ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು

December 30, 2013 ರ 6:31 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು

ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ |
ತತ್ರ ಕೋ ಮೋಹಃ ಕಶ್ಯೋಕ ಏಕತ್ವಮನುಪಶ್ಯತಃ ||೭||

ಸರ್ವಪ್ರಾಣಿಗಳಲ್ಲಿ ನೆಲೆಸಿಹುದೆನ್ನ ಆತ್ಮವೆ ಎನ್ನಲು
ಮೋಹವೆಲ್ಲಿದೆ? ಶೋಕವೆಲ್ಲಿದೆ? ಸರ್ವ ಸಮತೆಯ ಕಾಣಲು ||೭||
– ಇದು ಡಾ| ಶಾಮ ಭಟ್ಟ, ಮಡ್ವ ಇವರ ಅನುವಾದ.

ಜೀವಜಂತುಗಳಲ್ಲಿ ತನ್ನನ್ನೇ ಕಾಂಬವಂಗೆ ಮೋಹವೋ ಶೋಕವೋ ಇಲ್ಲದ್ದೆ ಎಲ್ಲವೂ ಸಮಾನವಾಗಿಪ್ಪದು ಅನುಭವಕ್ಕೆ ಬತ್ತು. ಮದಲೇ ಹೇಳಿದ ಹಾಂಗೆ ಇದು ಧ್ಯಾನಸ್ಥಿತಿಯ ಮೂರ್ಧನ್ಯಾವಸ್ಥೆಲಿ ಅಪ್ಪ ಅನುಭವ. ಸಕಲ ಜೀವಜಂತುಗಳಲ್ಲಿ ತನ್ನನ್ನೂ, ತನ್ನಲ್ಲಿ ಸಕಲ ಜೀವಜಂತುಗಳನ್ನೂ ಕಾಂಬಲೆ ಎಡಿವವ° ಯೋಗಿ ಹೇಳಿ ಭಗವದ್ಗೀತೆಯ ಆರನೆಯ ಅಧ್ಯಾಯದ ಇಪ್ಪತೊಂಬತ್ತನೆಯ ಶ್ಲೋಕಲ್ಲಿ ಭಗವಾನ್ ಹೇಳಿದ್ದ°.

ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾsತ್ಮನಿ |
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ||

ಧ್ಯಾನಯೋಗಕ್ಕೆ ಮಾನಸಿಕವಾಗಿ ತಯಾರಾದವಂಗೆ ಸಕಲ ಜೀವಜಂತುಗಳಲ್ಲಿ ತನ್ನನ್ನೂ, ತನ್ನಲ್ಲಿ ಸಕಲ ಜೀವಜಂತುಗಳನ್ನೂ ಕಾಂಬಲೆ ಎಡಿತ್ತು. ತನ್ಮೂಲಕ ಪರಮಾತ್ಮನನ್ನೂ ಕಾಂಬಲೆ ಎಡಿತ್ತು. ಇದು ಸಾಧನೆಗೆ ಒಂದು ಸೋಪಾನ.

ಪರತತ್ತ್ವವಾದ ಪರಬ್ರಹ್ಮನ ಕಾಂಬಲೆ ತಪಸ್ಸು ಬೇಕಾವುತ್ತು. ಅದಕ್ಕೆ ಉಪಾಸನೆಯೇ ಮಾರ್ಗ. ತಪಸ್ಸಿಂದಲಾಗಿ ಮನಸ್ಸಿಂಗೆ ಏಕಾಗ್ರತೆಯೊದಗಿ ಸೃಜನಶೀಲ ಚೈತನ್ಯದ ಉದ್ದೀಪನ ಅಪ್ಪದರೊಟ್ಟಿಂಗೆ ಮನಸ್ಸೂದೆ ಸಂಸ್ಕಾರಗೊಳುತ್ತು. ಈ ರೀತಿಲಿ ಉಪಾಸನೆಯ ಮೂಲಕ ಪರತತ್ತ್ವದ ಅರಿವು ಬಂದಪ್ಪಗ ಮನಸ್ಸಿನ ಇಷ್ಟಾನಿಷ್ಟಂಗಳೋ, ಸುಖ-ದುಃಖಂಗಳೋ, ಆಕರ್ಷಣ-ವಿಕರ್ಷಣಂಗಳೋ ಅನುಭವಕ್ಕೆ ಬತ್ತಿಲ್ಲೆ, ಆಲೋಚನೆ ತಟಸ್ಥವಾಗಿರುತ್ತು. ಧ್ಯಾನಸ್ಥಿತಿಯ ಶಿಖರಾಗ್ರಲ್ಲಿ ಆನಂದ ಅನುಭವಕ್ಕೆ ಬತ್ತು. ಆದಿಯೋ ಅಂತ್ಯವೋ ಇಲ್ಲದ್ದ ಪರಮ ಚೇತನದ; ಪರಿಪೂರ್ಣತೆಯ ಅನುಭವ ಆವುತ್ತು.

ಗೀತ
ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ

ಕ್ಷಣದೊಂದು ಮಾಯೆಯಲಿ ಹತ್ತು ಹಲ ಬಣ್ಣಗಳ
ಸಿಂಪರಿಸಿ ಮೆರೆದವನು ನೀನಲ್ಲವೇ
ಹಲವಾರು ರೂಪಿನಲಿ ಧರಿಸಿ ಮಾರೊಡಲುಗಳ
ಅಳವಿರದೆ ಇತ್ತವನು ನೀನಲ್ಲವೇ

~~~

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಗೀತದ ಚಿಂತನೆಯೂ ಒಪ್ಪ ಆಯಿದು.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಧನ್ಯವಾದಂಗೊ ತೆಕ್ಕುಂಜ ಮಾವ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಅನು ಉಡುಪುಮೂಲೆನೀರ್ಕಜೆ ಮಹೇಶದೊಡ್ಡಮಾವ°ಗೋಪಾಲಣ್ಣಚೆನ್ನಬೆಟ್ಟಣ್ಣದೀಪಿಕಾಮಂಗ್ಳೂರ ಮಾಣಿಶೇಡಿಗುಮ್ಮೆ ಪುಳ್ಳಿಶುದ್ದಿಕ್ಕಾರ°ಬಟ್ಟಮಾವ°ಕಳಾಯಿ ಗೀತತ್ತೆಶಾ...ರೀಚೂರಿಬೈಲು ದೀಪಕ್ಕಮುಳಿಯ ಭಾವಶ್ರೀಅಕ್ಕ°ಯೇನಂಕೂಡ್ಳು ಅಣ್ಣವಿನಯ ಶಂಕರ, ಚೆಕ್ಕೆಮನೆಡಾಮಹೇಶಣ್ಣರಾಜಣ್ಣಎರುಂಬು ಅಪ್ಪಚ್ಚಿಹಳೆಮನೆ ಅಣ್ಣಒಪ್ಪಕ್ಕಶಾಂತತ್ತೆವೇಣಿಯಕ್ಕ°ನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ