ಹನುಮಾನ್ ಚಾಲೀಸಾ

ಶ್ರೀ ಸಂಸ್ಥಾನ ನಮ್ಮ ಸಮಾಜಲ್ಲಿ ಮಾತೃ ಸಂಸ್ಕಾರ, ಕನ್ಯಾ ಸಂಸ್ಕಾರ, ಮಕ್ಕಳಲ್ಲಿ ಸಂಸ್ಕಾರ ಕೊಡುವ ಉದ್ದೇಶಲ್ಲಿ ಮಾತೃ ಶಾಖೆಗೆ ಎಲ್ಲೋರ ಸಂಘಟಿಸುವ ಜವಾಬ್ದಾರಿಯ ಕೊಟ್ಟಿದವು.
ಇದರಲ್ಲಿ, ಮಕ್ಕಳಲ್ಲಿ ಸಣ್ಣ ಪ್ರಾಯಂದಲೇ, ರಾಮ ರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಕಲಿಶುವ ಉದ್ದೇಶ. ಈಗಾಗಲೇ, ಬಟ್ಟಮಾವ° ರಾಮರಕ್ಷಾ ಸ್ತೋತ್ರವ ಬೈಲಿಲಿ ಹಾಕಿದ್ದವು.
ಹಾಂಗೆ ಈಗ ಹನುಮಾನ್ ಚಾಲೀಸಾ ಶ್ಲೋಕಂಗಳ, ಅರ್ಥವ ಸಂಗ್ರಹ ಮಾಡಿ ಹಾಕುವ ಪ್ರಯತ್ನ ಎನ್ನದು. ಇದು ಬೇರೆ ಬೇರೆ ದಿಕ್ಕಂದ ಸಂಗ್ರಹಿಸದ ವಿಷಯಂಗ.

ಹನುಮಾನ್ ಚಾಲೀಸಾ ಒಂದು ಜನಪ್ರಿಯ ಸ್ತ್ರೋತ್ರ.

ಇದರ ಉತ್ತರ ಭಾರತದ ಹೆಸರಾಂತ ಕವಿ, ಶ್ರೀ ಗೋಸ್ವಾಮೀ  ತುಳಸಿದಾಸರು ರಚಿಸಿದ್ದವು.
ಶ್ರೀ ರಾಮ ಚರಿತ ಮಾನಸ‘  ತುಳಸಿದಾಸರ ಒಂದು ಮಹಾಕಾವ್ಯ. ಜನಂಗ ರಾಮಚರಿತಮಾನಸ ಓದುವ ಹಾಂಗೆ ಶ್ರದ್ಧೆಲಿ ಹನುಮಾನ್ ಚಾಲೀಸಾವನ್ನೂ ಓದುತ್ತವು.
ನಮ್ಮಲ್ಲಿಪ್ಪ ದುಷ್ಟ ಶಕ್ತಿಗಳನ್ನೂ ಹನುಮಾನ್ ಚಾಲೀಸಾ ಓಡುಸುತ್ತು, ನವಗೆ ಮಾನಸಿಕ ಧೈರ್ಯ, ನೆಮ್ಮದಿ, ಕೆಲಸಲ್ಲಿ ಜಯ ತಂದು ಕೊಡ್ತು ಹೇಳ್ತ ನಂಬಿಕೆ ಇದ್ದು.
ರಾಮ ದೇವರ ಸಂಪೂರ್ಣ ಆಶೀರ್ವಾದ ಸಿಕ್ಕೆಕ್ಕಾದರೆ ಹನುಮಂತನ ಭಜಿಸೆಕ್ಕು ಹೇಳಿದೇ ಹೇಳ್ತವು. ಹನುಮಾನ್ ಚಾಲೀಸಾ ಅವಧಿ ಭಾಷೆಲಿ ಬರದ್ದದು. ಅವಧಿ ಭಾಷೆ, ಹಿಂದಿಯ ಒಂದು ಉಪ ಭಾಷೆ ಆಗಿದ್ದು, ಅಯೋಧ್ಯೇಲಿ(ಉತ್ತರ ಪ್ರದೇಶಲ್ಲಿ)  ಹೆಚ್ಚು ಪ್ರಚಾರಲ್ಲಿ ಇದ್ದ ಕಾರಣ, ಗೋಸ್ವಾಮಿ ತುಳಸೀ ದಾಸರು ಅವಧಿಲಿಯೇ ಭಕ್ತಿ ಸ್ತೋತ್ರ ರಚಿಸಿ, ಅದರಲ್ಲಿಯೇ ಹನುಮಂತ ಸಾಮಾನ್ಯ ಮನುಷ್ಯ ಅಲ್ಲ. ದೇವರ ಕೆಲಸಕ್ಕೆ ದೇವರೇ ಹನುಮಂತನಾಗಿ ಹುಟ್ಟಿ ಬಂದು ಕಾರ್ಯ ನೆರವೆರಿಸಿದ್ದದರ ವಿವರ್ಸುತ್ತವು.
ಹನುಮಂತನ ಆರಾಧಿಸುವ, ಅವನ ಶಕ್ತಿಯ ಹೇಳಿ ನಮ್ಮಲ್ಲಿ ನಮ್ಮ ಶಕ್ತಿಯ ಉದ್ದೀಪನ ಮಾಡುವ ಒಂದು ಭಕ್ತಿ ಮಾರ್ಗ.

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಆರೋಗಿತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾತ್ಭವೇತ್ ||

ಬುದ್ಧಿ, ಬಲ, ಧೈರ್ಯ, ಯಶಸ್ಸು, ನಿರ್ಭಯತ್ವ, ಆರೋಗ್ಯ, ಅಜಾಡ್ಯ, ನಿರರ್ಗಳ ಮಾತುಗಾರಿಕೆ, ಇವ್ವೆಲ್ಲ ಹನುಮಂತನ ಸ್ಮರಣೆ ಮಾತ್ರಲ್ಲಿ ಸಿಕ್ಕುತ್ತು.
ಹನುಮಾನ್ ಚಾಲೀಸಾಲ್ಲಿ ಸುರುವಾಣದ್ದು ದೋಹಾ(ಎರಡು ಸಾಲು ಇಪ್ಪದು); ನಂತರದ್ದು ಚೌಪಾಯಿ (ನಾಲ್ಕು ಗೆರೆದು), ಅಕೇರಿಗೆ ಪುನಾ ದೋಹ ಇದ್ದು.
ಇದರ 38 ನೇ ಚೌಪಾಯಿಲಿ ಹೇಳಿದ ಹಾಂಗೆ, ಯಾವ ಮನುಷ್ಯ 100 ದಿನಲ್ಲಿ 100 ಸರ್ತಿ ಹೇಳ್ತನೋ ಅವ°, ಹುಟ್ಟು ಸಾವುಗಳ  ಚಕ್ರಂದ ಮುಕ್ತ ಆಗಿ, ದಿವ್ಯ ಸುಖ ಪಡೆತ್ತ° ಹೇಳ್ತ ನಂಬಿಕೆ ಇದ್ದು.
ಇದರ 40 ಚೌಪಾಯಿಲಿದೇ ಪ್ರತೀ ಚೌಪಾಯಿ ಒಂದು ಆಶೀರ್ವಾದ ಕೊಡ್ತು, ಓದುವವನ ಭಕ್ತಿ, ಶ್ರದ್ಧೆಯ ಹೊಂದಿಗೊಂಡು ಪ್ರತಿಫಲ ಪಡೆತ್ತವು ಹೇಳಿಯೂ ನಂಬುತ್ತವು.

ಹನುಮಾನ್ ಚಾಲೀಸಾವ  ಪಠಣ ಮಾಡಿ ಎಲ್ಲೋರ ಕಷ್ಟ ಕಳೆಯಲಿ.
ಮಕ್ಕಳಲ್ಲಿ ಬುದ್ಧಿ, ಶಕ್ತಿ, ಯಶ ಬೆಳೆಯಲಿ..
ಎಲ್ಲೋರ ಮನೆಲಿ ಹನುಮಾನ್ ವಿರಾಜಿಸಲಿ.

||ಹನುಮಾನ್ ಚಾಲೀಸಾ ||

||ದೋಹಾ||

ಶ್ರೀ ಗುರು ಚರನ ಸರೋಜ ರಜ ನಿಜ ಮನು  ಮುಕುರು  ಸುಧಾರಿ |
ಬರನವು°  ರಘುಬರ್  ಬಿಮಲ್  ಜಸು ಜೋ ದಾಯಕು ಫಲಚಾರಿ  ||

ಶ್ರೀ ಗುರುದೇವರ ಚರಣ ಕಮಲಂಗಳ ಪಾದ ಧೂಳಿಲಿ ಎನ್ನ ಮನಸ್ಸಿನ ಕನ್ನಟಿಯ ಶುದ್ಧೀಕರಿಸಿಗೊಂಡು, ರಘು ವಂಶಜನ ಪ್ರೀತಿ ಪಾತ್ರನಾದ,  ಧರ್ಮ, ಅರ್ಥ,ಕಾಮ ಮೋಕ್ಷ ಪ್ರದನಾದ  ಶ್ರೀ ಹನುಮಾನನ  ಅಸೀಮ ಪರಾಕ್ರಮದ ಗಾಥೆಯ ಇದೀಗ ವಿವರ್ಸುತ್ತೆ ಹೇಳಿ ಗೋಸ್ವಾಮಿ ಶ್ರೀ ತುಳಸೀದಾಸರು ಕೇಳಿಗೋಳ್ತಾ ಇದ್ದವು.

ಬುದ್ಧಿಹೀನ್  ತನು ಜಾನಿಕೇ ಸುಮಿರೌ° ಪವನ್ ಕುಮಾರ್ |
ಬಲಬುದ್ಧಿ ಬಿದ್ಯಾ ದೇಹು° ಮೋಹಿ°  ಹರಹು ಕಲೇಸ್ ಬಿಕಾರ್ ||

ಎನ್ನ ಅಜ್ಞಾನಿ ಹೇಳಿ ಗ್ರೇಶಿಗೊಂಡು, ನಿನ್ನ ಸ್ಮರಣೆ ಮಾಡುತ್ತಾ ಇದ್ದೆ,  ಹೇ ಪವನ ಪುತ್ರ!   ಎನ್ನ ಮನಸ್ಸಿನ ಎಲ್ಲ ಕ್ಲೇಶವ, ವಿಕಾರಂಗಳ ದೂರ ಮಾಡಿ, ಎನಗೆ ಬಲ, (ಶಾರೀರಿಕ, ಮಾನಸಿಕ, ಚಾರಿತ್ರಿಕ ಬಲ), ಸುಬುದ್ಧಿ, ಎನ್ನ ಬುದ್ಧಿಯ ಹೆಚ್ಚುಸುವಂಥ ವಿದ್ಯೆ ಎಲ್ಲ ಅನುಗ್ರಹಿಸು.

||ಚೌಪಾಯೀ||

ಜಯ್ ಹನುಮಾನ್ ಗ್ಯಾನ್ ಗುನ್ ಸಾಗರ್ |
ಜಯ್ ಕಪೀಸ್ ತಿಹು° ಲೋಕ್  ಉಜಾಗರ್ ||1||

ಜ್ಞಾನ, ಗುಣಗಳ ಸಾಗರನಾಗಿಪ್ಪ ಹನುಮಂತಂಗೆ ಜಯವಾಗಲಿ. ಮೂರು ಲೋಕಂಗಳ ಬೆಳಗುಸುವ ಕಪಿಗಳ ರಾಜಂಗೆ ಜಯವಾಗಲಿ.

ರಾಮ ದೂತ ಅತುಲಿತ್ ಬಲ್  ಧಾಮಾ |
ಅಂಜನಿ ಪುತ್ರ್  ಪವನ್  ಸುತ್ ನಾಮಾ ||2||

ನೀನು ಶ್ರೀ ರಾಮ ದೂತನಾಗಿ, ವಾಯು ದೇವನ ಮತ್ತೆ ಅಂಜನೀ ದೇವಿಯ ಸುಪುತ್ರನಾಗಿ ಅತುಲ್ಯ ಬಲಶಾಲಿ ಹೇಳಿ ಹೆಸರು ಮಾಡಿದವ°.

ಮಹಾಬೀರ್ ಬಿಕ್ರಮ್  ಬಜರಂಗೀ |
ಕುಮತಿ ನಿವಾರ್  ಸುಮತಿ ಕೇ  ಸಂಗೀ
||3|
|

ನೀನು, ತ್ಯಾಗವೀರ, ದಯಾ ವೀರ, ವಿದ್ಯಾ ವೀರ, ದಾನ ವೀರ, ರಣವೀರ.., ಎಲ್ಲವನ್ನೂ ಒಳಗೊಂಡು, ವಜ್ರದೇಹಿಯಾಗಿ ಮಹಾವೀರನಾಗಿ ವಿಕ್ರಮನಾಗಿದ್ದೆ.
ಎಂಗಳ ದುರ್ಬುದ್ಧಿಯ ಹೋಗಲಾಡಿಸಿ ಸುಬುದ್ಧಿಯ ದಯಪಾಲಿಸು.

ಕಂಚನ್  ಬರನ್  ಬಿರಾಜ್ ಸುಬೇಸಾ |
ಕಾನನ ಕುಂಡಲ್  ಕುಂಚಿತ ಕೇಸಾ
||4||

ನೀನು ಉದ್ದ ,ಗುಂಗುರು ಕೂದಲು ಹೊಂದಿದ್ದೆ. ಕಾಂಚನದ ಹಾಂಗೆ ಹೊಳೆವ ನಿನ್ನ ದೇಹ ನೀನು ಧರಿಸಿದ ಪೀತಾಂಬರಂದಲೂ, ನಿನ್ನ ಕೆಮಿಯ ಕುಂಡಲಂದಲೂ,  ಹೆಚ್ಚು  ಹೊಳೆತ್ತು.

ಹಾಥ್ ಬಜ್ರ ಔ ಧ್ವಜಾ  ಬಿರಾಜೈ |
ಕಾಂಧೈ ಮೂಂಜ್ ಜನೇಊ° ಸಾಜೈ
||5||

ನಿನ್ನ ಒಂದು ಕೈಲಿ ವಜ್ರಾಯುಧವ ಹೋಲುವ ಗದೆ, ಇನ್ನೊಂದು ಕೈಲಿ ರಾಮ ದ್ವಜವ ಹಿಡುದ್ದೆ. ಹೆಗಲಿಲಿ, ಮೂಂಜ್ ಹುಲ್ಲಿಂದ( ಬಹುಷಃ ದರ್ಭೆ) ಮಾಡಿದ ಜನಿವಾರ ಶೋಭಿಸುತ್ತಿದ್ದು.

ಸಂಕರ್ ಸುವನ್  ಕೇಸರೀ   ನಂದನ್ |
ತೇಜ್ ಪ್ರತಾಪ್  ಮಹಾ ಜಗ್  ಬಂದನ್
||6|
|

ಎಲ್ಲೋರ ಹರಸುವ ಭಗವಾನ್ ಶಂಕರನ ಅವತಾರ ಆಗಿಪ್ಪ ನೀನು ಕೇಸರಿಯ ಪ್ರೀತಿಯ ಮಗ° ಆಗಿ, ನಿನ್ನ ತೇಜಸ್ಸಿಂದಲೂ, ಪ್ರತಾಪಂಗಳಿಂದಲೂ ಇಡೀ ಜಗತ್ತಿಲಿ ಎಲ್ಲೋರಿಂದಲೂ ಪ್ರಶಂಸನೀಯವಾಗಿದ್ದೆ.

ಬಿದ್ಯಾವಾನ ಗುನೀ ಅತಿ ಚಾತುರ್ |
ರಾಮ್ ಕಾಜ್ ಕರಿಬೇ ಕೋ ಆತುರ್
||7||

ನೀನು ಸರ್ವ ವಿದ್ಯಾ ಪಾರಂಗತ, ಗುಣ ಶಾಲಿ, ಅತಿಯಾದ ಚತುರನಾಗಿದ್ದುಗೊಂಡು, ಶ್ರೀ ರಾಮನ ಯಾವ ಕೆಲಸವನ್ನುದೆ ಮಾಡ್ಲೆ ತಯಾರಾಗಿಪ್ಪವ°.

ಪ್ರಭು ಚರಿತ್ರ್  ಸುನಿಬೇ ಕೋ ರಸಿಯಾ |
ರಾಮ್ ಲಖನ್ ಸೀತಾ ಮನ್ ಬಸಿಯಾ
||8||

ಪ್ರಭು ಶ್ರೀ ರಾಮನ ದಿವ್ಯ ಚರಿತ್ರೆಯ ಕೇಳ್ಲೇ ಯಾವಾಗಲೂ ಕಾತರನಾಗಿಪ್ಪ ನೀನು, ನಿನ್ನ ಹೃದಯಲ್ಲಿ, ಶ್ರೀ ರಾಮ, ಲಕ್ಷ್ಮಣ, ಸೀತೆಯರ ಪ್ರತಿಷ್ಠಾಪಿಸಿಗೊಂಡಿದೆ ಹಾಂಗೆ ಅವರ ಹೃದಯಲ್ಲಿಯೂ ನೀನು ನೆಲೆಸಿದ್ದೆ.

ಸೂಕ್ಷ್ಮ ರೂಪ್ ಧರಿ ಸಿಯಾಹಿ° ದಿಖಾವಾ |
ವಿಕಟ್ ರೂಪ್  ಧರಿ ಲಂಕ ಜರಾವಾ
||9||

ನೀನು ಸೂಕ್ಷ್ಮಾತಿ ಸೂಕ್ಷ್ಮ ರೂಪಲ್ಲಿ ಅಶೋಕವನಕ್ಕೆ ಹೋಗಿ ಸೀತೆಯ ಎದುರು ನಿನ್ನ ಪ್ರಸ್ತುತ ಪಡಿಸಿದೆ. ಲಂಕಾ ದಹನ ಸಮಯಲ್ಲಿ ನಿನ್ನ ಭಯಂಕರ ರೂಪ ಧರಿಸಿ ಲಂಕೆಯ ಸುಟ್ಟೆ.

ಭೀಮ್ ರೂಪ್  ಧರಿ ಅಸುರ ಸಂಹಾರೇ |
ರಾಮಚಂದ್ರ ಕೆ ಕಾಜ್ ಸವಾ°ರೆ
||10||

ಲಂಕಾದಹನ ಕಾಲಲ್ಲಿ ನೀನು ಭೀಮ ರೂಪ ಧರಿಸಿ ರಾಕ್ಷಸರ ಕೊಂದು, ಶ್ರೀ ರಾಮಚಂದ್ರನ ಕೆಲಸವ ಸಮರ್ಪಕವಾಗಿ ಮಾಡಿ ಮುಗಿಶಿದೆ.

ಲಾಯೆ   ಸಂಜೀವನ್ ಲಖನ್ ಜಿಯಾಯೇ |
ಶ್ರೀ ರಘುಬೀರ್ ಹರಷಿ ಉರ್ ಲಾಯೇ
||11||

ನೀನು ಸಂಜೀವಿನಿ ಮೂಲಿಕೆಯ  ತಂದು ಲಕ್ಷ್ಮಣನ ಪ್ರಾಣ ಒಳಿಶಿ ಅಪ್ಪಗ ಶ್ರೀ ರಾಮ ಅತೀವ ಸಂತೋಷಂದ ನಿನ್ನ ಬಿಗಿದಪ್ಪಿದ°, ಅವನ  ಹೃದಯಲ್ಲಿ ನಿನಗೆ ಜಾಗೆ ಮಾಡಿ ಕೊಟ್ಟ°.

ರಘುಪತಿ ಕೀನ್ಹೀ ಬಹುತ್ ಬಡಾಯೀ |
ತುಮ್ ಮಮ ಪ್ರಿಯ ಭರತ್ ಹೀ ಸಮ್  ಭಾಯೀ
||12||

ಸಂಜೀವಿನಿ ತಂದು ನೀನು ಲಕ್ಷ್ಮಣನ  ಬದುಕಿಸಿದ  ಖುಷಿಲಿ ರಾಮ ನಿನ್ನ ಭರತನ ಹಾಂಗೆ ನೀನು ಎನ್ನ ತಮ್ಮ ಹೇಳಿ  ಆನಂದಿಸಿದ°.

ಸಹಸ ಬದನ್ ತುಮ್ಹರೋ ಜಸ್ ಗಾವೈ°|
ಅಸ ಕಹಿ ಶ್ರೀಪತಿ ಕಂಠ ಲಗಾವೈ°
||13||

ಸಂತಸದಿಂದ ಬಿಗಿದಪ್ಪಿದ ಶ್ರೀ ರಾಮ, ಸಹಸ್ರ ಶಿರದ ಆದಿಶೇಷನೂ ನಿನ್ನ ಯಶದ ಮಹಿಮೆಯ ಸಹಸ್ರ ಕಂಠಲ್ಲಿ ಹಾಡಲಿ ಹೇಳಿ, ಮುಂದೆ ಸಹಸ್ರಾರು ಜನಂಗ ನಿನ್ನ ಮಹಿಮೆಯ ಹೇಳಲಿ ಹೇಳಿಯೇ ಹೇಳಿದ°.

ಸನಕಾದಿಕ  ಬ್ರಹ್ಮಾದಿ ಮುನೀಸಾ |
ನಾರದ್  ಸಾರದ ಸಹಿತ ಅಹೀಸಾ
||14|
|

ಸನಕಾದಿ ಮುನಿಗೋ, ಬ್ರಹ್ಮಾದಿ ದೇವ ದೇವತೆಗಾ, ದೇವರ್ಷಿ ನಾರದ ಮುನಿ, ಶಾರದೆಯೂ, ಆದಿಶೇಷನೂ ನಿನ್ನ ಗುಣ ಗಾನ ಮಾಡುತ್ತವು.

ಜಮ ಕುಬೇರ ದಿಗಪಾಲ ಜಹಾ° ತೇ |
ಕಬಿ ಕೋಬಿದ ಕಹಿ° ಸಕೇ ಕಹಾ° ತೇ
||15|
|

ಯಮ, ಕುಬೇರ°, ಅಷ್ಟದಿಕ್ಪಾಲಕರು, ಕವಿಗೋ, ವಿದ್ವಾಂಸಂಗ ಆರಿಂಗುದೆ ನಿನ್ನ ಮಹಿಮೆಯ ಸರಿಯಾಗಿ ಬಣ್ಣಿಸುಲೆ ಆಗದ್ದೆ ಅಶಕ್ತರಾಯಿದವು.

ತುಮ್ ಉಪಕಾರ ಸುಗ್ರೀವಹಿ° ಕೀನ್ಹಾ° |
ರಾಮ ಮಿಲಾಯ್ ರಾಜಪದ ದೀನ್ಹಾ
||16||

ರಾಜ್ಯವ ಕಳಕ್ಕೊಂಡು ಸಂಕಟಲ್ಲಿ ಇದ್ದ ಸುಗ್ರೀವಂಗೆ ಶ್ರೀ ರಾಮನ ಪರಿಚಯ ಮಾಡ್ಸಿ, ಪುನಃ ಅವಂಗೆ ರಾಜ್ಯವ ಕೊಡ್ಸಿ ಮಹದುಪಕಾರ ಮಾಡಿದ್ದೆ ನೀನು.

ತುಮ್ಹರೋ ಮಂತ್ರ ಬಿಭೀಷಣ್ ಮಾನಾ |
ಲಂಕೇಸ್ವರ್ ಭಯೇ ಸಬ್ ಜಗ ಜಾನಾ
||17||

ನಿನ್ನ ಹಿತನುಡಿಗಳ ಕೇಳಿದ ಕಾರಣ ವಿಭೀಷಣ, ರಾಮಂಗೆ  ಶರಣಾಗಿ  ಲಂಕೆಯ ಅಧಿಪತಿ ಆದ್ದದು ಹೇಳಿ ಜಗತ್ತಿಂಗೆ ಗೊಂತಿದ್ದು.

ಜುಗ್ ಸಹಸ್ರ ಜೋಜನ ಪರ್ ಭಾನು |
ಲೀಲ್ಯೋ ತಾಹಿ ಮಧುರ ಫಲ ಜಾನೂ
||18||

ಸಹಸ್ರ ಯೋಜನ ದೂರಲ್ಲಿದ್ದ, ಕೆಂಪಾಗಿ ಕಂಡುಗೊಂಡಿದ್ದ  ಸೂರ್ಯನ, ಮಧುರ ಹಣ್ಣು ಹೇಳಿ ಗ್ರೇಶಿ, ತಿಂಬಲೆ ಹೇಳಿಗೊಂಡು ಅಷ್ಟು ದೂರವ ಅನಾಯಾಸವಾಗಿ  ಬಾಲ್ಯಲ್ಲಿಯೇ ಹಾರಿದ್ದೆ.

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ° |
ಜಲಧಿ ಲಾಂಘಿ ಗಯೇ ಅಚರಜ ನಾಹಿ°
||19||

ಪ್ರಭು ಶ್ರೀ ರಾಮ ಕೊಟ್ಟ ಮುದ್ರಿಕೆಯ ತೆಕ್ಕೊಂಡು, ಅಗಾಧ ಜಲ ರಾಶಿಯ ಸಮುದ್ರಡಾ ಮೇಲೆ ಹಾರಿದ್ದೆ, ಇದರಲ್ಲಿ ಆಶ್ಚರ್ಯದ ಮಾತೇ ಇಲ್ಲೆ.
(ಹಾಂಗೆಯೇ ನಿನ್ನ ಸ್ಮರಣೆಂದ ಎಂಗಳುದೆ ಈ ಜಗತ್ತಿನ ಸಮುದ್ರವ ದಾಂಟುತ್ತೆಯ°.)

ದುರ್ಗಮ ಕಾಜ ಜಗತ್ ಕೆ ಜೇತೇ |
ಸುಗಮ ಅನುಗ್ರಹ ತುಮ್ಹರೆ ತೇತೇ
||20||

ಈ ಜಗತ್ತಿನ ಎಲ್ಲ ಕಷ್ಟ ಕೆಲಸಂಗಳೂ ನಿನ್ನ ಅನುಗ್ರಹ ಇದ್ದರೆ ಅತಿ ಸುಗಮ ಆಗಿ ಮಾಡ್ಲೆ ಆವುತ್ತು.

ರಾಮ ದುವಾರೇ ತುಮ್ ರಖ್ ವಾರೇ  |
ಹೋತ ನ ಆಗ್ಯಾ ಬಿನ್ ಪೈಸಾರೆ
||21||

ನೀನು ರಾಮನ ಮಂದಿರದ ದ್ವಾರ ರಕ್ಷಕ°. ನಿನ್ನ ಅನುಮತಿ ಇಲ್ಲದ್ದೆ ಆರಿಂಗುದೆ ರಾಮ ದರ್ಶನ, ರಾಮಾನುಗ್ರಹ ಸಿಕ್ಕುಲೇ ಸಾಧ್ಯ ಇಲ್ಲೆ.

ಸಬ್ ಸುಖ್  ಲಹೈ ತುಮ್ಹಾರೀ ಸರನಾ |
ತುಮ್ ರಚ್ಚಕ್ ಕಾಹೂ° ಕೋ ಡರನಾ
||22||

ನಿನ್ನಲ್ಲಿ ಶರಣಾದವ°, ನಿನ್ನ ಸಂತೋಷದ ಪ್ರೀತಿಗೆ ಪಾತ್ರ ಆವುತ್ತ°.  ನೀನೇ ರಕ್ಷಕನಾಗಿಪ್ಪಗ  ಯಾವುದಕ್ಕೆದೆ, ಎಂತ ಬಂದರೆದೆ ಎಂತಕೆ ಹೆದರೆಕ್ಕು?

ಆಪನ ತೇಜ್ ಸಂಹಾರೋ° ಆಪೈ° |
ತೀನೋ° ಲೋಕ ಹಾಂಕ್ ತೇ  ಕಾಂಪೈ°
||23||

ನಿನ್ನ ಘರ್ಜನೆಗೆ ಮೂರು ಲೋಕವೂ ನಡುಗುತ್ತು. ಆ ನಿನ್ನ ಶಕ್ತಿಯ ತೇಜಸ್ಸಿನ ನಿನಗೆ ಅಲ್ಲದ್ದೆ ಬೇರೆ ಆರಿಂಗೂ ಸಮಾಧಾನಿಸುಲೇ ಎಡಿಯ.

ಭೂತ್  ಪಿಸಾಚ ನಿಕಟ ನಹಿ° ಆವೈ |
ಮಹಾಬೀರ್ ಜಬ್ ನಾಮ ಸುನಾವೈ
||24||

ಮಹಾವೀರನಾದ ನಿನ್ನ ನಾಮ ಸ್ಮರಣೆ ಮಾಡುತ್ತಾ ಇಪ್ಪೋರ ಹತ್ತರೆ  ಯಾವುದೇ ಕ್ಷುದ್ರ ಶಕ್ತಿಗ, ಭೂತ ಪಿಶಾಚಿಗ ಬಪ್ಪ ಧೈರ್ಯ ಮಾಡವು.

ನಾಸೈ ರೋಗ್  ಹರೈ ಸಬ್ ಪೀರಾ |
ಜಪತ್   ನಿರಂತರ್  ಹನುಮತ್  ಬೀರಾ
||25||

ವೀರನಾದ ಹನುಮಂತ, ನಿರಂತರ ನಿನ್ನ ನಾಮಸ್ಮರಣೆ ಮಾಡುದರಿಂದ, ಎಲ್ಲ ರೋಗಂಗ, ದೇಹ ಪೀಡೆಗ, ಬೇನೆಗ ನಾಶ ಆವುತ್ತು.

ಸಂಕಟ ತೇ° ಹನುಮಾನ್ ಚುಡಾವೈ°|
ಮನ್ ಕ್ರಮ ಬಚನ ಧ್ಯಾನ ಜೋ ಲಾವೈ
||26||

ತ್ರಿಕರಣ ಶುದ್ಧರಾಗಿ ಆರು ನಿನ್ನ, ಮನಸ್ಸಿಂದ, ಕಾರ್ಯಂಗಳಿಂದ, ವಾಕ್ಯಂಗಳಿಂದ, ಧ್ಯಾನ ಮಾಡ್ತವೋ, ಅವರ ಕಷ್ಟಂಗಳ ನೀನು ನಿವಾರಿಸಿ ಸಲಹುತ್ತೆ.

ಸಬ್ ಪರ್ ರಾಮ್ ತಪಸ್ವೀ ರಾಜಾ |
ತಿನ್ ಕೆ ಕಾಜ್  ಸಕಲ್ ತುಮ್ ಸಾಜಾ
||27||

ರಘು ಕುಲೋತ್ತಮ ಶ್ರೀ ರಾಮಚಂದ್ರ° ಸರ್ವ ಶ್ರೇಷ್ಠ ರಾಜಾನಾಗಿದ್ದುಗೊಂಡು, ಮಹಾ ತಪಸ್ವಿಯೂ ಆಗಿದ್ದ°. ಅವನ ಕೆಲಸಂಗಳ, ಅವನ ಎಲ್ಲಾ ಭಕ್ತರ ಕೆಲಸಂಗಳ ನೀನೇ ಅತಿ ಸುಲಭಲ್ಲಿ ಪೂರೈಸಿದೆ.

ಔರ್ ಮನೋರಥ್ ಜೋ ಕೋಯಿ  ಲಾವೈ |
ಸೋಯೀ° ಅಮಿತ್ ಜೀವನ್  ಫಲ್  ಪಾವೈ
||28||

ಭಕ್ತಂಗ ಕೇಳುವ ಅವರ ಮನಸ್ಸಿನ ಎಲ್ಲಾ ಕೋರಿಕೆಗಳ ನೀನು ಚೆಂದಲ್ಲಿ ಪೂರೈಸಿ, ಅವಕ್ಕೆ ಜೀವನಕ್ಕೆ ಪೂರ್ಣ ಫಲ ಸಿಕ್ಕುವ ಹಾಂಗೆ ಮಾಡ್ತೆ.

ಚಾರೋ° ಜುಗ್ ಪರತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ್ ಉಜಿಯಾರಾ
||29||

ನಾಲ್ಕು ಯುಗಲ್ಲಿಯೂ ನಿನ್ನ ಪ್ರತಾಪದ ಮಹಿಮೆ ಕಾಣ್ತು. ಈಗಳೂ ಪ್ರಸಿದ್ಧಿಯ ನಿನ್ನ ತೇಜಸ್ಸು ಜಗತ್ತಿಲಿ ಎಲ್ಲಾ ಕಡೆ ಪ್ರಜ್ವಲಿತಗೊಂಡು ಬೆಳಗುತ್ತಾ ಇದ್ದು.

ಸಾಧು ಸಂತ್  ಕೆ ತುಮ್ ರಖ್ ವಾರೆ |
ಅಸುರ್  ನಿಕಂದನ್ ರಾಮ ದುಲಾರೆ
||30||

ಸಾಧು ಸಂತರ ರಕ್ಷಕನಾಗಿ, ಅಸುರಾದಿ ದುಷ್ಟರ ಸಂಹಾರಕ° ಆಗಿಪ್ಪ ನೀನು ರಾಮನ ಪ್ರೀತಿಯ ಪಡಕ್ಕೊಂಡವ°.

ಅಷ್ಟ ಸಿದ್ದಿ ನೌನಿಧಿ ಕೆ ದಾತಾ |
ಅಸಬರ ದೀನ್ ಜಾನಕೀ ಮಾತಾ
||31||

ಮಾತೆ ಜಾನಕಿಯ ಅನುಗ್ರಹಲ್ಲಿ, ವರಂಗಳ ಬಲಲ್ಲಿ ನೀನು, ಅಷ್ಟ ಸಿದ್ಧಿಗೋ ಆದ,  ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶತ್ವ ಮತ್ತೆ ವಷಿತ್ವ ಅಲ್ಲದ್ದೆ, ನವನಿಧಿಗೋ ಆದ ಮಹಾಪದ್ಮ, ಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ, ಖರ್ವಂಗಳ, ನಿನ್ನಲ್ಲಿ ಶರಣಾದವಕ್ಕೆ  ಕರುಣಿಸುಲೇ ಸಮರ್ಥನಾಗಿದ್ದೆ.

ರಾಮ ರಸಾಯನ ತುಮ್ಹರೆ ಪಾಸಾ |
ಸದಾ ರಹೋ ರಘುಪತಿ ಕೆ ದಾಸಾ
||32||

ರಾಮನಾಮ ಜಪಾಸಕ್ತಿಲಿ, ಭಕ್ತಿ ರಸಲ್ಲಿ ಮುಳುಗಿಪ್ಪ ನೀನು ಯಾವಾಗಲೂ ರಾಮನ ದಾಸ° ಆಗಿಯೇ ಇದ್ದುಗೊಂಡು, ರಾಮನ ದಾಸ°  ಹೇಳಿ ಹೇಳ್ಸಿಗೊಂಬಲೆ ಇಷ್ಟ ಪಡ್ತೆ.

ತುಮ್ಹರೆ ಭಜನ್ ರಾಮ ಕೋ ಪಾವೈ° |
ಜನಮ್ ಜನಮ್ ಕೆ ದುಃಖ ಬಿಸರಾವೈ°
||33||

ಸತತ ನಿನ್ನ ಭಜನೆ ಮಾಡುದರಿಂದ ಶ್ರೀ ರಾಮನ ಅನುಗ್ರಹ ಪ್ರಾಪ್ತಿ ಆಗಿ, ಜನ್ಮ ಜನ್ಮಾಂತರದ ದುಃಖ ನಿವಾರಣೆ ಆವುತ್ತು.

ಅಂತ ಕಾಲ್ ರಘುಬರ್  ಪುರ್  ಜಾಯೀ° |
ಜಹಾ° ಜನಮ್ ಹರಿ ಭಕ್ತ ಕಹಾಯೀ
||34||

ನಿನ್ನ ನಾಮಸ್ಮರಣೆಲಿ  ಇದ್ದುಗೊಂಡು, ಜೀವನ ಅಂತ್ಯ ಅಪ್ಪಗ, ಸ್ವರ್ಗಕ್ಕೆ ಹೋಗಿ ಅಪ್ಪಗ ಅಲ್ಲಿ ಹರಿ ಭಕ್ತ° ಹೇಳಿ ಮರಿಯಾದಿ ಸಿಕ್ಕುತ್ತು ಅಲ್ಲದ್ದೆ ಮತ್ತಾಣ  ಜನ್ಮಲ್ಲಿ ಇನ್ನುದೇ ಅತೀವ ಭಕ್ತಿ ಮಾರ್ಗದ ದಾರಿ ಕಾಣ್ತು.

ಔರ್ ದೇವತಾ ಚಿತ್ತ್   ನ ಧರಯೀ |
ಹನುಮತ್ ಸೇಯೀ ಸರ್ಬ  ಸುಖ ಕರಯೀ
||35||

ನಿನ್ನ ಮಾತ್ರವೇ ಚಿತ್ತಲ್ಲಿ ಮಡಿಗಿ, ಬೇರೆ ಯಾವ ದೇವರ ಪೂಜೆಯೂ ಮಾಡದ್ದವಕ್ಕೆದೇ, ನೀನು ಸಕಲ ಸುಖ ಭಾಗ್ಯಂಗಳ ಕೊಡ್ತೆ.

ಸಂಕಟ್ ಕಟೈ ಮಿಟೈ ಸಬ್ ಪೀರಾ |
ಜೋ ಸುಮೀರೈ ಹನುಮತ್ ಬಲಬೀರಾ
||36||

ಯಾರು ಬಲಶಾಲಿಯಾದ ವೀರನಾದ ಹನುಮಂತನ ಸ್ಮರಣೆ ಮಾಡ್ತವೋ, ಅವರ ಎಲ್ಲಾ ಸಂಕಟಂಗಳೂ, ಸಕಲ ಬಾಧೆಗಳೂ ನಾಶ ಆವುತ್ತು.

ಜೈ ಜೈ ಜೈ ಹನುಮಾನ್ ಗೋಸಾ°ಯೀ |
ಕೃಪಾ ಕರಹು ಗುರುದೇವ ಕೀ ನಾಯೀ°
||37||

ಇಂದ್ರಿಯ ನಿಗ್ರಹನಾದ ಹನುಮಂತಂಗೆ ಜಯವಾಗಲಿ. ಎಂಗಳ ಮೇಲೆ ಪ್ರೀತಿಯ ಗುರುವಿನ ಹಾಂಗೆ, ಅದೇ ರೀತಿಲಿ  ಕೃಪೆ ಮಾಡು.

ಜೋ ಸತ್ ಬಾರ್ ಪಾಠ ಕರ್  ಕೋಯೀ |
ಛೂಟ್ ಹಿ ಬಂದಿ ಮಹಾ ಸುಖ ಹೋಯೀ||38||

ಆರು ಈ ಹನುಮಾನ್ ಚಾಲೀಸಾವ ನೂರು ಸರ್ತಿ ಪಠಣ ಮಾಡ್ತವೋ, ಅವು ಲೌಕಿಕ ಬಂಧನಂದ ಮುಕ್ತರಾಗಿ ಮಹಾ ಸುಖ ಪಡೆತ್ತವು.

ಜೋ ಯಹ ಪಡೈ ಹನುಮಾನ್ ಚಾಲೀಸಾ |
ಹೋಯ್  ಸಿದ್ಧಿ ಸಾಖೀ ಗೌರೀಸಾ
||39||

ಆರು ನಿತ್ಯ ಹನುಮಾನ್ ಚಾಲೀಸಾ ಓದುತ್ತವೋ ಅವು, ಸಕಲ ಸಿದ್ಧಿಗಳ ಎಲ್ಲ,  ಗೌರೀಶನಾದ ಶಂಕರನ ಸಾಕ್ಷಿ ಆಗಿ ಪಡೆತ್ತವು.

ತುಲಸೀದಾಸ್ ಸದಾ ಹರಿ ಚೇರಾ|
ಕೀಜೈ ನಾಥ್  ಹೃದಯ ಮಹ° ಡೇರಾ
||40||

ಓ ಹನುಮಂತನೇ!  ರಾಮನ ದಾಸನಾಗಿ, ಹನುಮಾನ್ ಚಾಲೀಸಾವ ಬರದ, ತುಳಸೀದಾಸ ಆದ ಆನು ಕೇಳಿಗೊಂಬದು ಇಷ್ಟೇ, ನೀನು ಯಾವಾಗಲೂ ಎನ್ನ ಹೃದಯಲ್ಲಿಯೇ ವಾಸವಾಗಿರು ಹೇಳಿ.

||ದೋಹಾ||

ಪವನತನಯ ಸಂಕಟ್ ಹರನ್ ಮಂಗಲ ಮೂರುತಿ ರೂಪ್  |
ರಾಮ ಲಖನ್ ಸೀತಾ ಸಹಿತ್ ಹೃದಯ ಬಸಹು ಸುರ್ ಭೂಪ್ ||

ಹೇ ಪವನ ಪುತ್ರ, ಸಂಕಟಂಗಳ ಹರಿಸುವವನೇ, ಮಂಗಳ ಮೂರ್ತಿ ಸ್ವರೂಪನೇ, ನೀನು, ಶ್ರೀ ರಾಮ, ಲಕ್ಷ್ಮಣ ಸೀತಾ ಮಾತೆಯ ಸಹಿತವಾಗಿ ಎನ್ನ ಹೃದಯಲ್ಲಿ ಶಾಶ್ವತವಾಗಿ ನೆಲೆಯಾಗು. ನಿನಗೆ ಅನಂತಾನಂತ ಧನ್ಯವಾದಂಗೋ.

||ಇತಿ ಶ್ರೀಮದ್ಗೋಸ್ವಾಮೀ ತುಳಸೀ ದಾಸ್ ಜೀ ಅವಧೀ ಭಾಷಾಯಾಂ ವಿರಚಿತಂ ಶ್ರೀ ಹನುಮಾನ್ ಚಾಲೀಸಾ ||


ಸೂ
:ಹೆಚ್ಚಿನ ಮಾಹಿತಿ, ಅರ್ಥಕ್ಕೆ… ಈ ಕೊಂಡಿಯ ನೋಡ್ಳಕ್ಕು..

http://www.scribd.com/doc/42321577/Hanuman-chalisa

ಹನುಮಾನ್ ಚಾಲೀಸಾ ಕೇಳಲೆಃ

ಶ್ರೀಅಕ್ಕ°

   

You may also like...

28 Responses

 1. Harish Kevala says:

  Obba vyakthi jyothishyava anusarusule hodare halavaru samasyegavakke halavaru pariharangala heltavu; aadare ee hanuman chalisa, ramaraksha stotrava patisidare ella namuneya doshangalu parihara avtu heli aa shlokalle battu, so obba heengippa shlokangala follow madtare bere parihara beka? Idu kuchodya alla, samshaya aste. Bayalili uttara sikkuga…?

  • ಶ್ರೀದೇವಿ ವಿಶ್ವನಾಥ್ says:

   ಹರೀಶಣ್ಣ, ನಿಂಗೊ ಕೇಳಿದ ಪ್ರಶ್ನೆಗೆ ಎನಗೆ ಗೊಂತಿಪ್ಪ ಮೂಲಂದ, ಗೊಂತಿಪ್ಪೋರ ಹತ್ತರೆಂದ ಉತ್ತರ ಪಡವ ಪ್ರಯತ್ನ ಮಾಡಿದ್ದೆ.

   ಯಾವಾಗ ಒಂದು ಮಂತ್ರ ಅಥವಾ ಒಂದು ನಾಮಸ್ಮರಣೆ ಒಂದೇ ವೇಗಲ್ಲಿ, ಏರು ತಗ್ಗು ಸ್ವರಲ್ಲಿ, ಹೇಳ್ತೋ ಅಂಬಗ ನಮ್ಮ ಶರೀರಲ್ಲಿ ಒಂದು ಪ್ರತಿಕ್ರಿಯೆ ಆವುತ್ತು. ಅದು ನಾವು ಹೇಳುದರ ಅರ್ಥ ಗೊಂತಿದ್ದು ಹೇಳಿದರೂ, ಗೊಂತಿಲ್ಲದ್ದೆ ಹೇಳಿದರೂ, ಪ್ರತಿಕ್ರಿಯೆ ನಡದೇ ನಡೆತ್ತು. ಒಂದು ವೇಳೆ, ಅರ್ಥ ಗೊಂತಿದ್ದು ಹೇಳಿದಲ್ಲಿ, ನಮ್ಮ ಶರೀರದ ಒಳ ಬದಲಾವಣೆ ಅಪ್ಪದರ ಒಟ್ಟಿನ್ಗೆ, ಭಾವನಾತ್ಮಕವಾಗಿಯೂ ನಾವು ಅದರ ಅನುಭವಿಸಿಗೊಂಡು ನಾವು, ಕಾಯ, ವಾಚಾ, ಮನಸ್ಸಿಲಿ ಏಕ ಧ್ಯಾನಲ್ಲಿ ಮಾಡಿದ ಹಾಂಗೆ ಆವುತ್ತು. ನಾಮಸ್ಮರಣೆ ಅಥವಾ ಮಂತ್ರ ಹೇಳುವಾಗ ಉಂಟಾವುತ್ತ ಕಂಪನ ಮೆದುಳಿನ ಪ್ರಚೋದಿಸಿ, ಅಲ್ಲಿ ಕೆಲವು ರಾಸಾಯನಿಕ ವಸ್ತುಗಳ ಬಿಡುಗಡೆ ಮಾಡುತ್ತು. ಈ ರಾಸಾಯನಿಕ ವಸ್ತುಗೊಕ್ಕೆ, ಶರೀರಲ್ಲಿ ಇಪ್ಪ ದೋಷಂಗಳ ಗುಣಪಡಿಸುವ ಶಕ್ತಿ ಇದ್ದು ಮತ್ತೆ ಮನಸ್ಸು ಶಾಂತವಾಗಿ ಇಪ್ಪಲೆ ಸಹಕಾರ ಮಾಡುತ್ತು.

   ನಿಂಗಳ ಪ್ರಶ್ನೆಯ ನಮ್ಮ ಬೈಲಿನ ಬಟ್ಟ ಮಾವನ ಹತ್ತರೆ ಕೇಳಿದೆ.
   ಅದಕ್ಕೆ ಅವು .., ಯಾವದೇ ಒಂದು ವಸ್ತು, ವಿಷಯ ಅಥವಾ ಮಂತ್ರವ ಆಳವಾಗಿ ನಂಬಿದರೆ ಅದು ‘ಧ್ಯಾನ ‘ ಆವುತ್ತು .ಧ್ಯಾನಲ್ಲಿ ನಮ್ಮ ಮಾನಸಿಕ ಶಕ್ತಿ ಹೆಚ್ಚಾವುತ್ತು.
   ನಮ್ಮ ಮಾನಸಿಕ ಶಕ್ತಿ ಹೆಚ್ಚಾದಪ್ಪಗ ಅದರ ಎದುರು, ಯಾವದೇ ಕಷ್ಟನಷ್ಟವೂ ಗೌಣ ಆಗಿರ್ತು .
   ಅದುವೇ ಅಲ್ದಾ ಕಷ್ಟ ಪರಿಹಾರದ ಪ್ರಥಮ ಮೆಟ್ಟಿಲು ?
   ನಾವು ಮನಸಾ ತಯಾರಾಗಿದ್ದಾರೆ ಮಾಂತ್ರ ಅಲ್ಲದಾ ದೇವರು ಕೊಡುದು ? ಹೇಳಿ ವಿವರಣೆ ಕೊಟ್ಟವು.

 2. ಶ್ರೀದೇವಿ ವಿಶ್ವನಾಥ್ says:

  ಹನುಮಾನ್ ಚಾಲೀಸಾ ಬಹಳ ಹಿಂದಂದ ಪ್ರಚಲನೆಲಿ ಇಪ್ಪ ಒಂದು ಸ್ತೋತ್ರ. ಉತ್ತರದ್ದರ ನಾವೆಂತಕ್ಕೆ ಹೇಳೆಕ್ಕು ಹೇಳುವ ಭಾವನೆ ಬಪ್ಪದು ಸಹಜ. ಹನುಮಾನ್ ಚಾಲೀಸಾ ಉತ್ತರ ಭಾರತದ ಭಾಷೆಲಿ ಇಕ್ಕು, ಆದರೆ ಹನುಮಂತ ನಮ್ಮ ಊರಿನವ° ಅಲ್ಲದಾ? ಹನುಮ ಜನ್ಮ ಭೂಮಿ ನಮ್ಮ ಮೂಲ ಸ್ಥಾನದ ಹತ್ತರೆಯೇ ಇಪ್ಪದು ನವಗೆ ಹೆಮ್ಮೆಯ ವಿಚಾರ ಅಲ್ಲದಾ? ಹಾಂಗಿಪ್ಪಗ ನಾವು ಹನುಮನ ವೈಭವವ ಮನಸಾ ಮಾಡಿಗೊಂಡು ಅವನ ಕೃಪೆಯ ಪಡದು, ಆ ಮೂಲಕ ಶ್ರೀ ರಾಮನ ಕೃಪೆಗೆ ಪಾತ್ರರಪ್ಪ ಹೇಳ್ತ ಭಾವನೆಲಿ, ಈ ಕೆಲಸ ಮಾಡಿದ್ದೆ. ಇದರ ಓದಿದವಕ್ಕೆ ಎಲ್ಲೋರಿಂಗೂ ಒಳ್ಳೆದಾಗಲಿ. ಇದರಿಂದ ಆರಿಂಗಾದರೂ ಪ್ರಯೋಜನ ಆದರೆ ಆನು ಅದರ ಗುರುಸೇವೆಲಿ ಎನ್ನ ಒಂದು ಅಳಿಲ ಸೇವೆ ಹೇಳಿ ತಿಳ್ಕೊಳ್ತೆ.
  ಸ್ಪಂದಿಸಿದ ಎಲ್ಲೋರಿಂಗೂ ಧನ್ಯವಾದ.

  • ನಿಮ್ಮ ಹಮುಮಾನ್ ಚಾಲಿಸ ಅನುವಾದ ಹಾಗು ಅರ್ಥ ಬಹಳ ಚೆನ್ನಾಗಿ ಕೊಟ್ಟೀದ್ದಿರಿ. ಖುಶಿ ಆಯತು . ನಿಮಗೆ ಮತ್ಥೊನ್ದು ವಿನಮ್ತಿ … ದಯವಿಟ್ಟು ಶ್ರಿರಾಮ ರಶ್ಃಆ ಸ್ತೊತ್ರ ಪ್ರಕಟಿಸಿ….

 3. Krishnamohana Bhat says:

  ಜ್ಯೋತಿಷ್ಯ ಹೇಳುವದು ಇ೦ದು ಬರೀ ಉದರ ನಿರ್ವಹಣೆಯ ದಾರಿ ಆಯಿದು ನಾವು ಪ್ರಸಿದ್ದ ಜೋಯಿಸರು ಹೇಳುವವು ಕೂಡ ಅದೊ೦ದು ದ೦ಧೆ ಆಗಿ ಮಾಡಿಯೊ೦ಡಿದವು ಹಾ೦ಗಾಗಿ ಎಲ್ಲದಕ್ಕೂ ಜೋಯಿಸರ ಹತ್ತರೆ ಹೋಪದು ಅವ್ವು ಹೇಳಿದ ಪರಿಹಾರ ಮಾಡಿಯೊ೦ಡು ತಿರುಗುವದು ಅವಶ್ಯ ಇಲ್ಲೆ.ದೇವರಮೇಗಾಣ ಅಚಲ ನ೦ಬಿಕೆ ಎದುರು ಏವ ಶಕ್ತಿಗೂ ಏನು ಮಾಡ್ಲೆ ಎಡಿಯ.ಶ್ರೀದೇವಿಅಕ್ಕ೦ ಹೇಳಿದ ಹಾ೦ಗೆ ಮನ:ಪೂರ್ವಕ ಮಡುವ ದ್ಯಾನವೇ ಎಲ್ಲದಕ್ಕು ಪರಿಹಾರ.ಜ್ಯೊತಿಷ್ಯದ ಬಗ್ಯೆ ಬಹಳ ಸಣ್ಣ ತಿಳುವಳಿಕೆ ಎನಗೆ ಇದ್ದು ಆನು ಜ್ಯೋತಿಷ್ಯ ಶಾಸ್ತ್ರವ ನ೦ಬುತ್ತೆ ಜ್ಯೋತಿಷಿಗಳ ಅಲ್ಲ.ಅನಿವಾರ್ಯ ಸ್ಥಿತಿಲಿ ಮಾ೦ತ್ರ ಸರಿಯಾದ ಜೊಯಿಶರಲ್ಲಿಗೆ ಹೋಗಿ.ಯಾವದೇ ಪರಿಹಾರ ಮಾಡ್ತರೂ ಅದು ತ್ರಿಕರಣ ಪೂರ್ವಕವಾಗಿರಲಿ.ಎಲ್ಲೋರಿ೦ಗೂ ಶುಭವಾಗಲಿ.ಒಪ್ಪ೦ಗಳೊಟ್ಟಿ೦ಗೆ.

 4. Harish kevala says:

  Mahithige danyavadagalu chikkamma…

 5. ಸೂರ್ಯ says:

  ಶ್ರೀ ಅಕ್ಕೊ…ಒಂದು ಒಳ್ಳೆ ಕೆಲಸ ಮಾಡಿದ್ದಿರಿ ನಿಂಗೊ ಕೊಶಿ ಆತು…
  ಚಾಲೀಸ ಅರ್ಥ ಸಹಿತ ವಿವರಿಸಿದ್ದು ಲಾಯ್ಕ ಆಯಿದು…
  ಒಂದು ಪ್ರಿಂಟ್ ಔಟ್ ತೆಗೆಕೆನಗೆ…..

 6. kishor yenankudlu says:

  ey soorya entha paperli baaranne ….. odvadu irulo … udyappagalo???

 7. ಬೊಳುಂಬು ಮಾವ says:

  ಹನುಮನ ವರ್ಣಿಸಿದ ಹನುಮಾನ್ ಚಾಲಿಸಿನ ಅರ್ಥ ಸಹಿತ ವಿವರಣೆ ನೋಡಿ ಕೊಶಿ ಆತು. ಎಲ್ಲೋರಿಂಗು ಒಳ್ಳೆ ಉಪಯೋಗ ಅಕ್ಕು. ಒಳ್ಳೆ ಪ್ರಯತ್ನ ಶ್ರೀ ಅಕ್ಕ. ಬರದ್ದರ ನೋಡ್ಳೆ ತಡವಾದ್ದಕ್ಕೆ ಕ್ಷಮೆ ಇರಳಿ.

 8. Archana says:

  Good job, very thoughtful

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *