ಶ್ರೀ ಕನಕಧಾರಾ ಸ್ತೋತ್ರಮ್

ಆದಿಗುರು ಶಂಕರಾಚಾರ್ಯರು ಸಣ್ಣ ಬಾಲಕ ಆಗಿಪ್ಪಾಗಳೇ ಅಗಾಧ ಪಾಂಡಿತ್ಯ ಇದ್ದಿದ್ದ ವೆಗ್ತಿ!
ವೇದಂಗಳ ಘನಾಂತ ಕಲ್ತುಗೊಂಡದು ಮಾಂತ್ರ ಅಲ್ಲದ್ದೆ, ಅನೇಕ ಶ್ಲೋಕ, ಭಾಷ್ಯಂಗಳನ್ನೂ ರಚನೆಮಾಡಿತ್ತಿದ್ದವು.
ಆದಿಶಂಕರಾಚಾರ್ಯರು ಸಣ್ಣ ಮಾಣಿ ಆದಿಪ್ಪಗ ರಚಿಸಿದ ಸ್ತೋತ್ರಂಗಳಲ್ಲಿ ಈ “ಕನಕಧಾರಾ ಸ್ತೋತ್ರ“ವೂ ಒಂದು!

ಬಾಲಶಂಕರಂಗೆ ಆರನೆಯ ಒರಿಶಲ್ಲಿ ಉಪನಯನ ಆಗಿ, ಕುಲಗುರು ಆತ್ರೇಯರಲ್ಲಿಗೆ ವಿದ್ಯಾಭ್ಯಾಸಕ್ಕೆ ಹೋವುತ್ತ°.
ಅಲ್ಲಿ ಗುರುಸೇವೆಲಿ ತೊಡಗಿಸಿಗೊಂಡು, ಭಿಕ್ಷಾಟನೆ ಮಾಡಿಂಡು ಅಧ್ಯಯನ ಮಾಡಿಗೊಂಡು ಇತ್ತಿದ್ದ°.  ಸಣ್ಣ ಮಾಣಿ ಶಂಕರನ ಗುರುಗೊ ಹತ್ತರಾಣ ಮನೆಗೊಕ್ಕೆ ಕಳ್ಸಿಗೊಂಡಿತ್ತಿದ್ದವು.
ಶಂಕರಂಗೆ ಬಿಕ್ಷೆಗೆ ಹೋಪಗ ಒಂದು ನಿಯಮ ಇದ್ದತ್ತು – ಒಂದರಿ ಭಿಕ್ಷೆಗೆ ಹೋದ ಮನಗೆ ಪುನಾ ಹೋಪಲಿಲ್ಲೆ.
ಒಂದು ದಿನ, ಒಂದು ಮನೆಯ ಎದುರು ನಿಂದು “ಭವತಿ ಭಿಕ್ಷಾಂ ದೇಹಿ”  ಹೇಳುವಗ, ಮನೆ ಹೆಮ್ಮಕ್ಕೊಗೆ ಹೆರ ನಿಂದ ಮಾಣಿಯ ಕಂಡು ಸಾಕ್ಷಾತ್ ದೇವರೇ ಬಂದ ಹಾಂಗಿಪ್ಪ ಅನುಭವ ಆತು ಆ ಹೆಮ್ಮಕ್ಕೊಗೆ.
ಆದರೆ – ಆ ಮನೆಯೋರು ತೀರಾ ಸಂಕಷ್ಟಲ್ಲಿ ಇದ್ದೋರು. ಎಂತ ಕೊಡುದು ಹೇಳಿ ಗೊಂತಾವುತ್ತಿಲ್ಲೆ.
ಒಂದು ಕಾಲಲ್ಲಿ ಅತಿ ಶ್ರೀಮಂತ ಆಗಿದ್ದ ಆ ಮನೆತನ, ಕಾಲದೋಷಂದಾಗಿ ಅವನತಿ ಆಗಿ, ಈಗ ಭಿಕ್ಷೆ ಮಾಡಿ ಜೀವನ ಕಳೆಯೇಕ್ಕಾದ ಪರಿಸ್ಥಿತಿ.
ವೇದ-ಉಪನಿಷತ್ತುಗಳ ಉಚ್ಚಾರ ಮಾಡಿಗೊಂಡಿಪ್ಪ ಆ ಮಹಾತೇಜಸ್ಸಿನ ಮಾಣಿಯ ಬರಿಕೈಲಿ ಕಳುಸಲೆ ಮನಸ್ಸಿಲ್ಲೆ!
ತನ್ನ ಅಸಹಾಯಕತೆಗೆ ತುಂಬಾ ದುಃಖ ಪಟ್ಟ ಆ ಹೆಮ್ಮಕ್ಕ: “ರಜ್ಜ ಹೊತ್ತು ಇರು ಮಾಣಿ, ಈಗ ಬತ್ತೆ” ಹೇಳಿ ಒಳ ಹೋವುತ್ತು. ತನ್ನಗೆಂಡ ಅಗ್ನಿಹೋತ್ರ ಮಾಡುವ ಜಾಗೆಗೆ ಸುತ್ತು ಬಂದು, “ದೇವತೆಗಳೇ, ಇಂದು ಸಾಕ್ಷಾತ್ ನಾರಾಯಣನೇ ವಾಮನ ರೂಪಲ್ಲಿ ಮನೆಗೆ ಬಯಿಂದ°. ದಯಮಾಡಿ, ಎನ್ನ ಮತ್ತೆ ಮನೆತನದ ಗವುರವವ ಕಾಪಾಡಿ. ಏನೂ ಇಲ್ಲದ್ದೆ ಇಪ್ಪ ಹಾಂಗೆ ಮಾಡೆಡಿ. ಈ ವಟುಗೆ ಎಂತಾದರೂ ಕೊಟ್ಟು ಅವ° ಸಂಪ್ರೀತ° ಅಪ್ಪ ಹಾಂಗೆ ಅನುಗ್ರಹಿಸಿ ” ಹೇಳಿ ಬೇಡಿಗೊಂಡು ಅಟ್ಟುಂಬೊಳ ಇಡೀ ಹುಡುಕ್ಕುತ್ತು.
ಅಂಬಗ ಅದಕ್ಕೆ ಒಣಗಿದ ನೆಲ್ಲಿಕಾಯಿ ರಜ್ಜ ಸಿಕ್ಕುತ್ತು. ಅದನ್ನೇ ತೆಕ್ಕೊಂಡು ಹೆರ ಬಂದು, ಮಾಣಿಯ ಹತ್ತರೆ, “ಮಾಣಿ, ಎಂಗೋ ತುಂಬಾ ಪಾಪದವ್ವು. ಮನೆ ಯೆಜಮಾನ ಭಿಕ್ಷೆ ತಂದದರ ಅಡಿಗೆ ಮಾಡಿ, ಆರಿಂಗಾದರೂ ಒಬ್ಬಂಗೆ ಕೊಟ್ಟು ಉಂಬೋರು. ಆದರೆ ಇಂದು ಗೆಂಡ ಬಯಿಂದವಿಲ್ಲೆ. ಹಾಂಗಾಗಿ ಎಂತದೂ ಇಲ್ಲೆ ಕೊಡುವಂತದ್ದು” ಹೇಳ್ತು.
ಅಂಬಗ ಆ ಮಾಣಿ, “ಅಬ್ಬೆ!! ನಿನ್ನ ಕೈಲಿ ಎಂತ ಇದ್ದೋ ಅದನ್ನೇ ಅಮೃತ ಆಗಲಿ ಹೇಳಿ ಹರಸಿ ಕೊಟ್ಟಿಕ್ಕು” ಹೇಳ್ತ°. ಆ ಅಬ್ಬೆ ತೀರಾ ಸಂಕೋಚಗೊಂಡು, “ಆರೂ ಹಾಕದ್ದ ಭಿಕ್ಷೆಯ ಹಾಕುತ್ತಾ ಇದ್ದೆ. ಈ ನೆಲ್ಲಿಕಾಯಿ ಮಾಂತ್ರ ಇಪ್ಪದು ಎನ್ನ ಹತ್ತರೆ. ಇದನ್ನೇ ಸ್ವೀಕಾರ ಮಾಡಿ ಎನ್ನ ಕೃತಾರ್ಥಳನ್ನಾಗಿ ಮಾಡು ಮಗನೆ..”,ಕೇಳಿಗೊಂಡು ನೆಲ್ಲಿಕಾಯಿಯ ಅವನ ಜೋಳಿಗೆಗೆ ಹಾಕುತ್ತು. ಶಂಕರಂಗೆ ಆ ಅಬ್ಬೆಯ ದೈನ್ಯ ಪರಿಸ್ಥಿತಿ, ಅದರ ಬಡತನ, ದಾರಿದ್ರ್ಯ ಕಂಡು ಬೇಜಾರಾವುತ್ತು. ” ಅಮ್ಮ, ಈ ಸ್ಥಿತಿ ಶಾಶ್ವತ ಅಲ್ಲ. ಸಿರಿ ಬಂದು ಹೋವುತ್ತು. ನಮ್ಮಲ್ಲಿಪ್ಪ ಸಂಪತ್ತು ಇನ್ನೊಬ್ಬನ ಸಂಕಟಕ್ಕೆ, ಸುಖ ಸಂತೋಷಕ್ಕೆ ವಿನಿಯೋಗ ಆದರೆ ಮಾಂತ್ರ ಅದು ಸಾರ್ಥಕ ಅಪ್ಪದು. ಅಲ್ಲದ್ದರೆ ಅದು ವ್ಯರ್ಥ. ಆನು ಒಂದು ಸ್ತೋತ್ರ ಹೇಳಿ ಕೊಡ್ತೆ. ನಿಂಗೋ ಮನಸಾ ಪ್ರಾರ್ಥನೆ ಮಾಡಿ. ನಿಂಗೊಗೆ ಒಳ್ಳೆದಾವುತ್ತು”. ಹೇಳಿ ಶ್ರೀ ಕನಕಧಾರ ಸ್ತೋತ್ರವ ಹೇಳಿ ಕೊಡ್ತ°.
ಆ ಹೆಮ್ಮಕ್ಕೋ ಆ ಬ್ರಹ್ಮಾಚಾರಿಯ ತನ್ನ ಗುರು ಹೇಳಿ ಜಾನ್ಸಿ ಭಕ್ತಿಭಾವಂದ ನಮಸ್ಕಾರ ಮಾಡ್ತು. ಆ ಮಾಣಿ ಹೋದ ಮೇಲೆ ನಿತ್ಯ ತನ್ನ ಯೆಜಮಾನನ ಕೂಡಿಗೊಂಡು ದೇವಿಯ ಮನಸಾ ಸ್ತೋತ್ರ ಹೇಳಿ ಧ್ಯಾನ ಮಾಡಿ, ಕಾಲಕ್ರಮಲ್ಲಿ ನಿತ್ಯ ಭಜನೆಂದ ಅವರ ಮನೆಲಿ ಲಕ್ಷ್ಮಿ ನೆಲೆಸಲೆ ಪ್ರಾರಂಭ ಆವುತ್ತು. ಆ ಹೆಮ್ಮಕ್ಕೊ ತನ್ನ ಆಸುಪಾಸಿನ ಬೇರೆ ಹೆಮ್ಮಕ್ಕೊಗೂ ಈ ಸ್ತೋತ್ರವ ಸಾತ್ವಿಕ ಭಾವಂದ ಹೇಳಿ ಕೊಟ್ಟು ಅವುದೇ ಇಷ್ಟಾರ್ಥ ಸಿದ್ಧಿಸಿಗೊಂಬ ಹಾಂಗೆ ಮಾಡುತ್ತು. ಈ ಮನೆಯೇ ಮುಂದೆ ‘ಸ್ವರ್ಣತ್ತಿಲ್ಲಂ” ಹೇಳಿ ಹೆಸರು ಪಡೆತ್ತು.

ಕನಕಧಾರೆ ಸ್ತೋತ್ರವ ಪಠಿಸಿ, ನಮ್ಮೆಲ್ಲರ ಮನೆ-ಮನೆಗಳೂ ಸ್ವರ್ಣತ್ತಿಲ್ಲಂ ಆಗಲಿ ಹೇಳ್ತದು ನಮ್ಮ ಹಾರಯಿಕೆ.

ಶ್ರೀ ಕನಕಧಾರಾ ಸ್ತೋತ್ರಮ್:

ಅಂಗಂ ಹರೇಃ ಪುಲಕ-ಭೂಷಣಮಾಶ್ರಯಂತೀ
ಭೃಂಗಾಗನೇವ ಮುಕುಲಾಭರಣಂ ತಮಾಲಂ |
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||1||

ಮುಗ್ಧಾಮುಹುರ್ವಿದಧತೀ ವದನೇ ಮುರಾರೇಃ
ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ |
ಮಾಲಾ-ದೃಶೋ-ರ್ಮಧುಕರೀವ ಮಹೋತ್ಪಲೇ ಯಾ
ಸಾ ಮೇ ಶ್ರಿಯಂ ದಿಶತು ಸಾಗರ-ಸಂಭವಾಯಾಃ ||2||

ಆಮೀಲಿತಾಕ್ಷಮಧಿಗಮ್ಯ ಮುದಾ ಮುಕುಂದ-
ಮಾನಂದಕಂದಮನಿಮೇಷಮನಂಗತಂತ್ರಂ |
ಆಕೇಕರ-ಸ್ಥಿತ-ಕನೀನಿಕ-ಪಕ್ಷ್ಮ ನೇತ್ರಂ
ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾಃ ||3||

ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ
ಹಾರಾವಲೀವ ಹರಿನೀಲಮಯೀ ವಿಭಾತಿ |
ಕಾಮಪ್ರದಾ ಭಗವತೋsಪಿ ಕಟಾಕ್ಷಮಾಲಾ
ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ||4||

ಕಾಲಾಂಬುದಾಲಿ-ಲಲಿತೋರಸಿಕೈಟಭಾರೇಃ
ಧಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವ-ನಂದನಾಯಾಃ ||5||

ಪ್ರಾಪ್ತಂ ಪದಂ ಪ್ರಥಮತಃ ಖಲು ಯತ್ ಪ್ರಭಾವಾತ್
ಮಾಂಗಲ್ಯಭಾಜಿ ಮಧು-ಮಾಥಿನಿ ಮನ್ಮಥೇನ |
ಮಯ್ಯಾಪತೇತ್ತದಿಹ ಮಂಥರಮೀಕ್ಷಣಾರ್ಧಂ
ಮಂದಾಲಸಂ ಚ ಮಕರಾಲಯಕನ್ಯಕಾಯಾಃ ||6||

ವಿಶ್ವಾಮರೇಂದ್ರ-ಪದವಿಭ್ರಮ-ದಾನದಕ್ಷಂ
ಆನಂದ-ಹೇತುರಧಿಕಂ ಮಧುವಿದ್ವಿಷೋsಪಿ |
ಈಷನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧಂ
ಇಂದೀವರೋದರ ಸಹೋದರಮಿಂದಿರಾಯಾಃ ||7||

ಇಷ್ಟಾವಿಶಿಷ್ಟಮತಯೋsಪಿ ಯಯಾ ದಯಾರ್ದ್ರ-
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟಮಮ ಪುಷ್ಕರ-ವಿಷ್ಟರಾಯಾಃ ||8||

ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾಮ್
ಅಸ್ಮಿನ್ನಕಿಂಚನ-ವಿಹಂಗಶಿಶೌ ವಿಷಣ್ಣೇ |
ದುಷ್ಕರ್ಮ-ಘರ್ಮಮಪನೀಯ ಚಿರಾಯ ದೂರಾತ್
ನಾರಾಯಣ-ಪ್ರಣಯಿನೀ-ನಯನಾಂಬುವಾಹಃ ||9||

ಗೀರ್ದೇವತೇತಿ ಗರುಡಧ್ವಜ-ಸುಂದರೀತಿ
ಶಾಕಂಭರೀತಿ ಶಶಿಶೇಖರ-ವಲ್ಲಭೇತಿ |
ಸೃಷ್ಟಿ-ಸ್ಥಿತಿ-ಪ್ರಲಯಕೇಲಿಷು ಸಂಸ್ಥಿತಾಯೈ
ತಸ್ಯೈ ನಮಸ್ತ್ರಿಭುವನೈಕ-ಗುರೋಸ್ತರುಣ್ಯೈ ||10||

ಶ್ರುತೈ ನಮೋsಸ್ತು ಶುಭಕರ್ಮ-ಫಲಪ್ರಸೂತ್ಯೈ
ರತ್ಯೈ ನಮೋsಸ್ತು ರಮಣೀಯ-ಗುಣಾಶ್ರಯಾಯೈ |
ಶಕ್ಯೈ ನಮೋsಸ್ತು ಶತಪತ್ರ-ನಿಕೇತನಾಯೈ
ಪುಷ್ಟ್ಯೈ ನಮೋsಸ್ತು ಪುರುಷೋತ್ತಮ-ವಲ್ಲಭಾಯೈ ||11||

ನಮೋsಸ್ತು ನಾಲೀಕ-ನಿಭಾನನಾಯೈ
ನಮೋsಸ್ತು ದುಗ್ಧೋದಧಿ-ಜನ್ಮಭೂತ್ಯೈ |
ನಮೋsಸ್ತು ಸೋಮಾಮೃತ-ಸೋದರಾಯೈ
ನಮೋsಸ್ತು ನಾರಾಯಣ-ವಲ್ಲಭಾಯೈ ||12||

ನಮೋsಸ್ತು ಹೇಮಾಂಬುಜ-ಪೀಠಿಕಾಯೈ
ನಮೋsಸ್ತು ಭೂಮಂಡಲನಾಯಿಕಾಯೈ |
ನಮೋsಸ್ತು ದೇವಾದಿ-ದಯಾಪರಾಯೈ
ನಮೋsಸ್ತು ಶಾರ್ಙ್ಗಾಯುಧ-ವಲ್ಲಭಾಯೈ ||13||

ನಮೋsಸ್ತು ದೇವ್ಯೈ ಭೃಗುನಂದನಾಯೈ
ನಮೋsಸ್ತು ವಿಷ್ಣೋರುರಸಿ ಸ್ಥಿತಾಯೈ |
ನಮೋsಸ್ತು ಲಕ್ಷ್ಮ್ಯೈ ಕಮಲಾಲಯಾಯೈ
ನಮೋsಸ್ತು ದಾಮೋದರ-ವಲ್ಲಭಾಯೈ ||14||

ನಮೋsಸ್ತು ಕಾಂತ್ಯೈ ಕಮಲೇಕ್ಷಣಾಯೈ
ನಮೋsಸ್ತು ಭೂತ್ಯೈ ಭುವನಪ್ರಸೂತ್ಯೈ |
ನಮೋsಸ್ತು ದೇವಾಧಿಭಿರರ್ಚಿತಾಯೈ
ನಮೋsಸ್ತು ನಂದಾತ್ಮಜ-ವಲ್ಲಭಾಯೈ ||15||

ಸಂಪತ್ಕರಾಣಿ ಸಕಲೇಂದ್ರಿಯನಂದನಾನಿ
ಸಾಮ್ರಾಜ್ಯದಾನವಿಭವಾನಿ ಸರೋರುಹಾಕ್ಷಿ |
ತ್ವದ್ವಂದನಾನಿ ದುರಿತಾಹರಣೋದ್ಯತಾನಿ
ಮಾಮೇವ ಮಾತರನಿಶಂ ಕಲಯಂತು ಮಾನ್ಯೇ ||16||

ಯತ್ಕಟಾಕ್ಷಸಮುಪಾಸನಾ ವಿಧಿಃ
ಸೇವಕಸ್ಯ ಸಕಲಾರ್ಥಸಂಪದಃ |
ಸಂತನೋತಿ ವಚನಾಂಗಮಾನಸ್ಯೈ-
ಸ್ತ್ವಾಂ ಮುರಾರಿಹೃದಯೇಶ್ವರೀಂ ಭಜೇ ||17||

ಸರಸಿಜನಿಲಯೇ ಸರೋಜಹಸ್ತೇಃ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೆ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||

ದಿಗ್ಘಸ್ತಿಭಿಃ ಕನಕಕುಂಭಮುಖಾವಸೃಷ್ಟ
ಸ್ವರ್ವಾಹಿನೀವಿಮಲಚಾರುಜಲಪ್ಲುತಾಂಗೀಮ್ |
ಪ್ರಾತರ್ನಮಾಮಿ ಜಗತಾಂ ಜನನೀಮಶೇಷ
ಲೋಕಾಧಿನಾಥಗೃಹಿಣೀಮಮೃತಾಬ್ಧಿ ಪುತ್ರೀಮ್ ||19||

ಕಮಲೇ ಕಮಲಾಕ್ಷವಲ್ಲಭೇ ತ್ವಂ
ಕರುಣಾಪೂರತರಂಗಿತೈರಪಾಂಗೈಃ |
ಅವಲೋಕಯ ಮಾಮಕಿಂಚನಾನಾಂ
ಪ್ರಥಮಂ ಪಾತ್ರಮಕೃತ್ರಿಮಂ ದಯಾಯಾಃ ||20||

ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ
ತ್ರಯೀಮಯೀಂ ತ್ರಿಭುವನ-ಮಾತರಂ ರಮಾಂ |
ಗುಣಾಧಿಕಾ ಗುರುತರ-ಭಾಗ್ಯ-ಭಾಗಿನಃ
ಭವಂತಿ ತೇ ಭುವಿ ಬುಧಭಾವಿತಾಶಯಾಃ ||21||

~*~*~*~

ಸೂ:
ಸುಬ್ಬುಲಕ್ಷ್ಮಿಅಜ್ಜಿ ಹಾಡಿದ ಕನಕಧಾರಾ ಸ್ತೋತ್ರ ಇಲ್ಲಿದ್ದು:

ಬಟ್ಟಮಾವ°

   

You may also like...

8 Responses

 1. ಚೆನ್ನೈ ಭಾವ says:

  ಉತ್ತಮಂ

 2. ಶಾಮ ಪ್ರಸಾದ್ says:

  ಬಹಳ ಒಳ್ಳೆದಿದ್ದು.

 3. ಬೊಳುಂಬು ಮಾವ says:

  ಕಥೆಯ ಒಟ್ಟಿಂಗೆ, ಶ್ಲೋಕದ ಮಹತ್ವವ ವಿವರುಸಿ ಕನಕಧಾರಾ ಸ್ತೋತ್ರವ ಒದಗಿಸಿ ಕೊಟ್ಟ ಬಟ್ಟ ಮಾವಂಗೆ ಅಡ್ಡ ಬಿದ್ದಿದೆ.

 4. ತೆಕ್ಕುಂಜ ಕುಮಾರ says:

  ಈ ಕತೆ ಗೊಂತಿತ್ತಿಲೆ. ಭಟ್ಟ ಮಾವಂಗೆ ಧನ್ಯವಾದ.

 5. ಶರ್ಮಪ್ಪಚ್ಚಿ says:

  ಒಣ ನೆಲ್ಲಿಕಾಯಿಯ ತಂದು, ಭಿಕ್ಷಾರ್ಥಿಯಾಗಿ ಬಂದ ಶ್ರೀ ಶಂಕರಾಚಾರ್ಯರಿಂಗೆ ಕೊಡುವ ಸನ್ನಿವೇಶ ಮನಸ್ಸಿಂಗೆ ತುಂಬಾ ತಟ್ಟಿತ್ತು.
  ಬಡ ಬ್ರಾಹ್ಮಣ ಹೇಳಿ ಹೇಳಿಕೆಯೇ ಇದ್ದಲ್ಲದಾ.
  ಅಪರೂಪದ ಸ್ತೋತ್ರ ಸಂಗ್ರಹಿಸಿ, ಸುಬ್ಬುಲಕ್ಷ್ಮಿ ಅಜ್ಜಿಯ ಸ್ವರವನ್ನೂ ಒದಗಿಸಿ ಕೊಟ್ಟ ಭಟ್ಟ ಮಾವಂಗೆ ನಮೋ ನಮಃ

 6. ವಿದ್ಯಾ ರವಿಶಂಕರ್ says:

  ಧನ್ಯವಾದಂಗೊ ಬಟ್ತಮಾವಂಗೆ

 7. ಉಂಡೆಮನೆ ಕುಮಾರ° says:

  ಸಂಗ್ರಹ ಯೋಗ್ಯ ಸ್ತೋತ್ರ ಕೊಟ್ಟದ್ದಕ್ಕೆ ಒಂದೊಪ್ಪ..

 8. ಬಟ್ಟಮಾವ°,

  ತನ್ನ ಜನ್ಮ ಯಾವ ಕಾರಣಕ್ಕೆ ಆಯಿದು ಹೇಳಿ ಅರ್ತುಗೊಂಡು ಸಣ್ಣ ಪ್ರಾಯಂದಲೇ ನಿಯಮಬದ್ಧ ಜೀವನ ಮಾಡಿ ಸಹಸ್ರಮಾನಂಗಳ ವರೆಗೆ ಶಿಷ್ಯಕೋಟಿಗೆ ಮಾರ್ಗ ತೋರ್ಸಿದ ಆದಿ ಗುರು ಶ್ರೀ ಶಂಕರಾಚಾರ್ಯರ ಒಂದು ಅಮೂಲ್ಯ ಕೃತಿ ಶ್ರೀ ಕನಕಧಾರಾ ಸ್ತೋತ್ರಮ್.

  ನಿಂಗಳ ಆಶಯದ ಹಾಂಗೇ ಎಲ್ಲ ಮನೆಗಳೂ ಸ್ವರ್ಣತ್ತಿಲ್ಲಮ್ ಗ ಆಗಲಿ..
  ಧನ್ಯವಾದ ಬಟ್ಟಮಾವ°.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *