ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು

November 25, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಪತಗ್‍ಂ ಸಮಾಃ |
ಏವಂ ತ್ವಯಿ ನಾನ್ಯಥೇತೋSಸ್ತಿ ನ ಕರ್ಮ ಲಿಪ್ಯತೇ ನರೇ ||೨||

ಬಾಳು ಈ ತೆರ ಕರ್ಮಗೈಯುತ ನೂರು ವರುಷದ ಜೀವನ
ಬೇರೆ ದಾರಿಯೆ ಇಲ್ಲ ಮನುಜನೆ; ಇರದು ಕರ್ಮದ ಲೇಪನ ||೨||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಏವೊತ್ತೂ ಚಲಿಸಿಗೊಂಡಿಪ್ಪ ಈ ಜಗತ್ತಿಲಿ, ಮಾಡೆಕ್ಕಾದ ಕರ್ಮಂಗಳ ತಪ್ಪುಸಲೆ ಕ್ಷಣಕಾಲಕ್ಕೂ ಆರಿಂಗೂ ಎಡಿಯ. ಗೀತೆಲಿ ಭಗವಾನ್ ಹೇಳುವದೂ ಇದನ್ನೇ. ಮೂಲೋಕಂಗಳಲ್ಲಿ ಎನಗೆ ಸಾಧನೀಯವಾದ್ದದು ಏವದೂ ಇಲ್ಲದ್ದರುದೇ ಆನು ನಿರಂತರ ಪರಿಶ್ರಮಲ್ಲಿರುತ್ತೆ. ಇದರ ಭಗವಾನ್ ವೇದವ್ಯಾಸರು ಹೇಳಿದ್ದದು ಎಂಬ ದೃಷ್ಟಿಂದಲೂ ನೋಡುಲಾವುತ್ತು. ಕರ್ಮಂಗಳ ಮಾಡಿಗೊಂಡೇ ಇರೆಕ್ಕಾವುತ್ತು. ಹಾಂಗೆ ಮಾಡಿದ ಕರ್ಮಂಗಳ ಗುಣಾವಗುಣಂಗೊವಕ್ಕೆ ಹೊಂದಿಗೊಂಡು ಅದಕ್ಕೆ ತಕ್ಕ ಫಲವೂ ಇರುತ್ತು. ಆ ಫಲಕ್ಕೆ ತಕ್ಕ ಹಾಂಗೆ ಕರ್ಮಬಂಧನಂಗಳೂ ಇರುತ್ತು.

ಎಲ್ಲವನ್ನೂ ಒಳಗೊಂಡ ಜಗದೀಶ್ವರನಾದ ಪರಮ ಚೈತನ್ಯವ ಮನಸ್ಸಿಲಿ ಕಂಡಂಡು ಮಾಡುವ ಕರ್ಮಂಗೊವಕ್ಕೆ ಬಂಧನಂಗೊ ಇರುತ್ತಿಲ್ಲೆ.

ಋಷಿವಾಣಿಯ ತಾತ್ಪರ್ಯ, ನವಗೆ ಜಗತ್ತಿಲಿ ಕರ್ಮಂಗಳ ಮಾಡಿಗೊಂಡೂ ನೂರು ವರುಷ ಬದುಕ್ಕುವ ಇಚ್ಛೆ ಇರೆಕ್ಕು ಹೇಳಿ ಆವುತ್ತು. ವೈರಾಗ್ಯಶೀಲನಾದವಂಗೆ ನೂರು ವರುಷ ಬದುಕ್ಕುವ ಇಚ್ಛೆ ಎಂತಕೆ ಎಂಬ ಸಂಶಯವೂ ಬಕ್ಕು. ವೈರಾಗ್ಯದ ಚರಮ ಉದ್ದೇಶವೇ ಮೋಕ್ಷ, ಹಾಂಗಾಗಿ ‘ನೂರು ವರುಷ ಫಲಾಭಿಸಂಧಿ ಇಲ್ಲದ್ದೆ ಮಾಡುವ ಕರ್ಮ’ ಹೇಳ್ತ ಆದರ್ಶವ ಮಡಿಗಿಗೊಂಡದು. ವೈರಾಗ್ಯ ಹೇಳಿರೆ ಇಹಲೋಕದ ನಿರಾಕರಣವಲ್ಲ ಹೇಳ್ತದರ ನೆಂಪು ಮಾಡಿಗೊಳೆಕ್ಕು. ನಾವು ಮಾಡೆಕ್ಕಾದ್ದರ ಮಾಡಿ ತೀರ್ಮಾನವ ಅವಂಗೆ ಬಿಡೆಕ್ಕು. ಗುಣವಿವೇಚನವೂ ನವಗಿರೆಕ್ಕು, ಎಂತಕೆ ಹೇಳಿರೆ ನಾವು ಮಾಡುವ ಎಲ್ಲಾ ಕರ್ಮಂಗಳನ್ನೂ ಗುಣಂಗು ಬಾಧಿಸುತ್ತು.

ಆ ಚೈತನ್ಯದ ಒಂದಂಶ ಮಾಂತ್ರ ನಾವು. ಮಾಡುವವು ನಾವಲ್ಲ, ಮಾಡುಸುವವ° ಅವ°. ಹಾಂಗಾಗಿ ನಮ್ಮ ಎಲ್ಲ ಕರ್ಮಂಗಳನ್ನೂ ಅವಂಗೆ ಅರ್ಪಿಸುವೊ°.

(ಇನ್ನೂ ಇದ್ದು)

ಈಶಾವಾಸ್ಯೋಪನಿಷತ್ತು - ಶ್ಲೋಕ ಎರಡು, 10.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಒಳ್ಳೇ ಸಂದೇಶ. ಹರೇ ರಾಮ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಕೃತಜ್ಞತೆಗೊ ವೆಂಕಟರಮಣ ಭಾವಾ.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಉಪಯುಕ್ತ ಕಾರ್ಯ. ಹರೇ ರಾಮ ಬೊಳುಂಬು ಭಾವ

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಕೃತಜ್ಞತೆಗೊ ಚೆನ್ನೈ ಭಾವಾ. ನಿಂಗೊ ಒದಗುಸಿಕೊಟ್ಟ ಭಗವದ್ಗೀತೆಯ ವಿವರಂಗಳ ಋಣ ಎನಗಿದ್ದು.

  [Reply]

  VN:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಶ್ಮಿ

  ಕರ್ಮ ಮಾಡ್ವಾಗ ಗೊಣಗದ್ದೆ, ಕರ್ತವ್ಯದೃಷ್ಟಿ೦ದ ಮಾಡೆಕ್ಕು- ಹೇಳ್ವದು ಇದರ ತಾತ್ಪರ್ಯ ಅಲ್ಲದಾ?

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ನಿಂಗೊ ಹೇಳಿದ್ದು ಸರಿ, ‘ನಮ್ಮ ಕರ್ಮಂಗಳ ನಾವು ಸಮರ್ಪಣೆಯ ದೃಷ್ಟಿಂದ ಮಾಡೆಕ್ಕು’ ಹೇಳ್ತು ಋಷಿವಾಣಿ. ಭಗವದ್ಗೀತೆಯ ಮೂರನೆಯ ಅಧ್ಯಾಯದ ಐದನೆಯ ಶ್ಲೋಕಲ್ಲಿ ಭಗವಾನ್ ಹೇಳಿದ್ದದೂ ಇದನ್ನೇ.

  ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
  ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥

  [Reply]

  VN:F [1.9.22_1171]
  Rating: 0 (from 0 votes)
 4. ಲಕ್ಷ್ಮಿ ಜಿ.ಪ್ರಸಾದ

  ಆನು ಭಾಷಣ ಮಾಡುವಾಗ ಸುಮಾರು ಸರ್ತಿ ಈ ಶ್ಲೋಕವ ಉದಾಹರ್ಸಿತ್ತಿದೆ ಆದರೆ ಇದು ಎಲ್ಲಿ ಇಪ್ಪ ಶ್ಲೋಕ ಮೂಲ ಯಾವುದು ಹೇಳಿ ಎನಗೆ ಗೊಂತಿತಿಲ್ಲೇ ,ಒಳ್ಳೆ ಮಾಹಿತಿ ಕೊತ್ತದಕ್ಕೆ ಧನ್ಯವಾದಂಗ ಬೊಳುಂಬು ಕೃಷ್ಣಭಾವ°
  ನಿಷ್ಕಾಮಂದ ಹೇಳ್ರೆ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದ್ದೆ ಕರ್ಮವ ಮಾಡಿದವಂಗೆ ಕರ್ಮದ ಲೇಪ ಇಲ್ಲೇ ,ಅದು ಅಂಟುತಿಲ್ಲೇ ಹೇಳುವ ಈ ಶ್ಲೋಕ ತುಂಬಾ ಮನನೀಯವಾದ್ದು

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಧನ್ಯವಾದ ಲಕ್ಷ್ಮಿ ಅಕ್ಕ. ನಿಂಗಳ ಭಾಷಣಲ್ಲಿ ಹೀಂಗಿಪ್ಪ ಸಂಗತಿಗಳ ಸೇರುಸಿಗೊಂಬದು ಕಂಡು ಕೊಶಿ ಆತು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ರೀಅಕ್ಕ°ಹಳೆಮನೆ ಅಣ್ಣಅಜ್ಜಕಾನ ಭಾವದೊಡ್ಮನೆ ಭಾವಡಾಮಹೇಶಣ್ಣಮಾಲಕ್ಕ°ದೊಡ್ಡಭಾವಬಟ್ಟಮಾವ°ಪವನಜಮಾವದೇವಸ್ಯ ಮಾಣಿಅನು ಉಡುಪುಮೂಲೆಪ್ರಕಾಶಪ್ಪಚ್ಚಿಪುಟ್ಟಬಾವ°ಜಯಗೌರಿ ಅಕ್ಕ°ಉಡುಪುಮೂಲೆ ಅಪ್ಪಚ್ಚಿದೀಪಿಕಾಚೆನ್ನಬೆಟ್ಟಣ್ಣಸಂಪಾದಕ°ಬೋಸ ಬಾವಕೊಳಚ್ಚಿಪ್ಪು ಬಾವಕೇಜಿಮಾವ°ಚೂರಿಬೈಲು ದೀಪಕ್ಕಅಕ್ಷರದಣ್ಣವಾಣಿ ಚಿಕ್ಕಮ್ಮಸರ್ಪಮಲೆ ಮಾವ°ರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ