ಈಶಾವಾಸ್ಯೋಪನಿಷತ್ತು – ಶ್ಲೋಕ ಹತ್ತು

ಈಶಾವಾಸ್ಯೋಪನಿಷತ್ತು – ಶ್ಲೋಕ ಹತ್ತು

ಅನ್ಯದೇವಾಹುರ್ವಿದ್ಯಯಾSನ್ಯದಾಹುರವಿದ್ಯಯಾ |
ಇತಿ ಶುಶ್ರುಮ ಧೀರಣಾಂ ಯೇ ನಸ್ತದ್ವಿಚಚಕ್ಷಿರೇ ||೧೦||

ಜ್ಞಾನಕರ್ಮಗಳೆರಡು ತರುವವು ಭಿನ್ನ ಭಿನ್ನದ ಫಲಗಳ
ಆತ್ಮಜ್ಞಾನಿಗಳಿಂದ ತಿಳಿದೆವು ಶ್ರುತಿ ವಿಚಾರದ ಬೋಧೆಯ ||೧೦||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ವಿದ್ಯೆಂದಲೂ ಅವಿದ್ಯೆಂದಲೂ ಸಿಕ್ಕುವ ಫಲಂಗೊ ಬೇರೆ ಬೇರೆ. “ವಿದ್ಯಯಾ ದೇವಲೋಕಃ ವಿದ್ಯಯಾ ತದಾರೋಹಂತಿ” ಎಂಬ ಶ್ರುತಿವಾಕ್ಯದ ಪ್ರಕಾರ ವಿದ್ಯೆಂದ ದೇವಲೋಕ ಸಿದ್ಧಿಸುತ್ತು. “ಕರ್ಮಣಾ ಪಿತೃಲೋಕಃ” ಹೇಳಿಯೂ ಇದ್ದು. ವಿದ್ಯೆಯೆಂಬ ಜ್ಞಾನವೂ ಅವಿದ್ಯೆಯಂಬ ಕರ್ಮವೂ ಮುಕ್ತಿಮಾರ್ಗಲ್ಲಿ ಮನುಷ್ಯಂಗೆ ಬೇಕಪ್ಪ ಸಾಧನಂಗೊ. ಇನ್ನೊಂದು ರೀತಿಲಿ ಹೇಳ್ತರೆ, ನಾವು ಸಾಧುಸೆಕ್ಕಾದ್ದದು ಏವದಿದ್ದೋ; ಅದರ ಸಾಧುಸಲೆ ನವಗೆ ಜ್ಞಾನವೂ ಬೇಕಾವುತ್ತು, ಕರ್ಮವೂ ಬೇಕಾವುತ್ತು. ವಿಷಯದ ಬಗೆಗೆ ಗೊಂತಿದ್ದರೆ ಮಾಂತ್ರ ಸಾಲ, ಸತತ ಪ್ರಯತ್ನವೂದೆ ಇರೆಕಾವುತ್ತು. ವಿದ್ಯೆಯದು ಉಪಾಸನೆಯ ಮಾರ್ಗ, ಅವಿದ್ಯೆಯದು ಕರ್ಮಸಾಧನೆಯ ಮಾರ್ಗ. ತಾನು ಮಾಡುವ ಕರ್ಮಂಗಳ ಫಲಾಭಿಸಂಧಿ ಇಲ್ಲದ್ದೆ ಮಾಡಿಗೊಂಡು ಸಿಕ್ಕಲಿಪ್ಪ ಕರ್ಮಫಲದ ತೀರ್ಮಾನವ ಆ ಪರಮ ಚೈತನ್ಯಕ್ಕೆ ಅರ್ಪಿಸುವದು ಮುಕ್ತಿಮಾರ್ಗಲ್ಲಿ ವಿಜಯಕ್ಕೆ ಸೋಪಾನ. ಲೌಕಿಕವಾದ ಗೆಲುವಿಂಗೂ ಇದು ಅನ್ವಯಿಸುತ್ತು.

ಭಗವದ್ಗೀತೆಯ ಮೂರನೆಯ ಅಧ್ಯಾಯದ ಮೂರನೆಯ ಶ್ಲೋಕಲ್ಲಿ ಭಗವಾನ್ ಹೀಂಗೆ ಹೇಳ್ತ°,
“ಲೋಕೇsಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ ।
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ ॥೦೩॥”

ಜ್ಞಾನಯೋಗ ಹೇಳಿಯೂ ಕರ್ಮಯೋಗ ಹೇಳಿಯೂ ಎರಡು ವಿಧವಾದ ಶ್ರದ್ಧೆಗೊ ಇರುತ್ತಡ. ಕರ್ಮಕ್ಕಿಂತ ವಿದ್ಯೆಯೇ ಶ್ರೇಷ್ಠ  ಹೇಳ್ತ ಅಭಿಪ್ರಾಯ ಇದ್ದು. ಹಾಂಗೆ ಹೇಳಿಯರೆ ಜ್ಞಾನಕ್ಕಾಗಿ ಕರ್ಮತ್ಯಾಗ ಮಾಡೆಕ್ಕು ಹೇಳಿ ಆವುತ್ತು. ಲೌಕಿಕ ಧರ್ಮದ ಪಾಲನೆಯೇ ಸರಿ ಹೇಳಿಯೂ ಹೇಳುವವು ಇದ್ದವು. ಈ ಸಮಸ್ಯೆಗೆ ಪರಿಹಾರ ಇಲ್ಲಿ ಸಿಕ್ಕುತ್ತು. ಸಮನ್ವಯವೇ ಜೀವನದ ಸೂತ್ರ, ಜ್ಞಾನಿಗಾದರೂ ಕರ್ಮದ ತಿರಸ್ಕಾರ ಸಮರ್ಥನೀಯವಲ್ಲ.

ಥಿಯೊರಿಯನ್ನೋ ಪ್ರಾಕ್ಟಿಕಲನ್ನೋ ಏವದಾರು ಒಂದನ್ನೇ ಮಾಡ್ತೆ ಹೇಳಿಗೊಂಡು ಹೆರಟವಂಗೆ ವಾಸ್ತವಲ್ಲಿ ಇಪ್ಪದು ತಿಳಿದೆನೆಂಬ ಭ್ರಮೆಯೊಂದೇ. ಎರಡರ ಸಮನ್ವಯ ನಮ್ಮ ಜೀವನಲ್ಲಿ ಬೇಕಾವುತ್ತು. ವಿಷಯವ ಓದಿ ತಿಳುಕ್ಕೊಂಬದರ ಒಟ್ಟಿಂಗೆ ಮಾಡಿ ಕಲಿಯೆಕ್ಕಾದ್ದನ್ನೂ ಕಲಿಯೆಕ್ಕು. ಪುಸ್ತಕಂದ ಓದಿ ಕಲ್ತದು ಎಲ್ಲವೂ ನಿಜವೇ ಆಗಿರೆಕ್ಕು ಹೇಳಿ ಇಲ್ಲೆ. ಪುಸ್ತಕಂಗಳಲ್ಲಿ ಇಪ್ಪದು ಒಂದೊಂದಾರಿ ಲೊಟ್ಟೆಯೂ ಆಗಿರುತ್ತು. ಇನ್ನೂ ಕೆಲವು ಏವದೋ ಪಿತೂರಿದೋ ಹುನ್ನಾರದ್ದೋ ಭಾಗವಾಗಿರುತ್ತು. ನಮ್ಮ ಗೆಣಪ್ಪನ ಬಗೆಗೆ ಪುಸ್ತಕ ಬರದ್ದದು ನವಗೆ ಗೊಂತಿಪ್ಪದೇ. ಹೀಂಗಿದ್ದರೂದೆ ಪುಸ್ತಕಂಗಳಲ್ಲಿ ಇಪ್ಪದರ ವಿಶ್ಲೇಷಣಮಾಡಿ ನಿಜವ ಗ್ರಹಿಸುವ ಮಾನಸಿಕ ಶಕ್ತಿ ನವಗೆ ಬೇಕಾವುತ್ತು. ಇದೇ ತತ್ತ್ವದ ವಿವರಣೆ ಹನ್ನೊಂದನೆಯ ಶ್ಲೋಕಲ್ಲಿ ಮುಂದರಿತ್ತು.

~~~***~~~

ಬೊಳುಂಬು ಕೃಷ್ಣಭಾವ°

   

You may also like...

1 Response

  1. ಕೆ. ವೆಂಕಟರಮಣ ಭಟ್ಟ says:

    ಹರೇ ರಾಮ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *