ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು

ಈಶಾವಾಸ್ಯೋಪನಿಷತ್ತು – ಶ್ಲೋಕ ಹದಿನೈದು

ಹಿರಣ್ಮಯೇನ ಪಾತ್ರೇಣ ಸತ್ಯ ಸ್ಯಾಪಿಹಿತಂ ಮುಖಮ್ |
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||೧೫||

ಹೊನ್ನ ಮುಚ್ಚಳದಿಂದ ಮುಚ್ಚಿದೆ ಕಾಣದಂತೆಯೆ ಸತ್ಯವ
ಜೀವ ಪೋಷಕ! ಮುಚ್ಚಲೆತ್ತುತ ತೋರು ಸತ್ಯವ ಧರ್ಮವ ||೧೫||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಹೊನ್ನ ತಟ್ಟೆಯ ಕವಿದು, ಪೋಷಕನೆ, ಓ ಸೂರ್ಯ |
ನಿನ್ನೊಳಿಹ ಸತ್ಯದಾನನವ ಮರೆಯಿಸಿಹೆ ||
ನನ್ನಿಯಿಂ ತೆಗೆ ಅದನು; ಸತ್ಯದೊಳ್ ಮನವೆನಗೆ |
ಎನ್ನ ಕಣ್ಗದ ತೋರು, ಧರ್ಮಬೀಜವದು ||

ಇದುವರೆಗೆ ಆತ್ಮತತ್ತ್ವದ ಬಗೆಗೆ ಹೇಳಿದ್ದವು. ಆದರೆ ಆತ್ಮ ನಿರಾಕಾರ ವಸ್ತುವಾದ ಕಾರಣ ಲೋಕಲ್ಲಿ ಕಾಂಬಲೆ ಎಡಿತ್ತಿಲ್ಲೆ. ಹಾಂಗಾದ ಕಾರಣ ಅದರ ಗ್ರಹಿಸಿಗೊಂಬಲೆ ಸಾಮಾನ್ಯ ಬುದ್ಧಿಗೆ ಕಷ್ಟ. ಎಲ್ಲೋರಿಂಗೂ ಹೀಂಗಿಪ್ಪ ಗಹನ ವಿಷಯಂಗಳ ಅರ್ಥ ಮಾಡ್ಸಿಕೊಡ್ಲೆ ಬೇಕಾಗಿ ಪ್ರತ್ಯಕ್ಷ ವಸ್ತುಗಳ ಆತ್ಮಚೈತನ್ಯದ ಪ್ರತೀಕಂಗಳಾಗಿ ತೆಕ್ಕೊಂಡು ಋಷಿಗೊ ಹೇಳಿಕೊಡುತ್ತವು. ಸೂರ್ಯನೂ ಅಗ್ನಿಯೂ ಆ ವಸ್ತುಗೊ ಹೇಳಿ ಗೊಂತಾವುತ್ತು. ಹೀಂಗಿಪ್ಪ ಪ್ರತೀಕಂಗೊ ಎಲ್ಲೋರಿಂಗೂ ಸುಲಭವಾಗಿ ಅರ್ಥ ಅಪ್ಪ ಹಾಂಗಿಪ್ಪದು. ಅವುಗಳಲ್ಲಿಪ್ಪ ಜ್ಯೋತಿ ಆ ಪರತತ್ತ್ವ ಚೇತನದ ಒಂದು ಅಂಶ. ಆ ಜ್ಯೋತಿಯೂ ಮನುಷ್ಯನ ಅಂತರಾತ್ಮದ ಒಳಾಣ ದೃಷ್ಟಿಶಕ್ತಿರೂಪವಾದ ಚಿದಂಶವೂ ಒಂದೇ ವಸ್ತು. ಹಾಂಗಾಗಿ ಸೂರ್ಯ-ಅಗ್ನಿ ತೇಜಸ್ಸಿನ ಮೂಲಕ ಆತ್ಮ ಸ್ವರೂಪವ ಮನಗಾಂಬಲೆ ನವಗೆ ನಿರಾಕಾರ ಬ್ರಹ್ಮಧ್ಯಾನಕ್ಕಿಂತ ಸುಲಭ ಆವುತ್ತು.

ಆದಿತ್ಯ ಮಂಡಲಲ್ಲಿ ನೆಲೆಗೊಂಡ ಸತ್ಯಾತ್ಮರೂಪಿಯಾದ ಪರಬ್ರಹ್ಮಕ್ಕಿಪ್ಪ ಪ್ರವೇಶದ್ವಾರ ತೇಜೋಮಯವಾದ ಚಿನ್ನದ ಮುಚ್ಚಲಿಂದ ಮುಚ್ಚಿಗೊಂಡಿದ್ದು. ಹೇ ಪೂಷನ್! ಸತ್ಯಸ್ವರೂಪಿಯಾದ ನಿನ್ನ ಉಪಾಸನೆ ಮಾಡುವ ಅಥವಾ ನಿಜವಾದ ಧರ್ಮವ ಉಪಾಸನೆ ಮಾಡುವ ಎನಗೆ ನಿನ್ನ ಕಾಂಬಲೆ ಎಡಿವ ಹಾಂಗೆ ಆ ಮುಚ್ಚಲಿನ ತೆಗದು ಕೊಡು. ಪರಬ್ರಹ್ಮ ನಿರ್ಗುಣ ನಿರಾಕಾರ ವಸ್ತು. ಸಾಮಾನ್ಯರಿಂದ ಅದರ ಅರ್ಥ ಮಾಡಿಗೊಂಬಲೆಡಿಯ. ಹಾಂಗೆ ಎಲ್ಲೋರ ಸೌಲಭ್ಯಕ್ಕೆ ಬೇಕಾಗಿ ಪರತತ್ತ್ವದ ಸಗುಣಸಾಕಾರರೂಪನಾದ ಸೂರ್ಯನ ಇಲ್ಲಿ ಸ್ತೋತ್ರ ಮಾಡಿದ್ದು.

~~~***~~~

 

ಬೊಳುಂಬು ಕೃಷ್ಣಭಾವ°

   

You may also like...

3 Responses

 1. ಕೆ. ವೆಂಕಟರಮಣ ಭಟ್ಟ says:

  ಹರೇ ರಾಮ.

 2. ಬೊಳುಂಬು ಕೃಷ್ಣಭಾವ° says:

  ವೆಂಕಟರಮಣ ಮಾವ,
  ಎಲ್ಲಾ ಸಂಚಿಕೆಗಳನ್ನೂ ಓದಿ ಒಪ್ಪ ಕೊಟ್ಟದಕ್ಕೆ ಧನ್ಯವಾದಂಗೊ.

 3. ಚೆನ್ನೈ ಭಾವ says:

  ಆನೂ ವಾರ ವಾರ ಓದಿ ಕದ್ದು ಇಳುಶಿ ಮಡುಗಿದ್ದೆ. ಮತ್ತೆ ಒಂದರಿ ಅಕೇರಿಗೆ ಒಟ್ಟಿಂಗೆ ಎಲ್ಲವ ಓದಲೆ ಹೇದು. (ಬೊಳುಂಬು ಕೃಷ್ಣಭಾವನತ್ರೆ ಹೇಳೆಡಿ ಆತೋ ಇಳುಶಿ ಮಡಿಗಿದ್ದೆ ಹೇದು). ಒಳ್ಳೆ ಸಂಗ್ರಹಯೋಗ್ಯ . ಹರೇ ರಾಮ ಭಾವಯ್ಯನ ಈ ಕೆಲಸಕ್ಕೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *