ಗಾಯತ್ರೀ ಸಾವಿತ್ರೀ ಸರಸ್ವತೀ

November 28, 2011 ರ 6:30 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್  ಗೀತಾಂಜಲಿ” ಪುಸ್ತಕಂದ ಗಾಯತ್ರೀ ಸಾವಿತ್ರೀ ಸರಸ್ವತೀ ಯ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಗಾಯತ್ರೀ ಸಾವಿತ್ರೀ ಸರಸ್ವತೀ
(ಮಹಾನಾರಾಯಣೋಪನಿಷತ್-ಕೃಷ್ಣ ಯಜುರ್ವೇದ)

ಓಮಿತ್ಯೇಕಾಕ್ಷರಂ ಬ್ರಹ್ಮ | ಅಗಿರ್ದೇವತಾ ಬ್ರಹ್ಮ ಇತ್ಯಾರ್ಷಮ್ |

ಗಾಯತ್ರಂ ಛಂದಂ ಪರಮಾತ್ಮಂ ಸರೂಪಮ್ | ಸಾಯುಜ್ಯಂ ವಿನಿಯೋಗಮ್ ||೧||

ಆಯಾತು ವರದಾ ದೇವೀ ಅಕ್ಷರಂ ಬ್ರಹ್ಮ ಸಂಮಿತಮ್ |

ಗಾಯತ್ರೀಂ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವ ಮೇ ||೨||

ಯದಹ್ನಾತ್ ಕುರುತೇ ಪಾಪಂ ತದಹ್ನಾತ್ ಪ್ರತಿಮುಚ್ಯತೇ |

ಯದ್ರಾತ್ರಿಯಾತ್ ಕುರುತೇ ಪಾಪಂ ತದ್ರಾತ್ರಿಯಾತ್ ಪ್ರತಿಮುಚ್ಯತೇ |

ಸರ್ವ ವರ್ಣೇ ಮಹಾದೇವಿ ಸಂಧ್ಯ ವಿದ್ಯೇ ಸರಸ್ವತಿ || ೩||

ಓಜೋಸಿ ಸಹೋಸಿ ಬಲಮಸಿ ಭ್ರಾಜೋಸಿ ದೇವಾನಾಂ ಧಾಮ ನಾಮಾಸಿ

ವಿಶ್ವಮಸಿ ವಿಶ್ವಾಯುಃ ಸರ್ವಮಸಿ ಸರ್ವಾಯುರಭಿಬೂರೋಂ ಗಾಯತ್ರೀಮಾವಾಹಯಾಮಿ

ಸಾವಿತ್ರೀಮಾವಾಹಯಾಮಿ ಸರಸ್ವತೀಮಾವಾಹಯಾಮಿ

ಚ್ಛಂದರ್ಷಿನಾವಾಹಯಾಮಿ ಶ್ರಿಯಮಾವಾಹಯಾಮಿ ಗಾಯತ್ರಿಯಾ

ಗಾಯತ್ರೀಚ್ಛಂದೋ ವಿಶ್ವಾಮಿತ್ರ ಋಷಿಸ್ಸವಿತಾ ದೇವತಾಗ್ನಿರ್ಮುಖಂ

ಬ್ರಹ್ಮಾ ಶಿರೋ ವಿಷ್ಣು ಹೃದಯಗ್ಂ ರುದ್ರಶ್ಶಿಖಾ ಪೃಥಿವೀ ಯೋನಿಃ

ಪ್ರಾಣಾಪಾನವ್ಯಾನೋದಾನ ಸಮಾನಾ ಸಪ್ರಾಣಾ ಶ್ವೇತವರ್ಣಾ

ಸಾಂಖ್ಯಾಯನ ಸಗೋತ್ರಾ ಗಾಯತ್ರೀ ಚತುರ್ವಿಗ್ಂಶತ್ಯಕ್ಷರಾ ತ್ರಿಪದಾ

ಷಟ್ಕುಕ್ಷಿಃ ಪಂಚ ಶೀರ್ಷೋಪನಯನೇ ವಿನಿಯೋಗಃ ||೪||

ಓಂ ಭೂಃ | ಓಂ ಭುವಃ | ಓಗ್ಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ |

ಓಗ್ಂ ಸತ್ಯಮ್ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ |

ಧಿಯೋಯೋನಃ ಪ್ರಚೋದಯಾತ್ | ಓಮಾಪೋಜ್ಯೋತೀರಸೋಮೃತಂ ಬ್ರಹ್ಮ ಬೂರ್ಭುವಸ್ಸುವರೋಮ್ ||೫||

ಗಾಯತ್ರಿ ಸ್ತುತಿ (ಕನ್ನಡ ಗೀತೆ)

ಓಮ್ ಎಂಬಾಕ್ಷರವೆ ಬ್ರಹ್ಮನು, ಸಂಜ್ಞೆಯಿಂ ಪರಮಾತ್ಮನು

ಅಗ್ನಿ ದೇವತೆ,ಋಷಿಯು ಬ್ರಹ್ಮನು, ಛಂದಸೇ ಗಾಯತ್ರಿಯು

ವಿಶ್ವವ್ಯಾಪ್ತನು ಶ್ರೇಷ್ಠನಾತ್ಮನು ಮೋಕ್ಷಕಿದುವೇ ಮಾರ್ಗವು ||೧||

ಒಲಿದು ಬಾರೋ, ವರವನೀವಳೆ! ಜ್ಞಾನ ಕರುಣಿಸು ವೇದದ

ನೀಡು ನೀ ಗಾಯತ್ರಿ ಮಾತೆಯೆ ಈಶನರಿಯುವ ವಿದ್ಯೆಯ ||೨||

ಹಗಲು ಗೈದಿಹ ಪಾಪ ಕರ್ಮವು ಹಗಲು ನಾಶವೆ ಹೊಂದಲಿ

ರಾತ್ರಿ ಗೈದಿಹ ಪಾಪಕರ್ಮವು ರಾತ್ರಿಯೇ ಕೊನೆಯಾಗಲಿ

ಸಂಧಿಕಾಲದ ವಿದ್ಯೆಯಕ್ಷರ ವರ ಸರಸ್ವತಿ ನೀಡಲಿ ||೩||

ಕಾಂತಿಯಾಗಿಹೆ, ತಾಳ್ಮೆಯಾಗಿಹೆ, ಶಕ್ತಿ ಪ್ರಭೆಯನು ಹೊಂದಿಹೆ

ದೇವತೆಗಳಿಗೆ ಧಾಮ ನಾಮವು ವಿಶ್ವ ಜೀವನವಾಗಿಹೆ

ಎಲ್ಲರಲ್ಲಿಯು ದೀರ್ಘದಾಯುವು ಶತ್ರು ನಾಶಿನಿಯಾಗಿಹೆ

ಪ್ರಣವವೇ ಗಾಯತ್ರಿ ಬಂದಿರು ಸರಸ್ವತಿಯೆ ಸಾವಿತ್ರಿಯೆ

ಸ್ವಾಗತವು ಗಾಯತ್ರಿ ದೇವಿಗೆ ಮತ್ತು ಋಷಿಮುನಿ ಜನರಿಗೆ

ಸರ್ವ ಸಂಪದ ಬರಲಿ ನನ್ನೆಡೆ ಛಂದಸಿನ ಗಾಯತ್ರಿಯೆ

ಋಷಿಯು ವಿಶ್ವಾಮಿತ್ರನಾಗಿಹ ದೇವತೆಯೇ ಸವಿತೃವು

ಮೋರೆ ಅಗ್ನಿಯು, ತಲೆಯು ಬ್ರಹ್ಮನು,ಹೃದಯವಾಗಿದೆ ವಿಷ್ಣುವು

ಜಟೆಯು ರುದ್ರನು, ಉಗಮ ಭೂಮಿಯು, ಪ್ರಾಣದಿಂ ಕೂಡಿರುವುದು

ಪ್ರಾಣಾಪಾನ ವ್ಯಾನೋದಾನ ಇನ್ನು ಸಮಾನವೆಂಬುದು

ಬಿಳಿಯ ಬಣ್ಣವು, ಸಾಂಖ್ಯ ಮುನಿಗಳ ಗೋತ್ರ, ಮತ್ತಕ್ಷರಗಳು

ಇಹುದು ಇಪ್ಪತ್ನಾಲ್ಕು, ಅದರಲಿ ಮೂರು ಪಾದಗಳಿರುವುವು

ಆರು ಅಂಗಗಳಿಂದ ಕೂಡಿದ ಐದು ತಲೆಗಳ ದೇಹವು

ಈತಳೇ ಗಾಯತ್ರಿ ಮಂತ್ರವು ದೀಕ್ಷೆಯಿಂದುಪನಯನವು ||೪||

ಭೂಮಿ ಪ್ರಣವವು ಭುವನ ಪ್ರಣವವು ಸ್ವರ್ಗವಾಗಿದೆ ಪ್ರಣವವು

ಮಧ್ಯೆ ಪ್ರಣವವು ಉಗಮ ಪ್ರಣವವು ಸತ್ಯವೆಲ್ಲವು ಪ್ರಣವವು

ಪ್ರಣವ ಪೂರ್ವಕ ಧ್ಯಾನಗೊಳ್ಳಲು ಪರಮ ಪೂಜ್ಯನು ಸೂರ್ಯನು

ಪ್ರಜ್ಞೆ ಪ್ರೇರಣೆ ನೀಡಲಾತನು ನಮ್ಮ ಬುದ್ಧಿಗೆ ಮಹಿಮನು

ಪ್ರಣವನಾತನು ಜಲವು ಜ್ಯೋತಿಯು ರಸವು ಅಮೃತ ಬ್ರಹ್ಮನು

ಮೂರು ಲೋಕದ ಸ್ವಾಮಿಯಾತನು ಪ್ರಣವನಾಗಿಹನೀಶನು ||೫||

*********************

ಗಾಯತ್ರೀ ವಿಸರ್ಜನಂ

ಉತ್ತಮೇ ಶಿಖರೇ ಜಾತೇ ಭ್ಯೂಮ್ಯಾಂ ಪರ್ವತ ಮೂರ್ಧನಿ |

ಬ್ರಾಹ್ಮಣೇಭ್ಯೋಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಮ್ ||೬||

ಸ್ತುತೋ ಮಯಾ ವರದಾ ವೇದ ಮಾತಾ |
ಪ್ರಚೋದಯಂತೀ ಪವನೇ ದ್ವಿಜಾತಾ|
ಆಯುಃ ಪೃಥಿವ್ಯಾಂ ದ್ರವಿಣಂ ಬ್ರಹ್ಮ ವರ್ಚಸಂ |
ಮಹ್ಯಂ ದತ್ವಾ ಪ್ರಜಾತುಂ ಬ್ರಹ್ಮ ಲೋಕಂ  ||೭||

ಗಾಯತ್ರೀ ವಿಸರ್ಜನ ಮಂತ್ರ (ಕನ್ನಡ ಗೀತೆ)

ಭೂಮಿ ಮೇಗಡೆ ಗಿರಿಯು ಶಿಖರದಿ ನೀನು ಇಚ್ಛಿಪ ಸ್ಥಳದಲಿ

ಮುಂದೆ ಧ್ಯಾನಿಪ ತನಕ ವಿಪ್ರರು ಹೋಗಿ ವಿರಮಿಸು ಸುಖದಲಿ ||೬||

ವೇದಮಾತೆಯೆ, ವರವಿದಾತೆಯೆ ಸ್ತುತಿಯ ಗೈದಿಹೆ ನಿನ್ನಯ

ನೀಡು ಜೀವನ ವಂಶ ಪಾವನ ಪಶು ಸಮೃದ್ಧಿಯ ಕೀರ್ತಿಯ

ನೀಡು ಐಸಿರಿ ಬ್ರಹ್ಮ ತೇಜವ ವಿಪ್ರಜನರಿಗೆ ಇಲ್ಲಿಯ

ನನಗು ನೀಡುತ ಸೇರು ಸನ್ನಿಧಿ ಬ್ರಹ್ಮ ಲೋಕದ ಧಾಮವ ||೭||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಉಪನಿಷತ್ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ

ಗಾಯತ್ರೀ ಸಾವಿತ್ರೀ ಸರಸ್ವತೀ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಗೋಪಾಲಣ್ಣ

  ಉತ್ತಮ ಶಿಖರಲ್ಲಿ ಹುಟ್ಟಿದ ಗಾಯತ್ರಿ ಉನ್ನತ ಆದರ್ಶದ ಪ್ರಾರ್ಥನೆ.ದೇವರ ಹತ್ತರೆ ಸಂಪತ್ತು ಕೊಡು,ಅದು ಕೊಡು,ಇದು ಕೊಡು ಹೇಳಿ ಕೇಳದ್ದೆ ಎಂಗಳ ಮನಸ್ಸಿನ ಅರಳಿಸು,ಬುದ್ಧಿಯ ಪ್ರಚೋದಿಸು ಹೇಳಿ ಕೇಳುದು ಎಷ್ಟು ಅರ್ಥಪೂರ್ಣ ಅಲ್ಲದೊ?ಬುದ್ಧಿ ಸರಿ ಇದ್ದರೆ ಎಲ್ಲವೂ ಸರಿ ಅಕ್ಕು!

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ನೂರಕ್ಕೆ ನೂರರಷ್ಟು ಸತ್ಯ…

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಖಂಡಿತಾ ಅಪ್ಪು. !

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಸಂಧ್ಯಾವಂದನೆ ಬೈಲಿಲಿ ಮೂಡಿಬಂದ ದಿನವೇ ಸಂಧ್ಯಾವಂದನೆಲಿ ಬಪ್ಪ ಗಾಯತ್ರೀ ಸ್ತುತಿ ಇಲ್ಲಿ ಕನ್ನಡನುವಾದ ಸಹಿತ ನೋಡಿ ಖುಶೀ ಆತು. ಲಾಯಕ ಆಯ್ದು ಹೇಳಿ ಮೆಚ್ಚುಗೆಯ ಒಪ್ಪ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಪವನಜಮಾವಡಾಮಹೇಶಣ್ಣಪ್ರಕಾಶಪ್ಪಚ್ಚಿಒಪ್ಪಕ್ಕವಿದ್ವಾನಣ್ಣವಾಣಿ ಚಿಕ್ಕಮ್ಮಕೆದೂರು ಡಾಕ್ಟ್ರುಬಾವ°ಪುತ್ತೂರಿನ ಪುಟ್ಟಕ್ಕಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ಕಳಾಯಿ ಗೀತತ್ತೆವಸಂತರಾಜ್ ಹಳೆಮನೆಮಾಲಕ್ಕ°ತೆಕ್ಕುಂಜ ಕುಮಾರ ಮಾವ°ವೆಂಕಟ್ ಕೋಟೂರುಅಕ್ಷರದಣ್ಣದೇವಸ್ಯ ಮಾಣಿದೀಪಿಕಾvreddhiಚೆನ್ನೈ ಬಾವ°ಮಾಷ್ಟ್ರುಮಾವ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ