ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಬೊಳುಂಬು ಮಾವ°ಶುದ್ದಿಕ್ಕಾರ°ಅನುಪಮಾ ಉಡುಪಮೂಲೆಪುತ್ತೂರುಬಾವವಿದ್ವಾನಣ್ಣವಸಂತರಾಜ್ ಹಳೆಮನೆಕೊಳಚ್ಚಿಪ್ಪು ಬಾವಅಕ್ಷರದಣ್ಣಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿಅಜಕ್ಕಳ ಮಾಷ್ಟ್ರಣ್ಣಹಳೆಮನೆ ಅಣ್ಣಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಕೆದೂರು ಡಾಕ್ಟ್ರುಬಾವ°ನೆಗೆಗಾರ°ಪೆರ್ಲದಣ್ಣಚೆನ್ನೈ ಭಾವಅನುಶ್ರೀ ಬಂಡಾಡಿಕಳಾಯಿ ಗೀತತ್ತೆಕಾವಿನಮೂಲೆ ಮಾಣಿಚೆನ್ನಬೆಟ್ಟಣ್ಣಪುತ್ತೂರಿನ ಪುಟ್ಟಕ್ಕನೀರ್ಕಜೆ ಮಹೇಶಶಾಂತತ್ತೆಚೂರಿಬೈಲು ದೀಪಕ್ಕಒಪ್ಪಕ್ಕಬಟ್ಟಮಾವ°ಸುವರ್ಣಿನೀ ಕೊಣಲೆಕೇಜಿಮಾವ°ಶ್ಯಾಮಣ್ಣಮೋಂತಿಮಾರು ಮಾವ°ಪೆಂಗಣ್ಣ°ಶ್ರೀಅಕ್ಕ°ಶರ್ಮಪ್ಪಚ್ಚಿಅಕ್ಷರ°ಸುಭಗಜಯಶ್ರೀ ನೀರಮೂಲೆಗೋಪಾಲಣ್ಣದೊಡ್ಡಭಾವಚುಬ್ಬಣ್ಣವೇಣಿಯಕ್ಕ°ಸರ್ಪಮಲೆ ಮಾವ°ಡಾಗುಟ್ರಕ್ಕ°ಎರುಂಬು ಅಪ್ಪಚ್ಚಿಮುಳಿಯ ಭಾವಪುಟ್ಟಬಾವ°ಡೈಮಂಡು ಭಾವಗಣೇಶ ಮಾವ°ವೇಣೂರಣ್ಣಡಾಮಹೇಶಣ್ಣಬಲ್ನಾಡುಮಾಣಿದೊಡ್ಡಮಾವ°ಅಜ್ಜಕಾನ ಭಾವ


ಗೋಕರ್ಣ ಮುದ್ರೆ

August 15, 2010 ರ 8:00 amಗೆ ನಮ್ಮ ಗಣೇಶ ಮಾವ° ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಟ್ಟಮಾವನ ಮಾತಾಡ್ಸದ್ದೆ ಸುಮಾರು ದಿನ ಆತು.
ಆಟಿ ತಿಂಗಳು ಹೊಡಾಡಿಕೆ ಉತ್ಥಾನಕ್ಕೆ ಒಂದರಿ ಹೋಗಿತ್ತೆ. ಅಂಬಗ ಬೈಲಿಂಗೆ ಒಂದು ವಿಷಯ ಕೊಡುವಿರೋ ಹೇಳಿ ಕೇಳಿದ್ದಕ್ಕೆ – ಇಂದು ಗೋಕರ್ಣ ಮುದ್ರೆಯ ಬಗ್ಗೆ ಹೇಳ್ತೆ ಹೇಳಿದವು..

ಗೋಕರ್ಣ ಮುದ್ರೆ ಹೇಳಿರೆ, ನಾವು ಯಾವುದೇ ಧಾರ್ಮಿಕ ಕಾರ್ಯ ಮಾಡುವಾಗ ದೇವರ ಸ್ವರೂಪಂಗಳ ಮುದ್ರೆಯ ಮೂಲಕ ಮಾಡುವ ಪದ್ಧತಿ ಇದ್ದು. ಮುದ್ರೆ ಮತ್ತೆ ಮಂತ್ರಂಗ ಒಂದೇ ನಾಣ್ಯದ ಎರಡು ಮುಖಂಗ.
ಅದರಲಿ ಗೋಕರ್ಣ ಮುದ್ರೆ ಹೇಳಿರೆ ಎಂತರ ಹೇಳಿ ಹೇಳ್ತೆ  – ದನದ ಕೆಮಿ ಹೇಳಿರೆ ಗೋಕರ್ಣ ಹೇಳಿ ಅರ್ಥ.
ನಾವು ತೀರ್ಥ ಪ್ರಾಶನ,ಆಚಮನ,ಅಥವಾ ವೈದಿಕ ,ಆಯುರ್ವೇದ  ಸಂಬಂಧವಾದ ಯಾವುದೇ ಪ್ರಾಶನಂಗ ಇದ್ದರೆ ಅದರ ಗೋಕರ್ಣ ಮುದ್ರೆಲಿ ತೆಕ್ಕೊಳೆಕ್ಕು ಹೇಳಿ ಮುದ್ರಾ ಸಂಹಿತೆಲಿ ಹೇಳಿದ್ದವು.

ಗೋಕರ್ಣ ಮುದ್ರೆ

 

ಅಂಗುಷ್ಠಾಗ್ರಂ ಸಮಾಕುಂಚ್ಯ ಮಧ್ಯಮಾ ಮಧ್ಯ ಪರ್ವಣೀ |
ಮಧ್ಯಮಾoಗುಲಿಭಿಸ್ತಸ್ಯ  ತದ್ಗೋಕರ್ಣಂ ಪ್ರಚಕ್ಷತೀ ||

ಹೇಳಿರೆ, ನಮ್ಮ ಬಲದ ಕೈಯ ಮಧ್ಯಮ ಬೆರಳಿನ ಮಧ್ಯಕ್ಕೆ ಹೆಬ್ಬರಳಿನ  ಜೋಡ್ಸಿಅಪ್ಪಗ ಗೋಕರ್ಣ ಮುದ್ರೆ ಹೇಳಿ ಆವ್ತು.
ಈ ಗೋಕರ್ಣ ಮುದ್ರೆಲಿ ಪ್ರಾಶನ ಮಾಡುವಾಗ ಕೈ ಮಧ್ಯಂದ ಪ್ರಾಶನ ಮಾಡ್ಲೆ ಆಗ.
ಪ್ರಾಶನ ಮಾಡುವಾಗ ಶಬ್ದ ಮಾಡ್ಲೆ ಆಗ.
ಅಂಗುಷ್ಠ ಬೆರಳಿನ ಬುಡಂದ ಪ್ರಾಶನ ಮಾಡೆಕ್ಕು.
ಇನ್ನು ತೀರ್ಥ ತೆಕ್ಕೊಂಬಗ ಕೈ ಒಂದರಿ ನೋಡಿಕ್ಕಿ ಆತೋ?
ಗೋಕರ್ಣ ಮುದ್ರೆ, 5.0 out of 5 based on 4 ratings
ಶುದ್ದಿಶಬ್ದಂಗೊ (tags): , , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗಣೇಶ ಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

  1. ಶ್ರೀಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಗೋಕರ್ಣ ಮುದ್ರೆ ಬಗ್ಗೆ ಒಳ್ಳೆ ಮಾಹಿತಿ
    ಮುದ್ರೆಗೊ ಮಾಡುವಾಗ ಅದಕ್ಕೆ ಸಂಬಂಧ ಪಟ್ಟ ಹಾಂಗೆ pressure point ಗೊ ಪ್ರಚೋದನೆಗೊಳ್ಳುತ್ತು. ಇದು ಆರೋಗ್ಯದ ದೃಷ್ಟಿಂದ ಒಳ್ಳೆದು.

    [ಉತ್ತರುಸಿ]

  2. Krishnamohana(Mohananna)
    ಮೋಹನಣ್ಣ
    VA:F [1.9.3_1094]
    Rating: 0 (from 0 votes)

    olle maahithi kottadakke ondu oppa oppa.

    [ಉತ್ತರುಸಿ]

  3. guttina shiva°
    VA:F [1.9.3_1094]
    Rating: 0 (from 0 votes)

    ಅಂಗುಷ್ಠ ಬೆರಳು ಹೇಳಿರೆ ಹೆಬ್ಬೆಟ್ಟು ಬೆರಳು ಹೇಳುವದರ ಬಂಙಲ್ಲಿ ನೆಂಪು ಮಾಡ್ಯೊಂಡೆ – ಪಾಪ ಎಷ್ಟು ಜನಕ್ಕೆ ಮರದೋಗಿತ್ತೋ ಎನ್ತ್ಸೋ ಈ ಸಂಗತಿ :(

    [ಉತ್ತರುಸಿ]

  4. ಗೋಪಾಲ ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: 0 (from 0 votes)

    ಒಳ್ಳೆ ಮಾಹಿತಿಗೆ ಧನ್ಯವಾದಂಗೊ.

    [ಉತ್ತರುಸಿ]

  5. ಪೊಸವಣಿಕೆ ಚುಬ್ಬಣ್ಣ...
    ಚುಬ್ಬಣ್ಣ
    VA:F [1.9.3_1094]
    Rating: 0 (from 0 votes)

    ಒಪ್ಪಣ್ಣ.. ಗೋಕರ್ಣ ಮುದ್ರೆಲಿ ಗೋವುನ ಕೆಮಿಯ ಆಕಾರ ಅಥವಾ ಒಂದು ಶ೦ಖದ ಹಾ೦ಗೆ ನಮ್ಮ ಕೈಯ ಆಕಾರ ಅವುತಿದ… ಇದು ಕೂಡ ಒ೦ದು ಪ್ರಮುಕ ಕಾರಣ ಅವ್ತು ಹೆಳಿ ಎನಗೆ ಆರೊ ಹೇಳಿದ್ದು ನೆಮ್ಪಿದ್ದು…. ಎಷ್ಟು ಸತ್ಯ ಗೊಂತಿಲೆ ಮಾತ್ರ, ತಪ್ಪು ಆದರೆ ತಿದ್ದಿಕಿ :P

    [ಉತ್ತರುಸಿ]

    ಗಣೇಶ ಮಾವ° ಉತ್ತರ ಕೊಟ್ಟದು:
    ಗಣೇಶ ಮಾವ°

    VN:F [1.9.3_1094]
    Rating: 0 (from 0 votes)

    ಖಂಡಿತಾ!!!!!!!!!ನಿಂಗ ಹೇಳಿದ್ದು ಸರಿ…ಶಂಖದ ಹಾಂಗೆ ಅಪ್ಪದು ಸರಿ.ಆದರೆ ಶಂಖ ಮುದ್ರೆ ಮಾಡ್ಲೆ ಎರಡು ಕೈ ಬೇಕಾವ್ತು…ಈ ಬಗ್ಗೆ ಮುಂದೆ ಲೇಖನಲ್ಲಿ ತಿಳಿಶುತ್ತೆ…ನಿಂಗ ಹೇಳಿದ್ದು ಪೂರಕವಾಗಿದ್ದು…

    [ಉತ್ತರುಸಿ]

    ಪೊಸವಣಿಕೆ ಚುಬ್ಬಣ್ಣ... ಉತ್ತರ ಕೊಟ್ಟದು:
    ಚುಬ್ಬಣ್ಣ

    VA:F [1.9.3_1094]
    Rating: 0 (from 0 votes)

    ಗಣೇಶ ಮಾವ.. ಧನ್ಯವಾದಗಳು… :P

    [ಉತ್ತರುಸಿ]

  6. ಸರ್ಪಮಲೆ ಮಾವ
    ಸರ್ಪಮಲೆ ಮಾವ°
    VA:F [1.9.3_1094]
    Rating: 0 (from 0 votes)

    ಒಳ್ಳೆ ಮಾಹಿತಿ. ಚಿತ್ರದೊಟ್ಟಿಂಗೆ ಕೊಟ್ಟ ವಿವರಣೆ ಸುಲಬವಾಗಿ ಅರ್ಥ ಆವ್ತು. ಹೀಂಗಿಪ್ಪ ವಿಷಯಂಗಳ ಬಗ್ಗೆ ಬರೆತ್ತಾ ಇರಿ.

    [ಉತ್ತರುಸಿ]

  7. ಕುವೈತ್ ಭಾವ
    VA:F [1.9.3_1094]
    Rating: 0 (from 0 votes)

    ಸಮಯೋಚಿತ ಉತ್ತಮ ಲೇಖನ. ಆದರೆ ಎನಗೊಂದು ಸಂಶಯ….. ಅಧಿಕೃತ ಮಂತ್ರ ಪುಸ್ತಕ (ಪುಟ ೨೪, ಸಂಧ್ಯಾವಂದನಂ, ಅನುಷ್ಠಾನ ದೀಪಿಕಾ ಪ್ರಥಮ ಭಾಗ, ಪ್ರಕಾಶನ: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಥಾನ) ಪ್ರಕಾರ, ಕೋಲು ಬೆರಳು ಬಿಟ್ಟಿರೆಕ್ಕು ಹೇಳಿ ಕಂಡತ್ತು. ಪುಸ್ತಕ ವಾಕ್ಯದ ಯಥಾ ನಕಲು ” ತೋರುಬೆರಳನ್ನು ದೂರಮಾಡಿ ಹೆಬ್ಬೆಟ್ಟಿನ ತುದಿಯನ್ನು ನಿಮ್ಮ ನಡುಬೆರಳಿನ ಮಧ್ಯದ ಗಂಟಿಗೆ ಜೋಡಿಸಿರಿ. ಆಗ ನಿಮ್ಮ ಕೈಯು ಗೊಕರ್ಣಾಕೃತಿ ಹಸ್ತವೆಂದಾಗುವದು.” ತಿಳುದವು ವಿವರುಸೆಕ್ಕು .. ತಪ್ಪಿದ್ದರೆ ಎನ್ನ ತಿದ್ದೆಕ್ಕು.

    [ಉತ್ತರುಸಿ]

    ಗಣೇಶ ಮಾವ ಉತ್ತರ ಕೊಟ್ಟದು:
    ಗಣೇಶ ಮಾವ°

    VA:F [1.9.3_1094]
    Rating: -1 (from 1 vote)

    ನಿಂಗ ಹೇಳಿದ್ದು ಪೂರಕವಾಗಿದ್ದು..ತೋರು ಬೆರಳು ಮತ್ತೆ ಹೆಬ್ಬೆರಳು ಪರಸ್ಪರ ಸಂಪರ್ಕ ಅಪ್ಪಲೆ ಆಗ ಹೇಳುವ ಸ್ಪಷ್ಟತೆಯ ಅದರ್ಲಿ ತೋರ್ಸಿದ್ದವು ಭಾವ…

    [ಉತ್ತರುಸಿ]

  8. Jayalakshmi Pailoor
    VA:F [1.9.3_1094]
    Rating: 0 (from 0 votes)

    Theertha ellinda kudiyakku? Enage artha ayiddille.
    Chandana, kumkuma, vibhuthi mukhakke hakuvaga yava beralu upayogisekku?
    Theertha kudida mele, thalege kai hakallaga adu nijavo?

    [ಉತ್ತರುಸಿ]

    ಗಣೇಶ ಮಾವ° ಉತ್ತರ ಕೊಟ್ಟದು:
    ಗಣೇಶ ಮಾವ°

    VN:F [1.9.3_1094]
    Rating: 0 (from 0 votes)

    ನಮ್ಮ ಬಲದ ಕೈಯ ಗೆಂಟು ಇದ್ದಲ್ದಾ?ಅದರಿಂದ ರಜ್ಜ ಮೇಗೆ.ಹೆಬ್ಬೆರಳು ಸುರು ಅಪ್ಪಲ್ಲಿಂದ=ಅಂಗುಷ್ಠಾಗ್ರಂ,
    ಹೆಚ್ಚಾಗಿ ಗೆಂಡು ಮಕ್ಕಗೆ ತ್ರಿಪುಂದ್ರ ರೇಖೆ ಹಾಕೆಕ್ಕು ಹೇಳಿ ಹೇಳ್ತವು…ತ್ರಿಪುಂದ್ರ ಹೇಳಿರೆ ಮೂರು ಬೆರೆಳಿಲಿ ಹಾಕುವನ್ಥಾದ್ದು.ಪವಿತ್ರ,ಮಧ್ಯಮ,ತೋರು ಬೆರಳು.
    ಹೆಮ್ಮಕ್ಕ ಬೊಟ್ಟು ಹಾಕುವಾಗ ಪವಿತ್ರ ಬೆರಳು ಮತ್ತೆ ಹೆಬ್ಬೆರಳು ಸೇರ್ಸಿ ಹಾಕೆಕ್ಕು…ಹೆಮ್ಮಕ್ಕೊಗೆ ಒಂದೇ ರೇಖೆ,ಗೆಂಡು ಮಕ್ಕೊಗೆ ಮೂರು ರೇಖೆ ಮಾಡಿ ಹಣೆಲಿ ಧಾರಣೆ ಮಾಡ್ತಾ ಕ್ರಮ…
    ತೀರ್ಥ ಕುಡುದ ಮೇಲೆ ತಲಗೆ ಹಾಕುಲೆ ಆಗ,ತಲಗೆ ಹಾಕುವದರ ಕುಡಿವಲೂ ಆಗ.ಶಿವನ ಅಭಿಷೇಕ ತೀರ್ಥ ಪ್ರೋಕ್ಷಣೆ,ವಿಷ್ಣುವಿನ ಅಭಿಷೇಕ ತೀರ್ಥ ಪ್ರಾಶನ..ಅದಕ್ಕಾಗಿ ಪಂಚಾಯತನ ಪೂಜಾ ಪದ್ಧತಿಲಿ ರುದ್ರ ಹೇಳಿದ ಮೇಲೆ ಪುರುಷಸೂಕ್ತ ಹೇಳುವ ಕ್ರಮ ಬಂತು.
    ತೀರ್ಥ ಕುಡುದ ಮೇಲೆ ತಲಗೆ ಪ್ರೋಕ್ಷಣೆ ಮಾಡಿದರೆ ಶರೀರ ಅಶುದ್ಧಿ ಆವ್ತು..ಎಂಜಲು ಕೈ ತಲಗೆ ಮಡುಗಿದ ಹಾಂಗೆ ಆವ್ತು…
    ಆದರಿಂದ ಪೂಜಾ ಕ್ರಮಲ್ಲಿ ಪ್ರಸಾದ ವಿತರಣೆ ಮಾಡುವಾಗ ಬಟ್ಟ ಮಾವ ತೀರ್ಥ ನವಗೆ ಕುಡಿವಲೆ ಕೊಟ್ಟ ಮೇಲೆ ಒಂದು ಸಕ್ಕಣ ನೀರು ನಾವು ತೀರ್ಥ ಕುಡುದ ಕೈಗೆ ಹಾಕುತ್ತವು…
    ಒಂದು ವೇಳೆ ಅವಕ್ಕೆ ಅದು ಬಿಟ್ಟು ಹೋದಲ್ಲಿ ನಮ್ಮ ಶರೀರವ ಶುದ್ಧಿ (ತೀರ್ಥ ಕುಡುದ ಕೈಗೆ ನೀರು ಮುಟ್ಸಿಗೊಂಡು) ಮಾಡಿಗೊಂಡು ನಟರ ಹೋಗು,ತಿಂಬ ಪ್ರಸಾದ ಸ್ವೀಕಾರ ಮಾಡೆಕ್ಕು.
    ಒಳ್ಳೆ ಪ್ರಶ್ನೆ ಕೇಳಿದ್ದಿ..ಧನ್ಯವಾದ…ಚಿಂತನದ ಮಥನ ಆದರೆ ಮಾತ್ರ ಸಮಾಜಲ್ಲಿ ನಮ್ಮ ಹಿರಿಯವು ಆಚರಣೆ ಮಾಡಿಗೊಂಡು ಇದ್ದ ಪದ್ಧತಿಗಳ ನವಗೆ ಅರ್ಥ ಮಾಡ್ಲೆ ಸಾಧ್ಯ

    [ಉತ್ತರುಸಿ]

  9. ಸುಬ್ಬಯ್ಯ ಭಟ್ತ ವರ್ಮುಡಿಹೊಸಮನೆ
    VA:F [1.9.3_1094]
    Rating: +1 (from 1 vote)

    ಗಣೇಶ ಮಾವ, ತ್ರಿಪುನ್ಡ್ರ ಹಾಕುವಗ ಮಧ್ಯದ ಬೆರಳು ಬೇಡ ಹೇಳಿ ಕಾಣುತ್ತು.ಪವಿತ್ರ,ತೋರು ಬೆರಳುಗಳ ಉಪಯೋಗ್ಸಿ ಎಡಂದ ಬಲಕ್ಕೆ,ಈ ಎರಡರ ಮಧ್ಯಲ್ಲಿ ಬಲಂದ ಎಡಕ್ಕೆ ಭಸ್ಮವ ತ್ರ್ಯಂಬಕ ಮನ್ತ್ರಂದ ಅಭಿಮನ್ತ್ರಣ ಮಾಡಿ ಹಾಕುದೋ ಹೇಳಿ ಕಾಣುತ್ತು.ತಪ್ಪಿದ್ದರೆ ತಿದ್ದಿ ಬರದಿಕ್ಕಿ.

    [ಉತ್ತರುಸಿ]

  10. ಸುಬ್ಬಯ್ಯ ಭಟ್ಟ ವರ್ಮುಡಿಹೊಸಮನೆ
    VA:F [1.9.3_1094]
    Rating: 0 (from 0 votes)

    “ಸುಬ್ಬಯ್ಯ ಭಟ್ಟ ವರ್ಮುಡಿಹೊಸಮನೆ” = ಸುರೂ ಬರವಗ ಅಕ್ಷರ ತಪ್ಪು ಆವುತ್ತಲ್ಲದೊ? ತಿದ್ದಿ ಓದಿಕ್ಕಿ.ಒಪ್ಪಣ್ಣನ ಬೈಲಿಂಗೆ ಸುರೂ ಇಳಿವದಿದ.

    [ಉತ್ತರುಸಿ]

    ಗಣೇಶ ಮಾವ ಉತ್ತರ ಕೊಟ್ಟದು:
    ಗಣೇಶ ಮಾವ°

    VA:F [1.9.3_1094]
    Rating: 0 (from 0 votes)

    ಅಪ್ಪು,ನಿಂಗ ಹೇಳಿದ್ದು ಸರಿ.ತ್ರಿಪುಂಡ್ರ ರೇಖೆ ಹಾಕುಗ ಸುರುವಿಂಗೆ ಪವಿತ್ರ,ತೋರು ಬೆರಳು ಸೇರ್ಸಿ ಉತ್ತರಂದ ದಕ್ಷಿಣಕ್ಕೆ ಮಧ್ಯ ಬೆರಳು ಬಿಟ್ಟು ಹಾಕೆಕ್ಕು.ಮತ್ತೆ ಹೆಬ್ಬೆರಳು ಉಪಯೋಗಿಸಿಗೊಂಡು ದಕ್ಷಿಣ ದಿಕ್ಕಿಂದ ಉತ್ತರಕ್ಕೆ ರೇಖೆ ಹಾಕೆಕ್ಕು.ಅಷ್ಟೊತ್ತಿಂಗೆ ತ್ರಿಪುಂಡ್ರ ರೇಖೆ ಆವ್ತು. ನಿಂಗೋಗೆ ಬೈಲಿಂಗೆ ಸ್ವಾಗತ…ಅಂಬಗಂಬಗ ಬೈಲಿಂಗೆ ಬಂದುಗೊಂಡಿರಿ..ಹಾಂಗೆ ನಿಂಗಳ ಕಿರು ಪರಿಚಯವ ಬೈಲಿಲಿ ತಿಳಿಶುತ್ತೀರೋ?

    [ಉತ್ತರುಸಿ]

  11. ಅಡ್ಖತ್ತಿಮಾರ ಮಾವ
    ಅಡ್ಕತ್ತಿಮಾರುಮಾವ°
    VA:F [1.9.3_1094]
    Rating: 0 (from 0 votes)

    http://www.mudrasforhealing.com/mudras.php ಹೀಂಗೆ ಹುಡುಕ್ಕುವಗ ಒಂದು ಸಂಕೊಲೆ ಸಿಕ್ಕಿತ್ತು…ಅದರ ನೋಡಿಕ್ಕಿ ಆಗದಾ….

    [ಉತ್ತರುಸಿ]

    ಸುಬ್ಬಯ್ಯ ಭಟ್ಟ ವರ್ಮುಡಿ ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ಇವರ ಪುಸ್ತಕವೂ ಇದ್ದು ಮಾವ°

    [ಉತ್ತರುಸಿ]

  12. ಸುಬ್ಬಯ್ಯ ಭಟ್ಟ ವರ್ಮುಡಿಹೊಸಮನೆ
    VA:F [1.9.3_1094]
    Rating: 0 (from 0 votes)

    ಏ ಗಣೇಶ ಮಾವ,
    ಮಾವ, ಭಾವ, ಅಪ್ಪಚ್ಚಿ,ಅಣ್ಣ, ತಮ್ಮ, ಅತ್ತೆ, ಅಕ್ಕ ತಂಗೆಕ್ಕೊ ಎಲ್ಲಾ ಆನು ಬೈಲಿಲಿ ನಡವಗ ಜಾಲಿಂದಲೇ ಬಗ್ಗಿ ನೋಡುತ್ತಾ ಇದ್ದವು.ಎನ್ನ ಗುರ್ತ ಎಲ್ಲೋರಿಂಗೆ ಇರ. ದೆನಿಗೋಳಿ ಈಗಳೇ ಹೇಳಿಗುತೆ; = ಎನ್ನ “ಸುಬ್ಬಣ್ಣ”,”ಜೋಇಷರು” ಹೇಳಿ ಎಲ್ಲಾ ದೆನಿಗೋಳುತ್ತವು.ಕುಂಬ್ಳೆ ಸೀಮೆಯ ಪೆರ್ಲದ ಹತ್ರೆ ಒರುಂಬುಡಿಲಿ ಇಪ್ಪದು. ಕೊಳೆಂಜಿಗೆ ಇಳುದು ಡಿಗುರಿ ಆಯಿದು.ಮತ್ತೆ ಗೆದ್ದೆ ಕೊಳಂಜಿಗೇ ಇಳುದ್ದದು.ಈಗ “ವಾಸ್ತು ಶಕ್ತಿ ವಿಜ್ನಾನ” ಹೇಳಿಗೊಂಡು ಕಾಲಿಂಗೆ ಚಕ್ರ ಕಟ್ಟಿದ್ದೆ. ಮದಲಿಂದಲೇ ನಮ್ಮ ಶಾಸ್ತ್ರಂಗಳ ಕೆಣಿ ಎಂತಾ ? ಹೇಳಿ ತಿಳಿವ ಕುತೂಹಲ, ಈಗ ಅದು ಸಾರ್ಥಕ ಆವುತ್ತ ಇದ್ದು.ಒಪ್ಪಣ್ಣನ ಬೈಲಿಂಗೆ ಬಂದು ಕೇಳಿದ್ದದರ-ಗೊಂತಿಪ್ಪದರ ಹೇಳುಲಕ್ಕು; (ಗುರಿಕ್ಕಾರ ಒಪ್ಪಿದರೆ).
    Subbayya Bhat
    Varmudi Hosamane
    PO Perla-671552
    Kasaragod dt
    Ph: 09645 31 64 11 ; 09449 90 36 52
    email: vsb.ssuthra@gmail.com (Proff)
    subbayyabhat@gmail.com (Perso)
    subbayyabhat@yahoo.com (Perso)

    [ಉತ್ತರುಸಿ]

  13. ಅಡಕೋಳಿ
    ಅಡಕೋಳಿ
    VN:F [1.9.3_1094]
    Rating: 0 (from 0 votes)

    ಮಾಹಿತಿ ಲಾಯಕ್ಕಿದ್ದು.

    [ಉತ್ತರುಸಿ]

  14. ಶಶಿಕಿರಣ ಅನಂತರಾವ್ ದೇಶಪಾಂಡೆ
    VA:F [1.9.3_1094]
    Rating: 0 (from 0 votes)

    ಸಂಧ್ಯಾವಂದನಂ ಮಂತ್ರ ಬೇಕಾಗಿತ್ತು… ದಯಮಾಡಿ ಸಹಾಯ ಮಾಡಿ ? ನಾನು ದಿನಕ್ಕೆ 2 ಸಮಯ ಸಂಧ್ಯಾವಂದನಂ ಮಾಡುತಿದ್ದು, ಚಿಕ್ಕವನಿರುವಾಗ ಏನು ಕಲಿತಿದ್ನೋ, ನೆನಪಿರುವಸ್ಟು ವಿಧಾನದಲ್ಲಿ ಮಾಡುತಿದ್ದೇನೆ.. I think 85% ಸರಿಯಾದ ಕ್ರಮದಲ್ಲೇ ಮಾಡುತಿದ್ದೇನೆ ಅನ್ನಿಸುತ್ತೆ… ಆದ್ರೆ ಅನುಮಾನಿಸುತಿದ್ದೇನೆ. ದಯಮಾಡಿ ಸಹಾಯ ಮಾಡಿ

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಕಣ್ಣನೂರು ಬಾವನ ಜೆಂಬ್ರಕ್ಕೆ ‘ಸಣ್ಣನೂರು’ ಜೆನ ಅಕ್ಕಡ...! ಈ ಜಗತ್ತೇ ಹಾಂಗೆ !    'ಶ್ರೀಮದ್ಭಗವದ್ಗೀತಾ' - ಪೀಠಿಕೆ, ಧ್ಯಾನ ಶ್ಲೋಕಂಗೊ.ಕೊಡೆಯಾಲ ರಾಮ ಕಥೆ - ಕಡೇ ದಿನ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME