ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾಲ್ಕು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನಾಲ್ಕು

ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಗ್‍ಂ ಸಹ |
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾSಮೃತಮಶ್ನುತೇ ||೧೪||

ಈಶ ಪ್ರಕೃತಿಗಳೆರಡ ಜತೆಯಲಿ ತಿಳಿದರದುವೇ ವಿಜಯವು
ಮೃತ್ಯು ವಿಜಯವು ಪ್ರಕೃತಿಯಿಂದಲಿ, ಈಶನಿಂದಲಿ ಅಮೃತವು ||೧೪||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಸ್ಮರಿಸಿ ಸಂಭವ ವಿನಾಶಗಳನೆರಡಂ ಕೂಡ- |
ಲರಿಯಲಾತ್ಮ ಜಗತ್ತುಗಳ ಪರಸ್ಪರವ ||
ದುರಿತ ಮೃತ್ಯುಗಳ ಮಾಯಾನಾಶದಿಂ ದಾಟಿ |
ಪರಮಾಮೃತವ ಪಡೆವನಾತ್ಮ ದರ್ಶನದಿಂ ||

ಹಿರಣ್ಯಗರ್ಭೋಪಾಸನೆಯನ್ನೂ ಅವ್ಯಾಕೃತೋಪಾಸನೆಯನ್ನೂ ಒಂದೇ ಪುರುಷಾರ್ಥದ ಸಾಧಕವಾಗಿಯೂ ಒಬ್ಬನೇ ಅನುಷ್ಠಾನ ಮಾಡೆಕ್ಕಾದ್ದು ಹೇಳಿಯೂ ತಿಳುದವ° ಹಿರಣ್ಯಗರ್ಭೋಪಾಸನೆಂದಲಾಗಿ ಅನೈಶ್ವರ್ಯ, ಅಧರ್ಮ, ಕಾಮ ಮೊದಲಾದ ದೋಷಂಗಳ ರೂಪಲ್ಲಿಪ್ಪ ಮೃತ್ಯುವಿನ ದಾಂಟುತ್ತ°. ಹಿರಣ್ಯಗರ್ಭೋಪಾಸನೆಂದಲಾಗಿ ಅಣಿಮಾದಿ ಐಶ್ವರ್ಯಂಗಳ ಪಡೆತ್ತ°, ಅವ್ಯಾಕೃತೋಪಾಸನೆಂದಲಾಗಿ ಪ್ರಕೃತಿಲಯರೂಪಿಯಾದ ಅಮೃತತ್ವವನ್ನೂ ಪಡೆತ್ತ°.

ಅಂಗಸೌಷ್ಠವ, ದನಗೊ, ಭೂಮಿ, ಚಿನ್ನ ಮೊದಲಾದವುಗಳಿಂದ ಸಿಕ್ಕುವ ಮಾನುಷಿಕ ವಿತ್ತಂದಲೂ ದೇವತಾಜ್ಞಾನವಾದ ದೈವ ವಿತ್ತಂದಲೂ ಸಾಧಿಸೆಕ್ಕಾದ ಫಲ ಪ್ರಕೃತಿಲಿ ಲಯಿಸುವದು ಹೇಳಿ ಗೊಂತಾವುತ್ತು. ಸಂಸಾರಗತಿ ಇಪ್ಪದು ಇಲ್ಲಿಯವರೆಗೆ ಮಾಂತ್ರ. ಇದಾದ ನಂತರ ಸರ್ವೈಷಣಗಳನ್ನೂ ಬಿಟ್ಟು ಜ್ಞಾನನಿಷ್ಠೆಯ ಫಲವಾಗಿ ಸಿಕ್ಕುವ “ಆತ್ಮೈವಾಭೂದ್ವಿಜಾನತಃ” ಹೇಳ್ತಲ್ಲಿ ಬಪ್ಪ ಸರ್ವಾತ್ಮಭಾವ ಸಿಕ್ಕುತ್ತು ಹೇಳಿ ಗೊಂತಾವುತ್ತು. ಈ ರೀತಿಲಿ ಪ್ರವೃತ್ತಿರೂಪವಾಗಿಯೂ ನಿವೃತ್ತಿರೂಪವಾಗಿಯೂ ಎರಡು ವಿಧವಾಗಿಪ್ಪ ವೇದಾರ್ಥವನ್ನೂ ನೋಡಿಯಾತು. ಅದರಲ್ಲಿ ಪ್ರವೃತ್ತಿರೂಪವಾದ ವೇದಾರ್ಥ ವಿಧಿರೂಪವಾಗಿಯೂ ನಿಷೇಧರೂಪವಾಗಿಯೂ ಇಪ್ಪದು. ಅದರ ವಿವರಂಗೊ ಬ್ರಾಹ್ಮಣಂಗಳಲ್ಲಿ ಬತ್ತು. ನಿವೃತ್ತಿರೂಪವಾದ  ವೇದಾರ್ಥಂಗಳ ಕುರಿತಾದ ವಿವರಂಗೊ ನವಗೆ ಬೃಹದಾರಣ್ಯಕೋಪನಿಷತ್ತಿಲಿ ಸಿಕ್ಕುತ್ತು. ನಿಷೇಕಂದ ತೊಡಗಿ ಸ್ಮಶಾನದವರೆಗಿಪ್ಪ ಕರ್ಮಂಗಳ ಮಾಡಿಗೊಂಡು ಪರಬ್ರಹ್ಮ ವಿಷಯವಲ್ಲದ್ದ ವಿದ್ಯೆಯೊಟ್ಟಿಂಗೆ ಬದುಕ್ಕುವವು ಕರ್ಮಂದ ಮೃತ್ಯುವಿನ ಗೆದ್ದು ಅಮೃತತ್ವವ ಪಡೆವದು “ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಗ್‍ಂ ಸಹ, ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾSಮೃತಮಶ್ನುತೇ” ಎಂಬಲ್ಲಿ ಹೇಳ್ತ ಹಾಂಗೆ ಯಾವ ಮಾರ್ಗಲ್ಲಿ ಅಮೃತತ್ವವ ಪಡೆವಲಾವುತ್ತು ಹೇಳುವ ವಿವರಂಗೊ ಸಿಕ್ಕುತ್ತು. “ತದ್ಯತ್ತತ್ಸತ್ಯಮಸೌ ಸ ಆದಿತ್ಯೋಯ ಏಷ ಏತಸ್ಮಿನ್ ಮಂಡಲೇ ಪುರುಷೋ ಯಶ್ಚಾಯಂ ದಕ್ಷಿಣೇಕ್ಷನ್ ಪುರುಷಃ” ಹೇಳ್ತ ಹಾಂಗೆ ಆದಿತ್ಯ ಮಂಡಲಲ್ಲಿ ನೆಲೆಸಿದ ಸತ್ಯಸ್ವರೂಪನಾದ ಪುರುಷನೂ ಕರ್ಮಮಾರ್ಗಲ್ಲಿ ದೃಷ್ಟಿಯ ನೆಟ್ಟ ಪುರುಷನೂ ಒಬ್ಬನೇ ಹೇಳಿ ಜಾನ್ಸಿ ಸತ್ಯವಾದ ಬ್ರಹ್ಮವ ಉಪಾಸನೆ ಮಾಡಿಗೊಂಡೂ ಯಥಾವಿಧಿ ಕರ್ಮಂಗಳ ಮಾಡಿಗೊಂಡೂ ಇಪ್ಪವ° ಅವಸಾನಕಾಲಲ್ಲಿ ಅಮೃತತ್ವ ಪ್ರಾಪ್ತಿಗಿಪ್ಪ ದಾರಿಯ ತೋರುಸಲೆ ಪರಮ ಚೇತನದ ಹತ್ತರೆ ಬೇಡಿಗೊಳುತ್ತ°.
~~~***~~~

ಬೊಳುಂಬು ಕೃಷ್ಣಭಾವ°

   

You may also like...

1 Response

  1. ಕೆ. ವೆಂಕಟರಮಣ ಭಟ್ಟ says:

    ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *