ಹಿರಣ್ಯಗರ್ಭ ಸೂಕ್ತಮ್

September 26, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಸೂಕ್ತ ಗೀತಾಂಜಲಿ” ಪುಸ್ತಕಂದ ”  ಹಿರಣ್ಯಗರ್ಭ ಸೂಕ್ತಮ್ ” ನ ಇಲ್ಲಿ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~

ಹಿರಣ್ಯಗರ್ಭ ಸೂಕ್ತಮ್

ಹಿರಣ್ಯ ಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ |

ಸ ದಾಧಾರ ಪೃಥಿವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ ||೧||

ಯ ಆತ್ಮನಾ ಬಲದಾ ಯಸ್ಯ ವಿಶ್ವ ಉಪಾಸತೇ ಪ್ರಶಿಷಂ ಯಸ್ಯ ದೇವಾಃ

ಯಸ್ಯ ಛಾಯಾಮೃತಂ ಯಸ್ಯ ಮೃತ್ಯುಃ ಕಸ್ಮೈ ದೇವಾಯ ಹವಿಷಾ ವಿಧೇಮ ||೨||

ಯಃ ಪ್ರಾಣತೋ ನಿಮಿಷತೋ ಮಹಿತ್ವೈಕ ಇಂದ್ರಾಜಾ ಜಗತೋ ಬಭೂವ |

ಯ ಈಶೇ ಅಸ್ಯ ದ್ವಿಪದಶ್ಚತುಷ್ಪದಃ ಕಸ್ಮೈ ದೇವಾಯ ಹವಿಷಾ ವಿಧೇಮ ||೩||

ಯಸ್ಯೇಮೇ ಹಿಮವಂತೋ ಮಹಿತ್ವಾ ಯಸ್ಯ ಸಮುದ್ರಗ್ಂ ರಸಯಾ ಸಹಾಹುಃ |

ಯಸ್ಯೇಮಾಃ ಪ್ರದಿಶೋ ಯಸ್ಯ ಬಾಹೂ ಕಸ್ಮೈ ದೇವಾಯ ಹವಿಷಾ ವಿಧೇಮ ||೪||

ಯೇನ ದ್ಯೌರುಗ್ರಾ ಪೃಥಿವೀ ಚ ದೃಳ್ಹಾ ಯೇನ ಸ್ವ ಸ್ತಭಿತಂ ಯೇನ ನಾಕಃ |

ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ ||೫||

ಯಂ ಕ್ರಂದಸೀ ಅವಸಾ ತಸ್ತಭಾನೇ ಅಭ್ಯೈಕ್ಷೇತಾಂ ಮನಸಾ ರೇಜಮಾನೇ |

ಯತ್ರಾಧಿ ಸೂರ ಉದಿತೋ ವಿಭಾತಿ ಕಸ್ಮೈ ದೇವಾಯ ಹವಿಷಾ ವಿಧೇಮ ||೬||

ಆಪೋಹ ಯದ್ ಬೃಹತೀರ್ವಿಶ್ವಮಾಯನ್ಗರ್ಭಂ  ದಧನಾ ಜನಯಂತೀರಗ್ನಿಮ್ |

ತತೋ ದೇವಾನಾಂ ಸಮವರ್ತತಾಸುರೇಕಃ ಕಸ್ಮೈ ದೇವಾಯ ಹವಿಷಾ ವಿಧೇಮ ||೭||

ಯಶ್ಚಿದಾಪೋ ಮಹಿನಾ ಪರ್ಯಪಶ್ಯದ್ದಕ್ಷಂ ದಧಾನಾ ಜನಯಂತೀರ್ಯಜ್ಞಮ್ |

ಯೋ ದೇವೇಷ್ವಧಿ ದೇವ ಏಕ ಅಸೀತ್ಕಸ್ಮೈ ದೇವಾಯ ಹವಿಷಾ ವಿಧೇಮ ||೮||

ಓಂ ಶಾಂತಿಃ ಶಾಂತಿಃ ಶಾಂತಿಃ

ಹಿರಣ್ಯ ಗರ್ಭ ಸೂಕ್ತ (ಕನ್ನಡ ಗೀತೆ)

ಸೃಷ್ಟಿಪೂರ್ವ ಹಿರಣ್ಯ ಗರ್ಭನು ಪ್ರಜಾಪತಿಸುತ ಮೆರೆಯುತಿದ್ದ

ಜನಿತ ವಿಶ್ವದ ಏಕಪಾಲಕ ಭೂಮಿ ಸೂರ್ಯರ ಧರಿಸುತಿಹನು

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೧||

ಜೀವ ಬಲವನು ಪಡೆವರೆಲ್ಲರು ದೇವತೆಗಳಿಗೆ ನಿಯಮವವನೆ

ಮೃತ್ಯು ಅಮೃತವು ನಡೆದು ಬರುವುದು ನೆರಳ ತೆರದಲಿ ಅವನ ಹಿಂದೆ

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೨||

ಜಂಗಮಗಳಿಗು ಸ್ಥಾವರಗಳಿಗು ರಾಜನಾತನೆ ಶ್ರೇಷ್ಠನವನು

ಈಶನಾತನು ಎರಡು ಪಾದದ ನಾಲ್ಕು ಪಾದದ ಜೀವಿಗಳಿಗೆ

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೩||

ಶೈಲ ಹಿಮಗಿರಿ ಸಾರ್ವುದಾತನ ಗಂಗೆ ವಾರಿಧಿಯಂತೆ ಮಹಿಮೆ

ಬಾಹು ಚಾಚಿದೆ ಎಂಟು ದಿಕ್ಕಿಗು ಸ್ಥೂಲ ಗೋಚರವಾಗಿ ತೋರಿ

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೪||

ಸ್ಥಿರವು ಸ್ವರ್ಗವು ಧೃಢವು ಭೂಮಿಯು ಪುಣ್ಯ ಪುರುಷರ ಲೋಕ ಕೂಡ

ಸೃಷ್ಟಿರಾಜನ ಕರ್ತೃವಾತನ ಅಂತರಿಕ್ಷದಿ ಬೆಳಗುತಿಹುದು

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೫||

ಪೃಥ್ವಿ ದ್ಯಾವಾ ಎರಡು ಲೋಕವು ತಮ್ಮ ರಕ್ಷಣೆಗೊಂಬ ವಿಧದಿ

ಮನದಿ ಬರುವುದು ಮಹಿಮೆಯಾತನ ಸೂರ್ಯಬೆಳಗುವನವನ ದಯದಿ

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೬||

ಪುಣ್ಯ ಜಲವನು ದಕ್ಷ ದೇವನು ಧರಿಸಿ ಅಗ್ನಿಯ ಸೃಷ್ಟಿಗೈದ

ದೇವತೆಗಳಿಗೆ ಪ್ರಾಣ ತುಂಬಿದ ಜಲದ ಮೂಲದ ಜಗದ ಜನನ

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೭||

ವೇದ ಕಾರ್ಯಕೆ ಅಗ್ನಿಯಿತ್ತನು ಜಲವ ಧರಿಸಿದ ದಕ್ಷ ದೇವ

ದೇವತೆಗಳಿಗು ಪ್ರಾಣ ನೀಡಿದ ಮಹಿಮ ಶ್ರೇಷ್ಠ ಹಿರಣ್ಯ ಗರ್ಭ

ಸುಖ ಸ್ವರೂಪದ ದೇವತಾತ್ಮಗೆ ಯಜ್ಞ ಹವಿಸನು ಅರ್ಪಿಸೋಣ ||೮||

ಓಂ ಶಾಂತಿಃ ಶಾಂತಿಃ ಶಾಂತಿಃ

ಸಂಗ್ರಹ: ಸೂಕ್ತ ಗೀತಾಂಜಲಿ- ಡಾ|ಮಡ್ವ ಶಾಮ ಭಟ್ಟ

ಹಿರಣ್ಯಗರ್ಭ ಸೂಕ್ತಮ್, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°

  ಬಳಕೆಲಿ ಅಪರೂಪ ಆಗಿಪ್ಪ ಹಿರಣ್ಯಗರ್ಭ ಸೂಕ್ತ ‘ಸೃಷ್ಟಿಪೂರ್ವ ಹಿರಣ್ಯ ಗರ್ಭನು ಪ್ರಜಾಪತಿಸುತ ಮೆರೆಯುತಿದ್ದ’ ಹೇಳಿ ಕನ್ನಡ ಅನುವಾದ ಸಹಿತ ಬೈಲಿಂಗೆ ಕೊಟ್ಟದಕ್ಕೆ ಶರ್ಮಪ್ಪಚ್ಚಿಗೆ ಧನ್ಯವಾದ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  “ಒಳ್ಳೆ” ಬರವಲೆಡಿತ್ತು ಕಲಿಶಿದ್ದಕ್ಕೊಂದು ಒಳ್ಳೆತ thanks…

  [Reply]

  VN:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ಈ ಸೂಕ್ತವ ಸುಬ್ರಹ್ಮಣ್ಯಲ್ಲಿ ಕಲಿವಲೆ ಆಗಿತ್ತಿಲ್ಲೆ..
  ಶರ್ಮಪ್ಪಚ್ಚಿ ಇಲ್ಲಿ ಕೊಟ್ಟದು ಒಳ್ಳೆದಾತಿದಾ..
  :):)

  [Reply]

  VN:F [1.9.22_1171]
  Rating: 0 (from 0 votes)
 3. ಕೃಷ್ಣ ಭಟ್ ಶೇಡಿಗುಮ್ಮೆ

  ಶರ್ಮ ಭಾವ,

  ಧನ್ಯವಾದಂಗೋ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಡಾಗುಟ್ರಕ್ಕ°ದೊಡ್ಮನೆ ಭಾವಅಕ್ಷರ°ಯೇನಂಕೂಡ್ಳು ಅಣ್ಣಚೆನ್ನೈ ಬಾವ°ಅನುಶ್ರೀ ಬಂಡಾಡಿಮಾಷ್ಟ್ರುಮಾವ°ಶೇಡಿಗುಮ್ಮೆ ಪುಳ್ಳಿಒಪ್ಪಕ್ಕಶ್ರೀಅಕ್ಕ°ರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಪೆರ್ಲದಣ್ಣಗೋಪಾಲಣ್ಣಹಳೆಮನೆ ಅಣ್ಣವಸಂತರಾಜ್ ಹಳೆಮನೆವಿಜಯತ್ತೆಬೊಳುಂಬು ಮಾವ°ವೆಂಕಟ್ ಕೋಟೂರುಪಟಿಕಲ್ಲಪ್ಪಚ್ಚಿನೆಗೆಗಾರ°ತೆಕ್ಕುಂಜ ಕುಮಾರ ಮಾವ°ಬಂಡಾಡಿ ಅಜ್ಜಿಪವನಜಮಾವಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ