ಈಶಾವಾಸ್ಯೋಪನಿಷತ್ತು – ಶ್ಲೋಕ ಆರು

December 23, 2013 ರ 6:31 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು

ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ |
ಸರ್ವ ಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ||೬||

ಯಾರು ಜೀವಿಗಳೆಲ್ಲ ತನ್ನೊಳ ಆತ್ಮವೆಂದೇ ತಿಳಿವರು
ಅವರೆ ಜೀವಿಗಳಲ್ಲಿ ತನ್ಮಯ ಹೊಂದಿ ದ್ವೇಷವ ತೊರೆವರು ||೬||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಪರತತ್ತ್ವ ಎಂಬುದು ಸರ್ವವ್ಯಾಪ್ತವಾದ್ದು. ಸೃಷ್ಟಿಲಿಪ್ಪ ಗುಣಂಗಳೂ ಪ್ರಕೃತಂಗಳೂ ಸೃಷ್ಟಿಕರ್ತನಲ್ಲಿ ಇಪ್ಪದಲ್ಲದ್ದೆ ಬೇರೆಯಲ್ಲ. ಮನಸ್ಸಿಂಗೂದೆ ಸೃಷ್ಟಿಕರ್ತನದ್ದಲ್ಲದ್ದ ಸ್ವತಂತ್ರ ಅಸ್ತಿತ್ವ ಇಲ್ಲೆ. ಆತ್ಮ ಸ್ವಯಂಪ್ರಕಾಶ ಆಗಿಂಡಿಪ್ಪದು. ಪರತತ್ತ್ವವಾದ ಪರಬ್ರಹ್ಮ ಎಲ್ಲವನ್ನೂ ಒಳಗೊಳುತ್ತು, ಆದರೆ ಅದರ ಒಳಗೊಂಬದು ಇನ್ನೇವದೂ ಇಲ್ಲೆ. ಅದು ಹುಟ್ಟಿದ್ದಿಲ್ಲೆ, ಅದು ಸಾವಲು ಇಲ್ಲೆ. ಪರಬ್ರಹ್ಮವೊಂದೇ ಸತ್ಯ. ಅದರ ಇರವಿನ ಎಲ್ಲೋಡಿಕ್ಕೂ ಮನಗಾಣೆಕ್ಕು. ಜೀವಜಂತುಗಳಲ್ಲಿ ತನ್ನನ್ನೇ ಕಾಂಬವಂಗೆ ತಾನೇ ಅದಾಗಿಂಡಿಪ್ಪದು ಅನುಭವಕ್ಕೆ ಬತ್ತು. ಇದು ಧ್ಯಾನಸ್ಥಿತಿಯ ಮೂರ್ಧನ್ಯಾವಸ್ಥೆ. ಹೀಂಗಿಪ್ಪವ° ಇನ್ನೊಬ್ಬನತ್ರೆ ದ್ವೇಷ ಮಾಡಿಗೊಳ°. ಸಂಶಯಕ್ಕೆ (ಪರಮಾರ್ಥದ ಬಗೆಗೆ) ತುತ್ತಾವುತ್ತನಿಲ್ಲೆ ಹೇಳ್ತ ಇನ್ನೊಂದು ವ್ಯಾಖ್ಯಾನವೂ ಇದ್ದು.

ಗೀತ
ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ

ನೋವು ನಲಿವಿನ ಬಾಳ್ವೆ ಹದವಾಗಿ ಬೆರೆಸಿಟ್ಟು
ಎನಗೆ ಊಡಿಸಿದವನು ನೀನಲ್ಲವೇ
ನಿನ್ನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ನಡೆಯಿಸಿದವನು ನೀನಲ್ಲವೇ

~~~

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಕೆ. ವೆಂಕಟರಮಣ ಭಟ್ಟ

    ಹರೇ ರಾಮ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀವೇಣೂರಣ್ಣಒಪ್ಪಕ್ಕಬಂಡಾಡಿ ಅಜ್ಜಿಪುತ್ತೂರುಬಾವಪುತ್ತೂರಿನ ಪುಟ್ಟಕ್ಕಪೆರ್ಲದಣ್ಣಎರುಂಬು ಅಪ್ಪಚ್ಚಿಚುಬ್ಬಣ್ಣದೊಡ್ಡಭಾವತೆಕ್ಕುಂಜ ಕುಮಾರ ಮಾವ°ಸಂಪಾದಕ°vreddhiವಿನಯ ಶಂಕರ, ಚೆಕ್ಕೆಮನೆಯೇನಂಕೂಡ್ಳು ಅಣ್ಣದೇವಸ್ಯ ಮಾಣಿಸರ್ಪಮಲೆ ಮಾವ°ಗಣೇಶ ಮಾವ°ಅಕ್ಷರ°ಬೋಸ ಬಾವಉಡುಪುಮೂಲೆ ಅಪ್ಪಚ್ಚಿಸುಭಗಅನಿತಾ ನರೇಶ್, ಮಂಚಿಶ್ಯಾಮಣ್ಣಅಕ್ಷರದಣ್ಣದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ