Oppanna.com

ಯಜ್ಞೋಪವೀತ ಧಾರಣೆ – ಜೆನಿವಾರ ಹಾಕುವ ಕ್ರಮ

ಬರದೋರು :   ಬಟ್ಟಮಾವ°    on   24/08/2010    66 ಒಪ್ಪಂಗೊ

ಬಟ್ಟಮಾವ°

ಬ್ರಾಹ್ಮಣ ಆಗಿ ಇದ್ದವಂಗೆ ಅವಿಭಾಜ್ಯ ಅಂಗವೇ ಅವನ ಯಜ್ಞೋಪವೀತ.
ಪ್ರತಿ ಒರಿಶ ಶ್ರಾವಣ ಹುಣ್ಣಮೆಯ ದಿನ ‘ನೂಲಹುಣ್ಣಮೆ’ ಹೇಳಿ ಆಚರಣೆ ಮಾಡ್ತ ಮರಿಯಾದಿ.
ಇಂದು, ಅಗೋಷ್ಟು ೨೪- ನೂಲ ಹುಣ್ಣಮೆ.
ಉಪ್ನಯನ ಆಗಿ, ಮಂತ್ರಂಗೊ ಸಮಗಟ್ಟು ಬಾರದ್ದೆ ಇಪ್ಪ ಒಪ್ಪಣ್ಣಂದ್ರಿಂಗಾಗಿ ಈ ಸರ್ತಿ ಯಜ್ಞೋಪವೀತಧಾರಣೆಯ ಮಂತ್ರ ಬರದು ಕೊಟ್ಟದು!
ನೋಡಿ, ನಿಂಗೊಗೆ ಉಪಕಾರ ಆವುತ್ತೋ ಹೇಳಿಗೊಂಡು.
ನಿನ್ನೆ ಗೋಕರ್ಣಂದ ಬಂದದಷ್ಟೇ. ಹಾಂಗೆ ಮೈಕೈಬೇನೆ ರಜಾ ಇದ್ದಿದಾ. ಪೂರ್ತಿ ವಿವರವಾಗಿ ಬರವಲೆ ಆತಿಲ್ಲೆ.
ತೂಷ್ಣಿಲಿ ಹೇಳಿಗೊಂಡು ಹೋಯಿದೆ. ನೋಡೊ°, ಮುಂದಕ್ಕೆ ವಿವರವಾಗಿ ಬರವಲಕ್ಕು, ದೇವರು ಎತ್ತುಸಿಯಪ್ಪಗ.

 

ಹೇಳಿದಾಂಗೆ,
ಹೊಸ ಜೆನಿವಾರ ಹಾಕಲೆ ಬೇಕಾದ ಸಾಮಾನುಗೊ:
 
ಹೊಸ ಜೆನಿವಾರ:

  • ಬ್ರಹ್ಮಚಾರಿಗೊಕ್ಕೆ: 1
  • ಗೃಹಸ್ಥರಿಂಗೆ: 2

 
ಹೂಗು: ಯಥಾಶೆಗ್ತಿ
ತಳದ ಗಂಧ: ಒಂದು ರಜ್ಜ
ಅಕ್ಕಿಕಾಳು: ಅರ್ಧ ಹಿಡಿ
ತೊಳಶಿ: ಒಂದು ಕೊಡಿ
ನೈವೇದ್ಯಕ್ಕಿಪ್ಪದು: ಹಾಲು / ಬೆಲ್ಲ / ಬಾಳೆಹಣ್ಣು / ಫಲವಸ್ತುಗೊ – ಎಂತದೂ ಅಕ್ಕು, ಯಥಾಶೆಗ್ತಿ.
ಎರಡು ಹರಿವಾಣ, ಒಂದು ಕೌಳಿಗೆ ಸಕ್ಕಣ.
 
ತಯಾರಿ:
ಉದಿಯಪ್ಪಗಳೇ ಶುಭ್ರವಾಗಿ ಮಿಂದು, ಶುಭ್ರಮನಸ್ಸಿಲಿ ಬಂದು ದೇವರದೀಪ ಹೊತ್ತುಸೇಕು.
ಜೆನಿವಾರದ ಪಿರಿ ತೆಗದು, ಪವಿತ್ರಗೆಂಟು ಹಾಕೇಕು. (ಅದರ ಬಗ್ಗೆ ಸದ್ಯಲ್ಲೇ ಹೇಳ್ತೆ, ಈಗ ಪುರುಸೊತ್ತು ಸಾಲ. ಹೊಸಮೊಗ್ರಿಲಿ ಉಪಾಕರ್ಮ ಇದ್ದು, ಹೋಯೇಕು!)
ಪವಿತ್ರ ಗೆಂಟಿನ ಸಣ್ಣಕೆ ಚೆಂಡಿಮಾಡಿ ಅದಕ್ಕೆ ಕುಂಕುಮವೋ, ಅರುಶಿನವೋ ಮತ್ತೊ ಮುಟ್ಟುಸೇಕು. (ಬೆಳಿ ಒಸ್ತ್ರವ-ನೂಲಿನ ಹಾಂಗೇ ಹಾಯ್ಕೊಂಬಲಾಗ ನಾವು ಹೇಳ್ತದು ಮದಲಾಣ ಶಾಸ್ತ್ರ)
ಒಂದು ಹರಿವಾಣಲ್ಲಿ ಹೂಗು-ಗಂಧ-ಅಕ್ಕಿಕಾಳು ಹಾಯ್ಕೊಂಡು ನಿಂಗಳ ಕೈಯ ಹತ್ತರೆ ಮಡಿಕ್ಕೊಳಿ.
ನೀರು ತುಂಬಿದ ಕೌಳಿಗೆಲಿ ಸಕ್ಕಣವ ಮಡಿಕ್ಕೊಂಡು ಹೂಗಿನ ಹರಿವಾಣದ ಹತ್ತರೆ ಮಡಿಕ್ಕೊಳಿ.
ಇನ್ನೊಂದು ಹರಿವಾಣಲ್ಲಿ ಪವಿತ್ರ ಗೆಂಟು ಹಾಕಿ ಕುಂಕುಮ ಮುಟ್ಟುಸಿದ ಜೆನಿವಾರವ ಹಾಕಿ ಎದುರು ಮಡಿಕ್ಕೊಳಿ.
ಒಂದು ಹೊಸಾ ಕಾರ್ಯವ ಮಾಡ್ತ ಶುಭ್ರತೆಯ ಮನಸ್ಸು ಪೂರ್ತ ಮಡಿಕ್ಕೊಳಿ.
ಚಕ್ಕನಕಟ್ಟಿ ದೇವರ ದೀಪದ ಎದುರು ಸರ್ತ ಕೂದುಗೊಳ್ಳಿ!
 
ಕ್ರಮಂಗೊ:
1. ಆಚಮನ:
ಓಂ ಋಗ್ವೇದಾಯ ಸ್ವಾಹಾ ||
ಓಂ ಯಜುರ್ವೇದಾಯ ಸ್ವಾಹಾ ||
ಓಂ ಸಾಮವೇದಾಯ ಸ್ವಾಹಾ ||

– ಮೂರು ಸಕ್ಕಣ ನೀರು ಕುಡ್ಕೊಳೇಕು!
ಅಥರ್ವ ವೇದಾಯ ನಮಃ ||
ಇತಿಹಾಸ ಪುರಾಣೇಭ್ಯೋ ನಮಃ ||

– ಮೇಗಾಣ, ಕೆಳಾಣ ತೊಡಿಯ ಒಂದರಿ ಉದ್ದಿಗೊಳೇಕು!
 
2.ಸಂಕಲ್ಪ:
ಒಂದು ಎಸಳು ಹೂಗಿಂಗೆ ಗಂಧ, ಅಕ್ಷತೆಯ ಮುಟ್ಟುಸಿಗೊಂಡು, ಎಡದ ಅಂಗೈಲಿ ಮಡಗೆಕ್ಕು.
ಬಲದ ಹೆಬ್ಬೆರಳಿಂಗೆ ಜೆನಿವಾರವ ತಾಗಿಸೆಂಡು ಎಡಗೈಯ ಮುಚ್ಚೇಕು.
ಮುಚ್ಚಿದ ಕೈಯ ಬಲ ಮೊಳಪ್ಪಿಲಿ ಮಡಗೆಕ್ಕು!
ಕಾರ್ಯದ ಸಂಕಲ್ಪಮಾಡ್ತ ಲೆಕ್ಕಲ್ಲಿ – ಸರ್ತ ಕೂದಂಡು ಈ ಮಂತ್ರವ ಜೋರಾಗಿ ಹೇಳೆಕ್ಕು:
ಮಮೋಪಾತ್ತ ದುರಿತಕ್ಷಯದ್ವಾರಾ, ಶ್ರೀ ಪರಮೇಶ್ವರಃ ಪ್ರೀತ್ಯರ್ಥಂ, ಶ್ರೌತ ಸ್ಮಾರ್ತ ವಿಹಿತ ನಿತ್ಯ ಕರ್ಮಾನುಷ್ಠಾನ ಯೋಗ್ಯತಾ ಸಿಧ್ಯರ್ಥಂ –
ನೂತನ ಯಜ್ಞೋಪವೀತ ಧಾರಣಮಹಂ ಕರಿಷ್ಯೇ ||

– ಈ ಮಂತ್ರ ಹೇಳಿಕ್ಕಿ, ಎಡ ಅಂಗೈಲಿ ಇಪ್ಪ ಹೂಗಿನ ಎರಡೂ ಕೈಲಿ ಒಟ್ಟಿಂಗೆ ಹಿಡುದು ಎದುರು ತಟ್ಟೆಲಿ ಮಡಗಿದ ಜೆನಿವಾರಕ್ಕೆ ಹಾಕೇಕು.
 
3. ಜೆನಿವಾರವ ಶುದ್ಧ ಮಾಡುದು:
ಒಂದು ಕೊಡಿ ತೊಳಶಿಗೆ ಗಂಧ, ಅಕ್ಷತೆಯ ಮುಟ್ಟುಸಿಗೊಂಡು, ಎಡದ ಅಂಗೈಲಿ ಮಡಗೆಕ್ಕು. ಬಲಗೈಲಿ ಅದಕ್ಕೆ ಒಂದು ಸಕ್ಕಣ ನೀರು ಎರೇಕು.
ಮತ್ತೆ, ಬಲಗೈಲಿ ಆ ತೊಳಶಿಕೊಡಿ ಹಿಡ್ಕೊಂಡು ಜೆನಿವಾರದ ಮೇಗಂಗೆ ಒಂದೊಂದೇ ಹನಿ (ತಳಿಯೆಕ್ಕು) ಪ್ರೋಕ್ಷಣೆಮಾಡೇಕು.

ಆಪೋಹಿಷ್ಠಾ ಮಯೋಭುವಃ | ತಾನ ಊರ್ಜೇ ದಧಾತನ | ಮಹೇ ರಣಾಯ ಚಕ್ಷಸೇ ||
ಯೋವಃ ಶಿವತ ಮೋ ರಸಃ | ತಸ್ಯ ಭಾಜಯ ತೇ ಹನಃ | ಉಷ ತೀರಿವ ಮಾತರಃ ||
ತಸ್ಮಾ ಅರಂಗಮಾಮವಃ | ಯಸ್ಯ ಕ್ಷಯಾಯ ಜಿನ್ವಥ | ಆಪೋ ಜನಯ ತಾ ಚನಃ ||
– ಮೂರು ಸರ್ತಿ ಈ ಮಂತ್ರ ಹೇಳಿ ಪ್ರೋಕ್ಷಣೆ ಮಾಡಿರೆ ಒಳ್ಳೆದು ಹೇಳ್ತು ಶಾಸ್ತ್ರ!
ಪ್ರೋಕ್ಷಣೆ ಮಾಡಿದ ಮತ್ತೆ ಕೈಲಿರ್ತ ತೊಳಶಿಕೊಡಿಯ ನೆಲಕ್ಕಲ್ಲಿ, ಅತವಾ ಕೈನಾತ್ತಮರಿಗ್ಗೆ ಹಾಕಿಬಿಡಿ. (ಪುನಾ ಹೂಗಿನ ತಟ್ಟಗೆ ಹಾಕಲಾಗ – ಅದು ನಿರ್ಮಾಲ್ಯ)

 
4. ನವತಂತುದೇವತಾ ಪೂಜೆ:

4.1. ನಮಸ್ಕಾರ:
ಶುದ್ಧಮಾಡಿದ ಜೆನಿವಾರಕ್ಕೆ ಇನ್ನು ಪೂಜೆ ಮಾಡುದು.
ಕ್ರಮಪ್ರಕಾರದ ಜೆನಿವಾರದ ಒಂದು ಎಳೆಲಿ ಒಂಬತ್ತು ತಂತು ಇರ್ತು. ಹಾಂಗಾಗಿ ಜೆನಿವಾರವ ನವತಂತು ದೇವತೆ ಹೇಳಿಯೂ ಹೇಳ್ತವು.

ತಂತುದೇವತೆಯಾದ ಜೆನಿವಾರಕ್ಕೆ ಈ ಶ್ಲೋಕ ಹೇಳಿಗೊಂಡು ಕೈಮುಗುದು ನಮಸ್ಕಾರ ಮಾಡೇಕು:

ಓಂಕಾರೋಗ್ನಿಶ್ಚ ನಾಗಶ್ಚ ಸೋಮಃ ಪಿತೃ ಪ್ರಜಾಪತಿ |
ವಾಯುಃ ಸೂರ್ಯೋ ವಿಶ್ವೇ ದೇವಾ ಇತ್ಯೇತೇ ತಂತು ದೇವತಾ||

 
4.2. ಆವಾಹನೆ:
ಇನ್ನು, ಒಂದೊಂದೇ ಹೂಗಿನ ಎಸಳಿನ ಜೆನಿವಾರದ ಮೇಗೆ ಹಾಕಿ ತಂತುದೇವತೆಯ ಆವಾಹನೆ ಮಾಡೇಕು.
ಓಂ ಭೂಃ | ನವತಂತುದೇವತಾ ಆವಾಹಯಾಮಿ ||
ಓಂ ಭುವಃ | ನವತಂತುದೇವತಾ ಆವಾಹಯಾಮಿ ||
ಓಗುಂ ಸುವಃ | ನವತಂತುದೇವತಾ ಆವಾಹಯಾಮಿ ||
ಓಂ ಭೂರ್ಭುವಃಸುವಃ | ನವತಂತುದೇವತಾಮಾವಾಹಯಾಮಿ ||

– ನಾಕು ಸರ್ತಿ ಎಸಳಿನ ಹಾಕಿ ಆದ ಮತ್ತೆ ಇನ್ನು ಷೋಡಷೋಪಚಾರ ಪೂಜೆ.
 
5. ಷೋಡಷೋಪಚಾರ ಪೂಜೆ:
ಹದಿನಾರು ಉಪಚಾರಂಗಳ ಮೂಲಕ ದೇವತೆಗಳ ಪೂಜೆ ಮಾಡ್ತ ಕ್ರಮ – ಎಲ್ಲಾ ಪೂಜೆಗಳಲ್ಲೂ ಇದರ ಬಳಕೆ ಇದ್ದು.
ನವತಂತು ದೇವತೆಗೂ ಈ ಷೋಡಷೋಪಚಾರ ಪೂಜೆ ಮಾಡೇಕು.
ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ ||
ಆಸನಂ ಸಮರ್ಪಯಾಮಿ ||
ಪಾದ್ಯಂ ಸಮರ್ಪಯಾಮಿ ||
ಅರ್ಘ್ಯಂ ಸಮರ್ಪಯಾಮಿ ||
ಸ್ನಾನಂ ಸಮರ್ಪಯಾಮಿ ||
ಆಚಮನೀಯಂ ಸಮರ್ಪಯಾಮಿ ||
ಗಂಧಂ ಸಮರ್ಪಯಾಮಿ ||
ಅಕ್ಷತಾನ್ ಸಮರ್ಪಯಾಮಿ ||
ಪುಷ್ಪಂ ಸಮರ್ಪಯಾಮಿ ||
ದೂಪಮಾಘ್ರಾಪಯಾಮಿ ||
ದೀಪಂ ದರ್ಶಯಾಮಿ ||
ನೈವೇದ್ಯಂ ಸಮರ್ಪಯಾಮಿ ||
ತಾಮ್ಬೂಲಂ ಸಮರ್ಪಯಾಮಿ ||
ಪ್ರದಕ್ಷಿಣಾಂ ಸಮರ್ಪಯಾಮಿ ||
ನಮಸ್ಕಾರಾನ್ ಸಮರ್ಪಯಾಮಿ ||
ಪ್ರದಕ್ಷಿಣ ನಮಸ್ಕಾರಾದಿ ಸರ್ವೋಪಚಾರ ಪೂಜಾಃ ಸಮರ್ಪಯಾಮಿ ||
– ಪ್ರತಿ ಸಮರ್ಪಣೆಗೂ ಒಂದೊಂದು ಹೂಗು ಹೊಸ ಜೆನಿವಾರಕ್ಕೆ ಹಾಕುದು.
 
6. ನೈವೇದ್ಯ:
ನಿಂಗೊ ತಂದು ಮಡಗಿದ ನೈವೇದ್ಯ ಮಾಡ್ತ ವಸ್ತು ಎಂತ ಇದ್ದೋ – ಅದರ ಜೆನಿವಾರದ ಎದುರು ಮಡಗುದು.
ಗಾಯತ್ರಿಮಂತ್ರಲ್ಲಿ ತೊಳಶಿಲಿ ಹನಿಹನಿ ಪ್ರೋಕ್ಷಣೆ ಮಾಡೇಕು:

ಓಂ | ಭೂರ್ಭುವಃ ಸುವಃ ||
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||

ಪ್ರೋಕ್ಷಣೆ ಆದ ನೈವೇದ್ಯದ ವಸ್ತುವಿಂಗೆ ನೀರು ಸುತ್ತು ಕಟ್ಟುದು:
ಸತ್ಯಂ ತ್ವರ್ತೇನ ಪರಿಷಿಂಚಾಮಿ ||

ನೈವೇದ್ಯಕ್ಕೆ ಎಂತರ ಮಡಗಿದ್ದೋ – ಅದರ ನವತಂತು ದೇವತೆಗೆ ಕೊಡ್ತಾ ಇದ್ದೆ ಹೇಳಿ ಮಂತ್ರಪೂರ್ವಕ ಹೇಳುದು.
ಸುತ್ತುಗಟ್ಟಿದ ಒಂದು ಹೂಗಿನ ಜೆನಿವಾರದ ಮೇಗೆ ಹಾಕುದು:
ನವತಂತು ದೇವತಾಭ್ಯೋ ನಮಃ |
ನೈವೇದ್ಯಾರ್ಥೇ ಇದಂ  – ಗೋಕ್ಷೀರಂ(ಹಾಲು) / ಕದಲೀ ಫಲಂ (ಬಾಳೆಹಣ್ಣು) / ಫಲವಿಶೇಷಂ (ಇತರ ಹಣ್ಣು ಹಂಪಲುಗೊ) / ಗುಡಂ (ಬೆಲ್ಲತುಂಡು) / ಶರ್ಕರಂ (ಸಕ್ಕರೆ)
ಮಹಾನೈವೇದ್ಯಂ ನಿವೇದಯಾಮಿ, ತತ್ಸದಮೃತಮಸ್ತು ||

– ಸುತ್ತುಗಟ್ಟಿದ ಹೂಗಿನ ಜೆನಿವಾರದ ಮೇಗಂಗೆ ಹಾಕೇಕು!
ಒಂದು ಸಕ್ಕಣ ನೀರು ಜೆನಿವಾರದ ಮೇಗೆ ಹಾಕೇಕು.
ಅಮೃತೋಪಸ್ತರಣಮಸಿ ಸ್ವಾಹಾಃ |

ಇನ್ನು, ಎದುರೆ ಮಡಗಿದ ನೈವೇದ್ಯವ ದೇವರಿಂಗೆ ತಿಂಬಲೆ ಕೊಡ್ತ ನಮುನೆಲಿ ಕೊಡೆಕ್ಕು.
(ಪ್ರತಿಯೊಂದಕ್ಕೂ ಬೇರೆಬೇರೆ ಬೆರಳುಗಳ ಪ್ರಯೋಗ ಇದ್ದು – ಗಣೇಶಮಾವ ಅಂದೊಂದರಿ ಹೇಳಿದ್ದವು. ಆಸಕ್ತಿ ಇದ್ದರೆ ನೋಡಿಗೊಳ್ಳಿ.)
ಪ್ರತಿ ಸ್ವಾಹಾಕಾರಕ್ಕೂ ಒಂದರಿ ಕೈಯ ಮುಂದೆ ಮಾಡೆಕ್ಕು:
ಓಂ ಪ್ರಾಣಾಯ ಸ್ವಾಹಾ ||
ಓಂ ಅಪಾನಾಯ ಸ್ವಾಹಾ ||
ಓಂ ವ್ಯಾನಾಯ ಸ್ವಾಹಾ ||
ಓಂ ಉದಾನಾಯ ಸ್ವಾಹಾ ||
ಓಂ ಸಮಾನಾಯ ಸ್ವಾಹಾ ||
ಓಂ ಬ್ರಹ್ಮಣೇ ಸ್ವಾಹಾ ||

ದೊಂಡೆಕಟ್ಟುದಕ್ಕೆ ದೇವರಿಂಗೆ ಒಂದು ಸಕ್ಕಣ ನೀರು ಕೊಡೆಕ್ಕಿದಾ:
ಮಧ್ಯೇ ಮಧ್ಯೇ ಅಮೃತ ಪಾನೀಯಂ ಸಮರ್ಪಯಾಮಿ ||
ಅಖೇರಿಗೆ ಇನ್ನೊಂದು ಸಕ್ಕಣ ನೀರು ಬಿಡೆಕು –
ಅಮೃತಾಪಿಧಾನಮಸಿ ಸ್ವಾಹಾ ||
ನೈವೇದ್ಯ ಕಾರ್ಯವ ಅಂತ್ಯ ಗೊಳುಸೇಕು –
ಸಮರ್ಪಿತ ಮಹಾ ನೈವೇದ್ಯಂ ಉದ್ವಾಸಯಾಮಿ ||
 
7. ಯಥಾಶಕ್ತಿ ಗಾಯತ್ರಿ ಜೆಪ:
ಅವರವರ ಪುರುಸೊತ್ತು, ಆಸಗ್ತಿಯ ಹೊಂದಿಗೊಂಡು ಯತಾಶೆಗ್ತಿ ಗಾಯತ್ರಿ ಜೆಪ ಮಾಡ್ತವು.  ಸಾಮಾನ್ಯವಾಗಿ ಮಾಡ್ತ ಜೆಪದ ಸಂಕೆ ಹೀಂಗಿದ್ದು: 12, 24, 48, 108, 1008, 10008..
ಕನಿಷ್ಠ ಹನ್ನೆರಡಕ್ಕೆ ಕಡಮ್ಮೆ ಇಲ್ಲದ್ದೆ ಜೆಪ ಮಾಡಿರೆ ಒಳ್ಳೆದು. ಜೆಪ ಮಾಡುವಗ ಜೆನಿವಾರವ ಪವಿತ್ರ ಬೆರಳಿಲಿ ಮುಟ್ಟಿಗೊಳೇಕು.
ಗಾಯತ್ರಿ ಜೆಪ:
ಓಂ ಭೂರ್ಭುವಸ್ಸುವಃ |
ತತ್ಸವಿತುರ್ವೇಣ್ಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋನಃ ಪ್ರಚೋದಯಾತ್ ||
– ಗಾಯತ್ರಿ ಜೆಪ ಆದ ಕೂಡ್ಳೇ ಆ ಜೆನಿವಾರವ ಕೈಲಿ ಹಿಡ್ಕೊಳೆಕ್ಕು
 
8. ನೆಲಕ್ಕಲ್ಲಿ ಮಡಗುದು:
ಜೆನಿವಾರವ ಒಂದರಿ ಬರೇ ನೆಲಕ್ಕಲ್ಲಿ ಮಡಗೆಕ್ಕು. ಒಂದೇ ಸರ್ತಿ, ಕೊನೆಯ ಸರ್ತಿ ಜೆನಿವಾರ ಇಡೀಯಾಗಿ ನೆಲಕ್ಕ ಮುಟ್ಟುದು.
ನೆಲಕ್ಕಲ್ಲಿ ಮಡಗಿ ಈ ಮಂತ್ರವ ಹೇಳೆಕ್ಕು:
ಸ್ಯೋನಾಪೃಥಿವಿ ಭವಾ ನೃಕ್ಷರಾ ನಿವೇಶನೀ |
ಯಚ್ಛಾನಃ ಶರ್ಮ ಸಪ್ರಥಾಃ |
ಪೃಥಿವ್ಯೈ ನಮಃ ||

 
9. ಕೈಲಿ ಹಿಡ್ಕೊಂಬದು:
ನೆಲಕ್ಕಲ್ಲಿ ಮಡಗಿದ ಜೆನಿವಾರವ ಕೈಲಿ ಹಿಡ್ಕೊಂಬದು. ಇನ್ನು ಆ ಜೆನಿವಾರ ನೆಲಕ್ಕಕ್ಕೆ ಮುಟ್ಳಾಗ ಇದಾ!
ದೇವಃಸ್ಯತ್ವಾ ಸವಿತುಃ ಪ್ರಸವೇ |
ಅಶ್ವಿನೋರ್ಬಾಹುಭ್ಯಾಂ |
ಪೂಷ್ಣೋ ಹಸ್ತಾಭ್ಯಾಂ ||

 
10. ಸೂರ್ಯಂಗೆ ತೋರುಸೇಕು:
ಜೆನಿವಾರವ ಕೈಲಿ ಹಿಡ್ಕೊಂಡು, ಕೂದಲ್ಲಿಂದ ಎದ್ದು ಹೋಗಿ ಸೂರ್ಯನ ಬೆಣ್ಚಿಗೆ ಹಿಡಿಯೇಕು.

ಉದ್ವಯಂತಮಸಸ್ಪರಿ ಪಶ್ಯಂತೋ ಜ್ಯೋತಿರುತ್ತರಂ |
ದೇವಂ ದೇವತ್ವಾ ಸೂರ್ಯಮಗನ್ಮ ಜ್ಯೋತಿರುತ್ತಮಂ ||
ಉದುತ್ಯಂ ಜಾತವೇದಸಂ ದೇವಂ ವಹಂತಿ ಕೇತವಃ |
ದೃಶೇ ವಿಶ್ವಾಯ ಸೂರ್ಯಂ ಚಿತ್ರಂ ದೇವಾನಾಮುದಗಾದನೀಕಂ |
ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ |
ಆಪಾದ್ಯಾವಾ ಪೃಥಿವೀ ಅಂತರಿಕ್ಷಗುಂ ಸೂರ್ಯ ಆತ್ಮಾ
ಜಗತಸ್ತಸ್ಥುಶಷ್ಚ ||

– ಈ ಮಂತ್ರ ಹೇಳಿಗೊಂಡು ಸೂರ್ಯಂಗೆ ತೋರುಸಿಕ್ಕಿ, ಪುನಾ ಮಣೆಲಿ ಬಂದು ಕೂದುಗೊಳೆಕ್ಕು.

 
11. ಯಜ್ಞೋಪವೀತಧಾರಣೆ:
ಈ ಮಂತ್ರವ ಮೂರು ಸರ್ತಿ ಹೇಳಿಗೊಂಡು, ಬಲದ ಕೈಲಿ ಆಗಿ, ಬಲ ಭುಜ ಆಗಿ, ತಲಯ ಮೇಲ್ಕಟೆ ಆಗಿ ಜೆನಿವಾರವ ಹಾಕೇಕು:
ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇಃ ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ||
(ಯೇವ ಬ್ರಹ್ಮಚಾರಿ ಆದರೂ ಈ ಒಂದು ಕ್ಷಣ ಎರಡು ಜನಿವಾರ ಇರ್ತು ಅವನ ಮೈ ಮೇಲೆ! ಹೆ ಹೆ, ಬಟ್ಟಮಾವಂಗೆ ರಜಾ ಕುಶಾಲಿದ್ದಾತ. ಕ್ರಿಯಕ್ಕೆ ಕೂದರೆ ಮತ್ತೆ ಗಂಭೀರ!)
ಇದಾಗಿ ಒಂದರಿ ಆಚಮನ ಮಾಡುದು, ಆಗಾಣ ಹಾಂಗೇ.

 
12. ಹಳೆ ಜೆನಿವಾರದ ವಿಸರ್ಜನೆ:
ಈ ಮಂತ್ರ ಹೇಳಿಗೊಂಡು, ಹಳೆಯ ಜೆನಿವಾರವ ಎಡ ಹೆಗಲಿಲಿ ಆಗಿ ಕೆಳ ತಂದು, ಸೊಂಟಲ್ಲೆ ಆಗಿ ದಾಂಟುಸಿ, ಕಾಲ ಮೂಲಕ ಕೆಳ ತೆಗೇಕು.
ಉಪವೀತಂ ಬ್ರಹ್ಮತಂತುಂ ಛಿದ್ರಂ ಕಲ್ಮಶ ಸಂಹಿತಂ |
ವಿಸೃಜಾಮಿ ನಚ ಬ್ರಹ್ಮವರ್ಚೋ ದೀರ್ಘಾಯುರಸ್ತು ಮೇ ||
– ಹೆರ ತೆಗದ ಜೆನಿವಾರವ ತುಂಡುಸೇಕು. ತುಂಡುಸಿ ಕೈನಾತ್ತ ಮರಿಗೆಗೆ ಹಾಕಿ, ಆಚಮನ ಮಾಡೆಕ್ಕು.
 
13. ಬ್ರಹ್ಮಾರ್ಪಣ:
ಎಲ್ಲ ಕಾರ್ಯ ಆದ ಮೇಗೆ ಹೂಗಿನ ತಟ್ಟೆಲಿ ಒಳುದ ಹೂಗು, ಗಂಧ, ಅಕ್ಕಿಕಾಳಿನ ಬರಗಿ ಕೈಲಿ ಹಿಡ್ಕೊಳೇಕು.
ಈ ಮಂತ್ರ ಹೇಳಿಗೊಂಡು ಎಡದ ಕೈಲಿ ನೀರು ಬಿಡೆಕ್ಕು:
ಅನೇನ ನೂತನ ಯಜ್ಞೋಪವೀತ ಧಾರಣ ಕರ್ಮಣಾ, ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್ ॥
– ಕೈಲಿಪ್ಪ ಎಲ್ಲಾ ವಸ್ತುಗಳನ್ನೂ ಪೂಜೆ ಮಾಡಿದ, ಜೆನಿವಾರ ಇದ್ದ ತಟ್ಟಗೆ ಬಿಟ್ಟು, ಕೈ ಮುಗಿಯೇಕು.
 
14. ಆಚಮನ:
ಓಂ ಋಗ್ವೇದಾಯ ಸ್ವಾಹಾ ||
ಓಂ ಯಜುರ್ವೇದಾಯ ಸ್ವಾಹಾ ||
ಓಂ ಸಾಮವೇದಾಯ ಸ್ವಾಹಾ ||

– ಮೂರು ಸಕ್ಕಣ ನೀರು ಕುಡ್ಕೊಳೇಕು!
 
ಹಳೆ ಜೆನಿವಾರವ ಹರಿವ ನೀರಿಂಗೋ, ಬಾವಿಗೋ, ತೊಳಶಿಕಟ್ಟೆಗೋ, ತೆಂಗಿನ ಬುಡಕ್ಕೋ – ಅಶುದ್ಧ ಆಗದ್ದ ಜಾಗಗೆ ಹಾಕೆಕ್ಕು.

 
 
ಎಲ್ಲೋರಿಂಗೂ ಒಳ್ಳೆದಾಗಲಿ. ಗುರುಗಳ, ಕುಲದೇವರ ಆಶೀರ್ವಾದ ನಿಂಗೊಗಿರಳಿ.
ನಿಂಗಳ,

ಬಟ್ಟಮಾವ°

66 thoughts on “ಯಜ್ಞೋಪವೀತ ಧಾರಣೆ – ಜೆನಿವಾರ ಹಾಕುವ ಕ್ರಮ

  1. ಇನ್ನು ಕ್ರಮವತ್ತಾಗಿ ಸರಿಯಾಗಿ ಜಾನಿವಾರ ಹಾಕಲೆ ಎಡಿಗು

  2. ಲಾಯಿಕಾಯಿದು ಗುರುಗಳೇ….ಕೋಟೆ ಪಾಠ ಶಾಲೆ ನೆನಪಾತು….

  3. GOPALAKRISHNA K–SUMUKHA /Paranda (house)–NIDDLE (post&village)
    VIA_Dharmastala-574216

  4. ಜನಿವಾರ ಹಾಕುವ ಮಂತ್ರ, ಕ್ರಮ ಎರಡೂ ಲಾಯಿಕ ಇದ್ದು. ಜನಿವಾರ ಪವಿತ್ರ ಗೆಂಟು ಹಾಕುವ ಕ್ರಮ ಬರದರೆ ಲಾಯಿಕಿರ್ತಿತ್ತು..

    1. ಇದಾ .. ನಿಂಗೊ ಹೇಳಿದ ವಿಷಯ ಓ.. ಈ ಭಾವನತ್ರೆ ಹೇಳಿಯಪ್ಪಗ ಒಂದು ಜನಿವಾರ ಕಟ್ಟು ಹಾಕುತ್ತದು ಹೇಂಗೆ ಹೇಳಿ ರಪಕ್ಕನೆ ಮಾಡಿ ತೋರ್ಸಿಕೊಟ್ಟವಿದಾ. ನಿಂಗಳೂ ಅಷ್ಟೇ ರಪಕ್ಕನೆ ನೋಡಿಕ್ಕಿ –
      http://www.youtube.com/watch?v=AG4aMQmTTmc

      1. ವಿಡಿಯೋ ನೋಡಿದೆ ಚೆನ್ನೈ ಭಾವ, ತುಂಬಾ ಉಪಕಾರ ಆತು. ಅನೇಕ ಧನ್ಯವಾದಂಗೊ…

  5. ಜನಿವಾರ ಹಕುವ ಕ್ರಮ ಸುಲಭಲ್ಲಿ ಹೇಳಿ ಕೊಟ್ಟ ಭಟ್ಟಮಾವಂಗೆ ನಮಸ್ಕಾರ ಮಾಡ್ತೆ..ನಿಂಗಳ ಆಶೀರ್ವಾದ ಇರಲಿ..ಜಪ ಜನಿವಾರ ಎಲ್ಲ ಮರ್ತ ಕೆಲವು ಜನಕ್ಕೆ ಇನ್ನು ಪುನ ಉಪನಯನವೇ ಮಾಡೆಕಸ್ಟೆಯೋ ಹೇಳಿ ತೋರ್ತು ಎನಗೆ ಕೆಲವು ಜನರ ಕಾಂಬಗ..

  6. ಇದು ಬಹಳ ಒಳ್ಳೆಯ ಲೇಖನ…
    ಸ್ವಲ್ಪ ವಿವರವಾಗಿ ಯಾಕೆ ಯಜ್ನೋಪವೀತ ಧಾರಣೆ ಮಾಡಬೇಕು ಅಂತ ತಿಳಿಸಿಕೊಟ್ಟರೆ ಇನ್ನು ಒಳ್ಳೇದು…

  7. ಬಟ್ಟಮಾವ ಯಜ್ನೋಪವೀತಧಾರಣೆಯ ಕ್ರಮ೦ಗಳ ಓದಿ ತು೦ಬಾ ಕುಶಿ ಆತು………………………………………………………………

  8. ಸಂಕಲ್ಪ ಮಾಡುವಗ “ದೇಶ-ಕಾಲ” ಸೇರುಸುದು ಬೇಡದೋ ಭಟ್ಟಮಾವ?
    .
    ದೇಶದ ಬಗ್ಗೆ ಹೇಳುವಗ ನೆಂಪಾತು – ಯಾವ ಯಾವ ಪ್ರದೇಶಕ್ಕೆ ಎಂತರ ಹೇಳುದು? ಘಟ್ಟದ ಕೆಳಂಗೆ ಪರಶುರಾಮ ಕ್ಷೇತ್ರ, ಘಟ್ಟದ ಮೇಗಂಗೆ ರಾಮ ಕ್ಷೇತ್ರ, ಇತರ – ಬ್ರಹ್ಮ ಕ್ಷೇತ್ರ ಹೇಳಿ ಯಾರೋ ತಿಳಿಸಿದ ನೆಂಪು. ಸರಿಯೋ? ಹೆರದೇಶಕ್ಕೆ (ವಿದೇಶ) ಎಂತ್ಸು? ವಿವರ ತಿಳಿಸಿದರೆ ಎನ್ನ ಹಾಂಗಿಪ್ಪವಕ್ಕೆ ಉಪಕಾರ ಅಕ್ಕು.

  9. ಬಟ್ಟಮಾವ ಎದುರು ಕೂದೊಂಡು ವಿವರ್ಸಿದ ಹಾಂಗೇ ಆತು. ಲಾಯ್ಕಾಯಿದು ಬರದ್ದು. ನಮ್ಮ ಸಂಸ್ಕೃತಿಯ ಆಚರಣೆ, ಅರ್ಥಂಗಳ ಬಗ್ಗೆ ಹೀಂಗೇ ಬರಕ್ಕೋಂಡಿರಿ. ಎಂಗ ಎಲ್ಲ ಓದಿ ತಿಳ್ಕೊಳ್ತೆಯ.

    1. {ಎಂಗ ಎಲ್ಲ ಓದಿ ತಿಳ್ಕೊಳ್ತೆಯ}
      ತಿಳ್ಕೊಂಬದು ಮಾತ್ರ ಸಾಕು ಹೇಳಿ ನೆಗೆ ಭಾವ ನೆಗೆ ಮಾಡ್ತ ಇದ್ದಾ…
      ಅವಂಗೆ ಜೆನಿವಾರ ಸಿಕ್ಕದ್ರೆ ಹೇಳಿ ಮಂಡೆಬೆಶಿ ಕಾಣ್ತು..

  10. ಬಟ್ಟ ಮಾವ° ಗೋಕರ್ಣಕ್ಕೆ ಹೋಗಿ ಬಂದ ಮೈಕೈ ಬೇನೆಯ ಎಡಕ್ಕಿಲೂ ಬೈಲಿಂಗೆ ಜೆನಿವಾರ ಹಾಕುತ್ತ ಕ್ರಮವ ಒಂದಾಗಿ ಒಂದು ಚೆಂದಲ್ಲಿ ವಿಧಿ,ಅರ್ಥ ಸಮೇತ ವಿವರ್ಸಿದ್ದವು. ಎನ್ನ ಹಾಂಗಿಪ್ಪ ಅಮ್ಮಂದ್ರಿನ್ಗೂ ಮಕ್ಕಳ ಹತ್ತರೆ ಹೇಳಿ ಮಾಡ್ಸುವ ಹಾಂಗೆ ಕ್ರಮಲ್ಲಿ, ಕ್ರಮಸಂಖ್ಯೆಲಿ ಬರದ್ದಿ. ಧನ್ಯವಾದಂಗೋ ಬಟ್ಟ ಮಾವಾ°.
    ನೆಗೆಗಾರಣ್ಣ ಹೇಳಿದ ಹಾಂಗೆ ಆಡಿಯೋ ಇದ್ದಿದ್ದರೆ ಇನ್ನೂ ಸುಲಾಬ ಇತ್ತು. ಮತ್ತೆ ಎಂಗೊಗೆ ನಿಂಗೊ ಎಷ್ಟು ಸುಲಾಬ ಮಾಡಿ ಕೊಟ್ಟರೂ ಸಾಕಪ್ಪದು ಹೇಳಿ ಇಲ್ಲೆನ್ನೇ!!!
    ಬಟ್ಟ ಮಾವಾ°, ನಿಂಗೊಗೆ ಮೊನ್ನೆ ಗೋಕರ್ಣಲ್ಲಿ ಸಂಸ್ಥಾನ ಸಮ್ಮಾನ ಮಾಡಿದ್ದವಡ್ಡ ಅಪ್ಪೋ?

    1. { ಗೋಕರ್ಣಲ್ಲಿ ಸಂಸ್ಥಾನ ಸಮ್ಮಾನ ಮಾಡಿದ್ದವಡ್ಡ }
      – ಅಪ್ಪು ಶ್ರೀದೇವೀ..
      ಮಕ್ಕೊ ಹೆಮ್ಮಕೊ ಗೆಂಡುಮಕ್ಕೊ ಎಲ್ಲ ಇಪ್ಪಗ ಎನ್ನ ಶ್ಟೇಜಿನಮೇಗೆ ಕೂರುಸಿದವು, ಹೋಮದಬುಡಲ್ಲಿ ಎತ್ತರಕೆ ಕೂದಹಾಂಗೆ..!
      ಎನಗೆ ಸುಮ್ಮನೆ ಆತು – ಮತ್ತೆ ಎನ್ನಷ್ಟಕೇ ಸಮಾದಾನ ಮಾಡಿಗೊಂಡೆ:
      ’ಇದು ಎನಗಲ್ಲ, ವೇದಕ್ಕೆ, ಸನಾತನ ಧರ್ಮಕ್ಕೆ ಸಂದ ಗವುರವ’ ಹೇಳಿಗೊಂಡು!
      ಎಲ್ಲೋರಿಂಗೂ ಒಳ್ಳೆದಾಗಲಿ!

  11. {ಪವಿತ್ರಗೆಂಟು ಹಾಕೇಕು}
    ಪವಿತ್ರನೇ ಗೆಂಟು ಹಾಕೆಕಾ ಬಟ್ಟಮಾವಾ, ಎಂಗ ಹಾಕಲಾಗದಾ?? 😉

    1. ಪ್ರಾಯ ದೋಷ. ನವಗೆ ಹಾಂಗೆಲ್ಲ ಚೋದ್ಯಂಗೊ ಬಕ್ಕು ಆತಾ ಮಾಣಿ!!!

      1. ಷೇ, ಅಪದ್ಧ ಮಾತಾಡ್ಳಾಗ ಮಕ್ಕಳೇ – ಹೇಳಿ ಚೋದ್ಯ ಬಪ್ಪ ಬಿಂಗಿಮಕ್ಕೊಗೆ ಶಂಬಜ್ಜ° ಬೈಗು ಮದಲಿಂಗೆ!
        ಆಗದ್ದೆ ಇಲ್ಲೆ, ರಕ್ಷೆಯ ಪವಿತ್ರನೇ ಗೆಂಟು ಹಾಕಿರೂ ಒಳ್ಳೆದೇ!

  12. ಬಟ್ಟ ಮಾವ, ಪವಿತ್ರ ಗೆಂಟು ಹಾಕುವದರ ಕ್ಲೈಮಕ್ಷ್ಲ ಲ್ಲಿ ಮಡುಗೆಡಿ… ಅದರನ್ನುದೇ ಬೇಗ ಹೇಳಿ ಮಾವ….. ಆನು ಈ ಲೇಖನವ ಪ್ರಿಂಟ್ ತೆಗದು ಮಡುಗುತ್ತ ಇದ್ದೆ. ಸಂಗ್ರಹ ಯೋಗ್ಯವೂ ಅಪ್ಪು.
    ಎನ್ನತ್ತರೆ, ಆರುದೆ ಕೆಳಡಿ, ನಿನಗೆಂತಕ್ಕೆ ಹೇಳಿ…. !

    1. ಯೇ ಚಿಕ್ಕಮ್ಮಾ….
      ಉದಿಯಪ್ಪಗ ಅಪ್ಪಚ್ಚಿಯತ್ರೆ ಕೇಳುದು ಬಿಟ್ಟು (ಪವಿತ್ರ ಗೆಂಟು ಹಾಕುತ್ತಾ ಇಪ್ಪಗ) ಈಗ ಕೇಳುತ್ತೆನ್ನೆ..
      ಪ್ರಿಂಟು ತೆಗೆದರೆ ಒಂದು ಮರದ ಗೆಲ್ಲು ನಷ್ಟ ಆತು ಹೇಳಿ ಅಪ್ಪಚ್ಚಿ ಬೈಗು ಜಾಗ್ರತೆ…

      1. {ಪವಿತ್ರ ಗೆಂಟು ಹಾಕುತ್ತಾ ಇಪ್ಪಗ}
        ಆರದು ಪವಿತ್ರ ಹೇಳ್ರೆ? 🙁

        1. ಅಪ್ಪಚ್ಚಿ ಹೇಳೆಕಷ್ಟೆ.. ಉದಿಯಪ್ಪಗ ಗೆಂಟು ಹಾಕಿದ್ದು ಅವು. ಅಲ್ಲಾ ಹಾಕಿದ್ದವಿಲ್ಲೆಯೊ.. ಆನು ಜೆನಿವಾರ ಹಾಕಿಕ್ಕು ಜಾನ್ಸಿ ಬರದ್ದು..

          1. ಹಾಂ! ಜನಿವಾರಕ್ಕೊ ?ಅರ್ಥಾತು ಈಗ…

      2. {ಪ್ರಿಂಟು ತೆಗೆದರೆ ಒಂದು ಮರದ ಗೆಲ್ಲು ನಷ್ಟ ಆತು ಹೇಳಿ ಅಪ್ಪಚ್ಚಿ ಬೈಗು ಜಾಗ್ರತೆ}
        ಅದಾ ನಿಂಗಳಷ್ಟು ಆರುದೆ ಎನ್ನ ಅರ್ಥ ಮಾಡಿಯೊಂಡಿದವಿಲ್ಲೆ ಆತ.. ಲಾಯಿಕ ಆತು ಅಜ್ಜಕಾನ ಭಾವ.. 🙂

    2. ಒಳ್ಳೆದು ಒಳ್ಳೆದು. ಮದುವೆ ಅಪ್ಪಂದ ಮೊದಲು ಅಪ್ಪಚ್ಚಿ ಒಂದೇ ಒಂದು ಸರ್ತಿ ಜಪ ಕೂಡ ಮಾಡ್ತವಿತ್ತಿದ್ದವಿಲ್ಲೆ. ಎಲ್ಲ ಮಾಡ್ಸಿ ಈಗ.. ಚೂರು ಕೂಡ ತಪ್ಪದ್ದ ಹಾಂಗೆ ನೋಡಿಕೊಳ್ಳಿ. ಇನ್ನು ಸಂಪೂರ್ಣ ಸಂಧ್ಯಾವಂದನೆ ಹೇಳಿ ಬಟ್ಟಮಾವ ಬರೆತ್ತವು. ಅದರನ್ನೂ ಪ್ರಿಂಟ್ ತೆಗೆದು ದೇವರೊಳ ಅಂಟಿಸಿ.

      1. ಜಾತಕ ಪೂರ ಹೀಂಗೆ ಬಯಲು ಮಾಡ್ರೆ ಹೇಂಗೆ ಪೆರ್ಲದಣ್ಣ,..? ಈಗ ಬಾರೀ ಕಟ್ಟುನಿಟ್ಟು ನಮ್ಮ ಅಪ್ಪಚ್ಚಿ…. ಎರಡು ಮಾತಿಲ್ಲೇ….:)

      2. {ಮದುವೆ ಅಪ್ಪಂದ ಮೊದಲು ಅಪ್ಪಚ್ಚಿ ಒಂದೇ ಒಂದು ಸರ್ತಿ ಜಪ ಕೂಡ ಮಾಡ್ತವಿತ್ತಿದ್ದವಿಲ್ಲೆ}
        ಒಳ್ಳೆ ಕೆಲಸ ಮಾಡೆಕ್ಕು ಹೇಳಿ ಗುರುಗೊ ಹೇಳಿದ್ದವಲ್ಲದ .. ಅದಕ್ಕೇ…. 🙂

        1. { ಒಳ್ಳೆ ಕೆಲಸ ಮಾಡೆಕ್ಕು ಹೇಳಿ }
          – ಇಲ್ಲಿ ಒಳ್ಳೆ ಕೆಲಸ ಯೇವದು ಅಪ್ಪಚ್ಚೀ?
          ಮದುವೆಯೋ?
          ಜೆಪವೋ?
          ಎರಡುದೇಯೋ?
          ಯೇವದೂ ಅಲ್ಲದೋ?
          ಸಣ್ಣ ಕನುಪ್ಯೂಸು ಬಂತು ಅಷ್ಟೆ. ಎ°?

    3. { ಆರುದೆ ಕೇಳಡಿ }
      – ಹಾಂಗೆ ಹೇಳಿರೆ ಎಂತ ಅರ್ತ ಚಿಕ್ಕಮ್ಮ? ಅಪ್ಪಚ್ಚಿ ಕೇಳುಲಾಗ ಹೇಳಿಯೋ?
      ಉಮ್ಮ, ನಿಂಗೊ ಪಿಸುರು ಬಪ್ಪಗ ಹಾಂಗೇ ಮಾತಾಡಿಗೊಂಬದಡ. ಅಪ್ಪೋ?

      1. ನೆಗೆಗಾರಂಗೆ ಮೂಗು ಹಾಕುಲೇ ಎಡಿವಲಾಗ ಹೇಳಿ ಜಾಗ್ರತೆ ಮಾಡಿದ್ದು ಹೇಳಿ ಲೆಕ್ಕ!

        1. { ಮೂಗು ಹಾಕುಲೇ ಎಡಿವಲಾಗ }
          – ನಾವು ಬಾಯಿಹಾಕುದೇ ಜಾಸ್ತಿ. ದೊಡ್ಡವು ಮಾತಾಡಿಗೊಂಡು ಇದ್ದರೆ ಜೋರು.
          ಮೂಗು ಹಾಕುಲಿದ್ದು, ಇಲ್ಲೇ ಹೇಳಿ ಏನಿಲ್ಲೆ.
          ಆರಾರು ಸೆಂಟು ಹಾಕಿ ಬಂದರೆ ಮಾಂತ್ರ!

  13. ಶ್ರಾವಣದ ತಿಂಗಳಿಲಿ ಯಜುರುಪಾಕರ್ಮ
    ಜೆನಿವಾರ ಬದಲುಸೊದು ಬ್ರಾಹ್ಮಣರ ಧರ್ಮ
    ಭಟ್ಟಮಾವನ ಕೈಲಿ ಮಂತ್ರ ಕಲಿಯೆಕ್ಕು
    ಬೈಲ ಹಿರಿಯರ ಆಶೀರ್ವಾದ ಬೇಡೆಕ್ಕು .
    ಎಲ್ಲ ಹೆರಿಯೋರ ಕಾಲು ಹಿಡಿತ್ತೆ,ಇಲ್ಲಿಂದಲೇ.

  14. negegarana coment odi nege bantu.bhattamavanatre heli heengippadara audio madle helekkaste hangare.
    avara bitre oppannanu akko heli
    matte bhatta mavandringe dakshine kottarataikku allada oppanno.
    noola hunname dina irulu oota umbale ille kelittanne.
    ajjakana bavantre gammattu akki kadadu semage maadle heluva ottinge kaayalude.
    ediyadre oppannana manage hodaru akku.
    alli oppakka oppatte madi kodugu he..

    1. { ajjakana bavantre gammattu akki kadadu semage maadle heluva ottinge kaayalude.}
      ಅಜ್ಜಕಾನ ಬಾವ° ಮಾಡಿ ನಾವು ತಿಂದ ಹಾಂಗೇ ಆತೋ?
      ಅವ° ಎದ್ದೊಂಡು ಗಣೇಶಮಾವನ ಕಟ್ಟಿಗೊಂಡು ಸೀತ ಕಾನಾವಜ್ಜಿಯಲ್ಲಿಗೆ ಹೋಯಿದನಡ, ಹೋಳಿಗೆ ತಿಂಬಲೆ!

  15. ಬಂಡಾಡಿ ಅಜ್ಜಿ ಹೊಸ ರುಚಿಯ ಬರೆತ್ತ ಶೈಲಿಲಿ ರುಚಿ ರುಚಿಯಾಗಿ ಜನಿವಾರ ಹಾಕುವ ಕ್ರಮವ ವಿವರಿಸಿ ಕೊಟ್ಟಿದವು ಬಟ್ಟ ಮಾವ. ಅದರೊಟ್ಟಿಂಗೆ ಅಂಬಗಂಬಗ ಮನಸ್ಸಿಲ್ಲಿ ಬಪ್ಪ ಪ್ರಶ್ನೆ (FAQ) ಗವಕ್ಕೂ ಉತ್ತರ ಕೊಟ್ಟಿದವು. ಬಟ್ಟ ಮಾವನ ಕಂಪೀಟರ್ ಜ್ಞಾನ ಮೆಚ್ಚೆಕ್ಕಾದ್ದೆ. ಲಾಯಕಾಯಿದು ಲೇಖನ.
    ಹೇಳಿದ ಹಾಂಗೆ ಮಂಗಳೂರು ಹವ್ಯಕ ಸಭಾದ ಆಶ್ರಯಲ್ಲಿ ಶ್ರೀ ಭಾರತೀ ಕಾಲೇಜಿನ ಶಂಕರಶ್ರೀ ಸಭಾಂಗಣಲ್ಲಿ ಇಂದು ಎಂಗೊ ಎಲ್ಲ ಸೇರಿ ಸಾಮೂಹಿಕವಾಗಿ ಯಜುರುಪಕರ್ಮ ನಡೆಸಿದೆಯೊ. ನಲುವತ್ತು ಜೆನಕ್ಕೆ ಹತ್ರೆ ಹತ್ರೆ ಹವಿಕರು ಸೇರಿದ್ದಿದ್ದವು.

  16. ಗುರಿಕ್ಕಾರ್ರ ಉಮೇದುಗಾರಿಕೆಲಿ, ಬಟ್ಟ ಮಾವನ ನೇತೃತ್ವಲ್ಲಿ ಜೆನಿವಾರ ಹಾಕಿ ಆಯಿದು ಉದಿಯಪ್ಪಗಳೆ. ಆನು, ಒಪ್ಪಣ್ಣ, ನೆಗೆ ಬಾವ, ಚಂಪಕ ಬಾವ, ಪೆರ್ಲದಣ್ಣ ಸೇರಿತ್ತಿದ್ದೆಯಾ.. ಗಣೇಶ ಮಾವ ಆಚೆಕರೆಲಿ ಜೆನಿವಾರ ಹಾಕ್ಸುಲೆ ಹೋಯಿದವು. ಇನ್ನು ಬರೆಕಷ್ಟೆ. ನಮ್ಮ ಬಲ್ನಾಡು ಮಾಣಿಯೂ, ಗುಣಾಜೆ ಮಾಣಿಯೂ ಬತ್ತೆ ಹೇಳಿದವರ ಪತ್ತೆಯೆ ಇಲ್ಲೆ.. ಆಚೆಕರೆ ಹೋಯಿದವೋ ಗೊಂತಿಲ್ಲೆ, ಗಣೇಶ ಮಾವ ಹೇಳುಗು..

    1. {ಗುಣಾಜೆ ಮಾಣಿಯೂ ಬತ್ತೆ ಹೇಳಿದವರ ಪತ್ತೆಯೆ ಇಲ್ಲೆ.}
      ಶೋಭಕ್ಕಂಗೆ ಶುಭಾಷಯ ಹೇಳುಲೆ ಹೋಗಿಕ್ಕೋ ಏನೋ? ಆರಿಂಗಾರು ಗುಣಾಜೆ ಮಾಣಿ ಕಂಡರೆ ಕೇಳಿ. ಎನಗೆ ಈಗ ಸಿಕ್ಕುತ್ತನೇ ಇಲ್ಲೆ ಅವ° 🙁
      ಆನು ಅವನ ಹೆಚ್ಚು ಮಾತಾಡ್ಲೆ ಬಿಡ್ತಿಲ್ಲೆ, ಅಡ್ಡಬಾಯಿ ಹಾಕುತ್ತೆ ಹೇಳಿ ಪಿಸುರು ಬತ್ತೋ ಏನೋ?

    2. ಗುಣಾಜೆ ಮಾಣಿ ಯಡಿಯೂರಪ್ಪನೊಟ್ಟಿಂಗೆ ಇದ್ದನಾ ಹೇಳಿ ನೋಡಿದೆ. ಕಂಡಿದಿಲ್ಲೆ… ಬ್ಯಾರ್ತಿಗೊ ಎಂತಕೆ ರಕ್ಷೆ ಕಟ್ಟುದು ಹೇಳಿ ಕೋಪ ಬಂದಿಕ್ಕು … ಈ ಪಟ ನೋಡಿ: http://sphotos.ak.fbcdn.net/hphotos-ak-ash2/hs193.ash2/45583_148032635225456_100000561619959_352346_3624681_n.jpg

      1. ಪೆರ್ಲದಣ್ಣ.. ಯಡಿಯೂರಪ್ಪನ ಪಟ.. ಹಿ ಹಿ ಹಿ… ನೆಗೆತಡ ವಲೆ ಎಡಿತಿಲ್ಲೆ… ಆಕಾಶ ತಲೆಮೆಲೆ ಬಿದ್ಡಾ೦ಗೆ ಮೊರೆ ಸ೦ಣಾಮಾಡಿ ಕೂಗುತು ಯಡಿಯೂರಪ್ಪ… 😛

      1. ಚಾ…. ಎ೦ತಾ ಆಯಿದಿಲೆ ಅನ್ನೆ ಭವಾ ನಿನಗೆ ?? ಒ೦ದು ಸಯಿಕಲು ಪ೦ಪು ಮನ್ಣೋ ಬೇಗಿಲಿ ಮಡಿಕೊ ಭಾವ :P, ಮಥ್ತೆ ಮು೦ದಾಣ ಸತ್ತಿ ತೊ೦ದರೆ ಆಗ…. 😛

        1. ಒಹ್ಹೊ! ಅದಪ್ಪು ಚುಬ್ಬಣ್ಣ ಭಾವಾ! ಇನ್ನು ಸೈಕಲು ಪಂಪು ಒಂದು ಬೇಕಾವುತ್ತು, ಆನು ಹೆಚ್ಚಾಗಿ ಈಗ ವಿಮಾನಲ್ಲಿಯೆ ಬಪ್ಪದಿದಾ!! 😉

          1. ಬೇಗಿಲಿ ಮಡಿಕೊ ಭಾವ ಇರ್ತು ಕರೇಲಿ… 😛 ವಿಮಾನಲ್ಲಿ ಬಪ್ಪಗಾ ದಾರಿಲಿ ಪಂಚರು ಹಾಕುತ್ತ ಟಯರು ರಿಪೇರಿ ಅ೦ಗಡಿ ಸಿಕಾ ಇದಾ ಹಾ೦ಗೆ ಮುನ್ದಾಲೊಚನೆ ಮಾಡಿ ಮಡುಗಡ್ರೆ ಕಷ್ಟಾ….. 😛

      2. { ವಿಮಾನದ ಟೈರು ಪಂಚರಾತು }
        – ಶೇ ಶೇ!
        ಆರಾರು ಇದ್ದಿದ್ದರೆ ರಜ ನೂಕುಲೆ ಹೇಳ್ಳಾವುತಿತು ಭಾವಾ!

  17. ಯಜ್ಞೋಪವೀತಧಾರಣೆ ವಿಧಾನವ ತುಂಬಾ ವಿವರವಾಗಿ ಕೊಟ್ಟ ಭಟ್ಟ ಮಾವಂಗೆ ಇಲ್ಲಿಂದಲೇ ಕಾಲು ಹಿಡಿತ್ತೆ.
    ಇದರ ಸರಿಯಾಗಿ ಕಲ್ತೊಂಡರೆ ಇನ್ನಾಣ ಸರ್ತಿಯಂಗೆ ತುಂಬಾ ಅನುಕೂಲ ಅಕ್ಕದ.

  18. ಬರದದ್ದು ಭಾರಿ ಲಾಯಿಕು ಆಯಿದು. ಸಮಯೋಚಿತ ಲೇಖನ.

  19. ತುಂಬಾ ಕಷ್ಟ ಆತು, ನಿಂಗೊ ಬರೆದ ಮಂತ್ರ ಓದುದು, ಮತ್ತೆ ಹೋಗಿ ಹಾಂಗೇ ಮಾಡುದು. ನಿಂಗೊ ಆಡಿಯೋ ಮಾಡಿ ಹೇಳಿರೆ ಸುಲಭ ಇರ್ತಿತ್ತು. ಆನು ಓದುವ ಕೆಲಸ ಇತ್ತಿಲ್ಲೆ.

      1. ಇಂದು ಉಪಾಕರ್ಮ,ನಾಳೆ ಮದುವೆ,ಉಪನಯನ,ಪೂಜೆ ಎಲ್ಲ ಮಂತ್ರಂಗಳ ರಿಕಾರ್ಡು ಮಾಡುಲೆ ಹೇಳುಗು ಈ ನೆಗೆಗಾರಣ್ಣ. ಮತ್ತೆ ಭಟ್ಟಮಾವಂಗೆ ನಿರುದ್ಯೋಗವೆಯೋ??
        ಈ ಮಕ್ಕೊ ಕೇಳುತ್ತವು ಹೇಳಿಗೊಂದು ರಿಕಾರ್ಡಿನ್ಗೆ ದಸ್ಕತು ಹಾಕಿಕ್ಕೆಡಿ ಭಟ್ಟಮಾವಾ..

        1. ಈಗ ರೆಕಾರ್ಡು ಮಾಡ್ಲೆ ಹಾಂಗೆ ಬಂಙ ಎಂತ ಇಲ್ಲೆ. ನಮ್ಮ ಗುರಿಕ್ಕಾರ್ರ ಹತ್ತರೆ ಒಂದು MP3 ರೆಕಾರ್ಡರು ಇದ್ದಡ. ಅದರ ಓನು ಮಾಡಿ ಬಟ್ಟಮಾವನ ಹತ್ತರೆ ಮಡುಗಿರಾತು ಮಂತ್ರ ಹೇಳುವಾಗ. ಅದು ರೆಕಾರ್ಡು ಮಾಡಿ ಕೊಡ್ತು. ಅದೇನು ದಣಿಯ ದೊಡ್ಡವೂ ಇಲ್ಲೆ. ಮಾಷ್ಟ್ರುಮಾವನ ಸುಣ್ಣದಂಡೆಂದಲೂ ಸಣ್ಣ ಇಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×