Oppanna.com

ಈಶಾವಾಸ್ಯೋಪನಿಷತ್ತು – ಶ್ಲೋಕ ಮೂರು

ಬರದೋರು :   ಬೊಳುಂಬು ಕೃಷ್ಣಭಾವ°    on   02/12/2013    6 ಒಪ್ಪಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಮೂರು
ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾವೃತಾಃ |
ತಾಗ್‍ಂಸ್ತೇ ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ ||೩||
 ಅಸುರ ತಾಮಸ ಭೋಗ ತಾಣವು ಅಲಸಿ ಸುಖಿಗಳ ದುಃಸ್ಥಿತಿ
ಆತ್ಮ ಘಾತಿಗಳಾದ ಜನರಿಗೆ ದೇಹದಂತ್ಯದ ದುರ್ಗತಿ ||೩||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.
ಆತ್ಮಕ್ಕೆ ಸಾವಿಲ್ಲೆ. ದೇಹವನ್ನೇ ತಾನೆಂದು ತಿಳಿದವ° ಅಜ್ಞಾನಿ. ಮನುಷ್ಯರಲ್ಲಿ ವಿಭಾಗ ಮಾಡ್ಲೆ ಎಡಿತ್ತರೆ ಅದು ಅವರವರ ಗುಣಧರ್ಮವ ಅನುಸರಿಸಿಗೊಂಡು ಮಾಂತ್ರ. ತನ್ನ ಪಾಲಿನ ಕರ್ಮಂಗಳ ಮಾಡದ್ದೆ ಇಪ್ಪದು ತನ್ನ ತಾನು ಕೊಂದುಗೊಂಬದಕ್ಕೆ ಸಮ. ಹಾಂಗೆ ಮಾಡಿದವು ಮರಣಾನಂತರ ಆಸುರ ಲೋಕವ ಹೊಗುತ್ತವು.
ಸುರುವಾಣ ಎರಡು ಶ್ಲೋಕಂಗಳನ್ನೂ ಸೇರುಸಿಯೇ ಇದರ ಅರ್ಥ ಮಾಡಿಗೊಳೆಕ್ಕು. ತನ್ನ ಪಾಲಿನ ಕರ್ಮಂಗ ಮಾಡಿಗೊಂಡಿರೆಕ್ಕು, ಅದರ ಫಲಾಭಿಸಂಧಿ ಇಲ್ಲದ್ದೆ ಮಾಡೆಕ್ಕು. ನಾವು ಮಾಡುವ ಕರ್ಮಂಗೊ ನಮ್ಮ ಉಪಾಸನೆಯ ಹಾದಿ. ಆ ಉಪಾಸನೆಯ ಚರಮ ಉದ್ದೇಶವೇ ಆತ್ಮಶೋಧನೆ ಅಥವಾ ಆತ್ಮಜ್ಞಾನ. ಎಲ್ಲವನ್ನೂ ಒಳಗೊಂಡ, ಎಲ್ಲೋರನ್ನೂ ನಿಯಂತ್ರಿಸುವ ಪರಮ ಪಾವನ ಚೈತನ್ಯವ ತಿಳಿಯೆಕ್ಕಾರೆ ಇದುವೇ ಹಾದಿ. ಹೀಂಗಾಗಿ ನಾವು ಕರ್ಮಯೋಗಲ್ಲಿ ನಿರತರಾಗಿರೆಕ್ಕು. ಹಾಂಗೆ ಮಾಡದ್ದೆ ಇಪ್ಪವಕ್ಕೆ ಮೋಕ್ಷ ಇಲ್ಲೆ.
ಗೀತ – ಅಂತರಾತ್ಮ
ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ
 ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ
 ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ
 ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
 ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ
 ದೂರವಾಗಿದ್ದುದರ ಇರವನ್ನು ತಿಳಿಯಿಸುತ್ತ
ಮಾಯೆಯನು ನೀಗಿಸುತ್ತ ನೀ ಪೊರೆದೆಯೈ
(ಇನ್ನೂ ಇದ್ದು)

6 thoughts on “ಈಶಾವಾಸ್ಯೋಪನಿಷತ್ತು – ಶ್ಲೋಕ ಮೂರು

  1. ಹರೇ ರಾಮ.
    ವಿವರಣೆಗೊ ಲಾಯಿಕಿದ್ದು.

  2. ಹರೇ ರಾಮ
    ಭಗವದ್ಗೀತೆಲಿಯೂ ಇದೇ ಆಶಯವ ಭಗವಂತ° ವಿವರಿಸಿದ್ದ° ಅಪ್ಪೋ ಮೂರನೇ ಅಧ್ಯಾಯಲ್ಲಿ. ಈಶಾವಾಸ್ಯೋಪನಿಷತ್ತು ವಿವರಣೆ ಲಾಯಕ ಬತ್ತಾ ಇದ್ದು ಬೊಳುಂಬು ಭಾವ.

    1. ಅಪ್ಪು, ಮೂರನೆಯ ಅಧ್ಯಾಯದ ಐದನೆಯ ಶ್ಲೋಕಲ್ಲಿ ಹೀಂಗೆ ಹೇಳ್ತ°,
      “ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
      ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥೫॥”

    1. ಧನ್ಯವಾದ ವೆಂಕಟರಮಣ ಮಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×