ಗಾಯತ್ರಿ ಸಾವಿತ್ರಿ

ಆತ್ಮೀಯ ಬೈಲಿಂಗೆ,

ಲೇಖಕರ ಪರಿಚಯ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಗಾಯತ್ರಿ ಸಾವಿತ್ರಿ ” ಹೇಳುವ ಕನ್ನಡ ಗೀತೆಯ ಇಲ್ಲಿ ಕೊಡುತ್ತಾ ಇದ್ದೆ.
ಗಾಯತ್ರಿ ಬಗ್ಗೆ ಒಪ್ಪಣ್ಣ ಬರದ ಶುದ್ದಿ ಇಲ್ಲಿದ್ದು

ಶರ್ಮಪ್ಪಚ್ಚಿ
~~~

ಗಾಯತ್ರಿ ಸಾವಿತ್ರಿ

ಓಂ ಭೂರ್ಭುವ್ವಃಸ್ವಃ|
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ|
ಧಿಯೋಯೋ ನಃ ಪ್ರಚೋದಯಾತ್ ||

ಕನ್ನಡ ಗೀತೆ

ದಿವ್ಯ ತೇಜದ ಸೂರ್ಯ ಪ್ರಭೆಯನು ರೂಪ ಸವಿತಾ ಧ್ಯಾನಿಸುವೆವು

ದೇವನಾತನು ನಮ್ಮ ಬುದ್ಧಿಗೆ ಪ್ರಜ್ಞೆ ಪ್ರೇರಣೆ ನೀಡುತಿರಲಿ ||೧||

ಉದಯ ಸೂರ್ಯನು ಭೂಮಿಗಿಳಿಯಲು ಹೃದಯ ಪದುಮವು ತೆರೆದು ನಿಲಲಿ

ತುಂಬಿಯಂತಿಹ ಸಕಲ ಧ್ಯಾನಿಗೆ ಪ್ರಜ್ಞೆ ಜೇನನು ಸುರಿಸುತಿರಲಿ ||೨||

ಹಸಿರು ಉಸಿರಿನ ಮನದ ಹೊಲದಲಿ ಫಲದ ಫಸಲನು ಕೃಷಿಯು ತರಲಿ

ಜಡೆಯ ಜೂಟನ ಶಿರದಿ ನೆಲಸಿಹ ದಿವ್ಯ ಗಂಗೆಯು ಭುವಿಗೆ ಬರಲಿ ||೩||

ಪ್ರಾಣ ನೀಡುವ ವಾಯು ದೇವನು ಜೀವ ಯಂತ್ರಕೆ ಚಲನೆ ಕೊಡಲಿ

ಮಹಾನಗ್ನಿಯು ಸ್ಫೋಟಗೊಳ್ಳದೆ ದೇಹದಗ್ನಿಗೆ ಸ್ಫೂರ್ತಿ ತರಲಿ ||೪||

ದಿವಿಯ ಭುವಿಯಲಿ ಜಗವ ಬೆಳಗುತ ಹೃದಯ ದೀಪವು ಉರಿಯುತಿರಲಿ

ಮಂತ್ರ ಗಾಯತ್ರಿಯನು ಜಪಿಸುತ ಬುದ್ಧಿ ಮೇಧಾ ವೃದ್ಧಿಗೊಳಲಿ ||೫||

~~~

||ಶಿವೋನಸ್ಸುಮನಾ ಭವ||

ಈಶ್ವರನು ಒಳಗಿಹನೊ ಅಲ್ಲ, ಹೊರಗಿಹನೊ

ಸಂಶಯವು ಬಂದಾಗ ಶಿವನೆ ಇರನು

ಹೊರಗೆ ಹೋಗುವ ಮನದ ಚಂಚಲತೆ ನಿಂತಾಗ

ಚಿರವಾದ ಶಾಂತಿಯಲಿ ಶಿವನು ಬಹನು

~~~ಶರ್ಮಪ್ಪಚ್ಚಿ

   

You may also like...

19 Responses

 1. Gopalakrishna BHAT S.K. says:

  ಅನುವಾದ ವಿವರವಾಗಿ ಲಾಯ್ಕ ಇದ್ದು.

 2. ಚೆನ್ನೈ ಭಾವ says:

  ನಮ್ಮ ಶ್ರದ್ಧಾ ಮೇಧ ಪ್ರಜ್ಞೆಯ ಪ್ರಚೋದಿಸುವ ಎಣೆ ಇಲ್ಲದ ಮಹಾಶಕ್ತಿ ಗಾಯತ್ರೀ ಸಾವಿತ್ರಿ ಅರ್ಥ ವಿಸ್ತಾರ ಬಹಳ ಗಹನ ವಿಚಾರ.

  ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕ ನಿಜವಾಗಿಯೂ ಮಹಾಕಾರ್ಯವೇ ಸರಿ. ಸೇರೆಕ್ಕಾದವರ ಕೈಗೂ ಸೇರಿದ್ದು. ಬೈಲಿಂಗೆ ಶರ್ಮಪ್ಪಚಿಯ ಇದರ ಹಂಚಿ ಸಾರ್ಥಕ ಕೆಲಸ ಮಾಡಿದ್ದವು. ಶ್ಲಾಘನೀಯ.

  [ಚಿರವಾದ ಶಾಂತಿಯಲಿ ಶಿವನು ಬಹನು] – ಅಧ್ಬುತ ವಿಚಾರ. ಸರಳ ಸುಂದರವಾಗಿ ಬರದ್ದವು ಹೇಳಿ ನಮ್ಮ ಒಪ್ಪ.

 3. ರಘು ಮುಳಿಯ says:

  ಸು೦ದರ ಅರ್ಥವಿವರಣೆ.ಧನ್ಯವಾದ ಅಪ್ಪಚ್ಚಿ.

 4. sammi says:

  ಒಂದು ಕಾಲದಲ್ಲಿ ಬ್ರಾಹ್ಮಣರಿಗೆ ಮೀಸಲಾಗಿ, ಯಾರಿಗೂ ಅರ್ಥ ತಿಳಿಯದೆ ಮರೆಯಾಗಿದ್ದ ಗಾಯತ್ರಿ ಈಗ ಕನ್ನಡಕ್ಕೆ ಬಂದಿದ್ದು ಆಶ್ಚರ್ಯದ ಸಂಗತಿಯೆ ಹೌದು.

  • ನಂದ ಕಿಶೋರ ಬೀರಂತಡ್ಕ says:

   ಯಾವುದೇ ವಿದ್ಯೆಯೂ ಜ್ನಾನವೂ ಯಾರಿಗೂ ಮೀಸಲಲ್ಲವಲ್ಲ?
   ಗಾಯತ್ರೀ ಮಂತ್ರದ ದ್ರುಷ್ಟಾರರು ಹುಟ್ಟಿನಿಂದ ಬ್ರಾಹ್ಮಣರಲ್ಲ…!

   ಗಾಯತ್ರೀ ಮಂತ್ರವು ಶುಧ್ಧ ಮನದ ಭಾವಗಳ ಪ್ರತಿಫಲನವಷ್ಟೇ..
   ಕನ್ನಡಕ್ಕೆ ಬಂದಿತೆಂದು ನೀವಂದಿದ್ದು ಅರ್ಥವಾಗಲಿಲ್ಲ…???

  • ಆತ್ಮೀಯ ಸಮ್ಮಿಯವರಿಗೆ, ನಮಸ್ಕಾರಗಳು.
   ಮೊದಲಾಗಿ, ನಿಮ್ಮ ಪೂರ್ಣಪರಿಚಯ ತಿಳಿಸುವಿರೇ?

   { ಆಶ್ಚರ್ಯದ ಸಂಗತಿಯೆ ಹೌದು }
   ಆಶ್ಚರ್ಯವೇನಿದೆ?
   ವೇದವೆಂದರೆ ಜ್ಞಾನದ ಘನಿ. ಎಲ್ಲರಿಗೂ ಇರುವಂಥದ್ದು. ಯಾರೊಬ್ಬರ ಸ್ವತ್ತೂ ಅಲ್ಲ.
   ವೇದ ಮಂತ್ರಗಳು ಮೊದಲೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ.
   ಆಸಕ್ತರಿಗಾಗಿ ನಿತ್ಯವೂ ದೊರಕುವಂತಿರುತ್ತದೆ.
   ಗಾಯತ್ರೀಮಂತ್ರದ ದ್ರಷ್ಟಾರರು – ಕ್ಷತ್ರಿಯಕೌಶಿಕರಾಜ ಬ್ರಹ್ಮಜ್ಞಾನವನ್ನು ಪಡೆದು ವಿಶ್ವಾಮಿತ್ರ ಋಷಿಗಳು.
   ಅದಿರುವುದು ಲೋಕಕ್ಕಾಗಿ; ಕೇವಲ ಒಂದು ವರ್ಗಕ್ಕಾಗಿ ಅಲ್ಲ.

   ಆಸಕ್ತಿಯಿದ್ದರೆ ಕಲಿತುಕೊಳ್ಳಬೇಕೇ ವಿನಃ, “ಆಶ್ಚರ್ಯ ವ್ಯಕ್ತಪಡಿಸಿ”ಕೊಂಡರೆ ಏನೂ ಲಾಭವಿಲ್ಲ!

   ನಿಮ್ಮ ಅವಗಾಹನೆಗೆ: ಗಾಯತ್ರಿ ಮಂತ್ರದ ಬಗ್ಗೆ ಇನ್ನಷ್ಟು ವಿವರಗಳು ಈ ಕೊಂಡಿಯಲ್ಲಿ ಲಭ್ಯ:
   http://oppanna.com/oppa/gayatri-mantra

 5. varun kanjarpane says:

  sharmappacchi laiki baraddavu…

 6. sammi says:

  ಸಾವಿರಾರು ವರ್ಷಗಳಿಂದ ಒಂದು ವರ್ಗ ಮಾತ್ರ ಗಾಯತ್ರಿ ಮಂತ್ರವನ್ನು ಪಠಣ ಮಾಡುತ್ತಿರುವುದು ಯಾಕೆ?
  ಇದೊಂದು ಪ್ರಚ್ಛನ್ನ ಮೀಸಲಾತಿಯಲ್ಲವೆ?

  • ಸಮ್ಮಿಯವರೇ,
   { ಒಂದು ವರ್ಗ ಮಾತ್ರ ಗಾಯತ್ರಿ ಮಂತ್ರವನ್ನು ಪಠಣ ಮಾಡುತ್ತಿರುವುದು }
   ಯಾವ ವರ್ಗವನ್ನು ಸೂಚಿಸುತ್ತಿದ್ದೀರೋ ತಿಳಿಯದು.

   ನಿಮ್ಮದು ತಥಾಕಥಿತ “ಪ್ರಗತಿಪರರ” ವಾದಕ್ಕೆ ಹತ್ತಿರವಿದೆ. ಸಮಾಜದ ಬೇರೆಬೇರೆ ವರ್ಣಗಳ, ಬೇರೆಬೇರೆ ವರ್ಗಗಳ ಸಹಸ್ರಾರು ಆಸ್ತಿಕವರ್ಗ ಈ ಮಂತ್ರವನ್ನು ಪಠಿಸುತ್ತಾ ಬಂದಿದೆ.

   ಕಳೆದೆರಡು ತಲೆಮಾರುಗಳಿಂದ ಜರ್ಮನಿಯಂತಹ ಐರೋಪ್ಯ ದೇಶಗಳೂ ಗಾಯತ್ರೀಮಂತ್ರಗಳ ರಸಾಸ್ವಾದ ಮಾಡಲಾರಂಭಿಸಿದೆ.
   ಬಾಕಿ ಉಳಿದಿರುವುದು ನಮ್ಮ ದೇಶದ “ಪ್ರಗತಿ ಪರ ಚಿಂತಕರು” ಮಾತ್ರಾ!!!!

  • ಗಣೇಶ says:

   {ಸಾವಿರಾರು ವರ್ಷಗಳಿ೦ದ ಒ೦ದು ವರ್ಗ ಮಾತ್ರ ಗಾಯತ್ರಿ ಮ೦ತ್ರವನು ಪಠಣ ಮಾಡುತ್ತಿರುವುದು ಯಾಕೆ?}
   ಈ ಪ್ರಶ್ನೆಯ ಧಾಟಿಯಲ್ಲೇ ತೊ೦ದರೆ ಇದೆ!!
   ಸಾವಿರಾರು ವರ್ಷಗಳಿ೦ದ ಈ ‘ಒ೦ದು ವರ್ಗ’ (ಯಾವುದೇ ಆಗಿರಲಿ) ಬಿಟ್ಟು ಬಾಕಿ ಉಳಿದವರು ಪಠಣ ಮಾಡಲು ಎಷ್ಟು ಪ್ರಯತ್ನ ಪಟ್ಟಿರುವರು? ಗಾಯತ್ರಿ ಮ೦ತ್ರ ಸ೦ಸ್ಕೃತದಲ್ಲಿ (!?) ಇದೆ ಎ೦ದ ಮಾತ್ರಕ್ಕೆ, ಅದರ ಅರ್ಥ ತಿಳಿಯುವುದಿಲ್ಲ ಎ೦ದ ಮಾತ್ರಕ್ಕೆ ಯಾರು ಯಾರನ್ನೋ ದೂಷಿಸಿ ಏನು ಪ್ರಯೋಜನ? ತಿಳಿಯದ ವಿಷಯಗಳನ್ನು ಕಲಿಯುವ ಪ್ರಯತ್ರ ಎಷ್ಟು ನಡೆದಿದೆ?

  • ನಂದ ಕಿಶೋರ ಬೀರಂತಡ್ಕ says:

   ಪ್ರಿಯ ಸಮ್ಮಿಲನ,
   ಹೌದು ನಿಮ್ಮ ಮಾತನ್ನು ಒಪ್ಪುತ್ತೇನೆ. ಇದು ಮೀಸಲಾತಿಯೇ..!!

   ಮೀಸಲಾತಿಗೆ ಒಳಪ್ಪಟ್ಟವರು ಯಾರು ಗೊತ್ತೇ?
   “ಹೇ ದೇವಾ.. ಯಾವಾಗ ನನ್ನಲ್ಲಿ ಕತ್ತಲು ಆವರಿಸಿಕೊಳ್ಳುತ್ತದೋ ಆವಾಗಾವಾಗ ನನ್ನ ಬುದ್ಧಿಯನ್ನು ಪ್ರಚೋದಿಸಿ, ನಾನು ಮುಂದೆ ನಡೆಯಬೇಕಾದ ದಾರಿಗೆ ಬೆಳಕುತೋರಿಸಿ ನನ್ನನ್ನು ಮುನ್ನಡೆಸಲಾರೆಯಾ ತಂದೇ..??” ಎಂದು ಆರ್ದ್ರತೆಯಿಂದ ಬೇಡಿಕೊಳ್ಳುವವರು.

   ಇದೇ ಅರ್ಥ…
   ನಿಮಗೂ ಮೀಸಲಾತಿ ಬೇಕೇನು???

 7. ರಘು ಮುಳಿಯ says:

  ದ್ವಾಪರಯುಗಲ್ಲಿ (ಯಾದವಕುಲದ) ಶ್ರೀಕೃಷ್ಣ (ಕ್ಷತ್ರಿಯ ಕುಲದ) ಅರ್ಜುನ೦ಗೆ ಭೋದಿಸಿದ “ಗೀತೋಪದೇಶ” ಇ೦ದು ಬ್ರಾಹ್ಮಣರಿಗೆ ಮಾ೦ತ್ರ ಸೀಮಿತವಾದ್ದು ಹೇಳಿ ಭಗವದ್ಗೀತೆಯನ್ನೇ ದೂರ ತಳ್ಳುವ ರಾಜಕಾರಣಿಗಳ ಧೋರಣೆಯ ಹಾ೦ಗಾತನ್ನೇ..
  ವಿಷಯ ತಿಳುಕ್ಕೊ೦ಡರೆ ಆರಿ೦ಗೆ ಲಾಭ ?ತಿಳಿಯದ್ದರೆ ಆರಿ೦ಗೆ ನಷ್ಟ ಹೇಳಿ ಅರ್ಥೈಸಿಗೊ೦ಡರೆ ಸಮಸ್ಯೆ ತನ್ನಷ್ಟಕ್ಕೇ ಪರಿಹಾರ ಆವುತ್ತು.

 8. sammi says:

  ಭಾರತದಲ್ಲಿ ಸಮಾನತೆ ಇರುವಂತೆ ನಿಮಗೆ ಕಾಣುತ್ತಿದೆಯೇ?
  ನೀವುಗಳು ಮನುಸ್ಮ್ರತಿ ಓದಲಿಲ್ಲವೇ?ಸಮಾಜವನ್ನು ಕಣ್ಣು ಬಿಟ್ಟು ನೋಡಿದರೆ ಅರ್ಥವಾಗುವುದು.
  ಇಲ್ಲಿ ಶೂದ್ರ, ಪಂಚಮರ ಸ್ಥಾನಮಾನ ಏನು ಅಂಥ.ಇದು ಗಾಯತ್ರಿ ಪಠಣ ಮಾಡಿದವರ ಶುಧ್ದ ಮನಸ್ಸು!

  • ಗಣೇಶ ಪೆರ್ವ says:

   🙂

  • ಗಣೇಶ ಮಾವ° says:

   ಆತ್ಮೀಯ ಸಮ್ಮಿಯವರೇ,ತಮ್ಮ ಪರಿಚಯವನ್ನು ತಿಳಿಸಿ ಆ ಮೇಲೆ ಪ್ರತಿಕ್ರಿಯೆ ನೀಡಬೇಕಾಗಿ ವಿನಂತಿ.ಯಾವುದೇ ವಿಷಯದ ಮೂಲಪ್ರತಿಯನ್ನು ಉಪಯೋಗಿಸಿ ಅದನ್ನು ಗದ್ಯ ಪದ್ಯರೂಪದಲ್ಲಿ ಜನರಿಗೆ ಅರ್ಥವಾಗುವಂತಹಾ ನಿಟ್ಟಿನಲ್ಲಿ ಪ್ರಯತ್ನಪಡುವುದು ಒಳ್ಳೆಯದು ಅಲ್ಲವೇ?

  • ಶ್ರೀಯುತ ಸಮ್ಮಿಯವರಿಗೆ,
   ಗಾಯತ್ರಿ ಮಂತ್ರ ಅರ್ಥವಾಗಲಿಲ್ಲವೆಂದು ಹಲುಬುವ ಮುನ್ನ ನನ್ನದೊಂದು ಸರಳ ಪ್ರಶ್ನೆ:
   ನಿಮಗೆ ಶುದ್ಧ ಕನ್ನಡ ಅರ್ಥವಾಗುತ್ತಿದೆಯೇ? ನಿಮ್ಮ ಪರಿಚಯ ತಿಳಿಸಲು ಕೋರಿದ್ದೆ. ಅದೂ ಅರ್ಥವಾಗಲಿಲ್ಲವೆಂದು ತೋರುತ್ತದೆ.

   ಸಂಪೂರ್ಣ ವಿವರವಿಲ್ಲದ ಎಲ್ಲಾ ಪ್ರತಿಕ್ರಿಯೆಗಳನ್ನೂ ನಿರ್ದಾಕ್ಷಿಣ್ಯವಾಗಿ ತುಂಡರಿಸಲಾಗುವುದು.
   ಓದುವಿಕೆಗೆ ಸ್ವಾಗತ ಇದ್ದೇ ಇದೆ.

   ಒಳ್ಳೆಯದಾಗಲಿ. ನಮಸ್ತೇ!
   ಸೂ: ಹೆಚ್ಚಿನ ಮಾತುಕತೆ ಬೇಕಿದ್ದರೆ Admin@Oppanna.com ಗೆ ಸಂಪರ್ಕಿಸಲು ಕೋರಲಾಗಿದೆ.

  • ನಂದ ಕಿಶೋರ ಬೀರಂತಡ್ಕ says:

   ಹೌದು ಸ್ವಾಮಿ ಭಾರತದಲ್ಲಿ ಸಮಾನತೆಯಿಲ್ಲ..!!
   ಸಮಾನತೆ ಎಲ್ಲಿದೆ ಹೇಳಿ..?
   ಯೋಗ್ಯತೆ ಇರುವಲ್ಲಿ ಯೋಗ ಸಮಾನವಾಗಿಲ್ಲ..
   ಯೋಗವಿದ್ದೆಡೆ ಅದನ್ನು ಉಪಯೋಗಿಸಿಕೊಳ್ಳಲು ಯೋಗ್ಯತೆಯಿಲ್ಲ…

   ನಾನು ಮನುಸ್ಮ್ರುತಿ ಓದಿದ್ದೇನೆ. ಏನಾದರೂ ಅನುಮಾನವಿದೆಯೇ ನಿಮಗೆ ಅದರಲ್ಲಿ? ಪರಿಹರಿಸುವ ಪ್ರಯತ್ನ ಮಾಡಲೇ?
   ಸಮಾಜವನ್ನು ತಕ್ಕಮಟ್ಟಿಗೆ ಕಣ್ಣುಬಿಟ್ಟು ನೋಡಿಯೂ ಇದ್ದೇನೆ.
   ಯಾರ ಸ್ಥಾನ ಏನು ಅನ್ನೋದನ್ನ ಅನುಭವಿಸಿಯೂ ಇದ್ದೇನೆ..

 9. ಗಣೇಶ ಮಾವ° says:

  ಶರ್ಮಪ್ಪಚ್ಚೀ,ಈ ವಿವರಣೆಲಿ ಎನಗೆ ಆಯ್ತಂತ ಪ್ರಿಯ ಆದ್ದು. (ದಿವಿಯ ಭುವಿಯಲಿ ಜಗವ ಬೆಳಗುತ ಹೃದಯ ದೀಪವು ಉರಿಯುತಿರಲಿ)ನಮ್ಮ ನಿತ್ಯ ಕಾಂಬ ಸೂರ್ಯನ ಮುಖಾಂತರ ಸಕಲ ಜೀವಕೋಟಿಗಳ ಹಿತಕ್ಕಾಗಿ ಗಾಯತ್ರಿಯ ಪ್ರಭೆ ಬೆಳಗಲಿ.ತನ್ಮೂಲಕ ಜೀವ ಜಗತ್ತಿನ ತೇಜಸ್ಸು ವೃದ್ಧಿಯಾಗಲಿ.

 10. ಶರ್ಮಪ್ಪಚ್ಚಿ says:

  ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ.
  ಅನಪೇಕ್ಷಿತ ಒಪ್ಪ ಬಂದಪ್ಪಗ ಅದಕ್ಕೆ ಸರಿಯಾದ ಉತ್ತರ ನೀಡಿ ಬೈಲಿನ ಘನತೆ ಹೆಚ್ಹಿಸಿದ ಗುರಿಕ್ಕಾರ್ರು, ಗಣೇಶ ಪೆರ್ವ, ನಂದ ಕಿಶೋರ, ಮುಳಿಯ ರಘು, ಗಣೇಶ ಮಾವ, ಎಲ್ಲರಿಂಗೂ ಕೃತಜ್ನತೆಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *