ಎಲ್ಲೋಡಿಕ್ಕೂ ಎಲ್ಲೋರಲ್ಲಿಯೂ ಇರುತ್ತು. ಆ ಪರಮ ಚೇತನವೇ ನವಗೆ ಕವಿಯೂ ಮನೀಷಿಯೂ ಆಗಿಂಡಿಪ್ಪದು – ಸರ್ವಜ್ಞನೂ ಮನಸ್ಸಿನ ನಿಯಂತ್ರಿಸುವವನೂ ಆಗಿಂಡಿಪ್ಪದು. ಎಲ್ಲಾ ಕಾಲಲ್ಲಿಯೂದೆ (ಶಾಶ್ವತರುಗೊವಕ್ಕೆ – ಶಾಶ್ವತರಾದ ಸಂವತ್ಸರ ರೂಪದ ಪ್ರಜಾಪತಿಗೊವಕ್ಕೆ) ತಕ್ಕುದಾದ ಸಂಪದಂಗಳ ವಿಭಾಗ ಮಾಡಿಕೊಟ್ಟದೂದೆ ಆ ಚೈತನ್ಯವೇ. ಹಾಂಗೆ ಹೇಳಿರೆ ಎಲ್ಲೋರ ಇಚ್ಛೆಗಳ ಪೂರಯಿಸುತ್ಸು ಆ ಪರಮ ಪಾವನ ಚೇತನವಲ್ಲದ್ದೆ ಬೇರೆಯಲ್ಲ ಎಂಬ ಅರ್ಥ.

ದೇಹವೇ ಇಲ್ಲದ್ದ, ಪರಿಶುದ್ಧವಾದ, ರೋಗಂಗೊ ಅಂಟದ್ದ, ಆ ಪರತತ್ತ್ವಕ್ಕೆ ಮೆದುಳು ಬೇಕಾವುತ್ತಿಲ್ಲೆ, ನರಮಂಡಲಂಗೊ ಬೇಕಾವುತ್ತಿಲ್ಲೆ. ಅದು ನಮ್ಮ ಕಣ್ಣಿಗೆ ಕಾಣುವ ಬೆಚಚ್ಚಿಂಗಿಂತ ಭಿನ್ನವಾದ ವಿಶಿಷ್ಟವಾದ ಆನಂದಮಯ ಬೆಚಚ್ಚು. ಅದು ಆಥವಾ  ಆ ಪರಮ ಚೈತನ್ಯ, ಆ ವೈಚಿತ್ರ್ಯ ಎಲ್ಲದಕ್ಕೂ  ಕಾರಣಕರ್ತನಾಗಿಂಡಿದ್ದರೂ ಅದಕ್ಕೆ ಕರ್ಮಬಂಧನ ಇಲ್ಲೆ. ತಿರುತಿರುಗಿದ ಬುಗರಿ ತಿರುಗೆ(ಪುನಃ) ತಿರೆಗುರುಳಿದರೆ(ಭೂಮಿಗೆ ಉರುಳಿಯಪ್ಪಗ) ತಿರಿದುದನು (ಬೇಡಿಗೊಂಡದರ) ತೆರೆದೀವ(ತೆರೆ = ಹುಡುಕಿ, ತೆರೆದೀಯು = ಹುಡುಕಿ ಕೊಡುವದು ಎಂಬ ಅರ್ಥವಲ್ಲ, ಒಂದನ್ನೂ ಬಿಡದ್ದೆ ಎಂಬ ಭಾವ.) – ಬುಗರಿ ತಿರುಗಿದ ಹಾಂಗೆ ನಮ್ಮ ಜೀವನ. ಕರ್ಮಂಗಳ ಮಾಡಿಗೊಂಡೇ ಇರೆಕಾವುತ್ತು, ಮಾಡೆಕ್ಕಾದ ಕರ್ಮಂಗಳ ತಪ್ಪುಸಲೆ ಕ್ಷಣಕಾಲಕ್ಕೂ ಆರಿಂಗೂ ಎಡಿಯ. ಹಾಂಗೆ ತಿರುತಿರುಗಿ ಒಂದು ದಿನ ಉರುಳುವಗ ನಮ್ಮ ನಮ್ಮ  ಕರ್ಮಕ್ಕೆ ಫಲವ ಆ ಪರಮ ಚೇತನ ಕೊಡುತ್ತು.

ಒಂಬತ್ತನೆಯ ಮಂತ್ರಂದ ಮುಂದಂಗೆ ಸಾಧನೆಯ ಮಾರ್ಗದ ವಿವರಣ ಸಿಕ್ಕುತ್ತು.

~ಗೀತ~
ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ

ನಂಬುವುದು ಆದಿಯೊಳು ಪರಮ ಚೇತನ ವಿಭುವ
ಲೋಕವನು ಸೃಷ್ಟಿಸಿದ ಪರದೈವವ
ತಿರುತಿರುಗಿದಾ ಬುಗರಿ ತಿರುಗೆ ತಿರೆಗುರುಳಿದರೆ
ತಿರಿದುದನು ತೆರೆದೀವ ವೈಚಿತ್ರ್ಯವ

~~~~

(ಇನ್ನೂ ಇದ್ದು)

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಲಾಯಕ ಆಯ್ದು ವಿವರಣೆ, ಶುದ್ದಿ

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಧನ್ಯವಾದಂಗೊ ಚೆನ್ನೈಭಾವ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಚೂರಿಬೈಲು ದೀಪಕ್ಕಅನಿತಾ ನರೇಶ್, ಮಂಚಿಕಜೆವಸಂತ°ಮುಳಿಯ ಭಾವಅಕ್ಷರ°ವಾಣಿ ಚಿಕ್ಕಮ್ಮವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣಡೈಮಂಡು ಭಾವಗೋಪಾಲಣ್ಣಬೋಸ ಬಾವಕೆದೂರು ಡಾಕ್ಟ್ರುಬಾವ°ಪಟಿಕಲ್ಲಪ್ಪಚ್ಚಿಕೇಜಿಮಾವ°ಜಯಶ್ರೀ ನೀರಮೂಲೆಡಾಗುಟ್ರಕ್ಕ°ನೆಗೆಗಾರ°ಚೆನ್ನಬೆಟ್ಟಣ್ಣಪ್ರಕಾಶಪ್ಪಚ್ಚಿಚುಬ್ಬಣ್ಣದೇವಸ್ಯ ಮಾಣಿಬಟ್ಟಮಾವ°ಮಾಷ್ಟ್ರುಮಾವ°ಬಂಡಾಡಿ ಅಜ್ಜಿಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ