ಈಶಾವಾಸ್ಯೋಪನಿಷತ್ತು – ಶ್ಲೋಕ ಒಂಬತ್ತು

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂಬತ್ತು

ಅಂಧಂ ತಮಃ ಪ್ರವಿಶಂತಿ ಯೇSವಿದ್ಯಾಮುಪಾಸತೇ |
ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಗ್‍ಂ ರತಾಃ ||೯||

ಜ್ಞಾನವಿಲ್ಲದೆ ಕರ್ಮಗೈಯುವರಂಧಕಾರವ ಪೊಗುವರು
ಜ್ಞಾನವಿದ್ದರು ಕರ್ಮ ಹೀನರು ಘೋರ ಕತ್ತಲ ತುಳಿವರು ||೯||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಶಾಮ ಭಟ್ಟರ ಅನುವಾದಕ್ಕೆ ಎಣೆಯಿಲ್ಲೆ. ಅವಿದ್ಯೆಯ ಉಪಾಸನೆ ಮಾಡುವವು ಕುರುಡು ಕತ್ತಲಿನ ಹೊಗುತ್ತವು, ವಿದ್ಯೆಯೊಂದರಲ್ಲಿಯೇ ನಿರತರಾದವು ಇನ್ನೂ ಹೆಚ್ಚಿನ ಕತ್ತಲಿನ ಹೊಗುತ್ತವು. ಇನ್ನೊಂದು ರೀತಿಲಿ ಹೇಳುತ್ತರೆ, ಜ್ಞಾನವಿಲ್ಲದ್ದೆ ಕರ್ಮನಿರತರಾದವು ಕತ್ತಲಿನ ಹೊಗುತ್ತವು, ಮಾಡೆಕ್ಕಾದ ಕರ್ಮಂಗಳ ಮಾಡದ್ದೆ ಜ್ಞಾನಾರ್ಜನೆಲಿ ನಿರತರಾದವಕ್ಕೂ ಅದುವೇ ಗೆತಿ. ಕರ್ಮವೂ ವಿದ್ಯೆಯೂ ಒಂದಕ್ಕೊಂದು ಪೂರಕವಾಗಿಪ್ಪದು ಇಲ್ಲಿ ಗೊಂತಾವುತ್ತು.

ಭಗವದ್ಗೀತೆಯ ಮೂರನೆಯ ಅಧ್ಯಾಯದ ಐದನೆಯ ಶ್ಲೋಕಲ್ಲಿ ಭಗವಾನ್ ಹೀಂಗೆ ಹೇಳ್ತ°,
“ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥೫॥”

“ಏವದನ್ನೇ ಮಾಡಿರೂ ತಿಳುದು ಮಾಡೆಕ್ಕು, ತಿಳುದು ಮಾಡಿದ ಕರ್ಮ ಸಫಲ. ಇಲ್ಲದ್ದರೆ ಅದು ವ್ಯರ್ಥ ಆವುತ್ತು.” ಹೇಳಿ ಛಾಂದೋಗ್ಯೋಪನಿಷತ್ತಿಲಿ ಬತ್ತು. ಮಾಡುವ ಕರ್ಮವ ನಾವು ಎಂತಕೆ ಮಾಡುತ್ತು, ಮಾಡಿರೆ ಎಂತ ಆವುತ್ತು, ಮಾಡದ್ದರೆ ಎಂತ ಆವುತ್ತು – ಇದು ಗೊಂತಿರೆಕ್ಕು. ಅಜ್ಞಾನಲ್ಲಿ ಮಾಡಿದ ಕರ್ಮ ವ್ಯರ್ಥ. ನಮ್ಮ ಅನುಭವಕ್ಕೆ ಬಾರದ್ದ ಜ್ಞಾನಂದ ನವಗೆ ಏವದೇ ಪ್ರಯೋಜನ ಇಲ್ಲೆ.  ಸತ್ಯ ಅವರವರ ಅನುಭವಕ್ಕೆ ತಂದುಗೊಂಬಲೆ ಇಪ್ಪದು, ಸಾಧಕಂಗೆ ಸಾಧುಸಲೆ ಇಪ್ಪದು. ಅವಿದ್ಯೆಯೆಂಬುದು ಜ್ಞಾನರಾಹಿತ್ಯ, ಅಜ್ಞಾನ. ಅಜ್ಞಾನಲ್ಲಿ ಮಾಡಿದ್ದದು ಯಾವದಿದ್ದರೂ, ಒಳ್ಳೆಯದರ ನಿರೀಕ್ಷೆಲಿ ಮಾಡಿದ್ದರೂದೆ; ಮುಕ್ತಿದಾಯಕವಲ್ಲ. ಇದು ದೇಹವೇ ಆತ್ಮವೆಂದು ತಿಳುದು ಮಾಡುವ ಪ್ರಯತ್ನಂಗೊ. ಇನ್ನು ಆತ್ಮದ ಇರವಿನ ಅರಿತವನೇ ಆದರೂ ಮಾಡೆಕ್ಕಾದ ಕರ್ಮಂಗಳ ಮಾಡದ್ದೆ ಇದ್ದರೆ ಏವ ಪ್ರಯೋಜನವೂ ಆವುತ್ತಿಲ್ಲೆ. ಕರ್ಮ ವಿದ್ಯೆಗೆ ವಿರೋಧಿ ಆದ ಕಾರಣ ಅದಕ್ಕೆ ಅವಿದ್ಯೆ ಹೇಳಿ ಹೆಸರು. ಅವಿದ್ಯೆಯ ಉಪಾಸನೆ ಮಾಡುವದು ಹೇಳಿಯರೆ ಅಗ್ನಿಹೋತ್ರಾದಿ ಕರ್ಮಂಗಳಲ್ಲಿ ನಿರತವಾಗಿಪ್ಪದು. ಅವಿದ್ಯೆ ಸತ್ಯ-ಮಿಥ್ಯೆಗಳ ಬಗೆಗೆ ಸಂದೇಹ ಉಂಟುಮಾಡುತ್ತು. ಪರತತ್ತ್ವವಾದ ಪರಬ್ರಹ್ಮನೇ ಎಲ್ಲೋಡಿಕ್ಕೂ ಎಲ್ಲೋರಲ್ಲಿಯೂ ನೆಲೆಸಿಪ್ಪದು ಹೇಳಿ ಗೊಂತಪ್ಪಗ ಈ ಸಂದೇಹಕ್ಕೆ ಪರಿಹಾರ ಸಿಕ್ಕುತ್ತು. ಹಾಂಗಾಗಿ ಜ್ಞಾನದ ಸಂಪಾದನೆಯೊಂದೇ ಮೋಕ್ಷದಾಯಕವಲ್ಲ, ಕರ್ಮವುದೇ ಇರೆಕ್ಕು ಹೇಳಿ ಗೊಂತಾವುತ್ತು.

~~~~

ಬೊಳುಂಬು ಕೃಷ್ಣಭಾವ°

   

You may also like...

1 Response

  1. ಕೆ. ವೆಂಕಟರಮಣ ಭಟ್ಟ says:

    ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *