ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು

February 3, 2014 ರ 9:31 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೆರಡು

ಅಂಧಂ ತಮಃ ಪ್ರವಿಶಂತಿ ಯೇSಸಂಭೂತಿಮುಪಾಸತೇ |
ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಗ್‍ಂ ರತಾಃ ||೧೨||

ಜಗದ ಚಿಂತನೆಯಲ್ಲಿ ಮಗ್ನರು ಕಪ್ಪು ಕತ್ತಲ ಪೊಗುವರು
ಆತ್ಮನಿರತರು ಮರೆತು ಜಗವನು ಹೆಚ್ಚು ಕತ್ತಲ ತುಳಿವರು ||೧೨||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಕುರುಡು ಕತ್ತಲೆ ಗತಿ ಅಸಂಭೂತಿ ಭಜಕರಿಗೆ
ನೆರಳವೊಲ್ ಸರಿಯುತಿಹ ಜಗವ ಪಿಡಿದರ್‍ಗೆ |
ಪಿರಿಯದದಕಿಂತ ಕತ್ತಲೆಯ ಗತಿ ಸಂಭೂತಿ-
ಪರರಿಗಾತ್ಮವನೆಳಸಿ ಜಗವ ಮರೆವರ್‍ಗೆ ||

ಸಂಭೂತಿ ಹೇಳ್ತ ಶಬ್ದದ ಬಗೆಗೆ ಮೊದಲಿಂದಲೂ ವಿಭಿನ್ನಾಪ್ರಾಯಂಗೊ ಇದ್ದು. ಸಾಮಾನ್ಯ ಉಪಯೋಗಲ್ಲಿ ಈ ಶಬ್ದದ ಅರ್ಥ ಆವಿರ್ಭಾವ ಹೇಳಿ ಆವುತ್ತು. ಉತ್ಪತ್ತಿ ಯಾವದಕ್ಕೆ ಇದ್ದೋ ಅದು ಸಂಭೂತಿ. ಅದಕ್ಕೆ ವಿರುದ್ಧವಾದುದು ಪ್ರಕೃತಿ, ಅವ್ಯಾಕೃತ ಅಥವಾ  ಅಸಂಭೂತಿ. ಇಲ್ಲಿ ಅಸಂಭೂತಿ ಹೇಳಿರೆ ಪರಮೇಶ್ವರನ ಉಪಾಧಿಯಾದ ಮಾಯೆ, ಅದು ಪರಬ್ರಹ್ಮ ಅಲ್ಲ. ಪರಬ್ರಹ್ಮಕ್ಕೆ ವಿಕಾರಂಗೊ ಇಲ್ಲದ್ದ ಕಾರಣ ಅದು ಪ್ರಕೃತಿ ಅಲ್ಲ.  ಎಲ್ಲಾ ಕಾಮಕರ್ಮಂಗೊವಕ್ಕೂ ಬೀಜರೂಪವಾಗಿಪ್ಪದು ಈ ಅಸಂಭೂತಿ. ಅದು ಅದರ್ಶನರೂಪಿಣಿಯೂ ಆಗಿಂಡಿದ್ದು. ಅದರ ಉಪಾಸನೆ ಮಾಡುವವು ಉಪಾಸನೆಗೊಳಪಡುವ ವಸ್ತುವಿಂಗೆ ಅನುಗುಣವಾಗಿ ಕತ್ತಲೆಯ ಹೊಗುತ್ತವು. ಹಿರಣ್ಯ ಗರ್ಭ ಹೇಳ್ತ ಕಾರ್ಯಬ್ರಹ್ಮದ ಉಪಾಸನೆ ಮಾಡುವವು ಅದಕ್ಕಿಂತ ಹೆಚ್ಚಿನ ಕತ್ತಲೆಯ ಹೊಗುತ್ತವು. ಅವ್ಯಾಕೃತವಾದ ಪ್ರಕೃತಿಯನ್ನೋ ಹಿರಣ್ಯಗರ್ಭನೆಂಬ ಕಾರ್ಯಬ್ರಹ್ಮವನ್ನೋ ಬೇರೆ ಬೇರೆಯಾಗಿ ಉಪಾಸನೆ ಮಾಡಿರೆ ಅಧಃಪತನವೇ ಫಲವಾಗಿ ಬಪ್ಪ ಕಾರಣ ಎರಡನ್ನೂ ಒಂದೇ ದೃಷ್ಟಿಂದ ಉಪಾಸನೆ ಮಾಡೆಕ್ಕು ಹೇಳುವದು ಶಂಕರ ಭಾಷ್ಯ.

ಪ್ರಕೃತಿಲಿ ಲಯಿಸಿರೂ ಸುಷುಪ್ತಿಲಿ ಇಪ್ಪ ಹಾಂಗೆ ಸಂಸಾರದುಃಖಂಗಳ ಅನುಭವಿಸೆಕ್ಕಾವುತ್ತಿಲ್ಲೆ. ಹಾಂಗಾಗಿ ಆ ಪ್ರಕೃತಿಲಿ ಲಯಿಸಲೆ ಆಶೆಪಡುವವು ಇಕ್ಕು, ಆದರೆ ಪ್ರಕೃತಿ ಸ್ವಾಭಾವಿಕವಾಗಿ ಜಡವಾದ ಕಾರಣ ಯಾವದೇ ಫಲಂಗಳನ್ನೂ ಕೊಡ್ಲೆ ಅಸಮರ್ಥವಾದ ಕಾರಣ ಅದರ ಉಪಾಸನೆ ಮಾಡುಲಾಗೆ ಹೇಳಿ ಹೇಳ್ಲೆ ಎಡಿತ್ತಿಲ್ಲೆ ಏಕೆ ಹೇಳಿರೆ ಕರ್ಮಂಗಳೂ ಇದೇ ರೀತಿಲಿ ಅಚೇತನವಾಗಿಪ್ಪದು; ಅದರ ಉಪಾಸನೆ ಮಾಡುವವಕ್ಕೆ ಫಲಂಗಳ ಭಗವಂತ° ಕೊಡುವ ಹಾಂಗೆ ಪ್ರಕೃತಿಯ ಉಪಾಸನೆ ಮಾಡುವವಕ್ಕು ಫಲಂಗಳ ಕೊಡುಗು.ಇಲ್ಲಿ ವ್ಯಾಕೃತೋಪಾಸನೆಯನ್ನೂ ಅವ್ಯಾಕೃತೋಪಾಸನೆಯನ್ನೂ ಒಟ್ಟೊಟ್ಟಿಂಗೆ ಮಾಡೆಕ್ಕಾವುತ್ತು ಹೇಳಿ ಹೇಳುವ ಕಾರಣ ಆ ಎರಡಕ್ಕೂ ಪ್ರತ್ಯೇಕ ಫಲಂಗೊ ಇದ್ದು ಹೇಳಿ ಗೊಂತಾವುತ್ತು.

~~~***~~~

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಕೆ. ವೆಂಕಟರಮಣ ಭಟ್ಟ

    ಹರೇ ರಾಮ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆವೇಣಿಯಕ್ಕ°ಜಯಗೌರಿ ಅಕ್ಕ°ಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆವಿಜಯತ್ತೆವೇಣೂರಣ್ಣಶಾಂತತ್ತೆದೇವಸ್ಯ ಮಾಣಿಗೋಪಾಲಣ್ಣಪೆಂಗಣ್ಣ°ದೀಪಿಕಾಕೆದೂರು ಡಾಕ್ಟ್ರುಬಾವ°ಶೇಡಿಗುಮ್ಮೆ ಪುಳ್ಳಿಅಡ್ಕತ್ತಿಮಾರುಮಾವ°ಶ್ರೀಅಕ್ಕ°ಅನುಶ್ರೀ ಬಂಡಾಡಿವಿನಯ ಶಂಕರ, ಚೆಕ್ಕೆಮನೆಕಾವಿನಮೂಲೆ ಮಾಣಿಬಂಡಾಡಿ ಅಜ್ಜಿಗಣೇಶ ಮಾವ°ನೀರ್ಕಜೆ ಮಹೇಶಡೈಮಂಡು ಭಾವಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ