ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು

November 18, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು

ಓಂ ಈಶಾ ವಾಸ್ಯಮಿದಗ್‍ಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ ||೧||

ಈಶನಿಂದಾವೃತವು ಎಲ್ಲೆಡೆ ಚಲನೆಯಲ್ಲಿಹ ಜಗವಿದು
ಉಣ್ಣು ಆತನು ಇತ್ತ ತುತ್ತನು; ಬಯಸದಿರು  ಪರಸೊತ್ತನು
ಯಾರದೈಸಿರಿ? ಯಾವುದೈಸಿರಿ? ಪರಮ ಸುಖ ಪರಮಾತ್ಮನು ||೧||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಏವೊತ್ತೂ ಚಲನೆಲಿಪ್ಪ ಈ ಜಗತ್ತಿಲಿ ಇಪ್ಪದೆಲ್ಲವನ್ನೂ ಒಳಗೊಂಡವನಾದ ಒಬ್ಬ° ಇದ್ದ°. ಒಳಗೊಂಬದು ಹೇಳಿರೆ ಆವರಿಸುವದು, ಮುಚ್ಚಿಗೊಂಬದು ಹೇಳುವ ಅರ್ಥ. ಎಲ್ಲದರಲ್ಲಿಯೂ ಅವ° ಇದ್ದ°. ಅವನೇ ಜಗದೀಶ್ವರ°. ಅವ° ಕೊಟ್ಟದು ನವಗೆ. ನಮ್ಮ ದುಡಿಮೆಯ ಫಲವಾಗಿ ಬಂದದು ನಮ್ಮದು (ಅಂದಂದ್ರಾಣ ಉಪಯೋಗಕ್ಕಾಗಿ). ಹಾಂಗೆ ಬಂದ ಫಲ ಅನುಭೋಗಿಸುವದು ತಪ್ಪಲ್ಲ. ಆದರೆ ಅದರ ಮೋಹಕ್ಕೆ ತುತ್ತಾಯೆಕ್ಕಾದ್ದಿಲ್ಲೆ. ಅಂಥ ಸಂಪತ್ತು ಶಾಶ್ವತವಾಗಿ ಆರ ಸ್ವತ್ತೂ ಅಲ್ಲ. (ಅದು ಅವನದ್ದು.) ಇನ್ನೊಬ್ಬನ ಸಂಪತ್ತಿನ ಬಗೆಗೆ ವ್ಯಾಮೋಹ ತಪ್ಪು.

ಆ ಪರಮ ಪಾವನ ಚೈತನ್ಯವ ಅರುತಂಡು ನಾವು ಈ ಜಗತ್ತಿಲಿ ಬದುಕ್ಕಿ ಸಾಧಿಸೆಕ್ಕು. ಈ ಜಗತ್ತಿಲಿ ಇಪ್ಪದೆಲ್ಲವನ್ನೂ ಒಳಗೊಂಡವ° ಅವ° ಆದ ಕಾರಣ ಇ ಜಗತ್ತಿಲಿಯೇ ಅವ° ಇದ್ದ° ಹೇಳಿ ಗೊಂತಾವುತ್ತು. ಬುದ್ಧಿಂದಲೂ ಮನಸ್ಸಿಂದಲೂ ನವಗೆ ಪ್ರಾಪ್ತವಾದ ಪ್ರತಿಯೊಂದುದೇ ಅವನ ಆವಾಸಸ್ಥಾನವಾಗಿರುತ್ತು.

ನವಗೆ ಎಲ್ಲೋರಿಂಗೂ ಬಯಕೆಗೊ ಇರುತ್ತು. ಆ ಬಯಕೆಗಳ ಸಾಕ್ಷಾತ್ಕರನ ಆಯೆಕ್ಕಾರೆ ನಾವು ಸಂತತ ಪ್ರಯತ್ನ ಮಾಡೆಕ್ಕಾವುತ್ತು. ಆದರೆ ದುಃಖಂಗೊ ಬಪ್ಪದು ಹಾಂಗಲ್ಲ. ಅದು ಏವೊತ್ತಿಂಗೆ ಬೇಕಾರೂ ಬಕ್ಕು. ಆದ ಕಾರಣ ನಾವು ವೈರಾಗ್ಯಶೀಲರಾಯೆಕ್ಕು. ವೈರಾಗ್ಯ ಹೇಳಿರೆ ಇಹಲೋಕದ ನಿರಾಕರಣವಲ್ಲ. ನಮ್ಮ ಕೆಲಸಂಗಳ ನಾವು ಫಲಾಭಿಸಂಧಿ ಇಲ್ಲದ್ದೆ ಮಾಡೆಕ್ಕು. ಈ ಸಂಪತ್ತು ಶಾಶ್ವತವಾಗಿ ನಮ್ಮದಲ್ಲ; ಅದೆಲ್ಲವೂ ಅವನದ್ದು. ಅವ° ಕೊಟ್ಟದರ ಅನುಭೋಗಿಸುವಗ ಅವನತ್ರೆ ನವಗೊಂದು ಉತ್ತರವಾದಿತ್ವ ಇಪ್ಪದರ ನೆಂಪು ಮಾಡಿಗೊಳೆಕ್ಕು.

(ಇನ್ನೂ ಇದ್ದು)

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ದೇವರು ಕೊಟ್ಟದರಲ್ಲಿ ಚೂರು ಭಾಗವ ಅವಂಗೆ ಕೊಟ್ಟು “ಆನು ಕೊಟ್ಟೆ” ಹೇಳಿ ಜಂಭ ಪಡುವ ಮನುಷ್ಯರಿಂಗೆ ಉತ್ತಮ ಪಾಠ. ಹರೇ ರಾಮ.

  [Reply]

  VA:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಲಾಯಕ ಆತಿದು ವಿವರುಸಿ ಹೇದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಸುವರ್ಣಿನೀ ಕೊಣಲೆಚೆನ್ನೈ ಬಾವ°ಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ಪೆಂಗಣ್ಣ°ಪಟಿಕಲ್ಲಪ್ಪಚ್ಚಿvreddhiವಿದ್ವಾನಣ್ಣದೊಡ್ಡಮಾವ°ದೊಡ್ಮನೆ ಭಾವಅಕ್ಷರ°ಸರ್ಪಮಲೆ ಮಾವ°ಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುಶೇಡಿಗುಮ್ಮೆ ಪುಳ್ಳಿದೊಡ್ಡಭಾವಶಾಂತತ್ತೆದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಒಪ್ಪಕ್ಕಶಾ...ರೀವೆಂಕಟ್ ಕೋಟೂರುಯೇನಂಕೂಡ್ಳು ಅಣ್ಣಪುಟ್ಟಬಾವ°ಡೈಮಂಡು ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ